ಕುಂದಾಪುರ: ಉಡುಪಿ ಜಿಲ್ಲಾ ಅಬಕಾರಿ ವಿಶೇಷ ದಳ ಎಸ್ಸೈ ಶಂಕರ್ ಎ.ಪಿ.(58) ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 35 ವರ್ಷದಿಂದ ಅಬಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಗುರುವಾರ ಬೆಳಗ್ಗೆ ತೀವ್ರ ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಸಂಜೆಯ ವೇಳೆಗೆ ಮೃತರಾದರು. ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಜಿರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಮೃತರ ಮನೆಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ, ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ್, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಮತ್ತು ಸಮಾಜದ ಅನೇಕ ಮುಖಂಡರ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಆರೋಗ್ಯವಂತ ವ್ಯಕ್ತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಸ್ವಯಂಪ್ರೇರಿತರವಾಗಿ ರಕ್ತದಾನ ಮಾಡುವುದರಿಂದ ಮೂರು ಜೀವಗಳನ್ನು ಉಳಿಸಿದ ಪುಣ್ಯ ದೊರೆಯುತ್ತದೆ. ಸ್ವಯಂಪ್ರೇರಿತ ರಕ್ತದಾನ ಮಾಡುವುದರಿಂದ ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಕೊರತೆ ಬಾರದಂತೆ ಮಾಡಬಹುದು. ಹೀಗಾಗಿ ರಕ್ತದಾನ ಮಾಡುವವರಿಗೆ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸುವವರನ್ನು ನಿರಂತರವಾಗಿ ಪ್ರೋತ್ಸಾಹಿಸಬೇಕು ಎಂದರು ಇಂಡಿಯನ್ ರೆಡ್ಕ್ರಾಸ್ ಸೊಸೈಟಿಯ ಕುಂದಾಪುರ ಶಾಖೆಯ ಚೇರಮೆನ್ ಎಸ್.ಜಯಕರ ಶೆಟ್ಟಿ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಓಂ ಶ್ರೀ ಮಾತೃ ಮಂಡಳಿ ಬಾವಿಕಟ್ಟೆ ಗಂಗೊಳ್ಳಿ, ಇಂಡಿಯನ್ ರೆಡ್ಕ್ರಾಸ್ ಸೊಸೈಟಿ, ರಕ್ತನಿಧಿ ಕೇಂದ್ರ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಕುಂದಾಪುರ ಸರಕಾರಿ ಆಸ್ಪತ್ರೆಯ ವೈದ್ಯೆ ಡಾ.ಕಲಾಶ್ರೀ ಶಿಬಿರವನ್ನು ಉದ್ಘಾಟಿಸಿದರು. ರಕ್ತನಿಧಿ ಕೇಂದ್ರದ ವೈದ್ಯ ಡಾ.ಮಲ್ಲಿ, ಇಂಡಿಯನ್ ರೆಡ್ಕ್ರಾಸ್ ಸೊಸೈಟಿಯ ಕೋ-ಆರ್ಡಿನೇಟರ್ ಎ.ಮುತ್ತಯ್ಯ ಶೆಟ್ಟಿ, ಶ್ರೀ ಬಸವೇಶ್ವರ ದೇವಸ್ಥಾನದ ಅಧ್ಯಕ್ಷ ಶ್ರೀಧರ ಎನ್., ಮಲ್ಪೆಯ ಮತ್ಸ್ಯೋದ್ಯಮಿ ಜಗದೀಶ…
ಕುಂದಾಪುರ : ಕಾರ್ಮಿಕ ಹಿರಿಯ ಮುಖಂಡ ಸಿಪಿಎಂ ನೇತಾರ ಸಿ.ನಾರಾಯಣ್ (80) ಸ್ವಲ್ಪಕಾಲದ ಅನಾರೋಗ್ಯದಿಂದ ಗುರುವಾರ ಬೆಳಗ್ಗೆ ಕುಂದಾಪುರ ಚರ್ಚ್ ರಸ್ತೆ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಮೂರು ಗಂಡು ಮತ್ತು ಪುತ್ರಿಯನ್ನು ಅಗಲಿದ್ದಾರೆ. ಕುಂದಾಪುರದಲ್ಲಿ ಸಿಪಿಎಂ ಪಕ್ಷ ಸಂಘಟನೆಯಲ್ಲಿ ಪ್ರಮುಖ ಮಾತ್ರ ವಹಿಸಿದ, ಮೃತರು ಕಾರ್ಮಿರ, ಅಸಂಘಟಿತ ಕಾರ್ಮಿಕರ ದ್ವನಿಯಗಿದ್ದರು. ಕಾರ್ಮಿಕ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಬ್ರಹ್ಮರಥೋತ್ಸವ ರಾಮನವಮಿ ದಿನದಂದು ವಿಜೃಂಭಣೆಯಿಂದ ಜರುಗಿತು. ರಥೋತ್ಸವ ಅಂಗವಾಗಿ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ಮಹಾಪೂಜೆ ಇತ್ಯಾದಿ ಧಾರ್ಮಿಕ ವಿಧಿಗಳು ನಡೆದವು. ಕುಂದಾಪುರ ತೇರು ಎಂದೇ ಪ್ರಸಿದ್ಧವಾಗಿರುವ ಜಿಎಸ್ಬಿ ಸಮುದಾಯದ ಪೇಟೆ ಶ್ರೀ ವೆಂಕಟರಮಣ ರಥೋತ್ಸವವನ್ನು ನೋಡಲು ದೇವಸ್ಥಾನದ ಆಡಳಿತ ಮೊಕ್ತೇಸರ ರಾಧಾಕೃಷ್ಣ ಶೆಣೈ, ಜತೆ ಮೊಕ್ತೇಸರರಾದ ಕೋಡಿ ಶ್ರೀನಿವಾಸ ಶೆಣೈ, ಪಿ. ಮಾಳಪ್ಪ ಪೈ ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮಕ್ಕಳ ಶ್ರೇಯೋಭಿವೃದ್ಧಿಗಾಗಿ ರಥಾರೂಡ ಶ್ರೀ ವೆಂಕಟರಮಣ ದೇವರ ರಥವನ್ನು ಸ್ಪರ್ಷಿಸುವ ವಿಶಿಷ್ಟ ಪ್ರಕ್ರಿಯೆ ರಥ ಬಳುವಳಿಯಲ್ಲಿ ಹೆತ್ತವರು ತಮ್ಮ ಮಕ್ಕಳನ್ನು ರಥಕ್ಕೆ ಸ್ಪರ್ಷಿಸಿ ಆಶಿರ್ವಾದ ಪಡೆದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಪ್ಪುಂದ ಶಾಲೆಬಾಗಿಲಿನಲ್ಲಿ ಪ್ರಗತಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲೋಕಾರ್ಪಣೆಗೊಂಡಿತು. ಸಂಸದ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಸೌಹಾರ್ದವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಹೆಚ್ಚಿನ ಸುದ್ದಿಗಳು ಅಪ್ ಡೇಟ್ ಆಗಲಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಅಧಿಕಾರ, ಶಿಕ್ಷಣ, ಆರ್ಥಿಕ ಸಬಲೀಕರಣ, ರಾಜಕೀಯ ಸಮಾನತೆ ಡಾ. ಅಂಬೇಡ್ಕರ್ ಆಶಯವಾಗಿತ್ತು. ರಾಜಕೀಯ ಲಾಭಕ್ಕಾಗಿ ಜಾತಿಗಳ ಒಡೆಯಲಾಗಿದೆ. ಒಡೆದ ಜಾತಿಗಳು ಮತ್ತೆ ಒಂದಾಗಿ ಆರ್ಥಿಕ, ರಾಜಕೀಯ, ಶಿಕ್ಷಣ ಮತ್ತು ಸಮಾನತೆ ಸಾಧಿಸುವ ಮೂಲಕ ಅಂಬೇಡ್ಕರ್ ಆಶಯ ಪೂರೈಸಬೇಕಾಗಿದೆ ಎಂದು ಚಿಕ್ಕಮಗಳೂರು ಬಿಎಸ್ಪಿ ರಾಜ್ಯ ಕಾರ್ಯದರ್ಶಿ ವೆಲಾಯುಧನ್ ಹೇಳಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಸಮಿತಿ ಆಶ್ರಯದಲ್ಲಿ ಕುಂದಾಪುರ ತಾಪಂ. ಕಚೇರಿ ಎದುರು ನಡೆದ ಡಾ.ಅಂಬೇಡ್ಕರ್ ಜನ್ಮ ದಿನಾಚರಣೆ ಹಾಗೂ ಭೀಮಜ್ಯೋತಿ ವಿವಿದೋದ್ಧೇಶ ಸಹಕಾರಿ ಸಂಘ ಉದ್ಘಾಟನೆ ಬಹಿರಂಗ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಿದ್ದರು. ಉಡುಪಿ ಧರ್ಮಗುರು ರೆ.ಫಾ.ವಿಲಿಯಂ ಮಾರ್ಟೀಸ್ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಕಾಪು ವಿದ್ಯಾನಿಕೇತನ ಉಪನ್ಯಾಸಕಿ ಜ್ಯೋತಿ ಗುರು ಪ್ರಸಾದ್ ಭೀಮಜ್ಯೋತಿ ಸಹಕಾರಿ ಸಂಘ ಉದ್ಘಾಟಿಸಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ತಲ್ಲೂರು ಉದಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬಿಎಸ್ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮಾಜದ ಪ್ರತಿಯೊಬ್ಬರನ್ನೂ ಮುಖ್ಯವಾಹಿನಿಗೆ ತಂದು ಸಾಮಾಜಿಕ ನ್ಯಾಯವನ್ನು ಒದಗಿಸಬೇಕೆಂಬ ಡಾ. ಬಿ.ಆರ್. ಅಂಬೇಡ್ಕರ್ ಎಂಬ ಮಾನವತಾವಾದಿಯ ದೂರದೃಷ್ಠಿಯ ಚಿಂತನೆ ಇಂದು ಅದೆಷ್ಟೋ ಹಿಂದುಳಿದವರಿಗೆ ಬೆಳಕು ನೀಡಿದೆ ಎಂದು ಬೈಂದೂರು ಕ್ಷೇತ್ರ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಡಾ| ಬಿ.ಆರ್ ಅಂಬೇಡ್ಕರ್ ಸಂಘ ಹಾಗೂ ಡಾ| ಬಿ.ಆರ್ ಅಂಬೇಡ್ಕರ್ ಮಹಿಳಾ ಸಂಘದ ೨೧ನೇ ವಾರ್ಷಿಕೋತ್ಸವ ಹಾಗೂ ೧೨೫ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಅಂಬೇಡ್ಕರ್ ದೇಶದ ಧೀಮಂತ ನಾಯಕರಾಗಿ ದಲಿತರು, ಹಿಂದುಳಿದ ವರ್ಗವರಿಗೆ ಸಾಮಾಜಿಕ ನ್ಯಾಯವನ್ನು ತಂದುಕೊಡುವ ಕೆಲಸವನ್ನು ಮಾಡಿದ್ದಾರೆ. ಅವರ ಗುಣವನ್ನು ಮೈಗೂಡಿಸಿಕೊಂಡು ಅವರ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಾಗ ಮಾತ್ರ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸಾಕಾರಗೊಳ್ಳಲು ಸಾಧ್ಯ ಎಂದರು. ಯಡ್ತರೆ ಗ್ರಾಪಂ ಅಧ್ಯಕ್ಷ ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ರತ್ತೂಬಾ ಜನತಾ ಹೈಸ್ಕೂಲ್ ಅಧ್ಯಾಪಕ ಮಂಜು ಕಾಳವಾರ, ಎಸ್ಡಿಸಿಸಿ ಬ್ಯಾಂಕಿನ ಶಿವರಾಮ ಪೂಜಾರಿ ಉಪಸ್ಥಿತರಿದ್ದರು. ಗುಜ್ಜಾಡಿ ಶ್ರೀ ಸಂಗಮೇಶ್ವರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಸ್ಪೃಷ್ಯತೆ ದಿನದಲ್ಲೂ ಸಮಾನತೆ ಮಂತ್ರ ಭೋದಿಸಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಮ್ಮಿಧಾನದ ಮೂಲಕ ಸಮಾಜದ ಕಟ್ಟಕಡೆಯ ಜನರಿಗೂ ಸಮಾಜಿಕ ನ್ಯಾಯ ನೀಡಿದರು. ಸಮ್ಮಿದಾ ದೇಶಕ್ಕೆ ನೀಡಿ ಮಾರ್ಗದರ್ಶನ ನೀಡಿದರು ….ಹೀಗೆಂದವರು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ. ಕುಂದಾಪುರ ತಾಲೂಕ್ ಪಂಚಾಯತ್, ಕಂದಾಯ ಇಲಾಖೆ, ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಕುಂದಾಪುರ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಅಂಬೇಡ್ಕರ್ ಜನ್ಮ ದಿನಾಚರಣೆಯಲ್ಲಿ ವಿವಿಧ ಸೌಲತ್ತು ವಿತರಿಸಿ ಮಾತನಾಡುತ್ತಿದ್ದರು. ಪ್ರಸಕ್ತ ಕಾಲಘಟ್ಟದಲ್ಲಿ ಹಿಂದುಳಿದವರು, ದಲಿತರಿಗೆ ವೇದಿಕೆ ಹಾಕಿಕೊಟ್ಟ ಅಂಬೇಡ್ಕರ್ ಮೂಲ ಉದ್ದೇಶ ಹಿಂದುಳಿದವರೂ, ಸಮಾಜದ ಮುಖ್ಯವಾಹಿನಿ ಜೊತೆ ಬೆರೆಯುವ ಜೊತೆ ಸಾಮಾಜಿಕ, ಆರ್ಥಿಕ, ರಾಜಕೀಯ ಸಮಾನತೆ ಆಗಿದೆ. ಅವರ ಮಾರ್ಗದಲ್ಲಿ ನಾವು ನಡೆಯುವ ಜೊತೆ ಅವರ ಆದರ್ಶ ಪಾಲಿಸುವುದೇ ನಾವು ಅವರಿಗೆ ಕೊಡುವ ನಿಜವಾದ ಗೌರವ ಎಂದು ಹೇಳಿದರು. ಕುಂದಾಪುರ ಉಪವಿಭಾಗಾಧಿಕಾರಿ ಅಶ್ವಥಿ ಎಸ್. ಕಾರ್ಯಕ್ರಮ ಉದ್ಘಾಟಿಸಿದರು. ಕುಂದಾಪುರ ಪುರಸಭೆ ಅಧ್ಯಕ್ಷೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆರಂಭವಾದ ಮತ್ತು ಬಳಿಕದ ಕೆಲವು ವರ್ಷಗಳ ದಾಖಲೆಗಳು ನಶಿಸಿಹೋದ ಕಾರಣ ಶಾಲೆಯ ಕಾಲಾವಧಿಯ ನಿಖರ ಮಾಹಿತಿ ಇಲ್ಲದಿದ್ದರೂ, ಅದು ಎಂಬತ್ತನ್ನು ಸಮೀಪಿಸಿದೆ ಎನ್ನುವುದು ಊರ ಹಿರಿಯರ ಅನುಭವದ ನುಡಿ. ಎಂಬತ್ತು ವರ್ಷ ಎನ್ನುವುದು ಸುದೀರ್ಘ ಎನ್ನಬಹುದಾದ ಕಾಲಮಾನ. ಕಿರಿಯ ಪ್ರಾಥಮಿಕ ಶಾಲೆಯಾಗಿ ಆರಂಭವಾದ ಅದು ಮುಂದೆ ಹಿರಿಯ ಪ್ರಾಥಮಿಕ ಶಾಲೆಯಾಯಿತು. ಆಂಗ್ಲ ಮಾಧ್ಯಮದ ಔನ್ನತ್ಯದ ಭ್ರಮೆಗೆ ಒಳಗಾದ ಈಚಿನ ತಲೆಮಾರನ್ನು ಬಿಟ್ಟರೆ ಊರಿನ ಉಳಿದೆಲ್ಲ ಅಕ್ಷರಸ್ಥರು, ಶಿಕ್ಷಿತರು, ಸಾಧಕರು ಇಲ್ಲೇ ಆರಂಭ ಮಾಡಿದವರು. ಅವರಲ್ಲಿ ಹಲವರು ಆಡಳಿತಗಾರರು, ಬ್ಯಾಂಕರುಗಳು, ಶಿಕ್ಷಕರು, ವಿಜ್ಞಾನಿಗಳು, ಉದ್ಯಮಿಗಳು, ಕಲಾವಿದರಾಗಿ ಮೂಡಿ ಬಂದಿದ್ದಾರೆ. ಆ ಪರಂಪರೆಯನ್ನು ಅದು ಈಗಲೂ ಉಳಿಸಿಕೊಂಡಿದೆ. ಶಾಲೆಯ ಅಮೃತ ಮಹೋತ್ಸವಕ್ಕೆ ಎರಡು ವರ್ಷಗಳ ಹಿಂದೆ ಚಾಲನೆ ನೀಡಲಾಗಿತ್ತು. ಈ ಕಾಲಘಟ್ಟವನ್ನು ಸ್ಮರಣೀಯವಾಗಿಸಬೇಕು; ಉತ್ಸವದ ಸಂಭ್ರಮದ ನಡುವೆ ಶಾಲೆಗೆ ಶಾಶ್ವತ ಆಸ್ತಿ ಸೃಜಿಸಿಬೇಕು ಎನ್ನುವುದು ಉತ್ಸವಾಚರಣೆಗೆ ರೂಪಿಸಲ್ಪಟ್ಟ ಪ್ರಾತಿನಿಧಿಕ ಸಮಿತಿಯ…
ಸಕಲ ಸೌಲಭ್ಯಗಳ ನೂತನ ಸೌಹಾರ್ದದ ಉದ್ಘಾಟನೆಗೆ ವೀರಪ್ಪ ಮೊಯ್ಲಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮಾಜದಲ್ಲಿ ಆರ್ಥಿಕ ಸಂಕಷ್ಟ ಎದುರಿಸುವವರಿಗೆ ನೆರವಾಗುವ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸ್ಕಾಲರ್ಶಿಪ್ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸುವ ಹಾಗೂ ಸಮಾಜದ ಏಳಿಗೆಯಲ್ಲಿ ಸಹಭಾಗಿಗಳಾಗುವ ನಿಟ್ಟಿನಲ್ಲಿ ಸಹಕಾರಿ ತತ್ವದಡಿಯಲ್ಲಿ ನೂತನ ಸೌಹಾರ್ದ ಸಹಕಾರಿಯನ್ನು ಆರಂಭಿಸಲು ನಿರ್ಧರಿಸಿದ್ದು ‘ಪ್ರಗತಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನಿ’ ಇದರ ಉದ್ಘಾಟನಾ ಸಮಾರಂಭ ಎ.15ರ ಶುಕ್ರವಾರ ಬೆಳಿಗ್ಗೆ ನಡೆಯಲಿದೆ ಎಂದು ಸೌಹಾರ್ದದ ಉಪಾಧ್ಯಕ್ಷ ಸತೀಶ್ ಎಂ. ತಿಳಿಸಿದ್ದಾರೆ. ಅವರು ಬೈಂದೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಉಪ್ಪುಂದ ಶಾಲೆಬಾಗಿಲು ನವಮಿ ಕಾಂಪ್ಲೆಕ್ಸ್ ಮೊದಲ ಮಹಡಿಯಲ್ಲಿ ನೂತನ ಕಟ್ಟಡದಲ್ಲಿ ಸಕಲ ಸೌಲಭ್ಯದೊಂದಿಗೆ ಆರಂಭಗೊಳ್ಳಲಿರುವ ಪ್ರಗತಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ನಿ. ಉದ್ಘಾಟನೆಯನ್ನು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ನೆರವೇರಿಸಲಿದ್ದಾರೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಶಾಸಕ ಪ್ರಮೋದ್…
