ನಮ್ಮ ಸೌಂದರ್ಯವನ್ನು ಹೆಚ್ಚುಸಲು ಸುಂದಾರವಾದ ಕೂದಲು ಹೆಚ್ಚಿನ ಪಾತ್ರ ವಹಿಸುತ್ತದೆ. ಆರೋಗ್ಯಕರ ಮತ್ತು ಸುಂದರವಾದ ಕೂದಲು ನಿಮ್ಮನ್ನು ಹೆಚ್ಚು ಆಕರ್ಷಕವಾಗಿ ಮಾಡುತ್ತದೆ ಮನುಷ್ಯರಲ್ಲಿ ಸುರುಳಿಯಾಕಾರದ ಕೂದಲು, ತೆಳ್ಳನೆಯ ಕೂದಲು, ಎಣ್ಣೆಯುಕ್ತ ಕೂದಲು, ಒಣ ಕೂದಲು ಹೀಗೆ ಹಲವಾರು ರೀತಿಯ ಕುದಲನ್ನು ಹೊಂದಿರುತ್ತಾರೆ. ಆದರೆ ನಿಶ್ಚಿತ ಕೂದಲ ರಕ್ಷಣೆಯ ಸಲಹೆಗಳು ಎಲ್ಲವು ಎಲ್ಲರ ಕೂದಲಿಗೆ ಸರಿ ಹೊಂದುವುದಿಲ್ಲ.
ಪ್ರತಿಯೊಬ್ಬರು ಹೊಳೆಯುವ, ಉದ್ದ ಮತ್ತು ಸುಂದರವಾದ ಕೂದಲನ್ನು ಬಯಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಹಲವಾರು ವಿಭಿನ್ನ ಪ್ರಯೋಗಳನ್ನು ಉಪಯೋಗಿಸಿ ನಿಮ್ಮ ಸುಂದರವಾದ ಕೂದಲನ್ನು ಹಾಳು ಮಾಡಿಕೊಂಡಿರಬಹುದು. ಹೀಗೆ ನಿಮ್ಮ ಕೂದಲ ಆರೈಕೆಯಲ್ಲಿ ಈ ಕೆಳಗಿನ ತಪ್ಪುಗಳನ್ನು ಎಂದಿಗೂ ಮಾಡಬೇಡಿ.
ತೊಳೆಯುವ ಮೊದಲು ಬಾಚದೇ ಇರುವುದು:
ಕೆಲವು ಸೋಮಾರಿ ಹುಡಿಗಿಯರು ತೊಳೆಯುವ ಮೊದಲು ಅವರು ಎಂದಿಗೂ ಕೂದಲನ್ನು ಬಾಚಿಕೊಳ್ಳುವುದಿಲ್ಲ ಇದರಿಂದ ಕೂದಲು ಹೆಚ್ಚು ಸಿಕ್ಕು ಸಿಕ್ಕಾಗಿ ಹೆಚ್ಚಿನ ಕೂದಲು ಉದುರುವ ಸಾಧ್ಯತೆ ಇದೆ. ಆದುದರಿಂದ ಸಾಧ್ಯವಾದಷ್ಟು ಕೂದಲನ್ನು ಬಾಚಿ
ಸ್ಪ್ಲಿಟ್ ಎಂಡ್ಸ್:
ನೀವು ಸ್ಪ್ಲಿಟ್ ಎಂಡ್ಸ್ ಗಳನ್ನು ಹೊಂದಿದ್ದರೆ, ಆ ಹಾನಿಯ ಭಾಗವನ್ನು ಗುಣಪಡಿಸುವ ಯಾವುದೇ ಉತ್ಪನ್ನವಿಲ್ಲ. ಈ ವಿಷಯಗಳ ಮೇಲೆ ನಂಬಿಕೆ ಇಡಬೇಡಿ. ನಿಮ್ಮ ಕೂದಲನ್ನು ಟ್ರಿಮ್ ಮಾಡಿ ಮತ್ತು ನಂತರ ನಿಮ್ಮ ಕೂದಲಿಗೆ ಎಣ್ಣೆಯಿಂದ ಮಸಾಜ್ ಮಾಡಿ.
ನಿರಂತರ ಶಾಖ:
ಕೂದಲುಗಳು ಗುಂಗುರಾಗಿದ್ದರೆ, ಕೂದಲನ್ನು ನಿರಂತರವಾಗಿ ನೇರಗೊಳಿಸಲು ಬಿಸಿ ಐರನ್ ಮತ್ತು ಇತರ ಶಾಖವನ್ನು ಒದಗಿಸುವ ಉತ್ಪನ್ನಗಳನ್ನು ಬಳಸಬೇಡಿ. ಇವು ಕೂದಲನ್ನು ಒಣಗಿಸಿ ಸ್ಪ್ಲಿಟ್ ಎಂಡ್ಸ್ ಜಾಸ್ತಿ ಮಾಡುತ್ತದೆ.
ಕೂದಲನ್ನು ಟವೆಲ್‌ನಿಂದ ಉಜ್ಜುವುದು:
ಟವೆಲ್ನಿಂದ ಕೂದಲಿಗೆ ಹೆಚ್ಚು ಉಜ್ಜಬೇಡಿ. ಇದು ಒರಟು ಕೂದಲನ್ನು ಮಾಡುತ್ತದೆ. ನೀವು ಕೂದಲಿನಿಂದ ನೀರನ್ನು ಹೋಗಲಾಡಿಸಲು ಕೂದಲಿಗೆ ಟವೆಲ್ ಕಟ್ಟಿ ಅಥವಾ ಕೂದಲಿನಿಂದ ನೀರನ್ನು ಅಲುಗಾಡಿಸಲು ಬೆರಳನ್ನು ಬಳಸಿದರೆ ಉತ್ತಮ.
ಕೂದಲನ್ನು ಕಂಡೀಷನಿಂಗ್ ಮಾಡುವುದು :
ಕೂದಲಿಗೆ ನಿಯಮಿತ ಕಂಡೀಷನಿಂಗ್ ಅನ್ನು ತಪ್ಪಿಸಿ. ಇದು ನಿಮ್ಮ ಕೂದಲಿಗೆ ಶುಷ್ಕತೆಯನ್ನು ನೀಡುತ್ತದೆ. ಮನೆಯಲ್ಲಿ ತಯಾರಿಸಿದ ಕಂಡಿಷನರ್, ಮೊಟ್ಟೆ, ಮೊಸರು ಇತ್ಯಾದಿಗಳನ್ನು ಬಳಸುವುದು ಉತ್ತಮ.
ಹೀಟರ್ ಬಳಕೆ ಮಾಡುವುದು:
ಕೂದಲನ್ನು ಒಣಗಿಸಲು ಹೀಟರ್ ಬಳಕೆ ಮಾಡಬೇಡಿ. ಇದರಿಂದ ಕೂದಲಿಗೆ ಹೆಚ್ಚಿ ತೊಂದರೆಯಾಗುತ್ತದೆ. ಅದರ ಬದಲಾಗಿ ಸೂರ್ಯನ ಬಿಸಿಲಿಗೆ ಕೂದಲನ್ನು ಒಣಗಿಸಿ.
ಕುಂದಾಪ್ರ ಡಾಟ್ ಕಾಂ ಲೇಖನ