Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: 2022-23ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಉಪ್ಪುಂದ ಜ್ಯೂನಿಯರ್ ಕಾಲೇಜಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಅಮೂಲ್ಯ ರಾಜ್ಯಕ್ಕೆ 3ನೇ ಸ್ಥಾನ ಪಡೆಯುವ ಮೂಲಕ ಸಾಧನೆಗೈದಿದ್ದಾಳೆ. 625 ಅಂಕಗಳಲ್ಲಿ 623 ಅಂಕ ಗಳಿಸಿರುವ ಅಮೂಲ್ಯ, ಕನ್ನಡ – 125, ಹಿಂದಿ – 100, ಇಂಗ್ಲೀಷ್ – 100, ಸಮಾಜವಿಜ್ಞಾನ – 100, ವಿಜ್ಞಾನ – 100 ಹಾಗೂ ಗಣಿತದಲ್ಲಿ 98 ಅಂಕ ಗಳಿಸಿದ್ದಾಳೆ. ಈಕೆ ಬಿಜೂರು ಮುರ್ಗೋಳಿಹಕ್ಲು ನಿವಾಸಿ, ಬವಳಾಡಿ ಸ.ಹಿ.ಪ್ರಾ ಶಾಲಾ ಮುಖ್ಯ ಶಿಕ್ಷಕ ಎನ್.ಕೆ. ಬಿಲ್ಲವ ಹಾಗೂ ಜ್ಯೋತಿ ದಂಪತಿಗಳ ಪುತ್ರಿಯಾಗಿದ್ದಾಳೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಪ್ರಧಾನಿ ನರೇಂದ್ರ ಮೋದಿಯವರೇ ಹಿಂದೆ ನಿಂತು ಆಯ್ಕೆ ಮಾಡಿದ ಅಭ್ಯರ್ಥಿ ಗುರುರಾಜ ಗಂಟಿಹೊಳೆ. ಅವರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. 25 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗುರುರಾಜ ಗಂಟಿಹೊಳೆಯವರು ಜಯ ಸಾಧಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಚುನಾವಣೆ ಸಹ ಉಸ್ತುವಾರಿ ಕೆ.ಅಣ್ಣಾಮಲೈ ಹೇಳಿದರು. ಸೋಮವಾರ ಬೆಳಗ್ಗೆ ತ್ರಾಸಿಯಿಂದ ಬೈಂದೂರಿನ ವರೆಗೂ ಬೃಹತ್ ರೋಡ್ ಶೋ, ಬೈಕ್ ರ್ಯಾಲಿ ನಡೆಸಿ, ಅನಂತರ ಮಾತನಾಡಿದ ಅವರು, ಗುರುರಾಜ ಗಂಟಿಹೊಳೆಯವರ ಆಯ್ಕೆ ಕೇವಲ ಯಾರೋ ಒಂದಿಬ್ಬರು ಮಾಡಿದ್ದಲ್ಲ. ಪಕ್ಷವೇ ಸಾಮಾನ್ಯ ಕಾರ್ಯಕರ್ತನ್ನು ಗುರುತಿಸಿ ಅವಕಾಶ ನೀಡಿದೆ. ಇದರ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರಿದ್ದಾರೆ ಮತ್ತು ಅವರ ಅಭಿವೃದ್ಧಿಯ ಕನಸುಗಳು ಇವೆ. ನಾವೆಲ್ಲರೂ ಒಟ್ಟಾಗಿ ಗುರುರಾಜ ಗಂಟಿಹೊಳೆ ಅವರನ್ನು ಗೆಲ್ಲಿಸೊಣ ಎಂದು ಕರೆ ನೀಡಿದರು. ಕ್ಷೇತ್ರದಲ್ಲಿ ಬಡವ, ಶ್ರೀಮಂತ, ಶ್ರಮೀಕರು, ರೈತರು, ಕಾರ್ಮಿಕರು ಹೀಗೆ ಸಾಮಾನ್ಯರಿಂದ ಹಿಡಿದು ಎಲ್ಲರ ಬೆಂಬಲ ಗುರುರಾಜ ಗಂಟಿಹೊಳೆಯವರ ಮೇಲಿದೆ. ಬಿಜೆಪಿ ಪಕ್ಷ ಸಾಮಾನ್ಯರಿಗೂ ಸ್ಥಾನಮಾನ ನೀಡುತ್ತದೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: 2022-23ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಶೇ.83.89ರಷ್ಟು ಫಲಿತಾಂಶ ದಾಖಲಾಗಿದೆ. ನಾಲ್ವರು ವಿದ್ಯಾರ್ಥಿಗಳು ಪೂರ್ಣ ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಶೇ 96.8% ರಷ್ಟು, ಫಲಿತಾಂಶ ಪಡೆದು ಪ್ರಥಮ ಸ್ಥಾನದಲ್ಲಿದ್ದರೆ, ಮಂಡ್ಯ 96.74 ದ್ವಿತೀಯ , ಹಾಸನ ಮೂರನೇ ಸ್ಥಾನದಲ್ಲಿದೆ. ಯಾದಗಿರಿ ಶೇ 75.49 ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ. ಇನ್ನು ಉಡುಪಿ 18 ಹಾಗೂ ದ.ಕ 19ನೇ ಸ್ಥಾನದಲ್ಲಿದೆ. ಮಲ್ಲೇಶ್ವರಂನಲ್ಲಿರುವ ಪ್ರೌಢ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿ(ಕೆಎಸ್ ಇಎಬಿ ) ಪತ್ರಿಕಾಗೋಷ್ಟಿ ಫಲಿತಾಂಶ ಪ್ರಕಟಿಸಿದೆ. ಪ್ರತಿಶತ ಅಂಕ ಪಡೆದ ವಿದ್ಯಾರ್ಥಿಗಳು:ಭೂಮಿಕಾ – ನ್ಯೂ ಮೆಕಾಲೆ ಇಂಗ್ಲಿಷ್ ಹೈಸ್ಕೂಲ್ ಹೊಸೂರುಯಶಶ್ ಗೌಡ – ಚಿಕ್ಕಬಳ್ಳಾಪುರಅನುಪಮ ಶ್ರೀ ಶೈಲಿ – ಬೆಳಗಾವಿಬೀಮನ್ ಗೌಡ ಹನುಮಂತ್ ಗೌಡ ಬೀರಾದಾರ್ ಪಾಟೀಲ್ – ಬಿಜಾಪುರಎಸೆಸೆಲ್ಸಿ ಪರೀಕ್ಷೆ 2023 ಮಾರ್ಚ್ 31 ರಂದು ಪ್ರಾರಂಭವಾಗಿದ್ದು, ಏಪ್ರಿಲ್ 15, 2023 ರಂದು ಕೊನೆಗೊಂಡಿತ್ತು.ಈ ಪರೀಕ್ಷೆಗೆ ರಾಜ್ಯದ್ಯಾಂತ ಒಟ್ಟು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬಿಜೆಪಿ ಸರಕಾರ ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನಗಳನ್ನು ಒದಗಿಸಿರುವ ಹಿನ್ನೆಲೆಯಲ್ಲಿ ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆಯವರನ್ನು ಬೆಂಬಲಿಸುವಂತೆ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ನಿರ್ದೇಶಕ ಕಳಿ ಚಂದ್ರಯ್ಯ ಆಚಾರ್ಯ ಅವರು ಮನವಿ ಮಾಡಿದ್ದಾರೆ. ಬೈಂದೂರು ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರಕಾರ ವಿಶ್ವಕರ್ಮ ಸಮುದಾಯದ ಮಠ ಮಂದಿರಗಳಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿರುವುದು ಮಾತ್ರವಲ್ಲದೆ ಸಮುದಾಯದ ದೇವಸ್ಥಾನಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೂ ಸಹಕರಿಸಿದೆ. ಈ ನಿಟ್ಟಿನಲ್ಲಿ ಸಮುದಾಯ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರನ್ನು ಬೆಂಬಲಿಸುವುದು ಸೂಕ್ತ ಎಂದು ಅವರು ತಿಳಿಸಿದರು. ಉಪ್ರಳ್ಳಿ ಶ್ರೀ ಕಾಳಿಕಾಂಬ ದೇವಸ್ಥಾನದ ಮುಂಭಾಗದ ರಸ್ತೆ ಕಾಂಕ್ರೀಟೀಕರಣ, ಕಾಂಕ್ರೀಟ್ ಸೈಡ್ ವಾಲ್, ಶೀಟ್ ಮಾಡು, ಕಚೇರಿ ಹಾಗೂ ಗುರುಗಳ ವಾಸ್ತವ್ಯ ಕಟ್ಟಡ ಹಾಗೂ ಸಭಾಂಗಣಕ್ಕೆ 2 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನವನ್ನು ಬಿಜೆಪಿ ಸರಕಾರ ಒದಗಿಸಿದೆ. ಇದರ ಜೊತೆಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರು ಭಾನುವಾರ ಸಿದ್ಧಾಪುರ ಪೇಟೆಯಲ್ಲಿ ಭರ್ಜರಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು. ತಲ್ಲೂರು ನೇರಳಕಟ್ಟೆ, ತ್ರಾಸಿ – ಗುಜ್ಜಾಡಿ, ವಂಡ್ಸೆ ಪೇಟೆ ಹಾಗೂ ಸಿದ್ಧಾಪುರದಲ್ಲಿ ರೋಡ್ ಶೋ ಹಮ್ಮಿಕೊಳ್ಳಲಾಗಿತ್ತು. ವಂಡ್ಸೆ ಸಿದ್ಧಾಪುರದ ರೋಡ್ ಶೋ ವೇಳೆ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಕಾಂಗ್ರೆಸ್ ಮುಖಂಡರುಗಳಾದ ಸಂಪಿಗೇಡಿ ಸಂಜೀವ ಶೆಟ್ಟಿ, ಕೆ. ಬಾಬು ಶೆಟ್ಟಿ, ಪ್ರಸನ್ನಕುಮಾರ್ ಶೆಟ್ಟಿ ಸೇರಿದಂತೆ ಹಲವರು ಜೊತೆಗಿದ್ದರು.

Read More

ಕುಂದಾಪ್ರ ಡಾಟ್ ಕಂ ಸುದ್ದಿ.ಕುಂದಾಪುರ: ಕುಂದಾಪುರ ಬಿಜೆಪಿ ಅಭ್ಯರ್ಥಿ ಎ. ಕಿರಣ್ ಕುಮಾರ್ ಕೊಡ್ಗಿ ಅವರ ಪರವಾಗಿ ಶನಿವಾರ ಕುಂದಾಪುರ ನಗರದಲ್ಲಿ ಭರ್ಜರಿ ರೋಡ್ ಶೋ ನಡೆಯಿತು. ಸಾವಿರಾರು ಕಾರ್ಯಕರ್ತರು ಬಿಜೆಪಿ ಹಾಗೂ ಕೇಸರಿ ಧ್ವಜ ಹಿಡಿದ ರೋಡ್ ಶೋನಲ್ಲಿ ಹೆಜ್ಜೆ ಹಾಕಿದರು. ಕುಂದಾಪುರ ನೆಹರು ಮೈದಾನದಿಂದ ಆರಂಭಗೊಂಡು ಹೊಸ ಬಸ್ ನಿಲ್ದಾಣದ ಮುಖಾಂತರ ತಿರುಗಿ ಮತ್ತೆ ಶಾಸ್ತ್ರೀ ವೃತ್ತದಲ್ಲಿ ಸಮಾಪನಗೊಂಡಿತು. ಬಜರಂಗದಳ ನಿಶೇಧದ ವಿರುದ್ಧ ಸಂಘಟನೆಗಳ ವಿರೊಧದ ಕೂಗು ಮರೆವಣಿಗೆಯಲ್ಲಿ ಕೇಳಿಬಂತು. ಕುಂದಾಪುರ ಶಾಸಕರ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಸೇರಿದಂತೆ ವಿವಿಧ ಪದಾಧಿಕಾರಿಗಳು ಈ ವೇಳೆ ಜೊತೆಗಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರ ಪರವಾಗಿ ಉಡುಪಿ ಶಾಸಕ ಕೆ. ರಘುಪತಿ ಭಟ್ ಹಾಗೂ ಉಡುಪಿ ಅಭ್ಯರ್ಥಿ ಯಶ್ಪಾಲ್ ಎ. ಸುವರ್ಣ ಅವರು ಉಪ್ಪುಂದದ ಅಳುವೆಕೋಡಿಯಿಂದ ಕರ್ಕಿಕಾಳಿಯವರೆಗೂ ಶನಿವಾರ ಸಂಜೆ ರೋಡ್ ಶೋ ನಡೆಸಿ, ಮತ ಯಾಚಿಸಿದರು. ಈ ವೇಳೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರು ಮಾತನಾಡಿ, ಗುರುರಾಜ ಗಂಟಿಹೊಳೆಯವರೊಂದಿಗೆ ಯುವ ಸಮೂಹವೇ ಇದೆ. ಅವರ ಗೆಲುವಿಗೆ ಎಲ್ಲರೂ ಒಟ್ಟಾಗಿ ಶ್ರಮೀಸಬೇಕು. ಮೀನುಗಾರರ ಸೀಮೆಎಣ್ಣೆ ಸಮಸ್ಯೆಗೆ ಕೇಂದ್ರ ಸರಕಾರ ಶಾಶ್ವತ ಪರಿಹಾರ ನೀಡಲಿದೆ. ಇದಕ್ಕಾಗಿ ರಾಜ್ಯದಲ್ಲೂ ಅಧಿಕಾರಕ್ಕೆ ಬರಬೇಕು. ಬೈಂದೂರಿನಲ್ಲೂ ಗುರುಅಣ್ಣ ಜಯ ಸಾಧಿಸಬೇಕು ಎಂದರು. ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ, ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ, ಬಿಜೆಪಿ ಹಿಂದುಳಿದ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಗೋವಿಂದ ಬಾಬು ಪೂಜಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರು ಶನಿವಾರ ಶಿರೂರಿನಿಂದ ಮುದೂರು ತನಕ ವಿವಿಧ ಭಾಗಗಳಲ್ಲಿ ರೋಡ್ ಶೋ ನಡೆಸಿ ನಡೆಸಿ ಮತಯಾಚನೆ ಮಾಡಿದರು. ಈ ವೇಳೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪ್ರಥ್ವಿರಾಜ್ ಚೌಹಾಣ್ ರೋಡ್ ಶೋಗೆ ಸಾಥ್ ನೀಡಿದರು. ದೊಂಬೆ, ಶಿರೂರು, ಹಡವಿನಕೋಣೆ, ಉಪ್ಪುಂದ, ಬಿಜೂರು, ಹೊಸಕೋಟೆ, ನಾಯ್ಕನಕಟ್ಟೆ, ಕಂಬದಕೋಣೆ, ಕಾಲ್ತೋಡು, ತಗ್ಗರ್ಸೆ, ವಸ್ರೆ, ಯಳಜಿತ, ಗೋಳಿಹೊಳೆ, ಅರೆಶಿರೂರು, ಕೊಲ್ಲೂರು, ಜಡ್ಕಲ್ ಮುದೂರು ಭಾಗದಲ್ಲಿ ಅವರು ರೋಡ್ ಶೋ ನಡೆಸಿದರು. ಈ ವೇಳೆ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನಕುಮಾರ್ ಉಪ್ಪುಂದ, ಪ್ರಚಾರ ಸಮಿತಿ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ರಾಜು ಪೂಜಾರಿ, ಕೆ. ಬಾಬು ಶೆಟ್ಟಿ, ಸದಾಶಿವ ಪಡುವರಿ, ನಗರ ಕಾಂಗ್ರೆಸ್ ಅಧ್ಯಕ್ಷ ನಾಗರಾಜ ಗಾಣಿಗ ಬಂಕೇಶ್ವರ, ಸತೀಶ್ ಕೆ.ವಿ, ಶೇಖರ ಪೂಜಾರಿ ಉಪ್ಪುಂದ, ರವೀಂದ್ರ ಶೆಟ್ಟಿ, ಉದಯ ಪೂಜಾರಿ, ರಿಯಾಜ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಲುವಾಗಿ ಮೇ 5ರಂದು ಸಹಸ್ರ ಕಲಶಗಳೊಂದಿಗೆ ಬ್ರಹ್ಮಕಲಶಾಭಿಷೇಕ ನಡೆಯಿತು. ಬೆಳಗ್ಗೆ ಯಾಗೇಶ್ವರಿ ಹೋಮ, ಸಹಸ್ರಕಲಶಗಳೊಂದಿಗೆ ಬ್ರಹ್ಮ ಕಲಶಾಭಿಷೇಕ ಮಹಾಪೂಜೆ ಧ್ವಜಪೂಜೆ, ಕ್ಷೇತ್ರಪಾಲ ಪೂಜೆ, ಚತುರ್ವೇದ ಪಾರಾಯಣ ಸಹಿತ ಭೇರಿತಾಡನ, ಪಳಹ ಪೂಜೆ, ವಿಶೇಷ ಬಲಿ, ಪಲ್ಲಕ್ಕಿ ಉತ್ಸವ ಮಯೂರ ಆರೋಹಣೋತ್ಸವ, ಡೋಲಾರೋಹಣೋತ್ಸವ, ತಂತ್ರಿ ನಿತ್ಯಾನಂದ ಅಡಿಗ ಅವರ ನೇತೃತ್ವದಲ್ಲಿ ನಡೆಯಿತು. ಧಾರ್ಮಿಕ ವಿಧಿಗಳೊಂದಿಗೆ ಗರ್ಭಗುಡಿಯ ಶಿಖರಕ್ಕೆ ಕಲಶಾಭಿಷೇಕ ನೆರವೇರಿಸಲಾಯಿತು. ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಕಾರ್ಯನಿರ್ವಹಣಾಕಾರಿ ಎಸ್ ಸಿ. ಕೋಟಾರಗಸ್ತಿ, ಸದಸ್ಯರಾದ ಡಾ. ರಾಮಚಂದ್ರ ಅಡಿಗ, ಡಾ. ಅತುಲ್ ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ್, ಗಣೇಶ ಕಿಣಿ ಬೆಳ್ವೆ, ಗೋಪಾಲಕೃಷ್ಣ ನಾಡ, ಶೇಖರ ಶೇಖರ ಪೂಜಾರಿ, ಸಂಧ್ಯಾ ರಮೇಶ, ರತ್ನ ಆರ್.ಕುಂದರ್, ಅರ್ಚಕರಾದ ಡಾ. ನಿತ್ಯಾನಂದ ಅಡಿಗ, ಡಾ. ಕೆ.ಎನ್. ನರಸಿಂಹ…

Read More