ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ಕಾಟಕ ಅಮಾವಾಸ್ಯೆ ಪ್ರಯುಕ್ತ ನದಿ-ಕಡಲ ಸಂಗಮದ ಅಪೂರ್ವ ತಾಣ ಮರವಂತೆಯ ಪುರಾಣ ಪ್ರಸಿದ್ಧ ಮಹಾರಾಜ ಶ್ರೀ ವರಾಹ ಸ್ವಾಮಿ ದೇವಸ್ಥಾನದಲ್ಲಿ ಸಮುದ್ರ ಸ್ನಾನ ಹಾಗೂ ವಾರ್ಷಿಕ ಜಾತ್ರೆ ಮಹೋತ್ಸವವು ಸಂಭ್ರಮ-ಸಡಗರದಿಂದ ನಡೆಯಿತು. ನಸುಕಿನಿಂದಲೇ ಆಸುಪಾಸಿನ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮರವಂತೆಗೆ ಆಗಮಿಸಿ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಾಚೆಗಿನ ಸಮುದ್ರದಲ್ಲಿ ಸ್ನಾನಗೆ„ದು ಬಳಿಕ ಶ್ರೀ ವರಾಹ ಸ್ವಾಮಿ ದೇವಸ್ಥಾನದ ಬಳಿಯಿರುವ ಸೌಪರ್ಣಿಕಾ ನದಿಯಲ್ಲಿ ಸ್ನಾನಗೈದು ಶ್ರೀದೇವರ ದರ್ಶನ ಪಡೆದು ಹರಕೆ ಸಲ್ಲಿಸಿದರು. ಕರ್ಕಾಟಕ ಅಮಾವಾಸ್ಯೆ ಜಾತ್ರೆಯ ಸಂಪ್ರದಾಯದಂತೆ ನವವಧುವರರು, ಕೃಷಿಕರು ಹಾಗೂ ಸ್ಥಳೀಯ ಭಾಗದ ಮೀನುಗಾರರು (ಮರವಂತೆ) ಭಾರೀ ಸಂಖ್ಯೆಯಲ್ಲಿ ಆಗಮಿಸಿ ಶ್ರೀವರಾಹ ಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಕ್ಷೇತ್ರದ ಭಕ್ತರು ಈ ಸಂದರ್ಭದಲ್ಲಿ ವರ್ಷದ ಹರಕೆಯನ್ನು ಒಪ್ಪಿಸಿದರು. ಭಕ್ತರು ಶ್ರೀ ದೇವರ ದರ್ಶನ, ಪೂಜೆ-ಪುನಸ್ಕಾರದಲ್ಲಿ ಸುಸೂತ್ರವಾಗಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ದೇವಸ್ಥಾನದ ಆಡಳಿತ ಮಂಡಳಿಯು ವ್ಯವಸ್ಥೆ ಮಾಡಿತ್ತು. ಶ್ರೀದೇವರ ದರ್ಶನ ಪಡೆಯುವುದಕ್ಕಾಗಿ ಭಕ್ತಾದಿಗಳು ಸುಮಾರು ಅರ್ಥ ಕಿ.ಮೀ.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಂಪ್ಯೂಟಿಂಗ್ ತಂತ್ರಜ್ಞಾನದಲ್ಲಿ ಯುವಕರು ತಾವು ಬೆಳೆದ ಪರಿಸರವನ್ನು ಮರೆಯಬಾರದು. ದೇಶ ಎದುರಿಸುತ್ತಿರುವ ಪ್ರತಿಯೊಂದು ಪರಿಸರ ಸಮಸ್ಯೆಗೂ ನಾವೇ ಪರಿಹಾರವಾಗಬೇಕು. ಎನ್ಎಸ್ಎಸ್ ಸ್ವಯಂಸೇವಕರು ಆರೋಗ್ಯವಂತ ಸಮುದಾಯಕ್ಕಾಗಿ ನಮ್ಮ ಪರಿಸರಕ್ಕೆ ಸೇವೆ ಸಲ್ಲಿಸಲು ಪ್ರತಿಜ್ಞೆ ಮಾಡಬೇಕು ಎಂದು ಎಂಐಟಿ ಮಣಿಪಾಲ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಮದ್ದೋಡಿ ಹೇಳಿದರು. ಅವರು ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಸ್ವಯಂಸೇವಕರನ್ನು ಉದ್ದೇಶಿಸಿ ಪರಿಸರ ಜಾಗೃತಿ ಮತ್ತು ಜಲ ಸಂರಕ್ಷಣೆ ಕಾರ್ಯಕ್ರಮದ ಕುರಿತು ಮಾತನಾಡಿದರು. ಎನ್ ಎಸ್ ಎಸ್ ಘಟಕ 1 ಮತ್ತು 2ರ ಕಾರ್ಯಕ್ರಮ ಅಧಿಕಾರಿ ಪ್ರೊ. ರಾಘವೇಂದ್ರ ಗುಡಿಗಾರ್ ಅವರು ಪರಿಸರ ನಿರ್ಮಾಣ ಚಟುವಟಿಕೆಗಳ ಬಗ್ಗೆ ಯುವಜನರಿಗೆ ಶಿಕ್ಷಣ ನೀಡಲು ಪರಿಸರ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಗಣಿತ ತಜ್ಞ ಪ್ರೊ. ಉದಯ್ ಎಂ.ಪಿ ಮತ್ತು ಪ್ರೊ. ಹರೀಶ್ ಕೋಟ್ಯಾನ್ ಉಪಸ್ಥಿತರಿದ್ದರು. ಸುಮಾರು 120 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿ ಮುಖಂಡ ರೋಶನ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಾಷ್ಟ್ರೀಯ ಹೆದ್ದಾರಿ 66ರ ಅವ್ಯವಸ್ಥೆ ಸರಿಪಡಿಸುವ ಬಗ್ಗೆ ಹಾಗೂ ಶಿರೂರು ಟೋಲ್ ಸಿಬ್ಬಂದ್ಧಿ ನಿರ್ಲಕ್ಷದಿಂದ ಮೃತಪಟ್ಟ ಕುಟುಂಬದವರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಬೈಂದೂರು ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಬೈಂದೂರು ಯುವ ಕಾಂಗ್ರೆಸ್ ಅಧ್ಯಕ್ಷರಾದ ಶೇಖರ್ ಪೂಜಾರಿ ಉಪ್ಪುಂದ, ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಉದಯ ಪೂಜಾರಿ, ಸಂತೋಷ ಹೊಸ್ಕೋಟೆ, ಸುರೇಶ ದೇವಾಡಿಗ, ಕೀರ್ತನ್ ಉಪ್ಪುಂದ, ಪ್ರವೀಣ ದೇವಾಡಿಗ, ಮಹೇಶ್, ಮನೋಜ್, ಸುಬ್ರಹ್ಮಣ್ಯ, ಶಿವರಾಜ್, ಅಭಿಜೀತ್ ಬಿಜೂರು, ಶರತ್ ಪೂಜಾರಿ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಾನ್ಕಿ ಗಣೇಶೋತ್ಸವ ಸಮಿತಿಯ 7ನೇ ವರ್ಷದ ಅಧ್ಯಕ್ಷರಾಗಿ ಸುರೇಶ್ ಪೂಜಾರಿ ಬೆಳಾರಮಕ್ಕಿ, ಕಾರ್ಯದರ್ಶಿಯಾಗಿ ಜೀವನ್ ಶೆಟ್ಟಿ ಮಕ್ಕಿಮನೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಧು ಪಿ.ಟಿ, ಹಾಗೂ ಖಜಾಂಚಿಯಾಗಿ ರವೀಂದ್ರ ಪೂಜಾರಿ ಕಾನ್ಕಿ ಬೂರ್ದಡಿ ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ರತ್ತುಬಾಯಿ ಜನತಾ ಪ್ರೌಢಶಾಲೆಯಲ್ಲಿ ಇಕೋ ಕ್ಲಬ್ ಉದ್ಘಾಟನೆ ಹಾಗೂ ವನಮಹೋತ್ಸವ ಕಾರ್ಯಕ್ರಮ ಬುಧವಾರ ಜರುಗಿತು. ಮಂಗಳೂರು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಚಿಕ್ಕವಯಸ್ಸಿನಲ್ಲಿ ಕಾಳಜಿ ಮೂಡಿಸಿದರೆ ಪ್ರಕೃತಿ ಮೇಲಾಗುವ ದುಷ್ಪರಿಣಾಮವನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡುವ ಜವಾಬ್ದಾರಿ ನಮ್ಮ ಮೇಲೆ ಇದೆ. ಆದ್ದರಿಂದ ಗಿಡಗಳನ್ನು ಬೆಳಸಿ ಉಳಿಸೋಣ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಹೆಮ್ಮಾಡಿ ಶ್ರೀ ವಿ.ವಿ.ವಿ ಮಂಡಳಿ ಮಂಡಳಿ ಉಪಾಧ್ಯಕ್ಷ, ಜಿ.ಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಭಾನುಮತಿ ಬಿ.ಕೆ., ಬೈಂದೂರು ವಲಯದ ರೇಂಜರ್ ಆಗಿರುವ ಸಿದ್ದೇಶ್, ಉಡುಪಿ ವಲಯದ ರೇಂಜರ್ ಚಿದಾನಂದ, ಇಕೋ ಕ್ಲಬ್ ಅಧ್ಯಕ್ಷ ನಿಕೇಶ್, ಶಾಲಾ ಮುಖ್ಯೋಪಾಧ್ಯಾಯಾರಾದ ಆನಂದ ಮದ್ದೂಡಿ ಉಪಸ್ಥಿತರಿದ್ದರು. ಶಿಕ್ಷಕಿ ಚೈತ್ರ ವಂದಿಸಿದರು. ಅಧ್ಯಾಪಕರಾದ ಚಂದ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಹುಪಯೋಗಿ ಬಂದರು ನಿರ್ಮಾಣ ಮತ್ತು ಗಂಗೊಳ್ಳಿ-ಕುಂದಾಪುರ ಸೇತುವೆ ನಿರ್ಮಾಣಕ್ಕೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ. ವೈ. ರಾಘವೇಂದ್ರ ಅವರು ಕೇಂದ್ರ ಬಂದರು ಹಡಗು ಮತ್ತು ಜನ ಸಾರಿಗೆ ಸಚಿವರಾದ ಶ್ರೀ ಸರ್ಬಾನಂದ ಸೋನಾವಾಲ ಅವರನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಲ್ಟಿ ಪರ್ಪಸ್ ಹಾರ್ಬರ್ (ಬಹುಉಪಯೋಗಿ ಬಂದರು) ಸ್ಥಾಪನೆ ಮಾಡಲು ಕ್ರಮವಹಿಸಲು ಸಂಸದರು ಒತ್ತಾಯಿಸಿದ್ದಾರೆ. ಗಂಗೊಳ್ಳಿಯಿಂದ ಕುಂದಾಪುರಕ್ಕೆ ಸುಮಾರು 18 ಕಿ.ಮೀ. ಸುತ್ತುಬಳಸಿ ತೆರಳಬೇಕಾಗಿದೆ. ಕುಂದಾಪರ – ಗಂಗೊಳ್ಳಿ ಸೇತುವೆ ನಿರ್ಮಾಣದ ಮನವಿಯನ್ನು ತುರ್ತಾಗಿ ಗಣನೆಗೆ ತೆಗೆದುಕೊಂಡು ಪ್ರಥಮ ಆದ್ಯತೆಯ ಮೇರೆಗೆ ಅನುಮೊದನೆ ದೊರಕಿಸಿಕೊಡಬೇಕೆಂದು ಸಂಸದರು ಒತ್ತಾಯಿಸಿದ್ದಾರೆ. ಕೇಂದ್ರ ಸಚಿವರು ಎರಡೂ ಪ್ರಸ್ತಾವನೆಯ ಬಗ್ಗೆ ಚರ್ಚಿಸಿ, ಪಿಪಿಪಿ ಮಾದರಿಯಲ್ಲಿ ಬಹುಪಯೋಗಿ ಬಂದರು ನಿರ್ಮಾಣಕ್ಕೆ ಟೆಂಡರ್ ಕರೆಯುವ ತಿಳಿಸಿದ್ದಾರೆ. ಸಾಗರಮಾಲ ಯೋಜನೆಯಡಿ ಗಂಗೊಳ್ಳಿ – ಕುಂದಾಪುರ ಸೇತುವೆ ನಿರ್ಮಾಣದ ಮಾಡುವ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪ್ರ ಕನ್ನಡ ಭಾಷೆಯ ಬಗೆಗಿನ ಅಭಿಮಾನದಿಂದ ಕುಂದಾಪುರ ಮೂಲದ ಜನರು ವಿಶ್ವದೆಲ್ಲೆಡೆ ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಕಳೆದ ಮೂರು ವರ್ಷದಿಂದ ಆಚರಿಸುತ್ತಿದ್ದಾರೆ. ನಾಳೆ ಆಸಾಡಿ ಅಮಾವಾಸ್ಯೆ (ಜುಲೈ 28) ಪ್ರಯುಕ್ತ ಬೆಂಗಳೂರಿನ ವಿಜಯನಗರದ ಬಂಟರ ಸಂಘದ ಹಾಲಿನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ. ಸಂಜೆ ನಾಲ್ಕು ಗಂಟೆಯಿಂದ ಕುಂದಾಪ್ರ ಭಾಷಿ, ಬದ್ಕಿನ ಕುರಿತಾದ ಹಲವು ಕಾರ್ಯಕ್ರಮಗಳು ಆಯೋಜನೆಗೊಂಡಿದೆ. ವಿಶೇಷವಾಗಿ ಕುಂದಾಪುರ ಆಚಾರ-ಸಂಸ್ಕ್ರತಿ-ಆಚರಣೆ ಕುರಿತಾದ ಕುಂದಾಪುರ ಕಟ್ಕಟ್ಲೆ, ಕುಂದಾಪ್ರ ಗೀತಗಾಯನ, ಮನು ಹಂದಾಡಿ ಮಾತು, ಚೇತನ್ ನೈಲಾಡಿ ತಂಡದ ಹೆಂಗಸರ ಪಂಚಾಯ್ತಿ, ಕುಶಲವ ಯಕ್ಷಗಾನ, ಕಿರುಚಿತ್ರ ಬಿಡುಗಡೆ ಸೇರಿ ಹಲವು ಸಾಂಸ್ಕ್ರತಿಕ ಕಾರ್ಯಕ್ರಮಗಳ ರಸದೌತಣ ಇರಲಿದೆ. ಕಾರ್ಯಕ್ರಮದಲ್ಲಿ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು, ಮಂದಾರ್ತಿ ಮೂಲದ ನಿರ್ದೇಶಕ ಯೋಗರಾಜ್ ಭಟ್, ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಜಯಪ್ರಕಾಶ್ ಹೆಗ್ಡೆ, ನಟ ಪ್ರಮೋದ್ ಶೆಟ್ಟಿ ಸೇರಿ ಹಲವರು ಉಪಸ್ಥಿತರಿರಲಿದ್ದಾರೆ. ಕುಂದಾಪ್ರ ಕನ್ನಡ ಭಾಷಾಭಿಮಾನಿಗಳ ಹೆಚ್ಚಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿಶ್ವ ಕುಂದಾಪುರ ಕನ್ನಡ ದಿನದ ಅಂಗವಾಗಿ ಮನಸು ಮೀಡಿಯಾ ಹಾಗೂ ರಾಮ ಶೆಟ್ಟಿ ಅತ್ತಿಕಾರ್ ಅವರ ಸಂಯೋಜನೆಯಲ್ಲಿ ಹಕ್ಲಾಡಿಯ ಕೆ.ಎಸ್.ಎಸ್ ಪ್ರೌಡಶಾಲೆಯಲ್ಲಿ ವಿದ್ಯಾರ್ಥಿಗಳಿಗೆ “ಕುಂದನುಡಿ” ಸ್ಪರ್ಧೆ ಆಯೋಜಿಸಲಾಗಿತ್ತು. ಎಸ್.ಡಿಎಂಸಿ ಅದ್ಯಕ್ಷರದ ರಾಜು ಮಾಸ್ಟರ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಕರಾದ ಕಿಶೋರ್ ಕುಮಾರ್ ಶೆಟ್ಟಿ, ಭಾರತಿ ಹಾಗೂ ದೀಪ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಚಿತ್ರೀಕರಣ ಮನಸು ಮೀಡಿಯಾ ತಂಡದ ಸುನಿಲ್ ಗೊಳಿಹೊಳೆ ನಿರ್ವಹಿಸಿದರು ಸ್ಪರ್ಧೆಯನ್ನು ರಾಮ್ ಶೆಟ್ಟಿ ಅತ್ತೀಕರ್ ನಡೆಸಿಕೊಟ್ಟರು ಮನಸು ಮೀಡಿಯಾ ತಂಡದ ಸಚಿನ್ ತಗ್ಗರ್ಸೆ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ, ಜು.26: ಕುಂದಾಪ್ರ ಕನ್ನಡ ಭಾಷಿಕರ ಸಂಭ್ರಮ 4ನೇ ವರ್ಷದ ವಿಶ್ವ ಕುಂದಾಪ್ರ ಕನ್ನಡ ದಿನ ವಿಶ್ವದ ವಿವಿಧೆಡೆ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಶಿರೂರಿನಿಂದ ಹೆಬ್ರಿ ಬ್ರಹ್ಮಾವರದ ತನಕ ವಿಸ್ತರಿಸಿರುವ ಕುಂದಾಪ್ರ ಕನ್ನಡ ಭಾಷಾ ಸೊಬಗಿನ ವಿಶಿಷ್ಟತೆಯನ್ನು ಹಂಚಿಕೊಳ್ಳುತ್ತಾ ಸಂಭ್ರಮಿಸುವ ಸಲುವಾಗಿ 2019ರಿಂದ ಆಸಾಡಿ ಅಮವಾಸ್ಯೆ ದಿನ ವಿಶ್ವ ಕುಂದಾಪ್ರ ಕನ್ನಡ ದಿನ ಆಚರಣೆಗೆ ಚಾಲನೆ ನೀಡಲಾಗಿದ್ದು, ಈ ಭಾರಿ ಜೂನ್ 28ರಂದು ಆಚರಿಸಲಾಗುತ್ತಿದೆ. ಕುಂದಾಪುರ ತಾಲೂಕಿನ ವಿವಿಧೆಡೆ ಸಂಭ್ರಮ:ಜು.28ರಂದು ಕುಂದಾಪುರದಲ್ಲಿ ವಿಠಲವಾಡಿ ಫ್ರೆಂಡ್ಸ್ ವತಿಯಿಂದ ಹಾಡುಗಳ ಸ್ವರ್ಧೆ ಆಯೋಜಿಸಲಾಗಿದೆ. ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಯಕ್ಷದೀಪ ಕಲಾ ಟ್ರಸ್ಟ್ ವತಿಯಿಂದ ಕುಂದಾಪ್ರ ಕನ್ನಡತಿ ನಾಟ್ಯವಲ್ಲಿ ಎಂಬ ಯಕ್ಷಗಾನ ಪ್ರದರ್ಶನ ಜರುಗಲಿದೆ. ಡಾ. ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಮಿತ್ರ ಸಂಗಮ ಬೀಜಾಡಿ ವತಿಯಿಂದ ಮಿತ್ರ ಸೌಧದಲ್ಲಿ ಗಾಯಕಿ ಸುಷ್ಮಾ ಆಚಾರ್ಯ ಅವರಿಂದ ‘ಗೀತಾ ಗಾಯನ’, ವಿಶೇಷ ಲಘು ಉಪಹಾರ ಇರಲಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಬದಲಾದ ಜಗದಲ್ಲಿ ಜೀವಂತಿಕೆಯ ಬರಹ ಅಗತ್ಯವಿದ್ದು, ಓದು ಮತ್ತು ಬರಹ ವ್ಯಕ್ತಿಯನ್ನು ಉತ್ತಮದೆಡೆಗೆ ಕೊಂಡೊಯ್ಯುತ್ತದೆ ಎಂದು ನಿರಂತರ ಪ್ರಗತಿ ಮ್ಯಾಗಝಿನ್ ಸಂಪಾದಕ ಡಾ. ಚಂದ್ರಹಾಸ ಚಾರ್ಮಾಡಿ ಹೇಳಿದರು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಅಭಿವ್ಯಕ್ತಿ ಫೋರಂ ವತಿಯಿಂದ ಆಯೋಜಿಸಿದ್ದ ’ಬದಲಾದ ದುನಿಯಾದಲ್ಲಿ ಬರಹ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಬರವಣಿಗೆ ಬರೀ ಅಕ್ಷರ ಮಾತ್ರವಲ್ಲದೆ ಬರಹಗಾರನ ಒಳ-ಹೊರ ಪ್ರಚೋಧಿಸುವ ಅಭಿವ್ಯಕ್ತಿ. ವಸ್ತು ಸ್ಥಿತಿ ನಕಾರಾತ್ಮಕವಾಗಿದ್ದರೂ ಬರಹಗಾರನ ಯೋಚನೆ ಸಕಾರಾತ್ಮಕವಾಗಿರಬೇಕು, ನಮ್ಮ ಬರಹ ಸಮಸ್ಯೆಗೆ ಒಳಗಾದ ವ್ಯಕ್ತಿಯ ಬದುಕನ್ನು ಕಟ್ಟಿಕೊಡುವ ನಿಟ್ಟಿನಲ್ಲಿರಬೇಕು. ಬದಲಾದ ಜಗತ್ತಿನಲ್ಲಿ ಸಂದರ್ಭಕ್ಕೆ ಅನುಸಾರವಾದ ವಿಷಯಗಳನ್ನು ಬರಹಗಾರರು ಆಯ್ದುಕೊಳ್ಳಬೇಕು ಎಂದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಬರಹ ಮತ್ತು ಬದುಕಿನ ವೈರುಧ್ಯಗಳು ಸಮ್ಮಿಳಿತಗೊಂಡಾಗ ವ್ಯಕ್ತಿ ಪರಿಪೂರ್ಣನಾಗುತ್ತಾನೆ. ಒಂದು ಕಾಲಘಟ್ಟದ ಬರಹಗಳು ಇನ್ನೊಂದು ಕಾಲಕ್ಕೆ ಅನ್ವಯಿತವಾಗದೇ…
