Author: Editor Desk

ಕುಂದಾಪುರ: ವ್ಯಾವಹಾರಿಕವಾಗಿ ಜಿಲ್ಲೆಯನ್ನು ಮೀರಿಸಿ ಬೆಳೆಯುತ್ತಿರುವ ಕುಂದಾಪುರದಲ್ಲಿ ಎರಡು ವರ್ಷಗಳ ಹಿಂದೆ ವಿಶಿಷ್ಟವಾದ ಯುವ ಮೆರಿಡಿಯನ್ ಕನ್ವೆನ್‌ಷನ್ ಹಾಲ್‌ನ್ನು ಲೋಕಾರ್ಪಣೆಗೊಳಿಸುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದರು. ಇದೀಗ ಕರ್ನಾಟಕದಲ್ಲಿಯೇ ಮೊದಲನೆಯದೆನ್ನುವಂತಹ ಉತೃಷ್ಟ ದರ್ಜೆಯ ಐಷಾರಾಮಿ ಹೋಟೇಲೊಂದು ಲೋಕಾರ್ಪಣೆಗೊಳಿಸುವ ಮೂಲಕ ವಿಶ್ವ ಮಟ್ಟದಲ್ಲಿ ಶಾಶ್ವತವಾಗಿ ಗುರುತಿಸಿಕೊಳ್ಳುವತ್ತ ಕುಂದಾಪುರದ ಯುವ ಉದ್ಯಮಿಗಳಾದ ಬೈಲೂರು ಉದಯಕುಮಾರ್ ಶೆಟ್ಟಿ ಹಾಗೂ ಬೈಲೂರು ವಿನಯ ಕುಮಾರ್ ಶೆಟ್ಟಿ ಸಹೋದರರು ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಸಚಿವ ಹೆಚ್. ಕೆ. ಪಾಟೀಲ್ ಹೇಳಿದರು. ಅವರು ಕುಂದಾಪುರ ತಾಲೂಕಿನ ಕೋಟೇಶ್ವರದ ಯುವ ಮೆರಿಡಿಯನ ಬೇ ರೆಸಾರ್ಟ್ ಎಂಡ್ ಸ್ಪಾ ಉದ್ಘಾಟಿಸಿದ ಬಳಿಕ ಯುವ ಮೆರಿಡಿಯನ್ ಕನ್ವೆನ್‌ಶನ್ ಸೆಂಟರ್ ಆವರಣದಲ್ಲಿ ಜರುಗಿದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ. ಕೋಟೇಶ್ವರದಲ್ಲಿ ಬಹಳಷ್ಟು ಕ್ರಾಂತಿಕಾರಕ ಅಭಿವೃದ್ಧಿ ಸಾಗುತ್ತಿದ್ದು, ಕುಂದಾಪುರ ಪುರಸಭಾ ವ್ಯಾಪ್ತಿಗೆ ಕೋಟೇಶ್ವರವನ್ನು ಸೇರ್ಪಡೆಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು. ’ಮೆರಿಡಿಯನ್…

Read More

ಕುಂದಾಪುರ: ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ ಕುಂದಾಪುರ ತಾಲೂಕು ಸಮಿತಿ ಸೆಪ್ಟೆಂಬರ್ 2 ರಂದು ಉಡುಪಿ ಜಿಲ್ಲಾದ್ಯಂತ ಶಾಲಾ-ಕಾಲೇಜುಗಳಿಗೆ ಬಂದ್ ಕರೆ ನೀಡಿದೆ. ಖಾಸಗಿ ಹಾಗೂ ವಿದೇಶಿ ವಿವಿ ಗಳನ್ನು ಕೈಬಿಡಬೇಕು, ಸರಕಾರಿ ಕಾಲೇಜುಗಳನ್ನು ಬಲಪಡಿಸಬೇಕು, ಕೇಂದ್ರ ಬಜೇಟ್ ನ ಶೇ 10 ರಷ್ಟು, ಜಿಡಿಪಿಯಲ್ಲಿ ಶೇ 6 ರಷ್ಟು, ರಾಜ್ಯ ಬಜೇಟ್ ನ ಶೇ 30 ರಷ್ಟು ಹಣವನ್ನು ಶಿಕ್ಷಣಕ್ಕೆ ಮೀಸಲಿಡಲು, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಶನ್ ಹಾವಳಿಯನ್ನು ನಿಯಂತ್ರಿಸಲು ಜಿಲ್ಲಾ ಶಿಕ್ಷಣ ರೆಗ್ಯೂಲೇಟಿಂಗ್ ಪ್ರಾಧಿಕಾರ ರಚಿಸಬೇಕು, ಕುಂದಾಪುರದಿಂದ ಭಟ್ಕಳಕ್ಕೆ ಕಾಲೇಜು ಬಿಡುವ ಸಮಯದಲ್ಲಿ ಹೆಚ್ಚುವರಿ ಸರಕಾರಿ ಬಸ್ಸ್ ಬಿಡಬೇಕು. ಕರಾವಳಿ ಭಾಗದ ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನಿಟ್ಟುಕೊಂಡು ಜಿಲ್ಲೆಯ ಸಮಗ್ರ ಶೈಕ್ಷಣಿಕ ಅಭಿವೃದ್ದಿಗೆ ಒತ್ತಾಯಿಸಿ ಕರೆ ನೀಡಿರುವ ಶಾಲಾ-ಕಾಲೇಜು ಬಂದ್ ವಿದ್ಯಾರ್ಥಿಗಳು ಬೆಂಬಲಿಸಬೇಕೆಂದು ಎಸ್.ಎಫ್.ಐ ನ ರಾಜ್ಯ ಸಮಿತಿ ಸದಸ್ಯರು ಹಾಗೂ ತಾಲೂಕು ಕಾರ್ಯದರ್ಶಿ ಶ್ರೀಕಾಂತ್ ಹೆಮ್ಮಾಡಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬೈಂದೂರು: ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಅಂಧತ್ವ ನಿವಾರಣಾ ವಿಭಾಗದ ಸಹಭಾಗಿತ್ವದಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ವತ್ರೆ, ಶ್ರೀ ರಾಮ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕಂಪೆನಿ ಕುಂದಾಪುರ ಹಾಗೂ ಲಯನ್ಸ್ ಕ್ಲಬ್ ಉಪ್ಪುಂದ-ಬೈಂದೂರು  ಇವುಗಳ ಸಂಯಕ್ತಾಶ್ರಯದಲ್ಲಿ ’ಉಚಿತ ನೇತ್ರ ತಪಾಸಣಾ ಶಿಬಿರ’ ಅ.29ರ ಶನಿವಾರ ಉಪ್ಪುಂದದ ಶಾಲೆಬಾಗಿಲು ಮಾತೃಶ್ರೀ ಸಭಾಭವನದಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 2ಗಂಟೆಯ ವರೆಗೆ ನಡೆಯಲಿದೆ. ಶಿಬಿರದಲ್ಲಿ ನೇತ್ರ ತಪಾಸಣೆ, ಅಗತ್ಯವಿರುವವರಿಗೆ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಹಾಗೂ ಲೆನ್ಸ್ ಅಳವಡಿಕೆಯ ಸೌಲಭ್ಯವನ್ನು ಉಚಿತವಾಗಿ ಮಾಡಲಾಗಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪುರ: ವಿದ್ಯಾರ್ಥಿ ಜೀವನದಲ್ಲಿಯೇ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಭಾವನೆಯಿಂದ ಕಾರ್ಯನಿರ್ವಹಿಸಿದಾಗ ಜೀವನದುದ್ದಕ್ಕೂ ಯಶಸ್ಸಿನ ಹಾದಿಯಲ್ಲಿ ಸಾಗಲು ಸಾದ್ಯವಾಗುವ ಜೊತೆಗೆ ಬದುಕು ಸಾರ್ಥಕತೆಯನ್ನು ಕಂಡುಕೊಳ್ಳುತ್ತದೆ. ಇಂಟರ‍್ಯಾಕ್ಟ್ ಕ್ಲಬ್ ನಿಮ್ಮೊಳಗೆ ನಾಯಕತ್ವವನ್ನು ಬೆಳಸುವ ಜೊತೆಗೆ ಸೇವಾ ಮನೋಭಾವನೆಯನ್ನು ವೃದ್ಧಿಸಿ ಸಮಾನತೆಯನ್ನು ಕಲಿಸುತ್ತದೆ ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಹೇಳಿದರು. ಅವರು ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಚಿತ್ತೂರಿನ ಸರಕಾರಿ ಫ್ರೌಢ ಶಾಲೆಯಲ್ಲಿ ಇಂಟರ‍್ಯಾಕ್ಟ್ ಪದಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಇಂಟರ‍್ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷ ಪ್ರಶಾಂತ್, ಕಾರ್ಯದರ್ಶಿ ಅಜೇಯ್ ಅವರಿಗೆ ಪದಪ್ರದಾನ ನೆರವೇರಿಸಿ, ಸ್ವಚ್ಚ ಭಾರತ ಅಭಿಯಾನದಲ್ಲಿ ಇಂಟರ‍್ಯಾಕ್ಟ್ ಸದಸ್ಯರು ತಮ್ಮನ್ನು ತೊಡಗಿಸಿಕೊಂಡು ತಮ್ಮ ತಮ್ಮ ಪರಿಸರವನ್ನು ಸ್ವಚ್ಚ, ಸುಂದರವಾಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿ ಎಂದು ಕಿವಿಮಾತು ಹೇಳಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉದಯ ಪೂಜಾರಿ, ಫ್ರೌಢ ಶಾಲೆ ಮುಖ್ಯೋಪಧ್ಯಾಯಿನಿ ತಾರಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ…

Read More

ಕುಂದಾಪುರ: ಇತ್ತೀಚೆಗೆ ಗೋಪಾಡಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಗರ್ಭಿಣಿ ಇಂದಿರಾ ಮೊಗವೀರ ಅವರ ಮನೆಗೆ ತೆರಳಿದ ನಾಡೋಜ ಪ್ರಶಸ್ತಿ ಪುರಸ್ಕೃತ ಉಡುಪಿಯ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ| ಜಿ. ಶಂಕರ್‌ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರಲ್ಲದೇ ಸಹಾಯಧನವನ್ನು ಮನೆಯವರಿಗೆ ಹಸ್ತಾಂತರಿಸಿದರು. ಇಂದಿರಾ ಅವರ ಪುತ್ರ ಅನ್ವಿತ್‌ ಹೆಸರಿನಲ್ಲಿ 2 ಲಕ್ಷ ರೂ. ಚೆಕ್‌ ನೀಡಿದ್ದಲ್ಲದೇ ಆಕೆಯ ನೂತನ ಮನೆ ನಿರ್ಮಾಣಕ್ಕೆ 25,000 ರೂ. ನಗದು ನೀಡಿದರು. ಇದೇ ಸಂದರ್ಭ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಇನ್ನೋರ್ವ ಯುವಕನಿಗೆ 10,000 ರೂ. ನೀಡಿದರಲ್ಲದೇ ಮಣಿಪಾಲ ಆಸ್ಪತ್ರೆಯ ವೆಚ್ಚ ಭರಿಸುವಲ್ಲಿ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಕೆಎಂಸಿಯನ್ನು  ಸಂಪರ್ಕಿಸುವುದಾಗಿ ಹೇಳಿದರು. ಗೋಪಾಡಿ ಬೀಜಾಡಿ ಗ್ರಾಮಸ್ಥರು ಡಾ| ಜಿ. ಶಂಕರ್‌ ಅವರ ಮಾನವೀಯತೆಯ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ಸದಾನಂದ ಬಳ್ಕೂರು, ಕೋಟೇಶ್ವರ ಮೊಗವೀರ ಯುವ ಸಂಘಟನೆ ಅಧ್ಯಕ್ಷ ಅಶೋಕ್‌ ತೆಕ್ಕಟ್ಟೆ, ಮಹಿಳಾ ಸಂಘಟನೆ ಅಧ್ಯಕ್ಷೆ ಹೇಮಾ…

Read More

ಕುಂದಾಪುರ: ಹೊಳೆ ದಾಟಲು ಸಾಧ್ಯವಿಲ್ಲವೆಂದು ಕುಳಿತರೇ ಪಕ್ಕದಲ್ಲೇ ಇರುವ ಊರಿಗೆ ತೆರಳಲು ಐದಾರು ಕಿಲೋ ಮೀಟರ್ ಸುತ್ತಿ ಬಳಸಿ ಹೋಗಬೇಕು. ಹೊಳೆ ದಾಟೋಣವೆಂದರೆ ಅಲ್ಲೊಂದು ಸುಸಜ್ಜಿತವಾದ ಸೇತುವೆಯಿಲ್ಲ. ಒಂಟಿ ಮರದ ಗಟ್ಟಿಯೂ ಇಲ್ಲದ ಕಾಲುಸಂಕದ ಮೇಲೆ ನಡೆಯುವುದಂತೂ ಭಾರಿ ಕಷ್ಟ. ಇದು ತಾಲೂಕಿನ ಗೋಳಿಹೊಳೆ ಗ್ರಾಮದ ಹೊಸೇರಿಯ ಜನರ ಮಳೆಗಾಲದ ಪರಿಸ್ಥಿತಿ. ಹೊಸೇರಿಯ ಒಂದು ಭಾಗದಲ್ಲಿ ಹತ್ತುಕ್ಕೂ ಹೆಚ್ಚು ಮನೆಗಳಿದ್ದು ಸುಮಾರು 120 ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. ಅವರಿಗೆ  ಹೊಳೆಯಾಚೆ ಇರುವ ವಸ್ರೆ ತೀರಾ ಹತ್ತಿರವಾದ್ದರಿಂದ ಅವರು ಕಾಲುಸಂಕದ ಮೂಲಕವೇ ತಮ್ಮ ತಮ್ಮ ಕೆಲಸಕಾರ್ಯಗಳಿಗೆ ತೆರಳುತ್ತಾರೆ. 15ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ತೆರಳಲೂ ಇದೇ ಕಾಲುಸಂಕವನ್ನೇ ಅವಲಂಬಿಸಿದ್ದಾರೆ. ಕೃಷಿ ಗದ್ದೆಗಳೂ ಈ ಭಾಗದಲ್ಲಿ ಹೆಚ್ಚಿರುವುದರಿಂದ ಅದರ ನಿರ್ವಹಣೆಗೆ ತೆರಳುವವರು ಇದೇ ಹಾದಿಯಲ್ಲಿ ದಾಟಿ ನಡೆಯಬೇಕು. ಅನ್ಯ ಮಾರ್ಗವಲ್ಲದೇ ಇಲ್ಲಿನ ಜನ ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಮಳೆಗಾಲದಲ್ಲಿ ತುಂಬಿ ಹರಿಯುವ ನದಿಪಾತ್ರಗಳಲ್ಲಿ ಸಂಚರಿಸುವುದೇ ಅಪಾಯಕಾರಿಯಾಗಿರುವಾಗ ಗಟ್ಟಿಯಿಲ್ಲದ ಮರದ ಕಾಲುಸಂಕದ ಮೂಲಕ ನದಿಯನ್ನು…

Read More

ಕುಂದಾಪುರ: ಯಕ್ಷ ಸೌರಭ ಪ್ರವಾಸಿ ಮೇಳದ ಯಕ್ಷದಶಮಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಕುಂದಾಪುರ ಬಿ. ಆರ್. ಹಿಂದೂ ರಾಯರ ಶಾಲೆಯ ಸಭಾಂಗಣದಲ್ಲಿ ಚಿನ್ಮಯಿ ಆಸ್ಪತ್ರೆಯ ಡಾ| ಉಮೇಶ್ ಪುತ್ರನ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಕರಾವಳಿಯ ಹೆಮ್ಮೆಯ ಜಾನಪದ ಕಲೆಯಾದ ಯಕ್ಷಗಾನವನ್ನು ಬೆಳೆಸುವಲ್ಲಿ ಕಲಾಪೋಷಕರ ಪಾತ್ರ ಪ್ರಧಾನವಾದದ್ದು, ಯಾವುದೇ ಕಾರಣಕ್ಕೂ ಯಕ್ಷಗಾನಕ್ಕೆ ಅಳಿವಿಲ್ಲ, ಯಕ್ಷಗಾನವು ಅಳಿಯದೆ ಉಳಿಯುತ್ತದೆ ಎಂಬುದಕ್ಕೆ ಕುಂದಾಪುರ ಯಕ್ಷೋತ್ಸವದಲ್ಲಿ ಪ್ರತಿ ನಿತ್ಯವು ಉಪಸ್ಥಿತರಿದ್ದ ಪ್ರಜ್ಞಾವಂತ ಪ್ರೇಕ್ಷಕರೇ ಸಾಕ್ಷಿಯಾಗಿದ್ದಾರೆಂದು ಡಾ| ಉಮೇಶ್ ಪುತ್ರನ್‌ರವರು ಹೇಳಿದರು. ಕಾರ್ಯಕ್ರಮದ ಪ್ರಾಯೋಜಕರಾದ ಮುಂಬಯಿಯ ಉದ್ಯಮಿ ವಂಡ್ಸೆ ರಾಜು ಮೆಂಡನ್‌ರವರು ಯಕ್ಷ ದಶಮಿಯ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಾ ಮುಂದಿನ ಯಕ್ಷದಶಮಿಗೆ ವಿಶಾಲವಾದ ಸಭಾಂಗಣದ ಬಾಡಿಗೆ ವೆಚ್ಚ ಹಾಗೂ ಸಮಾರೋಪ ಸಮಾರಂಭದಲ್ಲಿ ತೆಂಕು ಹಾಗೂ ಬಡಗುತಿಟ್ಟಿನ ಕೂಡಾಟದ ಪ್ರಾಯೋಜಕತ್ವವನ್ನು ನಾನು ವಯಿಸಿಕೊಳ್ಳುತ್ತೇನೆಂದು ಹೇಳಿದರು. ಹತ್ತು ದಿನ ನಡೆದ ಯಕ್ಷಗಾನ ಪ್ರಸಂಗಗಳ ಸೂಕ್ಷ್ಮಾವಲೋಕನವನ್ನು ಮಾಡಿದ ಪ್ರಸಂಗಕರ್ತ ಬಸವರಾಜ್ ಶೆಟ್ಟಿಗಾರ್‌ರವರು ವಿಮರ್ಶೆಯನ್ನು ಯಕ್ಷಸಾಹಿತ್ಯದ ಪದ್ಯದೊಂದಿಗೆ ರಚಿಸಿರುವುದನ್ನು ಪ್ರಧಾನ ಭಾಗವತರಾದ ಹೆರಂಜಾಲು ಗೋಪಾಲಗಾಣಿಗರು…

Read More

ಕುಂದಾಪುರ: ಶಿಕ್ಷಕರನ್ನು ಅತ್ಯಂತ ಗೌರವದಿಂದ ಕಾಣುವ ಸಮಾಜ ನಮ್ಮದು. ಅದರಲ್ಲೂ ಸೇವಾನಿಷ್ಠೆ ಮೆರೆದ ಶಿಕ್ಷಕರನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವ ಜತೆಗೆ ಅತ್ಯಂತ ಗೌರವದಿಂದ ಕಾಣುತ್ತದೆ. ಭಾಸ್ಕರ ಶೆಟ್ಟರು ಕೆಲಸ ಮಾಡಿದ ಎಲ್ಲ ಕಡೆ ವಿಶೇಷ ಸೇವೆ ಸಲ್ಲಿಸಿ, ವಿದ್ಯಾರ್ಥಿಗಳ ಮತ್ತು ಪೋಷಕರ ಆದರ ಗಳಿಸಿದ್ದಾರೆ. ನಿವೃತ್ತಿಯ ಸಂದರ್ಭದಲ್ಲಿ ಅರೆಹೊಳೆಯಲ್ಲಿ ಅವರಿಗೆ ದೊರೆತ ಅದ್ದೂರಿಯ ಸನ್ಮಾನ ಅದಕ್ಕೆ ಸಾಕ್ಷಿ ಎಂದು ಉಡುಪಿ ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ದಿವಾಕರ ಶೆಟ್ಟಿ ಹೇಳಿದರು.    ನಾವುಂದ ಗ್ರಾಮದ ಅರೆಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 9 ವರ್ಷ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಜುಲೈ 31ರಂದು ನಿವೃತ್ತರಾದ ವಕ್ವಾಡಿ ಭಾಸ್ಕರ ಶೆಟ್ಟರಿಗೆ ಶಾಲೆಯ ಮುತ್ತಯ್ಯ ಶೆಟ್ಟಿ ಸ್ಮಾರಕ ಸಭಾಭವನದಲ್ಲಿ ಏರ್ಪಡಿಸಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷ ಎನ್. ನರಸಿಂಹ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.    ಅಭಿನಂದನ ಭಾಷಣ ಮಾಡಿದ ನಿವೃತ್ತ ಉಪನ್ಯಾಸಕರಾದ ಎ. ರಿಚರ್ಡ್ ರೆಬೆಲೊ, ಎಸ್. ಜನಾರ್ದನ,…

Read More

ಬೈಂದೂರು: ಗಿಡಗಳನ್ನು ನೆಟ್ಟು ಪೋಷಿಸುವುದರಿಂದ ಪರಿಸರ ಸಮತೋಲನ ಕಾಯ್ದುಕೊಳ್ಳುತ್ತದೆ. ಪ್ರತಿಯೊಬ್ಬರೂ ಮನೆಗೊಂದು ಗಿಡವನ್ನು ನೆಟ್ಟು ನಮ್ಮ ಪರಿಸರವನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಾಗಿದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಗೋಪಾಲ ಪೂಜಾರಿ ಹೇಳಿದರು. ಅವರು ಕುಂದಾಪುರ ಅರಣ್ಯ ವಿಭಾಗದ ಬೈಂದೂರು ವಲಯ ಹಾಗೂ ಕೊಲ್ಲೂರು ವನ್ಯಜೀವಿ ವಲಯದ ಸಂಯುಕ್ತಾಶ್ರಯದಲ್ಲಿ ಬೈಂದೂರು ಸಮೀಪದ ಮದ್ದೋಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ವನಮಹೋತ್ಸವ ಹಾಗೂ ಲಕ್ಷವೃಕ್ಷ ಅಭಿಯಾನವನ್ನು ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬೈಂದೂರು ವಲಯ ವ್ಯಾಪ್ತಿಯಲ್ಲಿ  ವನ್ಯಪ್ರಾಣಿಗಳಿಂದ ಆದ ಬೆಳೆ ಹಾನಿಗೆ ಹಾಗೂ ಮಾನವ ಹಾನಿಗೆ ಅರಣ್ಯ ಇಲಾಖೆ ವತಿಯಿಂದ ನೀಡಲಾದ ಪರಿಹಾರ ಮೊತ್ತದ ಚೆಕ್ ಹಾಗೂ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಲ್ಲಿ ಸಸಿಗಳನ್ನು ಪಡೆದುಕೊಂಡು ನೆಟ್ಟು ಬೆಳೆಸಿದ ರೈತರಿಗೆ ಪ್ರೋತ್ಸಾಹಧನದ ಚೆಕ್ ವಿತರಿಸಲಾಯಿತು. ಲಕ್ಷವೃಕ್ಷ ಕಾರ್ಯಕ್ರಮದ ಅಡಿಯಲ್ಲಿ ಸಾಂಕೇತಿಕವಾಗಿ ಸ್ಥಳೀಯ ಸಾರ್ವಜನಿಕರಿಗೆ ಗಿಡಗಳನ್ನು ವಿತರಿಸಲಾಯಿತು ಹಾಗೂ ಮಗುವಿಗೊಂದು ಮರ ಶಾಲೆಗೊಂದು ವನ ಕಾರ್ಯಕ್ರಮದಡಿಯಲ್ಲಿ…

Read More

ಕುಂದಾಪುರ: ರಾಜ್ಯ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದ್ದ 168 ಭರವಸೆಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ 100 ಭರವಸೆಗಳನ್ನು ಈಡೇರಿಸಲಾಗಿದೆ. ಅವುಗಳಲ್ಲಿ ಹೆಚ್ಚಿನವುಗಳು ಬಡತನ ನಿವಾರಣೆಗೆ ಪೂರಕವಾಗುವ ಕಾರ್ಯಕ್ರಮಗಳು. ಇದು ರಾಜ್ಯ ಸರಕಾರವು ಬಡತನ ನಿವಾರಣೆಗೆ ನೀಡುತ್ತಿರುವ ಮಹತ್ವವನ್ನು ತೋರಿಸುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ ಹೇಳಿದರು.    ತ್ರಾಸಿಯ ಕ್ಲಾಸಿಕ್ ಸಭಾಭವನದಲ್ಲಿ ನಡೆದ ಆಶ್ರಯ ಸಾಲ ಮತ್ತು ಬಡ್ಡಿ ಮನ್ನಾ ದೃಢೀಕರಣ ಪತ್ರ ವಿತರಣೆಯ ಬೃಹತ್ ಸಮಾವೇಶವನ್ನು ಅವರು ಉದ್ಘಾಟಿಸಿ ಮಾತನಾಡಿದರು. ತಮ್ಮ ಮಾತಿಗೆ ಅವರು ಆಶ್ರಯ ಸಾಲ, ಬಡ್ಡಿ ಮನ್ನಾ, ಕಡಿಮೆ ಬಡ್ಡಿ ಸಾಲ ವಿತರಣೆ, ಪ್ರಸಕ್ತ ಆಶ್ರಯ ಮನೆಗಳಿಗೆ ಹೆಚ್ಚಿಸಿದ ಘಟಕ ವೆಚ್ಚವಾದ ರೂ ೧. ೨೫ ಲಕ್ಷ ಮೊತ್ತ ಪೂರ್ತಿ ಸಹಾಯಧನವಾಗಿ ಪರಿವರ್ತನೆ, ಅನ್ನಭಾಗ್ಯ, ಕ್ಷೀರಭಾಗ್ಯ, ಮನಸ್ವಿನಿ, ಬಿಪಿಎಲ್ ಪಡಿತರ ಚೀಟ ವಿತರಣೆ, ಎಪಿಎಲ್ ಚೀಟಿದಾರರಿಗೂ ರಿಯಾಯತಿ ದರದಲ್ಲಿ ಪಡಿತರ ವಿತರಣೆ, ೯೪ಸಿ ಅನ್ವಯ ಮನೆ ನಿವೇಶನ ನೀಡಿಕೆ, ಕೃಷಿ…

Read More