ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ,ಎ.18: ಉಡುಪಿ ಜಿಲ್ಲೆ ಸದ್ಯ ಕೊರೋನಾ ಮುಕ್ತ ಜಿಲ್ಲೆ ಎಂದೆನಿಸಿಕೊಂಡಿದೆ. ಈವರೆಗೆ ವರದಿಯಾಗಿದ್ದ 3 ಕೊರೋನಾ ವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ. ಮೂರನೇ ವ್ಯಕ್ತಿಯು (ಪಿ-83) ಶನಿವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಯಾವುದೇ ಹೊಸ ಸಕ್ರಿಯ ಪ್ರಕರಣ ಈವರೆಗೆ ದಾಖಲಾಗಿಲ್ಲ. ಮಾ. 24ರಂದು ಕೇರಳದಿಂದ ಆಗಮಿಸಿದ್ದ ಉಡುಪಿ ಮೂಲದ 29 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಆತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಆ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಆತನನ್ನು ಉಡುಪಿಯ ಟಿ.ಎಂ.ಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಆ ಬಳಿಕದ ಎರಡು ವರದಿಯಲ್ಲಿ ನೆಗೆಟಿವ್ ವರದಿ ಬಂದಿದ್ದರಿಂದ ಶನಿವಾರ ಮಧ್ಯಾಹ್ನ ಆ ವ್ಯಕ್ತಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಬಿಡುಗಡೆ ಬಳಿಕವೂ 14ದಿನಗಳ ಕಾಲ ಹೋಮ್ ಕ್ವಾರೆಂಟೈನ್‌ನಲ್ಲಿ ಇರುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ. ಜಿಲ್ಲೆಗೆ ದುಬೈನಿಂದ ಬಂದಿದ್ದ ಕೊರೋನಾ ಸೋಂಕಿತ ಮೊದಲು ಹಾಗೂ ಎರಡನೇ ವ್ಯಕ್ತಿಗಳು…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಲಾವಣ್ಯ ರಿ. ಬೈಂದೂರು ಸಂಸ್ಥೆಯ ೪೩ನೇ ವಾರ್ಷಿಕೋತ್ಸವ ಹಾಗೂ ದಿ. ಬಿ. ಮಾಧವ ರಾವ್ ಸ್ಮರಣಾರ್ಥ ರಂಗಮಾಧವ ನಾಟಕೋತ್ಸವ ಫೆಬ್ರವರಿ 29ರಿಂದ ಮೂರು ದಿನಗಳ ಕಾಲ ಬೈಂದೂರಿನ ಶಾರದಾ ವೇದಿಕೆಯಲ್ಲಿ ಪ್ರತಿದಿನ ಸಂಜೆ 6:30ಕ್ಕೆ ಜರುಗಲಿದೆ. ಫೆಬ್ರವರಿ 29ರಂದು ಬಾರ್ಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನ ಅಧ್ಯಕ್ಷರಾದ ಎ.ಬಿ. ಶೇರಿಗಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಂದು ಲಾವಣ್ಯ ಹೋಂ ಥಿಯೇಟರ್‌ನ್ನು ಖ್ಯಾತ ಜ್ಯೋತಿಷಿ ಡಾ. ಮಹೇಂದ್ರ ಭಟ್ ಉದ್ಘಾಟಿಸಲಿದ್ದಾರೆ. ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಶುಭಶಂಸನೆಗೈಯಲಿದ್ದು, ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ, ಯಡ್ತರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೂಕಾಂಬು ದೇವಾಡಿಗ ಸೇರಿದಂತೆ ವಿವಿಧ ಅತಿಥಿ ಗಣ್ಯರು ಉಪಸ್ಥಿತರಿರಲಿದ್ದಾರೆ. ಮೂರು ದಿನಗಳ ಕಾರ್ಯಕ್ರಮದಲ್ಲಿ ಕರ್ನಾಟಕ ಉದ್ಯಮರತ್ನ ಪ್ರಶಸ್ತಿ ಪುರಸ್ಕೃತ ಬಿ.ಎಸ್. ಸುರೇಶ್ ಶೆಟ್ಟಿ ಹಾಗೂ ಪಾಂಡುರಂಗ ಪಡಿಯಾರ್, ವೈದ್ಯರಾದ ಡಾ. ಕೆ.ಆರ್ ನಂಬಿಯಾರ್, ಡಾ. ಸಚ್ಚಿದಾನಂದ ಶೆಟ್ಟಿ, ಬೈಂದೂರು ಪಶು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮಂಕಿ: ಇಲ್ಲಿನ ಕೊಕ್ಕೇಶ್ವರ ದೇವಸ್ಥಾನ ಎದುರಿನ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಮಕ್ಷತ್ರಿಯರ ಬೃಹತ್ ಸಮಾವೇಶಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಹಲವು ಹೆಸರುಗಳಿರುವ ಸಮುದಾಯವನ್ನು ಹಿಂದೂ ಕ್ಷತ್ರಿಯ ಎಂದೂ ಕರೆಯಲಾಗುತ್ತದೆ. ರಾಜ್ಯ ಸರ್ಕಾರದ ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಜಾತಿಯ ಹೆಸರು ಸೇರಿದೆ. ಆದರೆ, ಕೇಂದ್ರ ಸರ್ಕಾರದ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ವಿಚಾರ ಗಮನಕ್ಕೆ ಬಂದಿದೆ. ಕೇಂದ್ರದ ಪಟ್ಟಿಯಲ್ಲಿ ಇದನ್ನು ಸರಿಪಡಿಸಲು ರಾಜ್ಯ ಸರಕಾರದಿಂದ ಪ್ರಯತ್ನಿಸಲಾಗುವುದು ಎಂದರು. ಸಮುದಾಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಯುವಕರು ಅಗತ್ಯವಾದ ಕೌಶಲ್ಯ ತರಬೇತಿ ಪಡೆಯುವುದು ಅವಶ್ಯವಾಗಿದೆ. ಹೆಣ್ಣು ಮಕ್ಕಳು ಹಿಂದೆ ಉಳಿಯದೇ ಶಿಕ್ಷಣವನ್ನು ಪಡೆದುಕೊಳ್ಳುವುದು ಕೂಡ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರಕಾರ ನಿಮ್ಮ ನೆರವಿಗೆ ಬರಲಿದೆ ಎಂದರು. ಮುಂದುವರಿದು ಮಾತನಾಡಿ ರಾಮಕ್ಷತ್ರಿಯ ಸಮಾಜದ ಕೊಕ್ಕೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಒಂದು ಕೋಟಿ ರೂ. ಬಿಡುಗಡೆಗೊಳಿಸುವ ಭರವಸೆ ನೀಡಿದರು. ಮಂಕಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಏತ…
ಕುಂದಾಪ್ರ ಡಾಟ್ ಕಾಂ ವರದಿ ಬೈಂದೂರು ಭಾಗದ ಕಂಬಳಗಳ ಪೈಕಿ ತಗ್ಗರ್ಸೆ ಕಂಬಳಕ್ಕೆ ತನ್ನದೇ ಆದ ಹೆಸರಿದೆ. ನೂರಾರು ವರ್ಷಗಳು ಇತಿಹಾಸ ಹೊಂದಿರುವ ಈ ಸಾಂಪ್ರದಾಯಿಕ ಕಂಬಳವು ತಗ್ಗರ್ಸೆ ಕಂಠದಮನೆ ಕುಟುಂಬಸ್ಥರಿಗೆ ಸೇರಿದ ಕಂಬಳಗದ್ದೆಯಲ್ಲಿ ಪ್ರತಿವರ್ಷ ದೇವರ ಕಾರ್ಯದಂತೆ ವಿಧಿವತ್ತಾಗಿ, ವಿಜೃಂಭಣೆಯಿಂದ ನಡೆಯುತ್ತದೆ. ಹಲವಾರು ಜೊತೆ ಕೋಣಗಳು ಹರಕೆ ಹಾಗೂ ಸ್ವರ್ಧೆಯಲ್ಲಿ ಭಾಗವಹಿಸಿ ಕಂಬಳದ ಮೆರಗು ಹೆಚ್ಚಿಸುತ್ತವೆ. ನಾಟಿ ಮುಗಿದ ಬಳಿಕ ಕಾರ್ತಿಕ ಮಾಸದ ವೃಶ್ಚಿಕ ಸಂಕ್ರಾಂತಿಯಂದು ಸಾಂಪ್ರದಾಯಿಕ ಕಂಬಳ ನಡೆಯುತ್ತದೆ. ಕಂಬಳಕ್ಕೆ ದಿನ ನಿಗದಿಯಾದಾಗಿನಿಂದ ಕಂಬಳದ ಕೋಣಗಳ ಓಟದ ತಾಲೀಮು ಆರಂಭಗೊಳ್ಳುತ್ತದೆ. ಕಂಬಳದ ಹಿಂದಿನ ದಿನವೇ ಗದ್ದೆಯ ದ್ವಾರವನ್ನು ತೋರಣಗಳಿಂದ ಅಲಂಕರಿಸಲಾಗುತ್ತದೆ. ನಿಯಮಬದ್ಧವಾಗಿ ಖುರ್ಜು ನಿಲ್ಲಿಸಿದ ಬಳಿಕ ಯಾವುದೇ ಕೊಣಗಳನ್ನು ಗದ್ದೆಗೆ ಇಳಿಸುವಂತಿಲ್ಲ. ಕಂಬಳದ ದಿನ ಬೆಳಿಗ್ಗೆ ಗದ್ದೆಯ ಅಲಂಕಾರ, ಡೊಲು ಬಾರಿಸುವುದು, ಪೂಜೆ ಕಾರ್ಯಾದಿಗಳು ನೆರವೇರಿದ ಬಳಿಕ ಕಂಬಳಕ್ಕೆ ಬರುವ ಕೋಣಗಳನ್ನು ವೀಳ್ಯ, ತೆಂಗಿನಕಾಯಿ ನೀಡಿ ಬರಮಾಡಿಕೊಳ್ಳಲಾಗುತ್ತದೆ. ಊರಿನ ಒಂದು ನಿರ್ದಿಷ್ಟ ಕುಟುಂಬದ ಕೋಣಗಳನ್ನು ಗದ್ದೆಗೆ ಇಳಿಸುವ ಮೂಲಕ…
ಸುನಿಲ್ ಹೆಚ್. ಜಿ. ಬೈಂದೂರು . | ಕುಂದಾಪ್ರ ಡಾಟ್ ಕಾಂ ಲೇಖನ. ನವರಾತ್ರಿಯ ನಡುವೆ ಅಥವಾ ಅನಂತ ಚತುರ್ದಶಿಯಂದು ಕೃಷಿಕ ಸಮುದಾಯದ ಜನ ಆಗತಾನೆ ಬೆಳೆಯುತ್ತಿರುವ ಪೈರನ್ನು (ಕದಿರು) ಕೊಯ್ದು, ಪೂಜಿಸಿ, ಶ್ರದ್ಧೆಯಿಂದ ಆಚರಿಸುವ ಹಬ್ಬ ಹೊಸ್ತು. ಮನೆಯ ಪರಿಸರ ಮುಂತಾದವುಗಳನ್ನು ಸ್ವಚ್ಛವಾಗಿಸಿಕೊಳ್ಳುವ, ನಿತ್ಯದ ಬದುಕಿಗೊಂದು ಹೊಸ ಆಯಾಮವನ್ನು ನೀಡಿ ವರ್ಷದ ಹೊಸ ಬೆಳೆಯನ್ನು ಸಂಭ್ರಮದಿಂದ ಒಳಕರೆದುಕೊಳ್ಳುವ ಪ್ರಕ್ರಿಯೆ ಇದು. ಹೊಸ್ತಿನ ದಿನ ಶುದ್ಧಗೊಂಡು, ಮೇಟಿ (ಹಿಂದೆ ಅಂಗಳದಲ್ಲಿ ಇರುತ್ತಿದ್ದ ಕಂಬ) ಎದುರಿಗೊಂದು ದೀಪ ಹಚ್ಚಿ, ಪೂಜಾ ಸಾಮಾಗ್ರಿಗಳೊಂದಿಗೆ ಮನೆಯ ಯಾಜಮಾನ ಗಂಡುಮಕ್ಕಳನ್ನೊಳಗೊಂಡು ಭತ್ತದ ಗದ್ದೆಗೆ ಹೋಗುವುದು; ಅಲ್ಲಿ ಒಂದಿಷ್ಟು ಪೈರನ್ನು ಒಟ್ಟುಮಾಡಿ ಕಟ್ಟಿ ಬುಡದಲ್ಲಿ ಬಾಳೆ ಎಲೆಯ ಮೇಲೆ ವಿಳ್ಯದೆಲೆಯನ್ನಿಟ್ಟು ಪ್ಶೆರಿಗೆ ಗಂಧ ಬೊಟ್ಟುಗಳನ್ನು ಹಚ್ಚಿ, ಮುಳ್ಳು ಸೌತೆಕಾಯಿ ಬಾಳೆಹಣ್ಣುಗಳನ್ನು ಅರ್ಪಿಸಿ ಮೂರು ಅಥವಾ ಐದು ಹಿಡಿ ಕದಿರನ್ನು ಕೊಯ್ದಿಟ್ಟು ಹಾಲೆರೆದು ನಮಸ್ಕರಿಸಿ ಪೂಜಿಸಿದ ಬಳಿಕ ಪಕ್ಕದ ಐದು ಗದ್ದೆಗಳಿಂದ ಸ್ವಲ್ಪವೇ ಕದಿರನ್ನು ಕೊಯ್ದು ತಲೆಯ ಮೇಲೆ ಹೊತ್ತುಕೊಂಡು…
ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಸರ್ವರೂ ಪೂಜಿಪ ಗಣಪತಿಯ ವಿಗ್ರಹಗಳಿಗೆ ಎಲ್ಲೆಡೆಗೂ ಬಹು ಬೇಡಿಕೆ. ವೈವಿಧ್ಯಮಯ ವಿನ್ಯಾಸದ, ವಿವಿಧ ಗಾತ್ರದ ಗಣಪನ ಮೂರ್ತಿಗಳು ಕಲಾವಿದರ ಕೈಚಳಕದಲ್ಲರಳಿ ದೇಶಾದ್ಯಂತ ಪೂಜೆಗೆ ಅಣಿಯಾಗಿವೆ. ವಿಶೇಷವೆಂದರೆ ಕುಂದಾಪುರದಲ್ಲಿ ತಯಾರಾಗುವ ಗಣೇಶನ ಮೂರ್ತಿಯೊಂದು ಚೌತಿಯ ಸಮಯದಲ್ಲಿ ದೂರದ ಹೈದರಾಬಾದಿನಲ್ಲಿ ಭಕ್ತರಿಂದ ಪೂಜಿಸಲ್ಪಡುತ್ತಿದೆ. ಕುಂದಾಪುರದಿಂದ ಹೈದರಾಬಾದಿಗೆ: ಕುಂದಾಪುರದ ಶಿಲ್ಪಿ ವಸಂತ ಗುಡಿಗಾರ್ ಅವರು ತಯಾರಿಸಿದ ಗಣಪತಿಯ ವಿಗ್ರಹವೊಂದನ್ನು ಕಳೆದ ಮೂರು ವರ್ಷಗಳಿಂದ ಹೈದರಬಾದಿನಲ್ಲಿ ನೆಲೆಸಿರುವ ಕುಂದಾಪುರದ ಮೂಲದ ಉದ್ಯಮಿಯೋರ್ವರು ಕೊಂಡೊಯ್ಯುತ್ತಿದ್ದಾರೆ. ಮಣ್ಣಿನ ಗಣಪತಿಯ ಮೂರ್ತಿಯನ್ನೇ ಪ್ರತಿಷ್ಠಾಪಿಸುವ ಉದ್ದೇಶದಿಂದ ಕುಂದಾಪುರದಿಂದಲೇ ಮೂರ್ತಿಯನ್ನು ಕೊಂಡೊಯ್ಯುವ ಮೂಲಕ ಹುಟ್ಟೂರ ಪ್ರೇಮ ಮರೆಯುತ್ತಿದ್ದಾರೆ. ಹಬ್ಬಕ್ಕೆ ಎರಡು ದಿನವಿರುವಾಗಲೇ ಕುಂದಾಪುರದಿಂದ ಬಸ್ಸಿನಲ್ಲಿ ಹೊರಟ ಗಣಪತಿ ವಿಗ್ರಹ ಹೈದರಾಬಾದ್‌ನಲ್ಲಿ ಪೂಜೆಗೆ ಅಣಿಯಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ. ಗುಡಿಗಾರರ ಗಣಪನಿಗೆ ಭಾರಿ ಬೇಡಿಕೆ: ವಸಂತ ಗುಡಿಗಾರ್ ಅವರ ಗಣಪತಿ ವಿಗ್ರಹಗಳಿಗೆ ಎಲ್ಲೆಡೆಯಿಂದಲೂ ಭಾರಿ ಬೇಡಿಕೆಯಿದೆ. ಕುಂದಾಪುರ ಹಳೆ ಬಸ್ ನಿಲ್ದಾಣದ…
ಪೋಲಾಗುವ ನೀರನ್ನು ವ್ಯವಸ್ಥಿತವಾಗಿ ಭೂಮಿಯಲ್ಲಿ ಇಂಗಿಸಿ ವರ್ಷಪೂರ್ತಿ ನೀರು ಪಡೆಯುವ ತಂತ್ರಜ್ಞಾನ ತೆರದ ಬಾವಿಗೆ ಮಳೆಕೊಯ್ಲು, ಕೊಳವೆ ಬಾವಿಗೆ ಜಲಮರುಪೂರಣ ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ, 2016 Apl 5th: ನೀರಿನ ಸಮಸ್ಯೆ ನೀಗಿಸಲು ಬಾವಿ, ಕೊಳವೆ ಬಾವಿಯನ್ನು ನಿರ್ಮಿಸಿದ್ದಾಯ್ತು. ಆದರೆ ಅದರಲ್ಲೂ ನೀರು ಬತ್ತುತ್ತಿದೆ! ನೀರು ಬೇಕಲ್ಲ ಇನ್ನೇನು ಮಾಡೊದು ಎಂದು ಯೋಚಿಸುತ್ತಾ ಕುಳಿತವರಿಗೊಂದು ಹೊಸತೊಂದು ಒರತೆ ಮೂಡಿದೆ. ಕಡಿಮೆ ಖರ್ಚಿನಲ್ಲಿ ಅಂತರ್ಜಲವನ್ನು ಹೆಚ್ಚಿಸುವ ಕಾರ್ಯವನ್ನು ಕೈತ್ತಿಕೊಳ್ಳುವ ಮೂಲಕ ವರ್ಷಪೂರ್ತಿ ಹೇರಳ ನೀರು ಪಡೆಯಲು ತಂತ್ರಜ್ಞಾನವೊಂದು ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆಂಬಂತೆ (2016) ಅನುಷ್ಠಾನಗೊಂಡಿದೆ. ತಾಲೂಕಿನ ಕುಂಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಶೋಕ್ ಶೆಟ್ಟಿಗಾರ್ ಎಂಬುವವರು ತಮ್ಮ ಮನೆಯಲ್ಲಿ 620ಅಡಿ ಅಳ ಕೊರೆದಿರುವ ಬೋರ್‌ವೆಲ್‌ನ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕೊಳವೆ ಬಾವಿ ಜಲಮರುಪೂರಣ (Borewell recharging) ತಂತ್ರಜ್ಞಾನದ ಮೊರೆಹೋಗಿದ್ದು, ಚಿತ್ರದುರ್ಗದ ಜಿಯೋ ರೈನ್ ವಾಟರ್ ಬೋರ್ಡ್‌ನ ಅಂತರ್ಜಲ ಮತ್ತು ಮಳೆನೀರು ಕೊಯ್ಲು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆಹಾರ ಮತ್ತು ಅತಿಥಿ ಸತ್ಕಾರ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡುತ್ತಿರುವ ಶೆಫ್‌ಟಾಕ್ ಸಂಸ್ಥೆಯ ಆಡಳಿತ ನಿರ್ದೆಶಕ ಗೋವಿಂದ ಬಾಬು ಪೂಜಾರಿ ಅವರಿಗೆ ’ಆಹಾರೋದ್ಯಮ ಸಾಧನಾಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಮಂಗಳೂರು ಟೌನ್ ಹಾಲ್‌ನಲ್ಲಿ ಸೋಮವಾರ ಜರುಗಿದ ದಕ್ಷಿಣ ಕನ್ನಡ ಕ್ಯಾಟರಿಂಗ್ ಮಾಲಕರ ಅಸೋಸಿಯೇಶನ್ ರಿ. ಇದರ ಉದ್ಘಾಟನಾ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಪತಿ ಯೆನೆಪಪೋಯ ಅಬ್ದುಲ್ ಕುಂಞ ಪ್ರಶಸ್ತಿ ಪ್ರದಾನ ಮಾಡಿದರು. ಶ್ರೀ ದೇವಿ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಎ.ಜೆ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಎ. ಜನಾರ್ದನ ಶೆಟ್ಟಿ, ಮುಂಬೈ ಕೆಇವೈಎಸ್ ಗ್ರೂಪ್ ಆಫ್ ಹೋಟೆಲ್ಸ್‌ನ ಹರೀಶ್ ಅಮೀನ್, ಮಂಗಳೂರು ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೋ, ಚಲನಚಿತ್ರ ನಿರ್ಮಾಪಕ, ನಟ ಡಾ. ರಾಜಶೇಖರ್ ಕೋಟ್ಯಾನ್, ದ.ಕ ಕ್ಯಾಟರಿಂಗ್ ಮಾಲಕರ ಎಸೋಸಿಯೇಶನ್ ರಿ. ಮಂಗಳೂರು ಇದರ ಗೌರವಾಧ್ಯಕ್ಷ ಸುಧಾಕರ ಕಾಮತ್,…
ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ ಆಧುನಿಕತೆಯತ್ತ ಮುಖಮಾಡಿರುವ ಮಾನವರು ತಮ್ಮ ಸಂಸ್ಕೃತಿ-ಸಂಪ್ರದಾಯಗಳನ್ನು ಮರೆತು ನಡೆಯುತ್ತಿರುವ ಹೊತ್ತಿನಲ್ಲಿಯೂ ಮರಾಠಿ, ಗೊಂಡ ಸಮುದಾಯದ ಹೋಳಿಕುಣಿತ ಹಾಗೂ ಹೊಳಿ ಹಬ್ಬ ಇಂದಿಗೂ ನಮ್ಮ ನಡುವಿನ ಸಂಪ್ರದಾಯ ಕೊಂಡಿಯಾಗಿ ಉಳಿದಿದೆ. ಈ ಜನಾಂಗದ ಹೊಳಿ ಕುಣಿತ ಒಂದು ವಿಶಿಷ್ಟ ಜನಪದ ಕಲೆ. ಕುಂದಾಪುರ ತಾಲೂಕಿನ ಬೇರೆ ಬೇರೆ ಭಾಗಗಳಲ್ಲಿ ನೆಲೆಸಿರುವ ಮರಾಠಿಗರು ವರ್ಷಂಪ್ರತಿ ಶಿವರಾತ್ರಿಯ ಬಳಿಕ ನಿಷ್ಠೆಯಿಂದ ಹೋಳಿ ಆಚರಿಸುತ್ತಾರೆ. ಎಲ್ಲೂರು ಬಾಳಕೊಡ್ಲುವಿನ ಮರಾಠಿ ಸಮುದಾಯದವರು ಏಳು ದಿನಗಳ ಕಾಲ ಹೊಳಿಯನ್ನು ಸಂಭ್ರಮಿಸುತ್ತಾರೆ. ಎಲ್ಲೂರು ಸುತ್ತಲಿನ 47 ಮರಾಠಿ ಕುಟುಂಬಿಕರು ತಮ್ಮ ಗುರಿಕಾರರ ಮನೆಯಲ್ಲಿ ಸೇರಿ ಹಬ್ಬ ಆಚರಿಸುವ ಬಗ್ಗೆ ತಿರ್ಮಾನ ಕೈಗೊಂಡು, ಅದರಂತೆ ಸಮುದಾಯದ ದೇವರಾದ ಶ್ರೀ ಸಿದ್ದೇಶ್ವರನಿಗೆ ಪೂಜೆ ಸಲ್ಲಿಸಿ ದೇವರ ಅಣತಿಯಂತೆ ಮುಂದುವರಿಯುತ್ತಾರೆ. ಕುಂದಾಪ್ರ ಡಾಟ್ ಕಾಂ ವರದಿ ಮನೆ ಮನೆ ತಿರುಗಾಟ, ಹಾಡು: ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಹೋಳಿ ಕುಣಿತಕ್ಕೆ ಮೂರು ತಂಡಗಳನ್ನು ರಚಿಸಿಕೊಂಡು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಸಮಾಜದ ಕಟ್ಟಕಡೆಯ ಮಗುವಿಗೂ ಶಿಕ್ಷಣ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಕನ್ನಡ ಶಾಲೆಗಳು ಕಾರ್ಯಪ್ರವೃತಗೊಂಡು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಆಂಗ್ಲ ಮಾಧ್ಯಮಕ್ಕೂ ಅವಕಾಶ ನೀಡಬೇಕು. ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರಕಾರ ಗಂಭೀರ ಪ್ರಯತ್ನ ನಡೆಸುತ್ತಿದ್ದು, ವಿದ್ಯಾಭಿಮಾನಿಗಳು ಹಾಗೂ ಹಳೆ ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸಲು ಯೋಜನೆ ರೂಪಿಸಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್ ಹೇಳಿದರು. ಅವರು ಮೇಲ್‌ಗಂಗೊಳ್ಳಿ ಸರಕಾರಿ ಕಿರಿಯ ಪ್ರಾಥಮಿಕ (ಹವೇ) ಶಾಲೆಯಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಹಬ್ಬ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಂಗೊಳ್ಳಿ ಉದ್ಯಮಿ ಎಚ್.ಗಣೇಶ ಕಾಮತ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ನಟರಾಜ್, ಶಕುಂತಲಾ ಮತ್ತು ಬಸವರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯೆ ಶಾಂತಿ ಖಾರ್ವಿ, ಅಕ್ಕಮ್ಮ, ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಶಿಕ್ಷಣ ಸಂಯೋಜಕಿ ದೇವಕುಮಾರಿ, ಮಹಾಬಲ…
