Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕ 1 ಮತ್ತು ಘಟಕ 2ರ 2021-22ರ ಸಾಲಿನ ಕಾರ್ಯಕ್ರಮಗಳ ಉದ್ಘಾಟನೆ ಇತ್ತಿಚಿಗೆ ನಡೆಯಿತು. ಬೈಂದೂರು ಪೊಲಿಸ್‌ ಠಾಣೆ ಆರಕ್ಷಕ ಉಪನೀರಿಕ್ಷಕರಾದ ಪವನ್‌ ನಾಯಕ್‌ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ, ಗುರಿಗಳು, ದೇಶ ಕಟ್ಟುವಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವದ ಬಗ್ಗೆ ಅರಿವು ಮುಡಿಸಿದರು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯ ಕುರಿತು ಯಾವ ತರಹದ ಸಿದ್ಧತೆಯನ್ನು ನಡೆಸಬೇಕು, ಪಠ್ಯಕ್ರಮ ಮತ್ತು ಯಾವ ಪುಸ್ತಕಗಳನ್ನು ಓದಬೇಕು ಅನ್ನುವ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ರಘು ನಾಯ್ಕ ಅವರು ವಹಿಸಿದ್ದರು. ಘಟಕ 2 ರ ಯೋಜನಾಧಿಕಾರಿ ಲತಾ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ದ್ವಿತೀಯ ಬಿ ಕಾಂ ವಿದ್ಯಾರ್ಥಿನಿ ಕು. ಸುಶ್ಮೀತಾ ನಿರೂಪಿಸಿದರು. ದ್ವಿತೀಯ ಬಿ ಕಾಂ ವಿದ್ಯಾರ್ಥಿನಿ ಮೋನಾಕ್ಷಿ ಸ್ವಾಗತಿಸಿದರು. ಘಟಕ 1 ರ ಯೋಜನಾಧಿಕಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ಎನ್ಸಿಸಿ ಆರ್ಮಿ ಘಟಕದ ಆಯೋಜನೆಯಲ್ಲಿ ಕುಂದಾಪುರದಿಂದ ಮರವಂತೆ ತನಕ ಸೈಕಲ್ ಜಾಥಾವನ್ನು ಡಿಸೆಂಬರ್ 18ರಂದು ಬೆಳಿಗ್ಗೆ ಹಮ್ಮಿಕೊಳ್ಳಲಾಯಿತು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ನಾರಾಯಣ ನಾಯ್ಕ್ ಎನ್ಸಿಸಿ ಧ್ವಜ ಏರಿಸುವುದರ ಮೂಲಕ ಜಾಥಕ್ಕೆ ಚಾಲನೆ ನೀಡಿದರು. ನಾಗರಿಕ ಸಮಾಜವನ್ನು ಎಚ್ಚರಿಸುವ ಭಿತ್ತಿ ಪತ್ರಗಳನ್ನು ಹೊಂದಿರುವ, ವಿವಿಧ ಸಾಮಾಜಿಕ ಸಂದೇಶ ಸಾರುವ ಸೈಕಲ್ಗಳಲ್ಲಿ ವಿದ್ಯಾರ್ಥಿಗಳು ಕಾಲೇಜಿನಿಂದ ಮರವಂತೆ ಬೀಚ್ ತನಕ ಪಯಣಿಸಿದರು. ಚಾಲನೆ ವೇಳೆ ಕುಂದಾಪುರಠಾಣಾಧಿಕಾರಿ ಸದಾಶಿವ್ ಆರ್ ಗೌರೋಜಿ, ಪ್ರಾಂಶುಪಾಲ ಪ್ರೊ. ಕೆ. ಉಮೇಶ್ ಶೆಟ್ಟಿ, ಶಿವರಾಜ್ ಸಿ. ಎನ್ಸಿಸಿ ಅಧಿಕಾರಿ ಮತ್ತು ಸಹ ಸಂಯೋಜಕ ಸುಜಯ್ ಹಾಗೂ ಕಾಲೇಜಿನ ಬೋಧಕ ಬೋಧಕೇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ಕುಮಾರಿ ಸೌಮ್ಯ ಕುಂದರ್ ನಿರೂಪಿಸಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಜನ್ಮದಿನ ಹಿನ್ನೆಲೆಯಲ್ಲಿ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ನೀಡುತ್ತಾ ಬಂದಿರುವ ಬಸ್ರೂರು ಅಪ್ಪಣ್ಣ ಹೆಗ್ಡೆ ಕೃಷಿ ಪ್ರಶಸ್ತಿಗೆ ಕುರಿಯಾಜೆ ತಿರುಮಲೇಶ್ವರ ಭಟ್ ಆಯ್ಕೆ ಆಗಿದ್ದಾರೆ. ಬಸ್ರೂರು ಶಾರದಾ ಕಾಲೇಜ್ ಆವರಣದಲ್ಲಿ ಡಿ.24ರ ಸಂಜೆ 4ಕ್ಕೆ ನಡೆಯುವ ಅಪ್ಪಣ್ಣ ಹೆಗ್ಡೆ 87ನೇ ಹುಟ್ಟು ಹಬ್ಬದಲ್ಲಿ ಪ್ರಶಸ್ತಿ ಪ್ರಧಾನ, ವಿದ್ಯಾರ್ಥಿಗಳು, ಅನಾರೋಗ್ಯ ಪೀಡಿತರು ಹಾಗೂ ಅಶಕ್ತರಿಗೆ ದತ್ತಿನಿಧಿ ಸಹಾಯಧನ ವಿತರಿಸಲಾಗುತ್ತದೆ. ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು, ಸುಬ್ರಹ್ಮಣ್ಯ ಮಠ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ ಎಂದು ಕುಂದಾಪುರ ತಾಪಂ ಮಾಜಿ ಉಪಾಧ್ಯಕ್ಷ ರಾಮ್‌ಕಿಶನ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕುರಿಯಾಜೆ ತಿರುಮಲೇಶ್ವರ ಭಟ್ ಸುಳ್ಯ ತಾಲೂಕು, ಬೆಳ್ಳಾರೆ ಸಮೀಪದ ಕುರಿಯಾಜೆಯವರಾಗಿದ್ದು, ಕಳೆದ ಕೆಲವು ವರ್ಷಗಳಿಂದ ಕೃಷಿಯಲ್ಲಿ ಅದ್ಭುತವಾದ ಸಾಧನೆ ಮಾಡಿದ್ದಾರೆ. ದೇಶ-ವಿದೇಶಗಳಿಂದ ತಂದು ಬೆಳೆಸಿದ ಹಣ್ಣು ಹೂವು ಗಿಡಮೂಲಿಕೆ ಸೇರಿದಂತೆ ನೂರಾರು ಬಗೆಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹಿರಿಯ ಚಲನಚಿತ್ರ ನಟ ರಮೇಶ್ ಭಟ್ ಶುಕ್ರವಾರ ಮಂಕಿ ಮೂಲ ಮನಗೆ ಭೇಟಿ ನೀಡುವ ಸಂದರ್ಭ ಬೀಜಾಡಿ ಕಪಿಲಾ ದೇಶೀಹಸುಗಳ ಗೋಶಾಲೆಗೆ ಭೇಟಿ ನೀಡಿ ಗೀರ್ ಹಾಗೂ ಇತರ ಜಾತಿ ಹಸುಗಳ ವೀಕ್ಷಿಸಿದರು. ಈ ಸಂದರ್ಭ ಅವರು ಮಾತನಾಡಿ ನೂರಾರು ದೇಸಿತಳಿ ಹಸುಗಳು ಕಣ್ಮರೆಯಾಗಿ ಬೆರಳೆಣಿಕೆಯಷ್ಟು ಹಸುಗಳ ಮಾತ್ರ ಉಳಿದಿದೆ. ದೇಶೀ ಹಸುಗಳ ರಕ್ಷಣೆ ಮಾಡದಿದ್ದರೆ ಭಾರತೀಯ ಗೋತಳಿಗಳ ಇತಿಹಾಸ ಸೇರಲಿದ್ದು, ಕಪಿಲಾ ಗೋಲೆಯಲ್ಲಿ ಗೀರ್ ಅಲ್ಲದೆ ಬೇರೆ ತಳಿಗಳ ರಕ್ಷಣೆ ಮಾಡುತ್ತಿರುವುದು ಅಭಿನಂದನೀಯ ಎಂದು ಹೇಳಿದರು. ಕಪಿಲಾ ಗೋಶಾಲೆ ಸಂಸ್ಥಾಪಕ ಕುಮಾರ್ ಕಾಂಚನ್ ಅವರು ರಮೇಶ್ ಭಟ್ ಅವರನ್ನು ಬರಮಾಡಿಕೊಂಡು, ಗೋ ತಳಿಗಳ ಬಗ್ಗೆ ಮಾಹಿತಿ ನೀಡಿ, ದೇಶೀಹಸುಗಳಿಂದ ಸಿದ್ದ ಮಾಡುತ್ತಿರುವ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು. ದೇಶೀಹಸುಗಳ ವೀಕ್ಷಿಸಿದ ನಂತರ ರಮೇಶ್ ಭಟ್ ರೋಟರಿ ಕ್ಲಬ್ ಕುಂದಾಪುರಕ್ಕೆ ಭೇಟಿ ನೀಡಿದ್ದು, ಮಾಜಿ ರೋಟರಿ ಸಹಗೌವರ್ನರ್ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಹಾಗೂ ಸದಸ್ಯರು ಸನ್ಮಾನಿಸಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಧರ್ಮಸ್ಥಳ, ಜನಜಾಗೃತಿ ವೇದಿಕೆ ಪ್ರಾದೇಶಿಕ ವಿಭಾಗ ಬೆಳ್ತಂಗಡಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ ತಾಲೂಕು ಇವರ ಜಂಟಿ ಆಶ್ರಯದಲ್ಲಿ ಬಸ್ರೂರಿನ ನಿವೇದಿತ ಪ್ರೌಢಶಾಲೆಯಲ್ಲಿ ಶೌರ್ಯ ವಿಪತ್ತು ನಿರ್ವಹಣ ಸ್ವಯಂ ಸೇವಕರ ತರಬೇತಿ ಕಾರ್ಯಕ್ರಮ ಜರುಗಿತು. ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ, ತಾಲೂಕು ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಕರಾವಳಿ ಪ್ರಾದೇಶಿಕ ಕಚೇರಿ ನಿರ್ದೇಶಕ ವಸಂತ್ ಸಾಲಿಯಾನ್ ತರಬೇತಿ ಕಾರ‍್ಯಗಾರ ಉದ್ಘಾಟಿಸಿ ಶುಭ ಹಾರೈಸಿದರು. ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ನವೀನ್ ಅಮೀನ್, ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ಉರಗ ತಜ್ಞ ಮಹೇಶ್ ನಾಯಕ್ ಅಂಕೋಲಾ, ಉಡುಪಿ ಜಿಲ್ಲೆಯ ಹಿರಿಯ ನಿರ್ದೇಶಕ ಗಣೇಶ ಬಿ, ಮುಖ್ಯ ಶಿಕ್ಷಕ ಸುಬ್ಬಣ್ಣ ಕೋಣಿ, ತಾಲೂಕಿನ ಹಿರಿಯ ಯೋಜನಾಧಿಕಾರಿ ಮುರುಳೀಧರ ಶೆಟ್ಟಿ, ತಾಲೂಕಿನ ಎಲ್ಲಾ ಮೇಲ್ವಿಚಾರಕರು, ಜ್ಞಾನವಿಕಾಸ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ ೧೩,೪೯೪ ಎ ದರ್ಜೆ ಸದಸ್ಯರಿದ್ದು ರೂ. ೨೪.೨೨ ಕೋಟಿ ಠೇವಣಿ ಹೊಂದಿದೆ. ಶೇ. ೯೬.೮೭ ಸಾಲ ವಸೂಲಾತಿಯ ಸಾಧನೆ ಮಾಡಿದೆ. ರೂ. ೬೬.೨೮ ಲಕ್ಷ ನಿವ್ವಳ ಲಾಭ ಗಳಿಸಿದೆ. ಸಂಸ್ಥೆಯು ಮುಂದಿನ ದಿನದಲ್ಲಿ ಶಾಖೆಗಳಿಗೆ ಸ್ವಂತ ಸ್ಥಳ ಖರೀದಿ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಈಗಾಗಲೇ ಸದಸ್ಯರಿಗೆ ಶೇ.೧೨ ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ. ವರದಿ ಸಾಲಿನಲ್ಲಿ ಮೃತಪಟ್ಟ ಮೀನುಗಾರರ ವಾರೀಸುದಾರರಿಗೆ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ರೂ. ೩ ಲಕ್ಷ ಪರಿಹಾರ ಧನ ಸಿಗುವಲ್ಲಿ ಸಹಕರಿಸಿದ್ದು ಹಾಗೂ ಮೀನುಗಾರ ಸದಸ್ಯರಿಗೆ ಸರ್ಕಾರದಿಂದ ೩ ಸಾವಿರ ರೂಪಾಯಿಯಂತೆ ೮೩೬ ಸದಸ್ಯರಿಗೆ ರೂ.೨೫,೦೮,೦೦೦/- ಕೋವಿಡ್ ಪರಿಹಾರವನ್ನು ಒದಗಿಸಿಕೊಟ್ಟಿದ್ದೇವೆ ಎಂದು ಬೀಜಾಡಿ ಮೀನುಗಾರರ ಸಹಕಾರಿ ಸಂಘದ ರತ್ನ ಮೊಗೇರ್ತಿ ಬೀಜಾಡಿ ಹೇಳಿದರು. ಅವರು ಗೋಪಾಡಿ ಚಿಕ್ಕು ಅಮ್ಮ ದೇವಸ್ಥಾನದ ಬ್ರಹ್ಮಲಿಂಗೇಶ್ವರ ಸಭಾಭವನದಲ್ಲಿ ಜರುಗಿದ ಬೀಜಾಡಿ ಮೀನುಗಾರರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಡಿ.16: ಮೂಕ ಪ್ರಾಣಿಗಳಿಗೆ ಚಿಕಿತ್ಸೆ ನೀಡುವುದು ಸವಾಲಿನ ಕೆಲಸವಾಗಿದ್ದು, ಪಶುವೈದ್ಯರು ಅವುಗಳನ್ನು ಪರೀಕ್ಷಿಸಿ, ಅವುಗಳಿಗೇನಾಗಿದೆ ಎಂಬುದನ್ನು ಸೂಕ್ಷ್ಮವಾಗಿ ಅರಿತು ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು. ಅವರು ಇಂದು ನಗರದ ಪಶುವೈದ್ಯಕೀಯ ಪಾಲಿ ಕ್ಲಿನಿಕ್ನಲ್ಲಿ, ರಾಷ್ಟ್ರೀಯ ಜಾನುವಾರು ರೋಗನಿಯಂತ್ರಣ ಕಾರ್ಯಕ್ರಮದ , ಎರಡನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮವನ್ನು ಗೋಪೂಜೆ ನೆರೆವೇರಿಸುವ ಮೂಲಕ ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಜಾನುವಾರು ಗಣತಿಯ ಪ್ರಕಾರ ಜಿಲ್ಲೆಯಲ್ಲಿ 2.57 ಲಕ್ಷ ಜಾನುವಾರುಗಳಿದ್ದು, ಎಲ್ಲಾ ಜಾನುವಾರುಗಳಿಗೆ ನಿಗಧಿತ ಅವಧಿಯೊಳಗೆ ಕಾಲು ಬಾಯಿ ಲಸಿಕೆಯನ್ನು ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಲಸಿಕಾ ಕಾರ್ಯಕ್ರಮದ ಕುರಿತು ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಸಾಕಷ್ಟು ಮುಂಚಿತವಾಗಿ ಮಾಹಿತಿ ನೀಡಿ, ಲಸಿಕಾ ಕಾರ್ಯಕ್ಕೆ ಅರ್ಹವಿರುವ ಎಲ್ಲಾ ಜಾನುವಾರುಗಳಿಗೆ ಲಸಿಕೆ ನೀಡಿ, ಶೇಕಡಾ 100 ರಷ್ಟು ಪ್ರಗತಿ ಸಾಧಿಸುವಂತೆ ತಿಳಿಸಿದರು. ಲಸಿಕಾ ಕಾರ್ಯವನ್ನು ಗಣಕೀಕೃತ ವ್ಯವಸ್ಥೆಯಲ್ಲಿ ನಡೆಸುವ ಕುರಿತು ಜಿಲ್ಲಾಧಿಕಾರಿಗಳು ಮೆಚ್ಚುಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ’ಯುತ್ ರೆಡ್‌ಕ್ರಾಸ್ ವಿಂಗ್’ ಇತ್ತಿಚಿಗೆ ಉದ್ಘಾಟನೆಗೊಂಡಿತು. ಕುಂದಾಪುರದ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಸಭಾಪತಿ ಜಯಕರ ಶೆಟ್ಟಿ ಘಟಕವನ್ನು ಉದ್ಘಾಟಿಸಿ ಮಾತನಾಡಿ ರೆಡ್‌ಕ್ರಾಸ್ ಸೊಸೈಟಿಯ ಉಗಮ, ವಿಸ್ತಾರವು ಜಗತ್ತಿನಾದ್ಯಂತ ಆದುದು ಮಾತ್ರವೇ ಅಲ್ಲದೆ ಶಾಂತಿ ಸೌಹಾರ್ಧತೆಯನ್ನು ಕಾಪಾಡುವ ಸಾಮಾಜಿಕ ಕಳಕಳಿಯ ಸಂಸ್ಥೆ ಎನ್ನುವುದಕ್ಕೆ ನಮಗೆಲ್ಲಾ ಹೆಮ್ಮೆಯ ವಿಚಾರ ಎಂದರು. ಸತ್ಯನಾರಾಯಣ ಪುರಾಣಿಕ್ ಇವರು ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಬ್ಯಾರೀಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಮೀರ್ ಇಂದಿನ ಯುವಜನತೆಯನ್ನು ಸಮಾಜಮುಖಿ ಕಾರ್ಯದತ್ತ ಕೊಂಡೊಯ್ಯುವ ಘಟಕ ಈ ರೆಡ್ ಕ್ರಾಸ್ ಘಟಕವಾಗಿದೆ. ಮೊಬೈಲ್‌ನ ಗೀಳು ಬಿಟ್ಟು ಸಮಾಜಮುಖಿಯಾಗಿ ತಮ್ಮನ್ನು ಸಮರ್ಪಿಸಿಕೊಂಡು ನೆಮ್ಮದಿಯಾಗಿ ಬದುಕಿ ಎಂದರು. ಖಜಾಂಚಿ ಶ್ರೀ.ಶಿವರಾಮ ಶೆಟ್ಟಿ, ಶ್ರೀ.ಗಣೇಶ್ ಆಚಾರ್ಯ ಹಾಗೂ ಶ್ರೀ.ಅಬ್ದುಲ್ ಬಶೀರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುತ್ ರೆಡ್‌ಕ್ರಾಸ್ ಘಟಕದ ಉಸ್ತುವಾರಿ ಉಪನ್ಯಾಸಕ ಅಹ್ಮದ್ ಖಲೀಲ್ ಸ್ವಾಗತಿಸಿ, ಘಟಕದ ವಿದ್ಯಾರ್ಥಿ ಮುಖಂಡ ಫಿಝಾನ್ ವಂದಿಸಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜು ಮತ್ತು ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ಎನ್‌ಸಿಸಿ ಸಹಯೋಗದಲ್ಲಿ ಪುನೀತ್ ಸಾಗರ್ ಅಭಿಯಾನ (ಬೀಚ್ ಸ್ವಚ್ಛತಾ ಮತ್ತು ಜಾಗೃತಿ ಅಭಿಯಾನ) ಕಾರ್ಯಕ್ರಮ ಇತ್ತಿಚಿಗೆ ಕೋಡಿ ಬೀಚ್ ಬಳಿ ನಡೆಯಿತು. ಎನ್‌ಸಿಸಿ 21 ಕರ್ನಾಟಕ ಬೆಟಾಲಿಯನ್ ನಿರ್ದೇಶನದಂತೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಎನ್‌ಸಿಸಿ ಭೂದಳದ ಅಧಿಕಾರಿ ಲೆಫ್ಟಿನೆಂಟ್ ಅಂಜನ್ ಕುಮಾರ್ ಎ. ಎಲ್ ಮತ್ತು ಬಿ. ಬಿ. ಹೆಗ್ಡೆ ಕಾಲೇಜಿನ ಎನ್.ಸಿ.ಸಿ ವಿಬಾಗದ ಕೇರ್‌ಟೇಕರ್ ಶಿವರಾಜ್ ಅವರು ಭಾಗವಹಿಸಿದ್ದರು. ಸುಮಾರು 85 ಎನ್.ಸಿ.ಸಿ ಕೆಡೆಟ್‌ಗಳು ಭಾಗವಹಿಸಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕೆರಾಡಿ ಚಂದ್ರಶೇಖರ ಶೆಟ್ಟಿ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ಮಾನ್ಯ ಮಾಡಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶಕ್ಕೆ, ದ್ವಿಸದಸ್ಯ ಪೀಠ ತಡೆ ನೀಡಿದೆ. ಕೊಲ್ಲೂರು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಆಯ್ಕೆ ಮುನ್ನ ಚಂದ್ರಶೇಖರ ಶೆಟ್ಟಿ ಹಾಗೂ ಬೆಳ್ವೆ ಗಣೇಶ್ ಕಿಣಿ ವ್ಯವಸ್ಥಾಪನಾ ಸಮಿತಿ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದರಿಂದ ಅಧ್ಯಕ್ಷರ ಆಯ್ಕೆಪ್ರಕ್ರಿಯೆಯಲ್ಲಿ ಪಾಲೊಂಡಿದ್ದ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಹೈಕೋರ್ಟ್ ಏಕ ಸದಸ್ಯ ಪೀಠ ರಾಜಿನಾಮೆ ನಂತರ ಅಧ್ಯಕ್ಷರ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಆಯ್ಕೆಯಾಗಿರುವ ಸಿಂಧುವಲ್ಲ ಎಂದು ಚಂದ್ರಶೇಖರ ಶೆಟ್ಟಿ ಅಧ್ಯಕ್ಷರ ಆಯ್ಕೆ ರದ್ದು ಮಾಡಿತ್ತು. ಏಕ ಸದಸ್ಯ ಪೀಠ ನೀಡಿದ ಆದೇಶ ಪ್ರಶ್ನಿಸಿ ಚಂದ್ರಶೇಖರ ಶೆಟ್ಟಿ ಅಪೀಲ್ ಮಾಡಿದ್ದು, ಹೈಕೋರ್ಟ್ ದ್ವಿಸದಸ್ಯ ಪೀಠವು ನ್ಯಾಯಮೂರ್ತಿ ಸಚಿನ್ ಶಂಕರ ಮಗದುಮ್ ಏಕ ಸದಸ್ಯ ಪೀಠ ಆದೇಶಕ್ಕೆ ಬುಧವಾರ ತಡೆ ನೀಡಿ ಚಂದ್ರಶೇಖರ ಶೆಟ್ಟಿ ಅಧ್ಯಕ್ಷರಾಗಿ ಮುಂದುವರಿಯುವಂತೆ ಆದೇಶ…

Read More