Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ವರದಿ.ಬೈಂದೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶಿವದೇವಾಲಯಗಳಲ್ಲಿ ಲಿಂಗ ಸ್ಪರ್ಶಪೂಜೆಗೆ ಅವಕಾಶವಿರುವ ಬೈಂದೂರು ತಾಲೂಕಿನ ಗಂಗಾನಾಡು ಗ್ರಾಮದ ವನಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ, ಮಹಾಶಿವರಾತ್ರಿ ಮಹೋತ್ಸವದಂದು ಭಕ್ತರು ಭಕ್ತಿ-ಭಾವದೊಂದಿಗೆ ಶಿವಲಿಂಗ ಸ್ವರ್ಶಿಸಿ ಪುನೀತರಾದರು. ಬೆಳಿಗ್ಗೆ 7 ಗಂಟೆಯಿಂದಲೇ ಭಕ್ತಾದಿಗಳಿಗೆ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಮತ್ತು ಸ್ಪರ್ಶಪೂಜೆ ಆರಂಭಗೊಂಡಿದ್ದು ರಾತ್ರಿ 10 ಗಂಟೆಗೆ ದೇವರ ಸುತ್ತು ಉತ್ಸವ, ಕಟ್ಟೆಪೂಜೆ ಹಾಗೂ ಪ್ರಸಾದ ವಿತರಣೆ, ಮರುದಿನ ಶುದ್ಧಕಳಶ, ಕಲಾವೃದ್ಧಿಹೋಮ, ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ಮುಂತಾದ ಕಾರ್ಯಕ್ರಮಗಳು ನಡೆಯುತ್ತದೆ. ಗರ್ಭಗುಡಿಯೊಳಕ್ಕೆ ಶಿವಲಿಂಗ ಸ್ವರ್ಶಿಸುವ ಭಕ್ತರಿಗೆ ದೇವಳದ ಕೆರೆಯಲ್ಲಿ ಸ್ನಾನ ಮಾಡುವುದು ಕಡ್ಡಾಯವಾಗಿತ್ತು. ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಸ್ನಾಹಗೃಹ ನಿರ್ಮಿಸಲಾಗಿತ್ತು. ಗರ್ಭಗುಡಿ ಪ್ರವೇಶಿಸದ ಭಕ್ತರು ನಂದಿ ಮಂಟಪದಲ್ಲಿ ಇರಿಸಲಾದ ದೇವರ ಉತ್ಸವ ಮೂರ್ತಿ ಸ್ಪರ್ಶಿಸಿ ಪುನೀತರಾದರು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ .ರಾಜಮೋಹನ್ ಶೆಟ್ಟಿ ಡಾ. ಮಿಥುನ್ ಶೆಟ್ಟಿ, ತಿಲಕ್ ಶೆಟ್ಟಿ ಮೊದಲಾದವರು ಭಕ್ತರಿಗೆ ದೇವರ ದರ್ಶನಕ್ಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವರದಕ್ಷಿಣೆಗಾಗಿ ಗರ್ಭಿಣಿ ಪತ್ನಿಯನ್ನು ಸಿಗರೇಟಿನಿಂದ ಸುಟ್ಟು ಕಿರುಕುಳ ನೀಡುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಬೀಜಾಡಿ ನಿವಾಸಿ ಪ್ರಿಯಾಂಕ (21) ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈಕೆಯ ಪತಿ ಕುಂದಾಪುರದ ಬರೆಕಟ್ಟು ನಿವಾಸಿ ಪ್ರದೀಪ್ ತಲೆಮರೆಸಿಕೊಂಡಿದ್ದಾನೆ. ಕುಂದಾಪುರ ಠಾಣೆಯಲ್ಲಿ ದೂರು ನೀಡಿರುವ ಪತ್ನಿ ಪ್ರಿಯಾಂಕ, ಸಿಗರೇಟಿನಿಂದ ಸುಟ್ಟು ಗಾಯ ಮಾಡಿದ ಬಳಿಕ ಮಗುವನ್ನು ಕೊಲ್ಲುವುದಾಗಿ ಹೇಳಿ ಹೊಟ್ಟೆಗೆ ತುಳಿದಿದ್ದಾನೆ. ಈ ವೇಳೆಯಲ್ಲಿ ತಪ್ಪಿಸಿಕೊಂಡ ಪರಿಣಾಮ ಸೊಂಟಕ್ಕೆ ಪೆಟ್ಟು ತಗುಲಿದೆ. ಪ್ರದೀಪನೇ ತಾನು ಮಾಡಿದ ಕೃತ್ಯವನ್ನು ತನ್ನ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿ ನನ್ನ ಪೋಷಕರಿಗೆ ಕಳುಹಿಸಿ 2 ಲಕ್ಷ ರೂ. ಹಣ ಹಾಗೂ 4 ಪವನ್ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಒಂದು ವೇಳೆ ಹಣ ಮತ್ತು ಚಿನ್ನ ನೀಡದೇ ಇದ್ದಲ್ಲಿ ಕೊಂದುಬಿಡುವುದಾಗಿ ಹೇಳಿ ಕೊಲೆ ಬೆದರಿಕೆಯೊಡ್ಡಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಫೆ.28: ಶ್ರೀಸಿದ್ಧಿ ವಿನಾಯಕ ಚೆಸ್ ಅಕಾಡೆಮಿ ಹಾಗೂ ಟೋರ್ಪೆಡೋಸ್ ಸ್ಪೋಟ್ಸ್೯ ಕ್ಲಬ್ ವತಿಯಿಂದ ಉಡುಪಿ ಜಿಲ್ಲಾ ಚೆಸ್ ಎಸೋಸಿಯೇಶನ್ ಸಹಯೋಗದಲ್ಲಿ ಶ್ರೀ ಸಿದ್ಧಿವಿನಾಯಕ ಟ್ರೋಫಿ ಅಂತರ್ ಜಿಲ್ಲಾ ಚದುರಂಗ ಪಂದ್ಯಾವಳಿಯು ನಾಗೂರು ಶ್ರೀಕೃಷ್ಣ ಲಲಿತಕಲಾ ಮಂದಿರದಲ್ಲಿ ನಡೆಯಿತು. ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಮಕ್ಕಳನ್ನು ಡಾಕ್ಟರ್ ಇಲ್ಲಾ ಎಂಜಿನಿಯರ್ ಗಳನ್ನಾಗಿ ಮಾಡಲು ಹಗಲಿರುಳು ಹೆಣಗುವ ಹೆತ್ತವರು ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳನ್ನು ಚದುರಂಗ ಸಹಿತ ಕ್ರೀಡೆ, ಕಲಾ ಚಟುವಟಿಕೆಗಳಲ್ಲಿ ತೊಡಗಿಸಿ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಕೊಡುಗೆ ನೀಡಬೇಕು. ಕ್ರೀಡಾ ಸ್ಛೂರ್ತಿಯಿಂದ, ಒತ್ತಡ ರಹಿತ ಜೀವನ ಸಾಗಿಸಬೇಕು ಎಂದರು. ಸಂಘವು 800ಕೋಟಿ ರೂ. ವ್ಯವಹಾರ, 18,000 ರೈತರಿಗೆ ನೆರವಿನೊಂದಿಗೆ 6ಕೋಟಿ ರೂ. ಲಾಭ ಗಳಿಸಿದೆ ಎಂದು ನುಡಿದರು. ಯಶಸ್ವಿ ಸಂಘಟನೆಗಾಗಿ ಸನ್ಮಾನ ಸ್ವೀಕರಿಸಿದ ಕುಂದಾಪುರ ಟೋರ್ಪೆಡೋಸ್ ಸ್ಪೋಟ್ಸ್೯ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ ಮಾತನಾಡಿ, ನೀವು ಆಡುವ ಯಾವುದೇ ಆಟದ…

Read More

ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಅದ್ದೂರಿ ಕಾರ್ಯಕ್ರಮ, ಹಲವರಿಗೆ ನೆರವು, ವೈದ್ಯಕೀಯ ಶಿಬಿರ ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಕ್ವಾಡಿ ಫಾರ್ಚೂನ್ ವಿಲೇಜ್ ಹೊಟೇಲ್ ಬಳಿ ವಕ್ವಾಡಿ ಪ್ರವೀಣ್ ಶೆಟ್ಟಿ ಹುಟ್ಟೂರ ಸನ್ಮಾನ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರ ಹುಟ್ಟೂರಿನ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀ ಸುಬ್ರಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಹುಟ್ಟೂರು ಜೀವನದ ನೆಮ್ಮದಿಯ ತಾಣ. ಬದುಕಿನಲ್ಲಿ ತಾನು ಪಡೆದ ಸೌಲಭ್ಯಗಳನ್ನು ಊರಿಗೂ ವಿಸ್ತರಿಸುವ ಸಾಮಾಜಿಕ ಚಿಂತನೆಯುಳ್ಳವರು ಅಸಾಧಾರಣ ಸಾಧನೆ ಮಾಡಿದಾಗ ಸನ್ಮಾನ ಮಾಡಬೇಕಿರುವುದು ಸಮಾಜದ ಕರ್ತವ್ಯ. ಸಾವಿರಾರು ಮಂದಿ ಬದುಕನ್ನು ಏಳಿಗೆಯತ್ತ ಕೊಂಡೊಯ್ದ ಪ್ರವೀಣ ಶೆಟ್ಟಿಯವರ ಕೀರ್ತಿ ಜಗದುದ್ದಗಲಕ್ಕೂ ಹೊರಹೊಮ್ಮಿದೆ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಅವರು ಪ್ರಸಾದ್ ನೇತ್ರಾಲಯಕ್ಕೆ ಪ್ರವೀಣ್ ಶೆಟ್ಟಿಯವರು ಕೊಡುಗೆಯಾಗಿ ನೀಡಿದ ಅಂಬುಲೆನ್ಸ್ ವಾಹನದ ಕಿಲಿಕೈ ಹಸ್ತಾಂತರಿಸಿದರು. ಪ್ರಾಥಮಿಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬಡಾಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಜರುಗಿತು. ವಿಜ್ಞಾನ ವಸ್ತು ಪ್ರದರ್ಶನ ಮೇಳ ಉದ್ಘಾಟನೆ ಮಾಡಿ ಜಿಲ್ಲಾ ವಿಜ್ಞಾನ ಪರಿಷತ್ತು ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಮಾತನಾಡಿ, ಮೂಢನಂಬಿಕೆ ಮರೆತು ವಿಜ್ಞಾನ ಅರಿತು, ವಿದ್ಯಾರ್ಥಿಗಳು ಹೊಸ ಹೊಸ ಜ್ಞಾನವನ್ನು ಕಲಿಯುತ್ತ ವಿದ್ಯಾಭ್ಯಾಸ ಮಾಡಬೇಕಿದೆ. ಆ ಮಟ್ಟಿಗೆ ಬಡಾಕೆರೆ ಶಾಲಾ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿದೆ. ಅಧ್ಯಾಪಕರು ಮಕ್ಕಳ ಕಾರ್ಯ ಶ್ಲಾಘನೀಯ ಎಂದು ಎಂದರು. ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಶ್ರೀಧರ ದೇವಾಡಿಗ ಇವರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಕ್ಕಳಿಗೆ ಬಹುಮಾನವನ್ನು ನಾಡಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಶೆಟ್ಟಿ ವಿತರಿಸಿದರು. ಸಿ ಆರ್ ಪಿ ನಾಗರಾಜ ಬಂಗ್ಲೆ ಹಾಗೂ ಉಪಾಧ್ಯಕ್ಷೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂದರ್ಭೋಚಿತ ಮಾತನಾಡಿದರು. ಇಕೋ ಕ್ಲಬ್ ರಸಪ್ರಶ್ನೆ ವಿಜೇತರಿಗೆ ಬಹುಮಾನ, ವಿಜ್ಞಾನ ಮತ್ತು ರಂಗೋಲಿ ವಿಜೇತರಿಗೆ ಬಹುಮಾನ ಹಾಗೂ ಕಾಂಪೋಸ್ಟ್ ಕಿಟ್ ಸಭೆಯಲ್ಲಿ ವಿತರಿಸಲಾಯಿತು. ಮುಖ್ಯೋಪಾಧ್ಯಾಯರಾದ ಮಹಾಬಲ…

Read More

ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ಅದು ಶಾಲಾ ವಠಾರ. ಆದರೂ ಫ್ರೂಟ್ ಸಲಾಡ್, ಕೇಕ್, ಅವಲಕ್ಕಿ, ಕೋಸಂಬರಿ, ಬ್ರೆಡ್ ಜಾಮ್, ವಿವಿಧ ರೀತಿಯ ಪಾನೀಯಗಳು, ರಸಾಯನ, ಮಂಡಕ್ಕಿ ಉಪ್ಕರಿ… ಹೀಗೆ ತರಹೇವಾರಿ ಬಾಯಲ್ಲಿ ನೀರೂರಿಸುವ ತಿನಿಸುಗಳ ಜಾತ್ರೆಯೇ ಅಲ್ಲಿ ನೆರೆದಿತ್ತು. ಇವ್ಯಾವುವೂ ಪರಿಣತ ಬಾಣಸಿಗರ ಮೂಲಕ ಸಿದ್ಧಗೊಂಡವುಗಳಲ್ಲ. ಸದಾ ಒಂದಿಲ್ಲೊಂದು ಗುಣಾತ್ಮಕ ಶೈಕ್ಷಣಿಕ ಪ್ರಯೋಗಗಳ ಮೂಲಕ ಗಮನ ಸೆಳೆಯುವ ಹೆಸಕುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪುಟಾಣಿ ಕೈಗಳ ಅಡುಗೆ ಸಾಹಸ. ಬೆಂಕಿ ಉಪಯೋಗಿಸದೆ ಅಡುಗೆ ಸಿದ್ಧಪಡಿಸುವ ನಿಯಮಕ್ಕೆ ಬದ್ಧವಾಗಿ ನೂರಾರು ಪುಟಾಣಿಗಳು 12 ವಿವಿಧ ತಂಡಗಳಾಗಿ ಸೇರಿಕೊಂಡು ತಮ್ಮದೇ ಪರಿಕಲ್ಪನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳಿವು. ಮಕ್ಕಳಿಗೆ ಎಳೆವೆಯಲ್ಲಿಯೇ ಅಡುಗೆ ಕಲೆಯ ಕುರಿತಾದ ಅಭಿರುಚಿ ಬೆಳೆಸುವುದರ ಜೊತೆಗೆ ನಾವು ಸೇವಿಸುವ ಆಹಾರ ಹೇಗಿರಬೇಕು, ಅದನ್ನು ತಯಾರಿಸುವ ಪ್ರಕ್ರಿಯೆ ಹೇಗೆ, ಬಳಸುವ ಸಾಮಗ್ರಿಗಳು ಯಾವುವು, ಪ್ರಮಾಣಬದ್ಧವಾಗಿ ಅವುಗಳನ್ನು ಉಪಯೋಗಿಸುವ ಜ್ಞಾನ, ಅಡುಗೆ ತಯಾರಿಗೆ ಬೇಕಾಗಿ ನಮ್ಮಲ್ಲಿರಬೇಕಾದ ಕೌಶಲಗಳು, ಸ್ವಚ್ಛತೆಯ ಪ್ರಾಮುಖ್ಯ, ಅಡುಗೆ ತಯಾರಿಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಇಲ್ಲಿನ ನೆಲ್ಲಿಗೆದ್ದೆ ಕ್ರೀಡಾಂಗಣದಲ್ಲಿ ದಿ. ಎನ್. ರವೀಂದ್ರ ಭಟ್ ಸ್ಮರಣಾರ್ಥ ಎರಡನೇ ವರ್ಷದ ನೆಲ್ಲಿಗೆದ್ದೆ ಪ್ರೀಮಿಯರ್ ಲೀಗ್ ಹೊನಲು ಬೆಳಕಿನ 30 ಗಜಗಳ ‘ಮೂಕಾಂಬಿಕಾ ಟ್ರೋಫಿ’ ಕ್ರಿಕೆಟ್ ಪಂದ್ಯಾಟ ನಡೆಯಿತು. ಪಂದ್ಯಾಟದಲ್ಲಿ ಪ್ರಸಿದ್ಧಿ ಕ್ರಿಕೆಟರ್ಸ್ ತಂಡವು ಗೆಲುವು ಸಾಧಿಸಿತು. ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದವು ಫೈನಲ್ ಹಣಾಹಣೆಯಲ್ಲಿ ಪ್ರಸಿಧ್ಧಿ ಕ್ರಿಕೆಟರ್ಸ ಮತ್ತು 8 ವಂಡರ್ಸ ಕ್ರಿಕೆಟರ್ಸ್ ತಂಡದ ನಡುವೆ ಫೈನಲ್ ಪಂದ್ಯ ನಡೆಯಿತು. ಫೈನಲ್ ಪಂದ್ಯದ ರೋಚಕ ಹಣಾಹಣೆಯಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆಮಾಡಿಕೊಂಡ ಪ್ರಸಿಧ್ಧಿ ಕ್ರಿಕೆಟರ್ಸ ನಿಗದಿತ 5 ಓವರ್ 49 ರನ್ ಗಳಿಸಿತು ನಂತರ ಬ್ಯಾಟಿಂಗ್ ಆರಂಭಿಸಿದ 8 ವಂಡರ್ಸ ಕ್ರಿಕೆಟರ್ಸ್ 48 ರನ್ ಗಳಿಸಿತು. ನೆಲ್ಲಿಗೆದ್ದೆ ಪ್ರೀಮಿಯರ್ ಲೀಗಿನ ಎರಡನೇ ಆವೃತ್ತಿಯಲ್ಲಿ ವಿನೋದ್ ಭಟ್ ನೇತೃತ್ವದ ಪ್ರಸಿಧ್ಧಿ ಕ್ರಿಕೆಟರ್ಸ್ ಮೂಕಾಂಬಿಕಾ ಟ್ರೋಫಿ ಜಯಗಳಿಸಿತು ಹಾಗೂ ಶ್ರೀನಾಥ್ ಅಡಿಗ ನೇತೃತ್ವದ 8 ವಂಡರ್ಸ ಕ್ರಿಕೆಟರ್ಸ್ ದ್ವಿತೀಯ ಸ್ಥಾನ ಗೆದ್ದುಕೊಂಡಿತು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಫೆ.28: ನಾಗೂರಿ ನಲ್ಲಿ ನಡೆದ ಶ್ರೀ ಸಿದ್ಧಿ ವಿನಾಯಕ ಅಂತರ್ ಜಿಲ್ಲಾ ರ‍್ಯಾಪಿಡ್ ಚೆಸ್ ಪಂದ್ಯಾಟದಲ್ಲಿ ಕಶ್ವಿ ಚೆಸ್ ಸ್ಕೂಲ್ ಕುಂದಾಪುರದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಾದ ತೆಕ್ಕಟ್ಟೆಯ ಸನತ್ ಎಸ್ ಸಿರಿಯನ್ ವಯೋಮಾನದ (U 13) ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದರು, ಕುಂದಾಪುರದ ಸಾರ್ಥಕ್ ಶೇರೆಗಾರ್ ವಯೋಮಾನದ (U 11) ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದರು, ಸಳ್ವಾಡಿಯ ಆರಾಧ್ಯ ಎಸ್. ಶೆಟ್ಟಿ ವಯೋಮಾನದ (U 11) ಬಾಲಕಿಯರ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದರು, ವಯೋಮಾನದ (U 9) ಬಾಲಕರ ವಿಭಾಗದಲ್ಲಿ ಮುಳ್ಳಿಕಟ್ಟೆ ಆರವ್ ಎಸ್ ಶೆಟ್ಟಿ ದ್ವೀತಿಯ ಸ್ಥಾನವನ್ನು ಪಡೆದರು ಮತ್ತು ವಯೋಮಾನದ (U7) ಬಾಲಕರ ವಿಭಾಗದಲ್ಲಿ ಉಪ್ಪುಂದದ ತೇಜಸ್ ದ್ವೀತಿಯ ಸ್ಥಾನವನ್ನು ಪಡೆದಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಫೆ.28: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಬೈಂದೂರು ತಾಲೂಕು, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವಂಡ್ಸೆ ವಲಯ ಮತ್ತು ಭಜನಾ ಪರಿಷತ್ ವಂಡ್ಸೆ ವಲಯ ಇವರ ಜಂಟಿ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮ ಹಾಗು 10 ಮಹಿಳಾ ಭಜನಾ ಮಂಡಳಿ ಉದ್ಘಾಟನೆ ವಂಡ್ಸೆ ನೂಜಾಡಿ ಕ್ರಾಸ್‌ನಲ್ಲಿರುವ ಮಹಾತ್ಮ ಗಾಂಧಿ ಸಭಾ ಭವನದಲ್ಲಿ ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಧ.ಗ್ರಾ ಯೋಜನೆ ಉಡುಪಿ ಜಿಲ್ಲೆಯ ಹಿರಿಯ ನಿರ್ದೇಶಕರಾದ ಗಣೇಶ್ ಬಿ ಮಾತನಾಡಿ, ವ್ಯಕ್ತಿ ಸರಿಯಾದರೆ ದೇಶವೇ ಸರಿಯಾಗುತ್ತದೆ ಎನ್ನುವ ಕಲ್ಪನೆಯಲ್ಲಿ ನಾವಿಂದು ಸಾಗಬೇಕಾಗಿದೆ. ಧಾರ್ಮಿಕ ಕಾರ್ಯಕ್ರಮಗಳಿಂದ ಒಗ್ಗಟ್ಟು, ಸಂಸ್ಕೃತಿ, ಸಂಸ್ಕಾರವನ್ನು ಕಂಡುಕೊಳ್ಳಲು ಸಾಧ್ಯ. ಭಜನೆಯ ಮೂಲಕ ಬದುಕಿನಲ್ಲಿ ಪ್ರಜ್ಞಾವಂತಿಕೆ ಜೀವನಾದರ್ಶಗಳನ್ನು ಬೆಳೆಸಿಕೊಂಡು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯ ಎಂದರು. ಜನಜಾಗೃತಿ ವೇದಿಕೆಯ ಗೌರವಾಧ್ಯಕ್ಷರಾದ ಬಿ.ಅಪ್ಪಣ್ಣ ಹೆಗ್ಡೆ ಅವರು ವಲಯದ ೧೦ ಮಹಿಳಾ ಭಜನಾ ಮಂಡಳಿಗಳ ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತೆಂಕು-ಬಡಗುತಿಟ್ಟಿನಲ್ಲಿ ಸುದೀರ್ಘ 40 ವರ್ಷಗಳ ಕಾಲ ಸೇವೆಗೈದು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ವಂಡ್ಸೆ ನಾರಾಯಣ ಗಾಣಿಗರ ಸ್ಮರಣಾರ್ಥವಾಗಿ ಪ್ರಶಸ್ತಿ ಸ್ಥಾಪಿಸಲಾಗಿದ್ದು, 2022ನೇ ಸಾಲಿನ ‘ವಂಡ್ಸೆ ನಾರಾಯಣ ಪ್ರಶಸ್ತಿ’ಗೆ ಬಡಗುತಿಟ್ಟಿನ ಹಿರಿಯ ಹಾಸ್ಯಕಲಾವಿದ ಹೊಳ್ಮಗೆ ನಾಗಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಮಾರ್ಚ್ 5 ಶನಿವಾರ ವಂಡ್ಸೆಯ ತಿರುಮಲ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ವರ್ಧಂತ್ಯುತ್ಸವದ ಅಂಗವಾಗಿ ಮಧ್ಯಾಹ್ನ 2:30ರಿಂದ ದೇವಳದ ಆಶ್ರಯದಲ್ಲಿ ನಡೆಯುವ ತಾಳಮದ್ದಲೆ ಕಾರ್ಯಕ್ರಮದಲ್ಲಿ ನಾರಾಯಣ ಗಾಣಿಗರ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಹಿರಿಯ ಪ್ರಸಂಗಕರ್ತರಾದ ಕಂದಾವರ ರಘುರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಗಿಳಿಯಾರು ಶ್ರೀಧರ ಶೆಟ್ಟಿ, ಆಡಳಿತ ಮೊಕ್ತೇಸರ ವಿ.ಕೆ ಶಿವರಾಮ ಶೆಟ್ಟಿ ತಿಳಿಸಿದ್ದಾರೆ. ಬಡಗುತಿಟ್ಟಿನ ತೆರೆಮರೆಯ ಹಿರಿಯ ಕಲಾವಿದ ಹೊಳ್ಮಗೆ ನಾಗಪ್ಪನವರು ಸುಮಾರು 60ಕ್ಕೂ ಹೆಚ್ಚು ವರ್ಷಗಳಿಂದ ಯಕ್ಷತಿರುಗಾಟ ನಿರತರಾಗಿದ್ದಾರೆ. ಪ್ರಸ್ತುತ ಕೋಟದ ಅಮೃತೇಶ್ವರಿ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಕ್ಲಾಡಿ…

Read More