ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜಿಲ್ಲೆಯಲ್ಲಿ ನಾಲ್ಕು ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಬಿಜೆಪಿ ಪಕ್ಷ ತನ್ನ ಹೊಸ ಪ್ರಯೋಗದಲ್ಲಿ ಖಂಡಿತ ಯಶಸ್ಸು ಸಾಧಿಸಲಿದೆ. ಮಾತ್ರವಲ್ಲ ರಾಜ್ಯದಲ್ಲಿಯೂ ಬಿಜೆಪಿ ಪ್ರಚಂಡ ಗೆಲುವು ದೊರೆಯಲಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಪ್ರಮೋದ್ ಮದ್ವರಾಜ್ ಹೇಳಿದರು. ಅವರು ಮಂಗಳವಾರ ಬೈಂದೂರು ಬಿಜೆಪಿ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಈ ಮಾತನಾಡಿ ಬೈಂದೂರು ಬಿಜೆಪಿ ಅಭ್ಯರ್ಥಿಯ ಬಗ್ಗೆ ಕಾರ್ಯಕರ್ತರು ಹಾಗೂ ಜನರಲ್ಲಿ ಉತ್ತಮ ಅಭಿಪ್ರಾಯವಿದೆ. ಆರ್.ಎಸ್.ಎಸ್ ಪ್ರಚಾರಕಾಗಿ ಬಂದವರಿಗೆ ತಳಮಟ್ಟದಲ್ಲಿ ಜನರ ನೋವು ನಲಿವುಗಳ ಅರಿವಿದೆ. ಅವರ ಸಂಕಷ್ಟ ನಿವಾರಿಸಲು ಅವರು ಖಂಡಿತವಾಗಿಯೂ ಪಣತೊಡುತ್ತಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯೇ ಸಾಕ್ಷಿ. ಬೈಂದೂರಿನಲ್ಲಿಯೂ ಅಂತಹದ್ದೊಂದು ಅವಕಾಶ ಎದುರಾಗಿದ್ದು, ಬಿಜೆಪಿ ಅಭ್ಯರ್ಥಿಯೇ ಗೆಲುವ ಸಾಧಿಸಲಿದ್ದಾರೆ ಎಂದರು. ಈ ವೇಳೆ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ತಾ.ಪಂ ಮಾಜಿ ಉಪಾಧ್ಯಕ್ಷೆ ಮಾಲಿನಿ ಕೆ., ಮಾಜಿ ಸದಸ್ಯೆ ಶ್ಯಾಮಲಾ ಕುಂದರ್, ಜಿಲ್ಲಾ ಯುವಮೋರ್ಚಾ ಪ್ರಧಾನ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ ಮೈನ್ 2ನೇ ಫೇಸ್ನ ಅಂತಿಮ ಫಲಿತಾಂಶದಲ್ಲಿ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಆಯುಷ್ ಭೌತಶಾಸ್ತ್ರದಲ್ಲಿ 97 ಪರ್ಸನ್ಟೈಲ್ ಪಡೆದು ಒಟ್ಟು96 ಪರ್ಸನ್ಟೈಲ್ ಪಡೆದಿದ್ದಾನೆ. ವಿದ್ಯಾರ್ಥಿ ಸುಮಂತ್ ರಸಾಯನಶಾಸ್ತ್ರದಲ್ಲಿ 99.12ಪರ್ಸಂಟೈಲ್ ಪಡೆಯುವುದರ ಜೊತೆಗೆ ಒಟ್ಟು 96ಪರ್ಸನ್ಟೈಲ್ ಹಾಗೂ ಓಂಕಾರ್ ಪ್ರಭು ಒಟ್ಟು 90.04 ,ಪರ್ಸನ್ಟೈಲ್ ಪಡೆದಿದ್ದರೇ, ಹರ್ಷಿತ್ ಖಾರ್ವಿ 88.17 ಪರ್ಸನ್ಟೈಲ್, ತನಿಷಾ 83.5 ಪರ್ಸನ್ಟೈಲ್ ಪಡೆದಿರುತ್ತಾರೆ. ಪರೀಕ್ಷೆಗೆ ಕುಳಿತ ಕಾಲೇಜಿನ 5 ವಿದ್ಯಾರ್ಥಿಗಳು ಶೇಕಡಾ 100 ಶೇಕಡಾ ಫಲಿತಾಂಶವನ್ನು ದಾಖಲಿಸುವುದರ ಮೂಲಕ ಐಐಟಿ ಪರೀಕ್ಷೆಯಾದ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಹೊಂದಿರುತ್ತಾರೆ. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವ್ರಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೇಂದ್ರ ಹಾಗೂ ರಾಜ್ಯದ ಡಬ್ಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕದಲ್ಲಿ ಅಭಿವೃದ್ಧಿ ಸ್ಥಿರವಾಗಿದೆ. ಪಿ.ಎಫ್.ಐನಂತಹ ಸಂಘಟನೆ ತಲೆಎತ್ತದಿರಬೇಕಾದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರವನ್ನು ಆರಿಸಬೇಕಿದೆ ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಶಾ ಹೇಳಿದರು. ಅವರು ಶನಿವಾರ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ಧಾಪುರದಲ್ಲಿ ರೋಡ್ ಶೋ ನಡೆಸಿ ಬಳಿಕ ಮಾತನಾಡಿ, ರಾಷ್ಟ್ರದಲ್ಲಿ ಪಿಎಫ್‍ಐಯಂತಹ ಸಂಘಟನೆಗಳನ್ನು ನಿಷೇಧ ಮಾಡಿ ವಿದ್ವಾಂಸಕ ಚಟುವಟಿಕೆಗಳ ನಿರ್ಮೂಲನೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ದೇಶದಲ್ಲಿ ಸುರಕ್ಷತೆಯ ವಾತಾವರಣ ನಿರ್ಮಾಣವಾಗಿದೆ. ಬಾಂಬ್ ದಾಳಿಯಂತಹ ಪ್ರಕರಣಗಳು ನಿಯಂತ್ರಣಕ್ಕೆ ಬಂದಿದೆ ಎಂದರು. ಕರಾವಳಿ ಭಾಗದಲ್ಲಿ ರೈತರ ಹಾಗೂ ಮೀನುಗಾರರ ಹಿತಾಸಕ್ತಿಯ ಕಾಪಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ಮೀನುಗಾರಿಕಾ ಬಂದರು ಅಭಿವೃದ್ಧಿ ಮಾಡಿದೆ. ಅಡಿಕೆ ಕೃಷಿಕರಿಗೆ ಬೆಂಬಲ ನೀಡಿದ್ದರಿಂದ ಉತ್ತಮ ಧಾರಣೆ ಲಭಿಸಿದೆ. ಎಲ್ಲ ಸ್ತರಗಳ ಜನರಿಗೆ ಸಾಮಾಜಿಕ ನ್ಯಾಯ ನೀಡುವಲ್ಲಿ ಸರ್ಕಾರ ಬದ್ದವಾಗಿದೆ ಎಂದ ಅವರು, ಬೈಂದೂರಿನಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜೆಸಿಐ ಉಪ್ಪುoದ, ಡಾ.ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ, ರಾಷ್ಟ್ರೀಯ ಸೇವಾ ಯೋಜನೆ ವಿಭಾಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಒಂದು ದಿನದ ಪ್ರಥಮ ಚಿಕಿತ್ಸಾ ಕೌಶಲ್ಯದ ಹಾಗೂ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಗಾರ ಡಾ.ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಉಮೇಶ್ ಶೆಟ್ಟಿ ಮಾತನಾಡಿ, ಪ್ರಥಮ ಚಿಕಿತ್ಸಾ ಮಾಹಿತಿಯಿಂದ ಯುವಜನರು ತಮ್ಮನ್ನು ಮತ್ತು ಇತರರನ್ನು ಅಪಾಯದಿಂದ ಪಾರು ಮಾಡಬಲ್ಲರು. ವಿದ್ಯಾರ್ಥಿಗಳನ್ನು ಕೌಶಲ್ಯ ಭರಿತರನ್ನಾಗಿ ಮಾಡುವ ಇಂತಹ ಕಾರ್ಯ ಶ್ಲಾಘನೀಯ ಎಂದರು. ರೆಡ್ ಕ್ರಾಸ್ ಸಂಸ್ಥೆ ದಕ್ಷಿಣಕನ್ನಡ ಜಿಲ್ಲೆ ಇಲ್ಲಿಯ ತರಬೇತುದಾರರಾದ ಅಶ್ವಿನ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ನಿದರ್ಶನಗಳೊಂದಿಗೆ ಪ್ರಥಮ ಚಿಕಿತ್ಸಾ ಕೌಶಲ್ಯ ಹಾಗೂ ವಿಪತ್ತು ನಿರ್ವಹಣೆಯ ತರಬೇತಿ ನೀಡಿದರು. ಜೆಸಿಐ ಉಪ್ಪುoದದ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಸಭಾಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ, ಜೆಸಿ ಸಂಸ್ಥೆಯ ತರಬೇತುದಾರರಾದ ಸುಬ್ರಮಣ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭೆ ಕ್ಷೇತ್ರದ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಡಗುಡ್ಡೆಯಂಗಡಿ,ಬಡಾಕೆರೆ, ಸೇನಾಪುರ ಮತ್ತು ತಾರಿಬೇರು ಭಾಗದ ಕಾಂಗ್ರೆಸ್ ಮತ್ತು ಇತರೆ ಪಕ್ಷದ ಕಾರ್ಯಕರ್ತರು ಹಾಗೂ ಹತ್ತಾರು ಯುವಕರು ಬಿಜೆಪಿ ಪಕ್ಷವನ್ನು ಶುಕ್ರವಾರ ಸೇರ್ಪಡೆಯಾಗಿದ್ದಾರೆ. ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಈ ಸಂದರ್ಭ ಮಾತನಾಡಿ, ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷದ ಶಾಸಕರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ನೆಚ್ಚಿಕೊಂಡು ಯುವಕರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ,ಯುವ ಕಾರ್ಯಕರ್ತರ ಸೇರ್ಪಡೆಯಿಂದ ಈ ಭಾಗದಲ್ಲಿ ಬಿಜೆಪಿಗೆ ಇನ್ನಷ್ಟು ಶಕ್ತಿ ತುಂಬಿದ್ದಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಹೇಂದ್ರ ಪೂಜಾರಿ,ಸುರೇಶ್ ಶೆಟ್ಟಿ,ಕಿಶೋರ್ ಶೆಟ್ಟಿ,ಶೇಖರ್ ಖಾರ್ವಿ,ಅಶೋಕ ಶೆಟ್ಟಿ ಸಂಸಾಡಿ, ಶಂಕರ್ ಶೆಟ್ಟಿ ಬೆಳ್ಳಾಡಿ ,ಶರತ್ ಶೆಟ್ಟಿ ಬೆಳ್ಳಾಡಿ, ಸತೀಶ್ ಎಮ್ ನಾಯಕ್, ಮಂಜುನಾಥ್ ಸೇನಾಪುರ, ಮಂಜುನಾಥ ಪೂಜಾರಿ ಬೆಳ್ಳಾಡಿ, ಪ್ರವೀಣ್ ಪಡುಕೋಣೆ ಮತ್ತಿತರರು ಉಪಸ್ಥಿತರಿದ್ದರು. ವಿಶ್ವನಾಥ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಾಗತೀಕರಣದ ಕಾಲಘಟ್ಟದಲ್ಲಿ ಇಂಗ್ಲೀಷ್ ಭಾಷೆ ಅತೀ ಮುಖ್ಯವಾಗಿದ್ದು, ಭಾಷಾ ಕೌಶಲ್ಯಗಳು ಸಂವಹನದ ಸಂದರ್ಭದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಭಾಷೆಯ ಬಳಕೆಯಿಂದ ಪ್ರಭುದ್ಧತೆ ಪಡೆದುಕೊಳ್ಳುತ್ತದೆ. ವಿಲಿಯಂ ಶೇಕ್ಸ್ಫಿಯರ್ನ ಜನನ ದಿನ ಹಾಗೂ ಮರಣ ದಿನವಾದ ಏಪ್ರಿಲ್ ೨೩ರಂದು ಆಚರಿಸುವ ಈ ಇಂಗ್ಲೀಷ್ ದಿನಾಚರಣೆ ಆಂಗ್ಲ ಕವಿಯೊಬ್ಬರನ್ನು ಪರಿಚಯಿಸುವುದರೊಂದಿಗೆ ಇಂಗ್ಲೀಷ್ ಭಾಷೆಯ ಬಗೆಗೆ ವಿದ್ಯಾರ್ಥಿಗಳಿಗೆ ಆತ್ಮೀಯತೆ ಬೆಳೆಯುತ್ತದೆ ಎಂದು ಸರಕಾರಿ ಪದವಿ ಪೂರ್ವ ಕಾಲೇಜು, ನೆಂಪು ಇಲ್ಲಿನ ಪ್ರಾಂಶುಪಾಲರಾದ ಶ್ರೀ ರಾಜೀವ್ ನಾಯಕ್ ಹೇಳಿದರು. ಅವರು ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಇಂಗ್ಲೀಷ್ ವಿಭಾಗ ಹಾಗೂ ಇಂಗ್ಲೀಷ್ ಸಂಘದ ಆಶ್ರಯದಲ್ಲಿ ಆಯೋಜಿಸಿದ ಅಂತರಾಷ್ಟ್ರೀಯ ಇಂಗ್ಲೀಷ್ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಭವಿಷ್ಯದ ಬದುಕಿನಲ್ಲಿ ಆಂಗ್ಲ ಭಾಷಾ ಬಳಕೆಯ ಅನಿವಾರ್ಯತೆಯನ್ನು ತಿಳಿಸಿದರು. ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿ, ಇಂಗ್ಲೀಷ್ ವಿಭಾಗದ…
ಕುಂದಾಪ್ರ ಡಾಟ್ ಕಾಂ ವರದಿ.ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಮತದಾನ ಪ್ರಮಾಣ ಹೆಚ್ಚಿಸುವ ಕುರಿತಂತೆ ಸ್ವೀಪ್ ವತಿಯಿಂದ ವಿವಿಧ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಮೊದಲ ಬಾರಿಗೆ ವಿಶಿಷ್ಟ ರೀತಿಯಲ್ಲಿ ಮಾಂಗ್ರೋವ್ ಕಾಡುಗಳ ಮಧ್ಯೆ ಕಯಾಕ್ ಗಳಲ್ಲಿ ವಿನೂತನ ರೀತಿಯಲ್ಲಿ ಮತದಾನ ಮಹತ್ವ ಕುರಿತು ಜಾಗೃತಿ ಮೂಡಿಸಲಾಗಿದೆ. ಜಿಲ್ಲಾಡಳಿತ ಉಡುಪಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಬುಧವಾರ, ಸಾಲಿಗ್ರಾಮದ ಸೀತಾ ನದಿಯ ಹಿನ್ನೀರಿನಲ್ಲಿ ನಡುವಿನ ದಟ್ಟ ಕಾಂಡ್ಲಾವನದ ನಡುವೆ ಕಯಾಕಿಂಗ್ ಮೂಲಕ ತೆರಳಿ, ಕಯಾಕಿಂಗ್ ಮಾಡಲು ಬಳಸುವ ದೋಣಿಗಳ ಮೂಲಕ ಮತದಾನ ಜಾಗೃತಿಯ ಸಂದೇಶವನ್ನು ಸಾರಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ಸಾಲಿಗ್ರಾಮ ಬಳಿಯ ಕಯಾಕಿಂಗ್ ಪಾಯಿಂಟ್ ಬಳಿಗೆ ತೆರಳಿದ ,ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಕೂರ್ಮರಾವ್ ಎಂ , ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ ಹಾಕೆ , ಪ್ರೋಬೇಷನರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಬದುಕಿನಲ್ಲಿ ಸಮಯದ ಅರಿವಿರಬೇಕಾದ್ದು ಅತ್ಯಗತ್ಯ. ವಿಳಂಬ ಪೃವತಿ ರೂಢಿಸಿಕೊಳ್ಳದೆ ಸಮಪಾಲನೆಯಿಂದ ಕಾರ್ಯಪ್ರವರ್ತರಾದರೆ ಯಶಸ್ಸು ಸಾಧ್ಯ ಎಂದು ದಿ ಹಿಂದೂ ಗ್ರೂಪ್ ಮಾರಾಟ ಮತ್ತು ವಿತರಣಾ ಉಪಾಧ್ಯಕ್ಷ ಶ್ರೀಧರ ಅರನಾಳ ಹೇಳಿದರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದವತಿಯಿಂದ ಮಂಗಳವಾರ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ಅತಿಥಿ ಉಪನ್ಯಾಸದಲ್ಲಿ ’ಒತ್ತಡ ಹಾಗೂ ಭಾವನೆಗಳ ನಿರ್ವಹಣೆಯ ತಂತ್ರಗಳು’ ವಿಷಯದ ಕುರಿತು ಮಾತನಾಡಿದರು. ಮಾತಾಡುವುದೂ ಒಂದು ಕಲೆ. ಆಡಬೇಕಾದ ಮಾತನ್ನು ಧ್ಯಾನವಿಟ್ಟು, ಸಂದರ್ಭವರಿತು, ಪರಿಣಾಮವನ್ನೂ ಮುಂದಾಲೋಚಿಸಿ, ಹದದಲ್ಲಿ ಮಾತನಾಡಬೇಕಾದದದ್ದು ಮುಖ್ಯ. ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳಿಸಲು ಉತ್ತಮ ಒತ್ತಡ ಮನು?ನಿಗೆ ಅನಿವಾರ್ಯವಿದೆ. ಆದರೆ ಒತ್ತಡ ಹೆಚ್ಚಾದಲ್ಲಿ ಆರೋಗ್ಯದ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರುತ್ತದೆ ಎಂದರು. ಹಾಗೆಯೇ ವ್ಯಕ್ತಿಯೂ ಸಂತೋ?ದಿಂದ ಕಾರ್ಯಮಗ್ನಾನಾಗಬೇಕೇ ಹೊರತು ಒತ್ತಡದಿಂದಲ್ಲ. ಮನು? ದೊರೆಯದ ವಸ್ತುಗಳ ಕುರಿತು ಚಿಂತಿಸುವ ಬದಲು ಅದನ್ನು ಹೇಗೆ ಮುಂದಿನ ದಿನದಲ್ಲಿ ಧಕ್ಕಿಸಿಕೊಳ್ಳಬಹುದು ಎಂಬುದರ ಕುರಿತು ಕಾರ‍್ಯಪ್ರವೃತ್ತರಾಗಬೇಕು ಎಂದರು. ನಂತರ ಪತ್ರಿಕಾರಂಗದ ಕುರಿತು ವಿದ್ಯಾರ್ಥಿಗಳೊಂದಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೇ.10ರಂದು ನಡೆಯುವ ಚುನಾವಣೆಯಲ್ಲಿ ಜನರೇ ದೇವರೆಂದು ಭಾವಿಸಿ, ಆಶೀರ್ವಾದವನ್ನು ಬೇಡುತ್ತಿದ್ದೇನೆ. ಬಂದೂರಿನ ಜನ ನನಗೆ ಪೂರ್ಣ ಪ್ರಮಾಣದಲ್ಲಿ ಆಶೀರ್ವಾದ ಮಾಡುವ ವಿಶ್ವಾಸವಿದೆ ಎಂದು ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಹೇಳಿದರು. ಅವರು ಬೈಂದೂರು ವಿಧಾನಸಭಾ ಕ್ಷೇತ್ರದ ನೇರಳಕಟ್ಟೆ ಸಮೀಪದ ಜಾಡ್ಕಟ್ಟುವಿನಲ್ಲಿ ನಡೆದ ಬಿಜೆಪಿ ಕಾರ‍್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಟಿಕೆಟ್ ಘೋಷಣೆಯಾದ 5 ನಿಮಿಷದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕರೆ ಮಾಡಿ, ಹೆಮ್ಮೆಯ ಬಿಜೆಪಿ ಪಕ್ಷದ ಅಭ್ಯರ್ಥಿ ನೀವು. ನಾವು ನಿಮ್ಮೊಂದಿಗೆ ನಿಂತು, ಗೆಲ್ಲಿಸಿ ಕೊಡುತ್ತೇವೆ. ಊರು ಒಳ್ಳೆಯದು ಮಾಡುವ ಅಂದಿದ್ದರು. ನನ್ನಂತೆ ಅವರು ಸಹ ಸಾಮಾನ್ಯ ಮನೆಯಿಂದ ಬಂದವರು ಎಂದು ಗಂಟಿಹೊಳೆ ಹೇಳಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪಕ್ಷದ ಜನಸಾಮಾನ್ಯರ ಮುಂದೆ ಓಡಾಟ ಮಾಡಿದವರು. ಸಂಘಟನೆ, ಪಕ್ಷದ ಪರಿಪೂರ್ಣ ಕಲ್ಪನೆ ಇರುವವರು. ಸಾಮಾನ್ಯ ಜನರೊಂದಿಗೆ ಬೆರೆಯುವ ಗುರುರಾಜ್ ಗಂಟಿಹೊಳೆ ಅವರು ವಿಧಾನಸೌಧಕ್ಕೆ ಹೋದರೆ, ಪರಿಣಾಮಕಾರಿ ಕೆಲಸಗಳಾಗುತ್ತವೆ. ಎಲ್ಲ ವರ್ಗದ ಜನರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಉಪ್ಪುಂದ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶಮಿತಾ, ದ್ವಿತೀಯ ಪಿಯು ಪರೀಕ್ಷೆ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗುವುದರ ಜೊತೆಗೆ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಶಮಿತಾ ಕನ್ನಡದಲ್ಲಿ 98, ಇಂಗ್ಲಿಷ್ 90, ಎಕನಾಮಿಕ್ಸ್ 96, ಬುಸಿನೆಸ್ ಸ್ಟಡೀಸ್ 92, ಅಕೌಂಟೆನ್ಸಿ 98, ಕಂಪ್ಯೂಟರ್ ಸೈನ್ಸ್ 100 ಅಂಕದೊಂದಿಗೆ ಒಟ್ಟು 574 ಅಂಕ ಪಡೆದಿದ್ದಾಳೆ. ಈಕೆ ಯಡ್ತರೆ ನಿವಾಸಿ ಶಿವರಾಮ ಮತ್ತು ಸುಶೀಲಾ ದಂಪತಿಗಳ ಪುತ್ರಿ.
