Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಡಿ.9: ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ, ಕೊರೋನಾ ಮಾರ್ಗಸೂಚಿಯ ಹೆಚ್ಚುವರಿ ನಿಯಂತ್ರಣ ಕ್ರಮಗಳನ್ನು ಮುಂದಿನ ಆದೇಶದ ವರೆಗೆ ಜಾರಿಗೊಳಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೂರ್ಮಾರಾವ್ ಎಂ. ಆದೇಶಿಸಿದ್ದಾರೆ. ಎಲ್ಲಾ ಸಭೆ, ಸಮಾರಂಭ, ಸಮ್ಮೇಳನ ಇತ್ಯಾದಿಗಳಲ್ಲಿ ಭಾಗವಹಿಸುವವರ ಸಂಖ್ಯೆಯನ್ನು 500 ಜನರಿಗೆ ಸೀಮಿತಗೊಳಿಸಲಾಗಿದ್ದು, ಇಂತಹ ಸಂದರ್ಭಗಳಲ್ಲಿ ಕೊವಿಡ್-19 ಸಮುಚಿತ ವರ್ತನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದು ಸಂಘಟಕರ ಹಾಗೂ ವ್ಯವಸ್ಥಾಪಕರ ಜವಾಬ್ದಾರಿಯಾಗಿರುತ್ತದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಸುವ ಸಾಂಸ್ಕೃತಿಕ ಚಟುವಟಿಕೆ, ಹಬ್ಬ ಮತ್ತು ಸಮಾರಂಭಗಳನ್ನು 2022 ಜನವರಿ 15 ರ ವರೆಗೆ ಮುಂದೂಡಬೇಕು. ಶಾಲೆ, ಕಾಲೇಜುಗಳಿಗೆ ತೆರಳುವ 18 ವರ್ಷದೊಳಗಿನ ಮಕ್ಕಳ ಪೋಷಕರು ಕಡ್ಡಾಯವಾಗಿ ಎರಡು ಡೋಸ್ ಕೋವಿಡ್ -19 ಲಸಿಕೆಯನ್ನು ಪಡೆದಿರಬೇಕು. ಎರಡು ಡೋಸ್ ಕೊರೋನಾ ಲಸಿಕೆ ಪಡೆದಿರುವ ವ್ಯಕ್ತಿಗಳಿಗೆ ಮಾತ್ರ ಮಾಲ್, ಚಿತ್ರ ಮಂದಿರಗಳಲ್ಲಿ ಪ್ರವೇಶಕ್ಕೆ ಅವಕಾಶ ನೀಡಬೇಕು. ಈ ಆದೇಶಗಳನ್ನು ಪಾಲಿಸದೇ ಇರುವವರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು, ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆಕ್ಟ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀರಾಮ ಭಜನ ಸಂಕೀರ್ತನೆ ಸಪ್ತಾಹದ ಶತಮಾನೋತ್ಸವಕ್ಕೆ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಬುಧವಾರ ದೀಪ ಪ್ರಜ್ವಲನಗೈದು ಆಶೀರ್ವಚಿಸಿದರು. ಅನಂತರ ಭಜನ ಸಪ್ತಾಹ ಆರಂಭಗೊಂಡಿದ್ದು ಡಿ. 15ರ ವರೆಗೆ ನಡೆಯಲಿದೆ. ಪ್ರತಿದಿನ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಗಳೊಂದಿಗೆ ಸಂಗೀತ ಕಲಾವಿದರಿಂದ, ಊರ ಪರವೂರ ಭಜನ ತಂಡಗಳಿಂದ ನಿರಂತರ ಭಜನೆ 7 ದಿನಗಳ ಕಾಲ ನಡೆಯಲಿದೆ. ಭಜನ ಸಪ್ತಾಹ ಶತಮಾನೋತ್ಸವದ ಸಂಭ್ರಮದಿಂದ ನಡೆಸಲು ಶತಮಾನೋತ್ಸವ ಸಮಿತಿ ಅಧ್ಯಕ್ಷ ಪ್ರಸನ್ನ ಪ್ರಭು, ಕಾರ್ಯದರ್ಶಿ ಎಚ್. ಶಾಂತಾರಾಮ ಪೈ, ಖಜಾಂಚಿ ಕೆ. ಮಧುಸೂದನ್ ಭಟ್, ಮೊಕ್ತಸರ ಕೆ. ಮೋಹನದಾಸ ಶೆಣೈ ಮೊದಲಾದವರು ಉಪಸ್ಥಿತರಿದ್ದರು. ಭಜನ ಸಪ್ತಾಹದಲ್ಲಿ ಪ್ರತಿದಿನ ಸಾಯಂಕಾಲ 6.30 ರಿಂದ 8ರ ತನಕ ವಿಶೇಷ ಆಹ್ವಾನಿತ ಸಂಗೀತಗಾರರಿಂದ ಭಜನೆ ನಡೆಯುತ್ತಿದೆ. ವಿಜಯ್ ಕುಮಾರ್ ಪಾಟೀಲ್ ಧಾರವಾಡ, ಅನಂತ ಕುಲಕರ್ಣಿ ಬಾಗಲಕೋಟೆ, ಬಸ್ತಿ ಕವಿತಾ ಶೆಣೈ ಮಂಗಳೂರು, ವೆಂಕಟೇಶ ಹೆಗ್ಡೆ ಮುಂಬಯಿ, ವಿದ್ವಾನ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿ ಇಲ್ಲಿನ ಸೀತಾರಾಮ ಚಂದ್ರ ದೇವಸ್ಥಾನ ಕುಂದಾಪುರದಲ್ಲಿ ಶ್ರೀ ಮದ್ಭಗವದ್ಗೀತಾ ಅಭಿಯಾನದ ಅಂಗವಾಗಿ ಆಯೋಜಿಸಿದ ತಾಲೂಕು ಮಟ್ಟದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ಕುಂದಾಪುರದ ವೆಂಕಟರಮಣ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕುಮಾರಿ ಪುಣ್ಯಶ್ರೀ ಜೈನ್ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾಳೆ. ಬಾಲಗಂಗಾಧರನಾಥ ತಿಲಕರು ಹಾಗೂ ಭಗವದ್ಗೀತೆ ಈ ವಿಚಾರವಾಗಿ ನಡೆದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಕಾಲೇಜಿನ ಪ್ರಥಮ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕುಮಾರಿ ಪ್ರಣಮ್ಯ ತ್ರತೀಯ ಸ್ಥಾನ ಪಡೆದಿರುತ್ತಾಳೆ. ವಿದ್ಯಾರ್ಥಿನಿಯರ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಮತ್ತು ಬೋಧಕ,ಬೋಧಕೇತರ ವ್ರಂದದವರು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಡಿ.09: ಕರಾವಳಿಯ ಪ್ರಸಿದ್ಧ ನಾಗಕ್ಷೇತ್ರಗಳಲ್ಲಿ ಒಂದಾದ ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ ಕ್ಷೇತ್ರದಲ್ಲಿ ಚಂಪಾಷಷ್ಠಿ ಅಂಗವಾಗಿ ಗುರುವಾರ ದೇವರಿಗೆ ವಿಶೇಷ ಪೂಜೆ, ಪುನಸ್ಕಾರಗಳು ನಡೆದರೇ, ಬೆಳಿಗ್ಗೆಯಿಂದಲೇ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ದೇವರ ದರ್ಶನ ಪಡೆದು, ತಮ್ಮ ಹರಕೆಗಳನ್ನು ಸಲ್ಲಿಸಿ ಪುನೀತರಾದರು. ಮೊದಲನೇ ದಿನ ಮುಂಜಾನೆ ನಾಲ್ಕು ಗಂಟೆಗೆ ಅಭಿಷೇಕ, ಪಂಚಾಮೃತ ಪೂಜೆ, ಮಂಗಳಾರತಿ, ಹಣ್ಣುಕಾಯಿ, ಕಲಸ ಸಮರ್ಪಣೆ, ದೇವರ ದರ್ಶನ, ತೀರ್ಥ ಪ್ರಸಾದ ವಿತರಣೆ, ವೇದ ಪಾರಾಯಣ, ಮಡೆ ಪ್ರದಕ್ಷಿಣೆ, ಕಲಶಾಭಿಷೇಕ, ಕ್ಷೇತ್ರ ಪ್ರದಕ್ಷಿಣೆ, ಪಲ್ಲಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಮಹಾಲಿಂಗೇಶ್ವರ ದೇವರಿಗೆ ರಂಗಪೂಜೆ ನಡೆಯಿತು. ಮಧ್ಯಹ್ನದ ವೇಳೆ ದೇವಳದ ನಾಗರಹಾವು ದರ್ಶನ ನೀಡಿರುವುದು ಭಕ್ತರನ್ನು ಇನ್ನಷ್ಟು ಪುಳಕಗೊಳಿಸಿತು. ಮೊದಲ ದಿನ ಅಂದಾಜು ಹತ್ತು ಸಾವಿರ ಮಂದಿ ದೇವರ ದರ್ಶನ ಪಡೆದು ಹೂಕಾಯಿ ಹರಕೆ ಸಮರ್ಪಿಸಿದರು. ಮೂರು ಸಾವಿರ ಮಂದಿ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡಿದ್ದರು. ವಿವಾಹ, ಸಂತಾನ, ರೋಗ ಸಂಬಂಧಿತ ಸಮಸ್ಯೆ ಎದುರಾದ ಸಂದರ್ಭದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಶ್ರೀಮದ್ಭಗವದ್ಗೀತಾ ಜಯಂತಿ ಆಚರಣೆ ಸಮಿತಿ ಆಯೋಜಿಸಿದ ಸಪ್ತಾಹ ಗೀತಾ ಜಯಂತಿ ಉತ್ಸವ 2021 ಇದರ ವಲಯ ಮಟ್ಟದ ಸ್ಪರ್ಧಾ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ಇತ್ತಿಚಿಗೆ ಜರುಗಿತು. ಎಳಜಿತ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿಯವರು ಬಹುಮಾನ ವಿತರಿಸಿ ಮಾತನಾಡಿ ಭಗವದ್ಗೀತಾ ಅಭಿಯಾನದಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆ ಬಹುಮುಖ್ಯ. ಭಗವದ್ಗೀತೆ ಪಠಣದಿಂದಾಗಿ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹಾಗೂ ಮನೋಬಲ ಹೆಚ್ಚುವುದಲ್ಲದೇ ಶೈಕ್ಷಣಿಕ ಸಾಧನೆ, ಜ್ಞಾನಸಿದ್ಧಿ ಗಳಿಸಲು ಸಾಧ್ಯವಿದೆ. ಹೆಚ್ಚೆಚ್ಚು ಮಂದಿಗೆ ಇದರ ಪ್ರಯೋಜನ ದೊರೆಯುವಂತಾಬೇಕು ಎಂದರು. ಶ್ರೀಮದ್ಭಗವದ್ಗೀತಾ ಜಯಂತಿ ಆಚರಣೆ ಸಮಿತಿ ಅಧ್ಯಕ್ಷರಾದ ಬಿಜೂರು ರಾಮಕೃಷ್ಣ ಶೇರುಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೈಂದೂರಿನ ರಾಮಕ್ಷತ್ರಿಯ ಮಾತೃ ಮಂಡಳಿ ಅಧ್ಯಕ್ಷರಾದ ಮಂಜುಳಾ ಶಿವಯ್ಯ, ರಾಮಕ್ಷತ್ರಿಯ ಯುವಕ ಸಮಾಜದ ಅಧ್ಯಕ್ಷರಾದ ದಿನಕರ ಪಟ್ವಾಲ್, ಉಪ್ಪುಂದ ರಾಘವೇಂದ್ರ ಮಠ ನವಗ್ರಹ ಮಂಟಪ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷರಾದ ರಮೇಶ್ ವೈದ್ಯ, ಶ್ರೀಮದ್ಭಗವದ್ಗೀತಾ ಜಯಂತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ ಸಮೀಪ ಗಂಡು ಕಡವೆಯ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗಂಡು ಕಡವೆ ಕಳೆಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಬೈಂದೂರು ವಲಯ ಅರಣ್ಯಾಧಿಕಾರಿ ಕಿರಣ್ ಬಾಬು ಅವರ ಸಮಕ್ಷಮದಲ್ಲಿ ಮಹಜರು ಕಾರ್ಯ ನಡೆದಿದ್ದು ತನಿಖೆ ನಡೆಯಲಿದೆ ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷಾ ವರದಿ ಬಳಿಕ ಕಡವೆ ಸಾವಿಗೆ ತಿಳಿದುಬರಲಿದೆ. ಬೈಂದೂರು ವಲಯ ಅರಣ್ಯಾಧಿಕಾರಿಗಳ ಕಛೇರಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕುಂಭಾಸಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಬ್ರಹ್ಮ ರಥೋತ್ಸವ ಮಂಗಳವಾರ ವಿಜ್ರಂಭಣೆಯಿಂದ ನಡೆಯಿತು. ರಥೋತ್ಸವದ ಪ್ರಯುಕ್ತ ಡಿ.4 ರಿಂದ ದೇವಸ್ಥಾನದಲ್ಲಿ ಉತ್ಸವಾದಿಗಳು ಆರಂಭಗೊಂಡಿದ್ದವು. ಇಂದು ವಿವಿಧ ಧಾರ್ಮಿಕ ವಿಧಿ-ವಿಧಾನಗಳು ಸಂಪನ್ನಗೊಂಡವು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ರಥೋತ್ಸವದ ಅಂಗವಾಗಿ ಅಷ್ಟೋತ್ತರ ಸಹಸ್ರ ನಾಳಿಕೇರ ಮಹಾಗಣಪತಿಯಾಗ ನಡೆಯಿತು. ಊರ ಹಾಗೂ ಪರಊರಿನಿಂದ ಬಂದಿದ್ದ ಸಾವಿರಾರು ಭಕ್ತಾದಿಗಳು, ವಿನಾಯಕ ದೇವರು ರಥರೂಢನಾಗಿ ವಿರಾಜಮಾನವಾಗುವ ದೃಶ್ಯವನ್ನು ಕಣ್ತುಂಬಿಕೊಂಡರು. ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ, ಅನುವಂಶಿಕ ಪರ್ಯಾಯ ಅರ್ಚಕರಾದ ಕೆ.ವೆಂಕಟರಮಣ ಉಪಾಧ್ಯಾಯ, ಅನುವಂಶಿಕ ಧರ್ಮದರ್ಶಿಗಳಾದ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಕೆ.ವಿಠಲ ಉಪಾಧ್ಯಾಯ, ವ್ಯವಸ್ಥಾಪಕ ನಟೇಶ್ ಕಾರಂತ್ ಇದ್ದರು. ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಶ್ರೀಕಾಂತ್ ಕೆ, ಸರ್ಕಲ್ ಇನ್ಸ್ಪೆಕ್ಟರ್ ಗೋಪಿಕೃಷ್ಣ, ಎಸ್. ಐ ಸದಾಶಿವ ಗವರೋಜಿ ನೇತ್ರತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಡಿಸೆಂಬರ್ 10 ರಂದು ನಡೆಯಲಿರುವ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರಗಳ ವಿಧಾನಪರಿಷತ್ನ ದ್ವೈವಾರ್ಷಿಕ ಚುನಾವಣೆ ಹಿನ್ನೆಲೆ, ಚುನಾವಣಾ ಕಾರ್ಯಗಳು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಶಾಂತಿಯುತ ವಾತಾವರಣದಲ್ಲಿ ನಡೆಸಲು ಅನುಕೂಲವಾಗುವಂತೆ, ರಾಜ್ಯ ಅಬಕಾರಿ ಕಾಯ್ದೆ 1967 ಕಲಂ 10(ಬಿ) ಹಾಗೂ ಪ್ರಜಾಪ್ರಾತಿನಿಧ್ಯ ಕಾಯ್ದೆ 1951 ರ ಕಲಂ 135(ಸಿ) ಅನ್ವಯ ಜಿಲ್ಲೆಯಾದ್ಯಂತ ಡಿ. 8 ರ ಸಂಜೆ 6 ಗಂಟೆಯಿAದ ಡಿ. 10 ರ ಸಂಜೆ 6 ರ ವರೆಗೆ ಎಲ್ಲಾ ರೀತಿಯ ಮದ್ಯದಂಗಡಿ, ಮದ್ಯ ಮಾರಾಟ ಡಿಪೋ, ಮದ್ಯ ತಯಾರಿಕಾ ಡಿಸ್ಟಿಲರಿ, ಸ್ಟಾರ್ ಹೋಟೆಲ್, ಶೇಂದಿ ಅಂಗಡಿಗಳನ್ನು ಮುಚ್ಚುವಂತೆ ಹಾಗೂ ಹೋಟೆಲ್, ಕ್ಲಬ್ಗಳಲ್ಲಿ ಮದ್ಯ ಮಾರಾಟ, ಸರಬರಾಜು ಮಾಡುವುದನ್ನು ನಿಷೇಧಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೂರ್ಮಾರಾವ್ ಎಂ. ಆದೇಶಿಸಿರುತ್ತಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರದಲ್ಲಿ ನಡೆದ ಅವಿಭಜಿತ ದಕ್ಷಿಣಕನ್ನಡ ಜಿಲ್ಲಾ ಮಟ್ಟದ ಕಾರ್ಟೂನ್ ಹಬ್ಬದ ”ಕಾರ್ಟೂನ್ ಚಿತ್ರ” ಸ್ಪರ್ಧೆ ಪಿಯು ನಂತರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಬಿವಿಎ ವಿದ್ಯಾರ್ಥಿ ಪ್ರದೀಶ್ ಕೆ. ಪ್ರಥಮ ಸ್ಥಾನ ಪಡೆದಿದ್ದಾರೆ. ಸ್ಪರ್ಧೆಯ ನಿಯಮದಂತೆ ಹೆತ್ತವರ ಪರಿಕಲ್ಪನೆ ಹಾಗೂ ವಿದ್ಯಾರ್ಥಿಗಳು ಕಾರ್ಟೂನ್‌ಗಳನ್ನು ಚಿತ್ರಿಸುವ ಹಿನ್ನಲೆಯಲ್ಲಿ, ಪ್ರದೀಶ್ ಸಂಗೀತ ಪರಿಕರಗಳ ಮೂಲಕ ಕೋಮು ಸೌಹಾರ್ದತೆ ಬಿಂಬಿಸುವ ಚಿತ್ರವನ್ನು ಬಿಡಿಸಿದರು. ಆ ಮೂಲಕ ಪ್ರಥಮ ಬಹುಮಾನವಾಗಿ ರೂ 10,000 ನಗದು ಹಾಗೂ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು. ಪ್ರದೀಶ್‌ ಪೇತ್ರಿಯ ಕೆ. ಶ್ಯಾಮ್‌ಪ್ರಸಾದ್ ಹಾಗೂ ಪ್ರಸನ್ನ ಪಿ. ಭಟ್ ಅವರ ಪುತ್ರ. ವಿದ್ಯಾರ್ಥಿಯ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ ಆಳ್ವ, ಪ್ರಾಚಾರ‍್ಯ ಕುರಿಯನ್ ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದೇಶಕ್ಕೆ ಅತಿ ಹೆಚ್ಚು ಬ್ಯಾಂಕುಗಳನ್ನು ಕೊಡುಗೆಯಾಗಿ ನೀಡಿದ ಅವಳಿ ಜಿಲ್ಲೆ ಉಡುಪಿ ಮತ್ತು ದ.ಕ ಜಿಲ್ಲೆಯಲ್ಲಿ ಬ್ಯಾಂಕಿಂಗ್ ಉದ್ಯೋಗಕ್ಕೆ ಮತ್ತು ಬ್ಯಾಂಕ್ ಪರೀಕ್ಷೆ ಎದುರಿಸಲು ಅತಿ ಹೆಚ್ಚು ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ಕೆನರಾ ಬ್ಯಾಂಕ್ ರಿಕವರಿ ಮ್ಯಾನೇಜರ್ ಪ್ರಭಾಕರ ಶೆಟ್ಟಿ ಹೇಳಿದರು. ಇಲ್ಲಿನ ಶಿಕ್ಷಪ್ರಭಾ ಅಕಾಡೆಮಿಯಲ್ಲಿ ಬ್ಯಾಂಕಿಂಗ್ ಎಂ.ಬಿ.ಎ ಪರೀಕ್ಷೆ ತರಬೇತಿಯ ನೂತನ ಬ್ಯಾಚ್‌ನ್ನು ಉದ್ಘಾಟನೆಗೊಳಿಸಿ ಮಾತನಾಡಿ ದೇಶದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದು ಅದರಲ್ಲಿ ಸಿಂಹಪಾಲು ಅನ್ಯರಾಜ್ಯದ ವಿದ್ಯಾರ್ಥಿಗಳ ಪಾಲಾಗುತ್ತಿರುವುದು ಕಳವಳಕಾರಿ ಸಂಗತಿ. ವಿದ್ಯಾರ್ಥಿಗಳು ಪದವಿ ಹಂತದಲ್ಲೇ ಧೃಢ ನಿರ್ಧಾರ ಮಾಡಿ ಪ್ರಯತ್ನ ನಡೆಸಿದರೆ ನಿರಾಯಸವಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಪ್ರಭಾ ಅಕಾಡೆಮಿ ಮುಂದಾಳತ್ವ ವಹಿಸಿರುವುದು ಸಂತಸದ ಸಂಗತಿ ಎಂದರು. ಸಂಸ್ಥೆಯ ಮುಖ್ಯಸ್ಥರಾದ ಪ್ರತಾಪ್‌ಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿ ಮಾತನಾಡಿ ನಮ್ಮ ಸಂಸ್ಥೆಯ ಗುಣಮಟ್ಟ ಶಿಕ್ಷಕರು ವಿದ್ಯಾರ್ಥಿಗಳಿಗೆ ನಿರಂತರ ತರಬೇತಿ ನೀಡಲು ಸಿದ್ದರಿದ್ದು ವಿದ್ಯಾರ್ಥಿಗಳು ಬದ್ದತೆಯೊಂದಿಗೆ ತರಗತಿಗೆ ಹಾಜರಾಗಬೇಕು…

Read More