Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ಮಲ್ಯರಬೆಟ್ಟು ಶ್ರೀ ನಾಗ ನಿಲಯ ನಿವಾಸಿ ಮಂಜಿ ಖಾರ್ವಿ (೫೭) ಅವರು ಬಾಯಿ ಕ್ಯಾನ್ಸರ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ಮಾನವೀಯ ನೆರವಿನ ಅಗತ್ಯವಿದೆ. ಅಸ್ವಸ್ಥಗೊಂಡಿರುವ ಮಂಜಿ ಖಾರ್ವಿ ಅವರನ್ನು ಮೇ ೨ರಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಳೆದ ಎರಡು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಗುಣಮುಖರಾಗಲು ಹೆಚ್ಚಿನ ಚಿಕಿತ್ಸೆಯ ನೀಡಬೇಕಾಗಿದ್ದು ವೈದ್ಯಕೀಯ ವೆಚ್ಚಕ್ಕಾಗಿ ಸುಮಾರು ೩.೫ ಲಕ್ಷ ರೂ.ಗಳ ಅಗತ್ಯವಿದೆ ಮತ್ತು ಪ್ಲಾಸ್ಟಿಕ್ ಸರ್ಜರಿಗಾಗಿ ಸುಮಾರು ಒಂದರಿಂದ ಒಂದುವರೆ ಲಕ್ಷ ರೂ.ಗಳ ಎಂದು ವೈದ್ಯರು ತಿಳಿಸಿದ್ದಾರೆ. ಬಡ ಮೀನುಗಾರ ಕುಟುಂಬದ ಇವರಿಗೆ ಇಬ್ಬರು ಗಂಡು ಮಕ್ಕಳು. ಒಬ್ಬ ಮೀನುಗಾರಿಕೆ ನಡೆಸುತ್ತಿದ್ದು ಇನ್ನೊಬ್ಬ ಗ್ಯಾರೇಜ್‌ನಲ್ಲಿ ದುಡಿಯುತ್ತಿದ್ದಾನೆ. ಕಳೆದ ಎರಡು ತಿಂಗಳಿನಿಂದ ವೈದ್ಯಕೀಯ ಚಿಕಿತ್ಸೆಗಾಗಿ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿರುವ ಬಡ ಕುಟುಂಬ ಮುಂದಿನ ಚಿಕಿತ್ಸೆಗಾಗಿ ಅಷ್ಟು ದೊಡ್ಡ ಮೊತ್ತವನ್ನು ಹೊಂದಿಸಿಕೊಳ್ಳಲು ಕಷ್ಟವಾಗುತ್ತಿದ್ದು ಸಹೃದಯಿಗಳ ಉದಾರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಲಕ್ಷ್ಮೀ ಸೋಮ ಬಂಗೇರ ಪ್ರಥಮ ದರ್ಜೆ ಕಾಲೇಜು ಮಣೂರು ಪಡುಕರೆ ಇಲ್ಲಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಕಾಳಾವರ ವರದರಾಜ ಶೆಟ್ಟಿ ಪ್ರಥಮ ದರ್ಜೆ ಕಾಲೇಜಿಗೆ ವರ್ಗಾವಣೆಗೊಂಡ ಡಾ|ಎಸ್‌. ರಾಜೇಂದ್ರ ನಾಯಕ್‌ ಅವರಿಗೆ ಹಾಗೂ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿವಕುಮಾರ್‌ ಅವರಿಗೆ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸಮ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ಕಾಲೇಜಿನ ವಠಾರದಲ್ಲಿ ಜರಗಿತು. ರಾಜೇಂದ್ರ ನಾಯಕ್‌ ಅವರು ಸಮ್ಮಾನ ಸ್ವೀಕರಿಸಿ ಮಾತನಾಡಿ, ನಿರಂತರ ಒಂಬತ್ತು ವರ್ಷಗಳ ಕಾಲ ಗ್ರಾಮೀಣ ಭಾಗವಾದ ಕೋಟ ಪರಿಸರದಲ್ಲಿ ಉಪನ್ಯಾಸಕನಾಗಿ, ಪ್ರಾಂಶುಪಾಲನಾಗಿ ಸೇವೆ ಸಲ್ಲಿಸಿದ್ದು, ಅತ್ಯಂತ ಖುಷಿ ತಂದಿದೆ. ವಿದ್ಯಾರ್ಥಿಗಳ ಜತೆಗೆ ಕಳೆದ ದಿನಗಳು ನೆಮ್ಮದಿ ಕೊಟ್ಟಿದೆ. ಈ ಶೈಕ್ಷಣಿಕ ವಾತವರಣದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ನಾನು ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಕಾಲೇಜು ಸಂಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್‌ ಸಿ.ಕುಂದರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿ ರೋಟರಿ ಕ್ಲಬ್‌ನ ೨೦೧೭-೧೮ನೇ ಸಾಲಿನ ಅಧ್ಯಕ್ಷರಾಗಿ ಗಂಗೊಳ್ಳಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಉದ್ಯಮಿ ದುರ್ಗರಾಜ್ ಪೂಜಾರಿ ಆಯ್ಕೆಯಾಗಿದ್ದಾರೆ. ಕೆ.ರಾಮನಾಥ ನಾಯಕ್ (ಚುನಾಯಿತ ಅಧ್ಯಕ್ಷ), ಲಕ್ಷ್ಮೀಕಾಂತ ಮಡಿವಾಳ, ಶಿವಾನಂದ ಪೂಜಾರಿ (ಉಪಾಧ್ಯಕ್ಷರು), ಅಶೋಕ ದೇವಾಡಿಗ (ಕಾರ್ಯದರ್ಶಿ), ದಯಾನಂದ ಗಾಣಿಗ (ಜೊತೆ ಕಾರ್ಯದರ್ಶಿ), ಡಾ.ಕಾಶೀನಾಥ ಪೈ, ವಾಸುದೇವ ಶೇರುಗಾರ್, ಉಮೇಶ ಮೇಸ್ತ, ಎಚ್.ಗಣೇಶ ಕಾಮತ್, ಜನಾರ್ದನ ಪೂಜಾರಿ ಪೆರಾಜೆ (ನಿರ್ದೇಶಕರು), ನಾಗರಾಜ ಶೆಟ್ಟಿ (ಕೋಶಾಧಿಕಾರಿ), ಮನೋಜ್ ಕೆ.ಎಂ. (ಸಾರ್ಜಂಟ್ ಎಟ್ ಆರ್ಮ್ಸ), ನಾರಾಯಣ ನಾಯ್ಕ್ (ಬುಲೆಟಿನ್ ಎಡಿಟರ್), ರಾಘವೇಂದ್ರ ಭಂಡಾರ್‌ಕಾರ್ (ನಿರ್ಗಮಿತ ಅಧ್ಯಕ್ಷ), ಎಚ್.ಗಣೇಶ ಕಾಮತ್, ಡಾ.ಕಾಶೀನಾಥ ಪೈ, ಉಮೇಶ ಮೇಸ್ತ (ಸಲಹಾ ಮಂಡಳಿ ಸದಸ್ಯರು)

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹೆರಂಜಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಹೆರಿಯಣ್ಣ ಆಚಾರ್ಯ ಅವರನ್ನು ಶಾಲೆಯ ಶಿಕ್ಷಕ ವೃಂದ ಹಾಗೂ ಎಸ್‌ಡಿಎಂ ವತಿಯಿಂದ ಇತ್ತಿಚಿಗೆ ಬೀಳ್ಕೊಡಲಾಯಿತು. ಎಸ್‌ಡಿಎಂಸಿ ಅಧ್ಯಕ್ಷೆ ಜಲಜಾಕ್ಷಿ ಗೋಪಾಲ ಗಾಣಿಗ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಅಮಿತಾ ಶೆಟ್ಟಿ, ಸಿಆರ್‌ಪಿ ಶ್ರೀಕಾಂತ್ ಕಾಮತ್, ದಾನಿ ಕೃಷ್ಣ ಪೂಜಾರಿ, ಎಸ್‌ಡಿಎಂಸಿ ಮಾಜಿ ಸದಸ್ಯರುಗಳಾದ ರಘುರಾಮ ಪೂಜಾರಿ, ಮಂಜುನಾಥ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿ ಕವಿತಾ ಜಿ. ಕಾಮತ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ಗೀತಾ ಸ್ವಾಗತಿಸಿ, ಸುಮನ ವಂದಿಸಿದರು. ಶಿಕ್ಷಕಿ ಶೋಭಾ ಕಾರ್ಯಕ್ರಮ ನಿರೂಪಿಸಿದರು. ಹೆರಿಯಣ್ಣ ಆಚಾರ್ಯ ಅವರು ಅಂಪಾರು ಗುಂಡಿಬೆಟ್ಟು, ವಾಲ್ತೂರು, ಗುಜ್ಜಾಡಿ, ಮರವಂತೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಬಳಿಕ ಹೆರಂಜಾಲು ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಚಿತ್ರ ರಂಗದ ಟಿಕೆಟ್ ದರದಲ್ಲಿ ಜಿಎಸ್ಟಿಯಿಂದಾಗಿ ಉಂಟಾಗುವ ಹೆಚ್ಚಳ ಹಾಗೂ ಸಿನೆಮಾ ನಿರ್ಮಾಪಕರು ಸಲ್ಲಿಸಬೇಕಾದ ತೆರಿಗೆ ಸಮೇತ ಸರಿಯಾದ ಮಾಹಿತಿ ಈವರೆಗೆ ಲಭ್ಯವಾಗದೇ ಇರುವುದರಿಂದ ಫಿಲ್ಮ್ಚೇಂ ಬರ್ ಜಿಎಸ್ಟಿ ಬಗ್ಗೆ ಕೈಗೊಳ್ಳುವ ನಿರ್ಣಯಕ್ಕೆ ಬದ್ಧನಾಗಿರುವುದಾಗಿ ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ ಶಿವರಾಜ್ ಕುಮಾರ್ ಹೇಳಿದರು. ಕೋಟೇಶ್ವರದ ಯುವ ಮೆರಿಡಿಯನ್‌ನಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ. ಪತ್ನಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ಆಕೆಗೆ ಬೆಂಬಲಿಸಿದ್ದೆ. ರಾಹುಲ್ ಗಾಂಧಿಯವರು ನಮ್ಮ ಮನೆಗೆ ಆಗಮಿಸಿರುವ ವಿಚಾರವು ರಾಜಕೀಯ ವಲಯದಲ್ಲಿ ದೊಡ್ಡ ಸುದ್ದಿಯಾಗಿರಬಹುದು, ಆದರೆ ನನ್ನ ತಾಯಿಯ ನಿಧನದ ಬಗ್ಗೆ ಸಾಂತ್ವನ ಹೇಳಲು ಅವರು ಆಗಮಿಸಿದ್ದರು ಎಂದರು. ತೆರೆ ಕಾಣಲಿರುವ ಶಿವರಾಜ್ ಕುಮಾರ್ ನಟನೆಯ ಲೀಡರ್ ಚಿತ್ರದ ಬಗ್ಗೆ ಗಮನ ಸೆಳೆದಾಗ ಇದೊಂದು ಕಮರ್ಶಿಯಲ್ ಚಿತ್ರವಾಗಿದ್ದು ಇದರಲ್ಲಿ ದೇಶ ಪ್ರೇಮ ಹಾಗೂ ಕೌಟುಂಬಿಕ ಕಥೆ ಹೊಂದಿದೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಮೂಡುಬಗೆಯಲ್ಲಿ ಬೈಕ್ ಸವಾರರಿಗೆ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದರೇ ಹಿಂಬದಿಯ ಸವಾರ ಗಂಭೀರ ಗಾಯಗೊಂಡಿದ್ದಾರೆ. ಮೃತರನ್ನು ಹಳ್ಳಿಹೊಳೆ ಶಾಡಬೇರು ನಿವಾಸಿ ಶಿವಕುಮಾರ್ ರಾವ್ (28) ಹಾಗೂ ಗಾಯಾಳುವನ್ನು ಕೊಕ್ಕಡದ ನಿವಾಸಿ ರವಿ (35) ಎಂದು ಗುರುತಿಸಲಾಗಿದೆ. ಕುಂದಾಪುರದಿಂದ ಹಳ್ಳಿಹೊಳೆಗೆ ಪಲ್ಸರ್ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಮೂಡುಬಗೆ ರಸ್ತೆಯಲ್ಲಿ ಎದುರಿನಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ಶಿವಕುಮಾರ್ ಸ್ಥಳದಲ್ಲಿಯೇ ಮೃತಪಟ್ಟಿದ್ದರೇ ರವಿ ಅವರು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮಣಿಪಾಲದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಪಘಾತ ನಡೆಸಿದ ಟಿಪ್ಪರ್ ನಿಲ್ಲಿಸದೇ ಪರಾರಿಯಾಗಿದ್ದು ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ.  ಶಾಡಬೇರು ನಿವಾಸಿ ಮಂಜುನಾಥ್ ಅವರ ಒಬ್ಬನೇ ಮಗನಾಗಿದ್ದ ಶಿವಕುಮಾರ್ ಬೆಂಗಳೂರಿನಿಂದ ಕೆಲವು ತಿಂಗಳ ಹಿಂದಷ್ಟೇ ಊರಿಗೆ ಮರಳಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ರವಿ ಶಿವಕುಮಾರ್ ಅವರ ಸಂಬಂಧಿಯಾಗಿದ್ದು ಇಬ್ಬರು ಮಧ್ಯಾಹ್ನ ಕುಂದಾಪುರದಲ್ಲಿ ಕೃಷಿ ಸಲಕರಣೆಗಳನ್ನು…

Read More

ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಪವಿತ್ರತೀರ್ಥ ಎಂದು ಬೊಗಸೆ ತುಂಬಿಕೊಂಡು ಕಣ್ಣಿಗೆ ಒತ್ತಿಕೊಳ್ಳುತ್ತಿದ್ದ ಚಕ್ರಾನದಿ ನೀರು ಅಪವಿತ್ರ! ಕೈಯಲ್ಲಿ ನೀರು ಮುಟ್ಟಲು ಹೇಸಿಗೆ ಆಗುತ್ತದೆ. ಚಕ್ರಾ ನದಿ ಪಾತ್ರ ತ್ಯಾಜ್ಯಗಳ ಗೊಬ್ಬರಗುಂಡಿ. ಸತ್ತ ಪ್ರಾಣಿಗಳ ಕಳೇಬರ, ಜಲ ಮಾಲಿನ್ಯದಿಂದ ಸತ್ತಜಲಚರ, ಮೊಟ್ಟೆಗಳ ಓಡು, ಥರಹೇವಾರಿ ತ್ಯಾಜ್ಯ ತೊಟ್ಟಿ! ಒಂದುಕಾಲದಲ್ಲಿ ವಂಡ್ಸೆ ಬಳಿ ಪವಿತ್ರಚಕ್ರಾ ನದಿಯಲ್ಲಿ ಸ್ನಾನ ಮಾಡಿ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಜಾತ್ರೆಗೆ ಹೋಗುತ್ತಿದ್ದರು. ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಭಕ್ತರು ಚಕ್ರಾ ನದಿಯಲ್ಲಿ ಮಿಂದು, ಬಟ್ಟೆ ಒಣಗಿಸಿ, ಮುಂದೆ ಹೋಗುತ್ತಿದ್ದರಿಂದ ವಂಡ್ಸೆ ಎಂಬ ಹೆಸರು ಬರಲು ಕಾರಣ. ಒಣಸೆ ಸಂಕುಚತಗೊಂಡು ವಂಡ್ಸೆ ಆಗಿದೆ ಎನ್ನೋದು ಸ್ಥಳೀಯರ ನಂಬಿಕೆ. ಇಂತಾ ಪವಿತ್ರತೀರ್ಥದಲ್ಲಿ ಈಗ ಸ್ನಾನ ಮಾಡಿದರೆ ಚರ್ಮರೋಗ ಖಂಡಿತ. ಚಕ್ರಾ ನದಿಗೆ ಇಳಿಯೋದಕ್ಕೂ ಭಯವಾಗುತ್ತದೆ. ಚಕ್ರಾ ನದಿಯ ಒಡಲಲ್ಲಿ ಇಂತಾದ್ದೇ ತ್ಯಾಜ್ಯ ಬೀಳುತ್ತದೆ ಎನ್ನೋದಕ್ಕೆ ಬರೋದಿಲ್ಲ. ಮೊಟ್ಟೆ ಚಿಪ್ಪಿಂದ ಹಿಡಿದು, ಮಳಿ ಓಡಿನತನಕ, ಪ್ಲಾಸ್ಟಿಕ್, ಅಂಗಡಿ ಮುಂಗಟ್ಟು, ಹೋಟೆಲ್ ಸಮುಚ್ಛಯದ ಗೊಬ್ಬರಗುಂಡಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೊಲ್ಲೂರು ದೇವಳಕ್ಕೆ ತೆರಳುತ್ತಿದ್ದ ಕೇರಳದ ಯಾತ್ರಿಕರ ಕಾರನ್ನು ಅಡ್ಡಗಟ್ಟಿ ಪುಡಿಗೈದು ದರೋಡೆಗೆ ಯತ್ನಿಸಿದ ಪ್ರಕರಣದ ಐವರು ಆರೋಪಿಗಳಾದ ವಾಮಂಜೂರು ಮೂಡುಶೆಡ್ಡೆ ನಿವಾಸಿಗಳಾದ ಫೈಝಲ್ (24), ಮಹಮ್ಮದ್ ರಿಜ್ವಾನ್ (28), ಮಹಮ್ಮದ್ ಅಲಿ (25), ಸೈಪುದ್ಧಿನ್ (23) ಹಾಗೂ ಕುಲಶೇಖರ ನಿವಾಸಿ ಹರ್ಷಿತ್ ಶೆಟ್ಟಿ(25)ಗೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಂಟು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, ತಲಾ ರೂ. 40,000 ದಂಡ ವಿಧಿಸಿರುವುದಲ್ಲದೇ ದೂರುದಾರ ಶ್ಯಾಮಕುಮಾರ್ ಅವರಿಗೆ ತಲಾ 3.000ರೂ ಹಣವನ್ನು ಪರಿಹಾರ ರೂಪದಲ್ಲಿ ನೀಡಬೇಕು ಎಂದು ತೀರ್ಪು ನೀಡಿದೆ. 2013ರ ಡಿಸೆಂಬರ್ 15ರಂದು ಕೇರಳದ ಏಷ್ಯಾನೆಟ್ ಸುದ್ಧಿವಾಹಿಯಲ್ಲಿ ಕ್ಯಾಮರಾಮನ್ ಶ್ಯಾಮಕುಮಾರ್ ಹಾಗೂ ಅದೇ ವಾಹಿನಿಯ ಇನ್ನೋರ್ವ ಸಿಬ್ಬಂಧಿ ಹಾಗೂ ಅವರ ಕುಟುಂಬಿಕರು ಸ್ವಿಫ್ಟ್ ಕಾರಿನಲ್ಲಿ ರಾತ್ರಿ ಕೊಲ್ಲೂರಿಗೆ ತೆರಳುತ್ತಿದ್ದ ವೇಳೆ ಕಾರೊಂದರಲ್ಲಿ ಹಿಂಬಾಲಿಸಿ ಬಂದಿದ್ದ ದರೋಡೆಕೋರರು ಇಡೂರು ಕುಂಜ್ಞಾಡಿ ಬಳಿ ಯಾತ್ರಿಕರ ಕಾರನ್ನು ಅಡ್ಡಗಟ್ಟಿ ರಾಡಿನಿಂದ ಕಾರಿನ ಹಿಂಬದಿಯ ಗಾಜು ಪುಡಿಗೈದಿದ್ದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದರೆ ಸಮಾಜದಲ್ಲಿ ನಡೆಯುವ ಕೆಲವೊಂದು ಅಹಿತಕರ ಘಟನೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಉತ್ತಮ ಸಂಬಂಧ ವಾತಾರವರಣ ನಿರ್ಮಾಣವಾದರೆ ಅಪರಾಧ ಚಟುವಟಿಕೆಗಳು ಕಡಿಮೆಯಾಗಲಿದೆ. ಹೀಗಾಗಿ ಸರಕಾರ ಹೊಸ ಬೀಟ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಇದು ಸಹಕಾರಿಯಾಗಲಿದೆ ಎಂದು ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಸುಬ್ಬಣ್ಣ ಅಭಿಪ್ರಾಯಪಟ್ಟರು. ಗಂಗೊಳ್ಳಿಯ ಶ್ರೀ ವೀರೇಶ್ವರ ಮಾಂಗಲ್ಯ ಮಂದಿರದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯ ವತಿಯಿಂದ ಜರುಗಿದ ನಾಗರಿಕರ ಸಭೆಯಲ್ಲಿ ಮಾತನಾಡಿದರು. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಖಾಲಿ ಇರುವ ಸಿಬ್ಬಂದಿಗಳನ್ನು ನೇಮಕ ಮಾಡಬೇಕು. ನೂತನ ಬೀಟ್ ವ್ಯವಸ್ಥೆಯ ಬಗ್ಗೆ ಹಾಗೂ ನಿಯೋಜಿಸಲಾಗಿರುವ ಪೊಲೀಸ್ ಸಿಬ್ಬಂದಿಗಳ ಮಾಹಿತಿ ಫಲಕವನ್ನು ಆಯ್ದ ಸ್ಥಳಗಳಲ್ಲಿ ಅಳವಡಿಸಬೇಕು. ಕೆಲವೊಂದು ಕಡೆಗಳಲ್ಲಿ ಪೊಲೀಸರು ಗುಪ್ತವಾಗಿ ಸಂಚರಿಸುತ್ತಿರಬೇಕು. ಗಂಗೊಳ್ಳಿಯ ಮುಖ್ಯರಸ್ತೆಯಲ್ಲಿ ಸಂಚರಿಸುವ ಅಧಿಕ ಭಾರದ ಮತ್ತು ಅಪಾಯಕಾರಿಯಾಗಿ ಸಂಚರಿಸುತ್ತಿರುವ ಶಿಲೆಕಲ್ಲುಗಳ ಲಾರಿಗಳನ್ನು ನಿಯಂತ್ರಿಸಬೇಕು. ಬಸ್ಸುಗಳಲ್ಲಿ ಅತಿ ಹೆಚ್ಚು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಸೊಳ್ಳೆಗಳಿಂದ ಹರಡುವ ಮಲೇರಿಯಾ ಹಾಗೂ ಡೆಂಗಿ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಮ್ಮ ಮನೆಯ ಪರಿಸರವನ್ನು ಶುಚಿಯಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಮನೆಯ ಸುತ್ತಮುತ್ತ ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಂಡರೆ ಅನೇಕ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಸಹಾಯವಾಗುತ್ತದೆ ಎಂದು ತಾಲೂಕು ಪಂಚಾಯತ್ ಸದಸ್ಯ ಸುರೇಂದ್ರ ಖಾರ್ವಿ ಹೇಳಿದರು. ಅವರು ಉಡುಪಿ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ರಾಷ್ಟ್ರೀಯ ರೋಗವಾಹನ ಶ್ರೀತ ರೋಗಗಳ ನಿಯಂತ್ರಣ ಕಾರ್ಯಕ್ರಮ ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಗಂಗೊಳ್ಳಿ, ಸ್ಪೂರ್ತಿ ಮಹಿಳಾ ಘಟಕ ದೊಡ್ಡಹಿತ್ಲು ಗಂಗೊಳ್ಳಿ ಇವರ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಳ್ಳಲಾದ ಮಲೇರಿಯಾ ನಿಯಂತ್ರಣ ಮಾಸಾಚರಣೆ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರೇಮಾನಂದ ಮಾತನಾಡಿ ಸೊಳ್ಳೆ ನಿಯಂತ್ರಣ ಕ್ರಮಗಳಿಂದ…

Read More