Author: ನ್ಯೂಸ್ ಬ್ಯೂರೋ

ಘಟನಾ ಸ್ಥಳಕ್ಕೆ ಎಸ್ಪಿ ಅಣ್ಣಾಮಲೈ, ಶಾಸಕ ಗೋಪಾಲ ಪೂಜಾರಿ ಭೇಟಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ನಾವುಂದ ಗ್ರಾಮದ ಪಡುವಾಯಿನ ಮನೆ ಎಂಬಲ್ಲಿ ಒಬ್ಬಂಟಿಯಾಗಿ ನೆಲೆಸಿದ್ದ ವ್ಯಕ್ತಿಯೋರ್ವರನ್ನು ಮಾರಕಾಯುಧಗಳಿಂದ ಹೊಡೆದು ಕೊಲೆಗೈದ ಘಟನೆ ವರದಿಯಾಗಿದ್ದು, ಮೃತರನ್ನು ಪಡುವಾಯಿನ ಮನೆ ನಿವಾಸಿ ಮಾಧವ ಪೂಜಾರಿ ಯಾನೆ ಮಾಸ್ತಿ ಪೂಜಾರಿ (೬೨) ಎಂದು ಗುರುತಿಸಲಾಗಿದೆ. ಘಟನೆಯ ವಿವರ: ನಾವುಂದದ ಪಡುವಾಯಿನ ಮನೆ ಎಂಬಲ್ಲಿ ಕಳೆದ ಮೂರು ವರ್ಷಗಳಿಂದ ನೆಲೆಸಿದ್ದ ಮಾಧವ ಪೂಜಾರಿ ಅವರು ಮಗಳೊಂದಿಗೆ ಮುಂಬೈ ತೆರಳುವ ಆಕೆಯನ್ನು ಸಲುವಾಗಿ ನಾವುಂದದ ಮನೆಗೆ ಬರಲು ತಿಳಿಸಿದ್ದರು. ಶನಿವಾರ ಬೆಳಿಗ್ಗೆ ಸುಮಾರು ೫:೩೦ರ ಹೊತ್ತಿಗೆ ಮೈಸೂರಿನಿಂದ ಮಗಳು, ಅಳಿಯ ಹಾಗೂ ಮೊಮ್ಮೊಗ ಆಗಮಿಸಿದಾಗ ಮನೆಯ ಬೀಗ ಹಾಕಲಾಗಿತ್ತು. ಮಗಳು ತಂದೆಯನ್ನು ಕರೆದಾಗಲೂ ಉತ್ತರವಿಲ್ಲದ್ದರಿಂದ ಮುಂಬೈಯಲ್ಲಿ ನೆಲೆಸಿರುವ ತಾಯಿಗೆ ಪೋನಾಯಿಸಿ ವಿಚಾರಿಸಿದ್ದಾರೆ. ಅವರು ವಾಕಿಂಗ್‌ಗೆ ತೆರಳಿರಬಹುದೆಂಬ ತಾಯಿ ಹೇಳಿದ್ದರಿಂದ ಸ್ವಲ್ಪ ಹೊತ್ತು ಕಾದು ಬಳಿಕ ಅಕ್ಕಪಕ್ಕದ ಮನೆಯವರಲ್ಲೂ ವಿಚಾರಿಸಿದ್ದಾರೆ. ಎಷ್ಟು ಹೊತ್ತಾದರೂ ಹಿಂತಿರುಗದ್ದನ್ನು ನೋಡಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಶ್ರೀ ಮೂಕಾಂಬಿಕಾ ದೇವಳದಲ್ಲಿರುವವರೇ ಚಿನ್ನಾಭರಣ ಕಳವು ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿ, ದೇವಳಕ್ಕಷ್ಟೇ ಅಲ್ಲದೇ ಇಡೀ ಊರಿಗೆ ಕಳಂಕ ತಂದಿಟ್ಟಿದ್ದಾರೆ. ಈ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿ ಮಾನ ಹರಾಜಾಗುತ್ತಿದ್ದರೂ, ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ಧೋರಣೆ ಹೊಂದಿ ತಪ್ಪಿತಸರಿಗೆ ರಕ್ಷಣೆ ನೀಡುತ್ತಿರುವುದು ವಿಷಾದನೀಯ. ಇನ್ನಾದರೂ ದೇವಳದ ಆಡಳಿತ ವ್ಯವಸ್ಥೆಯಲ್ಲಿನ ಲೋಪಗಳನ್ನು ಬಗೆಹರಿಸದಿದ್ದರೇ ಗ್ರಾಮಸ್ಥರು ಉಗ್ರ ಪ್ರತಿಭಟನೆಗೂ ಸಿದ್ದ. ಇದು ಕೊಲ್ಲೂರು ಸ.ಹಿ.ಪ್ರಾ. ಶಾಲೆಯ ಸಭಾಗಂಣನಲ್ಲಿ ನಡೆದ ಎರಡನೇ ಸುತ್ತಿನ ಗ್ರಾಮಸಭೆಯ ಕೇಳಿಬಂದ ಒಕ್ಕೊರಲ ಆಗ್ರಹ. ಗ್ರಾಮಸ್ಥ ಹರೀಶ್ ತೋಳಾರ್ ಮಾತನಾಡಿ ಕಳ್ಳತನದ ಆರೋಪದ ಮೇಲೆ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಆರೋಪಿಗಳು ಮತ್ತೆ ದೇವಸ್ಥಾನದಲ್ಲಿಯೇ ತಿರುಗಾಡುತ್ತಿದ್ದಾರೆ. ಅಪರಾಧ ಎಸಗಿದವರೇ ಇಷ್ಟು ರಾಜಾರೋಷವಾಗಿರುವುದು ತಿರುಗಾಡುತ್ತಿರುವುದು, ಇತರರಿಗೂ ತಪ್ಪು ಮಾಡಿದರೆ ಏನೂ ಆಗದೆಂಬ ಭಾವನೆ ಮೂಡಿಸುತ್ತಿದೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಾಧಾರಗಳನ್ನು ನಾಶಪಡಿಸದೇ ಇರಲಾರರು. ತಪ್ಪಿತಸ್ಥರನ್ನು ಕೂಡಲೇ ಕೆಲಸದಿಂದ ವಜಾಗೊಳಿಸಿ ಭಕ್ತರ ಭಾವನೆಗಳಿಗೂ ಬೆಲೆ ಕೊಡಬೇಕಾಗಿದೆ ಎಂದರು. ಕುಂದಾಪ್ರ ಡಾಟ್…

Read More

ಕುಂದಾಪುರ: ಇಲ್ಲಿನ ಬಿ.ಸಿ ರಸ್ತೆಯ ಕಾರಂತಬೆಟ್ಟು ನಿವಾಸಿ ವಿಜಯ್ ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ. ಎಂದಿನಂತೆ ಊಟ ಮಾಡಿ ಮಲಗಿದ್ದ ವಿಜಯ್ ಬೆಳಿಗ್ಗೆ ಮನೆಯಲ್ಲಿಲ್ಲದಿರುವುದನ್ನು ನೋಡಿ ಹುಡುಕಾಟ ನಡೆಸಿದಾಗ ಮನೆಯ ಹಿತ್ತಲಿನ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಘೋಷಣೆಯಾಗಿದ್ದ ಮೀಸಲಾತಿ ಮೊದಲು ಬಿಜೆಪಿಗೆ ಪರವಾಗಿಯೇ ಇದ್ದರೂ ಎರಡನೇ ಭಾರಿ ಅದು ಬದಲಾಗಿದ್ದರಿಂದ, ಬಹುಮತವಿರುವ ಬಿಜೆಪಿ ಪಕ್ಷಕ್ಕೆ ಈ ಭಾರಿಯೂ ಅಧ್ಯಕ್ಷ ಪಟ್ಟ ತಪ್ಪಿಹೋಗಿದೆ. ಮೊದಲ ಅವಧಿಯಲ್ಲಿ ಬಹುಮತವಿರುವ ಬಿಜೆಪಿ ಪಕ್ಷದಲ್ಲಿ ಅಧ್ಯಕ್ಷಗಾದಿ ಏರಲು ಎಸ್ಸಿ ಬಿಸಿಎ ಮಹಿಳೆ ಇಲ್ಲದಿದ್ದ ಕಾರಣ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದ ಸಿಪಿಎಂ ಪಕ್ಷದ ಕಲಾವತಿ ಯು.ಎಸ್. ಅವರಿಗೆ ಅಧ್ಯಕ್ಷ ಸ್ಥಾನ ನಿರಾಯಾಸವಾಗಿ ದಕ್ಕಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎ ಬಂದಿದ್ದರಿಂದ ಬಿಜೆಪಿ ನಾಗರಾಜ್ ಕಾಮಧೇನು ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಕುಂದಾಪ್ರ ಡಾಟ್ ಕಾಂ ವರದಿ. ಎರಡನೇ ಅವಧಿಗೆ ಸಾಮಾನ್ಯ ಮೀಸಲು ಘೋಷಣೆಯಾಗಿ ಬಿಜೆಪಿ ಸದಸ್ಯರಿಗೆ ಅಧ್ಯಕ್ಷರಾಗುವ ಅವಕಾಶವಿತ್ತಾದರೂ, ದಿಢೀರ್ ಬದಲಾದ ಮೀಸಲಾತಿಯಿಂದ, ಬಿಸಿಎ ಮಹಿಳೆಗೆ ಅಧ್ಯಕ್ಷ ಸ್ಥಾನ ಒಲಿದಿದ್ದು, ಆ ಕೆಟಗೆರಿಯ ಸದಸ್ಯರನ್ನು ಹೊಂದಿರದ ಬಿಜೆಪಿಗೆ ಮತ್ತೊಮ್ಮೆ ನಿರಾಸೆ ಮೂಡಿದೆ. ಕಾಂಗ್ರೆಸ್ ತಮ್ಮ ಸದಸ್ಯರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮೀಸಲು ಬದಲಿಸಿತು ಎಂದು ಬಿಜೆಪಿ…

Read More

ಕುಂದಾಪ್ರ ಡಾಟ್ ಕಾಂ: ಚುನಾವಣೆಯಿಂದ ಚುನಾವಣೆಗೆ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಈ ಸನ್ನಿವೇಶದಲ್ಲಿ ಕಾರ್ಯಕರ್ತರುಗಳು ಕೂಡಾ ಚಿಂತಿಸಬೇಕಾದ ಅವಶ್ಯಕತೆ ಇದೆ. ಈ ಬಾರಿಯ ಚುನಾವಣೆಯಲ್ಲಿ ಎಲ್ಲರ ಸಾಂಘಿಕ ಪರಿಶ್ರಮದಿಂದ ಜಯ ಲಭಿಸಿದ್ದು, ಮುಂದಿನ ದಿನಗಳಲ್ಲಿ ಪಕ್ಷವನ್ನು ಈ ಭಾಗದಲ್ಲಿ ಇನ್ನಷ್ಟು ಬಲಿಷ್ಠಗೊಳಿಸುವಲ್ಲಿ ಮುತುವರ್ಜಿ ವಹಿಸಿಕೊಂಡು ಮುಂದಿನ ವಿಧಾನ ಸಭಾ ಚುನಾವಣೆಗೆ ಸಿದ್ಧರಾಗಬೇಕಾಗಿದೆ ಎಂದರು. ಅವರು ವಂಡ್ಸೆಯ ವಿ.ಕೆ.ಶಿವರಾಮ ಶೆಟ್ಟಿ ಅವರ ಕಟ್ಟಡದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರ ವಂಡ್ಸೆ ಕಚೇರಿ ಉದ್ಘಾಟನೆ ಕಾರ್ಯಕ್ರಮದ ವಂಡ್ಸೆ ಭಾಗದ ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಪ್ರತೀ ಶುಕ್ರವಾರ ಬೆಳಿಗ್ಗೆ10 ಗಂಟೆಯಿಂದ 12 ಗಂಟೆಯ ತನಕ ವಂಡ್ಸೆಯ ಕಛೇರಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುತ್ತೇನೆ. ಈ ಭಾಗದಲ್ಲಿ ಜಿ.ಪಂ.ನಿಂದ ಆಗಬೇಕಾದ ಕೆಲಸಗಳಿಗೆ ಸ್ಪಂದಿಸುತ್ತೇನೆ. ಜನರು ನಮ್ಮನ್ನು ಹುಡುಕಿಕೊಂಡು ಬರಬಾರದು, ಜನರಿದ್ದಲ್ಲಿಗೆ ನಾವು ಬರುತ್ತೇವೆ ಎಂದರು. ಜಿ.ಪಂ.ಸದಸ್ಯರ ವಂಡ್ಸೆ ಕಛೇರಿಯನ್ನು ಉದ್ಘಾಟಿಸಿ, ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ಎಂ.ಸುಕುಮಾರ್ ಶೆಟ್ಟಿ ಮಾತನಾಡಿ, ವಂಡ್ಸೆ ವಿಶಿಷ್ಠವಾದ ಜಿ.ಪಂ.ಕ್ಷೇತ್ರ.…

Read More

ಕುಂದಾಪುರ: ನಿವೃತ್ತ ಮುಖ್ಯ ಶಿಕ್ಷಕ ಕೊಗ್ಗ ಗಾಣಿಗ ಇವರಿಗೆ ಕರ್ನಾಟಕ ರಾಜ್ಯದ ಹಿರಿಯ ಸ್ಕೌಟರ್ ಪ್ರಶಸ್ತಿ ಲಭಿಸಿದ್ದು ರಾಜಭವನದಲ್ಲಿ ರಾಜ್ಯಪಾಲರಾದ ವಜುಬಾಯಿ ರೂಢಬಾಯಿ ವಾಲಾ ಅವರು ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಸಚಿವರಾದ ಬಿ.ಟಿ.ಜಯಚಂದ್ರ, ರಾಜ್ಯದ ಮುಖ್ಯ ಸ್ಕೌಟ್ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯಾ ಉಪಸ್ಥಿತರಿದ್ದರು. ಕೊಗ್ಗ ಗಾಣಿಗ ಅವರು 1979ರ ಅಕ್ಟೋಬರ್‌ನಲ್ಲಿ ಸ್ಕೌಟ್‌ನ ಪ್ರಾಥಮಿಕ ತರಬೇತಿ ಪಡೆದು, ನಿರಂತರವಾಗಿ ಪ್ರಗತಿಪರ ತರಬೇತಿ ಪಡೆದು (ಸ್ಕೌಟ್ ಉನ್ನತ ತರಬೇತಿ) ನಾಯಕ ತರಬೇತಿದಾರರಾಗಿದ್ದಾರೆ. ಇವರು ರಾಷ್ಟ್ರಮಟ್ಟದ ತರಬೇತಿದಾರರಾಗಿದ್ದು, ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತರಬೇತಿ ಶಿಬಿರಗಳಲ್ಲಿ ತರಬೇತಿ ನೀಡಿದ್ದಾರೆ. ಪ್ರಸ್ತುತ ಉಡುಪಿ ಜಿಲ್ಲಾ ಸ್ಕೌಟ್‌ನ ತರಬೇತಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Read More

ಕುಂದಾಪುರ: ಚಿಕ್ಕ ಬಳ್ಳಾಪುರದ ಸಿ.ವಿ.ವಿ ಕ್ರೀಡಾಂಗಣದಲ್ಲಿ 17 ವರ್ಷ ಒಳಗಿನ ಬಾಲಕಿಯರ ರಾಜ್ಯ ಮಟ್ಟದ ವಿಶೇಷ ಮಕ್ಕಳ ಕ್ರೀಡಾ ಕೂಟದಲ್ಲಿ ಬೈಂದೂರು ವಲಯದ ಹೆಮ್ಮಾಡಿ ಜನತಾ ಪ್ರೌಢ ಶಾಲಾ 10 ನೇ ತರಗತಿ ವಿದ್ಯಾರ್ಥಿನಿ ರಮ್ಯಾಗುಂಡು ಎಸೆತ ಪ್ರಥಮ, ಜಾವಲಿನ್ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ, ಈಕೆ ತಂಡ ಪ್ರಶಸ್ತಿ ಮತ್ತು ಸಮಗ್ರ ಪ್ರಶಸ್ತಿಗೆ ಬಾಜನರಾಗಿ, ರಾಜ್ಯ ಮಟ್ಟದಲ್ಲಿ ಒಟ್ಟು 3 ಚಿನ್ನ ಪಡೆದು ಶಾಲೆಯ ಘನತೆ, ಗೌರವ ಹೆಚ್ಚಿಸಿದಕ್ಕೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ, ಬೈಂದೂರು ಕ್ಷೇತ್ರದ ಶಾಸಕ ಶ್ರೀ ಕೆ. ಗೋಪಾಲ ಪೂಜಾರಿ ಈಕೆಯ ಸಾಧನೆಗೆ ಅಭಿನಂದಿಸಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯ ಬಿ.ಮೋಹನದಾಸ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕ ದೇವೇಂದ್ರ ನಾಯ್ಕ್, ತಂಡದ ವ್ಯವಸ್ಥಾಪಕ ಜಗದೀಶ ಶೆಟ್ಟಿ ಇದ್ದರು.

Read More

ಬೈಂದೂರು: ಕೇಂದ್ರ ಸರ್ಕಾರದ ಚಿನ್ನದ ಮೇಲೆ ವಿಧಿಸಿದ ಅಬಕಾರಿ ಸುಂಕ ಮತ್ತು ಖರೀದಿಯ ಬಗ್ಗೆ ಪಾನ್‌ಕಾರ್ಡ್ ಕಡ್ಡಾಯ ಕಾನೂನನ್ನು ಖಂಡಿಸಿ ಬೈಂದೂರು ವಲಯ ಚಿನ್ನ ಹಾಗೂ ಬೆಳ್ಳಿ ವ್ಯಾಪರಸ್ಥರು ಮತ್ತು ಕೆಲಸಗಾರರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಕೇಂದ್ರ ಸರ್ಕಾರ ವಿಧಿಸಿದ ಅಬಕಾರಿ ಶುಲ್ಕ ಮತ್ತು ಪಾನ್‌ಕಾರ್ಡ್ ಇಲ್ಲದೇ ರೂ.2 ಲಕ್ಷಕ್ಕಿಂತ ಹೆಚ್ಚಿನ ಚಿನ್ನ ಖರೀದಿ ಮಾಡಲು ಸಾಧ್ಯವಿಲ್ಲ ಎಂಬ ಕಾನೂನಿಂದ ಕಡು ಬಡವರಿಗೆ, ಮಧ್ಯಮ ವರ್ಗ ಕುಟುಂಬದವರಿಗೆ ಹಾಗೂ ಬಹಳ ವರ್ಷದಿಂದ ಈ ಕಸುಬನ್ನು ನಂಬಿ ವ್ಯಾಪಾರ ಮಾಡುತ್ತಿರುವ ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೂ ಅನಾನುಕೂಲವಾಗುತ್ತದೆ. ಹೀಗಾಗಿ ಸರ್ಕಾರ ಈ ಕಾನೂನನ್ನು ಹಿಂತೆಗೆದುಕೊಳ್ಳಬೇಕು, ಎಂದು ಪ್ರತಿಭಟನಾಕಾರರು ಆಗ್ರಹಿಸಿ ಇಲ್ಲಿನ ವಿಶೇಷ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸುರೇಂದ್ರ ಶೇಟ್ ಬೈಂದೂರು, ಮೋಹನ್ ಶೇಟ್ ಶಿರೂರು, ವೆಂಕಟೇಶ ಶೇಟ್ ಉಪ್ಪುಂದ, ಅನಿಲ್ ಶೇಟ್ ಉಪ್ಪುಂದ ಪ್ರತಿಭಟನಾ ನೇತೃತ್ವ ವಹಿಸಿದ್ದರು.

Read More

ಗಂಗೊಳ್ಳಿ: ಪುರಾಣ ಪ್ರಸಿದ್ಧ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಬ್ರಹ್ಮ ರಥೋತ್ಸವವು ಮಂಗಳವಾರ ವಿಜೃಂಭಣೆಯಿಂದ ಜರಗಿತು. ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ, ಜಿಪಂ ಸದಸ್ಯೆ ಶೋಭಾ ಪುತ್ರನ್, ಗಂಗೊಳ್ಳಿ ತಾಪಂ ಸದಸ್ಯ ಸುರೇಂದ್ರ ಖಾರ್ವಿ, ಹೆಮ್ಮಾಡಿ ತಾಪಂ ಸದಸ್ಯ ರಾಜು ದೇವಾಡಿಗ ಮೊದಲಾದವರು ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ದೇವಳದ ಆಡಳಿತ ಮಂಡಳಿ ಸದಸ್ಯರು, ಊರಿನ ಹತ್ತು ಸಮಸ್ತರು, ಊರ ಪರ ಊರಿನ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕುಂದಾಪುರದ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ, ಬೈಂದೂರು ಪೊಲೀಸ್ ವೃತ್ತನಿರೀಕ್ಷಕ ಸುದರ್ಶನ ಎಂ. ಮಾರ್ಗದರ್ಶನದಲ್ಲಿ ಗಂಗೊಳ್ಳಿ ಎಸ್‌ಐ ಸುಬ್ಬಣ್ಣ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಚಿತ್ರ : ಸುರಭಿ ಗಂಗೊಳ್ಳಿ

Read More

ಕುಂದಾಪುರ : ತೆರಿಗೆ ಬಾಕಿ ಉಳಿಸಿಕೊಂಡವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ. ಕಳೆದ ನಾಲ್ಕಾರು ವರ್ಷದಿಂದ ತೆರಿಗೆ ಕಟ್ಟದವರಿಗೆ ನೊಟೀಸ್ ಮಾಡಲಾಗಿದೆ. ನೊಟೀಸಿಗೂ ಬಗ್ಗದವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ. ತೆರಿಗೆ ಮಾಪ್ ಮಾಡುವ ಪ್ರಶ್ನೆಯೇ ಇಲ್ಲಾ ಎಂದು ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಸ್ಪಷ್ಟ ಪಡಿಸಿದ್ದಾರೆ. ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಕುಂದಾಪುರ ಸಾಮಾನ್ಯ ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಮಾತನಾಡಿದರು. ಕಳೆದ ಹಲವಾರು ವರ್ಷದಿಂದ ಕುಂದಾಪುರ ಪುರಸಭೆಗೆ ತೆರಿಗೆ ಕಟ್ಟದ ೧೫೦೦ರಷ್ಟು ಜನರಿದ್ದು, ಅದರಲ್ಲಿ 20 ಜನ ನೊಟೀಸ್ ನೀಡಿದ ನಂತರ ತೆರಿಗೆ ಕೊಟ್ಟಿದ್ದಾರೆ. ಮತ್ತುಳಿದವರಿಗೆ ರಿಜಿಸ್ಟರ್ ನೊಟೀಸ್ ನೀಡಲಾಗುತ್ತದೆ. ಅದಕ್ಕೂ ಬಗ್ಗದಿದ್ದರೆ ಕಾನುನು ರೀತಿ ಕ್ರಮ ಕೈಗೊಳ್ಳಲಗಾಗುತ್ತದೆ ಎಂದು ಎಚ್ಚರಿಸಿದರು. ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಮಗ್ಗಲ್ಲಲ್ಲಿ ನಿಯಮ ಮೀರಿ ಕಟ್ಟಡ ಏಳುತ್ತಿದ್ದು ಪುರಸಭೆ ಪರವಾನಿಗೆ ಪಡೆದಿಲ್ಲ. ಕಟ್ಟಡದ ಪಕ್ಕ ಪಕ್ಕ ಚಿಕ್ಕ ಕಟ್ಟಡಗಳು ಏಳುತ್ತಿದೆ. ಪುರಸಭೆ ಅತಿಕ್ರಮ ಕಟ್ಟಡ ಹಾಗೆ ಬೆಳೆಯಲು ಬಿಟ್ಟರೆ ಮುಂದೆ…

Read More