Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಲ ಮೇಲ್‌ಗಂಗೊಳ್ಳಿ ಗಂಗೊಳ್ಳಿ ಇದರ 39ನೇ ವಾರ್ಷಿಕೋತ್ಸವ, ಅಮೃತಾ ಯುವತಿ ಮಂಡಲ ಮತ್ತು ಅರ್ಚನಾ ಮಹಿಳಾ ಮಂಡಲ ಮೇಲ್‌ಗಂಗೊಳ್ಳಿ ಇದರ 39ನೇ ವಾರ್ಷಿಕೋತ್ಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಮೇಲ್‌ಗಂಗೊಳ್ಳಿಯ ಪೋರ್ಟ್ ಬಂಗ್ಲೆ ಬಳಿ ಮಂಗಳವಾರ ನಡೆಯಿತು. ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ಚಂದ್ರ ಖಾರ್ವಿ ಧ್ವಜಾರೋಹಣ ನೆರವೇರಿಸಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಗಂಗೊಳ್ಳಿ ಜೈ ಭೀಮ್ ಸಂಘಟನೆಯ ಪ್ರಧಾನ ಸಂಚಾಲಕ ಜಗದೀಶ ಗಂಗೊಳ್ಳಿ, ಬೈಂದೂರು ಯುವ ಬಂಟರ ಸಂಘದ ಅಧ್ಯಕ್ಷ ಗುರುರಾಜ್ ಶೆಟ್ಟಿ ಶುಭ ಹಾರೈಸಿದರು. ಈ ಸಂದರ್ಭ ಸಮಾಜಸೇವಕ ಕೊತ್ವಾಲ್ ಪದ್ಮನಾಭ ಶೇರುಗಾರ್, ರಾಷ್ಟ್ರ ಮಟ್ಟದ ಕ್ರೀಡಾಪಟು ಕೀರ್ತನಾ ಎಸ್. ಕಿರಿಮಂಜೇಶ್ವರ, ಯಕ್ಷಗಾನ ಭಾಗವತ ಶಂಕರ ಬಾಳ್ಕುದ್ರು, 2025ರ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಕರಾವಳಿ ಹಾಗೂ ಮಲೆನಾಡಿನ ಸಮಸ್ತ ಜೈನ ಬಾಂಧವರ ಸಹಯೋಗದೊಂದಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಭಗವಾನ್ ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವವನ್ನು ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ಆದಿತ್ಯವಾರ ಹಮ್ಮಿಕೊಳ್ಳಲಾಯಿತು. ಸಂಜೆ 4ಕ್ಕೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಮೊದಲಿಗೆ ಆಳ್ವಾಸ್ ವಿದ್ಯಾರ್ಥಿಗಳಿಂದ ಜಿನಭಜನೆ ನಡೆಯಿತು. ಕೊಂಬು ವಾದ್ಯ, ನಾದಸ್ವರ, ಪೂರ್ಣಕುಂಭದೊಂದಿಗೆ ಮಹಾವೀರ ಸ್ವಾಮಿ ಜಿನಬಿಂಬದ ಮೆರವಣಿಗೆ, ತೋರಣ ಮುಹೂರ್ತ, ದ್ರವ್ಯಾಭಿಷೇಕ, ಅಷ್ಟವಿಧಾರ್ಚನೆ ಪೂಜೆ, ಮಹಾಮಂಗಳಾರತಿ ಹಮ್ಮಿಕೊಳ್ಳಲಾಯಿತು. ಹೊರನಾಡಿನ ಜಯಶ್ರೀ ಧರಣೇಂದ್ರ ಜೈನ್ ಮತ್ತು ಬಳಗದವರಿಂದ ಜಿನಭಕ್ತಿ ಗಾಯನ ನಡೆಯಿತು.ಸುತ್ತಮುತ್ತಲಿನ ವಾತಾವರಣಕ್ಕೆ ಧಾರ್ಮಿಕ ವೈಭವದ ಸ್ಪರ್ಶ ನೀಡುವ ಉದ್ದೇಶದಿಂದ 24 ತೀರ್ಥಂಕರರ ವಿಗ್ರಹಗಳನ್ನುಇಡಲಾಗಿತ್ತು. ಸಭಾಂಗಣದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲು ಬೃಹತ್ ಆಕಾರದ 20 ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ಜಲಾಭಿಷೇಕದಿಂದ ಆರಂಭಗೊಂಡ ಪೂಜಾ ವಿಧಿಗಳು ಏಳನೀರು, ಇಕ್ಷುರಸ, ಕ್ಷೀರ, ಕಷಾಯ, ಕಾಶ್ಮೀರಿ ಕೇಸರಿ, ಕಲ್ಕಚೂರ್ಣ, ಅರಿಶಿನ, ಚತುಷ್ಕೋನ ಕಳಶ, ಚಂದನ ಹಾಗೂ ಅಷ್ಟಗಂಧದ ದ್ರವ್ಯಗಳಿಂದ ಭಕ್ತಿಭಾವದಿಂದ ನೆರವೇರಿಸಲ್ಪಟ್ಟವು. ಬಳಿಕ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಹೆದ್ದಾರಿ  ಬದಿಯಲ್ಲಿ ಕಸದ ಕೊಂಪೆ ದಿನದಿಂದ ದಿನಕ್ಕೆ ಹೆಚ್ಚುದ್ದು ಇದರ ಬಗ್ಗೆ ಮಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಸಿಇಒ ಹರ್ಷ ಪೂಜಾರಿ ಖೇಧ ವ್ಯಕ್ತಪಡಿಸಿದ್ದಾರೆ. ಅವರು ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಕೋಟ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಮಣೂರು ಫ್ರೆಂಡ್ಸ್ ಸಹಯೋಗದೊಂದಿಗೆ ಕೋಟ ಗ್ರಾ.ಪಂ ಎಸ್ ಎಲ್ ಆರ್ ಎಂ ಘಟಕ ಇವರ ಸಂಯೋಜನೆಯೊಂದಿಗೆ 299ನೇ ಭಾನುವಾರದ ಸ್ವಚ್ಛತಾ ಅಭಿಯಾನದಲ್ಲಿ ಮಾತನಾಡಿದರು. ಪಂಚವರ್ಣ ಈ ಸ್ವಚ್ಛತಾ ಅಭಿಯಾನ ರಾಷ್ಟ್ರೀಯ ಹೆದ್ದಾರಿಯಲ್ಲುಂಟಾಗುವ ದೊಡ್ಡ ಪ್ರಮಾಣದ ತ್ಯಾಜ್ಯದ ಕೊಂಪೆಯನ್ನು ಇನ್ನಿಲ್ಲದಂತ್ತಾಗಿಸಿದ್ದಾರೆ ಆದರೆ ಕಸ ಎಸೆಯುವ ಮನಸ್ಥಿತಿ ಅತ್ಯಂತ ಹೀನ ವ್ಯವಸ್ಥೆ ತಳ್ಳಲ್ಪಟ್ಟಿದೆ ಎಂದು ಪಂಚವರ್ಣ ನಿತ್ಯನಿರಂತ ಪಕೃತಿ ಮಾತೆಯ ಸೇವೆಯನ್ನು ಮುಕ್ತಕಂಠದಿಂದ ಪ್ರಶಂಸಿದರು. ಈ ಸಂದರ್ಭದಲ್ಲಿ ಪಂಚವರ್ಣ ಯುವಕ‌ ಮಂಡಲದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್,ಗಿರೀಶ್ ಆಚಾರ್,ಉಪಾಧ್ಯಕ್ಷ ದಿನೇಶ್ ಆಚಾರ್,ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ,ಟ್ರಾವೆಲಿಂಕ್ಸ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಶ್ರೀ ಅಮೃತೇಶ್ವರಿ ಜೋಗಿ ಮಹಿಳಾ ವೇದಿಕೆ  ಉದ್ಘಾಟನಾ ಕಾರ್ಯಕ್ರಮ ಭಾನುವಾರ ಶ್ರೀ ಅಮೃತೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಗೀತಾನಂದ ಫೌಂಡೇಶನ್ ನಿರ್ದೇಶಕಿ ಗೀತಾ ಎ. ಕುಂದರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ‌ ಮುಖ್ಯ ಅತಿಥಿಗಳಾಗಿ ನಾಥಪಂಥ ಅಲೆಮಾರಿ ಜೋಗಿ ಮಹಿಳಾ ಸಂಘದ ಅಧ್ಯಕ್ಷೆ  ಅನುಪಮ ಜೋಗಿ  ಶುಭ ಹಾರೈಸಿದರು. ಈ‌ವೇಳೆ  ಅಮೃತೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ  ವೇದಿಕೆಯ ಗೌರವಾಧ್ಯಕ್ಷ ಸುಬ್ರಾಯ ಜೋಗಿ , ದೇವಸ್ಥಾನದ ಅರ್ಚಕ ಉದಯ್ ಜೋಗಿ  ,ಮಹಿಳಾ ವೇದಿಕೆಯ ಅಧ್ಯಕ್ಷೆ ಭವಾನಿ ಕೆ, ಕಾರ್ಯದರ್ಶಿ ರೇಖಾ ಕೆ., ಕೋಶಾಧಿಕಾರಿ ಗೀತಾ ಜೋಗಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ನಂತರ ಅಮೃತೇಶ್ವರೀ ದೇವಸ್ಥಾನದಲ್ಲಿ ಜೋಗಿ ಮಹಿಳಾ ವೇದಿಕೆಯ ಸದಸ್ಯರಿಂದ ಭಗವದ್ಗೀತೆ ಪಾರಾಯಣ ಗೈದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ತೆರೆಸಾ ಪಿಯು ಕಾಲೇಜಿನಲ್ಲಿ ಎರಡು ದಿನಗಳ RC (ರಿಮೋಟ್ ಕಂಟ್ರೋಲ್) ವಿಮಾನ ನಿರ್ಮಾಣ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು. 15ರಿಂದ 18 ವರ್ಷ ವಯೋಮಾನದ ವಿದ್ಯಾರ್ಥಿಗಳಿಗೆ ಏರೋನಾಟಿಕಲ್ ಎಂಜಿನಿಯರಿಂಗ್‌ನ ಮೂಲಭೂತ ತತ್ವಗಳು ಹಾಗೂ ವಿಮಾನ ನಿರ್ಮಾಣದ ಪರಿಚಯ ನೀಡುವುದು ಇದರ ಮುಖ್ಯ ಉದ್ದೇಶವಾಗಿತ್ತು. ಮದರ್ ತೆರೆಸಾ ಪಿಯು ಕಾಲೇಜು ಮತ್ತು ಬುಕ್ ಟೆಕ್ ಸೊಲ್ಯೂಷನ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಎಂಐಟಿ, ಮಾಹೆ ಮಣಿಪಾಲದ ವಿಮಾನ ವಸ್ತುಶಾಸ್ತ್ರ ತಜ್ಞರಾದ ಮಧುಸೂಧನ್ ಬಿ ಅವರು ತಮ್ಮ ಮಾತುಗಳಲ್ಲಿ, ಇಂತಹ ತಾಂತ್ರಿಕ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಕಿರಿಯ ವಯಸ್ಸಿನಲ್ಲಿ ಪರಿಚಯಿಸುವುದು ಬಹಳ ಉಪಯುಕ್ತವಾಗಿದ್ದು, ಇದರಿಂದ ಅವರಲ್ಲಿ ಹೊಸ ಆಸಕ್ತಿ ಮೂಡಿ ಭವಿಷ್ಯದ ದಾರಿಯನ್ನು ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ಹೇಳಿದರು. ಕಾರ್ಯಾಗಾರವನ್ನು ಎಂ.ಎಸ್. ರಾಮಯ್ಯ ವಿಶ್ವವಿದ್ಯಾಲಯದ ಯುವ ಏರೋಸ್ಪೇಸ್ ಎಂಜಿನಿಯರ್‌ಗಳಾದ ಕಾರ್ತಿಕ್ ಆರ್. ಪಿ., ಯಶ್ ಆರ್ಯನ್ ಮತ್ತು ನವನೀತ್ ಅರಸು ನಡೆಸಿಕೊಟ್ಟರು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ವಡ್ಡರ್ಸೆ ಗ್ರಾಮಪಂಚಾಯತ್ ವ್ಯಾಪ್ತಿಯ ಎಂ.ಜಿ ಕಾಲೇಜಿನ ಸೂರಿಬೆಟ್ಟು ಹೋಗುವ ರಸ್ತೆಯಲ್ಲಿದ್ದ ಬಾರಿ ಪ್ರಮಾಣದ ತ್ಯಾಜ್ಯವನ್ನು ಇಲ್ಲಿನ ಪಂಚಾಯತ್ ಮಾಜಿ ಸದಸ್ಯ ಕೋಟಿ ಪೂಜಾರಿ ತಮ್ಮ ಸ್ವಂತ ಕರ್ಚಿನೊಂದಿಗೆ ತೆರವುಗೊಳಿಸಿದ ಘಟನೆ ಶನಿವಾರ ನಡೆದಿದೆ. ಎಂ.ಜಿ ಕಾಲೇಜಿನ ಸೂರಿಬೆಟ್ಟು ಭಾಗದ ಅರ್ಧ ಕಿ.ಮೀ ರಸ್ತೆಯ ಉದ್ದಕ್ಕೂ ಸಾಕಷ್ಟು ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಗಮನಿಸಿದ ಕೋಟಿ ಪೂಜಾರಿ ಸುಮಾರು 180 ಕ್ಕೂ ಅಧಿಕ ಚೀಲ ತ್ಯಾಜ್ಯ ಸ್ವತಃ ತಾವೇ ನಿಂತು ತೆರೆವುಗೊಳಿಸಿದರು ಈ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು ಇವರ ಕಾರ್ಯವನ್ನು ಪರಿಸರಪ್ರೇಮಿಗಳು ಅಭಿನಂದಿಸಿದ್ದಾರೆ. ಕಸವನ್ನು ಕಂಡಕಂಡಲ್ಲಿ ಎಸೆಯದಿರಿ ಇದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಪ್ರಸ್ತುತ ತಾಪಮಾನಕ್ಕೆ ಈ ತ್ಯಾಜ್ಯಗಳು ಮನುಕುಲದ ಆರೋಗ್ಯದ ಮೇಲೆ ಬಾರಿ ದುಸ್ಥಿತಿಯನ್ನು ತಂದಿಡಲಿದೆ ಅದಕ್ಕಾಗಿಯೇ ಸ್ವತಃ ನಾನೆ ಸ್ವಂತ ಹಣದಲ್ಲಿ ತೆರವುಗೊಳಿಸಲು ಮುಂದಾಗಿದ್ದೇನೆ ಎಂದು ಪಂಚಾಯತ್ ಮಾಜಿ ಹಿರಿಯ ಸದಸ್ಯ ಕೋಟಿ ಪೂಜಾರಿ ಹೇಳಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸಾಹಿತ್ಯ, ಸಂಸ್ಕೃತಿ, ಅಧ್ಯಾತ್ಮ ಇದು ಎಲ್ಲರಲ್ಲಿಯೂ ಇರಬೇಕು. ಆಗ ಮಾತ್ರ ನಾವು ಮನುಷ್ಯರಾಗಲು ಸಾಧ್ಯ. ಕಲೆ, ಪತ್ರಿಕೆ ಗಳು ನಮ್ಮಲ್ಲಿ ಸುಸಂಸ್ಕೃತ, ನಾಗರಿಕ ಪ್ರಜ್ಞೆಯನ್ನು ಬೆಳೆಸುತ್ತದೆ. ಕುಂದಾಪುರ ಮಾತ್ರವಲ್ಲದೆ ಇಡೀ ಕರಾವಳಿಯೇ ಅದ್ಭುತ ಜ್ಞಾನ ಭಂಡಾರದ ನಗರಿ ಎಂದು ಮೂಡುಬಿದಿರೆ ಜೈನಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಹೇಳಿದರು. ಅವರು ರವಿವಾರ ಭಂಡಾರ್‌ಕಾರ್ಸ್ ಕಾಲೇಜಿನ ಆ‌ರ್.ಎನ್. ಶೆಟ್ಟಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕುಂದಪ್ರಭ ಸಂಸ್ಥೆ ವತಿಯಿಂದ ಕೊಡಮಾಡುವ ಕೋ.ಮ. ಕಾರಂತ ಪ್ರಶಸ್ತಿಯನ್ನು ಎಂಜಿನಿಯರ್, ಕುಂಚ ಕಲಾವಿದ, ಫೈವಿ ಟೆಕ್ನಾಲಿಜಿಸ್‌ನ ತಾಂತ್ರಿಕ ನಿರ್ದೇಶಕ ಬಳ್ಳೂರು ಜಯರಾಮ ಉಡುಪ ಅವರಿಗೆಪ್ರದಾನ ಮಾಡಿ ಆಶೀರ್ವಚನ ನೀಡಿದರು. ಪತ್ರಿಕೆಗಳು ಸಮಾಜವನ್ನು ಸುಧಾರಿಸುವ ಕಾವ್ಯವನ್ನು ಮಾಡುವುದರ ಜತೆಗೆ, ನಮ್ಮನ್ನು ತಿದ್ದಿ ತೀಡುವ ಕೆಲಸವನ್ನು ಮಾಡುತ್ತದೆ. ಮನಸ್ಸಿನಲ್ಲಿ ಸೃಜನಶೀಲತೆ ಇರಲಿ. ಬೇರೆ ಯವರ ಬದಲು ನಮ್ಮನ್ನು ನಾವು ವಿಮರ್ಶೆ ಮಾಡೋಣ. ಭಾಷೆ ಕಲಿಯಲು ವಯಸ್ಸಿನ ಅಡ್ಡಿಯಿಲ್ಲ ಎಂದ ಅವರು, ಪ್ರಶಸ್ತಿ ಪುರಸ್ಕೃತರಾದ ಜಯರಾಮ ಉಡುಪರು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಾರ್ಷಿಕೋತ್ಸವ-2026 ಅನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಆಸ್ಟ್ರಿಕೋಸ್ ಎಐ, ಬೆಂಗಳೂರು ಇದರ ಸಿಇಒ ಮತ್ತು ಸಂಸ್ಥಾಪಕರಾದ ಡಾ. ಚಿನ್ಮಯಿ ಹೆಗ್ಡೆ ಮಾತನಾಡಿ, “ಶಿಕ್ಷಣ ಸಂಸ್ಥೆಯು ದೊಡ್ಡದೋ ಅಥವಾ ಚಿಕ್ಕದೋ ಎನ್ನುವುದು ಮುಖ್ಯವಲ್ಲ. ಪ್ರತಿಯೊಂದು ಸಂಸ್ಥೆಯು ಸಮಾಜಕ್ಕೆ ಮಹತ್ತರವಾದ ಕೊಡುಗೆಗಳನ್ನು ಸಲ್ಲಿಸುತ್ತದೆ. ಆ ಮೂಲಕ ಸಮಾಜದ ನಿರ್ಮಾಣದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಸಮಸ್ಯೆಗಳು ಅಥವಾ ಕಷ್ಟಗಳು ಬಂದಾಗ ಹೆದರಬಾರದು. ಸಮಸ್ಯೆಗಳು ನಮ್ಮನ್ನು ಬೆಳೆಸುತ್ತವೆ. ಸಾಧನೆಗೆ ಸಮಸ್ಯೆಗಳು ಅಥವಾ ಕಷ್ಟಗಳೇ ದಾರಿದೀಪವಾಗುತ್ತವೆ” ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಎಂಜೆ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾದ ಡಾ. ಎಸ್.ಎನ್. ಭಟ್ ಅವರು ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯು ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಸಾಧನೆ ಮಾಡಿರುವುದನ್ನು ಪ್ರಶಂಸಿದರು. ಅದರಲ್ಲೂ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು ಅಭಿನಂದಿಸಿದರು. “ಇಂದಿನ ವಿದ್ಯಾರ್ಥಿಗಳಿಗೆ ಜ್ಞಾನವು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಕಲಾಶ್ರೀ ಶಿಕ್ಷಣ ಪ್ರೇಮಿ ಬಳಗ ಗಂಗೊಳ್ಳಿ ಮತ್ತು ಗಂಗೊಳ್ಳಿ ವಲಯ ಅಂಗನವಾಡಿ ಕೇಂದ್ರಗಳ ಜಂಟಿ ಆಶ್ರಯದಲ್ಲಿ ಅಂಗನವಾಡಿ ಮಕ್ಕಳ ಹಬ್ಬ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದಾಕುಹಿತ್ಲು ಅಂಗನವಾಡಿ ಕೇಂದ್ರದ ವಠಾರದಲ್ಲಿ ನಡೆಯಿತು. ಡಾ. ಕಲಾಶ್ರೀ ಕಾರ್ಯಕ್ರಮವನ್ನು ಉದ್ಘಾಟಿಸಿ 30 ಪ್ರತಿಭಾನ್ವಿತ ಅಂಗನವಾಡಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಶುಭ ಹಾರೈಸಿದರು. ಕಲಾಶ್ರೀ ಶಿಕ್ಷಣ ಪ್ರೇಮಿ ಬಳಗ ಗಂಗೊಳ್ಳಿ ಇದರ ಅಧ್ಯಕ್ಷೆ ಸುಮಿತ್ರಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ರಥಬೀದಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಕಲಾ, ಉಡುಪಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ಫಿಲೋಮಿನಾ ಫೆರ್ನಾಂಡಿಸ್, ಗಂಗೊಳ್ಳಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಗೋಪಾಲ ಬಿಲ್ಲವ, ಜಿ.ಈಶ್ವರ, ಶೋಭಾ ಎಸ್.ಕೆ., ಶೇಷಮ್ಮ, ಕಮಲ, ರೇಖಾ ಖಾರ್ವಿ, ಸಂಗೀತಾ ಬಿ., ಸಹನಾ, ನಿಖಿತಾ, ಅಂಗನವಾಡಿ ಸಹಾಯಕಿಯರು ಮೊದಲಾವದರು ಉಪಸ್ಥಿತರಿದ್ದರು. ಸುಮಿತ್ರಾ ಕಾರ್ಯಕ್ರಮ ನಿರ್ವಹಿಸಿದರು. ರೇಖಾ ಖಾರ್ವಿ ವಂದಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಈ ವರ್ಷದ ವಿಶ್ವವಿದ್ಯಾನಿಲಯ ಮಟ್ಟದ ಅಂತಿಮ ಪರೀಕ್ಷೆಗಳಲ್ಲಿ ಗಮನಾರ್ಹ ಸಾಧನೆ ಮೆರೆದಿದ್ದು ಪದವಿ ವಿಭಾಗದಲ್ಲಿ 3 ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ 9 ರ‍್ಯಾಂಕ್‌ಗಳೊಂದಿಗೆ ಒಟ್ಟು 12 ರ‍್ಯಾಂಕ್‌ಗಳನ್ನು ಗಳಿಸಿದ್ದಾರೆ. ಜುಲೈ 2024ರಲ್ಲಿ ನಡೆದ ಪದವಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ರೋಡ್ರಿಗಸ್ ಪ್ರಣೀಲ್ ಮೆಲ್ವಿನ್ ಪ್ರಥಮ ರ‍್ಯಾಂಕ್‌ ಪಡೆದು ವಿಶ್ವವಿದ್ಯಾನಿಲಯ ಟಾಪರ್ ಆಗಿ ಹೊರಹೊಮ್ಮಿದ್ದು, ಪ್ರತಿಷ್ಠಿತ ಸೀತಾರಾಮ ಜಿಂದಾಲ್ ಗೋಲ್ಡ್ ಮೆಡಲ್‌ಗೆ ಭಾಜನರಾಗಿದ್ದಾರೆ. ಜೊತೆಗೆ ಅಕ್ಷತಾ ಪಿ. 7ನೇ ರ್ಯಾಂಕ್‌ ಮತ್ತು ದೀಕ್ಷಾ ಬಿ 10ನೇ ರ‍್ಯಾಂಕ್‌ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಸ್ನಾತಕೋತ್ತರ ವಿಭಾಗದ ಎಂ.ಡಿ. ಇನ್ ಕ್ಲಿನಿಕಲ್ ನ್ಯಾಚುರೋಪಥಿಯಲ್ಲಿ ಡಾ. ಶಾಲಿನಿ ಪಿ.ವೈ ಪ್ರಥಮ ರ‍್ಯಾಂಕ್‌ ಪಡೆದಿದ್ದು, ಡಾ. ಗ್ರೀಷ್ಮಾ ವಿವೇಕ್ ಆಳ್ವ ದ್ವಿತೀಯ ರ‍್ಯಾಂಕ್‌ ಹಾಗೂ ಡಾ. ಶ್ರದ್ಧಾ ಎಂ.ಕೆ 9ನೇ ರ‍್ಯಾಂಕ್‌ ಗಳಿಸಿದ್ದಾರೆ. ಎಂ.ಡಿ. ಇನ್ ಕ್ಲಿನಿಕಲ್ ಯೋಗ ವಿಭಾಗದಲ್ಲಿ ಡಾ.…

Read More