Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿಗೆ ಸಮೀಪದ ಕೊಡೇರಿ ಕಡಲತೀರದಲ್ಲಿ ಅಪರಿಚಿತ ವ್ಯಕ್ತಿಯೋರ್ವರ ದೇಹದ ಭಾಗವೊಂದು ಪತ್ತೆಯಾಗಿದ್ದು ಗುರುತು ಪತ್ತೆಗಾಗಿ ಬೈಂದೂರು ಶವಾಗಾರದಲ್ಲಿರಿಸಲಾಗಿದೆ. ಕೊಡೇರಿಯ ಸಮುದ್ರ ತೀರದಲ್ಲಿ ವ್ಯಕ್ತಿಯ ದೇಹದ ಸೊಂಟದ ಕೆಳಗಿನ ೨ ಫೀಟ್ ಉದ್ದದ ಭಾಗವೊಂದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಬೈಂದೂರು ಪೊಲೀಸರು ಪರಿಶೀಲನೆ ನಡೆಸಿ ಗಂಗೊಳ್ಳಿ ಎಂಎಚ್‌ಐ ಹೆಲ್ಪ್ ಲೈನ್ ಸ್ವಯಂಸೇವಕರಾದ ಇಬ್ರಾಹಿಂ ಹಾಗೂ ಆದಿಲ್ ಅವರ ನೆರವಿನಿಂದ ದೇಹದ ಭಾಗವನ್ನು ಬೈಂದೂರು ಶವಾಗಾರಕ್ಕೆ ರವಾನಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Read More

ಕುಂದಾಪುರ ಕ್ರೀಡೋತ್ಸವ-2016 ಉದ್ಘಾಟನೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕ್ರೀಡಾ ಮನೋಭಾವ ಹೊಂದಿರುವ ವ್ಯಕ್ತಿ ಬದುಕಿನಲ್ಲಿ ಸುಲಭವಾಗಿ ಸೋಲದೇ ಗೆಲುವಿವನ್ನೇ ಅಪೇಕ್ಷಿಸುವರು. ಸೋತಾಗ ಧೃತಿಗೆಡದೇ, ಗೆದ್ದಾಗ ಹಿಗ್ಗದೇ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ಮುನ್ನಡೆಯುವ ಜಾಗೃತಾ ಸ್ಥಿತಿ ಕ್ರೀಡಾಪಟುವಿನಲ್ಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು. ಇಲ್ಲಿನ ಗಾಂಧಿ ಮೈದಾನದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಜರುಗಿದ ಬಂಟರ ಕ್ರೀಡೋತ್ಸವ-2016 ಚಾಲನೆ ನೀಡಿ ಮಾತನಾಡಿದರು. ಬಂಟ ಸಮುದಾಯ ಕೃಷಿ ಪ್ರಧಾನ ವ್ಯವಸ್ಥೆಯಲ್ಲಿ ಬಾಳಿಬದುಕಿದ್ದರೂ ಕಾಲಾಂತರದಲ್ಲಿ ವಿವಿಧ ಉದ್ಯಮ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ತೊಡಗಿಸಿಕೊಂಡಿದೆ. ಆದಾಗ್ಯೂ ಕೃಷಿ ಸಂಸ್ಕೃತಿ ಹಾಗೂ ಹೋರಾಟ ಮನೋಭಾವವನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದ್ದಾರೆ. ವಿಶಾಲವಾದ ಕ್ರೀಡಾ ಮನೋಭಾವ, ಮನೋಧರ್ಮ ಹಾಗೂ ಧರ್ಮವನ್ನು ಮುಂದಿಟ್ಟುಕೊಂಡು, ನಮ್ಮ ಪೂರ್ವಜರು ಹಾಕಿಕೊಟ್ಟ ಮಾರ್ಗದಲ್ಲಿ ಯುವ ಸಮುದಾಯ ಜಾಗೃತಿಯಿಂದ ಹೆಜ್ಜೆಯಿಡಬೇಕಿದೆ ಎಂದರು. ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಸುಕೇಶ್ ಶೆಟ್ಟಿ ಹೊಸಮಠ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಮೃತ ಮಹೋತ್ಸವ ಆಚರಿಸುತ್ತಿರುವ ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ತಮ್ಮ ತಂದೆ ಎಸ್. ರಾಮ ಪೂಜಾರಿ ನೆನಪಿಗೆ ನಿರ್ಮಿಸಿಕೊಟ್ಟ ಧ್ವಜಸ್ತಂಭವನ್ನು ಉದ್ಘಾಟಿಸಿದರು. ಅಮೃತ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಎಸ್. ಜನಾರ್ದನ, ಕಾರ್ಯದರ್ಶಿ ಎಂ. ಅಣ್ಣಪ್ಪ ಬಿಲ್ಲವ, ಕೋಶಾಧಿಕಾರಿ ಅಣ್ಣಪ್ಪ ಖಾರ್ವಿ, ಆರ್ಥಿಕ ಸಮಿತಿ ಅಧ್ಯಕ್ಷ ಎಂ. ನರಸಿಂಹ ಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ, ಮಾಜಿ ಅಧ್ಯಕ್ಷ ಎಂ. ವಿನಾಯಕ ರಾವ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ ಪೂಜಾರಿ, ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ, ಇತರರು ಇದ್ದರು.

Read More

ಯಕ್ಷಗಾನದ ಮೂಲಕ ಆಶಕ್ತರ ವೈದ್ಯಕೀಯ ಚಿಕಿತ್ಸೆಗೆ 2.20ಲಕ್ಷ ಸಹಾಯಧನ ವಿತರಣೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಆಶಕ್ತರು ಹಾಗೂ ಆಸಹಾಯಕರ ವೈದ್ಯಕೀಯ ಚಿಕಿತ್ಸೆಗೆ ಯಕ್ಷಗಾನ ಕಾರ್ಯಕ್ರಮ ಆಯೋಜಿಸುವ ಮೂಲಕ ಎರಡು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ಸಹಾಯಧನವನ್ನು ಹಸ್ತಾಂತರಿಸುವ ಮಾನವೀಯ ಕಾರ್ಯವನ್ನು ತ್ರಾಸಿ-ಹೊಸಪೇಟೆಯ ಮಹಿಷಮರ್ಧಿನಿ ಫ್ರೆಂಡ್ಸ್ ಮಾಡಿದೆ. ಆರ್ಥಿಕ ಅಸಹಾಯಕತೆಯಿಂದ ಬಳಲುತ್ತಿರುವ ಕುಟುಂಬಗಳ ಸಂಕಷ್ಟಕ್ಕೆ ಸ್ಪಂದಿಸುವ ನಿರ್ಧಾರ ಮಾಡಿದ ಮಹಿಷಮರ್ದಿನಿ ಫ್ರೆಂಡ್ಸ್ ಜಾತಿ,ಮತ ಧರ್ಮ ಹೊರತು ಪಡಿಸಿ ಆಯ್ದ ೮ ಮಂದಿಗೆ ವೈದ್ಯಕೀಯ ಸಹಾಯಧನ ನೀಡಿತು. ಏ.13ರಂದು ತ್ರಾಸಿಯಲ್ಲಿ ನಡೆದ ಸಾಲಿಗ್ರಾಮ ಮೇಳದ ರಂಗವೇದಿಕೆಯಲ್ಲಿ ಸಹಾಯಧನವನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ ಮಾತನಾಡಿದ ತಾ.ಪಂ.ಸದಸ್ಯ ರಾಜು ದೇವಾಡಿಗ ಅವರು, ಮೊಗವೀರ ಯುವ ಸಂಘಟನೆ ಇಂದು ಡಾ.ಜಿ.ಶಂಕರ್ ನೇತೃತ್ವದಲ್ಲಿ ರಕ್ತದಾನದ ಮೂಲಕ ಜಿಲ್ಲೆಯಲ್ಲಿ ರಕ್ತದಾನದ ಮಹತ್ವದ ಅರಿವು ಮೂಡಿಸುವ ಕೆಲಸವಾಗಿದೆ. ಮಹಿಷಮರ್ದಿನಿ ಫ್ರೆಂಡ್ಸ್ ಇವತ್ತು ಒಂದು ಜಾತಿಗೆ ಸೀಮಿತವಾಗದೇ ಎಲ್ಲಾ ಧರ್ಮದ ಬಾಂಧವರಿಗೂ ಸಹಾಯಧನ ನೀಡುವ ಮೂಲಕ ಮಾನವೀಯ ಕಾರ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಸಮುದಾಯ ಸಾಂಸ್ಕೃತಿಕ ಸಂಘಟನೆ ಹಾಗೂ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ರಂಗ ರಂಗು ಮಕ್ಕಳ ರಜಾಮೇಳವನ್ನು ಕರ್ನಾಟಕ ರಾಜ್ಯ ಮಕ್ಕಳ ಆಯೋಗದ ಸದಸ್ಯೆ ವನಿತಾ ತೋರ್ವೆ ಉದ್ಘಾಟಿಸಿದರು. ಶಿಬಿರಕ್ಕೆ ಭೇಟಿ ನೀಡಿದ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷೆ ದಾಕ್ಷಾಯಿಣಿ ಬಸವರಾಜ ಮಾತನಾಡಿ ಮಕ್ಕಳು ಸ್ವಭಾವತಃ ಸ್ವತಂತ್ರರು, ಅವರ ಸ್ವಾತಂತ್ಯಕ್ಕೆ ಧಕ್ಕೆ ಬಾರದ ಹಾಗೆ ಬೇಸಿಗೆ ಶಿಬಿರಗಳನ್ನು ವಿನ್ಯಾಸಗೊಳಿಸುವುದು ಸವಾಲಿನ ಕೆಲಸ. ಬಹಳ ವರ್ಷಗಳಿಂದಲೂ ಮಕ್ಕಳ ರಂಗಭೂಮಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಮುದಾಯ ಸಂಘಟನೆ ಮಕ್ಕಳ ಮನೋವಿಕಾಸಕ್ಕೆ ರಂಗಭೂಮಿಯನ್ನು ಬಳಸಿಕೊಳ್ಳುತ್ತಿರುವುದು ಸ್ವಾಗತಾರ್ಹ ಎಚಿದರು. ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಉಡುಪಿ ಜಿಲ್ಲಾ ಉಪನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಿ.ಡಿ.ಪಿ.ಓ ಲಕ್ಷ್ಮಿ ಟಿ ನಾಯ್ಕ ಸ್ವಾಗತಿಸಿದರು. ಸಮುದಾಯ ಕುಂದಾಪುರ ಅಧ್ಯಕ್ಷ ಉದಯ ಗಾಂವಕಾರ, ಬಾಲವಿಕಾಸ ಅಕಾಡೆಮಿ ಸದಸ್ಯ ವಿಶ್ವನಾಥ ಪೂಜಾರಿ ಸಮುದಾಯದ ಕಾರ್ಯದರ್ಶಿ ಸದಾನಂದ ಬೈಂದೂರು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಮನವಮಿ ಅಂಗವಾಗಿ ತಾಲೂಕಿನ ವಿವಿಧ ದೇವಸ್ಥಾನ ಹಾಗೂ ಭಜನಾ ಮಂದಿರಗಳಲ್ಲಿ ವಿಶೇಷ ಪ್ರಜೆ ಪುನಸ್ಕರಗಳು ನಡೆದವು. ಕೋಟೇಶ್ವರ, ಕುಂದಾಪುರ, ಮರವಂತೆ, ನಾವುಂದ, ಉಪ್ಮ್ಪಂದ, ಬೈಂದೂರು, ನಾಯ್ಕನಕಟ್ಟೆ, ಸಿದ್ಧಾಪುರ ಮುಂತಾದೆಡೆಗಳಲ್ಲಿ ರಾಮನಾಮ ಸ್ತುತಿ, ಭಜನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದವು. ಮರವಂತೆ ಮೀನುಗಾರರ ಸೇವಾ ಸಮಿತಿಯ ಆಶ್ರಯದಲ್ಲಿ ಇಲ್ಲಿನ ಶ್ರೀರಾಮ ಮಂದಿರದಲ್ಲಿ ವಾರ್ಷಿಕ ಭಜನಾ ಸಪ್ತಾಹ ಮತ್ತು ಶ್ರೀರಾಮ ನವಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕಳೆದ ಶನಿವಾರ ದೀಪಸ್ಥಾಪನೆ ನಡೆಸಿ, ಶ್ರೀರಾಮ ಭಜನಾ ಸಪ್ತಾಹ ಆರಂಭಿಸಲಾಗಿತ್ತು. ರಾಮನವಮಿ ನಿಮಿತ್ತ ವಿಶೇಷ ಪೂಜೆ, ಹೋಮಹವನದೊಂದಿಗೆ ಅಖಂಡ ಭಜನೆಗೆ ಚಾಲನೆ ನೀಡಲಾಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ರಾಮಮಂದಿರದಿಂದ ಮಹಾರಾಜಸ್ವಾಮಿ ವರಾಹ ದೇವಸ್ಥಾನದ ವರೆಗೆ ಪುರಮೆರವಣಿಗೆ ಹಮ್ಮಿಕೊಳ್ಳಲಾಯಿತು. ಮರುದಿನ ಬೆಳಿಗ್ಗೆ ಮಂಗಲೋತ್ಸವದೊಂದಿಗೆ ಭಜನಾ ಸಪ್ತಾಹ ಕೊನೆಗೊಳ್ಳುವುದು. ಈ ವಾರ್ಷಿಕ ಆಚರಣೆಯ ನಿಮಿತ್ತ ಶ್ರೀರಾಮ ಮಂದಿರವನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಸಮಿತಿಯ ಅಧ್ಯಕ್ಷ ಬಿ. ವೆಂಕಟೇಶ ಖಾರ್ವಿ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಕಾರ್ಕಳ ತಾಲೂಕಿನ ಅಜೆಕಾರಿಗೆ ವರ್ಗವಾಗಿರುವ ಡಾ. ಗಿರೀಶ ಗೌಡ ಅವರನ್ನು ಬುಧವಾರ ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನಿಸಿ, ವಿದಾಯ ಕೋರಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ, ಉಪಾಧ್ಯಕ್ಷ ಗಣೇಶ ಪೂಜಾರಿ, ಸದಸ್ಯ ನಾಗರಾಜ ಪಟಗಾರ್, ಮಾಜಿ ಅಧ್ಯಕ್ಷ ಎಸ್. ಜನಾರ್ದನ, ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಕಾರ್ಯದರ್ಶಿ ಹರಿಶ್ಚಂದ್ರ ಆಚಾರ್, ಗ್ರಾಮ ಕರಣಿಕ ಮಹಾಂತೇಶ ಕೋಣಿನವರ್, ಕರ ಸಂಗ್ರಾಹಕ ಶೇಖರ, ಇತರರು ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮನುಷ್ಯನ ದೇಹಾರೋಗ್ಯಕ್ಕೆ ಔಷಧಗಳಂತೆ ಮಾನಸಿಕ ಆರೋಗ್ಯಕ್ಕೆ ಧರ್ಮ, ಸಾಂಸ್ಕೃತಿಕ ಮನರಂಜನೆಗಳು ಅವಶ್ಯ. ಹಿಂದಿನಿಂದಲೂ ದೇವಾಲಯಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆರಾಧನೆಯ ರೂಪದಲ್ಲಿ ನಡೆಸಲಾಗುತ್ತಿತ್ತು. ಆದ್ದರಿಂದಲೇ ಯಕ್ಷಗಾನದಂತಹ ಕಲೆಗಳು ಉಳಿದು ಬೆಳೆಯಲು ಸಾಧ್ಯವಾಯಿತು-ಎಂದು ಉಡುಪಿ ಜಿಲ್ಲಾ ಕನ್ನಡ-ಸಂಸ್ಕೃತಿ ಇಲಾಖೆ ನಿರ್ದೇಶಕ ದೇವದಾಸ ಪೈ ಹೇಳಿದರು. ಇಲ್ಲಿನ ಪೇಟೆ ಶ್ರೀ ವೆಂಕಟರಮಣ ದೇವಾಲಯ ರಥಬೀದಿಯ ಸುಬ್ರಾಯ ಮಲ್ಯ ವೇದಿಕೆಯಲ್ಲಿ ನೂತನ ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಮಂಡಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಕಾರ್ಯಕ್ರಮಗಳಿಗಾಗಿ ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ೩೩೦ ಕೋಟಿ ರೂ. ಮೀಸಲಿರಿಸಿದೆ. ವಾರ್ಷಿಕ 50 ಲಕ್ಷ ರೂ.ಗಳವರೆಗೆ ಪ್ರತಿ ಜಿಲ್ಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಇಲಾಖೆ ಪ್ರಾಯೋಜನೆ ಒದಗಿಸುತ್ತದೆ. ಪ್ರತಿ ಜಿಲ್ಲೆಯಲ್ಲಿ ಸಂಸ್ಕೃತಿ ಮಂದಿರ ನಿರ್ಮಾಣಕ್ಕೆ 10 ಲಕ್ಷ ರೂ. ಬಯಲು ರಂಗಮಂದಿರಕ್ಕೆ ಒಂದು ಲಕ್ಷ ರೂ. ಪ್ರೋತ್ಸಾಹಧನ ಒದಗಿಸುತ್ತದೆ. ಪೌರಾಣಿಕ ನಾಟಕಗಳಿಗೆ 30 ಸಾವಿರ ರೂ. ಪ್ರೋತ್ಸಾಹಧನ ನೀಡಬಹುದಾಗಿದೆ. ಕಂಬಳ ಮಸ್ತಕಾಭಿಷೇಕ ಮೊದಲಾದ ಕಾರ್ಯಕ್ರಮಗಳಿಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಮನವಮಿ ಅಂಗವಾಗಿ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ದೇವರ ಪ್ರಾರ್ಥನೆ, ಪಂಚಾಮೃತ ಅಭಿಷೇಕ, ಪವಮಾನ ಕಲಶಾಭಿಷೇಕ ಜರುಗಿತು. ಮಧ್ಯಾಹ್ನ ಮಹಾಪೂಜೆ ಹಾಗೂ ಮಹಾಸಮಾರಾಧನೆ ನಡೆಯಿತು. ದೇವಸ್ಥಾನದ ಮೊಕ್ತೇಸರರು, ಜಿಎಸ್‌ಬಿ ಸಮಾಜ ಭಾಂದವರು ಉಪಸ್ಥಿತರಿದ್ದರು. ದೇವತಾ ವಿಧಿ ವಿಧಾನಗಳನ್ನು ವೇ.ಮೂ.ಶ್ರೀನಿವಾಸ ಭಟ್ ಮತ್ತು ವೇ.ಮೂ.ಪ್ರಶಾಂತ ಭಟ್ ನೇರವೇರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜೆಸಿಐ ಉಪ್ಪುಂದ ಹಾಗೂ ಅಂಜಲಿ ಆಸ್ಪತ್ರೆ ಬೈಂದೂರು ಇವರ ಸಹಯೋಗದಲ್ಲಿ ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ತೆಂಕಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಆರೋಗ್ಯ ಮಾಹಿತಿ ಹಾಗೂ ತಪಾಸಣೆ ಶಿಬಿರ ನಡೆಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮ ಜೋಗಿ ಶಿಬಿರವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಅಂಜಲಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಸುಬ್ರಹ್ಮಣ್ಯ ಭಟ್ ಮಾತನಾಡಿ ’ಜಗತ್ತಿನ ಎಲ್ಲಾ ದೇಶಗಳ ಜನರು ಆರೋಗ್ಯವಂತರಾಗಿರಬೇಕೆಂಬ ಉದ್ದೇಶದಿಂದ 1950ರ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪಿತವಾಯಿತು. ಅನಂತರ ಪ್ರತಿವರ್ಷವೂ ಒಂದೊಂದು ಧ್ಯೇಯವಾಕ್ಯದಡಿಯಲ್ಲಿ ವಿಶ್ವ ಆರೋಗ್ಯ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಜನಸಾಮಾನ್ಯರಲ್ಲಿ ಆರೋಗ್ಯ ಕುರಿತು ಸಮರ್ಪಕವಾದ ಮಾಹಿತಿ ಹಾಗೂ ಜಾಗೃತಿಯ ಕೊರತೆಯಿದೆ. ಅದನ್ನು ನೀಡುವಲ್ಲಿ ಸಂಘಸಂಸ್ಥೆಗಳು ಮುಂದಾಗಬೇಕು’ ಎಂದರು. ರೋಗದ ಬಗೆಗೆ ಹೆದರಿಕೆ, ಭಯ ಪಡುವ ಬದಲು ಅದು ಬರದಂತೆ, ಒಬ್ಬರಿಂದ ಇನ್ನೊಬ್ಬರಿಗೆ ಹರಡದಂತೆ ಹೇಗೆ ಮುಂಜಾಗೃತೆ ವಹಿಸಬೇಕೆಂಬ ತಿಳುವಳಿಕೆ ಇರಬೇಕು. ನಮ್ಮ ಪರಿಸರವನ್ನು…

Read More