Author: Kundapra.com

ನರೇಂದ್ರ ಎಸ್ ಗಂಗೊಳ್ಳಿ. ನಾವು ಎಷ್ಟೇ ಮುಂದುವರೆದಿದ್ದೀವಿ ಅಂದರೂ ಕೂಡ ಇವತ್ತಿಗೂ ಬಹಳಷ್ಟು ಮನಸ್ಸುಗಳಲ್ಲಿ ಪುರುಷ ಪ್ರಧಾನ ಸಮಾಜದ ದೌಲತ್ತು ಮತ್ತು ಹೆಣ್ಣುಮಕ್ಕಳಿಗೆ ಒಂದು ನಿರ್ದಿಷ್ಠ ಚೌಕಟ್ಟನ್ನು ಹಾಕಿ ಅವರು ಹೀಗೆ ಇದ್ದರೆ ಚೆನ್ನ ಎನ್ನುವಂತಹ ಭಾವನೆ ಇರುವುದು ಸತ್ಯ. ಆ ಮನಸ್ಥಿತಿ ಒಳ್ಳೆಯ ಉದ್ದೇಶವನ್ನು ಹೊಂದಿದ್ದರೆ ಸರಿ. ಆದರೆ ಕ್ರೀಡೆಯ ವಿಚಾರಗಳಲ್ಲೂ ಕೂಡ ನೀವು ಮೈತುಂಬಾ ಬಟ್ಟೆ ಹಾಕಿಕೊಳ್ಳಿ , ಸೀರೆ ತೊಟ್ಟು ಕುಸ್ತಿ ಮಾಡಿ, ಬುರ್ಖಾ ತೊಟ್ಟು ಟೆನ್ನಿಸ್ ಆಡಿ ಎನ್ನುವಂತಹ ವಿಕ್ಷಿಪ್ತ ಮನಸ್ಸುಗಳ ವರ್ತನೆಗಳು ಮಾತ್ರ ಯಾವತ್ತೂ ಖಂಡನೀಯ. ನಿಲುವಂಗಿ ಧರಿಸಕೊಂಡು ನದಿಯಲ್ಲಿ ಈಜಲಾದೀತೆ? ಈ ನಡುವೆ ಸಾಧನೆಗೆ ಡ್ರೆಸ್ ಕೋಡ್ ಮುಖ್ಯ ಅಲ್ಲ ಎಂದು ಪೋಟೋಶಾಪ್ ನಲ್ಲಿ ಫೋಟೋಗಳನ್ನು ಎಡಿಟ್ ಮಾಡಿ ವಿವರಗಳನ್ನೇ ದಾಖಲಿಸದೆ ತಮ್ಮ ವರ್ಗದ ಮಹಿಳೆಯರನ್ನು ಪ್ರಥಮ ಸ್ಥಾನಿಗಳಾಗಿ ವಾಟ್ಸಾಫು ಫೇಸ್ಬುಕ್ಕುಗಳಲ್ಲಿ ತೋರಿಸಿ ಜನರನ್ನು ದಾರಿ ತಪ್ಪಿಸುವ ಕುಯುಕ್ತಿ ಮನಸ್ಸುಗಳಿಗೂ ಇಲ್ಲಿ ಬರಗಾಲವಿಲ್ಲ..ಇರಲಿ ಬಿಡಿ ಹೃದಯ ಮತ್ತು ಮನಸ್ಸುಗಳ ವೈಶಾಲ್ಯತೆ ಇಲ್ಲದವರಿಂದ ಒಳ್ಳೆಯದನ್ನು…

Read More

ನರೇಂದ್ರ ಎಸ್. ಗಂಗೊಳ್ಳಿ | ಕುಂದಾಪ್ರ ಡಾಟ್ ಕಾಂ ಅಂಕಣ ತಲೆಬರಹದಲ್ಲಿ ಒಂದಷ್ಟು ಖಾಲಿ ಜಾಗ ಯಾಕೆ ಬಿಟ್ಟಿರಬಹುದು ಎಂದು ತಲೆಕೆಡಿಸಕೊಳ್ಳಬೇಡಿ. ನಿಮಗೇನು ಇಷ್ಟವೋ ಆ ಶಬ್ದವನ್ನು ನೀವು ಅಲ್ಲಿ ಖಂಡಿತಾ ತುಂಬಿಕೊಳ್ಳಬಹುದು. ಅಭಿವ್ಯಕ್ತಿ ಸ್ವಾತಂತ್ರ್ಯ ಸ್ವಾಮಿ! ಜಗತ್ತಿಗೆ ಅಹಿಂಸೆಯನ್ನು ಭೋಧಿಸಿದ ದೇಶ ನಮ್ಮದು ಎಂದು ಮೈ ತುಂಬಾ ದೇಶದ್ರೋಹಿಗಳ ಮುಳ್ಳನ್ನು ಚುಚ್ಚಿಸಿಕೊಂಡು ತುಟಿಕಚ್ಚಿ ನೋವನ್ನು ಸೈರಿಸುವುದರಲ್ಲಿ ಅರ್ಥವಿಲ್ಲ. ನಮ್ಮದು ಹೇಡಿಗಳ ನಾಡಲ್ಲ. ಕದನಕಲಿಗಳ ಶೂರರ ಬೀಡು. ಅಂತಹ ಜಗಜಟ್ಟಿ ನೆಪೋಲಿಯನ್‌ನನ್ನೇ ಮಂಡಿಯೂರಿಸಿದ ತಾಕತ್ತು ಭಾರತದ್ದು. ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು ಎನ್ನುವುದು ಸುಮ್ಮನೇ ಹೇಳಿದ್ದಲ್ಲ. ನಿಜ. ಆವತ್ತೊಬ್ಬ ಸವಾಲು ಎದುರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಹೇಡಿಯೊಬ್ಬನನ್ನು ಗುರುವೆಂದು ತಿಳಿದ ಕನ್ನಿಂಗ್ ಒಬ್ಬ ದೇಶದೊಳಗಡೆ ನನಗೆ ಅಜಾದಿ ಬೇಕು ಎಂದು ಕೂಗಾಡುತ್ತಿದ್ದ ರೀತಿಯನ್ನು ನೋಡಿದರೆ ಅವತ್ತೇ ಅವನನ್ನು ಎದುರುನಿಲ್ಲಿಸಿ ಕೇಳಬೇಕೆನಿಸಿತ್ತು. ನೀನು ಕೂಗಾಡುತ್ತಿರುವ ಅಜಾದಿ ನಿನಗೆಲ್ಲಿಂದ ಬಂದಿದೆ ಅಂತ. ಅಸಲಿಗೆ ಅವನ ಮಾತುಗಳಲ್ಲಿ ಅರ್ಥವೇ ಇರಲಿಲ್ಲ. ಇಷ್ಟು ಸರಳ ವಿಷಯ ಅರ್ಥ ಮಾಡಿಕೊಳ್ಳಲಾಗದ (ಕ್ಷಮಿಸಿ…

Read More

ಡಾ. ಶುಭಾ ಮರವಂತೆ. | ಕುಂದಾಪ್ರ ಡಾಟ್ ಕಾಂ ಲೇಖನ ಒಬ್ಬ ವ್ಯಕ್ತಿ ತನ್ನ ವ್ಯಕ್ತಿ ಬದುಕಿನ ಬೆಳ್ಳಿ ಹಬ್ಬವನ್ನೂ, ಚಿನ್ನದ ಹಬ್ಬವನ್ನೂ ಆಚರಿಸಿಕೊಳ್ಳುತ್ತಾನೆಂದರೆ ಅದು ಒಂದು ಮನೆಯ, ಬಂಧು ಬಳಗದ ಸಡಗರ ಸಂಭ್ರಮ ಮಾತ್ರ. ಒಂದು ದೇವಸ್ಥಾನ ಆಚರಿಸಿಕೊಳ್ಳುತ್ತದೆಂದರೆ ಅದು ಕೇವಲ ಒಂದು ಸಮುದಾಯದ ಸಡಗರ, ಸಂಭ್ರಮವಾಗಬಹುದು. ಆದರೆ ಒಂದು ಶಾಲೆ ತನ್ನ ತನ್ನ ಇತಿಹಾಸವನ್ನು ಮರುನೆನಪಿಸಿಕೊಳ್ಳುತ್ತದೆ ಎಂದರೆ ಅದು ಸಮೂಹದ ಸಂಭ್ರಮ. ಈ ಸಮೂಹದಲ್ಲಿ ಎಲ್ಲಾ ಜಾತಿ, ಧರ್ಮ, ಜನವರ್ಗ ಯಾವುದೆ ಬಗೆಯ ನಿರ್ಬಂಧಗಳಿಲ್ಲದೆ ಒಂದುಗೂಡುವ ಸೌಹಾರ‍್ದಯುತ ವಾತಾವರಣವನ್ನು ಕಾಣಬಹುದು. ಹಾಗಾಗಿಯೇ ಶಾಲೆ ಒಂದು ಒಂದು ಸಮೂಹದ ಆಸ್ತಿ. ಎಲ್ಲರೂ ಇದರ ವಾರಸುದಾರರೆ. ಮರವಂತೆಯ ಶಾಲೆ ತನ್ನ ಎಪ್ಪತ್ತೈದು ವಸಂತಗಳನ್ನು ದಾಟಿ ಎಂಬತ್ತರ ಹೊಸ್ತಿಲಿನಲ್ಲಿರುವಾಗ ಈ ಶಾಲೆಯಲ್ಲಿ ಕಲಿತವರು ಎಲ್ಲಿದ್ದರೂ ಹೇಗಿದ್ದರೂ ತನ್ನ ಶಾಲಾ ಜೀವನವನ್ನು ನೆನಪಿಸಿಕೊಂಡು ಕಲಿಸಿದ ಗುರುಗಳಿಗೆ ನಮ್ಮ ಹೃದಯಾಂತರಾಳದ ನಮನಗಳನ್ನು ಹೇಳಲು ಇದೊಂದು ಸುವರ್ಣಾವಕಾಶ. ‘ಅನುಭವವು ಸವಿಯಲ್ಲ ಅದರ ನೆನಪೇ ಸವಿಯು’ ಎಂಬುದು ಕಡೆಂಗೋಡ್ಲು…

Read More

ನರೇಂದ್ರ ಎಸ್. ಗಂಗೊಳ್ಳಿ. ಹೆಚ್‌ಒನ್.ಎನ್‌ಒನ್, ಎಬೋಲಾ,ಝಿಕಾ….. ಹೌದು ಮನುಷ್ಯ ಜಗತ್ತು ಬೆಳೆಯುತ್ತಿದ್ದ ಹಾಗೆ ಒಂದೊಂದು ಹೊಸ ಹೊಸ ಕಾಯಿಲೆಗಳು ಪ್ರತೀ ವರುಷ ಹುಟ್ಟಿಕೊಳ್ಳುತ್ತಿದೆಯೇನೋ ಅನ್ನುವ ಹಾಗೆ ಹೊಸಹೊಸ ಕಾಯಿಲೆಗಳು ಹುಟ್ಟತೊಡಗಿವೆ. ವೈದ್ಯ ವಿಜ್ಞಾನಿಗಳು ಅದಕ್ಕೆಲ್ಲಾ ಸವಾಲೊಡ್ಡುವಂತೆ ನಿತ್ಯನಿರಂತರವಾಗಿ ಹೊಸ ಹಳೇ ಕಾಯಿಲೆಗಳಿಗೆ ಪರಿಹಾರ ಕಾಣಿಸುವ ಪ್ರಯೋಗಗಳಲ್ಲಿ ತಲ್ಲೀನರಾಗಿರುತ್ತಾರೆ. ಅಂತೂ ಕೊನೆಗೂ ಸಹಸ್ರಾರು ಪ್ರಯೋಗಗಳ ಬಳಿಕ ಬಹಳಷ್ಟು ಸಲ ಯಶಸ್ಸನ್ನು ಕಾಣಲಾಗುತ್ತದೆ. ಓದಿ ನಮಗೂ ಸಂತೋಷವಾಗುತ್ತದೆ. ಆದರೆ ಆ ಸಂತೋಷದ ಹಿಂದೆ ಅದೆಷ್ಟು ಕೋಟ್ಯಂತರ ಜೀವಿಗಳ ಮಾರಣ ಹೋಮವಾಗಿದೆ ಅನ್ನುವುದರ ಅರಿವು ನಮಗಿರಬೇಕಿದೆ. ಯಾಕೆಂದರೆ ನಾವು ಮನುಷ್ಯರು ಮಾನವರು ಮಾನವೀಯತೆ ಉಳ್ಳವರು ಎಂದೆಲ್ಲಾ ಗುರುತಿಸಿಕೊಂಡವರು. ಬೇರೆ ಜೀವಿಗಳ ಹಿಂಸೆಯಲ್ಲಿ ಮರಣದಲ್ಲಿ ನಮ್ಮ ಬದುಕಿನ ಸಂತೋಷಗಳನ್ನು ನಾವು ಹುಡುಕುವುದೆಷ್ಟರ ಮಟ್ಟಿಗೆ ಸರಿ? ವಿಷಯಕ್ಕೆ ಬರುತ್ತೀನಿ. ನಿಜ. ಇವತ್ತು ನಮ್ಮಲ್ಲಿ ಬೇರೆ ಬೇರೆ ರೀತಿಯ ಸಹಸ್ರಾರು ತೆರನಾದ ಖಾಯಿಲೆಗಳಿಗೆ ನಮ್ಮಲ್ಲಿ ಸಹಸ್ರಾರು ರೀತಿಯ ಔಷಧಗಳು ಲಭ್ಯವಿವೆ. ಒಂದು ಮಾಮೂಲಿ ಜ್ವರದ ನಿವಾರಣೆ ಮಾಡಲಿಕ್ಕಾಗಿ ನೂರಾರು ಕಂಪೆನಿಗಳು…

Read More

ನರೇಂದ್ರ ಎಸ್ ಗಂಗೊಳ್ಳಿ. ಕೆಲವು ಕತೆಗಳು ಹಾಗೆಯೆ. ಬರೆದವರು ಯಾರು? ಹೇಳಿದವರು ಯಾರು? ಏನೊಂದು ಗೊತ್ತಿರುವುದಿಲ್ಲ. ಆದರೆ ತನ್ನ ಒಡಲ ತುಂಬಾ ಸ್ವಾರಸ್ಯವನ್ನು ತುಂಬಿಕೊಂಡು ಅರ್ಥಗರ್ಭಿತವಾಗಿ ನೀತಿ ಭೋಧಕವಾಗಿ ಇಂಟರನೆಟ್ಟು ಮೊಬೈಲು ಪತ್ರಿಕೆ ಮೊದಲಾದ ಮಾಧ್ಯಮಗಳಲ್ಲಿ ಸದಾಕಾಲ ಹರಿದಾಡುತ್ತಿರುತ್ತವೆ. ಮತ್ತು ಅವು ತಮ್ಮ ಅರ್ಥಪೂರ್ಣ ಧ್ವನಿ ಮತ್ತು ಪ್ರಸ್ತುತತೆಯಿಂದಾಗಿ ಎಲ್ಲರಿಗೂ ಇಷ್ಟವಾಗುತ್ತವೆ. ಅಂತರ್ಜಾಲದಿಂದ ಸೋಸಿ ಬರೆದ ಅಂತಹ ಸುಂದರವಾದ ಜೀವನ ಮೌಲ್ಯಗಳನ್ನು ಭೋಧಿಸುವ ಮೂರು ಕತೆಗಳು ಈ ಬಾರಿ ನಿಮಗಾಗಿ. ಹುಡುಗ ಮತ್ತು ಕೆಲಸ ಅದೊಂದು ಸಂಜೆ ಒಂದು ಸಣ್ಣಗಿನ ಹುಡುಗನೊಬ್ಬ ಟೆಲಿಫೋನ್ ಬೂತ್ ಒಂದಕ್ಕೆ ಬಂದು ಅಲ್ಲಿಯೇ ಕ್ಯಾಶ್ ಕೌಂಟರಿನ ಪಕ್ಕದಲ್ಲಿ ಇರಿಸಲಾಗಿದ್ದ ಟೆಲಿಫೋನ್ ನಲ್ಲಿ ಒಂದು ನಂಬರಿಗೆ ಡಯಲ್ ಮಾಡಿದ. ಹುಡುಗನ ಚುರುಕುತನವನ್ನು ಗಮನಿಸಿದ ಬೂತ್‌ನ ಯಜಮಾನ ಆ ಹುಡುಗ ಏನು ಮಾತನಾಡುತ್ತಾನೆ ಎನ್ನುವುದನ್ನು ಕುತೂಹಲದಿಂದ ಆಲಿಸತೊಡಗಿದ. ಹುಡುಗ : ಹಲೋ ನಮಸ್ತೆ ಮೇಡಂ. ನಾನು ಒಬ್ಬ ಕೂಲಿ ಮಾಡುವ ಹುಡುಗ. ನನಗೆ ನಿಮ್ಮ ಮನೆಯ ತೋಟದಲ್ಲಿ ಹುಲ್ಲುಕತ್ತರಿಸುವ…

Read More

ನರೇಂದ್ರ ಎಸ್. ಗಂಗೊಳ್ಳಿ. ದಿನದಿಂದ ದಿನಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆಯುತ್ತಿರುವ ರೀತಿಯ ಬಗೆಗೆ ನಾನು ವಿವರವಾಗಿ ಹೇಳುವ ಅವಶ್ಯಕತೆಯಿಲ್ಲ ಎಂದುಕೊಳ್ಳುತ್ತೇನೆ. ಆ ಬಗೆಗೆ ಹೆಮ್ಮೆಪಟ್ಟುಕೊಳ್ಳುತ್ತಿರುವಂತಹ ಸಂದರ್ಭದಲ್ಲೇ ಆ ರಂಗ ಸಾಗುತ್ತಿರುವ ವೇಗ ಮತ್ತು ಅದು ತಂದೊಡ್ಡಬಲ್ಲ ಅಪಾಯಗಳನ್ನು ನೆನೆಸಿಕೊಂಡರೆ ನಿಜಕ್ಕೂ ಮೈ ಜುಮ್ಮೆನ್ನುತ್ತದೆ. ವೈಜ್ಞಾನಿಕ ಸಂಶೋಧನೆಗಳು ಯಾವತ್ತೂ ಜಗತ್ತಿಗೆ ಉಪಕಾರಿಯಾಗುವಂತಿರಬೇಕು.ಹಾಗಾಗಬೇಕಾದರೆ ಸಂಶೋಧನೆಯ ಹುಡುಕಾಟ ಉದ್ದೇಶ ಮತ್ತು ಸಂಶೋಧನೆಯ ಫಲದ ಬಳಕೆ ಕೂಡ ವಿವೇಚನೆಯಿಂದ ಕೂಡಿರಬೇಕು. ಒಂದು ಆಟಂ ಬಾಂಬ್ ಎನ್ನುವ ಭೀಕರ ಸಂಶೋಧನೆಯಿಂದಾಗಿ ಇವತ್ತು ಇಡೀ ಜಗತ್ತು ಅಣುಯುದ್ಧಧ ಬೀತಿಯ ನೆರಳಿನಲ್ಲೇ ಜೀವನ ಸಾಗಿಸಬೇಕಾಗಿಬಂದಿರುವುದು ಸತ್ಯ.ಈಗ್ಗೆ ವರುಷಗಳ ಹಿಂದೆ ಫ್ಲೋರೆನ್ಸಿಕ್ ಅಧ್ಯಯನದಲ್ಲಿ ಬಳಸಲಾಗುತ್ತಿದ್ದ ತಂತ್ರಜ್ಞಾನವನ್ನು ಬಳಸಿಕೊಂಡು ಲುಮಿನಾಲ್ ರಾಸಾಯನಿಕ ದ್ರಾವಣಕ್ಕೆ ಮನುಷ್ಯನ ರಕ್ತವನ್ನು ನೇರವಾಗಿ ಸೇರಿಸಿದಾಗ ನೀಲಿಬಣ್ಣದ ಬೆಳಕನ್ನು ಸೃಷ್ಟಿಸಲು ಸಾಧ್ಯ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಡುವ ಪ್ರಯೋಗವೊಂದು ನಡೆದಿತ್ತು. ಇಂಧನ ಮತ್ತು ವಿದ್ಯುತ್ ಎಷ್ಟು ಅಮೂಲ್ಯವಾದುದು ಎನ್ನುವುದನ್ನು ಜಗತ್ತಿಗೆ ತಿಳಿಸಿಕೊಡಲು ಈ ಪರೀಕ್ಷೆ ಮಾಡಲಾಗಿತ್ತು ಎನ್ನುವ ಸಬೂಬು ಜತೆಗಿದ್ದಿತ್ತು. ಆದರೆ…

Read More

ನರೇಂದ್ರ ಎಸ್ ಗಂಗೊಳ್ಳಿ. ಡೋಡೋ.ಡೋಡೋ… ಎಲ್ಲೋ ಕೇಳಿದ ಹಾಗಿದೆಯಲ್ಲ ಅಂತ ನಮಗನ್ನಿಸಿದರೆ ಅಚ್ಚರಿಯೇನಿಲ್ಲ. ಇತಿಹಾಸ ಎಷ್ಟು ಪಾಠಗಳನ್ನು ಕಲಿಸಿದರೂ ಕಲಿಯಲು ತಯಾರಿಲ್ಲದ ಮನಸ್ಥಿತಿ ನಮ್ಮಲ್ಲಿ ಬಹತೇಕರದ್ದು. ನಿಜ. ಡೋಡೋ ಎನ್ನುವುದು ಮನುಷ್ಯನ ದುರಾಸೆಗೆ ಬಲಿಯಾಗಿ ತಮ್ಮ ಸಂಪೂರ್ಣ ಅಸ್ತಿತ್ವವನ್ನೇ ಕಳೆದುಕೊಂಡು ಈಗ ಕೇವಲ ಇತಿಹಾಸದ ಒಂದು ಭಾಗವಾಗಿಬಿಟ್ಟಿರುವ ಪಾಪದ ಹಕ್ಕಿಯ ಹೆಸರು. ಆ ಪಕ್ಷಿ ಈಗಿಲ್ಲ. ಡ್ಯನೋಸಾರ್ ನಂತಹ ಪ್ರಾಣಿಗಳು ಕಾಲನ ಹೊಡೆತಕ್ಕೆ ಸಿಕ್ಕು ಕಣ್ಮರೆಯಾದರೆ ಡೋಡೋ ಮಾತ್ರ ನಾಶವಾದದ್ದು ಪಕ್ಕಾ ಮನುಷ್ಯನ ದುರಾಸೆಯಿಂದಲೇ ಅನ್ನುವುದು ಸತ್ಯ. ಬರೀ ಡೋಡೋ ಹಕ್ಕಿಯದ್ದು ಮಾತ್ರ ಈ ಕಥೆ ಅಲ್ಲ. ಮಾನವನ ದುರಾಸೆಯಿಂದಾಗಿ ಇಂದು ಪ್ರಪಂಚದಾದ್ಯಂತ ಅನೇಕ ರೀತಿಯ ಜೀವಿಗಳು ತಮ್ಮ ಅಸ್ತಿತ್ವದ ಭೀತಿಯನ್ನು ಎದುರಿಸುತ್ತಿವೆ. ದೂರವೇಕೆ ಹೋಗಬೇಕು? ನಮ್ಮಲ್ಲಿ ಗುಬ್ಬಚ್ಚಿ ಮರಿಗಳ ಕತೆ ಕೇಳಿದರೆ ಸಾಕಲ್ಲವಾ? ಒಂದೊಮ್ಮೆ ,ಸರಿಯಾಗಿ ಹೇಳಬೇಕೆಂದರೆ ಈಗ್ಗೆ ಹದಿನೈದು ಇಪ್ಪತ್ತು ವರುಷಗಳ ಹಿಂದೆಯಷ್ಟೇ ಮನೆ ಮನೆಯ ಸಂದಿ ಗೊಂದಿಗಳಲ್ಲಿ ತಮ್ಮ ಪುಟ್ಟ ಪುಟ್ಟ ಹುಲ್ಲಿನ ಗೂಡುಗಳನ್ನು ನಿರ್ಮಿಸಿಕೊಂಡು ದಿನವಿಡೀ…

Read More

ಡಾ. ಶುಭಾ ಮರವಂತೆ ಬ್ರಹ್ಮಾಂಡವೆಂಬ ಈ ವೇದಿಕೆಯಲ್ಲಿ ನಾವೆಲ್ಲರೂ ಪಾತ್ರಧಾರಿಗಳು; ಸೂತ್ರಧಾರ ಆ ಭಗವಂತ. ಅವನು ಆಡಿಸಿದಂತೆ ಆಡುವ ಗೊಂಬೆಗಳು ನಾವು. ಇಂತಹ ವೇದಾಂತದ ಮಾತುಗಳನ್ನು ಕೇಳಿದಾಗ ನಾವೆಲ್ಲರೂ ಒಂದು ಬಗೆಯ ನಿರ್ಲಿಪ್ತತೆಗೆ ಜಾರಿ ಬಿಡುತ್ತೇವೆ. ಬದುಕಿನ ನೈರಾಶ್ಯಗಳಿಗೆ ಒಂದು ಸಾತ್ವಿಕ ನೆಮ್ಮದಿ ಹುಡುಕಲು ಹೊರಡುವ ಎಲ್ಲಾ ಭಾವ ಜೀವಿಗಳಿಗೆ ಸಂತೋಷದ ಮೂಲ ಎಲ್ಲಿದೆ ಎಂದು ಕೇಳಿದರೆ ಪರದ ಬದುಕಿನಲ್ಲಿಯೆ ಇದೆ ಎಂಬ ಉತ್ತರವೂ ಬಂದೀತು. ಇಹ ಮತ್ತು ಪರಗಳಿಗೆ ಬದುಕನ್ನು ಹೊಂದಿಸುವ ಪ್ರತಿಯೊಬ್ಬ ಕಲಾಕಾರನಿಗೂ ಜೀವನ ಕಲಿಸುವ ಪಾಠ ಬಹಳ ದೊಡ್ಡದು. ಈ ನಡುವಿನ ಬದುಕಿನಲ್ಲಿ ಅತಿಯಾಗಿ ಯಾವುದನ್ನು ಬಯಸದೆ ಇದ್ದದ್ದರಲ್ಲೇ ತೃಪ್ತಿ ಪಡೆಯುವ ಮನೋಸ್ಥಿತಿಯ ಮೂಲಕ ಬದುಕಿನ ಸಂತೋಷದ ಮೂಲವನ್ನು ಹುಡುಕಿಕೊಳ್ಳುವುದು ಈ ಹಂತದಲ್ಲಿ ಸಹಜವಾಗಿ ಬಿಡುತ್ತದೆ. ಕಲೆ, ಸಾಹಿತ್ಯವು ನೀಡುವ ಆನಂದ ಬ್ರಹ್ಮಾನಂದಕ್ಕೆ ಸಮಾನವಾದುದು ಎನ್ನುವುದನ್ನು ತಿಳಿದುಕೊಳ್ಳಲು ಅದರ ಸತ್ವವನ್ನು ಧೇನಿಸುವವನೆ ನಿಜವಾದ ಕಲಾ ತಪಸ್ವಿ. ಯಕ್ಷಗಾನದ ಬಹುತೇಕ ಹಿರಿಯ, ನಿಷ್ಠಾವಂತ ಕಲಾವಿದರಲ್ಲಿ ಈ ಗುಣವಿದೆ. ತನ್ನ…

Read More

[quote font_size=”15″ bgcolor=”#ffffff” arrow=”yes”]ಒಂದು ಕಾರ್ಯಕ್ರಮದಿಂದಾಗಿ ಪತ್ರಕರ್ತ ರಂಗನಾಥ ಭಾರಧ್ವಾಜ್ ಸಾಮಾಜಿಕ ತಾಣಗಳಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ಒಬ್ಬ ಜವಾಬ್ದಾರಿಯುತ ಪತ್ರಕರ್ತ ಹೀಗೇಕೆ ಮಾತನಾಡಿದರು ಎಂಬ ಗೊಂದಲ, ಅಸಹನೆ ಸಹಜವಾಗಿಯೇ ಮೂಡಿದೆ. ಖಂಡತವಾಗಿಯೂ ನಾಗೇಂದ್ರಾಚಾರ್ಯ ಅವರಿಗೆ ಭಾರಧ್ವಾಜ್ ಆಡಿದ ಮಾತಗಳು ಖಂಡನಾರ್ಹ. ಆದರೆ ಅವರ ಸಂಭಾಷಣೆಯ ತುಣುಕನ್ನು ಕೇಳಿದ ಜನ, ಒಂದು ಮಾಧ್ಯಮದ ಸಂಪಾದಕನಾಗಿ, ಕಾರ್ಯಕ್ರಮ ನಿರೂಪಕನಾಗಿ ಭಾರಧ್ವಾಜ್ ಅವರಿಗಿದ್ದ ಜವಾಬ್ದಾರಿಯನ್ನು ಮರೆತೇಬಿಟ್ಟರು. ಕಾಲ್ ಕಟ್ ಮಾಡಿದ್ದು ಹಾಗೂ ಆ ಬಳಿಕ ನಡೆದ ಅನಧಿಕೃತ ಸಂಭಾಷಣೆಯನ್ನು ತಪ್ಪು ಎಂದು ಮಾತನಾಡಿಕೊಂಡರು. ಬೈದದ್ದು ತಪ್ಪೇ. ಆದರೆ ವಾಸ್ತವವಾಗಿ ಭಾರಧ್ವಾಜ್ ಹಾಗೇಕೆ ಮಾತನಾಡಿರಬಹುದು. ಅವರಲ್ಲಿ ಅಂತಹ ಒತ್ತಡವೇನಿದ್ದಿರಬಹುದು ಅನ್ನೊದರ ಬಗ್ಗೆ ಅವರೊಂದಿಗೆ ಒಡನಾಟ ಹೊಂದಿದ್ದ ಪತ್ರಕರ್ತ ಕೀರ್ತಿ ಶಂಕರಘಟ್ಟ ಬರೆದಿದ್ದಾರೆ. [/quote] ಕೀರ್ತಿ ಶಂಕರಘಟ್ಟ. ನನಗೂ ರಂಗನಾಥ್ ಭಾರದ್ವಾಜ್ ಅವರಿಗೂ ಆರೇಳು ವರ್ಷದ ಪರಿಚಯ. ಅವರು ನನ್ನ ಮಾಧ್ಯಮ ಗುರುಗಳಲ್ಲಿ ಒಬ್ಬರೂ ಹೌದು. ಪ್ರಸ್ತುತ ನಾನು ಅವರ ಜೊತೆಗೆ ಕೆಲಸ ಮಾಡುತ್ತಿಲ್ಲವಾದರೂ ಇತ್ತೀಚಿನ ಭಗವಾನ್ ಚರ್ಚೆ ಹಾಗೂ ನಾಗೇಂದ್ರಾಚಾರ್ಯರಿಗೆ ಬೈದ ಆಡಿಯೋ ಬಗೆಗೆ…

Read More

ಪಾಕ ಪ್ರವೀಣೆ: ಅರ್ಚನ ಬೈಕಾಡಿ. ಹಬ್ಬಗಳು ಬಂತೆಂದರೆ ಸಾಕು ಹಲವಾರು ಬಗೆಯ ಸಿಹಿತಿಂಡಿಗಳು ನೆನಪಾಗುತ್ತವೆ. ಪ್ರತಿ ಹಬ್ಬಕ್ಕೂ ಮನೆಯಲ್ಲಿ ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಿ ಸಂಭ್ರಮಿಸಲಾಗುತ್ತದೆ. ಈ ಸಂದರ್ಭದಲ್ಲಿ ತಯಾರಿಸಬಹುದಾದ ಸಿಹಿತಿಂಡಿ ದೂದ್ ಪೇಡ. ಸಾಂಪ್ರದಾಯಿಕವಾಗಿ, ದೂದ್ ಪೇಡಾ ಅಥವಾ ಹಾಲಿನ ಪೇಡವನ್ನು ಸಕ್ಕರೆ ಮತ್ತು ಹಾಲಿನ ಕೋಯಾದಿಂದ ತಯಾರಿಸಲಾಗುತ್ತದೆ. ಆದರೆ ಈಗಿನ ವೇಗದ ಜಗತ್ತಿನಲ್ಲಿ ಎಲ್ಲರಿಗೂ ಸುಲಭದ ವಿಧಾನವೇ ಬೇಕಲ್ಲವೇ? ಹೌದು ನನ್ನ ಈ ಪೇಡದ ವಿಧಾನವು ತ್ವರಿತವಾಗಿ ಮಾಡಬಹುದಾದ ಎಂದೇ ಹೇಳಬಹುದು. ಬನ್ನಿ ಸುಲಭವಾಗಿ ದೂದ್ ಪೇಡದ ಮಾಡುವ ವಿದಾನವನ್ನು ತಿಳಿಯೋಣ. ಸಾಮಗ್ರಿಗಳು: • 1 ಕ್ಯಾನ್ ಕಂಡೆನ್ಸ್ಡ್ ಹಾಲು (15 ಒಜ್ – 395gm) • 1 ಕಪ್ ಹಾಲಿನ ಪುಡಿ • 1 ಚಮಚ ತುಪ್ಪ / ಬೆಣ್ಣೆ • 3-4 ಏಲಕ್ಕಿ • 10-15 ಬಾದಾಮಿ ಅಥವಾ ಗೋಡಂಬಿ ಬೀಜಗಳು ದೂದ್ ಪೇಡಾ ಮಾಡುವುದು ಹೇಗೆ? 1. ಮೊದಲನೆಯದಾಗಿ, ಬಾದಾಮಿಯನ್ನು ಸಣ್ಣಗೆ ಕತ್ತರಿಸಿ…

Read More