Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತ್ರಾಸಿ ವಲಯದ ಹೊಸಾಡು ಕಾರ್ಯಕ್ಷೇತ್ರದ ಹೊಸಾಡು ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾಗಿರುವ ೨ ಲಕ್ಷ ರೂ. ಅನುದಾನದ ಡಿಡಿಯನ್ನು ಯೋಜನೆಯ ಬೈಂದೂರು ತಾಲೂಕು ಯೋಜನಾಧಿಕಾರಿ ವಿನಾಯಕ ಪೈ ಅವರು ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಮಂಗಳವಾರ ಹಸ್ತಾಂತರಿಸಿದರು. ಜನಜಾಗೃತಿ ವೇದಿಕೆ ಸದಸ್ಯ ರಮೇಶ ಆಚಾರ್ಯ, ತ್ರಾಸಿ ವಲಯ ಮೇಲ್ವಿಚಾರಕ ಗಿರೀಶ್, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Read More

ರಕ್ತದೊತ್ತಡವನ್ನು ಸಮನಾಗಿ ಕಾಯ್ದುಕೊಳ್ಳಲು ಡಯಟ್ ಮಾಡುವುದು ಹಿಂಸೆಯ ಕೆಲಸ. ಅದರಲ್ಲೂ ಡಯಾಬಿಟೀಸ್ ಇದ್ದರೆ ಮುಗಿಯಿತು ಯಾರಿಗೂ ಬೇಡ ಆ ಹಿಂಸೆ. ದೇಹದ ತೂಕ, ಮಾನಸಿಕ ಒತ್ತಡ, ನಮ್ಮ ಚಟುವಟಿಕೆಗಳೂ ರಕ್ತದೊತ್ತಡ ಏರಿಳಿತದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಆರೋಗ್ಯಕರವಾದ ಡಯಟ್ ಮೂಲಕ ಬಿಪಿ ಕಂಟ್ರೋಲ್‌ನಲ್ಲಿಟ್ಟುಕೊಳ್ಳಬಹುದು. ನಮ್ಮ ನಿಸರ್ಗವೇ ನಮ್ಮ ಬಿಪಿ ಕಂಟ್ರೋಲ್ ಮಾಡಲು ಬೇಕಾದ ಅಗತ್ಯ ಆಹಾರ ವಸ್ತುಗಳನ್ನು ಹೊಂದಿದೆ. ನಾವು ಉಪಯೋಗಿಸಿಕೊಳ್ಳಬೇಕಷ್ಟೆ. ಸಿಹಿಗುಂಬಳ ಕಾಯಿ ಮತ್ತು ಅದರ ಬೀಜ:ಇರಾನ್ ಮೆಕ್ಸಿಕೋದಲ್ಲಿ ಸಿಹಿಗುಂಬಳಕಾಯಿ ಹಾಗೂ ಅದರ ಬೀಜವನ್ನು ಡಯಾಬಿಟೀಸ್‌ಗೆ ಸಾಂಪ್ರದಾಯಿಕ ಪರಿಹಾರವಾಗಿ ಬಳಸುತ್ತಾರೆ. ಆಂಟಿ ಆಕ್ಸೈಡೆನ್ಸ್ ಹಾಗೂ ಫೈಬರ್ ಇರುವುದರಿಂದ ಸಿಹಿಗುಂಬಳಕಾಯಿ ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ಸಿಹಿಗುಂಬಳಕಾಯಿಯ ಬೀಜದ ಹುಡಿ ಮನುಷ್ಯರು ಹಾಗೂ ಪ್ರಾಣಿಗಳಲ್ಲಿಯೂ ರಕ್ತದೊತ್ತಡ ಸಮತೋಲನ ಮಾಡಲು ಸಹಕಾರಿ. ಸೀಫುಡ್-ಮೀನು, ಏಡಿ, ಸಿಗಡಿ ಇತ್ಯಾದಿ:ಸೀಪುಡ್‌ನಲ್ಲಿರುವ ಪ್ರೋಟೀನ್ ಹೆಚ್ಚಾಗಿರುತ್ತದೆ. ಮೀನು, ಚಿಪ್ಪು ಮೀನುಗಳು, ಏಡಿ, ಸಿಗಡಿಗಳಲ್ಲಿ ಆರೋಗ್ಯಕರ ಫಾಟ್, ಮಿನರಲ್ಸ್, ವಿಟಮಿನ್ಗಳಿರುತ್ತದೆ ಸೀಪುಡ್‌ನಲ್ಲಿರುವ ವಿಶೇಷವಾಗಿ ಸಾಲ್ಮನ್ ಹಾಗೂ ಸಾರ್ಡೈನ್ಸ್ಗಳಲ್ಲಿ ಆಂಟಿಆಕ್ಸಿಡೆಂಟ್ ಹೆಚ್ಚಾಗಿರುತ್ತದೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಮೇ.11: ಕೇರಳ ವಯನಾಡ್ ಸುಲ್ತಾನ್ ಬತೇರಿಯಲ್ಲಿ ಬಂಧನವಾದ ನಂತರ ಮೇ.24ರಂದು ಕೇರಳ ಪೊಲೀಸರಿಂದ ರಾಜ್ಯ ಪೊಲೀಸರಿಗೆ ಹಸ್ತಾತರವಾದ ನಕ್ಸಲೈಟ್ ಬಿ.ಜಿ.ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಎಂಬವರ ಪೊಲೀಸರು ಕುಂದಾಪುರ 1ನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಇಬ್ಬರನ್ನೂ ಹತ್ತುದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಶಂಕಿತ ನಕ್ಸಲ್ ವಾದಿ ಬಿ.ಜಿ.ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಅಮಾಸೆಬೈಲ್ ಠಾಣೆಯಲ್ಲಿ 2006ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಘಟನೆ ನಡೆದ ಸ್ಥಳದ ಮಹಜರಿಗೆ ಇಬ್ಬರನ್ನೂ ಪರಿಶೀಲನೆಗೆ ಕೊಂಡೊಯ್ಯಲಿದ್ದರೆ. ನ್ಯಾಯಾಂಗ ಬಂಧನದಲ್ಲಿದ್ದ ಬಿ.ಜಿ.ಕೃಷ್ಣಮೂರ್ತಿ, ಸಾವಿತ್ರಿ ಅವರ ಕಾರ್ಕಳ, ಹೆಬ್ರಿ ಹಾಗೂ ಅಜೆಕಾರು ನಡೆದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೇ.3 ರಂದು ಪೊಲೀಸ್ ಕಸ್ಟಡಿ ಪಡೆದು ವಿಚಾರಣೆ ಹಾಗೂ ಸ್ಥಳ ಮಹಜರು ನಡೆಸಿದ ಬಳಿಕ ಮಂಗಳವಾರ ಮರಳಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿ ಕೇಶವ್ ಯಡಿಯಾಳ ಪ್ರಕರಣಗಳ ವಿಚಾರಣೆಗಾಗಿ ಕುಂದಾಪುರ ಉಪ ವಿಭಾಗದ ಪೊಲೀಸರು ವಶಕ್ಕೆ ಪಡೆದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಮೇ.12: ಅಸಾನಿ ಚಂಡಮಾರುತದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಮೋಡಕಟ್ಟಿದ ವಾತಾವರಣ, ಬುಧವಾರ ಪೂರ್ತಿ ಮಳೆಯಾಗಿ ಸುರಿದಿದೆ. ಬೆಳಗ್ಗೆಯಿಂದ ನಿರಂತರ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿತು. ಬೆಳಗ್ಗೆ ಹತ್ತು ಗಂಟೆಯಿಂದ ಆರಂಭವಾದ ಮಳೆ ಮಧ್ಯಾಹ್ನ ಮೂರರ ತನಕ ಸುರಿದಿದ್ದು, ನಂತರ ತುಂತುರು ಮಳೆಗೆ ಸೀಮಿತವಾಯಿತು. ಕಡಲಬ್ಬರ ಹೆಚ್ಚಾಗಿ ಇದ್ದಿದ್ದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಲಿಲ್ಲ. ಮಳೆಯ ಹಿನ್ನೆಲೆಯಲ್ಲಿ ಕೃಷಿಕರು ಕೃಷಿ ಚಟುವಟಿಕೆ ಆರಂಭಿಸಿದ್ದು, ಗದ್ದೆ ಉಳುವ ಯಂತ್ರಗಳು, ಗೊಬ್ಬರ ಹರಡುವ ಮಹಿಳೆಯರು ಭತ್ತದ ಗದ್ದೆಗಳಲ್ಲಿ ಕಂಡುಬಂತು. ಇನ್ನು ಗುರುವಾರವೂ ಮೋಡಕವಿದ ವಾತಾವರಣ ಮುಂದುವರಿದಿದ್ದು, ಮೇ.13ರ ತನಕವೂ ಚಂಡಮಾರುತದ ಪ್ರಭಾವ ಇರಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಸರ್ವಿಸ್ ರಸ್ತೆಯಾಯ್ತು ನೀರಿನ ತೋಡು!ಕುಂದಾಪುರರ ಪುರಸಭಾ ವ್ಯಾಪ್ತಿಯಲ್ಲಿ ಸರ್ವಿಸ್ ರಸ್ತೆಯ ಚರಂಡಿಯ ಬದಲಿಗೆ ರೋಡಿನಲ್ಲಿಯೇ ನೀರು ತುಂಬಿ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಎ.10 ಒಳಗೆ ಎಲ್ಲಾ ಹೆದ್ದಾರಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸಹಾಯಕ ಕಮೀಷನರ್ ಆದೇಶಿಸಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಕುಂದಾಪುರ ಕೆ.ಎಸ್.ಆರ್.ಟಿ.ಸಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಇಲ್ಲಿಗೆ ಸಮೀಪದ ಹಾಲ್ಕಲ್‌ನಲ್ಲಿರುವ ಅಂತರ್ವನಮ್ ಹೋಮ್‌ಸ್ಟೇನಲ್ಲಿ ಸದಾನಂದ ಕಾನ್ಫರೆನ್ಸ್ ಹಾಲ್‌ನ್ನು ಸಂಸದ ಬಿ. ವೈ. ರಾಘವೇಂದ್ರ ಉದ್ಘಾಟಿಸಿದರು. ಈ ಸಂದರ್ಭ ಸಂಸದರು ಮಾತನಾಡಿ, ಸದಾ ಕ್ರೀಯಾಶೀಲವಾಗಿ ಊರಿನ ಅಭಿವೃದ್ಧಿಯ ಬಗ್ಗೆ ತೊಡಗಿಸಿಕೊಳ್ಳುವ ವೆಂಕಟೇಶ ಕಿಣಿ ಅವರು, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವ ಬಗ್ಗೆ ಯಾವಾಗಲೂ ಬೇಡಿಕೆ ಇರಿಸುತ್ತಾರೆ. ಇಂತಹ ಜನಪರ ಕಾಳಜಿ ಇರುವ ವ್ಯಕ್ತಿಗಳಿಂದ ಸಲಹೆ ನೀಡುವುದರಿಂದ ಒಂದಿಷ್ಟು ಉತ್ತಮ ಯೋಜನೆಗಳ ಅನುಷ್ಠಾನ ಸಾಧ್ಯವಾಗುತ್ತದೆ ಎಂದರು. ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ, ಬಿಜೆಪಿ ಬೈಂದೂರು ಕ್ಷೇತ್ರಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ಕೃಷ್ಣಪ್ರಸಾದ್ ಅಡ್ಯಂತಾಯ, ಜಿಪಂ ಮಾಜಿ ಸದಸ್ಯ ಸುರೇಶ್ ಬಟ್ವಾಡಿ, ಸದಾಶಿವ ಡಿ. ಪಡುವರಿ, ಆರ್.ಎಸ್. ವೆಂಚರ್ಸ್ನ ರಾಜೀವ ಕುಮಾರ್, ಅಂತರ್ವನಮ್ ಮಾಲಕರಾದ ಕೆ. ವೆಂಕಟೇಶ ಕಿಣಿ ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು : ಕೊಡಚಾದ್ರಿಗೆ ರೋಪ್ವೇ: ರಾಷ್ಟ್ರೀಯ ಪರ್ವತ್ ಮಾಲ್ ಯೋಜನೆಯಡಿಯಲ್ಲಿ ದೇಶದ ಪ್ರಮುಖ 10 ಪರ್ವತ ಪ್ರಧೇಶಗಳಿಗೆ ರೋಪ್ವೇ ನಿರ್ಮಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು. ಇದಕ್ಕಾಗಿ ಅರ್ಜಿ ಸಲ್ಲಿಸಿದ್ದ ರಾಜ್ಯದ 15 ಯೋಜನೆಗಳ ಪೈಕಿ ಅಂಜನಾದ್ರಿ ಬೆಟ್ಟ ಹಾಗೂ ಕೊಡಚಾದ್ರಿಗೆ ರೋಪ್ವೇ ನಿರ್ಮಾಣಕ್ಕೆ ಒಪ್ಪಿಗೆ ದೊರಕಿದ್ದು, ಶೀಘ್ರದಲ್ಲಿ ಆದೇಶ ಪತ್ರ ಸಿಗಲಿದೆ. ಇದರಿಂದ ಪ್ರವಾಸೋದ್ಯಮ ಅಭಿವೃಧ್ಧಿಯಾಗಲಿದೆ. ಕೊಡಚಾದ್ರಿಗೆ ಕ್ರಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವ ಪ್ರಾಸ್ತಾಪವನ್ನು ಕೈಬಿಡಲಾಗಿದ್ದು, ಬೆಟ್ಟಕ್ಕೆ ತೆರಳುವ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಹೇಳಿದರು. ಕೊಲ್ಲೂರು ಸಮೀಪದ ಹಾಲ್ಕಲ್ನಲ್ಲಿ ಬುಧವಾರ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಒಂದೇ ಸರ್ಕಾರದ ಅವಧಿಯಲ್ಲಿ ಸೌಕೂರು ನೀರಾವರಿ ಯೋಜನೆ ದಾಖಲೆಯ ಅವಧಿಯಲ್ಲಿ ಪೂರ್ಣಗೊಳ್ಳುತ್ತಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ 2.69 ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸಲು 596 ಕೋಟಿ ರೂ. ವೆಚ್ಚದಲ್ಲಿ ರೂಪಿಸಿರುವ ಬಹುಗ್ರಾಮ ಯೋಜನೆಯ ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲಿ ನಡೆಯಲಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿವಿಧೆಡೆ ಸುಲಿಗೆ ಹಾಗೂ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬೈಂದೂರು ಸಿಪಿಐ ನೇತೃತ್ವದ ಅಪರಾದ ಪತ್ತೆ ದಳದ ತಂಡ ಬಂಧಿಸಿ, ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಪ್ರಸ್ತುತ ಮಹಾರಾಷ್ಟ್ರದಲ್ಲಿ ವಾಸವಿರುವ, ಮೂಲತಃ ಮೂಡ್ಲಕಟ್ಟೆ ನಿವಾಸಿ ವಿಜಯ್ (48) ಬಂಧಿತ ಆರೋಪಿ. ಆರೋಪಿಯು ಬೈಂದೂರು ಹಾಗೂ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕೃತ್ಯಕ್ಕೆ ಬಳಸಿದ ಬೈಕಿನ ಚಲನವಲನಗಳ ಮೇಲೆ ನಿಗಾಯಿಟ್ಟ ಪೊಲೀಸರು ಸಿಸಿ ಟಿ.ವಿ ಪೂಟೇಜ್ ಹಾಗೂ ಆಧುನಿಕ ತಂತ್ರಜ್ಞಾನದ ಆಧಾರದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದ್ದ, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದ ತಂಡವು ಮುಂಬೈ ಬಳಿಯ ಕೇಂದ್ರಾಡಳಿತ ಪ್ರದೇಶವಾದ ದಮನ್ ಎಂಬಲ್ಲಿ ಬಂಧಿಸಿತ್ತು. ಈತನ ವಿರುದ್ಧ ಕೊಲ್ಲೂರು, ಕೋಟ ಠಾಣೆಯಲ್ಲಿ ಒಂದೊಂದು ಪ್ರಕರಣ, ಮುಂಬೈ ನವಾಗರ್ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ಹಾಗೂ ಮುಲುಂಡ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಯಿಂದ 24.4 ಗ್ರಾಂ ತೂಕದ ಒಂದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಶಿರೂರು ದಾಸನಾಡಿಯ ಶ್ರೀ ವೆಂಕಟರಮಣ ದೇವಸ್ಥಾನದ ತಾಮ್ರಚ್ಚಾದಿತ ನೂತನ ಶಿಖರ ಪ್ರತಿಷ್ಠೆ, ನೂತನ ಶಿಲಾಮಯ ಹೆಬ್ಬಾಗಿಲು, ಶಿಲಾಮಯ ಪೌಳಿ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ಸಂಸದ ಬಿ.ವೈ ರಾಘವೇಂದ್ರ ಅವರು ಬುಧವಾರ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭ ದರ್ಶನವನ್ನು ಪಡೆದು ವಿಶೇಷ ಪೂಜೆಯನ್ನು ಸಲ್ಲಿಸಿದರು. ಸಂಸದ,  ಶಾಸಕರನ್ನು ದೇವಳದ ವತಿಯಿಂದ ಗೌರವಿಸಲಾಯಿತು. ಶಾಸಕರಾದ ಬಿ. ಎಂ ಸುಕುಮಾರ್ ಶೆಟ್ಟಿ, ದೇವಳ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ, ಆಡಳಿತ ಮೊಕ್ತೇಸರ ನಾಗಯ್ಯ ಶೆಟ್ಟಿ ಹೊಸ್ಮನೆ, ಉತ್ಸವ ಸಮಿತಿ ಅಧ್ಯಕ್ಷ ಪುಪ್ಪರಾಜ ಶೆಟ್ಟಿ, ಕಾರ್ಯದರ್ಶಿ ಮಾದವ ಬಿಲ್ಲವ, ಅರ್ಚಕ ರವೀಂದ್ರ ಅಯ್ಯಂಗಾರ್ ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಸಿದ್ಧಾಪುರ: ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಉಡುಪಿ ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ಅತ್ಯಂತ ಅಪರೂಪದ ಶ್ರೀ ಅಯುತ ಚಂಡಿಕಾ ಮಹಾಯಾಗ ಯಶಸ್ವಿಯಾಗಿ ಸಂಪನ್ನಗೊಂಡಿತು.ಮೇ.8ರಂದು ಏಕಕಾಲದಲ್ಲಿ 100 ಯಾಗಕುಂಡಗಳಲ್ಲಿ ಯಾಗ ಆರಂಭಗೊಂಡಿತು. ಶ್ರೀ ಚಂಡಿಕಾ ಪಾರಾಯಣ ಮತ್ತು ಜಪ, ಸೋಮವಾರ ಶ್ರೀ ಚಂಡಿಕಾ ಪಾರಾಯಣ ಮತ್ತು ಜಪ, ಮೇ.10 ಮಂಗಳವಾರ ಶ್ರೀ ಅಯುತ ಮಹಾಯಾಗದ ಪೂರ್ಣಾಹುತಿಯೊಂದಿಗೆ ಸಂಪನ್ನ ಕಂಡಿತು. ಜ್ಯೋತಿಶಾಸ್ತ್ರ ವಿದ್ವಾನ್ ಶ್ರೀ ಟಿ.ವಾಸುದೇವ ಜೋಯಿಸರ ಧಾರ್ಮಿಕ ಮಾರ್ಗದರ್ಶನ ನೀಡಿದರು. ದೇವಳದ ಅನುವಂಶಿಕ ಆಡಳಿತ ಧರ್ಮದರ್ಶಿ ಎಸ್. ಸಚ್ಚಿದಾನಂದ ಚಾತ್ರ, ಅನುವಂಶಿಕ ಧರ್ಮದರ್ಶಿ ಎ.ಚಂದ್ರಶೇಖರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಮೂರು ದಿನಗಳ ಕಾಲ ಕಮಲಶಿಲೆಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು. ಪೂರ್ಣಾಹುತಿಯ ಮಂಗಳವಾರ ಬೆಳಿಗ್ಗೆಯಿಂದ ಭಕ್ತಸಂದಣಿ ನೆರೆದಿತ್ತು. ಉಡುಪಿ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಬೇರೆ ಬೇರೆ ಭಾಗಗಳಿಂದ ಭಕ್ತರ ದಂಡು ಹರಿದು ಬಂತು. ಏಕಕಾಲದಲ್ಲಿ ನೂರು ಯಾಗ ಕುಂಡಗಳಲ್ಲಿ ಮೇಲೇದ್ದ ಹೊಗೆ ಗಗನಗಾಮಿಯಾಯಿತು. ಬೃಹತ್ ಯಾಗಶಾಲೆಯ ಯಜ್ಞಕುಂಡಗಳಿಂದ ಸುವಸ್ತುಗಳಿಂದ…

Read More