ಬೈಂದೂರು: ನಮ್ಮ ವ್ಯವಸ್ಥೆಯಲ್ಲಿ ಮೇಲಿನ ಸ್ತರದ ಜನಪ್ರತಿನಿಧಿಗಳಿಗೆ ಜನರನ್ನು ಹತ್ತಿರದಿಂದ ಕಂಡು ಅವರ ಸಮಸ್ಯೆಗಳನ್ನು ಆಲಿಸುವುದು ಮತ್ತು ಪರಿಹರಿಸುವುದು ಕಷ್ಟಸಾಧ್ಯ. ಜನರ ನಡುವೆಯೇ ಸದಾ ಇರುವ ಗ್ರಾಮ ಪಂಚಾಯತ್ ಸದಸ್ಯರು ಈ ಕೆಲಸವನ್ನು ನಿರ್ವಹಿಸಬೇಕು. ಅವರು ತಮಗೆ ಜನರು ನೀಡಿರುವ ಅವಕಾಶವನ್ನು ಅವರ ಸೇವೆಗೆ ಮೀಸಲಿಡಬೇಕು ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಹೇಳಿದರು. ಉಪ್ಪುಂದ ಗ್ರಾಮೀಣ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಅಲ್ಲಿನ ಶಂಕರ ಕಲಾಮಂದಿರದಲ್ಲಿ ನಡೆದ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರ ತರಬೇತಿ ಮತ್ತು ಪಕ್ಷ ಕಾರ್ಯಕರ್ತರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷ ತನ್ನ ಸುದೀರ್ಘ ಅಧಿಕಾರಾವಧಿಯಲ್ಲಿ ದೇಶದ ಸಮಗ್ರತೆ, ರಕ್ಷಣೆ ಮತ್ತು ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದೆ. ಅದರಿಂದಾಗಿ ದೇಶ ಜಗತ್ತಿನ ಮೂರನೆಯ ಶಕ್ತಿಯಾಗಿ ಹೊರಹೊಮ್ಮಿದೆ. ಈ ಪರಂಪರೆಯನ್ನು ಉಳಿಸಿಕೊಂಡರೆ ಇನ್ನು ಹತ್ತು ವರ್ಷದಲ್ಲಿ ಅದು ಎರಡನೆ ಸ್ಥಾನಕ್ಕೇರಲಿದೆ. ಪಕ್ಷದ ಕಾರ್ಯಕರ್ತರು ಅದರ ಈ ಮಹೋನ್ನತ ಸಾಧನೆಯ ಪಾಲುದಾರರು. ಅವರು ಇದನ್ನು ಜನರೊಂದಿಗೆ…
Author: Editor Desk
ಕುಂದಾಪುರ: ಉಪ್ಪುಂದ ಗ್ರಾಮೀಣ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಅಲ್ಲಿನ ಶಂಕರ ಕಲಾಮಂದಿರದಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರ ತರಬೇತಿ ಮತ್ತು ಪಕ್ಷ ಕಾರ್ಯಕರ್ತರ ಸಮಾವೇಶ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಶಾಸಕ ಕೆ. ಗೋಪಾಲ ಪೂಜಾರಿ ಉಪ್ಪುಂದ ಗ್ರಾಮ ಪಂಚಾಯತನ್ನು ಪಕ್ಷದ ತೆಕ್ಕೆಗೆ ತರಲು ಕಾರಣವಾದುದು ಯುವ ಮತ್ತು ಹಿರಿಯ ಕಾರ್ಯಕರ್ತರ ಸಂಘಟಿತ ಹೋರಾಟ. ಈ ವ್ಯವಸ್ಥೆ ಮುಂದಿನ ಐದು ವರ್ಷಕಾಲ ಉತ್ತಮ ಆಡಳಿತ ಮತ್ತು ಅಭಿವೃದ್ಧಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲೂ ಮುಂದುವರಿಯಬೇಕು. ಪಕ್ಷ ಬೆಂಬಲಿತ ಸದಸ್ಯರು ತಮ್ಮ ಹೊಣೆಯನ್ನು ಅರಿತು ಕರ್ತವ್ಯ ನಿರ್ವಹಿಸಲು ಈ ತರಬೇತಿ ಸಹಕಾರಿಯಾಗಲಿ ಎಂದು ಆಶಿಸಿದರು. ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಕೆ.ರಮೇಶ ಗಾಣಿಗ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಸದಸ್ಯ ನಾರಾಯಣ ಅಳ್ವೆಗದ್ದೆ ಉದ್ಘಾಟಿಸಿದರು. ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಪಿ. ನಾರಾಯಣ ಖಾರ್ವಿ, ಎಸ್. ಮದನಕುಮಾರ್, ಗ್ರಾ. ಪಂ. ಅಧ್ಯಕ್ಷೆ ದುರ್ಗಮ್ಮ, ವಿವಿಧ ಘಟಕಗಳ ಪ್ರಮುಖರಾದ ಪ್ರಮೀಳಾ ದೇವಾಡಿಗ, ವಾಸುದೇವ ಎಸ್. ಪೂಜಾರಿ,…
ಕುಂದಾಪುರ: ವಿವಿಧ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಾಲೇಜಿನ ಬೆಳವಣಿಗೆಯಲ್ಲಿ ಮಹತ್ತರವಾದ ಪಾತ್ರ ನಿರ್ವಹಿಸಿ, ಹಿರಿಯ ಕಿರಿಯರೆಲ್ಲರಿಗೂ ಅಚ್ಚುಮೆಚ್ಚಾಗಿ ಸ್ನೇಹ ಸಹಕಾರದೊಂದಿಗೆ ಬೆರತು ಕರ್ತವ್ಯ ನಿರ್ವಹಿಸಿದ ಉಪನ್ಯಾಸಕ ಕೆ. ವಿ. ನಾಯಕರ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದು ಉಪನ್ಯಾಸಕ ರಾಮಕೃಷ್ಣ ಹೇಳಿದರು ಅವರು ಕುಂದಾಪುರದ ಸ. ಪ. ಪೂರ್ವ ಕಾಲೇಜಿನ ಉಪನ್ಯಾಸಕ ವೃಂದದವರು ಮೈಸೂರು, ಹಾಸನ, ತೆಕ್ಕಟ್ಟೆ, ಕಾರ್ಕಳ ಪಳ್ಳಿ, ನಾವುಂದ, ಕುಂದಾಪುರದಲ್ಲಿ ಸೇವೆಯನ್ನು ಸಲ್ಲಿಸಿ ಸುದೀರ್ಘ ಸೇವೆಯಿಂದ ನಿವೃತ್ತರಾದ ಕೆ. ವಿ. ನಾಯಕ್ ಅವರ ಬಿಳ್ಕೋಡುಗೆ ಸಮಾರಂಭದಲ್ಲಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಶಿ ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿ ಕೆ. ವಿ. ನಾಯಕ್ ಅವರನ್ನು ಸನ್ಮಾನಿಸಿ, ನಿವೃತ್ತಿ ಜೀವನಕ್ಕೆ ಶುಭಕೋರಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಕುಸುಮಾ ಪೈ, ರವೀಂದ್ರ ಉಪಾಧ್ಯಾಯ, ಶಿವಾನಂದ, ಪೂರ್ಣಿಮಾ, ಸಂಧ್ಯಾ, ಸುಶೀಲಾ, ಚಂದ್ರಶೇಖರ ಇನ್ನಿತರರು ಉಪಸ್ಥಿತರಿದ್ದರು.
ಗಂಗೊಳ್ಳಿ: ಜಾನುವಾರುಗಳನ್ನು ಸಾಕಲು ಅಶಕ್ತರಾದವರ ಮನೆಯವರ ಜಾನುವಾರುಗಳನ್ನು ಮತ್ತು ಬೀಡಾಡಿ ಜಾನುವಾರುಗಳನ್ನು ಗೋಶಾಲೆಗೆ ಸಾಗಿಸುವ ಮೂಲಕ ಗಂಗೊಳ್ಳಿ ಹಿಂಜಾವೇ ಕಾರ್ಯಕರ್ತರು ಮಾನವೀಯತೆ ಮೆರೆದಿದ್ದಾರೆ. ಗಂಗೊಳ್ಳಿ ಪರಿಸರದಲ್ಲಿ ಜಾನುವಾರುಗಳನ್ನು ಸಾಕಲು ಸಾಧ್ಯವಾಗದಿರುವವ ಮನೆಯ ಜಾನುವಾರುಗಳನ್ನು ಹಾಗೂ ಬೀಡಾಡಿ ಜಾನುವಾರುಗಳನ್ನು ಗಂಗೊಳ್ಳಿಯ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಒಟ್ಟು ಸೇರಿಸಿ ಈ ಎಲ್ಲಾ ಜಾನುವಾರುಗಳನ್ನು ನೀಲಾವರದ ಗೋಶಾಲೆಗೆ ಸಾಗಿಸಿದ್ದಾರೆ. ಪ್ರತಿವರ್ಷ ಈ ರೀತಿಯಾಗಿ ಅನೇಕ ಜಾನುವಾರುಗಳನ್ನು ಗೋಶಾಲೆಗಳಿಗೆ ಸಾಗಿಸುವ ಕಾರ್ಯವನ್ನು ಗಂಗೊಳ್ಳಿಯ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ನಡೆಸುತ್ತಿದ್ದಾರೆ.
ವಿದ್ಯಾರ್ಥಿನಿಗೆ ನಾಯಿ ಕಡಿತ ಗಂಗೊಳ್ಳಿ: ಶಾಲೆಯಿಂದ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಬೀದಿ ನಾಯಿಯೊಂದು ಕಚ್ಚಿದ ಘಟನೆ ಗಂಗೊಳ್ಳಿಯಲ್ಲಿ ಇಂದು ಸಂಜೆ ನಡೆದಿದೆ. ಸಂಜೆ ಶಾಲೆಯಿಂದ ಮನೆಗೆ ತೆರಳುತ್ತಿದ್ದ ಸಂದರ್ಭ ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆ ಬಳಿ ನಾಯಿಯೊಂದು ಕಚ್ಚಿದ ಪರಿಣಾಮ ಗಂಗೊಳ್ಳಿಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಗಾಯಗೊಂಡಿದ್ದಾರೆ. ನಾಯಿ ಕಡಿತದಿಂದ ಗಾಯಗೊಂಡ ಈಕೆಯನ್ನು ಚಿಕಿತ್ಸೆಗಾಗಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದು ಬಳಿಕ ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎನ್ನಲಾಗಿದೆ. ವಿದ್ಯಾರ್ಥಿನಿಗೆ ಕಚ್ಚಿದ ನಾಯಿಯನ್ನು ಸ್ಥಳೀಯ ಯುವಕರು ಓಡಿಸಿಕೊಂಡು ಹೋಗಿ ಹೊಡೆದು ಸಾಯಿಸಿದ್ದಾರೆ. ಇಂದು ಗಂಗೊಳ್ಳಿಯಲ್ಲಿ ಶಾಲಾ ಮಕ್ಕಳು ಸೇರಿದಂತೆ ಸುಮಾರು ಮೂರ್ನಾಲ್ಕು ಮಂದಿಗೆ ನಾಯಿ ಕಚ್ಚಿದ ಬಗ್ಗೆ ವರದಿಯಾಗಿದ್ದು, ಈ ಬಗ್ಗೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಂಗೊಳ್ಳಿಯ ಗಲ್ಲಿಗಲ್ಲಿಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಳೆಗಾಲದಲ್ಲಿ ನಾಯಿಗಳ ಉಪಟಳ ಹೆಚ್ಚಾಗಿದೆ. ಹೀಗಾಗಿ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ರಸ್ತೆಗಳಲ್ಲಿ ನಡೆದುಕೊಂಡು ಹೋಗಲು ಬಯಪಡುವ ಸ್ಥಿತಿ ನಿರ್ಮಾಣಗೊಂಡಿದೆ. ಆದುದರಿಂದ…
ಕುಂದಾಪುರ: ತಾಲೂಕು ಭಾನುವಾರ ಮಧ್ಯಾಹ್ನ ಬಳಿಕ ಕುಂಭದ್ರೋಣ ಮಳೆಗೆ ತತ್ತರಿಸಿದ್ದು, ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕುಂದಾಪುರ, ವಿಠಲವಾಡಿ, ಹಂಗಳೂರು, ನೇರಂಬಳ್ಳಿ, ಗೋಪಲಾಡಿ, ಕೋಟೇಶ್ವರ, ಕಾಳಾವರ, ಬೀಜಾಡಿ, ಗೋಪಾಡಿ, ಹೊದ್ರಾಳಿ, ಆನಗಳ್ಳಿ, ಹೇರಿಕುದ್ರು, ಬಳ್ಕೂರು, ಕೋಣಿ, ಗಂಗೊಳ್ಳಿ ಪ್ರದೇಶದಲ್ಲಿ ಕತಕ ನೆರೆ ಸಷ್ಟಿಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಜ್ಯ ಹೆದ್ದಾರಿ ಜಲಾವತ: ಕೋಟೇಶ್ವರ-ಹಾಲಾಡಿ ನಡುವಿನ ಜನ್ನಾಡಿಯಲ್ಲಿ ರಾಜ್ಯ ಹೆದ್ದಾರಿ ನೀರಿನಲ್ಲಿ ಮುಳುಗಡೆಯಾಗಿದ್ದು ಸಂಚಾರ ವ್ಯತ್ಯಯ ಉಂಟಾಗಿದೆ. ಬಸ್ರೂರು-ಕುಂದಾಪುರ ನಡುವೆ ಕೋಣಿ ಎಂಬಲ್ಲಿ ರಾಜ್ಯ ಹೆದ್ದಾರಿ ಜಲಾವತಗೊಂಡಿದೆ. ಸಾವಿರಾರು ಎಕರೆ ಕಷಿಭೂಮಿ ಜಲಾವತಗೊಂಡಿದ್ದು ಭತ್ತದ ಕಷಿ ಅಪಾಯದಂಚಿಗೆ ತಲುಪಿದೆ. ವಾರಾಹಿ ಅಪಾಯ: ತಾಲೂಕಿನ ಪ್ರಮುಖ ನದಿಗಳಲ್ಲಿ ಒಂದಾದ ವಾರಾಹಿ ನದಿ ಉಕ್ಕಿ ಹರಿಯುತ್ತಲಿದ್ದು ನದಿ ಪಾತ್ರದ ಅಮಾಸೆಬೈಲು, ಮಚ್ಚಟ್ಟು, ಹೊಳೆಬಾಗಿಲು, ತೊಂಬಟ್ಟು ಪ್ರದೇಶಗಳು ಜಲಬಂಧಿಯಾಗಿವೆ. ಬಸ್ರೂರು ಸಮೀಪದ ಮೇರ್ಡಿಯಲ್ಲಿ ಗಾಳಿಮಳೆ ಅಬ್ಬರಕ್ಕೆ ಬಹತ್ ಗೋಳಿಮರ ಬುಡಸಹಿತ ಕಿತ್ತು ನಿಂತ ಲಾರಿಯ ಮೇಲೆ ಬಿದ್ದ ಪರಿಣಾಮ ಗೋವಿಂದ ಪೂಜಾರಿ ಎಂಬವರಿಗೆ ಸೇರಿದ ಲಾರಿ…
ಉಡುಪಿ: ಪತ್ರಿಕೆಗೆ ನೀಡಿದ ಚೆಕ್ ಅಮಾನ್ಯ ಪ್ರಕರಣದಲ್ಲಿ ಕುಂದಾಪುರ ಸಿಂಧೂರ ಗ್ರಾಫಿಕ್ಸ್ನ ಕೆ. ಗಣೇಶ ಹೆಗಡೆ ಅವರಿಗೆ ಉಡುಪಿಯ ಜೆಎಂಎಫ್ಸಿ ನ್ಯಾಯಾಲಯವು ಶಿಕ್ಷೆ ವಿಧಿಸಿದೆ. ಗಣೇಶ ಹೆಗಡೆ ಅವರು ಮಣಿಪಾಲ ಮೀಡಿಯಾ ನೆಟ್ವರ್ಕ್ ಸಂಸ್ಥೆಯೊಂದಿಗಿನ ವ್ಯವಹಾರಕ್ಕೆ ಸಂಬಂಧಿಸಿ ನೀಡಿದ್ದ ಚೆಕ್ಗಳು ಅಮಾನ್ಯಗೊಂಡ ಬಗ್ಗೆ ಒಟ್ಟು 13 ಪ್ರಕರಣಗಳನ್ನು ಎದುರಿಸುತ್ತಿದ್ದು, ಎಲ್ಲಾ ಪ್ರಕರಣಗಳಲ್ಲಿ ಅವರಿಗೆ ಶಿಕ್ಷೆಯಾಗಿದೆ. ಸಿ.ಸಿ.ನಂಬರ್ 5482/07, 5481/07, 5459/07, 5489/07, 5456/07, 5454/07, 5455/07, 5457/07 ಎಂಬ 8 ಪ್ರಕರಣಗಳಿಗೆ ಅನ್ವಯವಾಗುವಂತೆ 1 ತಿಂಗಳ ಸಾದಾ ಸಜೆ ಮತ್ತು 1,50,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಹೆಚ್ಚುವರಿಯಾಗಿ 1 ತಿಂಗಳ ಸಾದಾ ಶಿಕ್ಷೆ ಅನುಭವಿಸ ಬೇಕೆಂದು ನ್ಯಾಯಾಲಯ ತೀರ್ಪು ನೀಡಿದೆ. ಸಿ.ಸಿ.ನಂಬರ್ 6430/07 ಪ್ರಕರಣಕ್ಕೆ ಸಂಬಂಧಿಸಿ 1 ತಿಂಗಳ ಸಾದಾ ಸಜೆ ಮತ್ತು 55,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಮತ್ತೆ 1 ತಿಂಗಳ ಸಾದಾ ಶಿಕ್ಷೆ, ಸಿ.ಸಿ. ನಂಬರ್ 6853/07 ರಲ್ಲಿ 1…
ಕುಂದಾಪುರ: ನಗರದ ಆಸ್ಪತ್ರೆ, ಕೋರ್ಟು, ಶಾಲಾ ವಠಾರ ಮುಂತಾದ ಪ್ರದೇಶದಲ್ಲಿ ಕರ್ಕಶ ಹಾರ್ನ್ ಗಳಿಂದ ತೊಂದರೆಯಾಗುತ್ತಿರುವ ಬಗ್ಗೆ ಸಂಚಾರಿ ಪೊಲೀಸ್ ಠಾಣೆಗೆ ಹಲವು ದೂರುಗಳು ಬಂದಿರುವುದರಿಂದ ಕುಂದಾಪುರ ಸಂಚಾರಿ ಪೊಲೀಸರು ನಗರದಲ್ಲಿ ಖಾಸಗಿ ಬಸ್ಸುಗಳಲ್ಲಿ ಅಳವಡಿಲಾಗಿರುವ ವ್ಯಾಕ್ಯುಮ್ ಅಥವಾ ಕರ್ಕಶ ಹಾರ್ನ್ ಗಳನ್ನು ತೆಗೆಯುವ ಕಾರ್ಯಾಚರಣೆ ನಡೆಸಿದರು. ಉಡುಪಿ ಜಿಲ್ಲಾ ಎಸ್ಪಿ ಅಣ್ಣಾಮಲೈ ಅವರ ನಿರ್ದೇಶನದ ಮೇರೆಗೆ ಸಂಚಾರಿ ಪೊಲೀಸ್ ಎಸ್.ಐಗಳಾದ ಕೆ. ಜಯ ಹಾಗೂ ದೇವೇಂದ್ರ ಅವರ ನೇತ್ರತ್ವದಲ್ಲಿ ಅಧಿಕಾರಿಗಳು ಇಲ್ಲಿನ ಪಾರಿಜಾತ ಸರ್ಕಲ್ನಲ್ಲಿ ಪ್ರಾಯೋಗಿಕವಾಗಿ ಕಾರ್ಯಾಚರಣೆ ನಡೆಸಿ ಖಾಸಗಿ ಬಸ್ಸುಗಳ ಕರ್ಕಶ ಹಾರ್ನ್ ಗಳನ್ನು ತೆಗೆದು ದಂಡ ಹಾಕುವ ಕಾರ್ಯಾಚರಣೆ ನಡೆಸಿದರು. ಸುಮಾರು 80ಕ್ಕೂ ಅಧಿಕ ಬಸ್ಸುಗಳನ್ನು ಗುರುತಿಸಿ ಹಾರ್ನ್ ತೆಗೆದು ಕ್ರಮ ಕೈಗೊಳ್ಳಲಾಯಿತು.
ಕುಂದಾಪುರ: ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಜು. 16ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ, ದೇಗುಲದ ಕಾಯನಿರ್ವಹಣಾಧಿಕಾರಿ ಪ್ರಸನ್ನ, ಉಪಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಅಧೀಕ್ಷಕ ರಾಮಕೃಷ್ಣ ಅಡಿಗ, ಕೌಶಿಕ್ ಮುಖರ್ಜಿ ಅವರನ್ನು ಸ್ವಾಗತಿಸಿ, ಗೌರವಿಸಿದರು. ನಂತರ ಅವರು ಕುಂದಾಪುರಕ್ಕೆ ಆಗಮಿಸಿ ಅರಣ್ಯ ಹಾಗೂ ಇತರ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಗರದ ಹೊರವಲಯದ ವಡೇರಹೋಬಳಿ ಬಳಿ ಇರುವ ಕಾಂಡ್ಲ ನಡುತೋಪು ಹಾಗೂ ನೈಸರ್ಗಿಕ ಕಾಂಡ್ಲವನ್ನು ಗುರುವಾರ ವೀಕ್ಷಿಸಿದರು. ಉಡುಪಿ ಜಿಲ್ಲಾಧಿಕಾರಿ ಡಾ| ವಿಶಾಲ್, ಉಪ ಅರಣ್ಯ ಅಧಿಕಾರಿ ಪ್ರಕಾಶ್ ನೆಟಾಲ್ಕರ್, ವನ್ಯಜೀವಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತೆ ಚಾರುಲತಾ ಸೋಮಲ್, ವಲಯ ಅರಣ್ಯ ಸಂರಕ್ಷಣಾಧಿಕಾರಿ ಜಿ. ಲೋಹಿತ್, ಉಪ ಅರಣ್ಯ ಅಧಿಕಾರಿ ಗುರುರಾಜ್ ಕಾವ್ರಾಡಿ, ದಿಲೀಪ್ ಕುಮಾರ್, ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ವೃತ್ತ ನಿರೀಕ್ಷಕ ದಿವಾಕರ್ ಮೊದಲಾದವರು…
ಕುಂದಾಪುರ: ಕಳೆದ ಒಂದು ತಿಂಗಳುಗಳಿಂದ ತಲೆದೂರಿದ್ದ ಮರಳಿನ ಅಭಾವ ಇನ್ನುಮುಂದೆ ಕೊನೆಗೊಳ್ಳಲಿದ್ದು, ತಾಲೂಕಿನಲ್ಲಿ ಅರ್ಧಕ್ಕೆ ನಿಂತಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತೆ ಚಾಲನೆ ದೊರಕುವ ಲಕ್ಷಣ ಕಂಡುಬಂದಿದೆ. ಮೀನುಗಳ ಸಂತಾನೋತ್ವತ್ತಿಯ ಕಾರಣವೊಡ್ಡಿ ಮರಳುಗಾರಿಕೆಯನ್ನು ನಿಷೇಧಿಸಿದ್ದರಿಂದ ವಿವಿಧ ಕಾಮಗಾರಿಗಳಿಗೆ ಅಗತ್ಯವಿರುವ ಮರಳಿಗೆ ಕೊರತೆ ಉಂಟಾಗಿ, ಸಂಗ್ರಹಿಸಿಟ್ಟ ಮರಳಿನ ಬೆಲೆಯೂ ಗಗನಕ್ಕೇರಿತ್ತು. ಇದೀಗ ಮರಳುಗಾರಿಕೆಯನ್ನು ಮತ್ತೆ ಆರಂಭಿಸಲು ಸಾರ್ವಜನಿಕ ವಲಯದಿಂದ ಯಾವುದೇ ಆಕ್ಷೇಪವಿಲ್ಲದಿರುವುದರಿಂದ ಮರಳುಗಾರಿಕೆಗೆ ಚಾಲನೆ ದೊರೆಯಲಿದೆ. ಸ್ಥಳೀಯ ಪರಿಸ್ಥಿತಿಯನ್ನು ಮನಗಂಡು ಮಳೆಗಾಲ ಹಾಗೂ ಮೀನು ಸಂತಾನೋತ್ಪತ್ತಿ ಸಮಯದಲ್ಲಿ ಸಿಆರ್ಝಡ್ ಪ್ರದೇಶದಲ್ಲಿ ಮರಳುಗಾರಿಕೆಯಿಂದ ತೊಂದರೆಯಿಲ್ಲದಿದ್ದರೇ, ಮರಳುಗಾರಿಕೆಗೆ ಅವಕಾಶ ನೀಡಬಹುದೆಂದು ಜಿಲ್ಲಧಿಕಾರಿಗಳಿಗೆ ರಾಜ್ಯ ಪರಿಸರ ಆಘಾತ ಅಂದಾಜೀಕರಣ ಪ್ರಾಧಿಕಾರ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಸಿಆರ್ಝಡ್ ಮರಳು ಉಸ್ತುವಾರಿ ಸಮಿತಿ ಸಭೆ ಮಳೆಗಾಲದಲ್ಲಿ ಮರಳು ತೆಗೆಯುವುದನ್ನು ಜು.16ರಿಂದ ಆರಂಭಿಸಲು ನಿರ್ಧರಿಸಿತ್ತು. ಇದಕ್ಕೆ ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ನಿರ್ದಿಷ್ಟ ಕಾರಣಗಳೊಂದಿಗೆ ಜು. 15ರೊಳಗೆ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಬಹುದು ಎಂದು ಸಮಿತಿ ಸದಸ್ಯ ಕಾರ್ಯದರ್ಶಿಯಾದ ಹಿರಿಯ ಭೂವಿಜ್ಞಾನಿಯವರ ಪ್ರಕಟನೆಯಲ್ಲಿ ತಿಳಿಸಲಾಗಿತ್ತು. ಆದರೆ ಈವರೆಗೆ ಯಾವುದೇ…
