Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮೀನುಗಾರಿಕೆಗೆ ತೆರಳುತ್ತಿದ್ದ ವ್ಯಕ್ತಿಯೋರ್ವ ಆಯತಪ್ಪಿ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಇಲ್ಲಿನ ಪಡುವರಿ ಗ್ರಾ.ಪಂ ವ್ಯಾಪ್ತಿಯ ಸೋಮೇಶ್ವರ ಕಡಲ ಕಿನಾರೆಯ ಬಳಿ ವರದಿಯಾಗಿದೆ. ಶಾಂತಾರಾಮ ಪೂಜಾರಿ (37) ಮೃತ ದುರ್ದೈವಿ. ಶಿರೂರು ಕರಾವಳಿ ಬೆಲೆಮನೆ ನಿವಾಸಿ ಶಾಂತಾರಾಮ ಪೂಜಾರಿ ಸಂಜೆಯ ವೇಳೆಗೆ ಪಾತಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿ ಮರಳುತ್ತಿದ್ದಾಗ, ದೋಣಿಯಲ್ಲಿದ್ದ ಆಯತಪ್ಪಿ ನೀರಿಗೆ ಬಿದ್ದಿದ್ದರು. ಸಮುದ್ರ ಉಬ್ಬರವಿದ್ದುದರಿಂದ ನೀರಿನ ಸೆಳವಿಗೆ ಸಿಕ್ಕಿದ್ದ ಅವರು ಈಜಿ ದಡದತ್ತ ಸೇರುವ ಪ್ರಯತ್ನವೂ ವಿಫಲವಾಗಿ ಉಸಿರು ಬಿಗಿಹಿಡಿದಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಬೇರೊಂದು ದೋಣಿಯ ಮೂಲಕ ದಡಕ್ಕೆ ತಂದು ಪೊಲೀಸ್ ಜೀಪ್‌ನಲ್ಲಿಯೇ ತುರ್ತಾಗಿ ಬೈಂದೂರು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲಿ ಶಾಂತಾರಾಮ್ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ. ಸ್ಥಳೀಯರು, ಪೊಲೀಸರು ಸಮಯ ಪ್ರಜ್ಞೆ ಮೆರೆದರೂ ಜೀವ ಉಳಿಯಲಿಲ್ಲ: ಸಮುದ್ರ ತೀರದಿಂದ ಅನತಿ ದೂರದಲ್ಲಿ ಶಾಂತಾರಾಮ್ ನೀರಿಗೆ ಬಿದ್ದಿದ್ದರು. ಅವರು ಅಪಾದಲ್ಲಿರುವುದು ಗಮನಕ್ಕೆ ಬರುತ್ತಿದ್ದಂತೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿಗೆ ಸಮೀಪದ ಪ್ರಸಿದ್ಧ ಕೂಸಳ್ಳಿ ಫಾಲ್ಸ್‌ಗೆ ಸಾಗುವ ಮಾರ್ಗದಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಠಿಯಿಂದ ಎಚ್ಚರಿಕೆ ಫಲಕ ಅಳವಡಿಸಲಾಯಿತು. ಉಡುಪಿ ಜಿಲ್ಲಾ ಪೊಲೀಸ್ ಹಾಗೂ 24×7 ಆಪತ್ಬಾಂಧವ ಅಂಬ್ಯುಲೆನ್ಸ್ ಗಂಗೊಳ್ಳಿ ಜಂಟಿಯಾಗಿ ಫಲಕ ಅಳವಡಿಸಿದೆ. ಈ ಸಂದರ್ಭದಲ್ಲಿ ಬೈಂದೂರು ಪೊಲೀಸ್ ಠಾಣಾಧಿಕಾರಿ ಸಂತೋಷ್ ಕಾಯ್ಕಿಣಿ, ಪೇದೆ ಗುರುಪ್ರದಾಸ್, 24×7 ಆಪತ್ಬಾಂದವದ ನಿರ್ವಾಹಕ ಮೊಹಮ್ಮದ್ ಇಬ್ರಾಹಿಂ ಗಂಗೊಳ್ಳಿ ಮೊದಲಾದವರು ಉಪಸ್ಥಿತರಿದ್ದರು. ಕೂಸಳ್ಳಿಯಲ್ಲಿ 2 ದಿನದ ಹಿಂದಷ್ಟೇ ಕಾಲೇಜು ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಈವರೆಗೆ ಮೂವರು ಮೃತಪಟ್ಟಿದ್ದರು. ಇದನ್ನರಿತ ಸಮಾಜ ಸೇವಕ ಇಬ್ರಾಹಿಂ ಫಲಕ ಅಳವಡಿಸಲು ಇಲಾಖೆಯೊಂದಿಗೆ ಮುಂದಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇಹ ಸೌಂದರ್ಯಕ್ಕೆ ಎಲ್ಲರೂ ಹೆಚ್ಚಿನ ಆಧ್ಯತೆ ನೀಡುತ್ತಿದ್ದು, ಮನಸ್ಸಿನ ಆರೋಗ್ಯದ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ. ದೇಹಕ್ಕೆ ಎಕ್ಸ್‌ಸೈಜ್ ಹೇಳಿಕೊಡೋರುಂಟು ಆದರೆ ಮನಸ್ಸಿಗೆ ಹೇಳಿಕೊಡುವವರಿಲ್ಲ. ಮನಸ್ಸಿನ ನಿಯಂತ್ರಣಕ್ಕ ವ್ಯಾಯಾಮ ಹೇಳಿಕೋಡುವ ಒಂದೇ ಒಂದು ಸಂಸ್ಥೆ ಈಶ್ವರೀಯ ವಿಶ್ವವಿದ್ಯಾಲಯ ಎಂದು ಮಂಗಳೂರು ಬ್ರಹ್ಮಕುಮಾರಿ ಬಿ.ಕೆ.ಜಯಶ್ರೀ ಹೇಳಿದರು. ಕುಂದಾಪುರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಆಶ್ರಯದಲ್ಲಿ ಕುಂದಾಪುರ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಯುಗಾದಿ ಪ್ರಯುಕ್ತ ನಡೆದ ಸದ್ಭಾವನಾ ಸಭೆಯಲ್ಲಿ ಮಾತನಾಡಿದರು. ಶರೀರಕ್ಕೆ ಮಾತ್ರ ಆಧ್ಯತೆ ನೀಡಿದರೆ ಸಾಲದು ಮನಸ್ಸಿನ ಆರೋಗ್ಯಕ್ಕೂ ಪ್ರಾಮುಖ್ಯತೆ ನೀಡಬೇಕು. ಮನಸ್ಸು ಸರಿಯಿದ್ದರೆ ಮನೆ ಸರಿಯಿರುತ್ತದೆ. ಮನೆ ಸರಿಯಿದ್ದರೆ ಊರು ಸಮಾಜ ಎಲ್ಲಾ ಸರಿಯಿರುತ್ತದೆ. ದೈಹಿಕ ಪರಿವರ್ತನೆಗಿಂತ ಮನಸ್ಸಿನ ಪರಿವರ್ತನೆ ಮುಖ್ಯ ಎಂದು ಹೇಳಿದರು. ರಾಜಯೋಗಿನಿ ಬ್ರಹ್ಮಕುಮಾರಿ ವಿಶ್ವೇಶ್ವರೀಜಿ ಯುಗಾದಿ ಸದ್ಭಾವನಾ ಸಂದೇಶ ನೀಡಿದರು. ಪತ್ರಕರ್ತ ಟಿ.ಪಿ.ಮಂಜುನಾಥ, ನ್ಯಾಯವಾದಿ ರಾಜ ಕುಮಾರ್ ನೆಂಪು ಇದ್ದರು. ಬ್ರಹ್ಮಕುಮಾರಿ ಪ್ರಭಾ ಸ್ವಾಗತಿ ಗೀತೆ ಹಾಡಿದರು. ಮಂಗಳೂರು ಬ್ರಹ್ಮಕುಮಾರಿ ಬಿ.ಕೆ.ರಾಧಾ ಸ್ವಾಗತಿಸಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಗೋಪಾಡಿ ಗ್ರಾಮ ಪಂಚಾಯತ್‌ನಲ್ಲಿ ಗೋಪಾಡಿ ವಾರ್ಡ್-2ರಲ್ಲಿ ತೆರವಾಗಿದ್ದ ಒಂದು ಸ್ಥಾನಕ್ಕೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಆಡಳಿತ ಮಂಡಳಿ ಮಾಜಿ ಸದಸ್ಯೆ ಕಲ್ಪನಾ ಭಾಸ್ಕರ್ ಅವಿರೋಧ ಆಯ್ಕೆ ಆಗಿದ್ದಾರೆ. ಗೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವೈಲೆಟ್ ಬೆರೆಟ್ಟೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಸ್ವರ್ಧಿಸಿ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಗೋಪಾಡಿಯ ಗ್ರಾ.ಪಂನಲ್ಲಿ ಮಧ್ಯಂತರ ಚುನಾವಣೆ ಘೋಷಣೆ ಆಗಿತ್ತು. ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡಿರುವ ಕಲ್ಪನಾ ಭಾಸ್ಕರ್ ಅವರು ಗ್ರಾ.ಪಂ ಸದಸ್ಯರಾಗಿರುವುದಲ್ಲಿ ಅವರ ಬೆಂಬಲಿಗರು ಹರ್ಷ ವ್ಯಕ್ತಪಡಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಶತಮಾನ ಕಂಡ ಸರಕಾರಿ ಶಾಲೆಯಲ್ಲಿ ಆಧುನಿಕ ತಂತ್ರಜ್ಞಾನವನ್ನೊಳಗೊಂಡ ವಿದ್ಯುನ್ಮಾನ ಕಲಿಕೆ ಯಂತ್ರದಿಂದ ಪಾಠ ಭೋಧಿಸುವ ಕ್ರಮವನ್ನು ಅಳವಡಿಸಿಕೊಂಡಿರುವುದರಿಂದ ವಿದ್ಯಾರ್ಥಿಗಳು ಬಹಳ ಆಸಕ್ತಿಯಿಂದ ಪಾಠವನ್ನು ಆಲಿಸಿಕೊಂಡು ತಮ್ಮ ಜ್ಞಾನ ಕೌಶಲವನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗಿದೆ. ಶಿಕ್ಷಣದ ಆಧುನೀಕರಣದಿಂದ ವಿದ್ಯಾರ್ಥಿಗಳ ಸಮಗ್ರ ವಿಕಾಸ ಸಾಧ್ಯ ಎನ್ನುವ ನಿಟ್ಟಿನಲ್ಲಿ ರೋಟರಿ ೩೧೮೦ ಜಿಲ್ಲೆಯಲ್ಲಿ ಮೊದಲ ಬಾರಿಗೆ ಪುರಸಭಾ ವ್ಯಾಪ್ತಿಯ ಶಾಲೆಗೆ ರೋಟರಿಯಿಂದ ಸ್ಮಾರ್ಟ್ ಕ್ಲಾಸ್ ಇ ಲರ್ನಿಂಗ್ ಕಿಟ್‌ನ್ನು ನೀಡಲಾಗುತ್ತಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಭರತೇಶ್ ಅಧಿರಾಜ್ ಹೇಳಿದರು. ಅವರು ಕುಂದಾಪುರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ(ಗರ್ಲ್ಸ್ ಸ್ಕೂಲ್)ಗೆ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ವತಿಯಿಂದ ಕೊಡಮಾಡಲ್ಪಟ್ಟ ಸ್ಮಾರ್ಟ್ ಕ್ಲಾಸ್ ಇ ಲರ್ನಿಂಗ್ ಕಿಟ್‌ನ್ನು ಉದ್ಘಾಟಿಸಿ ಶುಭಹಾರೈಸಿದರು. ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಅಧ್ಯಕ್ಷ ದಿನಕರ ಪಟೇಲ್ ಮಾತನಾಡಿ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ(ಗರ್ಲ್ಸ್ ಸ್ಕೂಲ್)ಯ ಶತಮಾನೋತ್ಸವ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮೀಪದ ಹೇರೂರು ಗ್ರಾಮದ ಯರುಕೋಣೆ ಗ್ರಾಮೀಣ ಪ್ರದೇಶದ ಸುಜಾತಾ ಪೂಜಾರಿ 2015-16ನೆ ಸಾಲಿನ ರಾಷ್ಟ್ರಪತಿ ರೇಂಜರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಕೆಲ ಸಮಯದ ಹಿಂದೆ ರಾಜಸ್ಥಾನದಲ್ಲಿ ನಡೆದಿದ್ದ ಅವಾರ್ಡ್ ಪರೀಕ್ಷೆಯಲ್ಲಿ ಯಶಸ್ವಿಯಾಗಿರುವ ಅವರು ಸದ್ಯವೇ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯುವ ಪದವಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ಪ್ರಶಸ್ತಿ ಸ್ವೀಕರಿಸುವರು. ಉಡುಪಿ ಅಜ್ಜರಕಾಡಿನ ಜಿ. ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಸಾಲಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿ ಅವರು ಕಾಲೇಜಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರೇಂಜರ್ ದಳ ಸೇರಿದ್ದರು. ಹಿಂದಿನ ಸಾಲಿನಲ್ಲಿ ಅವರಿಗೆ ರಾಜ್ಯ ಪುರಸ್ಕಾರ ಲಭಿಸಿತ್ತು. ಈ ಸಾಲಿನಲ್ಲಿ ಕರ್ನಾಟಕದ 10 ಯುವತಿಯರು ರಾಷ್ಟ್ರಪತಿ ರೇಂಜರ್ ಪ್ರಶಸ್ತಿಗೆ ಅರ್ಹತೆ ಗಳಿಸಿದ್ದಾರೆ. ಅವರಲ್ಲಿ 6 ಜನರು ಉಡುಪಿಯವರಾಗಿದ್ದರೆ, ಸುಜಾತಾ ಕುಂದಾಪುರ ತಾಲೂಕಿಗೆ ಸೇರಿದ ಏಕೈಕ ಅಭ್ಯರ್ಥಿಯಾಗಿದ್ದಾರೆ. ಪ್ರಶಸ್ತಿಗೆ ಸ್ಪರ್ಧಿಸಲು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಅಸೋಸಿಯೇಶನ್ ನೆರವಾಗಿದೆ. ಕುಂದಾಪ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಕುಂದಾಪುರ ಎಜುಕೇಶನ್ ಸೊಸೈಟಿ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ದಿ. ವಿಶಾಲಾಕ್ಷಿ ಬಿ. ಹೆಗ್ಡೆ ಸ್ಮಾರಕ ಬಿಎಂಎಸ್ ಟ್ರೋಫಿ ಅಂತರ್ ಕಾಲೇಜ್ ಕಬ್ಬಡಿ ಪಂದ್ಯಕ್ಕೆ ಕಾಲೇಜಿನ ಕ್ರೀಡಾಂಗಣದಲ್ಲಿ ಜರುಗಿತು. ಪಂದ್ಯಾಟಕ್ಕೆ ಚಾಲನೆ ನೀಡಿದ ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಮಾತನಾಡಿ ಎದುರಾಳಿ ಎಷ್ಟೇ ಬಲಿಷ್ಠನಾದರೂ, ಅವರನ್ನು ಎದುರಿಸುವ ತಾಕತ್ತು ಇರುವುದ ಕ್ರೀಡೆಯಲ್ಲಿ ಮಾತ್ರ. ಅಪ್ಪಟ ದೇಶೀಯ ಕ್ರೀಡೆಯಾದ ಕಬ್ಬಡಿಯಲ್ಲಿ ಎದುರಾಳಿಗೆ ಸೆಡ್ಡು ಹೊಡೆದು, ಹಿಡಿತದಿಂದ ತಪಿಸಿಕೊಳ್ಳುವ, ಎದುರಾಳಿ ಮುಟ್ಟುವ ಚಾಕಚಕ್ಯತೆ ಇದೆ. ಇದು ಬದುಕಿನ ಪಾಠವೂ ಹೌದು. ಇತ್ತೀಚೆಗೆ ಪ್ರೊ. ಕಬ್ಬಡಿ ಮೂಲಕ ಕಬ್ಬಡಿಗೆ ಹೊಸ ಟ್ರಂಡ್ ಆರಂಭವಾಗಿದೆ. ಅಪ್ಪಟ ಗ್ರಾಮೀಣ ಕ್ರೀಡೆ ಮತ್ತೆ ಹೊಸ ಅಲೆ ಮೂಲಕ ಜನರ ಮನಸ್ಸು ಆಕರ್ಷಿಸುತ್ತದೆ ಎಂದು ಹೇಳಿದರು. ಕುಂದಾಪುರ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗ ಕುವೆಂಪು ವಿವಿ ದೈಹಿಕ ಶಿಕ್ಷಣ ವಿಭಾಗ ಸಹಾಯಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವೈಜ್ಞಾನಿಕ ಮನೋಭಾವನೆ, ಹೊಸ ಚಿಂತನೆಗಳನ್ನು ಮಕ್ಕಳ ಮನಸ್ಸಿಗೆ ನಾಟುವಂತೆ ಶಿಕ್ಷಕರು ಪ್ರೇರಣೆ ನೀಡಬೇಕು. ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಕ್ರೀಯಾಶೀಲ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಉಡುಪಿ ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಶತಮಾನೋತ್ಸವ ಸಂಭ್ರಮ ಆಚರಿಸುತ್ತಿರುವ ಶಾಸಕರ ಮಾದರಿ ಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಮತ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣದ ಜತೆಯಲ್ಲಿ ಸಾಂಸ್ಕೃತಿಕ, ಭೌತಿಕ ಹಾಗೂ ಸಂಸ್ಕಾರಯುತ ಪರಿಸರ ನಿರ್ಮಾಣ ಮಾಡಿದಾಗ ಆ ಶಾಲೆಯು ಸರ್ವತೋಮುಖ ಅಭಿವೃದ್ದಿಯೊಂದಿಗೆ ಉತ್ತಮ ಫಲಿತಾಂಶ ನೀಡಲು ಸಾಧ್ಯವಾಗುತ್ತದೆ ಎಂದರು. ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡುತ್ತಿದ್ದು, ಶಾಲೆಗಳು ಇದರ ಪೂರ್ಣಪ್ರಮಾಣದ ಪ್ರಯೋಜನ ಪಡೆಯಬೇಕು ಎಂದ ಪೂಜಾರಿ, ಪೋಷಕರು ಕಾಲಕಾಲಕ್ಕೆ ತಮ್ಮ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಗಮನಿಸುವುದು ತುಂಬಾ ಅವಶ್ಯಕ. ಇದರಿಂದ ಮಕ್ಕಳು ತಪ್ಪುದಾರಿಯಲ್ಲಿ ಸಾಗದಂತೆ ತಡೆಯಲು ಸಹಕಾರಿಯಾಗುತ್ತದೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ರವೀಂದ್ರ ಶ್ಯಾನುಭಾಗ್ ಅಧ್ಯಕ್ಷತೆವಹಿಸಿದ್ದರು. ಉಪಾಧ್ಯಕ್ಷೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಯುಕೆಜಿ ಮಕ್ಕಳ ಪದವಿ ಪ್ರಧಾನ ಸಮಾರಂಭದಲ್ಲಿ ಕುಂದಾಪುರ ನ್ಯಾಶನಲ್ ಇನ್ಶೂರೆನ್ಸ್ ಕಂಪೆನಿಯ ಶಾಖಾಧಿಕಾರಿ ಪ್ರತಿಭಾ ಶೆಟ್ಟಿ ಮಕ್ಕಳಿಗೆ ಪ್ರಮಾಣಪತ್ರ ನೀಡಿದರು. ಬಾಂಡ್ಯ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕಿ ಅನುಪಮಾ ಎಸ್. ಶೆಟ್ಟಿ, ಪ್ರಾಂಶುಪಾಲ ಭಾಸ್ಕರ ಬಾಲಚಂದ್ರುಡು, ಮುಖ್ಯ ಶಿಕ್ಷಕಿ ವಿಶಾಲ ಶೆಟ್ಟಿ, ಪ್ರಥಮ್ ಹಾಗೂ ರೀತು ಶೆಟ್ಟಿ, ಅನಿಸಿಕಾ ಶೆಟ್ಟಿ ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ದೇವರು ಹುಟ್ಟಿದ ನಡೆದಾಡಿದ ವಿಶ್ವದ ಏಕೈಕ ದೇಶ ಭಾರತ. ಇಂತಹ ಶ್ರೇಷ್ಠವಾದ ಪವಿತ್ರವಾದ ನಮ್ಮ ದೇಶ ಗಂಡಾಂತರಕ್ಕೆ ಸಿಲುಕಿದೆ. ದೇಶದಲ್ಲಿ ಹಿಂದುಗಳ ಸಂಖ್ಯೆ ವಿಪರೀತ ಕಡಿಮೆಯಾಗುತ್ತಿದ್ದು, ಹಿಂದು ಸಮಾಜ ನಾಶದ ಕಡೆ ಹೋಗುತ್ತಿದೆ. ಹೀಗಾಗಿ ದೇಶ ಧರ್ಮ ಉಳಿಸುವ ಮಹತ್ಕಾರ್ಯದಲ್ಲಿ ಎಲ್ಲರೂ ತೊಡಗಿಕೊಳ್ಳಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕಾರ್ಯಕಾರಿಣಿ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು. ಅವರು ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದ ವಠಾರದಲ್ಲಿ ಹಿಂದೂ ಜಾಗರಣ ವೇದಿಕೆ ಗಂಗೊಳ್ಳಿ ಇವರ ಆಶ್ರಯದಲ್ಲಿ ಜರಗಿದ ೫೦೫ ಕಲಶಗಳ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ೧೩ ಲಕ್ಷ ಲಿಖಿತ ಶ್ರೀ ರಾಮನಾಮ ತಾರಕ ಜಪಯಜ್ಞದ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿ ಮಾತನಾಡಿದರು. ಹಿಂದುಗಳಿಗೆ ಪವಿತ್ರವಾದ ಭಗವದೀತೆಯ ಒಂದೊಂದು ಶ್ಲೋಕಗಳು ಇತಿಹಾಸ. ಮಹಾಭಾರತ, ರಾಮಾಯಣ ಹಾಗೂ ಭಗವದ್ಗೀತೆಗಳು ನಮ್ಮ ಜೀವನದ ದರ್ಶನ. ನಮ್ಮಲ್ಲಿ ನಮ್ಮ ಮತದ, ಸಂಸ್ಕೃತಿಯ…

Read More