ಕುಂದಾಪುರ: ಇಲ್ಲಿನ ಒಂಭತ್ತು ದಂಡಿಗೆ ನಿವಾಸಿ ದಿ. ಶಂಕರ ಬೀರೆಯವರ ಪುತ್ರ ದಿನೇಶ್ ಬೀರೆ (೪೭ ವ.) ಹೃದಯಾಘಾತದಿಂದ ಅ. ೦೮ರಂದು ಕುಂದಾಪುರದಲ್ಲಿ ನಿಧನರಾದರು. ಕುಂದಾಪುರದಲ್ಲಿ ಟ್ಯಾಕ್ಸಿಯನ್ನು ಹೊಂದಿದ್ದ ಮೃತರು ಪತ್ನಿ, ಇಬ್ಬರೂ ಪುತ್ರಿಯರನ್ನು ಅಗಲಿದ್ದಾರೆ.
Author: ಸುನಿಲ್ ಹೆಚ್. ಜಿ. ಬೈಂದೂರು
ಗಂಗೊಳ್ಳಿ: ಗಂಗೊಳ್ಳಿಯ ಶ್ರೀ ವೀರೇಶ್ವರ ದೀಪೋತ್ಸವ ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ಅಶೋಕ ಪೂಜಾರಿ ಆಯ್ಕೆಯಾಗಿದ್ದಾರೆ. ಇತ್ತೀಚಿಗೆ ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ಜರಗಿದ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ಇವರನ್ನು ಆಯ್ಕೆ ಮಾಡಲಾಯಿತು. ಸುಧೀರ ಪಂಡಿತ್ (ಗೌರವಾಧ್ಯಕ್ಷ), ವೇದಮೂರ್ತಿ ಜಿ.ಲಕ್ಷ್ಮೀನಾರಾಯಣ ಭಟ್ (ಮಾರ್ಗದರ್ಶಕರು), ಕೃಷ್ಣ ಪೂಜಾರಿ ಹೆಮ್ಮಾಡಿಮನೆ (ಪ್ರಧಾನ ಕಾರ್ಯದರ್ಶಿ), ಪ್ರವೀಣ ಗಾಣಿಗ, ಜಿ.ರಾಮ ಖಾರ್ವಿ ಗುಡ್ಡೆಕೇರಿ, ಮಹೇಶ ಎಸ್‌ಆರ್‌ಜಿ, ಶಂಕರ ಪೂಜಾರಿ, ಗಜೇಂದ್ರ ಗಾಣಿಗ, ಲಕ್ಷ್ಮಣ ಪಿ.ಖಾರ್ವಿ ಗುಡ್ಡೆಕೇರಿ (ಉಪಾಧ್ಯಕ್ಷರು), ರಾಜ ಟಿ.ಎಸ್. (ಕಾರ್ಯದರ್ಶಿ), ಗೋಪಾಲ ಖಾರ್ವಿ ದಾವನಮನೆ (ಕೋಶಾಧಿಕಾರಿ), ಶೇಖರ ಜಿ. (ಲೆಕ್ಕ ಪರಿಶೋಧಕ), ಎಚ್.ಎಸ್.ಚಿಕ್ಕಯ್ಯ ಪೂಜಾರಿ (ಸಲಹೆಗಾರ), ಸತೀಶ ಜಿ., ದಿನೇಶ ಪೂಜಾರಿ ಕೋಟೆಬೈಲು ಮನೆ, ಎಂ.ಪಿ. ಮಣಿ ಖಾರ್ವಿ, ಗುಡ್ಡೆ ಸಂತೋಷ ಖಾರ್ವಿ, ನಾಗರಾಜ ಗಾಣಿಗ, ನಾರಾಯಣ ಖಾರ್ವಿ ದಾವನಮನೆ, ಶ್ರೀನಿವಾಸ ಖಾರ್ವಿ ಹೊಳೆಬದಿ, ಗುಡ್ಡೆ ಹರೀಶ ಖಾರ್ವಿ, ನವೀನ ಜಿ., ಶ್ರೀನಿವಾಸ ಖಾರ್ವಿ ದಾವನಮನೆ, ನಾಗರಾಜ ಖಾರ್ವಿ ದಾವನಮನೆ, ರಘುವೀರ ಕೆ., ಉತ್ತ…
ಗಂಗೊಳ್ಳಿ: ಕಳೆದ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಗಂಗೊಳ್ಳಿ ಮೆಸ್ಕಾಂ ಸಬ್‌ಸ್ಟೇಶನ್ ಆರಂಭಕ್ಕೆ ಒತ್ತಾಯಿಸಿ ಹೋರಾಟ ನಡೆಸಲು ಸಬ್‌ಸ್ಟೇಶನ್ ವ್ಯಾಪ್ತಿಯ ನಾಗರಿಕರು ನಿರ್ಧರಿಸಿದ್ದಾರೆ. ಇತ್ತೀಚಿಗೆ ಗುಜ್ಜಾಡಿಯ ಶ್ರೀ ನಾರಾಯಣಗುರು ಕಲ್ಯಾಣ ಮಂದಿರದಲ್ಲಿ ಸಭೆ ಸೇರಿದ ಗಂಗೊಳ್ಳಿ, ಗುಜ್ಜಾಡಿ ಗ್ರಾಮದ ಪ್ರಮುಖರು ಈ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ. ಉದ್ಯಮಿ ರಾಜೇಂದ್ರ ಸುವರ್ಣ ಅಧ್ಯಕ್ಷತೆಯಲ್ಲಿ ಗಂಗೊಳ್ಳಿ ಮೆಸ್ಕಾಂ ಸಬ್‌ಸ್ಟೇಶನ್ ಹೋರಾಟ ಸಮಿತಿಯನ್ನು ರಚಿಸಲಾಗಿದ್ದು, ಉದ್ಯಮಿಗಳಾದ ಎಚ್.ಗಣೇಶ ಕಾಮತ್, ಎಂ.ಎಂ.ಸುವರ್ಣ ಹಾಗೂ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಗೌರವಾಧ್ಯಕ್ಷರಾಗಿ, ರಾಮನಾಥ ಚಿತ್ತಾಲ್ ಗುಜ್ಜಾಡಿ ಮತ್ತು ಬಿ.ಗಣೇಶ ಶೆಣೈ ಕಾರ್ಯದರ್ಶಿಯಾಗಿ, ಮಾಜಿ ತಾಪಂ ಸದಸ್ಯ ಸುರೇಂದ್ರ ಖಾರ್ವಿ ಗಂಗೊಳ್ಳಿ ಮತ್ತು ರವೀಂದ್ರ ಪಟೇಲ್ ಜೊತೆ ಕಾರ್ಯದರ್ಶಿಯಾಗಿ, ಗಂಗೊಳ್ಳಿ ಸಬ್ ಸ್ಟೇಶನ್ ವ್ಯಾಪ್ತಿಗೆ ಬರುವ ಗ್ರಾಮಗಳ ಪ್ರಮುಖ ಕೈಗಾರಿಕೋದ್ಯಮಿಗಳು ಸಮಿತಿಯ ಉಪಾಧ್ಯಕ್ಷರಾಗಿ ಮತ್ತು ಎಲ್ಲಾ ಗ್ರಾಪಂ.ಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರುಗಳು ಸಮಿತಿಯ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ. ಸಬ್‌ಸ್ಟೇಶನ್‌ನ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಅರಣ್ಯ ಇಲಾಖೆ…
ಬೈಂದೂರು, ಅ.09: ಇಂದು ಬೈಂದೂರಿನ ಸಂತೆಯ ಗೌಜಿಗಿಂತ ತಗ್ಗರ್ಸೆ ಶಾಲಾ ಆವರಣದಲ್ಲಿನ ಸಂತೆಯ ಗೌಜು ಜೋರಾಗಿತ್ತು. ಟೊಮೆಟೋ 20ರೂಪಾಯ್, ಆಲೂಗೆ ಬರೀ 15ರೂಪಾರ್, ಫ್ರೇಶ್ ಮೀನ್ ಇತ್ತ್ ತಕನಿ, ಊರ್ ಕೋಳಿ ಬೇಕಾ 1,000 ಕೊಡಿ, ಬಟ್ಟಿಗೆ ಇವತ್ ಮಾತ್ರ ಫುಲ್ ಡಿಸ್ಕೌಂಟ್ ಇತ್ತ್ ಕಾಣಿ, ಬನ್ನಿ ಸರ್ 2ರೂಪಾಯಾಗ್ ನಿಮ್ ತೂಕ ಕಾಣ್ಲಾಕ್, ಹೊಯ್ ಒಂದು ಆಟ ಆಡಿ ಹೋಯ್ನಿ ಬರೀ ಹತ್ತೇ ರೂಪಾಯಿ… ಹೀಗೆ ಅಲ್ಲಿನ ವ್ಯಾಪಾರಿಗಳು ಕೂಗಿ ಕರೆಯುತ್ತಿದ್ದರೇ ಗ್ರಾಹಕರು ತಮಗೆ ಬೇಕಾದ್ದನ್ನು ಕೊಂಡು ತೆರಳುತ್ತಿದ್ದರು. ಅಸಲಿಗೆ ಅಲ್ಲಿದ್ದವರ್ಯಾರೂ ವ್ಯಾಪಾರಿಗಳೂ ಆಗಿರಲಿಲ್ಲ, ಕೊಳ್ಳಲು ಹೋದವರು ಅಲ್ಲಿನ ಗ್ರಾಹಕರೂ ಆಗಿರಲಿಲ್ಲ, ಅಷ್ಟೇ ಏಕೆ ಅದು ದಿನವೂ ಸಂತೆ ನಡೆಯುವ ಸ್ಥಳವೂ ಆಗಿರಲಿಲ್ಲ. ಆದರೆ ಈ ದಿನದ ಮಟ್ಟಿಗೆ ತಗ್ಗರ್ಸೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗಿನಿಂದಲೇ ಒಂದು ವಿಶೇಷ ಸಡಗರ ಆರಂಭಗೊಂಡಿತ್ತು. ಅಲ್ಲಿ ಅಕ್ಷರಶಃ ಸಂತೆಯ ವಾತಾವರಣ ನಿರ್ಮಾಣಗೊಂಡಿತ್ತು. ಆ ಹೊತ್ತಿಗೆ ಶಾಲೆಯ ಮಕ್ಕಳೆಲ್ಲ ವ್ಯಾಪಾರಿಗಳಾಗಿದ್ದರು. ಪೋಷಕರು, ಊರವರೆಲ್ಲ…
ಮತ್ತೆ ಬಂದಿದೆ ನಾಡು-ನುಡಿ-ಸಂಸ್ಕೃತಿಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಆಳ್ವಾಸ್ ನುಡಿಸಿರಿ. ಕಳೆದ 12ವರ್ಷಗಳಿಂದ ಮೂಡುಬಿದಿರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ವು ನಿರಂತರವಾಗಿ ನುಡಿಸಿರಿ ಸಂಘಟಿಸಿಕೊಂಡು ಬರುವ ಮೂಲಕ ನಾಡಿನಾದ್ಯಂತ ನಾಡು-ನುಡಿಯ ಎಚ್ಚರವನ್ನು, ಸಂಸ್ಕೃತಿ ಪ್ರೀತಿ-ಗೌರವಗಳನ್ನು ವೃದ್ಧಿಸಲು ತನ್ನದೇ ಆದ ಸೇವೆ ನೀಡುತ್ತಿದೆ. ಈ ಭಾರಿಯ ಕಾರ್ಯಕ್ರಮವು ನವೆಂಬರ್ 26, 27, 28 ಮತ್ತು 29ರಂದು ನಾಲ್ಕು ದಿನಗಳ ಕಾಲ ಮೂಡುಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ವಿಜೃಂಭಣೆಯಿಂದ ಜರುಗಲಿದೆ. ಆಳ್ವಾಸ್ ನುಡಿಸಿರಿ 2015ರ ಸರ್ವಾಧ್ಯಕ್ಷತೆಗೆ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ ಆಯ್ಕೆ. ರಾಮನಗರ ಜಿಲ್ಲೆಯ ಕನಕಪುರದಲ್ಲಿ ಜನಿಸಿದ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀಯವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ, ರೀಡರ್ ಆಗಿ, ಪ್ರೊಫೆಸರರಾಗಿ, ವಿಭಾಗ ನಿರ್ದೇಶಕರಾಗಿ ಕಲಾವಿಭಾಗದ ಡೀನ್ ಆಗಿ ಸುಮಾರು 40 ವರ್ಷಗಳ ಸೇವೆ ಸಲ್ಲಿಸಿರುವ ಹಿರಿಯ ಪ್ರಾಧ್ಯಾಪಕರು ಹಾಗೂ ಈ ಶತಮಾನದ ಹಿರಿಯ ವಿದ್ವಾಂಸರು. ಹಳೆಗನ್ನಡ ಸಾಹಿತ್ಯ, ವ್ಯಾಕರಣ, ಛಂದಸ್ಸು, ಅಲಂಕಾರ ಶಾಸ್ತ್ರ, ಸಾಹಿತ್ಯ ಚರಿತ್ರೆ, ಗ್ರಂಥಸಂಪಾದನೆ, ನಿಘಂಟು…
ಕುಂದಾಪುರ: ಕೋಟೇಶ್ವರದ ಶ್ರೀ ಪಟ್ಟಾಭಿ ರಾಮಚಂದ್ರ ಕಲ್ಯಾಣ ಮಂದಿರದಲ್ಲಿ ಕಾಶೀ ಮಠದ ಕಿರಿಯ ಯತಿಗಳಾದ ಶ್ರೀ ಸಂಯಮೀಂದ್ರ ತೀರ್ಥ ಶ್ರೀ ಪಾದಂಗಳವರ ಚಾತುರ್ಮಾಸ ಅವಧಿಯಲ್ಲಿ ವಿಶೇಷ ಕಾರ್ಯಕ್ರಮವಾಗಿ ಮೂರು ದಿನಗಳ ಕಾಲ ಶ್ರೀ ಜಗನ್ನಾಥದಾಸ ವಿರಚಿತ ’ಹರಿಕಥಾಮೃತ ಸಾರ’ ಇದರ ಆಯ್ದ ಸಂಧಿಗಳ ಉಪನ್ಯಾಸವು ಬಿಂದುಮಾಧವ ಆಚಾರ್ಯ ನಾಗಸಂಪಿಗೆ ಅವರಿಂದ ಹಾಗೂ ಗಾಯನವು ಅನಂತ ಕುಲಕರ್ಣಿ ಬಾಗಲಕೋಟೆ ಅವರಿಂದ ನಡೆಯಿತು. ಈ ಮೂರು ದಿನ ಅನುಕ್ರಮವಾಗಿ ಶಂಕರ ಶ್ಯಾನುಭಾಗ್, ಪಾಂಡುರಂಗ ನಾಯಕ್ ಪುತ್ತೂರು ಹಾಗೂ ಅನಂತ ಕುಲಕರ್ಣಿ ಅವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಜ್ಞಾನಾಮೃತ ಸಂಸ್ಕಾರದೆಡೆಗೆ ನಡೆ ಎಂಬ ಸರಣಿ ಜ್ಞಾನಯಜ್ಞದ ಕಾರ್ಯಕ್ರಮದಲ್ಲಿ ಶಂಕರ ಶ್ಯಾನುಭಾಗ್ ಅವರು ಭಜನೆ ಅಂದು-ಇಂದು-ಮುಂದು ಎಂಬ ವಿಷಯದ ಬಗ್ಗೆ ಮಾತನಾಡಿದರು.
ಬೈಂದೂರು: ಎನ್.ಎಸ್.ಎಸ್ ಶಿಬಿರ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಲು ನಮ್ಮ ಜೀವನದಲ್ಲಿ ಸಿಗುವ ಒಂದು ಅತ್ಯುತ್ತಮ ಅವಕಾಶ. ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕಾಗಿದೆ.ಆ ಮೂಲಕ ಒಂದು ಉತ್ತಮ ಸಮಾಜವನ್ನು ಕಟ್ಟುವಲ್ಲಿ ನಾವೆಲ್ಲರೂ ಶ್ರಮಿಸಬೇಕು ಮತ್ತು ಅದರ ನಿರ್ಮಾಣವೇ ನಮ್ಮ ಗುರಿಯಾಗಬೇಕು ಎ೦ದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಗೋಪಾಲ ಪೂಜಾರಿ ಅವರು ಅಭಿಪ್ರಾಯಪಟ್ಟರು. ಅವರು ಬೈಂದೂರಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆರಂಭಗೊಂಡ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ‘ರಾಷ್ಟ್ರೀಯ ಸೇವಾ ಯೋಜನಾ ಘಟಕದ ೨೦೧೫ ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕು ಪಂಚಾಯತ್ ಸದಸ್ಯ ರಾಜು ಪೂಜಾರಿ ಮಾತನಾಡಿ ಎನ್ನೆನ್ನೆಸ್ ಕೂಡಿ ಬಾಳುವುದನ್ನು ಕಲಿಸುತ್ತದೆ ಮತ್ತೂ ಪ್ರತಿಯೊಬ್ಬರಲ್ಲೂ ಅಡಗಿರುವ ವಿಶೇಷ ಪ್ರತಿಭೆಯನ್ನು ಹೊರತರಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಸರಸ್ವತಿ ವಿದ್ಯಾಲಯದ ಪ್ರಾಂಶುಪಾಲ ಆರ್ ಎನ್ ರೇವಣ್‌ಕರ್ ಅಧ್ಯಕ್ಷತೆ ವಹಿಸಿದ್ದರು. ಯಡ್ತರೆ ಪಂಚಾಯತ್ ಅಧ್ಯಕ್ಷ ನಾಗರಾಜ ಶೆಟ್ಟಿ, ಸರಕಾರಿ ಪದವಿ ಪೂರ್ವ ಕಾಲೇಜು. ಬೈಂದೂರಿನ ಪ್ರಾಂಶುಪಾಲ ಪಾಲಾಕ್ಷ, ಜಿ.ಎಸ್.ವಿ.ಎಸ್ ಶಿಕ್ಷಣ…
ಕೊಲ್ಲೂರು: ತಾಲೂಕಿನ ವಂಡ್ಸೆ ಸಮೀಪದ ಇಡೂರು ಕುಜ್ಞಾಡಿ ಎಂಬಲ್ಲಿ ಹಾರ್ಡ್‌ವೇರ್ ಅಂಗಡಿಯೊಂದಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ತಗಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಘಟನೆಯ ವಿವರ: ಇಡೂರು ಕುಜ್ಞಾಡಿಯ ಶಾಲೆಯ ಎದುರಿಗಿರುವ ಪಟೇಲ್ ಕಾಂಪ್ಲೆಕ್ಸ್‌ನಲ್ಲಿ ಸರ್ವೋತ್ತಮ ಶೆಟ್ಟಿ ಮತ್ತು ಸಹೋದರರಿಗೆ ಸೇರಿದ ಹಾರ್ಡ್‌ವೇರ್ ಅಂಗಡಿಯನ್ನು ಎಂದಿನಂತೆ ಸಂಜೆ 5:30ರ ವೇಳೆಗೆ ಮುಚ್ಚಿ ಮನೆಗೆ ತೆರಳಿದ್ದರು. ಆ ಬಳಿಕ ಅಂಗಡಿಗೆ ಒಳಗಿನಿಂದ ಬೆಂಕಿ ತಗಲಿತ್ತು. ಸುಮಾರು 6:30ರ ಹೊತ್ತಿಗೆ ಬೆಂಕಿಯ ಕೆನ್ನಾಲಿಗೆ ಹಾರ್ಡ್‌ವೇರ್ ಅಂಗಡಿಯನ್ನು ಬಹುಪಾಲು ಸುಟ್ಟು ಹೆಂಚಿನ ಮಾಡಿಗೂ ತಗಲಿ ಪಕ್ಕದ ಅಂಗಡಿಯನ್ನೂ ಆವರಿಸಿಕೊಳ್ಳುತ್ತಿರುವುದನ್ನು ಗಮನಿಸಿದ ಸ್ಥಳಿಯರು ಹರಸಾಹಸ ಪಟ್ಟು ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. (ಕುಂದಾಪ್ರ ಡಾಟ್ ಕಾಂ ವರದಿ) ಅಷ್ಟರಲ್ಲಾಗಲೇ ಹಾರ್ಡ್‌ವೇರ್ ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿದ್ದರೇ, ಪಕ್ಕದ ದಿನಸಿ ಅಂಗಡಿಯ ಮಾಡು ಹಾಗೂ ಅದೇ ಕಾಂಪ್ಲೆಕ್ಸ್‌ನ ಹಿಂಬದಿ ಇದ್ದ ಮನೆಯ ಮೇಲ್ಚಾವಣಿ ಭಾಗಶಃ ಬೆಂಕಿ…
ಬೈಂದೂರು: ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ ಯುವತಿಯೋರ್ವಳನ್ನು ಅತ್ಯಾಚಾರಗೈದು, ಬಳಿಕ ಜೀವ ಬೆದರಿಕೆಯೊಡ್ಡಿದ ಘಟನೆ ಕುಂದಾಪುರ ತಾಲೂಕಿನ ಬೈಂದೂರು ಸಮೀಪದ ಹೇರೂರು ಗ್ರಾ.ಪಂ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ಬಗ್ಗೆ ಯುವತಿ ಬೈಂದೂರು ರಾಣೆಯಲ್ಲಿ ನೀಡಿದ್ದು, ದೂರಿನನ್ವಯ ಸುರೇಶ್ ನಾಯ್ಕ್ (36) ಎಂಬುವವನನ್ನು ಬಂಧಿಸಲಾಗಿದೆ. ಘಟನೆಯ ವಿವರ: ಹೇರೂರು ಗ್ರಾಮದ ಮಡ್ಲಕೇರಿ ನಿವಾಸಿಯಾದ ವಿವಾಹಿತ ಸುರೇಶ್ ನಾಯ್ಕ್ ಎಂಬುವವನು ಅದೇ ಗ್ರಾಮದ ಯುವತಿಯೋರ್ವಳನ್ನು ಕಳೆದ ಮೂರು ತಿಂಗಳ ಹಿಂದೆ ಆಕೆಯ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಅತ್ಯಾಚಾರವೆಸವೆಸಗಿದ್ದ. ಮಾತ್ರವಿಲ್ಲದೇ ಈ ವಿಷಯವನ್ನು ಯಾರಿಗೂ ತಿಳಿಸದಂತೆ ಆಕೆಗೆ ಜೀವ ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ. (ಕುಂದಾಪ್ರ ಡಾಟ್ ಕಾಂ ವರದಿ) ಘಟನೆ ನಡೆದು ಕೆಲವು ದಿನಗಳ ಬಳಿಕ ಯುವತಿಗೆ ಮದುವೆ ನಿಶ್ಚಿತಾರ್ಥವಾಗಿರುವುದನ್ನು ತಿಳಿದ ಸುರೇಶ್ ನಾಯ್ಕ್ ಆ ಯುವತಿಯನ್ನು ಮದುವೆಯಾಗಲಿರುವ ಹುಡುಗನಿಗೆ ಕರೆಮಾಡಿ ಆಕೆಯೊಂದಿಗೆ ದೈಹಿಕ ಸಂಪರ್ಕ ಹೊಂದಿರುವುದಾಗಿ ತಿಳಿಸಿದ್ದಾರೆ. ಮದುವೆಯಾಗಬೇಕಿದ್ದ ಹುಡುಗನಿಗೆ ವಿಚಾರ ತಿಳಿದ ಬಳಿಕ ನಿಶ್ಚಿತಾರ್ಥ ಮುರಿದು ಬಿದ್ದಿತ್ತು.…
ಕುಂದಾಪುರ, ಅ8: ಸಾಲಭಾದೆಯನ್ನು ತಾಳಲಾರದೆ ತಾಲೂಕಿನ ಅಮಾಸೆಬೈಲು ಕೆಳಾಸುಂಕದ ಕೃಷಿಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ನಡೆದಿದೆ. ಕಾವ್ರಾಡಿ ಪಡುವಾಲ್ತೂರು ನಿವಾಸಿ ರಾಮ ಕುಲಾಲ್(45) ಅತ್ಮಹತ್ಯೆಗೆ ಶರಣಾದ ಕೃಷಿಕ. ಪಡುವಾಲ್ತೂರಿನಲ್ಲಿ ತಮ್ಮ ಹೆಂಡತಿ ಮಕ್ಕಳೊಂದಿಗೆ ವಾಸವಿದ್ದ ರಾಮ ಕುಲಾಲ್ ಕೆಳಸುಂಕದರುವ ಕೃಷಿಭೂಮಿಯಲ್ಲಿ ತನ್ನ ಸಹೋದರನೊಂದಿಗೆ ಸೇರಿ ಭತ್ತ ಹಾಗೂ ಅಡಿಕೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಈ ನಡುವೆ ಕೃಷಿ ಕಾರ್ಯಗಳಿಗಾಗಿ ವಿವಿಧ ಬ್ಯಾಂಕುಗಳಿಂದ ಸುಮಾರು 4ಲಕ್ಷ ಮೊತ್ತದ ಸಾಲ ಮಾಡಿದ್ದರು. ಆದರೆ ಕಾಡು ಪ್ರಾಣಿಗಳ ಹಾವಳಿ ಮುಂತಾದ ಕಾರಣಗಳಿಂದಾಗಿ ಉತ್ತಮ ಇಳುವರಿ ಕಾಣದೇ ನಷ್ಟ ಅನುಭವಿಸಿದ್ದರೆನ್ನಲಾಗಿದೆ. ಬ್ಯಾಂಕ್ ಸಾಲ ತೀರಿಸಲು ಒಂದೆರಡು ಸಂಘಗಳಲ್ಲಿ ಹಾಗೂ ಕೆಲವರಿಂದ ಕೈ ಸಾಲ ಪಡೆದಿದ್ದರೆನ್ನಲಾಗಿದೆ. ಆದರೆ ಇದ್ಯಾವುದೂ ಸಾಲದಿದ್ದಾಗ ಮಡದಿಯ ಕರಿಮಣಿಯನ್ನೂ ಬ್ಯಾಂಕಿನಲ್ಲಿ ಅಡವಿಡ್ಡಿದ್ದರು. ಇಷ್ಟಾದರೂ ಸಾಲ ತೀರಸಲಾಗದ್ದರಿಂದ ನೊಂದಿದ್ದ ಅವರು ಮೂರು ದಿನದ ಹಿಂದೆ ಮನೆಯಲ್ಲಿಯೇ ವಿಷ ಸೇವಿದ್ದರು. ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು, ರೈತ ಮೋರ್ಚಾ…
