ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೇಂದ್ರ ಸರಕಾರದ ಜನವಿರೋಧಿ ಆರ್ಥಿಕ ನೀತಿಯಿಂದಾಗಿ ಜನಸಾಮಾನ್ಯರು ಹೈರಾಣಾಗುವಂತೆ ಮಾಡಿದೆ. ಸಾಲ ಭಾದಿತ ರೈತ ಕೂಲಿ ಕಾರ್ಮಿಕರು ಜೀವನ ಸಾಗಿಸುವುದು ಕಷ್ಟದಾಯಕವಾಗಿದೆ. ಸರಕಾರದಿಂದ ಕೂಲಿ ಕಾರ್ಮಿಕರಿಗೆ ಸರಿಯಾದ ಭದ್ರತೆ ಇಲ್ಲ. ಸರಕಾರ ಉದ್ಯೋಗ, ವಸತಿ, ನಿವೇಶನ ನೀಡಲು ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಮುಖಂಡ ಸುರೇಶ ಕಲ್ಲಾಗರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಬಂದೂರು ತಹಶೀಲ್ದಾರರ ಕಛೇರಿ ಎದುರು ಕರ್ನಾಟಕ ಪ್ರಾಂತ್ಯ ರೈತ ಸಂಘ, ಕರ್ನಾಟಕ ಪ್ರಾಂತ್ಯ ಕೃಷಿ ಕೂಲಿಕಾರರ ಸಂಘ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ದಲಿತ ಹಕ್ಕುಗಳ ಸಮಿತಿ ಕರ್ನಾಟಕ, ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ, ಕರ್ನಾಟಕ ಅದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಕಾರ್ಮಿಕ ಸಂಘ, ರೈತರು, ಕೂಲಿಕಾರ್ಮಿಕರ ಸಂಘ ಇದರ ವತಿಯಿಂದ ಕೂಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ನಡೆದ ಬ್ರಹತ್ ಪ್ರತಿಟನೆ ಹಾಗೂ ಜೈಲ್ ಭರೋ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಮಾಜ ಸೇವೆಗಳಲ್ಲಿ ಭಾಗಿಯಾಗುವುದರ ಮೂಲಕ ಮಕ್ಕಳು ಆತ್ಮವಿಶ್ವಾಸ ವೃದ್ಧಿಸಿಕೊಂಡು ಸತ್ಪ್ರಜೆಯಾಗಿ ರೂಪಿಸುವಲ್ಲಿ ಇಂಟರ್ಯಾಕ್ಟ್ ಕ್ಲಬ್ ಸಹಾಯಕಾರಿಯಾಗುತ್ತದೆ ಎಂದು ಇಂಟರ್ಯಾಕ್ಟ್ ಕ್ಲಬ್ ನಿರ್ದೇಶಕ ಎಂ. ಎನ್. ಶೇರಿಗಾರ್ ಹೇಳಿದರು. ಬೈಂದೂರು ರತ್ತೂಬಾ ಜನತಾ ಫ್ರೌಡಶಾಲೆಯಲ್ಲಿ ರೋಟರಿ ಕ್ಲಬ್ ಪೂರಕ ಸಂಸ್ಥೆ ಇಂಟರ್ಯಾಕ್ಟ್ ಕ್ಲಬ್ಬಿನ ನೂತನ ಪದಾಧಿಕಾರಿಗಳಿಗೆ ಪದಪ್ರದಾನಿಸಿ ಮಾತನಾಡಿದರು. ಸ್ಥಳೀಯ ರೋಟರಿ ಕ್ಲಬ್ ಅಧ್ಯಕ್ಷ ಐ. ನಾರಾಯಣ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ರತ್ತೂಬಾ ಜನತಾ ಫ್ರೌಡಶಾಲೆಯ ಇಂಟರ್ಯಾಕ್ಟ್ ಕ್ಲಬ್ನ ನೂತನ ಅಧ್ಯಕ್ಷರಾಗಿ ಲಕ್ಷ್ಮೀನಾರಾಯಣ, ಕಾರ್ಯದರ್ಶಿಯಾಗಿ ಮೇಘಾ ಹಾಗೂ ಇತರ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿದರು. ರೋಟರಿ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ. ಉಪ್ಪುಂ, ಶಿಕ್ಷಕಿಯರಾದ ಚೈತ್ರಾ, ಹೇಮಾವತಿ, ನಿರ್ಮಲಾ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಮಂಜು ಕಾಳಾವರ ಸ್ವಾಗತಿಸಿದರು. ಕ್ಲಬ್ನ ಮಾರ್ಗದರ್ಶಕ ಶಿಕ್ಷಕ ಆನಂದ ಮದ್ದೋಡಿ ಪ್ರಾಸ್ತಾವಿಸಿದರು. ವಿದ್ಯಾರ್ಥಿಗಳಾದ ಸುರೇಂದ್ರ ಹಾಗೂ ಸುದರ್ಶನ್ ನಿರೂಪಿಸಿ, ಪ್ರಕಾಶ್ ಮಾಕೋಡಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಯ್ಯಾಡಿ ಬೈಂದೂರು ಇದರ 40ನೇ ವರ್ಷದ ಮಾಣಿಕ್ಯ ಮಹೋತ್ಸವದ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಮಂಜುನಾಥ ಎಸ್. ಹಾಗೂ ಕಾರ್ಯದರ್ಶಿಯಾಗಿ ರಾಘವೇಂದ್ರ ಎನ್. ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿಯ ಗೌರವಾಧ್ಯಕ್ಷರಾಗಿ ಬಿ. ಸುರೇಶ್ ನಾಯ್ಕ್, ಎಂ.ಪಿ ರವಿ, ಉಪಾಧ್ಯಕ್ಷರಾಗಿ ಹನುಮಂತ ಎಚ್., ಬಿ. ಗಣೇಶ್ ನಾಯ್ಕ್, ಜಿ. ಸತೀಶ್, ಮೂರ್ತಿ ಆರ್., ಮಂಜುನಾಥ ಜಿ., ರಾಜೇಶ್ ಕೋಟೆ, ರಾಘವೇಂದ್ರ ಎನ್., ಸುಬ್ರಹ್ಮಣ್ಯ ಎಚ್., ನಾಗೇಂದ್ರ ಎಚ್., ಸುನಿಲ್ ಸಿ. ಹೆಚ್., ಪ್ರದೀಪ್ ಜಿ, ಸಂಘಟನಾ ಕಾರ್ಯದರ್ಶಿಯಾಗಿ ಸಣ್ಣಯ್ಯ ಎಂ.ಪಿ., ತಿಲಕನಾಥ್, ಶಿವಾನಂದ ಡಿ, ಎಂ. ಎನ್ ನಾಗೇಂದ್ರ, ವಿಜಯ ಕೆ., ರಾಜೇಶ್ ಎಚ್, ವರುಣ್ ಎಚ್, ಶ್ರೀಪಾದ ಎಂ.ಕೆ., ರಾಘವೇಂದ್ರ ಬಾಣ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕೆ. ನಾಗರಾಜ್, ಗೋವಿಂದರಾಜ್ ಬಿ., ನಾಗೇಂದ್ರ ಎ., ಕ್ರೀಡಾ ಕಾರ್ಯದರ್ಶಿಯಾಗಿ ಎನ್. ಸುಬ್ರಹ್ಮಣ್ಯ., ಎಂ.ಪಿ ಮಂಜುನಾಥ್, ವಸಂತ್ ಎಚ್., ಶಿವಕುಮಾರ್, ಕೋಶಾಧ್ಯಕ್ಷ ಗೌರವ ಸಲಹೆಗಾರರಾಗಿ ವಿಘ್ನೇಶ್ವರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರೊಡಕ್ಷನ್ ನಂ.1 ಹಾಗೂ ಕಲಾತರಂಗ ಬಸ್ರೂರು ಇವರ ಸಹಯೋಗದೊಂದಿಗೆ ಸಾಂಡಲ್ವುಡ್ ನೂತನ ಚಲನಚಿತ್ರಕ್ಕೆ ಸಿದ್ಧತೆ ನಡೆದಿದ್ದು, ಕರಾವಳಿಯ ಯುವ ಪ್ರತಿಭೆಗಳಿಗಾಗಿ ಬಸ್ರೂರಿನ ಬಿ.ಎಂ.ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಡಿಷನ್ ನಡೆಯಿತು. ಕಾರ್ಯಕ್ರಮವನ್ನು ಹಾಸ್ಯನಟ ರಘು ಪಾಂಡೇಶ್ವರ ಉದ್ಘಾಟಿಸಿ ಮಾತನಾಡಿ ಓಂಗುರು ಬಸ್ರೂರು ಹಾಗೂ ಚಂದ್ರಶೇಖರ್ ಬಸ್ರೂರು ಅವರು ಪ್ರಥಮ ಭಾರಿಗೆ ನಿರ್ಮಾಣ ಮಾಡುತ್ತಿರುವ ಪ್ರೊಡಕ್ಷನ್ ನಂ.೧ ಚಿತ್ರದ ಮೂಲಕ ಕರಾವಳಿಯ ಪ್ರತಿಭೆಗಳಿಗೆ ಉತ್ತಮ ಅವಕಾಶ ದೊರೆಯುವಂತಾಗಲಿ ಎಂದರು. ಕತ್ತಲೆಕೋಣೆ ಸಿನೆಮ ನಿರ್ದೇಶಕಮ ನಟ ಸಂದೇಶ್ ಶೆಟ್ಟಿ ಆಜ್ರಿ ಮಾತನಾಡಿ ನಿಮ್ಮ ಹುಚ್ಚಿಗೆ ಚಿತ್ರರಂಗಕ್ಕೆ ಬರಬೇಡಿ, ಚಿತ್ರ ರಂಗದ ಬಗ್ಗೆ ಆಸಕ್ತಿ ಗೌರವ ಕಾಳಜಿ ಇದ್ದರೆ ಮಾತ್ರ ಬನ್ನಿ. ಯಾವುದೋ ಸಿನಿಮಾ ನೋಡಿ ಹುಚ್ಚಿನ ಗೀಳಿಗೆ ಬಿದ್ದು ಚಿತ್ರರಂಗದಲ್ಲಿ ನಟನೆಗೆ ಅವಕಾಶ ಪಡೆದು ನಂತರ ನಿರ್ದೇಶಕರಿಗೆ ಮತ್ತು ಚಿತ್ರ ತಂಡಕ್ಕೆ ತಲೆ ನೋವು ಮಾಡಬೇಡಿ ಚಿತ್ರ ರಂಗವನ್ನು ಪ್ರೀತಿಸಿ ಗೌರವಿಸಿ ಎಂದು ಸಲಹೆ ನೀಡಿದರು. ಅತಿಥಿಗಳಾಗಿ…
ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಮೀಟ್ – ಗ್ರೀಟ್ ಕಾರ್ಯಕ್ರಮ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾಷೆ ಮಾತಿಗೆ ಮಾತ್ರ ಸೀಮಿತವಲ್ಲ. ಅದು ಆಯಾ ಭಾಷಿಕರನ್ನು ಭಾವನಾತ್ಮಕವಾಗಿ ಬೆಸೆಯುತ್ತದೆ. ಅದು ನಮ್ಮೊಳಗಿನ ಭಾವನೆಗಳ ಅಭಿವ್ಯಕ್ತಿಯೂ ಹೌದು. ಒಂದು ಊರಿನ ಸಂಸ್ಕ್ರತಿ, ಸಾಂಸ್ಕ್ರತಿಕ ಪರಂಪರೆ, ಆಚರಣೆಗಳು ಅಲ್ಲಿನ ಜನರ ಒಡನಾಟದಿಂದ ತಿಳಿಯುತ್ತದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಇದರ ವತಿಯಿಂದ ಕುಂದಾಪುರ ಸಹನಾ ಮಿನಿ ಹಾಲ್ನಲ್ಲಿ ಕುಂದಾಪ್ರ ಕನ್ನಡ ಭಾಷೆ ಮಾತನಾಡುವ ವ್ಯಾಪ್ತಿಯಲ್ಲಿನ ಜನಪ್ರತಿನಿಧಿಗಳಿಗೆ ಗೌರವಿಸುವ ಮೀಟ್ – ಗ್ರೀಟ್ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ ಜಾಗತಿಕ ಮಟ್ಟದಲ್ಲಿ ಕುಂದಾಪ್ರ ಕನ್ನಡಿಗರ ಸಾಧನೆ ಅಪಾರವಾಗಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಭಾಷೆಯ ಸೊಗಡನ್ನು ಉಳಿಸಲು ಹೆಣಗಬೇಕಾಗಿರುವುದು ವಿಷಾದನೀಯ ಎಂದರು. ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದರೂ ಸಹ ದುಬ ನೆಲದಲ್ಲೂ ಕುಂದಾಪುರ ಭಾಷೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ಸಭಾಭವನದಲ್ಲಿ ವಿಹಿಂಪ ಮತ್ತು ಬಜರಂಗದಳ ಬೈಂದೂರು ಪ್ರಖಂಡದ ಕಾರ್ಯಕರ್ತರ ಸಮಾವೇಶ ನಡೆಯಿತು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪಿ. ವಿಲಾಸ ನಾಯಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದುಗಳಲ್ಲಿ ಒಗ್ಗಟ್ಟಿನ ಕೊರತೆ ಇದ್ದು ಪ್ರತಿಯೊಂದು ಕ್ಷಣದಲ್ಲೂ ಒಗ್ಗಟ್ಟು ಪ್ರದರ್ಶಿಸಬೇಕು. ನಮ್ಮ ರಾಷ್ಟ್ರ ಹಾಗೂ ಹಿಂದುತ್ವ ರಕ್ಷಣೆಗೆ ಪ್ರಾಣ ಕೊಡಲು ಸನ್ನದ್ಧರಾಗಬೇಕು. ಗ್ರಾಮ ಮಟ್ಟದಲ್ಲಿ ಪ್ರತಿ ಹಿಂದು ಮನೆಯ ಒರ್ವ ಸದಸ್ಯ ಸಂಘಟನೆಗೆ ಸೇರುವ ಮೂಲಕ ಹಿಂದು ಸಮಾಜ ರಕ್ಷಣೆಯ ನೇತಾರರಾಗಬೇಕು ಎಂದು ಕರೆ ನೀಡಿದರು. ಹಿಂದು ಬಾಂಧವರು ಗೋವುಗಳ ಮಹತ್ವವನ್ನು ಅರಿತು ಗೋವುಗಳ ರಕ್ಷಣೆಗೆ ಮುಂದಾಗಬೇಕು. ಹಿಂದು ಸಮಾಜವನ್ನು ಸಂಕುಚಿತಗೊಳಿಸುವ, ವಿಕೃತಗೊಳಿಸುವ ಕೆಲಸಗಳು ನಿತ್ಯ ನಿರಂತರವಾಗಿ ನಡೆಯುತ್ತಿದೆ. ಯುವ ಜನರನ್ನು ದಾರಿ ತಪ್ಪಿಸಿ ನಾಶಗೊಳಿಸುವ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ. ಹೀಗಾಗಿ ಹಿಂದು ಸಮಾಜ ಜಾಗೃತವಾಗಬೇಕು ಎಂದರು. ಇಂದು ಹಿಂದೂ ಎಂದು ಹೇಳಿಕೊಂಡರೂ ಕೋಮುವಾದಿ ಎಂದು ಬಿಂಬಿಸುವ ವಾತಾವರಣ ಸೃಷ್ಠಿಯಾಗಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲಾ ಕಾಂಗ್ರೆಸ್ ಐಟಿ ಸೆಲ್ನ ಮಾಜಿ ಅಧ್ಯಕ್ಷ ವಿಶ್ವಾಸ್ ಶೆಟ್ಟಿ ಅವರನ್ನು ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿ ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಶಾಂತವೀರ ನಾಯ್ಕ್ ಆದೇಶಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಬೆಳೆಯುತ್ತಿರುವ ಪಟ್ಟಣವಾಗಿದ್ದು ವಾಹನಗಳ ಸಂಖ್ಯೆ ಏರುತ್ತಲಿದೆ. ಕೆಲವು ಪ್ರದೇಶಗಳಲ್ಲಿ ರಸ್ತೆ ಅಗಲಕಿರಿದಾದುರಿಂದ ಪಾರ್ಕಿಂಗ್ ಸಮಸ್ಯೆ ಉಂಟಾಗುತ್ತದೆ. ಒಳ ರಸ್ತೆಗಳಲ್ಲೂ ಸಮಸ್ಯೆಗಳಿವೆ. ವಾಹನ ಚಾಲಕರೂ ರಸ್ತೆ ನಿಯಮಗಳನ್ನು ಪಾಲಿಸದಿದ್ದರೆ ಅವಘಡಗಳೂ ಉಂಟಾಗುತ್ತದೆ. ಒಂದು ಶಾಶ್ವತ ಸಂಚಾರಿ ನಿಯಮ ಕುಂದಾಪುರದಲ್ಲಿ ರೂಪಿಸಬೇಕಾಗಿದೆ. ಇದಕ್ಕೆ ಸಂಬಂಧಪಟ್ಟ ಇಲಾಖೆಗಳ ಇಲಾಖೆಯವರೆಲ್ಲಾ ಸೇರಿ ಹಾಗೂ ಸಾರ್ವಜನಿಕ ಪ್ರತಿನಿಧಿಗಳು ಸೇರಿ ಚರ್ಚಿಸಿ ಒಂದು ನಿಯಮ ರೂಪಿಸಬಹುದು” ಎಂದು ಕುಂದಾಪುರ ವಲಯದ ವೃತ್ತ ನಿರೀಕ್ಷಕ ಡಿ.ಆರ್. ಮಂಜಪ್ಪ ಹೇಳಿದರು. ರೋಟರಿ ಕುಂದಾಪುರ ದಕ್ಷಿಣ ಏರ್ಪಡಿಸಿದ “ಮೇಕ್ ರೋಡ್ ಸೇಫ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ಹೇಳಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಏಕೆ ಅಪಘಾತಗಳಾಗುತ್ತವೆ. ಚಾಲಕರು ಯಾವ ರೀತಿ ನಿಯಮಗಳನ್ನು ಪಾಲಿಸದೇ ನಿರ್ಲಕ್ಷದಿಂದ ವಾಹನ ಚಲಾಯಿಸಿ ಅಪಘಾತಗಳಿಗೆ ಕಾರಣರಾಗುತ್ತಾರೆ ಎನ್ನುವುದನ್ನು ಉದಾಹರಣೆ ಸಹಿತ ವಿವರಿಸಿದ ಅವರು ವಾಹನ ಚಲಾವಣೆಯಲ್ಲಿ ಮೊಬೈಲ್ ಬಳಕೆ ಅಪಾಯಕಾರಿ, ಮನೆಯಲ್ಲಿ ತಮ್ಮನ್ನು ನಂಬಿದ ಒಡಹುಟ್ಟಿದವರು ಪತ್ನಿ, ಮಕ್ಕಳು ಹೆತ್ತವರು ಇದ್ದಾರೆ ಎಂಬ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಿರಿಮಂಜೇಶ್ವರದ ಶುಭದಾ ಆಂಗ್ಲ ಮಾಧ್ಯಮ ಶಾಲೆಯು ತನ್ನ ೨೫ ನೇ ವರ್ಷಾಚರಣೆಯ ಸಂದರ್ಭದಲ್ಲಿ ಬೆಳ್ಳಿಹಬ್ಬದ ಉದ್ಘಾಟನಾ ಸಮಾರಂಭ ಹಮ್ಮಿಕೊಂಡಿದ್ದು, ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೈಂದೂರಿನ ಶಾಸಕರಾದ ಬಿ.ಎಂ ಸುಕುಮಾರ ಶೆಟ್ಟಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೆಳ್ಳಿಹಬ್ಬದ ಲಾಂಛನವನ್ನು ಬಿಡುಗೊಡೆಗೊಳಿಸಿ, ಮಾತನಾಡಿದ ಅವರು ಕಿರಿಮಂಜೇಶ್ವರದಲ್ಲಿ ಹಿಂದೆ ಸಣ್ಣ ಹಂಚಿನ ಕಟ್ಟಡದಲ್ಲಿ ಶಾಲೆಯನ್ನು ಆರಂಭಿಸಿ ಇಂದು ತನ್ನದೇ ಆದ ಸುಸಜ್ಜಿತ ಸ್ವಂತ ಕಟ್ಟಡದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿರುವ ಡಾ| ಎನ್ ಕೆ ಬಿಲ್ಲವ ಅವರ ವ್ಯಕ್ತಿತ್ವವನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ನೂತನ ಶಾಸಕರನ್ನು ಸನ್ಮಾನಿಸಲಾಯಿತು. ಕ್ಲಸ್ಟ್ರ್ ಮಟ್ಟದಲ್ಲಿ ಪ್ರತಿಭಾ ಕಾರಂಜಿ ವಿಜೇತರಾದ ಪುಟಾಣಿಗಳನ್ನು ಪ್ರಶಸ್ತಿಯೊಂದಿಗೆ ಪುರಸ್ಕರಿಸಲಾಯಿತು. ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಡಾ. ಎನ್ ಕೆ ಬಿಲ್ಲವ ಅಧ್ಯಕ್ಷತೆ ವಹಿಸಿ ಮಾತನಾಡಿ ಕಳೆದ ೨೫ ವರ್ಷಗಳ ಏಳು-ಬೀಳುಗಳನ್ನು ಸ್ಮರಿಸುತ್ತಾ ಮುಂದಿನ ದಿನಗಳಲ್ಲಿ ಇನ್ನೂ ಅತುತ್ತಮ ಗುಣಮಟ್ಟದ ಶಿಕ್ಷಣ ನೀಡುವುದಾಗಿ ಭರವಸೆ ನೀಡಿದರು. ಮುಖ್ಯ ಶಿಕ್ಷಕರಾದ ರವಿದಾಸ್ ಶೆಟ್ಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಬಾಳೆಕುದ್ರು ಶ್ರೀಮಠದಲ್ಲಿ ನೃಸಿಂಹಾಶ್ರಮ ಸ್ವಾಮೀಜಿಯವರ ಚಾತುರ್ಮಾಸ್ಯ ವೃದಲ್ಲಿರುವ ಶ್ರೀಗಳವರನ್ನು ವಿಧಾನ ಪರಿಷತ್ ವಿರೋದ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಇಂದು ಭೇಟಿಯಾಗಿ ಗುರು ನಮನ ಸಲ್ಲಿಸಿದರು. ಈ ಸಂದರ್ಭ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರಕಾರದ ಹಲವು ಸಾಧನೆಗಳ ಪರಿಚಯದ ಶುದ್ಧ ನಡೆ ಸೂಕ್ತ ವಿಕಾಸ ಪುಸ್ತಕವನ್ನು ಶ್ರೀಗಳವರೀಗೆ ಶ್ರೀಗಳವರಿಗೆ ನೀಡಿದರು. ಐರೋಡಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಬೇಬಿ ಕೃಷ್ಣ ಪೂಜಾರಿ. ಸದಸ್ಯರಾದ ಇಂದಿರಾ ಪೂಜಾರಿ, ರಾಜೇಶ್ ಪೂಜಾರಿ, ಪ್ರೇಮ ಆಚಾರ್ಯ , ದಿನೇಶ್ ಅಮೀನ್ , ಬಿಜೆಪಿಯ ಮುಖಂಡರಾದ ವಿಠಲ್ ಪೂಜಾರಿ ಉಪಸ್ಥಿತರಿದ್ದರು.
