Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಸ್ನೇಹಿತರೊಂದಿಗೆ ಜಲಪಾತಕ್ಕೆ ತೆರಳಿದ್ದ ಯುವಕನೋರ್ವ ಕಾಲುಜಾರಿ ನೀರಿನಲ್ಲಿ ಬಿದ್ದು ಕೊಚ್ಚಿಹೋದ ಘಟನೆ ಕೊಲ್ಲೂರು ಸಮೀಪದ ಅರಶಿನಗುಂಡಿ ಎಂಬಲ್ಲಿ ನಡೆದಿದೆ. ನೋಡ ನೋಡುತ್ತಿದ್ದಂತೆ ನೀರಿಗೆ ಬಿದ್ದ ಈ ಘಟನೆ ಸ್ನೇಹಿತನ ಮೊಬೈಲಿನಲ್ಲಿ ಸೆರೆಯಾಗಿದೆ. ಭದ್ರಾವತಿ ತಾಲೂಕಿನ ಸುಣ್ಣದಹಳ್ಳಿ ನಿವಾಸಿ ಶರತ್ (23) ನೀರುಪಾಲಾದ ಯುವಕ. ಶರತ್ ಹಾಗೂ ಗುರುರಾಜ ಜೊತೆಗೂಡಿ ಭಾನುವಾರದಂದು ಭದ್ರಾವತಿಯಿಂದ ಕೊಲ್ಲೂರು ಗ್ರಾಮದ ಅರಶಿನಗುಂಡಿ ಜಲಪಾತ ನೋಡಲು ತೆರಳಿದ್ದಾರೆ. ಮಧ್ಯಾಹ್ನ 3-30ರ ಹೊತ್ತಿಗೆ ಜಲಪಾತ ಬಳಿ ಬಂಡೆಯ ಮೇಲೆ ನಿಂತಿದ್ದ ಶರತ್ ಆಯತಪ್ಪಿ ಕಾಲು ಜಾರಿ ಸೌಪರ್ಣಿಕ ನದಿಗೆ ಬಿದ್ದಿದ್ದು ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ಶರತ್ ಪತ್ತೆಗೆ ಕೊಲ್ಲೂರು ಪೊಲೀಸರು, ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಲು ಜಾರಿ ಬೀಳುವ ವೀಡಿಯೋ ಸ್ನೇಹಿತನ ಮೊಬೈಲಿನಲ್ಲಿ ಸೆರೆಯಾಗಿದೆ. ಅಪಾಯಕಾರಿ ನೀರಿನ ಹರಿವು ಹಾಗೂ ಬಂಡೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಜು.23: ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಉಡುಪಿ ಜಿಲ್ಲೆ ವ್ಯಾಪ್ತಿಯ ಎಲ್ಲಾ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಜು.24ರ ಸೋಮವಾರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ರಜೆ ಘೋಷಿಸಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ನದಿ, ಹಳ್ಳ ಕೊಳ್ಳಗಳಲ್ಲಿ ಹೆಚ್ಚಿನ ನೀರು ಹರಿವು ಇದ್ದು, ಮುಂದಿನ 24 ಗಂಟೆಯಲ್ಲಿ ಹೆಚ್ಚು ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆಯ ವರದಿ ಇರುವ ಹಿನ್ನೆಲೆ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಉಳಿದಂತೆ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲಮೋ, ಇಂಜಿನಿಯರಿಂಗ್ ಹಾಗೂ ಐಟಿಐ ಕಾಲೇಜುಗಳಿಗೆ ರಜೆ ಘೊಷಿಸಿಲ್ಲ. ಆದರೆ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ ಮತ್ತು ಹಳ್ಳ ತೊರೆಗಳನ್ನು ದಾಟಿ ಬರುವ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಇರಲು ಸೂಚಿಸುವುದು, ಶಿಥಿಲ ಕಟ್ಟಡದಲ್ಲಿ ತರಗತಿ ನಡೆಸದಿರುವುದರ ಬಗ್ಗೆ ತಿಳಿಸಿದ್ದಾರೆ. ಮೊದಲು ಬೈಂದೂರು ತಾಲೂಕಿನ ಶಾಲಾ ಕಾಲೇಜಿಗೆ ಮಾತ್ರ ರಜೆ ಘೋಷಿಸಿ ಆದೇಶಿಸಿದ್ದರು. ಬಳಿಕ ಜಿಲ್ಲೆಗೆ ರಜೆ ಘೋಷಿಸಿ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಂದಿನ ಯುವಪೀಳಿಗೆ ಭವಿಷ್ಯದ ಬದುಕಿಗಾಗಿ ಪರಿಸರದ ಮಹತ್ವವನ್ನು ಅರಿತು ಗಿಡಮರಗಳ ಉಳಿವಿಗೆ ಕೈಜೋಡಿಸಬೇಕಾಗಿದೆ ಎಂದು ಕೋಟ ಆರಕ್ಷಕ ಠಾಣೆಯ ಉಪನಿರೀಕ್ಷಕ ಶಂಭುಲಿಂಗಯ್ಯ ಕರೆ ನೀಡಿದ್ದಾರೆ. ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ (ರಿ.) ಉಳ್ತೂರು ಇವರ ವತಿಯಿಂದ ಉಳ್ತೂರಿನ ದೇವಸ್ಥಾನದ ವಠಾರದಲ್ಲಿ ಆಯೋಜಿಸಿದ್ದ “ಹಸಿರೇ ಉಸಿರು” ವನಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಗಿಡಮರಗಳ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಕೆದೂರು ಗ್ರಾಮ ಪಂಚಾಯತ್ ಸದಸ್ಯರಾದ ಪ್ರಶಾಂತ್ ಶೆಟ್ಟಿ ಮತ್ತು ವಿಜಯ್ ಕುಮಾರ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು. ಯುವಕ ಮಂಡಲದ ಅಧ್ಯಕ್ಷ ಅರುಣ್ ಶೆಟ್ಟಿ ಪ್ರಾಸ್ಥಾವಿಕ ಮಾತನಾಡಿದರು. ಗೌರವಾಧ್ಯಕ್ಷ ವೆಂಕಟೇಶ್ ಅಡಿಗ ಸ್ವಾಗತಿಸಿ, ಕಾರ್ಯದರ್ಶಿ ಹರೀಶ್ ಆಚಾರ್ಯ ವಂದಿಸಿದರು. ಪ್ರತಾಪ್ ಶಟ್ಟಿ ಉಳ್ತೂರು ಕಾರ್ಯಕ್ರಮ ನಿರೂಪಿಸಿದರು. ಉಳ್ತೂರು ಗ್ರಾಮದ ಸುಮಾರು 440 ಮನೆಗಳಿಗೂ ಸಸಿ ವಿತರಿಸುವುದು ಮತ್ತು ಉತ್ತಮವಾಗಿ ಸಾಕಿ ಸಲಹಿದವರಿಗೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸೂಕ್ತ ಸನ್ಮಾನ ಮತ್ತು ಗೌರವ ನೀಡಲು ತೀರ್ಮಾನಿಸಲಾಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಾಮಕ್ಷತ್ರಿಯ ಸಮುದಾಯವು ಸಮಾಜದಲ್ಲಿ ಪ್ರಗತಿಯ ಹಾದಿಯಲ್ಲಿದೆ. ಮುಂದೆ ಸಾಗಿದವರು ಎಲ್ಲರನ್ನೂ ಒಂದುಗೂಡಿಸಿಕೊಂಡು ಕೊಂಡೊಯ್ಯುವ ಮಹತ್ತರ ಕಾರ್ಯದಲ್ಲಿಯೂ ತೊಡಗಿಕೊಂಡಿದ್ದಾರೆ. ಹಾಗಾಗಿಯೇ ಇಂದು ವಿದ್ಯಾರ್ಥಿವೇತನ, ಮನೆನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ಯಶಸ್ವಿಯಾಗಿ ಸಾಕಾರಗೊಳಿಸಲು ಸಾಧ್ಯವಾಗಿದೆ ಎಂದು ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣ ಹೇಳಿದರು. ಅವರು ಭಾನುವಾರ ಇಲ್ಲಿನ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ರಿ. ಬೈಂದೂರು ಇದರ 11ನೇ ವರ್ಷದ ಟ್ರಸ್ಟ್ ದಿನಾಚರಣೆ ಹಾಗೂ ಸಾರ್ವಜನಿಕ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಇಂದು ಬದುಕಿನಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದು, ಅದಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯುವಂತಾಗಬೇಕುಎಂದರು. ಪ್ರೊಫೆಸರ್ ಡಾ. ಶಿವಾನಂದ ನಾಯಕ್ ಅವರು ಮಾತನಾಡಿ, ಆಧುನಿಕ ಯುಗದಲ್ಲಿ ಬದಲಾದ ಜೀವನಶೈಲಿ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಆದರೆ ನಮ್ಮ ದೇಹದ ಸಮಸ್ಯೆಗಳ ಬಗ್ಗೆಯೇ ಕಾಳಜಿ ಇಲ್ಲದೇ ಇದ್ದರೆ ಮುಂದೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಸರಳ ಯೋಗಾಭ್ಯಾಸ, ಆಹಾರ ಕ್ರಮಗಳನ್ನು ಅನುಸರಿಸಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗ್ರಾಮೀಣ ಪ್ರದೇಶಗಳಿಂದ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸೌಕರ್ಯವೂ ಕಡಿಮೆ ಇದೆ. ಈಗಾಗಲೇ ನಿಗದಿತ ಸಮಯಕ್ಕೆ ತೆರಳುತ್ತಿದ್ದ ಬಸ್ ಸಮಯವನ್ನು ಬದಲಿಸಿ ಮತ್ತಷ್ಟು ತೊಂದರೆ ಮಾಡಲಾಗಿದೆ. ಬಸ್ ಸಮಯ ಬದಲಿಸುವಂತೆ ಆಗ್ರಹಿಸಿ ಮುದೂರು, ಕೆರಾಡಿ ಭಾಗದ ವಿದ್ಯಾರ್ಥಿಗಳು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಶನಿವಾರ ಎದುರು ಪ್ರತಿಭಟನೆ ನಡಸಿದರು. ವಿದ್ಯಾರ್ಥಿ ಪ್ರತಿನಿಧಿ ಕವಿತಾ ಆಚಾರ್ಯ ಮಾತನಾಡಿ, ಕುಂದಾಪುರದಿಂದ ಮುದೂರು ಮತ್ತು ಕೆರಾಡಿ ಭಾಗಕ್ಕೆ ಸಂಜೆ 4:30ಕ್ಕೆ ಇದ್ದ ಸರಕಾರಿ ಬಸ್ ಸಮಯ ಬದಲಿಸಿ ಸಂಜೆ 5 15ಕ್ಕೆ ಮಾಡಿರುವುದು ಸಮಸ್ಯೆ ಉಂಟುಮಾಡಿದೆ. ಬಸ್ ಇಳಿದು ಕಾಡು ಪ್ರದೇಶದಲ್ಲಿ 2 ರಿಂದ 3ಕಿ.ಮೀ ನೆಡೆದುಕೊಂಡು ಹೊಳೆ, ಕಾಲುಸಂಕ ದಾಟಿ ಹೋಗುವಷ್ಟರಲ್ಲಿ ರಾತ್ರಿಯಾಗುತ್ತದೆ. ವಿದ್ಯಾರ್ಥಿನಿಯರಿಗೆ ಏನಾದರೂ ಸಮಸ್ಯೆಗಳಾದಲ್ಲಿ ಹೊಣೆ ಯಾರು ಎಂದವರು ಪ್ರಶ್ನಿಸಿದರು. ಮೊದಲಿನ ಸಮಯಕ್ಕೆ ಕುಂದಾಪುರದಿಂದ ಸರಕಾರಿ ಬಸ್ಸುಗಳು ಹೊರಡುವಂತೆ ಮಾಡಬೇಕು, ಅವ್ಯವಸ್ಥೆ ಹೀಗೆಯೇ ಮುಂದುವರಿದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟಿಸಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು. ಈ ವೇಳೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೆಎಂಎಫ್ ಉತ್ಪನ್ನವಾದ ನಂದಿನಿ ಹಾಲು ಖರೀದಿ ದರವನ್ನು ಪ್ರತಿ ಲೀಟರಿಗೆ ರೂ.3 ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡಿರುವುದು ರಾಜ್ಯದ ಹೈನುಗಾರರಿಗೆ ಬಲ ತುಂಬಿದಂತಾಗಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರಿಗೆ ಅಭಿನಂದನೆ ಸಲ್ಲಿಸುವುದಾಗಿ ದ.ಕ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ, ಮೇಕೋಡು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ತಿಳಿಸಿದ್ದಾರೆ. ಅವಿಭಜಿತ ದಕ ಜಿಲ್ಲೆಯಲ್ಲಿ ಸುಮಾರು 65 ಸಾವಿರ ಹೈನುಗಾರರಿಂದ ಹಾಲು ಶೇಖರಿಸಲಾಗುತ್ತಿದೆ. ಕಳೆದ ಸಾಲಿನಲ್ಲಿ ಪಶು ಆಹಾರದ ಬೆಲೆಯನ್ನು ಹೆಚ್ಚಿಸಲಾಗಿತ್ತು ಆದರೆ ಅದಕ್ಕೆ ತಕ್ಕಂತೆ ಹಾಲು ಖರೀದಿ ದರ ಏರಿಕೆಯಾಗಿರಲಿಲ್ಲ. ಪಶುಪಾಲನೆಯ ಸಂಕಷ್ಟದ ಜೊತೆಗೆ ಹಾಲಿಗೆ ಸರಿಯಾದ ಧಾರಣೆ ಸಿಗದಿರುವುದರಿಂದ ರೈತರು ಕಂಗಾಲಾಗಿದ್ದು, ತಮ್ಮ ಜಾನುವಾರುಗಳನ್ನು ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಎಂಎಫ್ ಖರೀದಿ ದರವನ್ನು ರೂ.5ಕ್ಕೆ ಏರಿಸುವ ಬೇಡಿಕೆ ಇರಿಸಿದ್ದು, ಸದ್ಯ ರೂ.3 ಏರಿಸಲು ನಿರ್ಣಯಿಸಲಾಗಿದೆ. ಇದು ಹೈನುಗಾರಿಕೆಯಲ್ಲಿ ತೊಡಗಿಕೊಂಡವರಿಗೆ ಪ್ರೋತ್ಸಾಹಿಸಿದಂತಾಗಿದೆ ಎಂದಿದ್ದಾರೆ. ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ಹಾಲು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಗ್ಗರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಮಂಜುನಾಥ್ ಪೂಜಾರಿ , ಕಾರ್ಯದರ್ಶಿಯಾಗಿ ಸುಧಾಕರ್ ಮೊಗವೀರ ಹಾಗೂ ಕೋಶಾಧಿಕಾರಿಯಾಗಿ ಮಾಧವ ಬಿಲ್ಲವ ಆಯ್ಕೆಯಾಗಿದ್ದಾರೆ. ಶುಕ್ರವಾರ ಶಾಲೆಯಲ್ಲಿ ಜರುಗಿದ ಹಳೆ ವಿದ್ಯಾರ್ಥಿಗಳ ಸಂಘದ ಸಭೆಯಲ್ಲಿ ಆಯ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರುಗಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪತ್ರಿಕೆಯಲ್ಲಿ ಬರೆದಿರುವುದೆಲ್ಲಾ ಸತ್ಯ ಎಂದು ಸಮಾಜ ನಂಬುತ್ತದೆ. ಹಾಗಾಗಿ ಪತ್ರಕರ್ತರ ಲೇಖನಿ ಸಮಾಜ ಒಗ್ಗೂಡಸಬೇಕೇ ಹೊರತು ಒಡೆಯುವಂತಾಗಬಾರದು. ಪತ್ರಕರ್ತರು ಯಾವತ್ತೂ ನಿಷ್ಠೆ ಬದಲಿಸದೇ ಬದುಕಿದರೆ ಮಾತ್ರ ಸಶಕ್ತ ಸಮಾಜ ಕಟ್ಟಲು ಸಾಧ್ಯ ಎಂದು ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್. ಹೇಳಿದರು. ಕುಂದಾಪುರ ತಾಲೂಕು ಪತ್ರಕರ್ತರ ಸಂಘ ನೇತೃತ್ವದಲ್ಲಿ ಇಲ್ಲಿನ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಾಗೂ ಪದವಿಪೂರ್ವ ಕಾಲೇಜು ಸಹಕಾರದಲ್ಲಿ ಕಾಲೇಜು ಕೋಯಕುಟ್ಟಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ಸಮಾಜದ ಅವಿಭಾಜ್ಯ ಅಂಗವಾಗಿ ಬೆಳೆದು ಬಂದಿದ್ದು, ಕಟ್ಟಕಡೆಯ ವ್ಯಕ್ತಿಗೂ ಕೂಡಾ ಮಾಹಿತಿ ನೀಡುವ ಜೊತೆ ಸತ್ಯವನ್ನು ಮುಟ್ಟಿಸುವ, ಜಾಗೃತಿ ಮೂಡಿಸು ಕೆಲಸ ಪತ್ರಿಕೆಯಿಂದ ಆಗುತ್ತದೆ ಎಂದರು. ಕುಂದಾಪುರ ಡಿಎಸ್ಪಿ ಬೆಳ್ಳಿಯಪ್ಪ ಕೆ.ಯು., ಸಮಾಜಿಕ ಜಾಲತಾಣ ಅನಾವರಣ ಮಾಡಿ, ಪತ್ರಿಕಾ ಧರ್ಮ ಹೋಗಿ ಉದ್ಯಮವಾಗಿ ಬದಲಾಗಿದ್ದು, ಪತ್ರಕರ್ತರು ಹೆಚ್ಚು ಹೆಚ್ಚು ಓದಿ, ಜ್ಞಾನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ಮಹಾನಗರಿಯಲ್ಲಿ 5ನೇ ಭಾರಿಗೆ ಆಯೋಜಿಸಲಾಗುತ್ತಿರುವ “ಕುಂದಾಪ್ರ ಕನ್ನಡ ಹಬ್ಬ”ವನ್ನು ಜುಲೈ 23ರ ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಬೆಂಗಳೂರಿನ ಅತ್ತಿಗುಪ್ಪೆಯಲ್ಲಿರುವ ಬಂಟರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ ಹೇಳಿದರು. ಅವರು ಶುಕ್ರವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕುಂದಗನ್ನಡದ ಮೇಲಿನ ಪ್ರೀತಿಯಿಂದ ಸಾಮಾಜಿಕ ಮಾಧ್ಯಮದಲ್ಲಿ ಹುಟ್ಟಿದ ಅಭಿಮಾನದ ಕಿಡಿಯೊಂದು ಇಂದು ವಿಶ್ವದಗಲ ಹಬ್ಬಿರುವ ಪರಿಯು ಭಾಷೆಯೊಂದರ ಅಪರಿಮಿತ ಸಾಧ್ಯತೆಯನ್ನು ಎತ್ತಿಹಿಡಿಯುತ್ತದೆ. ಸಮಾನಮನಸ್ಕ ಗೆಳೆಯರ ಸಾರಥ್ಯದಲ್ಲಿ ಆಯೋಜನೆಯಾಗುತ್ತಾ ಬಂದ ಈ ದಿನಾಚರಣೆಯು ಈ ಬಾರಿ ಬೆಂಗಳೂರಿನಲ್ಲಿ ಕುಂದಾಪ್ರ ಕನ್ನಡ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗುತ್ತಿದೆ. ಕುಂದಾಪ್ರ ಕನ್ನಡ ಭಾಷೆಯೆಂಬುದು ಕುಂದಾಪುರ ನೆಲಮೂಲದ ಭಾಷಾ ಸಂಪತ್ತು, ಆಚಾರ-ವಿಚಾರ, ಕಲೆ, ಕ್ರೀಡೆ, ವೈವಿಧ್ಯಮಯ ಆಹಾರ ಮುಂತಾದ ಕುಂದಾಪುರ ಜನಜೀವನ, ಸಾಂಸ್ಕೃತಿಕ ಹಿರಿಮೆಯನ್ನು ವಿಶ್ವಕ್ಕೆ ಸಾರುವ ಜೊತೆಗೆ ಇಲ್ಲಿ ನೆಲೆಸಿರುವ ಕುಂದಗನ್ನಡಿಗರ ಅಪರೂಪದ ಸಮ್ಮಿಲನಕ್ಕೆ ವೇದಿಕೆ ಕಲ್ಪಿಸುವ ಉತ್ಸವವಾಗಿರುತ್ತದೆ. ಬೆಂಗಳೂರಿನಲ್ಲಿ ಲಕ್ಷಾಂತರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ವಾಹನಕ್ಕೆ ಅಡ್ಡ ಬಂದ ಕಾರಣಕ್ಕೆ ಆರಂಭವಾದ ಮಾತು ಪರಸ್ಪರ ಹಲ್ಲೆ, ವಾಹನ ಜಖಂಗೊಳಿಸುವುದರಲ್ಲಿ ಅಂತ್ಯವಾಗಿದ್ದು ದೂರು ಪ್ರತಿದೂರು ದಾಖಲಾಗಿದೆ. ಘಟನೆಯ ವಿವರ:ಉಪ್ಪುಂದದ ರಮೇಶ್ ದೇವಾಡಿಗ ಎಂಬುವವರು, ಟಾಟಾ ಏಸ್ ವಾಹನದಲ್ಲಿ ತನ್ನ ಸ್ನೇಹಿತ ರವಿ ಎಂಬುವವರೊಂದಿಗೆ ಪ್ಲೈವುಡ್ ತರಲು ಉಪ್ಪುಂದದಿಂದ ಬೈಂದೂರಿನ ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಮನೀಶ್ ಬಾರ್ & ರೆಸ್ಟೊರೆಂಟ್ ಮುಂದೆ ನಿಖಿಲೇಶ್, ನಿತೇಶ್, ಹಾಗೂ ಕಿಶೋರ್ ಎಂಬುವವರು ವಿರುದ್ಧ ದಿಕ್ಕಿನಲ್ಲಿ ಬಂದು ಟಾಟಾ ಏಸ್ ವಾಹನವನ್ನು ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ. ಪಕ್ಕದಲ್ಲಿ ಕುಳಿತಿದ್ದ ರವಿಯ ಕುತ್ತಿಗೆಗೆ ಕೈಹಾಕಿ ಕತ್ತನ್ನು ಹಿಸುಕಲು ಪ್ರಯತ್ನಿಸಿದ್ದು ಆಗ ಸ್ಥಳಿಯರು ಗಲಾಟೆಯನ್ನು ಬಿಡಿಸಿ ಕಳುಹಿಸಿದ್ದಾರೆ. ರಮೇಶ್ ದೇವಾಡಿಗ ತಮ್ಮ ಕೆಲಸವನ್ನು ಮುಗಿಸಿಕೊಂಡು ಸಂಜೆ 5 ಗಂಟೆ ವೇಳೆಗೆ ಶೆಟ್ಟಿ ಬಾರ್ & ರೆಸ್ಟೊರೆಂಟ್ ಪಕ್ಕದಲ್ಲಿದ್ದ ಟೀ ಸ್ಟಾಲ್ ನಲ್ಲಿ ಟೀ ಕುಡಿಯಲು ವಾಹನವನ್ನು ನಿಲ್ಲಿಸಿದ್ದ ಸಂದರ್ಭ ನಿಖಿಲೇಶ್, ನಿತೇಶ್, ಕಿಶೋರ್ , ಪ್ರಜ್ವಲ್ ಶೆಟ್ಟಿ ಹಾಗೂ ಮಣಿಕಂಠ…

Read More