Author: Editor Desk

ಜಾತಿ, ಧರ್ಮ, ಲಿಂಗ ಭೇದ ಮರೆತು ಮನುಷ್ಯರಾಗುವುದೇ ನಿಜವಾದ ಆಧುನಿಕತೆ: ಕಾಯ್ಕಿಣಿ ಕನ್ನಡದ ಸೃಜನಾತ್ಮಕ ಸಾಹಿತಿಗಳ ಪೈಕಿ ಅಗ್ರಗಣ್ಯರೆನಿಸಿಕೊಂಡವರು ಜಯಂತ ಕಾಯ್ಕಿಣಿ. ತಮ್ಮ ಕಥೆ, ಕವನ, ಬರಹಗಳ ಮೂಲಕ ಜನಪ್ರಿಯರಾದ ಅವರು ವಾಗ್ಮಿಯಾಗಿಯೂ ಕನ್ನಡಿಗರ ಮನಗೆದ್ದವರು. ಟಿವಿ ಪರದೆಯ ಮುಂದೆ ನಿಂತು ಉತ್ತಮ ನಿರೂಪಕರೆನಿಸಿಕೊಂದ್ದ ಕಾಯ್ಕಿಣಿ ಕನ್ನಡ ಸಿನಿಮಾ ಹಾಡುಗಳಿಗೆ ಹೊಸ ನುಡಿಗಟ್ಟುಗಳನ್ನು, ಕನ್ನಡ ಪ್ರೇಮಿಗಳಿಗೆ ಹೊಸ ಹಾಡುಗಳನ್ನು ಕೊಟ್ಟ ಹೆಗ್ಗಳಿಕೆ ಹೊಂದಿದ್ದಾರೆ, ಬದುಕಿನ ಚಿಕ್ಕ ಘಟನೆಯೇ ಇರಲಿ ಅದನ್ನು ಚಂದದ ಚೌಕಟ್ಟಿನೊಳಗೆ ಚಿತ್ರಿಸುವ ಅವರ ಜೀವನ ಪ್ರೀತಿಯ ಮಾತು ಮತ್ತು ಕೃತಿಗಳು ಇತರರಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಇತ್ತಿಚಿಗೆ ಕುಂದಾಪ್ರ ಡಾಟ್ ಕಾಂ ಗೆ ಕಾಯ್ಕಿಣಿಯವರು ಮಾತಿಗೆ ಸಿಕ್ಕರು. ಅವರ ಸಂದರ್ಶನದ ಸಂಕ್ಷಿಪ್ತ ವಿವರ ಇಲ್ಲಿದೆ. ಕುಂದಾಪ್ರ ಡಾಟ್ ಕಾಂ: ತಮ್ಮ ಮಾತು ಮತ್ತು ಕೃತಿಗಳಲ್ಲಿ ಮುಂಬೈ ನಗರಿಯ ಜೊತೆಗೆ ಯುವಜನತೆಯನ್ನು ಕೇಂದ್ರಿಕರಿಸಿ ಮಾತನಾಡುತ್ತಿರಿ. ಆಧುನಿಕತೆಯ ಮರುಳಾಗಿರುವ ಯುವಜನರಿಂದ ನೀವೆನನ್ನು ಕಂಡುಕೊಳ್ಳಬಯಸುತ್ತಿರಿ? ಕಾಯ್ಕಿಣಿ: ಆಧುನಿಕತೆ ಎಂದರೆ ಅತ್ಯಾಧುನಿಕ ಮೊಬೈಲ್ ಕೊಳ್ಳುವುದೊ, ಅತ್ಯಾಧುನಿಕ…

Read More

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ ಬೈಂದೂರು: ಉಡುಪಿ ಜಿಲ್ಲೆಯ ಶಿರೋಭಾಗದಲ್ಲಿರುವ ಬೈಂದೂರು ತಾಲೂಕು ರಚನೆಯ ವಿಚಾರ ಪ್ರಸ್ತಾಪಗೊಂಡು 40 ವರ್ಷಗಳೇ ಸಮೀಪಿಸುತ್ತಿದೆ. ಸರಕಾರ ಆಡಳಿತ ಸುಧಾರಣೆಯ ದೃಷ್ಠಿಯಿಂದ ನೂತನ ತಾಲೂಕು ರಚನೆಗೆ ನೇಮಿಸಿದ ಸಮಿತಿ, ಆಯೋಗಗಳು ಮಾಡಿದ್ದ ಶಿಫಾರಸ್ಸು-ವರದಿಗಳು ಧೂಳು ಹಿಡಿದಿವೆ. ಈ ಭಾಗದ ಜನ ನಡೆಸುತ್ತಿರುವ ಹೋರಾಟದ ಕೂಗು ನಿರಂತರವಾಗಿ ಮುಂದುವರಿಯುತ್ತಲೇ ಇದೆ. ನಮ್ಮ ಜನಪ್ರತಿನಿಧಿಗಳು ಮಾತ್ರ ದಿನವೂ ಭರವಸೆ ಹುಟ್ಟಿಸುವಂತಹ ಮಾತಗಳನ್ನಾಡುತ್ತಲೇ ಇದ್ದಾರಾದರೂ ಕೂಡ ತಾಲೂಕು ರಚನೆಯ ವಿಚಾರ ಸರಕಾರಿ ಕಡತಗಳಲ್ಲಷ್ಟೇ ಉಳಿದಿದೆ. ಬೈಂದೂರು ತಾಲೂಕಾಗಬೇಕೆಂಬ ಕನಸು ಮೂರೂವರೆ ದಶಕಕ್ಕಿಂತಲೂ ಹಿಂದಿನದು. ಈ ಸಂಬಂಧ 1986ರಲ್ಲಿ ಬೈಂದೂರಿಗೆ ಭೇಟಿ ನೀಡಿದ್ದ ಜಿಲ್ಲಾ ಪುನರ್ವಿಂಗಡನೆ ಮತ್ತು ತಾಲೂಕು ಪುನರ್ ರಚನೆಯ ಆಯೋಗದ ಅಧ್ಯಕ್ಷರಾಗಿದ್ದ ಹುಂಡೇಕಾರರಿಗೆ ಬೈಂದೂರು ತಾಲೂಕು ರಚನಾ ಸಮಿತಿಯಿಂದ ಮನವಿಯನ್ನು ನೀಡಲಾಗಿತ್ತು. ನೂತನ ತಾಲೂಕು ರಚನೆಗೆ ನೇಮಿಸಿದ ವಾಸುದೇವರಾವ್ ಆಯೋಗ, ಹುಂಡೇಕರ್ ಸಮಿತಿ ಮತ್ತು ಗದ್ದಿಗೌಡರ್ ಸಮಿತಿ ಕುಂದಾಪುರ ತಾಲೂಕನ್ನು ಕುಂದಾಪುರ…

Read More

ಹೌದು ಸದ್ದಕ್ಕೆ ನಾವೀಗ ಸೀನಿಯರ್ಸ್. ಕಾಲೇಜಿಗೆ ಬಂದು ಮೂರು ವರುಷ ಮುಗಿಯುವ ಹೊತ್ತಲ್ಲಿ ನಾವಿದ್ದೇವೆ. ಇದೇ ಎರಡು ವರ್ಷದ ಹಿಂದೆ ಕ್ಯಾಂಪಸ್ನೊಳಗೆ ಕಾಲಿಡಲು ಹೆದರುತ್ತಿದವರು ಈಗ ಅಷ್ಟೇ ಧೈರ್ಯದಿಂದ ಸೀನಿಯರ್ಸ ಆಗಿ ತಿರುಗಾಡುತ್ತಿದ್ದೆವೆ. ಕ್ಯಾಂಪಸನಲ್ಲಿ  ಸೀನಿಯರ್ಸ ಆಗುವುದೆಂದರೆ ಅದೊಂತರಾ ಜವಬ್ದಾರಿಯುತ ಸಂಭ್ರಮ. ಹಿಂದೆ ಜೂನಿಯರ್ಸ್ ಆಗಿದ್ದವರು ಈಗ ಜವಬ್ದಾರಿಯುತ ಸೀನಿಯರ್ಸ ಆಗಿದ್ದೇವೆ. ಮನೆಯ ಪರಿಸರದಲ್ಲಿ  ನಮಗಿಲ್ಲದ ಜವಬ್ದಾರಿ ಈಗ  ಕ್ಯಾಂಪಸನೊಳಗೆ ಬಂದು ಬಿಟ್ಟಿದೆ. ಈ ಸೀನಿಯರ್ಸ್ ಪಟ್ಟ ಎಂಬುವುದು ಯಾವತ್ತು ಅನುಭವಿಸದ ರೋಚಕ ಅನುಭವ ಲೋಕ.        ಇನ್ನೇನು ಕಾಲೇಜು ಮುಗಿಯುತ್ತೆ, ಸೀನಿಯರ ಪಟ್ಟ ಕೆಳಗಿಡುತ್ತೇವೆ. ಅನ್ನುವಷ್ಟರಲ್ಲಿ ಪ್ರೇಮಿಗೆ ಪ್ರೇಮ ನಿವೇದನೆಯ ನೆನಪು ಮರುಕಳಿಸುವಂತೆ ಆರಂಭದ ದಿನಗಳ ನೆನಪಿನ ಅಲೆಗಳು ಮನದ ಮುಗ್ದತೆಗೆ ಬಂದೆರಗುತ್ತಿವೆ.        ಆವತ್ತು ನಾವು ಜೂನಿರ್ಸ ಆಗಿ ಕಾಲೇಜಿಗೆ ಕಾಲಿಟ್ಟಾಗ ಮೈ ಜುಮ್ ಎಂದಿತ್ತು. ಅಬ್ಬಾ ಎಂತ ದೊಡ್ಡ ಕಾಲೇಜು. ಕಾಲೇಜಿನ ತುಂಬಾ ತಿರುಗಾಡುತ್ತಿದ್ದ ಸೀನಿಯರ್ಸ್ ಬಾಯ್ಸ. ಅವರ ರೋಮಿಂಗ ಕಾಲ್ಗಳಿಗೆ…

Read More

ಗಂಗೊಳ್ಳಿ: ಪೊಲೀಸರು ಮತ್ತು ಜನರ ನಡುವೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯನ್ನಾಗಿ ಮಾಡುವ ದೃಷ್ಟಿಯಿಂದ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ 13 ಗ್ರಾಮಗಳಲ್ಲಿ ಪೊಲೀಸ್ ಜನಸಂಪರ್ಕ ಸಭೆ ಆಯೋಜಿಸಲಾಗುವುದು ಎಂದು ಕುಂದಾಪುರ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ ಹೇಳಿದರು. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಗಿದ್ದ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗರಿಕ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಗಂಗೊಳ್ಳಿಯಲ್ಲಿ ಕೆಲವೊಂದು ಅಹಿತಕರ ಘಟನೆಗಳು ನಡೆದಿದ್ದರೂ ಬಳಿಕ ಸಾರ್ವಜನಿಕರ ಸಹಕಾರದಿಂದ ಪುನಃ ಶಾಂತಿ ಸುವ್ಯವಸ್ಥೆ ನೆಲೆಸಿದೆ. ಕೇವಲ ಪೊಲೀಸರಿಂದ ಶಾಂತಿ ಸುವ್ಯವಸ್ಥೆ ಕಾಪಾಡುವುದು ಸಾಧ್ಯವಿಲ್ಲ. ಗ್ರಾಮದ ಜನರು ಪೊಲೀಸರೊಂದಿಗೆ ಸಹಕರಿಸಿದಾಗ, ತಮ್ಮ ಸಮಸ್ಯೆಗಳನ್ನು ಪೊಲೀಸರೊಂದಿಗೆ ಮುಕ್ತವಾಗಿ ಹಂಚಿಕೊಂಡಾಗ ಮತ್ತು ಸಮಾಜದಲ್ಲಿ ಅಶಾಂತಿ ಸಷ್ಟಿಸುವ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದಾಗ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದರು. ಗಂಗೊಳ್ಳಿಯಲ್ಲಿ ಸುಸಜ್ಜಿತ ಪೊಲೀಸ್ ಹೊರಠಾಣೆ ಆರಂಭಿಸುವ, ಸಿಬ್ಬಂದಿ ಕೊರತೆಯನ್ನು ನೀಗಿಸಿ ಠಾಣೆಗೆ…

Read More

ಕುಂದಾಪುರ: ಕಳೆದ ವಾರ ಕೊಲೆಯಾದ ಗೋಪಾಡಿಯ ಗರ್ಭಿಣಿ ಮಹಿಳೆ ಹತ್ಯೆ ಪ್ರಕರಣದ ಸಮಗ್ರ ತನಿಖೆ ಹಾಗೂ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ತಾಲೂಕು ಮೂಕಾಂಬಿಕಾ ಮಹಿಳಾ ಮಂಡಳಗಳ ಒಕ್ಕೂಟದ ನೇತತ್ವದಲ್ಲಿ ಇಲ್ಲಿನ ಸಹಾಯಕ ಕಮಿಷನರ್ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಒಕ್ಕೂಟದ ಅಧ್ಯಕ್ಷೆ ರಾಧಾದಾಸ್ ಈ ಸಂದರ್ಭ ಮಾತನಾಡಿ ಒಂಟಿಯಾಗಿದ್ದ ಗರ್ಭಿಣಿ ಮಹಿಳೆಯನ್ನು ಅಮಾನುಷವಾಗಿ ಹತ್ಯೆಗೈಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ವ್ಯಕ್ತಿಗೆ ಕಠಿಣ ಶಿಕ್ಷೆ ನೀಡಬೇಕು. ಈ ಘಟನೆಯಲ್ಲಿ ಈತನೊಂದಿಗೆ ಅನ್ಯರು ಭಾಗಿಯಾಗಿರುವ ಶಂಕೆಯಿದ್ದು ತನಿಖೆ ಚುರುಕುಗೊಳಿಸಿ ಅವರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ತಾಲೂಕಿನಲ್ಲಿ ಇತ್ತೀಚೆಗೆ ಎಂಟು ಮಹಿಳೆಯರ ಕೊಲೆಯಾಗಿದ್ದು ಕೃತ್ಯದ ಆರೋಪಿಗಳಿಗೆ ಶಿಕ್ಷೆಯಾಗಿರುವುದಿಲ್ಲ. ಗೋಪಾಡಿಯ ಘಟನೆಯ ಬಳಿಕ ಮಹಿಳೆಯರು ಭೀತಿಗೊಳಗಾಗಿದ್ದಾರೆ ಎಂದು ಅವರು ತಿಳಿಸಿದರು. ಮನವಿ ಸ್ವೀಕರಿಸಿದ ಸಹಾಯಕ ಕಮಿಷನರ್ ಚಾರುಲತಾ ಸೋಮಲ್ ಪ್ರತಿಕ್ರಿಯಿಸಿದ ಘಟನೆಯ ಬಗೆಗಿನ ಮಾಹಿತಿ ಇದೆ. ಸಂಬಂಧಿತ ಅಧಿಕಾರಿಗಳಿಗೆ ಘಟನೆ ಬಗ್ಗೆ ಸಮಗ್ರ ತನಿಖೆಗೆ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು…

Read More

ಉಡುಪಿ: ಕಳೆದ 15 ವರ್ಷಗಳಿಂದ ಜೆಡಿಎಸ್‌ನ ಅಧ್ಯಕ್ಷರಾಗಿದ್ದ ಬೆಳಪು ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯನಾಗಿ ಮುಂದುವರಿಯುವುದಾಗಿ ಘೋಷಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅವರು ಈ ನಿರ್ಧಾರ ಪ್ರಕಟಿಸಿದರು. ಪಕ್ಷವನ್ನು ಜಿಲ್ಲೆಯಲ್ಲಿ ತಳಮಟ್ಟದಿಂದ ಸಂಘಟಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಜಿಲ್ಲೆಯಲ್ಲಿ ನಡೆಯುವ ಅನ್ಯಾಯ, ದೌರ್ಜನ್ಯಗಳ ವಿರುದ್ಧ ಹೋರಾಟ, ಜನಪರ ಕಾರ್ಯಗಳಲ್ಲಿ ನಿರಂತರ ತೊಡಗಿಸಿಕೊಂಡಿದ್ದರೂ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳ ಪೈಪೋಟಿ ನಡುವೆ ಜೆಡಿಎಸ್‌ನಲ್ಲಿ ನಿರೀಕ್ಷಿತ ಬೆಳವಣಿಗೆಯಾಗಿಲ್ಲ ಎಂದು ಒಪ್ಪಿಕೊಂಡರು. ಪಕ್ಷದ ರಾಜ್ಯ ಘಟಕದಿಂದ ಚುನಾವಣೆ ಸಂದರ್ಭದಲ್ಲಿ ಮತ್ತು ಪಕ್ಷ ಸಂಘಟನೆಗೆ ಯಾವುದೇ ಸಹಕಾರ ಸಿಗದೇ ಹೋದರೂ ಸಿಕ್ಕ ಅವಕಾಶವನ್ನು ದುರುಪಯೋಗ ಪಡಿಸಿಕೊಳ್ಳದೆ, ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಕರ್ತವ್ಯ ನಿರ್ವಹಿಸಿದ್ದೇನೆ. ಜಿಲ್ಲೆಗೆ ಮಾರಕವಾಗಿರುವ ಪಾದೂರು ಪೈಪ್‌ಲೈನ್, ರೈತರ ಜಮೀನು ವಶಪಡಿಸಿಕೊಳ್ಳುವ ಸರಕಾರದ ನೀತಿಗಳ ವಿರುದ್ಧ ಪಕ್ಷಾತೀತವಾಗಿ ಹೋರಾಟ ಸಂಘಟಿಸುವುದಕ್ಕಾಗಿ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದರು. ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಆಹ್ವಾನ ಇದ್ದರೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆದರೆ ನಾನು ರಾಜಕೀಯ ಸನ್ಯಾಸಿಯಲ್ಲ…

Read More

ಕುಂದಾಪುರ: ಭಾರತೀಯ ಜೇಸಿಸ್‌ 100ನೇ ವರ್ಷದ ಸಂಭ್ರಮಾಚರಣೆ ಯಲ್ಲಿ ಪ್ರಸಕ್ತ ವರ್ಷದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಸ್ವತ್ಛತಾ ಆಂದೋಲನ ಸಮಾಧಾನ್‌ ಯೋಜನೆಗೆ ಕುಂದಾಪುರ ಜೇಸಿಐ ವತಿಯಿಂದ ಮೂರು ಶೌಚಾಲಯಗಳನ್ನು ಹೆಬ್ರಿ ಹಾಗೂ ಕೋಣಿಯಲ್ಲಿ ಕೊಡುಗೆಯಾಗಿ ನೀಡಿದ್ದಾರೆ. ಫಲಾನುಭವಿಗಳಿಗೆ ರಾಷ್ಟ್ರೀಯ ಉಪಾಧ್ಯಕ್ಷ ಎಸ್‌. ಅರುಣ್‌ ಅವರು ಹಸ್ತಾಂತರಿಸಿದರು. ವಲಯ 15ರ ಅದ್ಯಕ್ಷ ಪಿ.ಎಸ್‌. ಕೃಷ್ಣಮೋಹನ್‌ ಮಾತನಾಡಿ ವಲಯ 15 ರಲ್ಲಿ 100 ಶೌಚಾಲಯಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಶೀಘ್ರದಲ್ಲಿಯೇ ಮುಟ್ಟಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಒನ್‌ ಲೋಮ್‌-ಒನ್‌ ಸ್ಕೂಲ್‌ ಇದರ ನಿರ್ದೇಶಕ ಶ್ರೀಧರ್‌ ಪಿ.ಎಸ್‌., ವಲಯ ಉಪಾಧ್ಯಕ್ಷ ಸುಹಾನ್‌, ವಲಯ ನಿರ್ದೇ ಶಕರಾದ ಸಂತೋಷ್‌ ಜಿ., ನಾಗೇಂದ್ರ ಪೈ, ಸುಚಿತ್‌ ಪಿ.ಕೆ., ಮಂಗೇಶ್‌ ಶ್ಯಾನುಭಾಗ್‌, ರತ್ನಾಕರ, ಪೂರ್ವ ವಲಯ ಅಧಿಕಾರಿ ಗೋಪಾಲ ಪೂಜಾರಿ, ಕಾರ್ಯಕ್ರಮದ ಸಂಯೋಜಕ ರವೀಶ್‌ ಕೊರವಡಿ, ಜೇಸಿರೆಟ್‌ ಅಧ್ಯಕ್ಷೆ ರೂಪಾ ಸಿ. ಇಂಬಾಳಿ, ಕಾರ್ಯದರ್ಶಿ ಅವಿನಾಶ್‌ ರೈ ಉಪಸ್ಥಿತರಿದ್ದರು.

Read More

ಕುಂದಾಪುರ: ಜನರ ಬೇಡಿಕೆಗಳನ್ನು ಪರಿಗಣಿಸಿ ಈ ಅಡೆತಡೆಗಳನ್ನು ನಿವಾರಣೆ ಮಾಡಿಕೊಂಡು ರೈತರಿಗೆ ಯೋಜನೆಯ ಮೊದಲ ಹಂತದ ನೀರನ್ನು ಬಿಡಲು ಸರಕಾರ ಕ್ರಮ ಕೈಗೊಂಡಿರುವುದನ್ನು ಜಿಲ್ಲಾ ರೈತ ಸಂಘ ಸ್ವಾಗತಿಸುತ್ತದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ವಿಧಾನಪರಿಷತ್‌ ಸದಸ್ಯ ಕೆ.ಪ್ರತಾಪ್‌ಚಂದ್ರ ಶೆಟ್ಟಿ ತಿಳಿಸಿದ್ದಾರೆ. ಮಂಗಳವಾರ ಕುಂದಾಪುರದ ಆರ್‌.ಎನ್‌.ಶೆಟ್ಟಿ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಯೋಜನೆಯ ಹೇಳಲಾದ ಎಡದಂಡೆ, ಬಲದಂಡೆ ಕಾಲುವೆಗಳಿಗೆ ಹಾಗೂ ಏತ ನೀರಾವರಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಕೃಷಿ ಪ್ರದೇಶಗಳಿಗೆ ನೀರುಣಿಸುವ ಕಾರ್ಯ ಸೂಚಿಯಲ್ಲಿ ಯಾವುದೆ ಬದಲಾವಣೆ ಮಾಡದಂತೆ ಹಾಗೂ ಯೋಜನೆಯ ಉಳಿದ ಕಾಮಗಾರಿಗಳನ್ನು ಕಾಲ ಮಿತಿಯೊಳಗೆ ಪೂರೈಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುವುದು. ವಾರಾಹಿ ನೀರಾವರಿ ಯೋಜನೆಯೊಂದಿಗೆ ಪ್ರಾರಂಭಿಸಲಾದ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಪುನಶ್ಚೇತನದ ಕುರಿತು ಏಕಪಕ್ಷೀಯ ತೀರ್ಮಾನ ತರವಲ್ಲ, ಈ ಭಾಗದ ರೈತರಿಗೆ ಅನೂಕೂಲವಾಗುವ ಹಾಗೂ ಇಲ್ಲಿವ ಮಣ್ಣಿನ ಜೈವಿಕ ಅಂಶಗಳಿಗೆ ಪೂರಕವಾಗುವ ಬೆಳೆಗಳ ಕುರಿತು ತಜ್ಞರ…

Read More

  ಕುಂದಾಪುರ: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಮಾರ್‌ ಸೊರಕೆ ಅವರು ವಾರಾಹಿ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇವರೊಂದಿಗೆ ಕುಂದಾಪುರ ತಹಶೀಲ್ದಾರ್‌ ಗಾಯತ್ರಿ ನಾಯಕ್‌, ಅರಣ್ಯಾಧಿಕಾರಿಗಳು ಹಾಗೂ ವಾರಾಹಿ ಯೋಜನೆಯ ಮುಖ್ಯ ಎಂಜಿನಿಯರ್‌ ನಟರಾಜ್‌ ಮೊದಲಾದವರು ಉಪಸ್ಥಿತರಿದ್ದರು.

Read More

ಕೋಟೇಶ್ವರ: ಗೋಪಾಡಿಯಲ್ಲಿ ಎ.11ರಂದು ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಇಂದಿರಾ ಮೊಗವೀರ ಅವರ ಮನೆಗೆ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಣ್ಣಾಮಲೈ ಅವರು ಗುರುವಾರ ರಾತ್ರಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿ ಧೈರ್ಯ ತುಂಬಿದರು. ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ವಿಕ್ಟಿಂ ಪರಿಹಾರ ಯೋಜನೆಯಡಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳಿಗೆ ಸಂಬಂಧಿಸಿ ಲಭಿಸುವ ರೂ.3 ಲಕ್ಷ ಪರಿಹಾರವನ್ನು ಗೋಪಾಡಿಯ ಮೃತ ಇಂದಿರಾ ಅವರ ಕುಟುಂಬಕ್ಕೆ ದೊರಕಿಸಿಕೊಡುವಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಾಮಾಣಿಕ ಪ್ರಯತನ ಮಾಡುವುದಾಗಿ ಹೇಳಿದರಲ್ಲದೇ, ಈ ಪರಿಸರದಲ್ಲಿ ಸೂಕ್ತ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗುವುದು. ಕೊಲೆ ಪ್ರಕರಣದ ತನಿಖೆಯಲ್ಲಿ ಯಾವುದೇ ಲೋಪವಾಗದಂತೆ ಹಾಗೂ ಆರೋಪಿಯು ಈ ಪ್ರಕರಣದಲ್ಲಿ ತಪ್ಪಿಸಿಕೊಳ್ಳಬಾರದಂತೆ ಜವಾಬ್ದಾರಿಯುವಾಗಿ ಪ್ರಕರಣವನ್ನು ದಾಖಲಿಸಲಾಗಿದೆ. ಇಂತಹ ಘಟನೆ ಗ್ರಾಮೀಣ ಪ್ರದೇಶದಲ್ಲಿ ಮರುಕಳಿಸದಂತೆ ನೋಡಿಕೊಳ್ಳುವಲ್ಲಿ ಪೊಲೀಸ್‌ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಸಮಾಜ ಸೇವಕಿ ರಾಧಾದಾಸ್‌ ಕುಂಭಾಸಿ, ಗಣೇಶ್‌ ಪುತ್ರನ್‌, ಮೊಗವೀರ ‌ಸಮಾಜದ ಪ್ರಮುಖರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ,…

Read More