Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಸುನಿಲ್ ಹೆಚ್. ಜಿ. ಬೈಂದೂರು. | ಕುಂದಾಪ್ರ ಡಾಟ್ ಕಾಂ ದೇಶಕ್ಕೆ ಮಗ್ಗುಲ ಮುಳ್ಳಾಗಿದ್ದ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿರುವ ನಮ್ಮ ವೀರ ಯೋಧರ ಧೈರ್ಯ, ಶೌರ್ಯ ಶ್ಲಾಘನಾರ್ಹ. ಇದು ಕೇವಲ ಪಾಕಿಸ್ತಾನದ ನೆಲದಲ್ಲಿ ನಿಂತು ಉಗ್ರರೊಂದಿಗೆ ನಡೆಸಿದ ಹೋರಾಟವಲ್ಲ. ಬದಲಿಗೆ ಭಾರತ ದೇಶದ ಶಾಂತಿಭಂಗಕ್ಕೆ ಕ್ಷಣ ಕ್ಷಣವೂ ಹವಣಿಸುತ್ತಿರುವ ಉಗ್ರರು ಹಾಗೂ ವಿರೋಧಿ ರಾಷ್ಟ್ರಗಳಿಗೆ ನೀಡಿದ ಎಚ್ಚರಿಕೆಯ ಸಂದೇಶ. ದೇಶದ ಪ್ರಧಾನಿ ಈ ಐತಿಹಾಸಿಕ ನಿರ್ಣಯವನ್ನು ಕೈಗೊಂಡು ನಮ್ಮ ಸೈನಿಕರು ಹಾಗೂ ದೇಶವಾಸಿಗಳಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಭಾರತೀಯರಾದ ನಾವು ಹರ್ಪೋದ್ಘಾರದಲ್ಲಿ ಮುಳುಗಿದರಷ್ಟೇ ಸಾಕೆ? ವರ್ಷವಿಡಿ ನಮಗಾಗಿ ಪ್ರಾಣ ಒತ್ತೆ ಇಟ್ಟು ಹೋರಾಡುವ ನಮ್ಮ ಹೆಮ್ಮೆಯ ಸೈನಿಕರ ರಕ್ಷಣೆಗೆ ಅಗತ್ಯ ಸೌಕರ್ಯಗಳು ದೊರೆಯುವಂತೆ ನೋಡಿಕೊಳ್ಳುವುದೂ ಕೂಡ ಭಾರತೀಯ ಪ್ರಜೆಯಾಗಿ ನಮ್ಮ ಕರ್ತವ್ಯವಲ್ಲವೇ? ಹೌದು ಇದೇ ಸಕಾಲ. ನಮಗಾಗಿ ಪ್ರಾಣದ ಹಂಗು ತೊರೆದು ಹೋರಾಡುವ ಸೈನಿಕರ ನೆರವಿಗಾಗಿ ಕೇಂದ್ರ ರಕ್ಷಣಾ ಇಲಾಖೆ ಆರಂಭಿಸಿರುವ ’ಆರ್ಮಿ ವೆಲ್ಫೇರ್ ಫಂಡ್’ಗೆ ಒಂದಿಷ್ಟು…

Read More

ಸಾಲಮಾಡಿ ಶೌಚಾಲಯ ಕಟ್ಟಿದ್ದರೂ ಅನುದಾನ ನೀಡಲು ನಾಡ ಪಂಚಾಯತ್ ಹಿಂದೇಟು ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ತಾಲೂಕಿನಲ್ಲಿ ಮುಖವೆತ್ತರಿಸಿ ನೋಡಬೇಕಾದ ವಸತಿ ಸಮಚ್ಛಯಗಳು ತಲೆಯೆತ್ತುವ ಮಟ್ಟಿಗೆ ಆರ್ಥಿಕ ಪರಿಸ್ಥಿತಿಗಳು ಸುಧಾರಿಸುತ್ತಿರುವ ಹೊತ್ತಿಗೆ, ಹುಲ್ಲಿನ ಗುಡಿಸಿಲೊಳಕ್ಕೆ ಮಳೆ ಬಿಸಿಲೆನ್ನದೆ ಬದುಕು ಕಂಡುಕೊಂಡಿದೆ ನಾಡ ಗ್ರಾಪಂ ವ್ಯಾಪ್ತಿಯ ಪಡುಕೋಣೆ ಹಡವು ನರಸಿಂಹ ದೇವಾಡಿಗರ ಕುಟುಂಬ. ಕಳೆದ ಎಪ್ಪತ್ತು ವರ್ಷಗಳಿಂದ ಹಡವು ನರಸಿಂಹ ದೇವಾಡಿಗ ಅವರು ಮಳಿ ಹುಲ್ಲು ಸೂರಿನಡಿಯಲ್ಲಿ ಪತ್ನಿ ಬಾಬಿ ದೇವಾಡಿಗ ಪುತ್ರಿ ಸಮುನಾ ಜೊತೆ ವಾಸ ಮಾಡುತ್ತಿದ್ದಾರೆ. ವಾಸಿಸುವ ಮನೆ, ಹಟ್ಟಿ, ಸ್ನಾನದ ಮನೆ ಎಲ್ಲವೂ ಮಳಿ ಹುಲ್ಲಿಂದ ನಿರ್ಮಿಸಲಾಗಿದೆ. ಕಳೆದ ಒಂದು ವರ್ಷದ ಹಿಂದೆ ವಿದ್ಯುತ್ ಬಂದಿದ್ದು ಬಿಟ್ಟರೆ ಮತ್ತೇನು ಪ್ರಗತಿ ಸಾಧಿಸಿಲ್ಲ. ಮನೆ ಗೋಡೆಯಲ್ಲಿ ಹುತ್ತ ಕಟ್ಟಿದೆ. ಒಳಗಡೆ ಇಲಿ ಹೆಗ್ಗಣಗಳು ತೋಡಿದ ಗುಳಿಗಳಿವೆ. ಹಾವುಗಳಂತೂ ಈ ಮನೆಯ ಖಾಯಂ ಸದಸ್ಯರು. ಮಳೆ ಬಂದರೆ ನೀರೆಲ್ಲಾ ಒಳಗೆ. ಜೋರು ಮಳೆ…

Read More

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ಲೇಖನ ಗಣೇಶನ ಹಬ್ಬವೆಂದರೆ ಹಾಗೆ. ಅದು ಸರ್ವರ ಸಂಭ್ರಮ. ನಾನಾ ರೂಪದಲ್ಲಿ ಪೂಜಿಸಲ್ಪಡುವ ಗಣನಾಯಕನೂ ಅಷ್ಟೇ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರಿಗೂ ಪ್ರೀತಿ. ನಿರ್ವಿಕಾರ ಮೂರ್ತಿಯನ್ನು ಬಗೆ ಬಗೆಯಲ್ಲಿ ಕಾಣುವ ಸಂಭ್ರಮ. ಚಿತ್ರ ಕಲಾವಿದೆ, 11ನೇ ತರಗತಿಯ ಕಾಮರ್ಸ್ ವಿದ್ಯಾರ್ಥಿನಿ ಶ್ರೇಯಾಳ ಗಣಪತಿಯ ಪ್ರೀತಿಯೂ ಅಂತಹದ್ದೇ. ಪ್ರತಿ ಚೌತಿಯ ಸಮಯದಲ್ಲಿಯೂ ವಿಘ್ನನಿವಾರಕನನ್ನು ವಿವಿಧ ರೂಪದಲ್ಲಿ ಚಿತ್ರಿಸುತ್ತಿದ್ದ ಆಕೆ ಈ ಭಾರಿ ಗಣೇಶ ಹಬ್ಬದ ಸಲುವಾಗಿ ಆಂಗ್ಲ ಭಾಷೆಯ 26 ವರ್ಣಮಾಲೆಗನುಸಾರವಾಗಿ A ಯಿಂದ Z ಅಕ್ಷರ ಆರಂಭಗೊಳ್ಳುವ ಗಣಪತಿಯ ಹೆಸರುಗಳನ್ನು ಕಲೆಹಾಕಿ ಹೆಸರಿಗೆ ತಕ್ಕಂತೆ 26 ರೂಪಗಳಲ್ಲಿ ಗಣಪತಿಯನ್ನು ಚಿತ್ರಿಸಿದ್ದಾಳೆ. A for Apple, B for bat, C for Cat.. ಅಂತಿದ್ದವರು ಇನ್ನು ಮುಂದೆ ಚೌತಿಯ ಸಮಯದಲ್ಲಾದರೂ A for Akhuratha, B for Buddhipriya, C for Chaturbhuj, D for Devantakanashakarin…ಅನ್ನಬಹುದೆನ್ನಿ ಗಣಪತಿಯ ಪ್ರೀತಿ: ಶ್ರೇಯಾ ನಾಲ್ಕನೆ ತರಗತಿಯಲ್ಲಿರುವಾಗಿನಿಂದ ಪ್ರತಿ ಚೌತಿಗೂ…

Read More

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಆ ಕಾರ್ಮಿಕರಿಗೆ ತಾಯಿಯನ್ನು ಅಗಲಿದ ದುಃಖ. ಕೊನೆ ಪಕ್ಷ ಆಕೆಯ ಮುಖವನ್ನಾದರೂ ನೋಡಲು ಸಿಗುತ್ತದೋ ಇಲ್ಲವೋ ಎಂಬ ಆತಂಕ. ಕೈಯಲ್ಲಿದ್ದ ಹಣವೆಲ್ಲ ಖರ್ಚಾಗಿ ಊರಿಗೆ ತೆರಳಲು ಏನೂ ಊಳಿದಿಲ್ಲ. ಕಡೆಗೆ ದುಡ್ಡು ಹೊಂದಿಸಿಕೊಂಡರೂ ತೆರಳಲು ಬಸ್ಸಿಲ್ಲ. ರಾಷ್ಟ್ರವ್ಯಾಪಿ ನಡೆದ ಕಾರ್ಮಿಕ ಸಂಘಟನೆಗಳ ಮುಷ್ಕರದ ಕರಾಳ ಮುಖವೊಂದು ಕುಂದಾಪರದಲ್ಲಿ ಅನಾವರಣಗೊಂಡ ಪರಿಯಿದು. ತಾಯಿಯನ್ನು ಕಳೆದುಕೊಂಡ ಕಾರ್ಮಿಕ ಹಾಗೂ ಆತನ ಸಂಬಂಧಿಗಳೇ ಮುಷ್ಕರದಿಂದ ಅನುಭವಿಸಿದ ಪರಿಪಾಟಲು ಹೇಳತೀರದು. ನಂದಿಕೂರಿನಿಂದ ಕುಮಟಾ ಬಳಿಯ ಹಳ್ಳಿಯೊಂದಕ್ಕೆ ತೆರಳಬೇಕಿದ್ದ ಕಾರ್ಮಿಕರು ಬಸ್ಸಿಲ್ಲದ್ದರಿಂದ ಕುಂದಾಪುರದವರೆಗೆ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಂದಿಳಿದಿದ್ದರು. ಎಕ್ಸ್‌ಪ್ರೆಸ್ ರೈಲಾಗಿದ್ದರಿಂದ ಕುಂದಾಪುರದವರೆಗಷ್ಟೇ ತೆರಳಲು ಹಣವಿದ್ದುದರಿಂದ ಅಲ್ಲಿಯ ತನಕವಷ್ಟೇ ಟಿಕೇಟ್ ಮಾಡಿದ್ದರು. ಅದೇ ರೈಲಿನಲ್ಲಿ ಕುಮಟಾ ವರೆಗೆ ತೆರಳಬಹುದಿದ್ದರೂ ಸಹ ನೋವಿನಲ್ಲೂ ಕಾನೂನು ಪಾಲಿಸುವುದನ್ನು ಆ ಕಾರ್ಮಿಕರು ಮರೆತಿರಲಿಲ್ಲ. ಬಸ್ಸಿಗಾಗಿ ಹೊಂದಿಕೊಂಡಿದ್ದ ಹಣವೂ ಖರ್ಚಾಗಿ ಹೋಗಿತ್ತು. ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ನಡೆದು ಶಾಸ್ತ್ರೀವೃತ್ತದ ತನಕ ಬಂದರೂ ಮುಷ್ಕರದ ಹಿನ್ನೆಲೆಯಲ್ಲಿ ಯಾವೊಂದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಕುಂದಾಪುರ ಪರಿಸರದ ಶತಾಯುಷಿ ಅಜ್ಜಿ ಎಂದೇ ಖ್ಯಾತರಾದ ಶತಾಯುಷಿ ನೇತ್ರಾವತಿಯಮ್ಮ (101) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸಾಲಿಗ್ರಾಮದಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಸಾಲಿಗ್ರಾಮದ ವಾಣಿವಿಲಾಸಿನಿ ಸಂಸ್ಕೃತ ಪಾಠಶಾಲೆಯ ಪ್ರಾಚಾರ್ಯರಾಗಿದ್ದ, ವೇದಮೂರ್ತಿ ದಿವಂಗತ ರಾಮಚಂದ್ರ ಶಾಸ್ತ್ರಿಯವರ ಧರ್ಮಪತ್ನಿಯಾಗಿರುವ ಇವರು, ಓರ್ವ ಪುತ್ರ, ನಾಲ್ವರು ಪುತ್ರಿಯರು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಜತೆ ಮೋಕ್ತೇಸರರಾದ ಕೋಡಿ ಶ್ರೀನಿವಾಸ ಶೆಣೈ (76 ) ಅಲ್ಪಕಾಲದ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಅ.10ರಂದು ನಿಧನರಾದರು. 1982ರಿಂದ ಸುಮಾರು 34 ವರ್ಷಗಳ ಕಾಲ ಕುಂದಾಪುರದ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಜತೆ ಮೋಕ್ತೇಸರರಾಗಿ ಸೇವೆ ಸಲ್ಲಿಸುತ್ತಿದ್ದರು. ಕುಂದಾಪುರದ ಶ್ರೀ ವೆಂಕಟರಮಣ ದೇವ ಎಜುಕೇಶನಲ್ ಟ್ರಸ್ಟ್‌ನ ಸ್ಥಾಪಕ ಸದಸ್ಯರಾಗಿ, ಪ್ರಸ್ತುತ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕೋಡಿ ಬ್ಯಾರೀಸ್ ಶಿಕ್ಷಣ ಸಂಸ್ಥೆಯ ಸದಸ್ಯರಾಗಿಯೂ ಶಿಕ್ಷಣ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ್ದರು. ಕೃಷಿ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಪರಿಸರದಲ್ಲಿ ಜನಾನುರಾಗಿಯಾಗಿದ್ದರು. ಇವರ ನಿಧನದ ಹಿನ್ನಲೆಯಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ರಜೆ ಘೋಷಿಸಿ ಶೋಕಾಚರಣೆ ನಡೆಸಿದರು. ಕೋಡಿ ಶ್ರೀನಿವಾಸ ಶೆಣೈ ಅವರ ನಿಧನಕ್ಕೆ ಸಮಾಜದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಪತ್ನಿ, ಒರ್ವ ಪುತ್ರ,, ಮೆಲಕಾ ಮಣಿಪಾಲ ಮೆಡಿಕಲ್ ಕಾಲೇಜಿನ…

Read More

ಸುನಿಲ್ ಹೆಚ್. ಜಿ ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ತನ್ನ ಮೇರು ಕಂಠದ ಮೂಲಕ ಸುಮಧುರವಾಗಿ ಆ ಹುಡುಗಿ ಹಾಡುತ್ತಿದ್ದರೇ ಅಲ್ಲಿದ್ದ ಸಂಗೀತಕಾರರು ನಿಬ್ಬೆರಗಾಗಿ ಕೇಳುತ್ತಿದ್ದರು. ನೆರೆದಿದ್ದ ಪ್ರೇಕ್ಷಕರಿಂದ ಸಾಲು ಸಾಲು ಕರತಾಡನ. ತನ್ನ ಅಪ್ರತಿಮ ಕಂಠಸಿರಿಯ ಮೂಲಕವೇ ‘&ಟಿವಿ’ ಪ್ರಸಿದ್ಧ ಹಿಂದಿ ವಾಹಿನಿಯಲ್ಲಿ ನಡೆಯುತ್ತಿರುವ ‘ದಿ ವಾಯ್ಸ್ ಇಂಡಿಯಾ ಕಿಡ್ಸ್’ ರಿಯಾಲಿಟಿ ಶೋಗೆ ಆಯ್ಕೆಗೊಂಡು ಅಸಂಖ್ಯಾತ ಪ್ರೇಕ್ಷಕರ ಮನಗೆದ್ದಿದ್ದಾಳೆ ಕುಂದಾಪುರ ಮೂಲದ ಪೋರಿ ಸಾನ್ವಿ ವಿ. ಶೆಟ್ಟಿ ಬೆಂಗಳೂರಿನ ಆರ್.ಎನ್.ಎಸ್ ವಿದ್ಯಾನಿಕೇತನ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ಸಾನ್ವಿ, ವಿನಯ್ ಶೆಟ್ಟಿ ಹಾಗೂ ಪ್ರೀತಿ ದಂಪತಿಗಳ ಈರ್ವರು ಮಕ್ಕಳಲ್ಲಿ ಹಿರಿಯವಳು. ತಂಗಿ ಆರ್ನಾಳೊಂದಿಗೆ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆಕೆಯ ತಾಯಿ ಶಂಕರನಾರಾಯಣದವರಾದರೇ, ತಂದೆ ಬ್ರಹ್ಮಾವರದ ಪಡುಬೆಟ್ಟಿನವರು. ಸಾನ್ವಿ ಕುಂದಾಪುರ ವಿನಯ ಆಸ್ಪತ್ರೆಯ ಖ್ಯಾತ ಹೃದಯತಜ್ಞ ಕಿಶೋರ್ ಶೆಟ್ಟಿ ಅವರ ಸೊಸೆ. ಆಕೆ ಪುಟ್ಟ ಮಗುವಿದ್ದಾಗಲಿಂದಲೂ ಸಂಗೀತವೆಂದರೆ ಪ್ರೀತಿ. ಹಾಡು ಕೇಳಿಸಿದರಷ್ಟೇ ಊಟ, ನಿದ್ರೆ. ಯಾವುದಾದರೂ ಹಾಡು ಕೇಳಿದರೇ ಅದೇ ದಾಟಿಯಲ್ಲಿ ಹಾಡುವ…

Read More

ಡಾ. ಶುಭಾ ಮರವಂತೆ. ಕುಂದಾಪ್ರ ಡಾಟ್ ಕಾಂ ಅಂಕಣ. ಮೀನು ಹೇಳಿತು ನೀರಿಗೆ; ಓ ನೀರೇ, ನೀನು ನನ್ನ ಕಣ್ಣೀರನ್ನು ಎಂದೆಂದೂ ಕಾಣಲಾರೆ. ನಿನ್ನೊಂದಿಗೇ ನಾನಿದ್ದರೂ ನನ್ನ ಕಣ್ಣೀರು ನಿನಗೆ ಕಾಣುವುದೆ? ನೀರು ಉತ್ತರಿಸಿತು: ಆದರೆ ನಾನು ನಿನ್ನ ಕಣ್ಣೀರನ್ನು ಅನುಭವಿಸಬಲ್ಲೆ. ಏಕೆಂದರೆ ನೀನು ನನ್ನ ಹೃದಯದಲ್ಲಿದ್ದಿಯೆ ಇದು ’ಸ್ನೇಹ ಸಂವೇದ’ಗೆ ಬಂದ ಒಂದು ಪುಟ್ಟ ಎಸ್.ಎಂ.ಎಸ್. ನೀರಿಗೂ ಮೀನಿಗೂ, ಭೂಮಿಗೂ ಬಾನಿಗೂ, ನಮಗೂ ನಿಮಗೂ ಶಬ್ದಗಳಿಲ್ಲದೆ ಅರ್ಥವಾಗುವ ಸಂವೇದನೆಯಿದು. ಮಾತು ಮೀರಿ ಬರುವ ಅನುಭವವಿದು. ಅದೇ ಸ್ನೇಹ. ಹೃದಯದ ಭಾಷೆ. ಸ್ನೇಹಿತರಿಲ್ಲದ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವೆ? ಖಂಡಿತ ಇಲ್ಲ. ಆಬಾಲ ವೃದ್ಧರಿಗೂ ತಮ್ಮದೇ ಸ್ನೇಹ ಬಳಗಬೇಕು. LKG, UKG age ಅಲ್ಲೂ ಅವರದ್ದೇ ಒಂದು ಸ್ನೇಹಕೂಟ. ಒಂದೇ ಚಾಕಲೇಟನ್ನು ಅಂಗಿಯ ಮರೆಯಲ್ಲಿ ಕಡಿದು ಅರ್ಧ ಅರ್ಧ ತಿನ್ನುವ ಸಂಭ್ರಮ. ಜಾರು ಬಂಡೆಯಲ್ಲಿ ಜೊತೆಯಾಗಿ ಜೀಕಿದ ಅನುಭವ. ಧೂಳಿನಲ್ಲಿ ಹೊರಳಿ, ತಲೆಯ ಮೇಲೆಲ್ಲಾ ಮಣ್ಣು ಸುರಿದು ಸುಖಿಸಿದ ಸುಖ.. ಒಂದಾ, ಎರಡಾ?…

Read More

ಕುಂದಾಪ್ರ ಡಾಟ್ ಕಾಂ ವರದಿ. ಬೈಂದೂರು: ನೂರಾರು ವರ್ಷಗಳ ಇತಿಹಾಸ ಹೊಂದಿರುವ, ಐತಿಹಾಸಿಕ ಕಂಬಳ ನಡೆಯುವ ತಗ್ಗರ್ಸೆ ಕಂಠದಮನೆ ಕುಟುಂಬಸ್ಥರಿಗೆ ಸೇರಿದ ಕಂಬಳಗದ್ದೆಯಲ್ಲಿ ಪ್ರತಿವರ್ಷದಂತೆ ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದು, ನಾಟಿ ಕಾರ್ಯ ಪೂರ್ಣಗೊಂಡಿದೆ. ಕಂಠದ ಮನೆಯ ಕುಂಟುಂಬಿಕರಲ್ಲಿ ಹಿರಿಯವರಾದ ಟಿ. ನಾರಾಯಣ ಹೆಗ್ಡೆ ಅವರ ಮಾರ್ಗದರ್ಶನಲ್ಲಿ ನೂರಾರು ಮಂದಿ ಕೃಷಿ ಕಾರ್ಮಿಕರಿಂದ ವಾಡಿಕೆಯಂತೆ ಒಂದೇ ದಿನಲ್ಲಿ ಕೃಷಿ ಕಾರ್ಯ ಪೂರ್ಣಗೊಂಡಿದೆ. ಜಿಪಂ ಸದಸ್ಯ ಬಾಬು ಶೆಟ್ಟಿ, ಗ್ರಾಪಂ ಸದಸ್ಯ ಬಾಲಕೃಷ್ಣ ಹೆಗ್ಡೆ, ಉದಯ ಹೆಗ್ಡೆ, ಅರ್ಜುನ ಹೆಗ್ಡೆ, ಮೊದಲಾದವರು ಸಾಂಪ್ರದಾಯಿಕ ಕೃಷಿ ಕಾರ್ಯಕ್ಕೆ ಚಾಲನೆ ನೀಡುವ ವೇಳೆಗೆ ಉಪಸ್ಥಿತರಿದ್ದರು. ಕುಂದಾಪ್ರ ಡಾಟ್ ಕಾಂ. ಸಾಂಪ್ರದಾಯಿಕ ಕೃಷಿ ಕಾರ್ಯ ಕಂಠದಮನೆಯ ಎದುರೇ 5.14 ಎಕರೆ ವಿಸ್ತೀರ್ಣವಾದ ಕಂಬಳಗದ್ದೆ ಇದ್ದು, ಇದು ದೇವರಗದ್ದೆ ಎಂಬ ನಂಬಿಕೆ ಸ್ಥಳೀಯರಲ್ಲಿದೆ. ಇಲ್ಲಿರುವ ವೀರಗಲ್ಲು, ಶಾಸನಗಳು ಇದು ಪುರಾತನವಾದುದು ಎಂಬುದಕ್ಕೆ ಪುಷ್ಠಿ ನೀಡುತ್ತದೆ. ಇಂದಿಗೂ ಕೂಡ ಇಲ್ಲಿ ಹಳೆಯ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತಿದ್ದು ಮಳೆಗಾಲ ಆರಂಭವಾಗುತ್ತಿದ್ದಂತೆ ನಾಟಿ ಕಾರ್ಯಕ್ಕೆ…

Read More