ಕುಂದಾಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಮಿತಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ 124ನೇ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿರುವ ಸಾಮಾಜಿಕ ಪರಿವರ್ತನೆ ವಿಮೋಚನಾ ಜನಜಾತ್ರೆಗೆ ಬೆಳಗ್ಗೆ ಕುಂದಾಪುರದಲ್ಲಿ ಚಾಲನೆ ನೀಡಲಾಯಿತು. ಕುಂದಾಪುರ ಡಿವೆಎಸ್ಪಿ ಮಂಜುನಾಥ ಶೆಟ್ಟಿ ಹಸಿರು ನಿಶಾನೆ ತೋರುವ ಮೂಲಕ ಜನಜಾತ್ರೆಗೆ ಚಾಲನೆ ನೀಡಿ ಶುಭ ಹಾರೆಸಿದರು. ಪತ್ರಕರ್ತ ಕೆ.ಸಿ. ರಾಜೇಶ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ ರಾಯಪ್ಪನ ಮಠ, ದಸಂಸ ಕೋಲಾರ ಜಿಲ್ಲೆಯ ಮುಖಂಡ ಕಷ್ಣಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ರಾಜ್ಯ ಸಂಘಟನಾ ಸಂಚಾಲಕ ಉದಯ ಕುಮಾರ್ ತಲ್ಲೂರು, ದಲಿತ ಮುಖಂಡ ರಾದ ಚಂದ್ರ ಅಲ್ತಾರ್, ವಿಜಯ ಕೆ.ಎಸ್., ಕ.ನಾ.ಚಂದ್ರ, ನಾಗರಾಜ ಕೆಂಚನೂರು, ಕಷ್ಣ ಅಲ್ತಾರ್ ಮೊದಲಾದವರು ಉಪಸ್ಥಿತರಿದ್ದರು. ವಿಮೋಚನಾ ಜನಜಾತ್ರೆ ಬೆಂದೂರು, ಕೊಲ್ಲೂರು, ಸಿದ್ಧಾಪುರ, ಹೆಬ್ರಿ, ಪೆರ್ಡೂರು, ಕಾರ್ಕಳ, ಉಡುಪಿ ಮಾರ್ಗವಾಗಿ ರಥಯಾತ್ರೆ ಉಡುಪಿ ತಲುಪಲಿದೆ. ಏ.14ರಂದು ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ಹಾಗೂ ನಂತರ ಬ್ರಹ್ಮಾವರ ತಲುಪಲಿದೆ.
Author: Editor Desk
ಹೆಬ್ರಿ: ಬಸ್ನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಯುವಕನೊಬ್ಬ ವಾಂತಿ ಮಾಡಲೆಂದು ಕಿಟಕಿಯಿಂದ ಹೊರಕ್ಕೆ ಬಾಗಿದ ವೇಳೆ ಯುವಕನ ತಲೆ ವಿದ್ಯುತ್ ಕಂಬಕ್ಕೆ ಬಡಿದು ದಾರುಣವಾಗಿ ಮೃತಪಟ್ಟ ಘಟನೆ ಹೆಬ್ರಿ ಠಾಣೆ ವ್ಯಾಪ್ತಿಯ ನಾಡ್ಪಾಲು ಜಕ್ಕನಮಕ್ಕಿ ಎಂಬಲ್ಲಿ ಭಾನುವಾರ ಮುಂಜಾನೆ ನಡೆದಿದೆ. ಮೃತಪಟ್ಟ ಯುವಕನನ್ನು ಶಿವಮೊಗ್ಗ ಮೂದ ಸುಭಾನ್(18) ಎಂದು ಗುರುತಿಸಲಾಗಿದೆ. ಬಸ್ ಚಾಲಕ ಶಿವಕುಮಾರ್ ಹಾಗೂ ನಿರ್ವಾಹಕ ಮೇಘರಾಜ್ ವಿರುದ್ಧ ಮತನ ಸಂಬಂಧಿಕರು ಹೆಬ್ರಿ ಠಾಣೆಗೆ ದೂರು ನೀಡಿದ್ದಾರೆ. ಘಟನೆಯ ವಿವರ: ಶಿವಮೊಗ್ಗದಿಂದ ಹೆಬ್ರಿ ಮಾರ್ಗವಾಗಿ ಮಂಗಳೂರಿಗೆ ಹೋಗುತ್ತಿದ್ದ ಖಾಸಗಿ ಮಿನಿ ಬಸ್ಸಿನಲ್ಲಿ ಭಾನುವಾರ ಮುಂಜಾನೆ ಪ್ರಯಾಣಿಸುತ್ತಿದ್ದ ಸುಭಾನ್ ಸೋಮೇಶ್ವರ ಬಳಿಯ ಜಕ್ಕನಮಕ್ಕಿ ತಿರುವಿನಲ್ಲಿ ವಾಂತಿ ಮಾಡಲೆಂದು ಬಸ್ಸಿನ ಕಿಟಿಕಿ ಮೂಲಕ ತಲೆ ಹೊರ ಹಾಕಿದ್ದ. ಇದೇ ವೇಳೆ ಹೆಬ್ರಿ ಕಡೆಯಿಂದ ಎದುರಿನಿಂದ ಬಂದ ಕ್ಯಾಂಟರ್ ಲಾರಿಗೆ ಸೈಡ್ ಕೊಡುವ ಭರದಲ್ಲಿ ಮಿನಿ ಬಸ್ ಚಾಲಕ ಬಸ್ಸನ್ನು ತೀರಾ ಎಡಕ್ಕೆ ಚಲಾಯಿಸಿದ್ದರಿಂದ ತಲೆ ಹೊರ ಹಾಕಿದ್ದ ಯುವಕನ ತಲೆ ಅವನಿಗೆ ತಿಳಿಯದೆಯೇ ರಸ್ತೆ…
ಉಡುಪಿ: ಕುಡಿತದ ಚಟವಿದ್ದ ಇಬ್ಬರು ಸ್ನೇಹಿತರ ನಡುವೆ ವಿವಾದ ಉಂಟಾಗಿ ಒಬ್ಬಾತ ಸುತ್ತಿಗೆಯಿಂದ ಹೊಡೆದ ಪರಿಣಾಮ ಇನ್ನೊಬ್ಬ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಲ್ಪೆಯಲ್ಲಿ ನಡೆದಿದೆ. ಉದ್ಯಾವರ ಬೊಳ್ಜೆ ಮಾಧವ ತಿಂಗಳಾಯ (65) ಮೃತಪಟ್ಟವರು. ಹೆಂಡತಿ ಮತ್ತು ನಾಲ್ವರು ಮಕ್ಕಳಿದ್ದರೂ ಕುಡಿತದಿಂದಾಗಿ ಮಾಧವ ತಿಂಗಳಾಯ ಮನೆಗೆ ಹೋಗುತ್ತಿರಲಿಲ್ಲ. ಗುಜರಿ ಮಾರಾಟ ಮಾಡುತ್ತಾ ದಿನ ಕಳೆಯುತ್ತಿದ್ದರು ಎನ್ನಲಾಗಿದೆ. ಕಳೆದ ಮೂರು ತಿಂಗಳಿಂದ ಮಾಧವ ತಿಂಗಳಾಯ ಮತ್ತು ಅವರಿಗೆ ಪರಿಚಿತನಾದ ಶೇಖರಪ್ಪ (70) ಎಂಬಾತನ ಜತೆಗೆ ಮಲ್ಪೆಯಲ್ಲಿ ತಿರುಗಾಡುತ್ತಾ, ಮೀನುಗಾರಿಕೆ ಇಲಾಖೆಗೆ ಸೇರಿದ ಒಣಗಿದ ಮೀನು ಇಡುವ ಶೆಡ್ನಲ್ಲಿ ಉಳಿದುಕೊಳ್ಳುತ್ತಿದ್ದರು. ಶನಿವಾರ ರಾತ್ರಿ ಕೂಡಾ ಈ ಇಬ್ಬರು ಒಟ್ಟಿಗೆ ತಿರುಗಾಡುತ್ತಿರುವುದನ್ನು ಸ್ಥಳೀಯರು ಕಂಡಿದ್ದಾರೆ. ಭಾನುವಾರ ಬೆಳಗ್ಗೆ ಸುಲೇಮಾನ್ ಎಂಬವರು ಶೆಡ್ ಸಮೀಪದಿಂದ ಬರುತ್ತಿದ್ದಾಗ ಅಪರಿಚಿತ ವ್ಯಕ್ತಿ ಮೃತಪಟ್ಟಿರುವುದು ಕಂಡಿದೆ. ಅವರು ಪಕ್ಕದ ಐಸ್ಪ್ಲಾಂಟ್ನ ಧರಣೇಂದ್ರ ಕುಮಾರ್ಗೆ ತಿಳಿಸಿದ್ದಾರೆ. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ತನಿಖೆ ನಡೆಸಿದಾಗ ಮೃತಪಟ್ಟಿರುವುದು ಮಾಧವ ತಿಂಗಳಾಯ ಎಂಬುದು…
ವಿಶ್ವ ಟೆನಿಸ್ ಸಂಸ್ಥೆ ಸೋಮವಾರ ನೂತನ ರ್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದ್ದು, ಭಾರತದ ಆಟಗಾರ್ತಿ ಸಾನಿಯಾ ಮಿರ್ಜಾ ಅಧಿಕೃತವಾಗಿ ಡಬಲ್ಸ್ನಲ್ಲಿ ವಿಶ್ವದ ನಂ.1 ಸ್ಥಾನವನ್ನು ಅಲಂಕರಿಸಿದ್ದಾರೆ. ಇಟಲಿಯ ಸಾರಾ ಎರ್ರಾನಿ (7640) ಅವರನ್ನು 20 ಅಂಕಗಳಿಂದ ಹಿಂದಿಕ್ಕಿದ ಸಾನಿಯಾ 7660 ಅಂಕಗಳನ್ನು ಗಳಿಸುವ ಮೂಲಕ ಅಗ್ರ ಸ್ಥಾನಕ್ಕೇರಿದರು. ಚಾರ್ಲ್ಸ್ಟನ್ನಲ್ಲಿ ನಡೆದ ಫ್ಯಾಮಿಲಿಕಪ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಮಾರ್ಟಿನಾ ಹಿಂಗಿಸ್ ಅವರೊಂದಿಗೆ ಪ್ರಶಸ್ತಿ ಗೆಲ್ಲುವ ಮೂಲಕ ಸಾನಿಯಾ ಡಬಲ್ಸ್ನಲ್ಲಿ ವಿಶ್ವಕ್ಕೆ ಅಗ್ರರೆನಿಸಿದರು. ಈ ಜಯದೊಂದಿಗೆ ಸಾನಿಯಾ 470 ಅಂಕಗಳನ್ನು ಗಳಿಸಿದರು. ಗ್ರ್ಯಾನ್ ಸ್ಲಾಮ್ ಟೂರ್ನಿಗಳನ್ನು ಗೆದ್ದ ದೇಶದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಸಾನಿಯಾ ಪಾತ್ರರಾಗಿದ್ದಾರೆ. ಫ್ಯಾಮಿಲಿ ಕಪ್ ಗೆಲ್ಲುವ ಮೂಲಕ ಸಾನಿಯಾ ಹಾಗೂ ಹಿಂಗಿಸ್ ಜೋಡಿ ಸತತ ಮೂರನೇ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಈ ಜೋಡಿ ಪ್ರಶಸ್ತಿಯ ಹಾದಿಯಲ್ಲಿ ಒಂದು ಪಂದ್ಯವನ್ನೂ ಸೋತಿರಲಿಲ್ಲ. ಇಂಡಿಯನ್ ವೇಲ್ಸ್ ಹಾಗೂ ಮಿಯಾಮಿ ಈ ಜೋಡಿ ಗೆದ್ದಿರುವ ಇತರ ಟೂರ್ನಿಗಳು. ಆಡಿರುವ 14 ಪಂದ್ಯಗಳಲ್ಲಿ ಈ ಜೋಡಿ ಕೇವಲ…
ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಆಶ್ರಯದಲ್ಲಿ ಬಿಸುಪರ್ಬ ಹಾಗೂ ಬಂಟರ ದಿನಾಚರಣೆಯು ಎ. 14 ರಂದು ಪೂರ್ವಾಹ್ನ ಉದ್ಘಾಟನೆಗೊಂಡಿತು. ಪೂರ್ವಾಹ್ನ 9.30ರಿಂದ ಸಂಘದ ಆವರಣದಲ್ಲಿರುವ ಶ್ರೀ ಮಹಾವಿಷ್ಣು ಮಂದಿರದಲ್ಲಿ ವಿಶೇಷ ಪೂಜೆ ನೆರವೇರಿದ ಬಳಿಕ ಗಣಪತಿ ಸ್ತುತಿಯೊಂದಿಗೆ ಪೂಜಾನೃತ್ಯ ಜರಗಿತು. ಆನಂತರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಜ್ಯೋತಿ ಬೆಳಗಿಸಿ ವಿಶ್ವಬಂಟರ ದಿನಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಬಂಟರ ಸಂಘ ಬಳ್ಳಾರಿ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಗೌರವ ಅತಿಥಿಯಾಗಿ ಬಂಟರ ಸಂಘ ಪಡುಬಿದ್ರಿ ಅಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ ಉಪಸ್ಥಿತರಿದ್ದರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ ನೇತೃತ್ವದಲ್ಲಿ ಜರಗಿದ ಸಮಾರಂಭದಲ್ಲಿ ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಸಂಘದ ಉಪಾಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಉಳೂ¤ರು ಮೋಹನದಾಸ್ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಐ. ಆರ್. ಶೆಟ್ಟಿ,…
ಮಂಗಳೂರು: ಮಂಗಳೂರು ಧರ್ಮ ಪ್ರಾಂತ ವ್ಯಾಪ್ತಿಯಲ್ಲಿ ಧರ್ಮ ಗುರುಗಳಾಗಿ ಸೇವೆ ಸಲ್ಲಿಸುವ ಬಗ್ಗೆ ಜೆಪ್ಪು ಸೈಂಟ್ ಜೋಸೆಫ್ ಸೆಮಿನರಿಯಲ್ಲಿ ತರಬೇತಿ ಪಡೆದ 9 ಮಂದಿ ಯುವಕರಿಗೆ ರೊಜಾರಿಯೋ ಕೆಥೆಡ್ರಲ್ನಲ್ಲಿ ಜರಗಿದ ಸಮಾರಂಭದಲ್ಲಿ ಬಿಷಪ್ ರೆ| ಡಾ| ಅಲೋಶಿಯಸ್ ಪಾವ್ ಡಿ’ಸೋಜಾ ಅವರು ಗುರು ದೀಕ್ಷೆಯನ್ನು ಪ್ರದಾನ ಮಾಡಿದರು. ಆನೆಗುಡ್ಡೆಯ ಪ್ರವೀಣ್ ಜೆ. ಸಲ್ದಾನ್ಹಾ, ಬಿಜೈನ ಕೆನೆತ್ ಆರ್. ಕ್ರಾಸ್ತಾ, ಪಾಲಡ್ಕದ ನೆಲ್ಸನ್ ಡಿ. ಪಾಯ್ಸ, ಕಿನ್ನಿಗೋಳಿಯ ಜಾನ್ಸನ್ ಎಲ್. ಸಿಕ್ವೇರಾ, ಶಂಬೂರಿನ ಡೆನ್ನಿಲ್ ಲೋಬೊ, ನಾಯ್ನಾಡ್ನ ಪಾವ್ ಎಸ್. ಡಿ’ಸೋಜಾ, ಗಂಟಾಲ್ಕಟ್ಟೆಯ ಅಶ್ವಿನ್ ಎಲ್. ಕಾರ್ಡೊಜಾ, ಬೋಂದೆಲ್ನ ರಾಹುಲ್ ಡಿ’ಸೋಜಾ, ಕುಂಬಳೆಯ ಸಂತೋಷ್ ಡಿ’ಸೋಜಾ ಗುರು ದೀಕ್ಷೆ ಸ್ವೀಕರಿಸಿದರು. ಧರ್ಮ ಪ್ರಾಂತದ ಪ್ರಧಾನ ಗುರು ಮೊ | ಡೆನ್ನಿಸ್ ಮೊರಾಸ್ ಪ್ರಭು, ಸೆಮಿನರಿಯ ರೆಕ್ಟರ್ ಫಾ | ಜೋಸೆಫ್ ಮಾರ್ಟಿಸ್, ಫಾ | ಹೆನ್ರಿ ಸಿಕ್ವೇರಾ, ರೊಜಾರಿಯೋ ಕೆಥೆಡ್ರಲ್ನ ಪ್ರಧಾನ ಗುರು ಫಾ | ಜೆ.ಬಿ. ಕ್ರಾಸ್ತಾ ಉಪಸ್ಥಿತರಿದ್ದರು.
ಉಡುಪಿ: ಕರ್ನಾಟಕ ರಾಜ್ಯ ಮುಕ್ತ ವಿ. ವಿ.ಯ 2014-15ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶ ಪಡೆದಿರುವ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಿ.ಎ/ಬಿ.ಕಾಂ ವಿದ್ಯಾರ್ಥಿಗಳಿಗೆ ಜೂ. 1 ರಿಂದ ಜು. 20 ರವರೆಗೆ ಪರೀಕ್ಷೆ ನಡೆಯುತ್ತವೆ. ದಂಡ ಶುಲ್ಕವಿಲ್ಲದೆ ಎ. 18, ದಂಡ ಶುಲ್ಕ 200 ರೂ.ನೊಂದಿಗೆ ಎ. 27 ರವರೆಗೆ ಪರೀಕ್ಷೆಗೆ ಹೆಸರು ದಾಖಲಿಸಬಹುದು. 2014-15ನೇ ಸಾಲಿನಲ್ಲಿ ಪ್ರವೇಶಾತಿ ಪಡೆದ ಅಂತಿಮ ವರ್ಷದ ಬಿ.ಎ. ವಿದ್ಯಾರ್ಥಿಗಳಿಗೆ ಆಂತರಿಕ ನಿಬಂಧನೆಗಳನ್ನು ಮಾ. 31ರ ಬದಲಾಗಿ ಮೇ 30 ರ ಒಳಗೆ ವಿದ್ಯಾರ್ಥಿಗಳು ಆಯ್ದುಕೊಂಡ ಅಧ್ಯಯನ ಕೇಂದ್ರಗಳಿಗೆ ಸಲ್ಲಿಸಲು ಸೂಚಿಸಲಾಗಿದೆ. ಪಠ್ಯ ಪುಸ್ತಕಗಳನ್ನು ಪ್ರಾದೇಶಿಕ ಕೇಂದ್ರ ಕಚೇರಿಯಲ್ಲಿ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
ಹೊಸದಿಲ್ಲಿ: ಬಡುಕಟ್ಟು ಜನರಿಗೆ ಸರಕಾರದ ಯೋಜನೆಗಳು ಪರಿಣಾಮಕಾರಿಯಾಗಿ ತಲುಪಲು ಬುಡಕಟ್ಟು ಸಚಿವಾಲಯ ಆಕಾಶವಾಣಿಯ ಮೊರೆ ಹೋಗಿದೆ. ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರವಾಗುವ ಸರಕಾರಿ ಯೋಜನೆಗಳಲ್ಲಿ ಹೆಚ್ಚೆಚ್ಚು ಬುಡಕಟ್ಟು ಜನರು ಬಳಸುವ ಉಪಭಾಷೆಗಳನ್ನು ಬಳಸುವಂತೆ ಬುಡಕಟ್ಟು ಸಚಿವಾಲಯ ಮಾಹಿತಿ ಮತ್ತು ಪ್ರಸಾರ ಸಚಿವಾಲಯವನ್ನು ಕೋರಿಕೊಂಡಿದೆ. ಬಡುಕಟ್ಟು ಜನರು ತಮ್ಮ ನುಡಿ ಬಿಟ್ಟು ಬೇರೆ ಯಾವುದನ್ನೂ ಅರ್ಥೈಸಿಕೊಳ್ಳುವುದಿಲ್ಲ. ಇದರಿಂದಾಗಿ ಸಚಿವಾಲಯದ ಯೋಜನೆಗಳು ಕೆಲವರಿಗಷ್ಟೇ ಸೀಮಿತವಾಗುತ್ತಿದೆ. ಈ ಕೊರತೆ ಸರಿಪಡಿಸುವ ಉದ್ದೇಶದಿಂದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಜತೆ ಸಮಾಲೋಚಿಸಿ ವಿಸ್ತೃತವಾದ ಯೋಜನೆ ರೂಪಿಸುವುದಾಗಿ ಅದು ಹೇಳಿದೆ.
ಮೂಡಬಿದಿರೆ: ಕಳೆದ 25 ವರ್ಷಧಿಗಳಿಂದ ಆಹಾರ ಧಾನ್ಯ ಸಂಸ್ಕರಣ ಕ್ಷೇತ್ರ ಅಂತಾರಾಷ್ಟ್ರೀಯಧಿವಾಗಿ ಪ್ರಸಿದ್ಧವಾಗಿರುವ ಜತೆಗೆ ನೀರಿನ ಶುದ್ಧೀಕರಣ ಯಂತ್ರಗಳ ತಯಾರಿ ಮತ್ತು ಸೇವೆಯಲ್ಲಿ ಗಣ್ಯಸ್ಥಾನ ಗಳಿಸಿರುವ ಮೂಡಬಿದಿರೆಯ ಎಸ್ಕೆಎಫ್ ಸಮೂಹ ಸಂಸ್ಥೆಯ ವತಿಯಿಂದ ಐವರು ಸಾಧಕರಿಗೆ 7ನೇ ವರ್ಷದ “ಎಸ್ಕೆಎಫ್ ಪ್ರಶಸ್ತಿ – 2014′ ನೀಡಿ ಗೌರವಿಸುವ ಸಮಾರಂಭ ಎ. 19ರಂದು ಸಂಜೆ 4 ಗಂಟೆಗೆ ಮೂಡಬಿದಿರೆ ಪದ್ಮಾವತಿ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಜಿ. ರಾಮಕೃಷ್ಣ ಆಚಾರ್ ತಿಳಿಸಿದ್ದಾರೆ. ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ (ಶಿಕ್ಷಣ ಮತ್ತು ಸಾಹಿತ್ಯ), ಕಲಾ ಕ್ಷೇತ್ರದಲ್ಲಿ ಹೊಸಪೇಟೆಯ ಶಿಲ್ಪಿ ಕೆ. ಸುರೇಶ ಆಚಾರ್ (ಕಲೆ), ಕೃಷ್ಣ ಚನ್ನರಾಯಪಟ್ಣ (ಸಮಾಜ ಸೇವೆ), ಚೆನ್ನೈಯ ಡಾ| ಡಿ. ಮುರುಗಸೆಲ್ವಂ ಡಿ. ಹಾನ್ (ನಿರ್ಮಾಣ, ಸಮಾಜ ಸೇವೆ) ಹಾಗೂ ಪ. ಬಂಗಾಲದ ಎಸ್.ಕೆ. ರಾಬ್ಯೂಲ್ ಹಾಕ್ಯೂ (ಅಕ್ಕಿ ಉದ್ಯಮ) ಅವರನ್ನು 25,000…
ಮೂಡಬಿದಿರೆ: ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ನಡೆದ ಚಕ್ರವ್ಯೂಹ -2015′ ರಾಷ್ಟೀಯ ಮಟ್ಟದ ಅಂತರ್ ಕಾಲೇಜು ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಉಜಿರೆ ಎಸ್ಡಿಎಂ ಕಾಲೇಜು ಸಮಗ್ರ ಪ್ರಶಸ್ತಿ ಪಡೆಯಿತು. ತೋಡಾರಿನ ಡಾ| ಎಂ.ವಿ. ಶೆಟ್ಟಿ ಕಾಲೇಜು ರನ್ನರ್ ಅಪ್ ಪ್ರಶಸ್ತಿ ಗಳಿಸಿತು. ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ| ನಿರಂಜನ್ ಎನ್. ಚಿಪಣೂಣRರ್ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವಿಜೇತರಿಗೆ ಬಹುಮಾನ ವಿತರಿಸಿದರು. ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ನ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್ ಫೆರ್ನಾಂಡಿಸ್ ಮತ್ತು ಕಾರ್ಯಕ್ರಮದ ಸಂಯೋಜಕ, ಕಂಪ್ಯೂಟರ್ ವಿಭಾಗ ಮುಖ್ಯಸ್ಥ ಮಂಜುನಾಥ ಕೊಠಾರಿ ಉಪಸ್ಥಿತರಿದ್ದರು.
