Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಮೂರನೇ ದಿನ ಡಾ. ವಿ.ಎಸ್. ಆಚಾರ್ಯ ವೇದಿಕೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಸ್ತುತಿ ಮನಸೆಳೆಯಿತು. ಪುತ್ತೂರಿನ ಅನೀಶ್ ವಿ. ಭಟ್ ಮತ್ತು ಬಳಗದ ಕಲಾವಿದರು ನೆರೆದಿದ್ದವರ ಮನಗೆದ್ದರು. ಆದಿ ತಾಳದಲ್ಲಿ ನಳಿನಕಂಠಿವರ್ಣ ಗೀತೆಯ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು.ಬಳಿಕ ’ಮಾರಿವೆರೆ ಷಣ್ಮುಖಪ್ರಿಯ’, ಶುದ್ಧ ಧನ್ಯಾಸಿ, ಸುಬ್ರಹ್ಮಣ್ಯೇನ ಹಾಡುಗಳು ಆದಿತಾಳದಲ್ಲಿ ಹೊರಹೊಮ್ಮಿದವು. ಶ್ರೀ ಕಾಂತೀಮತಿಮ್ ಪದ್ಯವು ಹೇಮಾವತಿರಾಗ, ಆದಿತಾಳದಲ್ಲಿ ಮೂಡಿಬಂದಿತ್ತು. ಕೊನೆಗೆ ಮಿಶ್ರಪೀಲು ರಾಗ ಮತ್ತು ಮಿಶ್ರಛಾಪು ತಾಳದಲ್ಲಿ ರಾಘವಂಕರುಣಾಕರಂ ಗೀತೆಯು ಕಲಾಪ್ರೇಮಿಗಳನ್ನು ಮಂತ್ರಮುಗ್ಧರನ್ನಾಗಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಅನೀಶ್ ವಿ ಭಟ್ ಶಾಸ್ತ್ರೀಯ ಸಂಗೀತದ ಸದ್ಯದ ಸ್ಥಾನಮಾನದ ಕುರಿತು ವಿಚಾರಗಳನ್ನು ಹಂಚಿಕೊಂಡರು. ಈಗಿನ ದಿನಗಳಲ್ಲಿ ಉತ್ತರ ಭಾರತದ ಸಂಗೀತ ಪ್ರಕಾರಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಆದರೆ ದಕ್ಷಿಣ ಭಾರತದ ಸಂಗೀತ ಪ್ರಕಾರಗಳಿಗೆ ಅದೇ ಬಗೆಯ ಆದ್ಯತೆ ಇಲ್ಲ. ಕರ್ನಾಟಕದಲ್ಲಿಯೂ ಕರ್ನಾಟಕ ಶಾಸ್ತೀಯ ಸಂಗೀತಕ್ಕೆ ಅವಕಾಶಗಳು ಕಡಿಮೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೆಳಗಾವಿಯಲ್ಲಿ ಜರುಗುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಭಾಗಿಯಾಗಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಮೀನುಗಾರರ ನಿಯೋಗದೊಂದಿಗೆ ಭೇಟಿ ಮಾಡಿ ಕರಾವಳಿ ಜಿಲ್ಲೆಗಳ ಮೀನುಗಾರರ ಸಮಸ್ಯೆ ಪರಿಹಾರಕ್ಕೆ ನೆರವಾಗುವಂತೆ ಮನವಿ ಮಾಡಿಕೊಂಡರು. ಈ ವೇಳೆ ಗಂಗೊಳ್ಳಿ ನಾಡ ದೋಣಿ ವಲಯ ಸಂಘಟನೆಯ ಅಧ್ಯಕ್ಷರಾದ ಯಶವಂತ್ ಖಾರ್ವಿ, ಮೀನುಗಾರ ಮುಖಂಡರಾದ ಗೋಪಾಲ್ ಖಾರ್ವಿ, ಹರೀಶ್ ಖಾರ್ವಿ, ಗಣಪತಿ ಖಾರ್ವಿ, ಮೊಗವೀರ ಸಮುದಾಯದ ಪ್ರಮುಖರಾದ ಹರೀಶ್ ತೋಳಾರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅರವಿಂದ ಪೂಜಾರಿ ಪಡುಕೋಣೆ, ಮಂಜುನಾಥ ಪೂಜಾರಿ ಮುಂತಾದವರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ವಿದ್ಯಾರ್ಥಿಗಳ ಪೋಷಕರು ಶಾಲೆಗೆ ಭೇಟಿ ನೀಡಿ ತಮ್ಮ ಮಕ್ಕಳ ಕಲಿಕೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿರಬೇಕು. ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮಕ್ಕಳ ಹಾಗೂ ಶಾಲೆಯ ಆಗುಹೋಗುಗಳ ಬಗ್ಗೆ ಶಾಲೆಯ ಶಿಕ್ಷಕರೊಂದಿಗೆ ಚರ್ಚೆ ನಡೆಸುವುದರ ಜೊತೆಗೆ ತಮ್ಮಿಂದಾಗುವ ಸಹಕಾರ ಶಾಲೆಗೆ ನೀಡಬೇಕು. ಕಳೆದ ಹಲವಾರು ವರ್ಷಗಳಿಂದ ವಿದ್ಯಾಭ್ಯಾಸದ ಸಾಧನೆ ಮೂಲಕ ಗುರುತಿಸಿಕೊಂಡಿರುವ ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಶಾಲೆ ಅದ್ಭುತ ಪ್ರಗತಿ ಸಾಧಿಸಿದೆ ಎಂದು ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕ ಯೋಗ ನರಸಿಂಹ ಸ್ವಾಮಿ ಕೆ.ಎಂ. ಹೇಳಿದರು. ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಪ್ರೌಢ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಸ್ಟೆಲ್ಲಾ ಮಾರಿಸ್ ವಿದ್ಯಾಸಂಸ್ಥೆಗಳ ಜಂಟಿ ಕಾರ್ಯದರ್ಶಿ ಭಗಿನಿ ಡಯಾನ ಎ.ಸಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಶಿಕ್ಷಕ-ರಕ್ಷಕ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ ಖಾರ್ವಿ, ಸ್ಟೆಲ್ಲಾ ಮಾರೀಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಭಗಿನಿ ಡೋರಿನ್, ಸ್ಟೆಲ್ಲಾ ಮಾರೀಸ್ ಪ್ರಿ-ಪ್ರಿಪರೇಟರಿ ಶಾಲೆಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಸಹಜ ನಟನೆ ಹಾಗೂ ಹಾಸ್ಯದ ಮೂಲಕ ಜೀವನ ಪಾಠಗಳನ್ನು ಜನರಿಗೆ ತಲುಪುವುದು ಒಂದು ಅಧ್ಬುತ ಕಲೆ. ಹೀಗೆ ವಿಭಿನ್ನ ಪಾತ್ರಗಳೊಂದಿಗೆ ಒಂದೂವರೆ ಗಂಟೆಗಳ ಕಾಲ ಪ್ರೇಕ್ಷಕರು ಒಂದಿಷ್ಟೂ ಕದಲದಂತೆ ಸೆಳೆದದ್ದು ಫ್ರೆಂಡ್ಸ್ ಮಂಗಳೂರು ಮತ್ತು ಪ್ರಶಂಸಾ ಕಾಪು ತಂಡದ ’ತುಳುಹಾಸ್ಯ’ ಕಾರ್ಯಕ್ರಮ. ಮೂಡಬಿದ್ರೆಯ ಆಳ್ವಾಸ್ ಆವರಣದ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ೨೦೨೨ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮದ ಮೊದಲ ದಿನದಂದು ಕೃಷಿಸಿರಿ ವೇದಿಕೆಯಲ್ಲಿ ನಡೆದ ’ತುಳುಹಾಸ’ ಕಾರ್ಯಕ್ರಮ ನೆರೆದ ಜನ ಸಮೂಹವನ್ನು ನಗುವಿನ ಲೋಕಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಯಿತು. ಬಾಯಿ ತುಂಬ ನಗಬೇಕು ಎಂಬ ಹಾಡಿನೊಂದಿಗೆ ಉತ್ತಮ ಆರಂಭವನ್ನು ನೀಡಿದ ಪ್ರಶಂಸಾ ಕಾಪು ತಂಡದಲ್ಲಿ ಕಲಾವಿದರ ಪರದೆಯ ಹಿಂದಿನ ನಿಜವಾದ ಪರಿಶ್ರಮದ ವಿಚಾರ ಅಡಕವಾಗಿತ್ತು. ಮಕ್ಕಳಿಗೆ ಸೋಲನ್ನು ಎದುರಿಸಲು ಕಲಿಸಬೇಕು, ಅದುವೇ ಗೆಲುವಿನ ಹಾದಿಯೆಂಬ ಉತ್ತಮ ಸಂದೇಶವನ್ನು ನೀಡಿದವರು ಫ್ರೆಂಡ್ಸ್ ಮಂಗಳೂರು ತಂಡದ ಕಲಾವಿದರು. ಕಲಾ ತಂಡವನ್ನು ಮುನ್ನಡೆಸುವ ನಾಯಕನಿಗೆ ಇತರೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ’ತಾನಲ್ಲ ತನ್ನದಲ್ಲ ಆಸೆ ತರವಲ್ಲ ಮುಂದೆ ಬಾಹುದಲ್ಲ, ದಾಸನಾಗು ವಿಶೇಷನಾಗು’ ಎಂಬ ಅಂತರಂಗ ಶುದ್ಧಿಗೊಳಿಸುವ ಅರ್ಥಗರ್ಭಿತ ದಾಸರ ಸಾಲುಗಳು ಅರ್ಥಪೂರ್ಣ ಕಾರ್ಯಕ್ರಮಕ್ಕೆ ಅಚ್ಚೊತ್ತಿದಂತಿತ್ತು. ಈ ಸಾಲುಗಳಿಗೆ ತಬಲ, ಕೀಬೋರ್ಡ್‌ನ ಸಾಥ್ ಸಿಕ್ಕರೆ ವಾಹ್… ಭಕ್ತಿಯ ಕಡಲಲ್ಲಿ ಮಿಂದೇಳಲು ಇನ್ನೇನು ಬೇಕು? ಹೀಗೆ ಪ್ರೇಕ್ಷಕರನ್ನು ಭಾವಲೋಕಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾದವರು ಬೆಂಗಳೂರಿನ ಎಂ.ಎಸ್. ಗಿರಿಧರ್ ಮತ್ತು ಬಳಗದ ’ದಾಸ ಸಿಂಚನ’ ತಂಡ. ಮೂಡಬಿದ್ರೆಯ ಆಳ್ವಾಸ್ ಜಾಂಬೂರಿಯ ಕೃಷಿಸಿರಿ ವೇದಿಕೆ ಇಂತಹದೊಂದು ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಯಿತು. ’ಮುಸುರೆ ತೊಳೆಯಬೇಕು ಮನಸಿನ ಮುಸುರೆ ತೊಳೆಯಬೇಕು’ ಎಂಬ ಪುರಂದರದಾಸರ ಕೀರ್ತನೆಯನ್ನು ರಾಗದೊಂದಿಗೆ ಅನುಭವಿಸುವುದೇ ಚೆಂದ. ಪ್ರೇಕ್ಷಕರು ಒಕ್ಕೊರಲಿನಿಂದ ಹಾಡುಗಾರರ ಭಕ್ತಿ ಸುಧೆಯಲ್ಲಿ ಮಿಂದು ’ರಾಮ ಕೃಷ್ಣ ಗೋವಿಂದ ನಾರಾಯಣ’ ಎಂದಾಗ ಭಗವಂತನೇ ಇಲ್ಲಿ ನೆಲೆಸಿ ಹಾಡಿಸುತ್ತಿದ್ದಾನೆ ಎಂದು ಭಾಸವಾಗುತ್ತಿತ್ತು. ತಳ ಹಿಡಿದ ಪಾತ್ರೆಗಳನ್ನು ಹಸಿರ ಹುಲ್ಲಿನಿಂದ ಸ್ವಚ್ಛಗೊಳಿಸುವಂತೆ ಮನಸಿನ ಕಲ್ಮಶಗಳನ್ನು ಕಿತ್ತೊಗೆಯಲು ದೇವರ ನಾಮ ಸ್ಮರಣೆಯೊಂದೇ ದಾರಿ ಎಂಬ ಅರ್ಥಗರ್ಭಿತ ಮಾತುಗಳನ್ನು ದಾಸ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾಗಿರಿ ಆವರಣದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಮೂರನೇ ದಿನ ಶುಕ್ರವಾರ ನುಡಿಸಿರಿ ವೇದಿಕೆಯಲ್ಲಿ ’ಕೊಳಲು ವಾದನ ಜುಗಲ್‌ಬಂದಿ’ ಕಾರ್ಯಕ್ರಮ ನಡೆಯಿತು. ಬೆಂಗಳೂರಿದ ದೀಪಕ್ ಹೆಬ್ಬಾರ್ ಮತ್ತು ಸುನೀಲ್ ಕುಮಾರ್ ಕೊಳಲಿನ ನಾದಸ್ವರದ ಮೂಲಕ ಕೇಳುಗರ ಮನಸೂರೆಗೊಳಿಸಿದರು. ಕಾರ್ಯಕ್ರಮವನ್ನು ಕರ್ನಾಟಿಕ್ ಸಂಗೀತ ಪ್ರಕಾರದ ಹಂಸಧ್ವನಿ ರಾಗದಲ್ಲಿ ’ವಾತಾಪಿ ಗಣಪತಿ’ ಗೀತೆಯನ್ನು ಆದಿತಾಳದಲ್ಲಿ ಕೊಳಲಿನ ಮೂಲಕ ಪ್ರಸ್ತುತಪಡಿಸಿ ಆರಂಭಿಸಿದರು. ನಂತರ ಆದಿತಾಳದಲ್ಲಿ ’ವಾಚಿಸ್ಪತಿ’ ಹಾಗೂ ಕೊನೆಯಲ್ಲಿ ಮಧ್ಯಮವತಿ ತಾಳದಲ್ಲಿ ’ಭಾಗ್ಯದ ಲಕ್ಷ್ಮೀ ಬಾರಮ್ಮ’ ಗೀತೆಗಳು ಕೊಳಲ ನಾದದಲ್ಲಿ ಇಂಪಾಗಿ ಮೂಡಿಬಂದವು. ಮೃದಂಗದಲ್ಲಿ ನಾಗೇಂದ್ರ ಪ್ರಸಾದ್ ಮತ್ತು ತಬಲದಲ್ಲಿ ಸುದತ್ತ ಶ್ರೀಪಾದರವರ ತನಿಯಾ ವರ್ತನ ಕಾರ್ಯಕ್ರಮದಲ್ಲಿ ವಿಶೇಷವಾಗಿತ್ತು. ಒಂದೂವರೆ ಗಂಟೆಗಳ ಕಾಲ ನಡೆದ ಕೊಳಲು ವಾದನ ಜುಗುಲ್‌ಬಂದಿ ನೆರೆದಿದ್ದವರನ್ನು ತನ್ನಡೆಗೆ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಜೊತೆಗೆ ಕೊಳಲಿಗೆ ಸಾಥ್ ನೀಡಿದ ತಬಲಾ ಹಾಗೂ ಮೃದಂಗ ಕಾರ್ಯಕ್ರಮದ ಮೆರುಗು ಹೆಚ್ಚುವಂತೆ ಮಾಡಿತ್ತು. ವರದಿ: ಪ್ರೀತಿ ಹಡಪದ, ದ್ವಿತೀಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರೋವರ್‍ಸ್ ಮತ್ತು ರೇಂಜರ್‍ಸ್ ಎನ್ನುವುದು ಹೊರಾಂಗಣ ಕೌಶಲ್ಯ ಆಧಾರಿತ ಮತ್ತು ಸಾಹಸ ಚಟುವಟಿಕೆಗಳ ಆಧಾರಿತ ಘಟಕವಾಗಿದ್ದು, ಕಾನೂನು ಪಾಲಿಸುವ ನಾಗರೀಕರಾಗಲು, ಪ್ರಕೃತಿಯ ರಕ್ಷಣೆ, ಮಾನವೀಯತೆಯ ಸೇವೆ ಮೈಗೂಡಿಸಿಕೊಳ್ಳಲು ರೋವರ್‍ಸ್ ಮತ್ತು ರೇಂಜರ್‍ಸ್ ಘಟಕದಿಂದ ಸಾದ್ಯವಿದೆ ಎಂದು ಉಡುಪಿ ಪೂರ್ಣ ಪ್ರಜ್ಞಾ ಕಾಲೇಜಿನ ಸಹಾಯಕ ಪ್ರಾದ್ಯಾಪಕಿ ಜ್ಯೋತಿ ಆಚಾರ್ಯ ಹೇಳಿದರು. ಅವರು ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷದ ರೋವರ್‍ಸ್ ಮತ್ತು ರೇಂಜರ್‍ಸ್ ಘಟಕದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ, ಕೋವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ರಾಷ್ಟೀಯ ಶಿಕ್ಷಣ ನೀತಿಯಲ್ಲಿ ರೋವರ್‍ಸ್ ಮತ್ತು ರೇಂಜರ್‍ಸ್ ಘಟಕಗಳಿಗೆ ಹೆಚ್ಚು ಒತ್ತು ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದರು. ರೋವರ್‍ಸ್ ಲೀಡರ್ ಸತೀಶ್ ಶೆಟ್ಟಿ ಹೆಸ್ಕುತ್ತೂರು ಪ್ರಸ್ತಾವಿಸಿದರು. ರೇಂಜರ್‍ಸ್ ಲೀಡರ್ ಶ್ರೀಮತಿ ಅರ್ಪಣಾ ಶೆಟ್ಟಿ ಸ್ವಾಗತಿಸಿದರು, ಸ್ವಯಂ ಸೇವಕಿ ಪ್ರತಿನಿಧಿ ಆದರ್ಶ ನಾಯ್ಕ್ ಮತ್ತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಕುವೆಂಪು, ದ.ರಾ.ಬೇಂದ್ರೆ ಸೇರಿದಂತೆ ಕನ್ನಡದ ಮಹತ್ವದ ಕವಿಗಳ ಕಾವ್ಯ ರಾಗಾಲಾಂಕರದೊಂದಿಗೆ ಜೀವಂತಿಕೆ ಪಡೆದಿತ್ತು. ಶಿಶುನಾಳ ಷರೀಫರ ತತ್ವಪದಗಳು ಹಾಡಾಗಿ ಹೊಮ್ಮಿ ಜೀವನಮೌಲ್ಯಗಳ ಸಂದೇಶ ಸಾರಿದವು. ರಾಜರತ್ನಂ ಅವರ ಸರಳಗನ್ನಡ ಮಧುರ ಆಲಾಪದ ಬೆಂಬಲದೊಂದಿಗೆ ಕನ್ನಡದ ಬದುಕನ್ನು ತೆರೆದಿಟ್ಟಿತ್ತು. ಮೈಸೂರು ಅನಂತಸ್ವಾಮಿ, ಸಿ. ಅಶ್ವತ್ಥ್ ಅವರ ಸಂಗೀತ ಶಕ್ತಿ ವಿವಿಧ ಗಾಯಕರ ಧ್ವನಿಯಲ್ಲಿ ನಿರೂಪಿತವಾಗುತ್ತಿತ್ತು. ಕನ್ನಡ ಮತ್ತು ಸಂಸ್ಕೃತಿಯ ಮೌಲಿಕ ಗೀತಕಾಣ್ಕೆಗಳೆಲ್ಲವೂ ಒಂದೇ ವೇದಿಕೆಯ ಮೂಲಕ ವಿವಿಧ ಗಾಯನಶೈಲಿಗಳೊಂದಿಗೆ ಮೇಳೈಸಿದ್ದವು. ಈ ದೃಶಕ್ಕೆ ಸಾಕ್ಷಿಯಾಗಿದ್ದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರಿಯ ಸಾಂಸ್ಕೃತಿಕ ಜಾಂಬೂರಿಯ ’ಕನ್ನಡ ಡಿಂಡಿಮ’ ಸಂಗೀತ ಕಾರ್ಯಕ್ರಮ. ಆಳ್ವಾಸ್ ಸಂಸ್ಥೆಯ ವಿದ್ಯಾಗಿರಿಯ ಕೆ.ವಿ ಸುಬ್ಬಣ್ಣ ಬಯಲು ರಂಗ ಮಂದಿರದಲ್ಲಿ ಬೆಂಗಳೂರಿನ ಶಂಕರ ಶಾನುಭೋಗ್ ಮತ್ತು ಬಳಗದ ಕಲಾವಿದರು ?ಕನ್ನಡ ಡಿಂಡಿಮ? ಕನ್ನಡದ ಶ್ರೇಷ್ಠ ಕವಿಗಳು ಮತ್ತು ಸಂಗೀತ ನಿರ್ದೇಶಕರ ಹಾಡುಗಳನ್ನು ಪ್ರಸ್ತುತಪಡಿಸಿ ಕನ್ನಡ ಮತ್ತು ಸಂಸ್ಕೃತಿಯ ವಿಶೇಷತೆಯನ್ನು ವಿನೂತನ ರೀತಿಯಲ್ಲಿ ಅನಾವರಣಗೊಳಿಸಿದರು. ಖ್ಯಾತ ಗಾಯಕರಾದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಸ್ವರ್ಣ ಪಲ್ಲಕಿ ನಿರ್ಮಾಣಕ್ಕೆ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಚಾಲನೆ ನೀಡಿದರು. ಕುಂದಾಪುರದ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಭರಣ ಜ್ಯುವೆಲ್ಲರ್‍ಸ್‌ನ ಮಹೇಶ್ ಕಾಮತ್ ಅವರಿಗೆ ಪ್ರಸಾದ ನೀಡಿ ಜವಾಬ್ದಾರಿ ಒಪ್ಪಿಸುವ ಮೂಲಕ ಸ್ವಾಮೀಜಿಯವರು ಚಾಲನೆ ನೀಡಿದರು. ದೇವಾಲಯದ ಆಡಳಿತ ಮೊಕ್ತೇಸರರಾದ ಕೆ. ರಾಧಾಕೃಷ್ಣ ಶೆಣೈ ಜತೆ ಮೊಕ್ತೇಸರರಾದ ಜನಾರ್ಧನ ಮಲ್ಯ, ತ್ರಿವಿಕ್ರಮ ಪೈ ಹಾಗೂ ಅಕ್ಷಯ ಶೆಣೈ, ಕೆ. ಪದ್ಮನಾಭ ಶೆಣೈ, ಯು. ಅರ್ಜುನ್ ಶೆಣೈ, ವಿನಾಯಕ ಪೈ, ರಮೇಶ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ವಿದ್ಯಾರ್ಥಿಗಳಿಗೆ ಜೀವನದಲ್ಲಿ ಗುರಿ ಮತ್ತು ಛಲ ಇರಬೇಕು. ನಿದ್ರೆ ಬಿಟ್ಟು ಕನಸು ಕಂಡರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ. ಕೇವಲ ವಿದ್ಯೆ ಇದ್ದರೆ ಮಾತ್ರ ಸಾಲದು. ಸಾಧನೆಗೆ ಪರಿಶ್ರಮ ಮುಖ್ಯ. ಇಂದಿನ ದಿನಗಳಲ್ಲಿ ವಿದ್ಯೆಗೆ ಹೆಚ್ಚಿನ ಮಹತ್ವ, ಪ್ರಾಶಸ್ತ್ಯ ನೀಡಿದರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ. ಕಳೆದ ೫೦ ವರ್ಷಗಳಿಂದ ಉತ್ತಮ ಚಟುವಟಿಕೆ ಮೂಲಕ ಶಾಲೆಯ ಅಭಿವೃದ್ಧಿಗೆ ದುಡಿಯುತ್ತಿರುವ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಕಾರ್ಯ ಪ್ರಶಂಸನೀಯ ಎಂದು ಉಪ್ಪುಂದ ವರಲಕ್ಷ್ಮೀ ಚಾರಿಟೇಬಲ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಗೋವಿಂದ ಬಾಬು ಪೂಜಾರಿ ಹೇಳಿದರು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಶಾಂತೇರಿ ಬಾ ರಂಗ ಮಂಟಪದಲ್ಲಿ ಭಾನುವಾರ ಜರಗಿದ ಗಂಗೊಳ್ಳಿಯ ಎಸ್.ವಿ. ಶಾಲೆಗಳ ಹಳೆ ವಿದ್ಯಾರ್ಥಿ ಸಂಘದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಗಂಗೊಳ್ಳಿ ಜಿ.ಎಸ್.ವಿ.ಎಸ್.ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಶಾರದಾ ರಾಮಕೃಷ್ಣ…

Read More