ನಾಡ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ, ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿಗಳ ನೇತೃತ್ವದಲ್ಲಿ ನಾಡ, ಹಡವು, ಸೇನಾಪುರ, ಬಡಾಕೆರೆ, ಗ್ರಾಮಗಳ ನಿವೇಶನ ರಹಿತರ ಬೃಹತ್ ಸಮಾವೇಶವು ನಾಡ ಸಮುದಾಯ ಭವನದಲ್ಲಿ ಜರುಗಿತು. ಕರ್ನಾಟಕ ಪ್ರಾಂತ ರೈತ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಕೂಲಿಕಾರರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಾ ದೇಶಕ್ಕೆ ಸ್ವಾತಂತ್ರ್ಯ ಬಂದು ೬ ದಶಕಗಳು ಕಳೆದರೂ ಇಂದಿಗೂ ಗ್ರಾಮೀಣ ಪ್ರದೇಶದ ಬಡಜನರಿಗೆ ಕನಿಷ್ಠ ಮೂಲಭೂತ ಸೌಕರ್ಯವನ್ನು ಸರಕಾರಕ್ಕೆ ಒದಗಿಸಲಾಗಲಿಲ್ಲ. ಕುಡಿಯುವ ನೀರು, ಮನೆ ನಿವೇಶನ, ಪಡಿತರ ಚೀಟಿ ಇತ್ಯಾದಿ ಸಮಸ್ಯೆ ಪರಿಹರಿಸಲು ಬೀದಿಗಿಳಿದು ಹೋರಾಟ ಮಾಡುವ ದುಸ್ಥಿತಿಗೆ ಬಂದಿರುವುದು ನಾಗರಿಕರಾದ ನಾವೆಲ್ಲ ನಾಚಿಕೆಯಿಂದ ತಲೆ ತಗ್ಗಿಸಬೇಕಾದ ವಿಚಾರವಾಗಿದೆ ಎಂದು ಹೇಳಿದರು. ಏಪ್ರಿಲ್ 28 ರಂದು ಭೂಮಿ ಮತ್ತು ನೀರು ನಮ್ಮ ಹಕ್ಕುಗಳಿಗಾಗಿ ಬೆಂಗಳೂರಿನಲ್ಲಿ ವಿಧಾನ ಸೌಧ ಚಲೋ ಹೋರಾಟಕ್ಕೆ ಬೆಂಬಲಿಸಿ, ಬಡನಿವೇಶನ ರಹಿತರು ಭಾಗವಹಿಸುವುದಕ್ಕೆ…
Author: Editor Desk
ನೀವು ಹೊಸ ಕಂಪ್ಯೂಟರ್ ಅನ್ನು ತಂದಿದ್ದೀರಿ ಮತ್ತು ಅದನ್ನು ಭದ್ರಪಡಿಸಲು ಇಚ್ಛಿಸುತ್ತಿದ್ದೀರಾ? ಹಾಗಿದ್ದರೆ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿರುವ ಸಲಹೆಗಳು ಇಲ್ಲಿವೆ. ನಿಮ್ಮ ಕಂಪ್ಯೂಟರ್ನ ಜೊತೆಗೆ ಅದರಲ್ಲಿರುವ ಫೈಲ್ಗಳನ್ನು ಹೇಗೆ ಭದ್ರಪಡಿಸುವುದು ಎಂಬುದರ ಬಗ್ಗೆ ಮಾಹಿತಿಯನ್ನು ಇಂದಿನ ಲೇಖನ ನಿಮಗೆ ನೀಡಲಿದೆ. ಇದನ್ನೂ ಓದಿ: ಸಿಮ್ ಲಾಕ್ ಆಗಿದೆಯೇ? ಇಲ್ಲಿದೆ ಪರಿಹಾರ ನಿಮ್ಮ ಕಂಪ್ಯೂಟರ್ ಅನ್ನು ಹೇಗೆ ಆರಿಸಬೇಕು ಅದರಲ್ಲಿರುವ ಫೈಲ್ಗಳನ್ನು ಹೇಗೆ ಭದ್ರಪಡಿಸಬೇಕು ಎಂಬುದನ್ನು ಕುರಿತ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ. ಹಾಗಿದ್ದರೆ ಆ ಅಂಶಗಳು ಯಾವುವು ಎಂಬುದನ್ನು ನೋಡೋಣ. ಆಪರೇಟಿಂಗ್ ಸಿಸ್ಟಮ್ ಆರಿಸಿ ಭದ್ರತೆ ಮತ್ತು ಅದರ ಬಳಕೆಯನ್ನು ಅನುಸರಿಸಿ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಮ್ ಆರಿಸಿ. ಬಳಕೆದಾರರ ಖಾತೆಗಳು, ಫೈಲ್ ಅನುಮತಿಗಳು ಮೊದಲಾದ ಮಾಹಿತಿಗಳನ್ನು ಆಗಾಗ್ಗೆ ನವೀಕರಿಸಲಾಗುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನಿಮ್ಮ ಆಪರೇಟಿಂಗ್ ವ್ಯವಸ್ಥೆಯನ್ನು ಭದ್ರತಾ ನವೀಕರಣಗಳೊಂದಿಗೆ ನವೀಕರಿಸುತ್ತಿರಿ ಮತ್ತು ಇತರ ಸಾಫ್ಟ್ವೇರ್ ಕಡೆಗೂ ಈ ಭದ್ರತೆಯನ್ನು ಅನುಸರಿಸುತ್ತಿರಿ. ವೆಬ್ ಬ್ರೌಸರ್ ನಿಮ್ಮ ವೆಬ್ ಬ್ರೌಸರ್ ಮೂಲಕ ಮಾಲ್ವೇರ್ಗಳು ನಿಮ್ಮ…
ನೂರಾರು ಸಂಖ್ಯೆಯಲ್ಲಿ ಆನ್ಲೈನ್ ಖರೀದಿಯ ಕುರಿತ ಅನುಮಾನಗಳನ್ನು ಗ್ರಾಹಕರು ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ಆನ್ಲೈನ್ ಖರೀದಿಯ ಲಾಭ ಸೇರಿದಂತೆ ಸಮಗ್ರ ವಿವರವನ್ನು ಇಲ್ಲಿ ನೀಡಲಾಗಿದೆ. ಈ ಮೂಲಕ ನಿಮಗೆ ಮಾರ್ಗದರ್ಶನ ನೀಡಿ, ಗೊಂದಲವನ್ನು ಪರಿಹರಿಸುವ ಯತ್ನ ಮಾಡಲಾಗಿದೆ. ಆನ್ಲೈನ್ ಖರೀದಿಯ ಪಾವತಿ ಹೇಗೆ ? ಇದು ಮೊದಲು ಕಾಡುವ ಪ್ರಶ್ನೆ. ಈಗ ಬುಕ್ಕಿಂಗ್ ಸೇರಿದಂತೆ ಖರೀದಿಗೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಎಟಿಎಂ ಕಮ್ ಡೆಬಿಟ್ ಕಾರ್ಡ್, ರುಪೇ ಡೆಬಿಟ್ ಕಾರ್ಡ್, ಮ್ಯಾಸ್ಟ್ರೋ ಡೆಬಿಟ್ ಕಾರ್ಡ್ ಮತ್ತುಎಂ-ಪೆಸಾ ಮೊಬೈಲ್ ವ್ಯಾಲೆಟ್ನ ಮೂಲಕ ಪಾವತಿ ಸ್ವೀಕರಿಸಲಾಗುತ್ತದೆ. ಯಶಸ್ವಿ ವ್ಯವಹಾರ : ಮ್ಯಾಜಿಕ್ಬ್ರಿಕ್ಸ್ ಡಾಟ್ ಕಾಮ್ ಮೂಲಕ ಪ್ರಾಪರ್ಟಿಯನ್ನು ಆನ್ಲೈನ್ ಖರೀದಿ ಮಾಡಿ, ಯಶಸ್ವಿಯಾಗಿ ಪಾವತಿ ಮಾಡಿದರೆ, ಸ್ವಯಂ ಚಾಲಿತವಾಗಿ ನಿಮ್ಮ ನೆಟ್ ಅನನ್ಯ ವೋಚರ್ ಕೋಡ್ ಇರುವ ಕನ್ಫರ್ಮೇಶನ್ ಪೇಜ್ಗೆ ಹೋಗುತ್ತದೆ. ಈ ಪೇಜ್ನಲ್ಲಿ ನಿಮ್ಮ ಪಾವತಿ ಯಶಸ್ವಿಯಾದ ಬಗ್ಗೆ ಸಂದೇಶ ಬರುತ್ತದೆ. ಇದರ ಜೊತೆಗೆ ಬುಕ್ಕಿಂಗ್ ಸಮಯದಲ್ಲಿ ನೀಡಿದ…
ಪ್ರಯಾಣ ಮಾಡುವುದು ಎಲ್ಲರಿಗೂ ಪ್ರಿಯವಾದ ಸಂಗತಿ. ವಾರವಿಡೀ ಕೆಲಸದ ಒತ್ತಡದಿಂದ ದೂರವಿರಬೇಕು, ಕೆಲಸಗಳಿಂದ ವಿರಾಮ ಪಡೆಯಬೇಕು, ಬದಲಾವಣೆ ಬೇಕೆನಿಸಿದಾಗ ಎಲ್ಲಾದರೂ ಪ್ರಯಾಣ ಹೋಗಿ ಮೂಡ್ ಫ್ರೆಶ್ ಮಾಡಿಕೊಳ್ಳಬೇಕು ಎನಿಸುತ್ತದೆ. ಪ್ರಯಾಣ ಹೋಗುವುದೆಂದರೆ ಸೂಕ್ತ ತಯಾರಿ, ಹಣ, ಸಮಯದ ಸರಿಯಾದ ಯೋಜನೆ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ವಿಪರೀತ ಹಣ ಖರ್ಚಾಗಬಹುದು. ಪ್ರಯಾಣ ಗೊಂದಲಕ್ಕೀಡಾಗಬಹುದು. ಹಿತಮಿತ ಬಜೆಟ್ನಲ್ಲಿ ಒಳ್ಳೆಯ ಸ್ಥಳದಲ್ಲಿ ಸುತ್ತಾಡಿಕೊಂಡು ಬಂದರೆ ಮನಸ್ಸಿಗೆ ಖುಷಿಯಾಗುತ್ತದೆ. ಕಡಿಮೆ ಖರ್ಚಿನಲ್ಲಿ ಉತ್ತಮ ಪ್ರಯಾಣವನ್ನು ಹೇಗೆ ಯೋಜನೆ ಮಾಡಬಹುದು ಎಂಬುದಕ್ಕೆ ಇಲ್ಲಿವೆ ಟಿಪ್ಸ್. ಆನ್ಲೈನ್ ಬುಕ್ಕಿಂಗ್: ಎಲ್ಲಿಗೆ ಪ್ರವಾಸ ಹೋಗುವುದು, ಯಾವಾಗ ಹೋಗುವುದು ಎಂದು ನಿರ್ಧರಿಸಿ ಏಜೆಂಟರ ಬಳಿ ಹೋಗಿ ಟಿಕೆಟ್ ಬುಕ್ ಮಾಡುವ ಬದಲು ಇಂಟರ್ನೆಟ್ನಲ್ಲಿ ಆನ್ಲೈನ್ ಬುಕ್ ಮಾಡಿದರೆ ಟಿಕೆಟ್ ಬೆಲೆ ಅಗ್ಗವಾಗುತ್ತದೆ. ಪ್ರವಾಸ ಹೋಗುವುದಕ್ಕೆ 20-30 ದಿನ ಮೊದಲೇ ಬುಕ್ ಮಾಡಿದರೆ ಉತ್ತಮ. ವಸತಿ : ಪ್ರವಾಸ ಹೋದಲ್ಲಿ ಸುರಕ್ಷಿತ ಹಾಗೂ ನೆಮ್ಮದಿಯ ನೆಲೆ ಸಿಗಬೇಕಾದುದು ಅಗತ್ಯ. ಸರಿಯಾದ ಹೊಟೇಲ್ನ್ನು ಪರಿಶೀಲಿಸಿ ಡಿಸ್ಕೌಂಟ್ ಲೆಕ್ಕಾಚಾರ…
ಚಟ್ಟಿನಾಡ್ ಕೋಳಿ ಗಟ್ಟಿ ಸಾರು ಸಾಮಗ್ರಿ: ಕೋಳಿ 1 ಕೆ.ಜಿ., ಆಲೂಗೆಡ್ಡೆ ಹೆಚ್ಚಿದ್ದು 2, ನವಿಲು ಕೋಸು ಹೆಚ್ಚಿದ್ದು 2, ಸಬ್ಬಸಿಗೆ ಸೊಪ್ಪು ಹೆಚ್ಚಿದ್ದು 1 ಬಟ್ಟಲು, ಮೆಂತ್ಯದ ಸೊಪ್ಪು ಹೆಚ್ಚಿದ್ದು 1 ಬಟ್ಟಲು, ಅರಿಶಿಣ 1 ಟೀ ಸ್ಪೂನ್, ಒಣಮೆಣಸಿನಕಾಯಿ ಪುಡಿ 2 ಟೇಬಲ್ ಸ್ಪೂನ್, ದನಿಯಾ ಪುಡಿ 2 ಟೇಬಲ್ ಸ್ಪೂನ್, ಉಪ್ಪು, ಈರುಳ್ಳಿ ಹೆಚ್ಚಿದ್ದು 3, ಟೊಮೆಟೊ 3 ಹೆಚ್ಚಿದ್ದು. ಮಸಾಲಾ ಪುಡಿ: ಚಕ್ಕೆ 2 ಚೂರು, ಲವಂಗ 6, ಕಲ್ಲು ಹೂವು 4, ಸೋಂಪು 1 ಟೀ ಸ್ಪೂನ್ ಎಲ್ಲವನ್ನೂ ಹುರಿದು ಪುಡಿ ಮಾಡಿ. ವಿಧಾನ: 4 ಟೇಬಲ್ ಸ್ಪೂನ್ ಎಣ್ಣೆ ಬಿಸಿ ಮಾಡಿ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಟೊಮೇಟೊ ಸೇರಿಸಿ ಬಾಡಿಸಿ. ಇದಕ್ಕೆ ಹೆಚ್ಚಿದ ಸೊಪ್ಪುಗಳು, ಅರಿಶಿಣ, ಒಣ ಮೆಣಸಿನಕಾಯಿ ಪುಡಿ, ದನಿಯಾ ಪುಡಿ, ಉಪ್ಪು, ಕೋಳಿ ತುಂಡುಗಳು, 2 ಬಟ್ಟಲು ನೀರು ಸೇರಿಸಿ 2 ವಿಶಲ್ ಕೂಗಿಸಿ. ತಣ್ಣಗಾದ ನಂತರ ಕುಕ್ಕರ್ ತೆಗೆದು…
ಗೋವಿಂದತೀರ್ಥಎಂದು ಕರೆಯುವ ಈ ಜಲಧಾರೆಯಡಿ ಮಿಂದರೆ ಪಾಪ ನಾಶವಾಗಿ ನವಚೈತನ್ಯ ಮೂಡುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ಪ್ರತಿ ವರ್ಷ ಎಳ್ಳಮವಾಸ್ಯೆಯ ದಿನ ಸಾವಿರಾರು ಮಂದಿ ಬೆಟ್ಟ-ಗುಡ್ಡವನ್ನು ಹತ್ತಿ ಜಲಧಾರೆಯ ಸೊಬಗನ್ನು ಸವಿಯಲು ಬರುತ್ತಾರೆ. ಇರುವುದೆಲ್ಲಿ? ಬೆಳ್ಕಲ್ ತೀರ್ಥ ಕೊಲ್ಲೂರು ಸಮೀಪದ ಜಡ್ಕಲ್ ಎಂಬ ಗ್ರಾಮದಲ್ಲಿದೆ. ಐದು ಕಿ. ಮೀ. ದೂರ ದುರ್ಗಮ ಕಾಡಿನಲ್ಲಿ ಸಂಚರಿಸಬೇಕಾದ ಕಾರಣ ವಾಹನಗಳ ಮೂಲಕ ಬಂದು, ದೂರದಲ್ಲೇ ನಿಲ್ಲಿಸಿ ಟ್ರೆಕ್ಕಿಂಗ್ ಕೈಗೊಳ್ಳುವುದು ಸೂಕ್ತ. ಜಲಧಾರೆ: ಸುಮಾರು 600 ಅಡಿ ಎತ್ತರದಿಂದ ಧುಮ್ಮಿಕ್ಕುವುದೇ ಬೆಳ್ಕಲ್ ತೀರ್ಥ. ಕೊಡಚಾದ್ರಿ ಬೆಟ್ಟದ ಹಿಮ್ಮುಖವಾದ ಬಂಡೆಯ ಮೇಲೆ ಕವಲು ಕವಲಾಗಿ ಜಲಧಾರೆ ಇಳಿದು ಮುತ್ತಿನ ಹನಿಗಳ ಮಾಲೆಯನ್ನು ಸೃಷ್ಟಿಸುವ ಪರಿಯೇ ಸೊಗಸು. ಗೋವಿಂದನ ಮಹಿಮೆ: ಬೆಳ್ಕಲ್ ತೀರ್ಥಕ್ಕೆ ಗೋವಿಂದ ತೀರ್ಥ ಎಂಬ ಹೆಸರು ಬರಲು ಮುಖ್ಯ ಕಾರಣವೂ ಇದೆ. ಜಲಧಾರೆಯ ಕೆಳಗೆ ನಿಂತು ಮೇಲಕ್ಕೆ ಮುಖ ಮಾಡಿ ‘ಗೋವಿಂದಾ’ ಎಂದು ಗೋವಿಂದನ ನಾಮ ಜಪ ಮಾಡಿದರೆ ಜಲಧಾರೆಯ ನೀರು ಅತ್ತಕಡೆಯಿಂದ ವೇಗವಾಗಿ ಸಾಗಿಬಂದು…
ಸಾಮಾನ್ಯವಾಗಿ ಮುಖ, ಕುತ್ತಿಗೆ, ಭುಜ, ಬೆನ್ನುಗಳ ಮೇಲೆ ಉಂಟಾಗುವ ಕಲೆಗಳಿಗೆ ಮೊಡವೆಗಳು ಪ್ರಮುಖ ಕಾರಣ. ಜತೆಗೆ ಹಾರ್ಮೋನುಗಳ ಏರುಪೇರು, ವಂಶಪಾರಂಪರ್ಯವಾಗಿ, ಚರ್ಮದ ಬಗ್ಗೆ ಸೂಕ್ತ ಕಾಳಜಿ ವಹಿಸದೇ ಇರುವುದು, ಅನಿಯಮಿತ ಆಹಾರ ಪದ್ಧತಿ…ಹೀಗೆ ಹಲವಾರು ಕಾರಣಗಳಿಂದ ಕಲೆಗಳು ಮುಖವನ್ನು ಆವರಿಸಿಕೊಳ್ಳುತ್ತವೆ. ಮೊಡವೆ, ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್, ಮುಚ್ಚಿ ಹೋಗಿರುವ ಚರ್ಮದ ರಂಧ್ರಗಳ ರೂಪದಲ್ಲಿ ಈ ಕಲೆಗಳು ಕಾಣಿಸಿಕೊಳ್ಳುತ್ತವೆ. ಮುಖ, ಕುತ್ತಿಗೆ, ಭುಜ, ಬೆನ್ನುಗಳಲ್ಲಿ ಇಂತಹ ಕಲೆಗಳು ಕಂಡುಬರುತ್ತವೆ. ಇಂತಹ ಕಲೆಗಳು ನೋಡುಗರನ್ನು ಅಸಹ್ಯಗೊಳಿಸುವುದಲ್ಲದೆ ಹಲವಾರು ಸಮಸ್ಯೆಗಳನ್ನೂ ಉಂಟು ಮಾಡುತ್ತವೆ. ಮಾರುಕಟ್ಟೆಗಳಲ್ಲಿ, ಮೆಡಿಕಲ್ಗಳಲ್ಲಿ ಇಂತಹ ಸಮಸ್ಯೆಗಳಿಗೆ ಹಲವಾರು ಔಷಧಗಳು ಲಭ್ಯ ಇವೆಯಾದರೂ ಅವುಗಳು ದುಬಾರಿ ಹಾಗೂ ರಾಸಾಯನಿಕಯುಕ್ತವಾಗಿರುತ್ತವೆ. ಇದನ್ನು ಅವಾಯ್ಡ್ ಮಾಡಲು, ಮನೆಗಳಲ್ಲೇ ಸಿಗುವ ಹಲವಾರು ಔಷಧಯುಕ್ತ ವಸ್ತುಗಳನ್ನು ಬಳಸುವುದರಿಂದ ಕಲೆಗಳಿಗೆ ಮುಕ್ತಿ ನೀಡಬಹುದು. *ನಿಂಬೆ ರಸ -ನಿಂಬೆ ರಸ ಕಪ್ಪು ಕಲೆಗಳನ್ನು ನಿವಾರಿಸಿ ಶ್ವೇತವರ್ಣದ ತ್ವಚೆಯನ್ನು ಹೊಂದಲು ಸಹಕಾರಿಯಾದುದು. ಇದರಲ್ಲಿ ಸಿಟ್ರಿಕ್ ಆ್ಯಸಿಡ್ ಅಧಿಕವಾಗಿರುವುದರಿಂದ ಇದು ಚರ್ಮದಲ್ಲಿನ ಜಿಡ್ಡಿನ ಅಂಶವನ್ನು…
* ಪದೇ ಪದೆ ಕಾಡುವ ಶ್ವಾಸಕೋಶದ ಸೋಂಕಿಗೆ 1 ಚಮಚ ಪುದೀನ ರಸಕ್ಕೆ 1 ಚಮಚ ಕ್ಯಾರೆಟ್ ರಸ ಹಾಗೂ 1ಚಮಚ ಜೇನುತುಪ್ಪ ಸೇರಿಸಿ ಖಾಲಿ ಹೊಟ್ಟೆಗೆ ಸೇವಿಸಿದರೆ ಶ್ವಾಸಕೋಶವು ಸೋಂಕು ರಹಿತವಾಗಿ ಬಲವಾಗುತ್ತದೆ . * 1ಚಮಚ ಪುದೀನ ರಸಕ್ಕೆ 1/2 ಚಮಚ ನಿಂಬೆ ರಸ ಮತ್ತು 1 ಚಮಚ ಜೇನುತುಪ್ಪ ಬೆರೆಸಿ ಸೇವಿಸಿದರೆ ಪಿತ್ತ ಹೆಚ್ಚಾದಾಗ ಕಾಡುವ ವಾಂತಿ, ತಲೆನೋವು ಕಡಿಮೆಯಾಗುತ್ತದೆ. *ಪುದೀನ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಆ ಪುಡಿಯಿಂದ ಹಲ್ಲುಗಳನ್ನು ಉಜ್ಜಿದರೆ ಬಾಯಿ ವಾಸನೆ ಬರುವುದಿಲ್ಲ ಮತ್ತು ವಸಡುಗಳು ದೃಢವಾಗುತ್ತದೆ. *ಪುದೀನ ಕಷಾಯವನ್ನು ಸೇವಿಸಿದರೆ ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆ ನೋವು ಕಡಿಮೆಯಾಗುತ್ತದೆ . -ಡಾ. ಸುಚೇತಾ ಜಯರಾಮ್
ನಿಮ್ಮ ತ್ವಚೆಯ ಬಣ್ಣವನ್ನು ಹುಣಸೆಹಣ್ಣು ಮತ್ತಷ್ಟು ಸುಧಾರಿಸುತ್ತದೆ. ಹುಣಸೆಹಣ್ಣು ಬಳಸುವುದರಿಂದ ತ್ವಚೆಯಲ್ಲಿರುವ ಹಲವಾರು ಲೋಪ ದೋಷಗಳು ನಿವಾರಣೆಯಾಗುತ್ತವೆ. ನಿಮ್ಮ ತ್ವಚೆ ಸೂಕ್ಷ್ಮವಾಗಿದ್ದಲ್ಲಿ, ಇದು ನಿಮ್ಮ ತ್ವಚೆಗೆ ಉರಿಯುವಂತಹ ಅನುಭವವನ್ನು ನೀಡುತ್ತದೆ. ಆದ್ದರಿಂದ ಇದನ್ನು ನೇರವಾಗಿ ಮುಖದ ಮೇಲೆ ಬಳಸುವ ಮೊದಲು, ಕಿವಿಯ ಹಿಂದಿನ ಭಾಗದಲ್ಲಿ ಪರೀಕ್ಷಿಸಿ ನಂತರ ಪ್ರಯತ್ನಿಸಿ. ತ್ವಚೆ ಬೆಳ್ಳಗಾಗಲು ಇತರ ಕ್ರೀಮ್ಗಳ ಮೊರೆ ಹೋಗುವ ಬದಲು ಹುಣಸೆಹಣ್ಣು ಬಳಸುವುದು ಉತ್ತಮವಾದ ಪರಿಹಾರವಾಗಿದೆ. ಇದು ಕೇವಲ ಒಂದೆರಡು ದಿನಗಳಲ್ಲಿ ನಿಮಗೆ ಫಲಿತಾಂಶವನ್ನು ಒದಗಿಸುತ್ತದೆ. ತ್ವಚೆಯು ಬೆಳ್ಳಗಾಗಲು ಹಾಗೂ ಕಾಂತಿಯುಕ್ತವಾಗಲು ಹುಣಸೆಹಣ್ಣಿನ ಜತೆಗೆ ಕೆಲವೊಂದು ಪದಾರ್ಥಗಳನ್ನು ಬಳಸಬೇಕಾಗುತ್ತದೆ. ಅವುಗಳಿಂದ ನಿಮ್ಮ ತ್ವಚೆಗೆ ಯಾವುದೇ ಹಾನಿಯಾಗುವುದಿಲ್ಲ. ಉದಾಹರಣೆಗೆ ಆಲೀವ್ ಎಣ್ಣೆಯನ್ನು ಹುಣಸೆ ಹಣ್ಣಿನ ಜೊತೆಗೆ ಬಳಸಿದರೆ, ನಿಮ್ಮ ತ್ವಚೆ ಮೃದು ಮತ್ತು ಕೋಮಲತೆಯಿಂದ ಕೂಡಿ ತಾಜಾ ಆಗಿ ಕಂಗೊಳಿಸುತ್ತದೆ. ಆದ್ದರಿಂದ ಹುಣಸೆಹಣ್ಣಿನ ಫೇಸ್ ಪ್ಯಾಕ್ ಬಳಸಿದ ಮೇಲೆ ಸ್ವಾಭಾವಿಕವಾದ ಎಣ್ಣೆಗಳನ್ನು ಬಳಸಲು ಮರೆಯಬೇಡಿ.
ನವೋದಯದ ಪ್ರಮುಖ ಕವಿಗಳಾದ ಕುವೆಂಪು, ದ.ರಾ.ಬೇಂದ್ರೆ, ನರಸಿಂಹಸ್ವಾಮಿ, ಜಿ.ಎಸ್.ಶಿವರುದ್ರಪ್ಪ ಮತ್ತಿತರರ ಗೀತೆಗಳನ್ನು ಜನಸಾಮಾನ್ಯರಿಗೆ ಪರಿಚಯಿಸಿದವರೇ ಕಾಳಿಂಗರಾಯರು. ಹಳ್ಳಿ, ಪಟ್ಟಣಗಳಲ್ಲಿ ಹಾಡುತ್ತಾ ಸಾಗಿದ ರಾಯರು ಭಾವಗೀತೆ ಪ್ರಕಾರವನ್ನು ಜನಪ್ರಿಯಗೊಳಿಸಿದರು. ಅವರ ಹಾಡುಗಾರಿಕೆ ಶಾಲಾ – ಕಾಲೇಜುಗಳ ವಿದ್ಯಾರ್ಥಿಗಳ ಮೇಲೆ ದೊಡ್ಡ ಪ್ರಭಾವ ಬೀರಿತ್ತು. ವಿದ್ಯೆಯಿಂದ ವಂಚಿತರಾದ ಲಕ್ಷಾಂತರ ಕನ್ನಡಿಗರಿಗೆ ಕಾಳಿಂಗರಾಯರು ಮತ್ತು ಬಾಳಪ್ಪ ಹುಕ್ಕೇರಿ ಅವರ ಹಾಡುಗಾರಿಕೆಯಿಂದ ನವೋದಯ ಸಾಹಿತ್ಯ ಪರಿಚಯವಾಯ್ತು. ಈ ಕಾರಣಕ್ಕಾಗಿ ಕನ್ನಡಿಗರು ಇವರಿಬ್ಬರಿಗೆ ಕೃತಜ್ಞರಾಗಿರಬೇಕು. ಕಾಳಿಂಗರಾಯರು ಶಾಸ್ತ್ರೀಯ ಸಂಗೀತ ವಾತಾವರಣದಲ್ಲಿ ಬೆಳೆದುಬಂದವರು. ಅವರಿಗೆ ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪರಿಣತಿಯಿತ್ತು. ಈ ಹಿನ್ನೆಲೆಯೊಂದಿಗೆ ಭಾವಗೀತೆ ಪ್ರಪಂಚಕ್ಕೆ ಕಾಲಿಟ್ಟ ಅವರು ನಂತರದ ಗಾಯನ ಪ್ರತಿಭೆಗಳಿಗೆ ಮಾದರಿಯಾದರು. ಸಿನಿಮಾ ಕ್ಷೇತ್ರದಲ್ಲೂ ಪಿ.ಕಾಳಿಂಗರಾವ್ ವಿಶಿಷ್ಟ ಛಾಪು ಮೂಡಿಸಿದ್ದಾರೆ. ನವೋದಯ ಕವಿಗಳ ಅರ್ಥಪೂರ್ಣ ಗೀತೆಗಳು ಸಿನಿಮಾಗೆ ಪರಿಚಯವಾಗಿದ್ದೇ ಕಾಳಿಂಗರಾಯರ ಮೂಲಕ. ಹತ್ತಾರು ಭಾವಗೀತೆಗಳು ಅವರ ಕಂಠಸಿರಿಯಲ್ಲಿ ಬೆಳ್ಳಿತೆರೆಗೆ ಅಳವಡಿಸಲ್ಪಟ್ಟಿವೆ. ಮುಂದೆ ಮೈಸೂರು ಅನಂತಸ್ವಾಮಿ, ಗುಣಸಿಂಗ್, ಸಿ.ಅಶ್ವಥ್ ಮತ್ತಿತರೆ ಸಂಗೀತಗಾರರು ಕಾಳಿಂಗರಾಯರು ಹಾಕಿಕೊಟ್ಟ ಹಾದಿಯಲ್ಲಿ…
