Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಮಾ.8: ಪುರಾತನ ಪ್ರಸಿದ್ಧ ಬಿಜೂರು ಮೂರ್ಗೋಳಿಹಕ್ಲು ಶ್ರೀ ನಂದಿಕೇಶ್ವರ ದೈವಸ್ಥಾನದಲ್ಲಿ ಎ.14 ರಿಂದ 16ರ ವರೆಗೆ ನಡೆಯುವ ಶ್ರೀ ನಂದಿಕೇಶ್ವರ ಮತ್ತು ಪರಿವಾರ ದೈವಗಳ ವಾರ್ಷಿಕೋತ್ಸವ ಮತ್ತು ಭಜನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ದೈವಸ್ಥಾನದ ವಠಾರದಲ್ಲಿ ನಡೆಯಿತು. ಕೃಷ್ಣ ದೇವಾಡಿಗ ಪೂಜೆ ಕಾರ್ಯ ನೆರವೇರಿಸಿದರು. ಈ ಸಂದರ್ಭ ದೈವಸ್ಥಾನದ ಅಧ್ಯಕ್ಷ ಜನಾರ್ದನ ದೇವಾಡಿಗ ಮತ್ತು ಸಮಿತಿ ಸದಸ್ಯರು ಹಾಗೂ ಸ್ಥಳೀಯ ಭಕ್ತಾಧಿಗಳು ಉಪಸ್ಥಿತರಿದ್ದರು. ಎ.14ರಂದು ಶ್ರೀ ನಂದಿಕೇಶ್ವರ ಪರಿವಾರ ದೈವಗಳ ಹಾಗೂ ನಾಗದೇವರ ವಾರ್ಷಿಕ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಎ.15ರಂದು ಬೆಳಗ್ಗೆ 9.05ಕ್ಕೆ ಏಕಾಹ ಅಖಂಡ ಭಜನಾ ಕಾರ್ಯಕ್ರಮ ಪ್ರಾರಂಭಗೊಂಡು ಏ.16ರಂದು ಪ್ರದೀಪ ವಿಸರ್ಜನೆಯೊಂದಿಗೆ ಭಜನಾ ಮಂಗಲೋತ್ಸವ ನಡೆಯಲಿದೆ. ಎ.15ರಿಂದ ಎ.16ರ ವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 5ಗಂಟೆಗೆ ಗೆಂಡ ಸೇವೆ ಹಾಗೂ ರಾತ್ರಿ ಗಂಟೆ 9.30ಕ್ಕೆ ಶ್ರೀ ವೀರಭದ್ರಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ ಮಾ.8: ವೈದ್ಯಕೀಯ ಪರಿಕರಗಳ ಪ್ರಸಿದ್ಧ ಮಳಿಗೆ ಉಡುಪಿಯ ಗಿರಿಜಾ ಹೆಲ್ತ್ ಕೇರ್ ಆಂಡ್ ಸರ್ಜಿಕಲ್ಸ್ ನಲ್ಲಿ ಮತ್ತೆ ಶುಗರ್ ಟೆಸ್ಟಿಂಗ್ ಯಂತ್ರವಾದ ಗ್ಲುಕೊಮೀಟರ್ ಉಚಿತ ಕೊಡುಗೆಯ ಬಂಪರ್ ಕೊಡುಗೆ ನಡೆಯುತ್ತಿದೆ. ಈ ಹಿಂದೆ ಸಂಸ್ಥೆಯ ವತಿಯಿಂದ ಹಿರಿಯ ನಾಗರಿಕರಿಗೆ ಗ್ಲುಕೊಮೀಟರ್ ಉಚಿತ ಕೊಡುಗೆ ನೀಡಲಾಗಿದ್ದು, ಇದೀಗ ಮತ್ತೆ ನಾಗರಿಕರ ಒತ್ತಾಯದ ಮೇರೆಗೆ 40 ವರ್ಷ ಮೇಲ್ಪಟ್ಟ ಮಧುಮೇಹ ರೋಗಿಗಳಿಗೆ ಮತ್ತು ಎಲ್ಲಾ ಹಿರಿಯ ನಾಗರಿಕರಿಗೆ ಶುಗರ್ ಟೆಸ್ಟಿಂಗ್ ಯಂತ್ರವಾದ ಗ್ಲುಕೊಮೀಟರ್ ನ್ನು ಉಚಿತವಾಗಿ ನೀಡಲಾಗುತ್ತಿದೆ. ನಾಗರಿಕರು ರೂ.200 ಬೆಲೆ ಬಾಳುವ 10 ಟೆಸ್ಟಿಂಗ್ ಸ್ವೀಪ್ ಕೊಂಡಲ್ಲಿ ಒಂದು ಗ್ಲುಕೊಮೀಟರ್ ಸೆಟ್ ಉಚಿತವಾಗಿ ದೊರೆಯಲಿದೆ. ಈ ಕೊಡುಗೆ ಮಾ.20 ರವರೆಗೆ ಮಾತ್ರ ಲಭ್ಯವಿದ್ದು, ಅರ್ಹ ನಾಗರಿಕರು ತಮ್ಮ ಆಧಾರ್ ಕಾರ್ಡ್ ತೋರಿಸಿ ಈ ಕೊಡುಗೆಯ ಸದುಪಯೋಗ ಪಡೆಯಬಹುದಾಗಿದೆ. ಆದರೆ ಈ ಮೊದಲು ಸಂಸ್ಥೆಯಿಂದ ಗ್ಲುಕೊಮೀಟರ್ ಉಚಿತವಾಗಿ ಪಡೆದುಕೊಂಡವರಿಗೆ ಅವಕಾಶ ಇರುವುದಿಲ್ಲ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

Read More

ಶಿಕ್ಷಣ, ಕ್ರೀಡೆ, ರಾಜಕೀಯ, ಕಲೆ, ಸಾಂಸ್ಕೃತಿಕ ಹೀಗೆ ಬಹುತೇಕ ಕ್ಷೇತ್ರಗಳಲ್ಲಿ ಪುರುಷರಿಗೆ ಸರಿಸಮನಾಗಿ ನಿಂತು ಸ್ವತಂತ್ರರಾಗಿ, ಸ್ವಾವಲಂಬಿಗಳಾಗಿ ಬದುಕುತ್ತಿರುವ ಮಹಿಳೆಯರ ನೆನಪಾಗಿ ಮನಹರುಷಗೊಂಡಿತು. ಅಂಥವರು ಬೆರಳೆಣಿಕೆಯಷ್ಟು ಮಾತ್ರ. ಆದರೆ ನಿತ್ಯ ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯ, ಭ್ರೂಣ ಹತ್ಯೆ, ವೇಶ್ಯಾವಾಟಿಕೆ, ಆಸಿಡ್ ದಾಳಿ, ವರದಕ್ಷಿಣೆ ಹಿಂಸೆ, ಬಲಿ ಇವೂ ಕಣ್ಮುಂದೆ ಹಾಯ್ದು ‘ಮಹಿಳಾ ದಿನಾಚರಣೆ’ಗೆ ಅರ್ಥವಿದೆಯೇ ಎಂಬ ಕಟುಸತ್ಯ ಮನವನು ಇರಿಯಿತು. ಈ ದಿನಾಚರಣೆ ಬರೀ ಕ್ಯಾಲೆಂಡರ್, ಸಭೆ-ಸಮಾರಂಭಗಳಲ್ಲಿ ನಡೆಸುವ ಒಂದು ದಿನದ ಆಚರಣೆ ಮಾತ್ರ. ಈ ದಿನದ ಬಗ್ಗೆ ಅದೆಷ್ಟು ಮಹಿಳೆಯರಿಗೆ ಗೊತ್ತು ? ಮಹಿಳಾ ದಿನಾಚರಣೆ ಹಬ್ಬವೂ ಅಲ್ಲ, ಆನಂದದಿಂದ ಆಚರಣೆಗೊಂಡ ದಿನವೂ ಅಲ್ಲ. ನ್ಯೂಯಾರ್ಕ್‍ನಲ್ಲಿ ಕ್ಲಾರಾ ಜೆಟ್‍ಕಿನ್ ಎಂಬ ಮಹಿಳಾ ಕಾರ್ಮಿಕೆ ಕೆಲಸಕ್ಕಾಗಿ, ಸಮಾನ ವೇತನಕ್ಕಾಗಿ, ಹೆರಿಗೆ ಸೌಲಭ್ಯಕ್ಕಾಗಿ ತಿಂಗಳುಗಟ್ಟಲೆ ಹೋರಾಟ ನಡೆಸಿ ಗೆಲುವು ಸಾಧಿಸಿದ ದಿನ. ಹುಟ್ಟಿನಿಂದ ಸಾಯುವವರೆಗೂ ದಿನ ನಿತ್ಯ ಒಂದಿಲ್ಲೊಂದು ಸಂಘರ್ಷದಲ್ಲಿ ಬಿದ್ದು ಸಾಧಿಸಲು ಪ್ರಯತ್ನ ಪಡುತ್ತಿರುವ, ಸಂಘರ್ಷದಿಂದ ಸಾಧಿಸಿದ ದಿನದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಕಲ ಸದ್ಗುಣಗಳ ಗಣಿಯೇ ಭಗವಂತ. ದುರ್ಗುಣಗಳನ್ನು ದೂರ ಮಾಡಿ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ದಾನ, ಧರ್ಮ, ಸತ್ಕರ್ಮಗಳಿಂದ ಸಾತ್ವಿಕ ಸಂಪತ್ತು ವೃದ್ಧಿಯಾಗಿ ಸತ್‌ಕೀರ್ತಿ ದೊರೆಯುತ್ತದೆ. ನಮ್ಮ ಹೃದಯದಲ್ಲಿ ಭಗವಂತ ನೆಲೆಸಿದರೆ ಎಲ್ಲಾ ಭಾಗ್ಯಗಳು ಪ್ರತಿನಿತ್ಯ ಲಭಿಸಿ ಜೀವನ ಪಾವನವಾಗುತ್ತದೆ. ಯಾರಿಗೂ ಹಿಂಸೆ, ದು:ಖ ನೀಡದೆ ಬದುಕಿದರೆ ಅದೇ ದೇವರ ಪೂಜೆ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಗುಜ್ಜಾಡಿ ಗ್ರಾಮದ ಕೊಡಪಾಡಿಯ ಶ್ರೀ ಗುಹೇಶ್ವರ ದೇವಸ್ಥಾನದಲ್ಲಿ ಭಾನುವಾರ ಶ್ರೀ ಗುಹೇಶ್ವರ, ಶ್ರೀ ಮಹಾಗಣಪತಿ, ಶ್ರೀ ನಾಗ ದೇವರು, ಶ್ರೀ ಭದ್ರಕಾಳಿ ಅಮ್ಮನವರ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು. ದೇವರು ಗುಡಿ ಗೋಪುರಗಳಲ್ಲಿ ನೆಲೆಸಿಲ್ಲ ಬದಲಾಗಿ ಎಲ್ಲರ ಹೃದಯದೊಳಗೆ ನೆಲೆಸಿದ್ದಾನೆ. ಬದುಕನ್ನು ಭಗವಂತನ ಆರಾಧನೆಯನ್ನಾಗಿ ಮಾಡಿಕೊಳ್ಳಬೇಕು. ಪವಿತ್ರವಾದ ಶ್ರೀ ಗುಹೇಶ್ವರ ದೇವರ ಸನ್ನಿಧಿಯಲ್ಲಿ ನಿತ್ಯ ನಿರಂತರ ಧಾರ್ಮಿಕ ಉಪಾಸನೆಗಳು ನಡೆಯುತ್ತಿದ್ದು, ಶ್ರೀದೇವರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಯಶಸ್ವಿಯಾಗಿ ಅನುಷ್ಠಾನಗಳು ಸಾವಿರಾರು ಕುಟುಂಬಗಳಿಗೆ ಬೆಳಕಾಗಿದೆ. ಸದಾ ಮನೆ ಕೆಲಸಗಳಲ್ಲಿ ತಲ್ಲೀನರಾಗಿರುತ್ತಿದ್ದ ಸ್ವಸಹಾಯ ಸಂಘದ ಮಹಿಳಾ ಸದಸ್ಯರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಅವರನ್ನು ಆರ್ಥಿಕವಾಗಿ ಸಬಲೀಕರಣ ಮಾಡಿರುವುದು ಹಾಗೂ ಅವರ ಮಾನಸಿಕ ಹಾಗೂ ದೈಹಿಕ ಬೆಳವಣಿಗಾಗಿ ಕ್ರೀಡಾಕೂಟವನ್ನು ಆಯೋಜಿಸಿರುವುದು ಸ್ತುತ್ಯಾರ್ಹವಾದುದು ಎಂದು ಶ್ರೀ ಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಗೌರವಾಧ್ಯಕ್ಷ ಉಮೇಶ ಮೇಸ್ತ ಹೇಳಿದರು. ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಶ್ರೀ ಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತ್ರಾಸಿ ವಲಯದ ಸ್ವಸಹಾಯ ಸಂಘಗಳ ಸದಸ್ಯರ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಎಚ್.ರಮೇಶ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೈಂದೂರು ತಾಲೂಕು ಯೋಜನಾಧಿಕಾರಿ ಶಶಿರೇಖಾ ಪಿ.,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಬೈಂದೂರು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಜನರಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಸರಕಾರದಿಂದ ಸುಮಾರು 2 ಸಾವಿರ ಕೋಟಿ ರೂ. ಅನುದಾನ ಬಂದಿದ್ದು, ರಸ್ತೆ, ಕುಡಿಯುವ ನೀರು, ಶಾಲೆ ಕಟ್ಟಡ ನಿರ್ಮಾಣ ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವನ್ನು ಬಳಸಿಕೊಳ್ಳಲಾಗಿದೆ. ಮೀನುಗಾರಿಕಾ ಬಂದರು ಪ್ರದೇಶವಾಗಿರುವ ಗಂಗೊಳ್ಳಿ ಗ್ರಾಮದ ಅಭಿವೃದ್ಧಿ ಕಡೆಗೂ ಗಮನ ನೀಡಲಾಗಿದ್ದು, ಮೀನುಗಾರಿಕಾ ಜೆಟ್ಟಿ ಪುನರ್ ನಿರ್ಮಾಣ, ಚರಂಡಿಗಳ ಅಭಿವೃದ್ಧಿ, ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಮಾಡಲಾಗಿದೆ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು. ಗಂಗೊಳ್ಳಿಯ ಮಲ್ಯರಬೆಟ್ಟು ಶ್ರೀ ಗ್ರಾಮ ಜಟ್ಟಿಗೇಶ್ವರ ದೇವಸ್ಥಾನದ ಬಳಿ ವಾರಾಹಿ ನೀರಾವರಿ ಇಲಾಖೆ ಮೂಲಕ ಸುಮಾರು ೪೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕೊಂಕಣ ಖಾರ್ವಿ ಸಮುದಾಯ ಭವನಕ್ಕೆ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಮೀನುಗಾರಿಕೆಯನ್ನೇ ನಂಬಿ ಬಹಳ ಕಷ್ಟದಿಂದ ಜೀವನ ನಡೆಸುತ್ತಿರುವ ಕೊಂಕಣ ಖಾರ್ವಿ ಸಮುದಾಯದ ಅಗತ್ಯತೆ ಮತ್ತು ಬೇಡಿಕೆಗಳನ್ನು ಆದ್ಯತೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಸೈಂಟ್ ಥೋಮಸ್ ಶಾಲೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಸಮಾರಂಭ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪುತ್ತೂರು ಧರ್ಮ ಪ್ರಾಂತ್ಯದ ಧರ್ಮ ಗುರುಗಳಾದ ವಂದನಿಯ ಬಿಷಪ್ ಗಿವರ್ಗಿಸ್ ಮಾರ್ ಮಕೋರಿಯಸ್ ಅವರು ಮಾತನಾಡಿ ನಮ್ಮ ಸಂಸ್ಥೆಗಳು ಕೇವಲ ವಿದ್ಯಾ ಸಂಸ್ಥೆಗಳಲ್ಲ ಬದಲಾಗಿ ವಿದ್ಯಾ ದೇಗುಲಗಳಾಗಿ ಬದಲಾಗಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಮಹತ್ವವನ್ನು ಅರಿತು ಜೊತೆ – ಜೊತೆಯಲ್ಲಿ ಉತ್ತಮ ಸಂಸ್ಕಾರ ಮತ್ತು ಸಂಸ್ಕ್ರತಿಗಳ ಬಗ್ಗೆ ಅರಿತಿರಬೇಕು. ಸಂಕಷ್ಟದ ಸಮಯದಲ್ಲಿ ಸಂಸ್ಥೆ ಮಕ್ಕಳಿಗೆ ವಿವಿಧ ಸ್ಥರದಲ್ಲಿ ಉತ್ತಮ ಶಿಕ್ಷಣವನ್ನು ನೀಡಿದೆ ಮುಂದೆ ಬರುವ ದಿನಗಳಲ್ಲಿ ನಮ್ಮ ಎಲ್ಲಾ ಸಂಸ್ಥೆಗಳು ಇನ್ನಷ್ಟೂ ಎತ್ತರಕ್ಕೆ ಸಾಗಲಿದೆ ಎಂದು ಹಾರೈಸಿದರು. ಪತ್ರಕರ್ತ ವಸಂತ ಗಿಳಿಯಾರ್ ಮಾತನಾಡಿ ಬದಲಾಗುತ್ತಿರುವ ಕಾಲದಲ್ಲಿ ಮಕ್ಕಳು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕಿದೆ. ಒಂದು ನಿರ್ದಿಷ್ಟ ಗುರಿಯೆಡೆಗೆ ಸಾಗುವಾಗ ತಮ್ಮ ಪ್ರಯತ್ನ ಕೂಡ ಉತ್ಕೃಷ್ಟವಾಗಿರಬೇಕು ಹಾಗೆ ಪಾಲಕರು ಕೂಡ ಮಕ್ಕಳ ಮೇಲೆ ಹೆಚ್ಚಿನ ಒತ್ತಡವನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ನಿವೃತ್ತ ಸೈನಿಕ, ಲೇಖಕ ಬೈಂದೂರು ಚಂದ್ರಶೇಖರ ನಾವಡ ಅವರ ‘ಮಹಾನ್ ಸೇನಾನಿ ಜನರಲ್ ಬಿಪಿನ್ ರಾವತ್’ ಕೃತಿ ಲೋಕಾರ್ಪಣೆ ಸಮಾರಂಭ ಭಾನುವಾರ ಉಪ್ಪುಂದ ರೈತಸಿರಿ ಸಭಾಭವನದಲ್ಲಿ ನಡೆಯಿತು. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ, ಕನ್ನಡ ಸಾಹಿತ್ಯ ಪರಿಷತ್ತು ಬೈಂದೂರು ತಾಲೂಕು ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ, ಉಪ್ಪುಂದ ಇದರ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿ, ‘ಮಹಾನ್ ಸೇನಾನಿ ಜನರಲ್ ಬಿಪಿನ್ ರಾವತ್’ ಕೃತಿಯನ್ನು ಲೋಕಾರ್ಪಣೆ ಮಾಡಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಕೃತಿ ಪರಿಚಯಿಸಿದರು. ಸಾಹಿತಿ ಪುಂಡಲೀಕ ನಾಯಕ್ ನಾಯ್ಕನಕಟ್ಟೆ ರೋಟರಿ ಕ್ಲಬ್ ಬೈಂದೂರು ಇದರ ಅಧ್ಯಕ್ಷ ಡಾ ಪ್ರವೀಣ್ ಶೆಟ್ಟಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸ್ನೇಹಿತರೊಂದಿಗೆ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಘಟನೆ ತಾಲೂಕಿನ ಸೋಮೇಶ್ವರ ಬೀಚ್ ಬಳಿ ನಡೆದಿದೆ. ಬವಳಾಡಿಯ ಮಂಜುನಾಥ ದೇವಾಡಿಗ ಎಂಬುವವರ ಪುತ್ರ ಶಶಿಧರ್ (22) ಮೃತ ದುರ್ದೈವಿ. ಉಳಿದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿಜೂರು ಗ್ರಾಮದ ಬವಳಾಡಿಯ ಶಶಿಧರ್ ಎಂಬ ಯುವಕ ತನ್ನ ನಾಲ್ವರು ಸ್ನೇಹಿತರೊಂದಿಗೆ ಸೋಮೇಶ್ವರ ದೊಂಬೆ ನಡುವಿನ ಪ್ರದೇಶದ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಅಲೆಗಳ ರಭಸಕ್ಕೆ ನಿಯಂತ್ರಣ ಕಳೆದುಕೊಂಡು ತೆರೆಯೊಂದಿಗೆ ತೇಲಿಹೊಗಿದ್ದಾರೆ. ಕೂಡಲೇ ಸ್ನೇಹಿತನೋರ್ವ ಆತನ ರಕ್ಷಣೆಗೆ ಧಾವಿಸಿ ಹಿಡಿದುಕೊಂಡರೂ, ದಡಕ್ಕೆ ತರಲು ಸಾಧ್ಯವಾಗದೇ ಸಹಾಯಕ್ಕಾಗಿ ಯಾಚಿಸಿದ್ದಾನೆ. ಸ್ಥಳೀಯರು ರೋಪ್ ಮೂಲಕ ಇಬ್ಬರನ್ನು ದಡಕ್ಕೆ ತಂದಿದ್ದಾರೆ. ಅಷ್ಟರಲ್ಲಾಗಲೇ ಶಶಿಧರ್ ಮೃತಪಟ್ಟಿದ್ದ ಎನ್ನಲಾಗಿದೆ. ಸೌಮ್ಯ ಸ್ವಭಾವದವನಾಗಿದ್ದ ಶಶಿಧರ್ ಒಂದು ವರ್ಷದ ಹಿಂದೆ ಪದವಿ ಮುಗಿಸಿದ್ದು ಸ್ವಲ್ಪ ಸಮಯ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಿ ಸದ್ಯ ಊರಿನಲ್ಲಿಯೇ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಶಶಿಧರ್ ತಂದೆ, ತಾಯಿ ಹಾಗೂ ಸಹೋದರಿಯನ್ನು…

Read More

ಸುರದ್ರೂಪಿ ಯುವಕ ಈಗ ನಾಯಕ ನಟ | ಸಿನೆಮಾ ಕ್ಷೇತ್ರದ ಬಗ್ಗೆ ನೂರಾರು ಕನಸು ಹೊತ್ತ ಯುವ ವಕೀಲ, ಕುಂದಾಪುರದ ಹುಡುಗ ರಥೀಕ್ ಮುರ್ಡೇಶ್ವರ್ ಸಿನೆಮಾ – ಬದುಕಿನ ಪಯಣದ ಅನುಭವಗಳನ್ನು ಕುಂದಾಪ್ರ ಡಾಟ್ ಕಾಂ ಜೊತೆಗೆ ಹಂಚಿಕೊಂಡಿದ್ದಾರೆ

Read More