Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇನ್ನರ್ ವೀಲ್ ಕ್ಲಬ್ ಬೈಂದೂರು ಇವರಿಂದ ರತ್ತುಬಾಯಿ ಜನತಾ ಪ್ರೌಢಶಾಲೆಗೆ ಸ್ಯಾನಿಟರಿ ತ್ಯಾಜ್ಯ ನಿರ್ವಹಣಾ ಘಟಕವನ್ನು ಕೊಡುಗೆಯಾಗಿ ನೀಡಲಾಯಿತು ಜಿಲ್ಲಾಧ್ಯಕ್ಷೆ ಕವಿತಾ ಸ್ಯಾನಿಟರಿ ತ್ಯಾಜ್ಯ ನಿರ್ವಹಣಾ ಘಟಕವನ್ನು ಅವರು ಹಸ್ತಾಂತರಿಸಿದರು ದಾನಿಗಳಾದ ಶಾರದ ನಾರಾಯಣ ಮತ್ತು ಜ್ಯೋತಿ ಶೆಟ್ಟಿ ಇವರನ್ನು ಅಭಿನಂದಿಸಲಾಯಿತು. ಸ್ಥಾಪಕ ಅಧ್ಯಕ್ಷೆ ಚಂದ್ರಲೇಖ ಶೆಟ್ಟಿ ಹಾಗೂ ಇನ್ನರ್ ವೀಲ್ ಅಧ್ಯಕ್ಷೆ ಭಾನುಮತಿ ಬಿ.ಕೆ ಮತ್ತು ಕಾರ್ಯದರ್ಶಿ ಪಿಂಕಿ ಮೋಬಿ ಉಪಸ್ಥಿತರಿದ್ದರು ಶಾಲಾ ಮುಖ್ಯೋಪಾಧ್ಯಾಯ ಶ್ರೀಆನಂದ ಮದ್ದೋಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಚೈತ್ರಾ ನಿರೂಪಣೆ ಮಾಡಿದರು. ಪ್ರಕಾಶ್ ಮಾಕೋಡಿ ವಂದಿಸಿದರು

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ’ಜಾಗತಿಕವಾಗಿ ಸೌಂದರ್ಯ ಪ್ರಜ್ಞೆ ಹೆಚ್ಚಿದ್ದು, ವಿನ್ಯಾಸ ಕ್ಷೇತ್ರದಲ್ಲೂ ಅವಕಾಶಗಳು ವಿಪುಲವಾಗಿವೆ. ವಿನ್ಯಾಸದ ಸೃಜನಶೀಲತೆ ಹಾಗೂ ತಾಂತ್ರಿಕತೆಯನ್ನು ಕರಗತ ಮಾಡಿಕೊಂಡರೆ ಅವಕಾಶಗಳು ಹೇರಳವಾಗಿವೆ’ ಎಂದು ಹಿರಿಯ ಗ್ರಾಫಿಕ್ ವಿನ್ಯಾಸಗಾರ ತಿಮ್ಮೇಶ್ ಮಲ್‌ಶೆಟ್ಟಿ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ’ಅಭಿವ್ಯಕ್ತಿ’ ವಿದ್ಯಾರ್ಥಿ ವೇದಿಕೆ ಗುರುವಾರ ಹಮ್ಮಿಕೊಂಡಿದ್ದ ಪುಟ ವಿನ್ಯಾಸ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ’ನಡೆಯುವವರು ಎಡವುತ್ತಾರೆಯೇ ಹೊರತು ಕುಳಿತವರಲ್ಲ. ಹೀಗಾಗಿ ಏಳುಬೀಳುಗಳ ಬಗ್ಗೆ ಚಿಂತಿಸಬಾರದು. ತಪ್ಪಿನಿಂದಲೇ ನಾವು ತಿಳಿದುಕೊಳ್ಳಲು ಸಾಧ್ಯ. ಹೊಸತನವನ್ನು ಬೆಳೆಸಿಕೊಳ್ಳಲು ಸಾಧ್ಯ ಜೀವನವೇ ಒಂದು ಪ್ರಯೋಗಾಲಯ. ಪ್ರತಿನಿತ್ಯ ಪ್ರಯತ್ನಿಸಿ’ ಎಂದರು. ’ನಮ್ಮ ನಿತ್ಯದ ನಡವಳಿಕೆಯ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಯಾವುದೇ ಕೃತಿಯನ್ನು ನೋಡಲು ಸುಲಭ. ಆದರೆ, ಆ ಕೆಲಸದ ಹಿಂದೆ ಸಾಕಷ್ಟು ಪರಿಶ್ರಮ ಇರುತ್ತದೆ. ಪರಿಶ್ರಮದಿಂದ ಪರಿಪೂರ್ಣತೆ ಹೊಂದಲು ಸಾಧ್ಯ’ ಎಂದ ಅವರು, ’ಇನ್‌ಡಿಸೈನ್, ಇಲ್ಲಸ್ಟ್ರೇಟರ್, ಫೋಟೊಶಾಪ್ ಸೇರಿದಂತೆ ವಿನ್ಯಾಸದ ವಿವಿಧ ಸಾಫ್ಟ್‌ವೇರಗಳ ಬಳಕೆಯ ಪ್ರಾತ್ಯಕ್ಷಿಕೆ ನೀಡಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಗಲಿದ ಹಿಂದೂಸ್ಥಾನಿ ಗಾಯಕ, ಸಂಗೀತ ಗುರು, ವಿದ್ವಾನ್ ಅನಂತ ಎಂ. ಹೆಬ್ಬಾರ್ ಅವರಿಗೆ ನಾವುಂದ ಮಸ್ಕಿಯ ಶ್ರೀ ದುರ್ಗಾಪರಮೇಶ್ವರಿ ಕಲಾನಿಕೇತನದಲ್ಲಿ ಈಚೆಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಸಂಗೀತ ಗುರು ವಿದ್ವಾನ್ ಶರತ್ ನಾಡ, ಅನಂತ ಹೆಬ್ಬಾರ್ ಖಂಬದಕೋಣೆಯನ್ನು ಕೇಂದ್ರವಾಗಿರಿಸಿಕೊಂಡು ಸಂಗೀತ ಕಲಾ ತರಗತಿಗಳನ್ನು ನಡೆಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಶಾಸ್ತ್ರೀಯ ಸಂಗೀತವನ್ನು ಪರಿಚಯಿಸಿ, ಅದನ್ನು ಬೆಳೆಸಲು ಶ್ರಮಿಸುತ್ತಿದ್ದರು. ಅವರು ಹಲವು ಶಿಷ್ಯರನ್ನು ರೂಪಿಸಿದ್ದು, ಅವರ ಅಗಲುವಿಕೆಯಿಂದ ಇಲ್ಲಿನ ಸಂಗೀತ ಕ್ಷೇತ್ರ ಬಡವಾಗಿದೆ. ವಿದ್ಯಾರ್ಥಿಗಳ ನೆಚ್ಚಿನ ಗುರು ಇಲ್ಲವಾಗಿದ್ದಾರೆ ಎಂದರು. ಸಮಾಜ ಸೇವಕ ಮಂಜುನಾಥ ಸಾಲಿಯಾನ್, ಸಂಗೀತ ಪ್ರೇಮಿ ನಾಗರಾಜ ದೇವಳಿ, ವಿದ್ಯಾರ್ಥಿಗಳು ಮತ್ತು ಪೋಷಕರು ಅಗಲಿದ ಹೆಬ್ಬಾರರಿಗೆ ಸದ್ಗತಿ ಕೋರಿ ಪ್ರಾರ್ಥನೆ ಸಲ್ಲಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉಪ್ಪುಂದದ ಸುಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ಮನ್ಮಹಾ ರಥೋತ್ಸವವು ಇದೇ ಫೆಬ್ರವರಿ 16 ಹಾಗೂ ಫೆಬ್ರವರಿ 27 ರಿಂದ ಮಾರ್ಚ್ 8ನೇ ತಾರೀಖಿನವರೆಗೂ ನಡೆಯಲಿದೆ. ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ಮನ್ಮಹಾ ರಥೋತ್ಸವ ಸಮಿತಿಯ ಅಧ್ಯಕ್ಚತೆಯನ್ನು ಬಿ.ಎಸ್. ಸುರೇಶ್ ಶೆಟ್ಟಿ ವಹಿಸಿದ್ದು ಈಗಾಗಲೇ ಹಲವು ಸಮಿತಿಗಳ ರಚಿಸಿ ಪೂರ್ವಸಿದ್ಧತಾ ಕಾರ್ಯ ಆರಂಭಿಸಲಾಗಿದೆ. ಈ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಶ್ರೀಮನ್ಮಹಾ ರಥೋತ್ಸವದ ಶುಭಕಾರ್ಯಕ್ಕಾಗಿ ಉದ್ಯಮಿ ಯು.ಬಿ. ಶೆಟ್ಟಿಯವರು ಐದು ಲಕ್ಷದ ಐದು ರೂಪಾಯಿಗಳನ್ನು ಸೇವೆಯ ರೂಪದಲ್ಲಿ ದೇಗುಲಕ್ಕೆ ನೀಡಿದ್ದು, ಇನ್ನೂ ಹೆಚ್ಚಿನ ದಾನಿಗಳು ತನು ಮನ ಧನ ಸಹಿತ ದೇವಿಯ ಸೇವೆಗೆ ಮುಂದಾಗಿದ್ದಾರೆ ಉತ್ಸವಗಳ ವಿವರ:ಫೆಬ್ರವರಿ 16ರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಗಣಪತಿ ಪೂಜೆ ಮೂಲಕ ಶುಭ ಕಾರ್ಯದ ಶುಭಾರಂಭ ಆಗಲಿದೆ. ನಂತರದ ಪುಣ್ಯಾಹ, 12 ಕಾಯಿ ಗಣಪತಿ ಹೋಮ, ದುರ್ಗಾ ಹವನ, ಪ್ರಾಯಶ್ಚಿತ್ತ ಕಲಾವೃದ್ಧಿ ಹೋಮ, ಕಲಶಾಭಿಷೇಕ, ವಿಶೇಷ ಪಂಚಾಮೃತ,…

Read More

ಕುಂದಾಪ್ರ ಡಾಟ್ ಕಾಂ ವರದಿ.ವಿಧಾನ ಪರಿಷತ್ತಿನಲ್ಲಿ ಸದಸ್ಯರಾದ ಮಂಜುನಾಥ ಭಂಡಾರಿ ಅವರು ದಿನಾಂಕ 14-02-2023ರಂದು ಕುಂದಾಪುರ ಕನ್ನಡ / ಕುಂದಗನ್ನಡ ಭಾಷಾ ಅಕಾಡೆಮಿ ಸ್ಥಾಪನೆಗೆ ಹಕ್ಕೊತ್ತಾಯನವನ್ನು ಮಂಡಿಸಿದ್ದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಸುನಿಲ್ ಕುಮಾರ್ ಅವರು ನೀಡಿರುವ ಉತ್ತರ ವಿಷಾದನೀಯ ಭಾಷಾವಿಭಿನ್ನತೆಯನ್ನು ಹೊಂದಿರುವ ಕನ್ನಡಕ್ಕೆ ಪ್ರತ್ಯೇಕ ಕುಂದಾಪುರ ಕನ್ನಡ ಅಕಾಡೆಮಿ ಸ್ಥಾಪಿಸುವುದು ಕನ್ನಡ ಭಾಷಾ ಸಮಗ್ರತೆಯ ದೃಷ್ಟಿಯಿಂದ ಸೂಕ್ತವಲ್ಲ ಎಂದು ಸಚಿವರು ಪ್ರತಿಕ್ರಿಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿಯ ಸಂಶೋಧಕರಾದ ಡಾ. ಗಾಯತ್ರೀ ನಾವಡ ಹಾಗೂ ಪ್ರೋ. ಎ.ವಿ. ನಾವಡ ಅವರು ಕುಂದಗನ್ನಡ ಅಕಾಡೆಮಿ ಸ್ಥಾಪನೆಯಾಗುವುದು ಭಾಷಾ ಬೆಳವಣಿಗೆ ದೃಷ್ಠಿಯಿಂದ ಸೂಕ್ತವಾದುದು ಎಂಬ ಅಭಿಪ್ರಾಯ ಮಂಡಿಸಿದ್ದಾರೆ. ಅದರ ಪೂರ್ಣಪಾಠ ಹೀಗಿದೆ. ಕನ್ನಡ ನಾಡು ಕೇವಲ ಒಂದು ಕನ್ನಡ ಭಾಷಾ ನೆಲವಲ್ಲ. ಇದು ಬಹುರೂಪಿ ಕನ್ನಡಗಳ ನೆಲೆ. ಕವಿರಾಜಮಾರ್ಗಕಾರ ಹೇಳಿದಂತೆ ಕನ್ನಡಂಗಳ್ ತಾಣ. ಇದು ಕನ್ನಡ ಸಂಸ್ಕೃತಿಯ ಅಸ್ಮಿತೆ ಮತ್ತು ಸಮೃದ್ಧತೆ. ಭಾಷಾ ಬಹುರೂಪತೆಯೇ ಕನ್ನಡದ ಅಂತಃ ಚೈತನ್ಯ, ಸಮೃದ್ಧತೆ. ಭಾಷಾ…

Read More

ಕುಂದಾಪುರದಲ್ಲಿ ಎಆರ್‌ಟಿಓ ಕಛೇರಿ ಮಾಡಿ. ವಾಹನ ನೊಂದಣಿ, ಟೆಸ್ಟ್ ನೀಡಲು ೭೦ಕೀ.ಮೀ ಸಂಚರಿಸಬೇಕಾದ ಅನಿವಾರ್ಯತೆ ಇದೆ – ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಕುಂದಾಪುರ ತಾಲೂಕು ಘಟಕದ 2023 – 24ನೇ ಅವಧಿಯ ಅಧ್ಯಕ್ಷರಾಗಿ ಎಸ್. ದಸ್ತಗೀರ್ ಕಂಡ್ಲೂರು ಸರ್ವಾನುಮತದಿಂದ ಆಯ್ಕೆಯಾದರು. 2023-24ನೇ ಸಾಲಿನ ಮೊದಲ ಸಭೆ ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ಇಬ್ರಾಹಿಮ್ ಸಾಹೇಬ್ ಕೋಟರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ತಾಲೂಕು ಉಪಾಧ್ಯಕ್ಷರಾಗಿ ಎಸ್. ಎಸ್. ಹನೀಫ್ ಗುಲ್ವಾಡಿ, ಕಾರ್ಯದರ್ಶಿಯಾಗಿ ರಿಯಾಝ್ ಕೋಡಿ, ಜೊತೆ ಕಾರ್ಯದರ್ಶಿಯಾಗಿ ಜಿ. ಎಮ್. ಅಬೂಬಕರ್ ಮಾವಿನಕಟ್ಟೆ, ಕೋಶಾಧಿಕಾರಿಯಾಗಿ ಮುಜಾವರ್ ಅಬು ಮುಹಮ್ಮದ್ ಕುಂದಾಪುರ ಆಯ್ಕೆಯಾದರು. ತಾಲೂಕು ಸಮಿತಿಯ ಸದಸ್ಯರಾಗಿ ಮುಹಮ್ಮದ್ ರಫೀಕ್ ವಂಡ್ಸೆ, ಎಸ್. ಮುನೀರ್ ಕಂಡ್ಲೂರು, ಪಳ್ಳಿ ಉಸ್ಮಾನ್ ಗುಲ್ವಾಡಿ, ಮುನಾಫ್ ಕೋಡಿ, ನಸೀರ್ ನಯ್ನಾರ್ ಕೋಡಿ, ಅಬ್ದುಲ್ ಖಾದರ್ ಮೂಡಗೋಪಾಡಿ ಇವರುಗಳು ತಾಲೂಕು ಸಮಿತಿ ಸದಸ್ಯರಾಗಿ ಆಯ್ಕೆಯಾದರು. ಝಹೀರ್ ನಾಖುದಾ ಗಂಗೊಳ್ಳಿ, ಫಾರೋಕ್ ಹಳವಳ್ಳಿ, ಮುಹಮ್ಮದ್ ರಫೀಕ್ ಬೆಳ್ವೆ, ಆಸಿಫ್ ಕೋಟೇಶ್ವರ, ಕಲಂದರ್ ಹಂಗಳೂರು ಅವರನ್ನು ನಾಮ ನಿರ್ದೇಶನ ಮಾಡಲಾಯಿತು. ಮುಹಮ್ಮದ್ ರಫೀಕ್ ಬಿ. ಎಸ್.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಪೃಥ್ವಿ ಕ್ರೀಡಾ ಮತ್ತು ಯುವಕ ಸಂಘದ 30ನೇ ವಾರ್ಷಿಕೋತ್ಸವ ಹಾಗೂ ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಲೀಗ್ ಮಾದರಿಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ‘ಪ್ರಥ್ವಿ ಟ್ರೋಫಿ – 2023’ ಫೆ.25ರ ಶನಿವಾರ ಸಂಜೆ 5 ಗಂಟೆಯಿಂದ ಬೈಂದೂರು ಗಾಂಧಿ ಮೈದಾನದಲ್ಲಿ ಜರುಗಲಿದೆ. ಪಂದ್ಯಾಟದ ಪೂರ್ವದಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದ್ದು, ಈ ವೇಳೆ ಸಾಧಕ ಕ್ರೀಡಾಪಟುವಿಗೆ ‘ಪ್ರಥ್ವಿ ಕ್ರೀಡಾ ರತ್ನ ಪ್ರಶಸ್ತಿ 2023’ ಪ್ರಶಸ್ತಿ ಪ್ರದಾನಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಜಯಾನಂದ ಹೋಬಳಿದಾರ್ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಯಡ್ತರೆ ಫ್ರೆಂಡ್ಸ್ ಆಶ್ರಯದಲ್ಲಿ ಬೈಂದೂರು ತಾಲೂಕು ಮಟ್ಟದ ಕು ಮಟ್ಟದ 30 ಗಜಗಳ ಕ್ರಿಕೆಟ್ ಪಂದ್ಯಾಟ ‘ಯಡ್ತರೆ ಟ್ರೋಫಿ – 2023’ ಫೆ.25 ಹಾಗೂ 26ರಂದು ಎರಡು ದಿನಗಳ ಕಾಲ ಯಡ್ತರೆ ಕ್ರೀಡಾಂಗಣದಲ್ಲಿ ಜರುಗಲಿದೆ. ಫೆ.25ರ ಬೆಳಿಗ್ಗೆ ಪಂದ್ಯಾಟ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಉಪಸ್ಥಿತರಿರಲಿದ್ದಾರೆ. ಫೆ.26ರ ಸಂಜೆ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ಜರುಗಲಿದ್ದು, ವಿಜೇತ ತಂಡಗಳಿಗೆ ಬಹುಮಾನ ವಿತರಣೆ ನಡೆಯಲಿದೆ. ಈ ವೇಳೆ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮವಾಗಿ ನೃತ್ಯ ವೈವಿಧ್ಯ, ಹಾಸ್ಯಮಯ ನಗೆ ನಾಟಕ ಪ್ರದರ್ಶನಗೊಳ್ಳಲಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರವು ಶುದ್ಧ ಕನ್ನಡದ ನೆಲ. ಕುಂದಾಪ್ರ ಕನ್ನಡ ಭಾಷೆಯ ಮೇಲೆ ಬೇರೆ ಭಾಷೆಯ ಪ್ರಭಾವವಿಲ್ಲ. ಕರ್ನಾಟಕ ರಾಜ್ಯದಲ್ಲಿ ವಿಭಿನ್ನ ರೀತಿಯಲ್ಲಿ ಕನ್ನಡದ ಉಚ್ಛಾರವಿದೆಯಾದರೂ ಕುಂದಾಪ್ರ ಕನ್ನಡದ ಪರಿಶುದ್ಧತೆ, ಜನಪದ ಸಾಹಿತ್ಯದಲ್ಲಿನ ವೈಶಿಷ್ಟ್ಯ, ಸಂಸ್ಕೃತಿ ಬೇರೆಲ್ಲೂ ಇಲ್ಲ. ಸಾವಿರಾರು ವರ್ಷಗಳಿಂದ ತನ್ನತನ ಉಳಿಸಿಕೊಂಡಿರುವ ಈ ಭಾಷೆಯ ವೈಶಿಷ್ಟ್ಯ ಮತ್ತು ಚೆಲುವಿಗೆ ಇನ್ನೊಂದರ ಹೋಲಿಕೆ ಸಾಧ್ಯವಿಲ್ಲ. ಇಂತಹ ಭಾಷೆಗೆ ಪ್ರತ್ಯೇಕ ಅಕಾಡೆಮಿಯ ಅಗತ್ಯವಿದ್ದು, ಸರಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಈ ಬಗ್ಗೆ ನೀರಾಸಕ್ತಿ ತೋರಿರುವುದು ಖಂಡನೀಯ ಎಂದು ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು. ಅವರು ಕುಂದಾಪುರದ ಖಾಸಗಿ ಹೋಟೆಲಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಐದು ಸಾವಿರಕ್ಕೂ ಹೆಚ್ಚು ಶಬ್ದಗಳನ್ನು ಹೊಂದಿರುವ ಕುಂದಾಪ್ರ ಕನ್ನಡ ಭಾಷೆಯಲ್ಲಿ ನಿಘಂಟು ಪ್ರಕಟವಾಗಿದೆ. ಸಾಹಿತ್ಯ, ಸಂಗೀತ, ಚಲನಚಿತ್ರ ರಂಗಭೂಮಿ ಹಾಗೂ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕುಂದ ಕನ್ನಡ ನಿರಂತರವಾಗಿ ಬಳಕೆಯಾಗುತ್ತಿದೆ. ಕುಂದಾಪ್ರ ಕನ್ನಡ ಅಕಾಡೆಮಿ ಸ್ಥಾಪಿಸುವ…

Read More