Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ನಾಡಿನ ದೇಶದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲೊಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಿಯಲ್ಲಿ ದೇವರಿಗೆ ಕಾಣಿಕೆ ರೂಪದಲ್ಲಿ ಬಂದಿದ್ದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ದೇವಳದ ಸಿಬ್ಬಂಧಿಯೇ ಕಳವುಗೈದಿರು ಬಗ್ಗೆ ಶಂಕಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು ದೇವಳದ ಸೇವಾ ಕೌಂಟರಿನಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂಧಿಯೋರ್ವರು ಕೌಟರಿನಲ್ಲಿ ಚಿನ್ನಾಭರಣಗಳನ್ನಿಟ್ಟ ಬೀರುವಿನ ಕಿಲಿಕೈಯನ್ನು ತನ್ನ ಬಳಿ ಇರಿಸಿಕೊಂಡು ತಲೆಮರೆಸಿಕೊಂಡಿದ್ದು, ಚಿನ್ನಾಭರಣಗಳನ್ನು ಕೊಂಡೊಯ್ದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಕೊಲ್ಲೂರು ದೇವಳದಿಂದ ಕೊಲ್ಲೂರು ಠಾಣೆಗೆ ಪಿಟಿಷನ್ ಸಲ್ಲಿಸಲಾಗಿದ್ದು, ದೇವಳದ ಕರ್ತವ್ಯಕ್ಕೆ ಹಾಜರಾಗದೇ ತಲೆಮರೆಸಿಕೊಂಡವನನ್ನು ಹುಡುಕಿಕೊಡುವಂತೆ ಕೇಳಿಕೊಳ್ಳಲಾಗಿದೆ. ಈ ವಿಚಾರವಾಗಿ ತನಿಕೆ ಪ್ರಗತಿಯಲ್ಲಿದ್ದು, ಇನ್ನಷ್ಟೇ ವಾಸ್ತವ ಸಂಗತಿ ಬೆಳಕಿಗೆ ಬರಬೇಕಾಗಿದೆ.  ಕುಂದಾಪ್ರ ಡಾಟ್ ಕಾಂ ಸುದ್ದಿ ►ಕೊಲ್ಲೂರು ದೇಗುಲದಲ್ಲಿ ಚಿನ್ನಾಭರಣ ಕಳವು? – http://kundapraa.com/?p=11395 .

Read More

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ಕುಂದಾಪುರ: ಇಂದು ರೇಡಿಯೋದಲ್ಲಿ ಮಾತ್ರ ಹಾಡುವುದನ್ನು ಕೇಳುವ ದಿನಗಳು ಬದಲಾಗಿ, ಹಾಡನ್ನು ನೋಡುವ ದಿನಗಳು ಬಂದಿವೆ. ರೀಯಾಲಿಟಿ ಶೋಗಳ ಮೂಲಕ ಸಾಕಷ್ಟು ಪ್ರತಿಭೆಗಳು ಬೆಳಕಿಗೆ ಬಂದಿವೆ. ಸಂಗೀತದಲ್ಲಿ ಒಳ್ಳೆಯದು ಕೆಟ್ಟದ್ದು ಎಂಬುದಿಲ್ಲ. ಎಲ್ಲಾ ಪ್ರಕಾರದ ಸಂಗೀತಕ್ಕೂ ಅದರದ್ದೇ ಆದ ಘನತೆ ಇದೆ. ಎಲ್ಲಾ ಕ್ಷೇತ್ರದಲ್ಲಿ ಕಷ್ಟಪಡುವುದು ಇದ್ದೇ ಇರುತ್ತೆ. ಕಷ್ಟ ಪಡದೇ ಇಷ್ಟಾರ್ಥ ಸಿದ್ದಿಸೋದಿಲ್ಲ. ಕಷ್ಟಪಟ್ಟು ಇಷ್ಟ ಸಿದ್ದಿಸಿಕೊಂಡಿದ್ದೇನೆ. ಹಿನ್ನೆಲೆ ಗಾಯಕಿಯಾಗಿ ಸಂಗೀತ ಕ್ಷೇತ್ರದ ಪಣಯ ಖುಷಿ ನೀಡಿದೆ. ಹೀಗೆಂದವರು ಸಂಗೀತ ಗಾಯನ ಲೋಕದಲ್ಲಿ ಅಗ್ರಮಾನ್ಯ ಸ್ಥಾನವನ್ನು ಅಲಂಕರಿಸಿರುವ ದಕ್ಷಿಣ ಭಾರತದ ಹೆಸರಾಂತ ಚಲನಚಿತ್ರ ಹಿನ್ನಲೆ ಗಾಯಕಿ ವಾಣಿ ಜಯರಾಂ ಕೋಟೇಶ್ವರ ಸಹನಾ ಕನ್‌ವೆಷನ್ ಸೆಂಟರ್‌ಸಲ್ಲಿ ಭಾನುವಾರ ನಡೆಯಲಿರುವ ವಾಣಿ ಜಯರಾಂ ರಸ ಸಂಜೆ ಕಾರ್ಯಕ್ರಮಕ್ಕೆ ಕುಂದಾಪುರಕ್ಕೆ ಆಗಮಿಸಿರುವ ಅವರು ತಮ್ಮ ಹಿನ್ನಲೆ ಗಾಯನ ಮೂಲಕ ಸಾಗಿ ಬಂದ ದಾರಿಯನ್ನು ಕುಂದಾಪ್ರ ಡಾಟ್ ಕಾಂ ನೊಂದಿಗೆ ತೆರೆದಿಷ್ಟ ಪರಿ ಇದು.…

Read More

ಕುಂದಾಪುರ: ಚಿಕ್ಕನ್‌ಸಾಲ್ ರಸ್ತೆಯ ಶ್ರೀ ಬಗಳಾಂಬ ತಾಯಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಗುರುಪರಾಶಕ್ತಿ ಮಠ, ಮರಕಡದ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮಿಗಳ ಅನುಗ್ರಹದೊಂದಿಗೆ ವೇ. ಮೂ. ಕೆ. ಚಂದ್ರಶೇಖರ ಸೋಮಯಾಜಿಯವರ ನೇತೃತ್ವದಲ್ಲಿ ಸಕಲ ಧಾರ್ಮಿಕ ವಿಧಿವಿದಾನದೊಂದಿಗೆ ಸಾಂಗವಾಗಿ ನೆರವೇರಿತು. ವೈಭವದ ಮೆರವಣಿಗೆ : ಶ್ರೀ ಬಗಳಾಂಬ ತಾಯಿಗೆ ಸಮರ್ಪಿಸಲಾದ ರಜತ ಪ್ರಭಾವಳಿಯನ್ನು ವಿದ್ಯುಕ್ತವಾಗಿ ಸಕಲ ಮಂಗಳವಾದ್ಯ ಘೋಷಗಳೊಂದಿಗೆ ಸಂಭ್ರಮ ಸಡಗರದಿಂದ ಬರಮಾಡಿಕೊಳ್ಳಲಾಯಿತು. ಪೂರ್ಣಕುಂಭ ಹಿಡಿದು ಸಾಗುವ ಮಹಿಳೆಯರ ದಂಡು, ಚಂಡೆವಾದನ ಮೆರವಣಿಗೆಗೆ ಮೆರಗು ನೀಡಿದವು. ಕುಂದಾಪುರದ ಮಾಸ್ತಿಕಟ್ಟೆಯಿಂದ ಆರಂಭಗೊಂಡ ಮೆರವಣಿಗೆಯು ಸುಂದರವಾಗಿ ಅಲಂಕರಿಸಿದ ತೆರೆದ ವಾಹನದಲ್ಲಿ ರಜತ ಪ್ರಭಾವಳಿಯನ್ನು ಇರಿಸಿ ದೇವಳಕ್ಕೆ ತರಲಾಯಿತು. ದೇವಳವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದ್ದು, ಎಲ್ಲಡೆಯೂ ಸಂಭ್ರಮದ ವಾತಾವರಣ ಮೂಡಿದ್ದು, ಭಕ್ತಿ ಭಾವದಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡರು. ರಜತ ಪ್ರಭಾವಳಿ ಸಮರ್ಪಣೆ: ಈ ಶುಭ ಸಂದರ್ಭದಲ್ಲಿ ಶ್ರೀ ಬಗಳಾಂಬ ತಾಯಿಗೆ ರಜತ ಪ್ರಭಾವಳಿಯನ್ನು ಸಮರ್ಪಿಸಲಾಯಿತು. ಪ್ರಭಾವಳಿಯಲ್ಲಿ ಎರಡು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಸಮೀಪದ ಕೊಡೇರಿ ಎಡಮಾವಿನ ಹೊಳೆಯಲ್ಲಿ ಮಹಿಳೆಯೋರ್ವಳ ಶವ ಪತ್ತೆಯಾಗಿದ್ದು ಮೃತರನ್ನು ಮುತ್ತು ದೇವಾಡಿಗ (50) ಎಂದು ಗುರುತಿಸಿಲಾಗಿದೆ. ಶುಕ್ರವಾರ ಸಂಜೆ ಕೊಡೇರಿಯಿಂದ ಮರವಂತೆಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗಲು ನಡೆದುಕೊಂಡು ಬರುತ್ತಿದ್ದ ವೇಳೆ ಕಾಲು ಜಾರಿ ಎಡಮಾವಿನ ಹೊಳೆಗೆ ಬಿದ್ದು ಸ್ಥಳದಲ್ಲಿಯೇ ಮೃತಟ್ಟಿರಬಹುದೆಂದು ಅಂದಾಜಿಸಲಾಗಿದೆ. ಘಟನಾ ಸ್ಥಳದಲ್ಲಿ ದೊರೆತ ಘಟನಾ ಸ್ಥಳದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಬಾಟೆಲ್ ಹಾಗೂ ಮೊಬೈಲ್ ದೊರೆದಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ತಾಲೂಕಿನಲ್ಲಿ ಒಟ್ಟು 10 ಜಿಪಂ ಹಾಗೂ 37 ತಾಪಂ ಕ್ಷೇತ್ರಗಳಿಗೆ ೩೫೬ ಮತಗಟ್ಟೆಗಳಲ್ಲಿ ನಡೆದ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ, ಮತಯಂತ್ರದ ಕೆಟ್ಟದ್ದು ಹಾಗೂ ಸಣ್ಣಪುಟ್ಟ ಸಂಘರ್ಷಗಳನ್ನು ಹೊರತುಪಡಿಸಿದರೇ ಮತ್ತೆಲ್ಲೆಡೆ ಸಸೂತ್ರವಾದ ಮತದಾನ ನಡೆದಿದೆ. ಜಡ್ಡಿನಗದ್ದೆಯಲ್ಲಿ ಚುನಾವಣೆ ಬಹಿಷ್ಕಾರ ಬ್ಯಾನರ್ ತೆಗೆದಿದ್ದ ರಿಂದ ಉದ್ವಿಘ್ನ ಸ್ಥಿತಿ, ನಕ್ಸಲ್ ಏರಿಯದಾಲ್ಲಿ ಚುರುಕು ಮತದಾನ, ಅತೀ ಸೂಕ್ಷ್ಮ ಮತ ಕೇಂದ್ರಗಳಲ್ಲಿ ಸರ್ಪಗಾವಲನಲ್ಲಿ ನಡೆದ ಮತದಾನ, ಕುಂದಾಪುರ ಹಂಗಳೂರು ಮತಘಟ್ಟೆ ಬಳಿ ಸಂಜೆ ಹೊತ್ತಿಗೆ ಮಾತಿನ ಚಕಮಕಿ ಲಾಠಿ ಚಾರ್ಜ್, ಉಪ್ಪುಂದದಲ್ಲಿ ಮಾತಿನ ಚಕಮಕಿ ನಡೆದಿದೆ. ಸ್ಥಳಕ್ಕೆ ಡಿಎಸ್ಪಿ ಮಂಜುನಾಥ ಶೆಟ್ಟಿ ಭೇಟಿ ನೀಡಿ ವಾತಾವರಣ ತಿಳಿ ಮಾಡಿದ್ದು, ಸ್ಥಳಕ್ಕೆ ರಿಸರ್ವ್ ಪೊಲೀಸ್ ಪಡೆ ಕರೆಸಲಾಯಿತು. ಕುಂದಾಪ್ರ ಡಾಟ್ ಕಾಂ ಸುದ್ದಿ ಬೆಳಗ್ಗೆ ಗ್ರಾಮೀಣ ಭಾಗದಲ್ಲಿ ಮತದಾನ ಚುರುಕಾಗಿದ್ದರೆ, ನಗರ ಪಟ್ಟಣ ಬಳಿ ಮತದಾನ ನೀರಸವಾಗಿ ಆರಂಭವಾಯಿತು. ಹಕ್ಲಾಡಿ ಗ್ರಾಪಂನಲ್ಲಿ ಬೆಳಗ್ಗೆ ಸರತಿ ಸಾಲು ಕಂಡುಬಂದರೆ, ವಯೋವೃದ್ಧರೊಬ್ಬರು ಸಂಬಂಧಿಗಳ ಸಹಕಾರದಲ್ಲಿ ಮತದಾನ…

Read More

ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ. ಕುಂದಾಪುರ: ತಾಲೂಕಿನಲ್ಲಿ ಮರಳುಗಾರಿಕೆ ಪರವಾನಿಗೆ ರದ್ದಾಗಿ ಅರ್ಧ ತಿಂಗಳೇ ಕಳೆಯುತ್ತಾ ಬಂದಿದೆ. ಆದರೆ ಯಾವುದೇ ವಿಘ್ನವಿಲ್ಲದೇ ಮರಳುಗಾರಿಕೆ ಅಕ್ರಮವಾಗಿ ನಡೆಯುತ್ತಿದೆ! ಜನವರಿ 22ರಿಂದ ಮರಳುಗಾರಿಕೆಯನ್ನು ಸಂಪೂರ್ಣ ನಿಷೇಧಿಸಬೇಕು ಎಂಬ ಜಿಲ್ಲಾಡಳಿತದ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ಇಷ್ಟರಲ್ಲಿಯೇ ತಿಳಿಯುತ್ತಿದೆ ಪರವಾನಿಗೆ ರದ್ದಾದ ಮೇಲೂ ಎಗ್ಗಿಲ್ಲದೇ ಮರಳು ಲೂಟಿ ನಡೆಸುತ್ತಿರುವುದರ ಹಿಂದಿನ ಲಾಭಿ. ತೀರಾ ಹಾಸ್ಯಾಸ್ಪದವೆಂದರೆ ತಾಲೂಕಿನ ಹದಿನೈದಕ್ಕೂ ಹೆಚ್ಚು ಕಡೆಗಳಲ್ಲಿ ಮರಳುಗಾರಿಕೆ ನಡೆಯುತ್ತಿದ್ದರೂ ಗಣಿಗಾರಿಕೆ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಒಂದು ಕಡೆ ಮಾತ್ರವೇ ರೈಡ್ ಮಾಡಿ ದಾಖಲೆ ನೀಡುತ್ತಿದ್ದಾರೆ. ಉಳಿದ ಕಡೆ ಕ್ರಮವೇನು ಎಂದು ಪ್ರಶ್ನಿಸಿದರೆ ಇದು ನಮಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂಬ ಬೇಜವಾಬ್ದಾರಿಯ ಉತ್ತರ ನೀಡುತ್ತಿದ್ದಾರೆ. ಇದು ಕುಂದಾಪ್ರ ಡಾಟ್ ಕಾಂ ವರದಿ [quote font_size=”15″ bgcolor=”#ffffff” bcolor=”#44b200″ arrow=”yes” align=”right”]* ಅಕ್ರಮ ಮರಳುಗಾರಿಕೆ ಜಿಲ್ಲಾಡಳಿತದ ನಿಷ್ಕ್ರಿಯತೆಗೆ ಹಿಡಿದ ಕನ್ನಡಿಯಾಗಿದೆ. ಜಿಲ್ಲಾದ್ಯಂತ ನಡೆಯುತ್ತಿರುವ…

Read More

ತಾಲೂಕಿನಲ್ಲಿ ಒಟ್ಟು 356 ಮತಗಟ್ಟೆ. ಸೂಕ್ಷ್ಮ 56, ಅತೀಸೂಕ್ಷ್ಮ 13 ನಕ್ಸಲ್ ಪೀಡಿತ ಪ್ರದೇಶ 27 ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ರಾಜ್ಯದ ಎರಡನೇ ಹಂತದ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಕುಂದಾಪುರ ತಾಲೂಕು ಸಿದ್ಧಗೊಂಡಿದ್ದು. ಶಾಂತಿಯುತ ಚುನಾವಣೆ ನಡೆಸುವ ಸಲುವಾಗಿ ಸಕಲ ಏರ್ಪಾಡುಗಳನ್ನು ಮಾಡಲಾಗಿದೆ. ತಾಲೂಕಿನಲ್ಲಿ 13 ಅತಿಸೂಕ್ಷ್ಮ, 56 ಸೂಕ್ಷ್ಮ ಹಾಗೂ 27 ನಕ್ಸ್‌ಲ್ ಪೀಡಿತ ಮತಗಟೆ ಹಾಗೂ, 260 ಸಾಮಾನ್ಯ ಮತಗಟ್ಟೆಗಳೆಂದು ವಿಭಾಗಿಸಲಾಗಿದೆ. ಅತಿಸೂಕ್ಷ್ಮ ಮತಗಟ್ಟೆಗಳ ಪೈಕಿ ಶಿರೂರು ಜಿ.ಪಂ. ಕ್ಷೇತ್ರದ 4, ತ್ರಾಸಿ ಜಿಪಂ1, ವಂಡ್ಸೆ ಜಿಪಂ 1, ಕಾವ್ರಾಡಿ ಜಿಪಂ 2 , ಕೋಟೇಶ್ವರ ಜಿಪಂನಲ್ಲಿ 3, ಸಿದ್ದಾಪುರ ಜಿಪಂ ಕ್ಷೇತ್ರದಲ್ಲಿ 2 ಹೀಗೆ ಒಟ್ಟು 13 ಅತಿಸೂಕ್ಷ್ಮ ಮತಗಟ್ಟೆಗಳ ಗುರುತಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ. ಮತದಾನ ಕಾರ್ಯಕ್ಕೆ ತಾಲೂಕಿನಲ್ಲಿ 393 ಪ್ರಿಸೈಡಿಂಗ್ ಆಫೀಸರ್, 392 ಅಸಿಸ್ಟೆಂಟ್ ಪ್ರಿಸೈಡಿಂಗ್ ಆಫೀಸರ್, 1176 ಪೋಲಿಂಗ್ ಆಫೀಸರ್ ಹಾಗೂ 392 ಗ್ರೂಫ್ ಡಿ…

Read More

ಕುಂದಾಪ್ರ ಡಾಟ್ ಕಾಂ ವರದಿ: ಕುಂದಾಪುರ: ತಾಲೂಕಿನ ಎಲ್ಲಾ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳಲ್ಲಿ ಮಹಿಳಾ ಮತದಾರರದ್ದೇ ಪ್ರಾಬಲ್ಯ. ಈ ಭಾರಿ ಬಹುಪಾಲು ಕ್ಷೇತ್ರಗಳಲ್ಲಿ ಮೀಸಲಾತಿಯೂ ಮಹಿಳೆಯರೇ ಪರವೇ ಬಂದಿರುವುದರಿಂದ ಹೆಚ್ಚು ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಾಗಾಗಿ ಈ ಭಾರಿಯ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಮಹಿಳೆಯರೇ ಮತಗಳು ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ ತಾಲೂಕಿನ ಒಟ್ಟು 10 ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಹಾಗೂ 37 ತಾಲೂಕು ಪಂಚಾಯತ್ ಕ್ಷೇತ್ರಗಳಲ್ಲಿ ಒಟ್ಟು 3,05,471 ಮತದಾರರಿದ್ದು ಆಪೈಕಿ 1,46,949 ಪುರುಷರಿದ್ದರೇ, 1,58,506 ಮಹಿಳಾ ಮತದಾರರಿದ್ದಾರೆ. ತಾಲೂಕಿನಲ್ಲಿ 16 ತೃತೀಯ ಲಿಂಗಿಗಳಿರುವುದು  ಮತದಾರರಿರುವುದು ವಿಶೇಷ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗಂಡಹೆಂಡಿರ ನಡವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೇರಿ ಹೆಂಡತಿಗೆ ಹೊಟ್ಟೆಗೆ ಚೂರಿ ಇರಿದ ಘಟನೆ ತಾಲೂಕಿನ ತ್ರಾಸಿಯಲ್ಲಿ ನಡೆದಿದೆ. ತಾಸ್ರಿ ನಿವಾಸಿ ರೇಷ್ಮಾ ಪೂಜಾರಿ(31) ಇರಿತಕ್ಕೊಳಗಾದ ಮಹಿಳೆ. ಚಂದ್ರ ಪೂಜಾರಿ ಚಾಕುವಿನಿಂದ ಇರಿದ ಪತಿರಾಯ. ಹೊಳ್ಮಗೆ ನಿವಾಸಿಯಾದ ಚಂದ್ರ ಪೂಜಾರಿ ಪೂನ:ದ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಕೆಲವು ದಿನಗಳ ಹಿಂದಷ್ಟೇ ಊರಿಗೆ ಬಂದಿದ್ದ ಅವರು ತ್ರಾಸಿಯ ತನ್ನ ಪತ್ನಿಯ ಮನೆಗೆ ತಂಗಿದ್ದರು. ಮನೆಯಲ್ಲಿ ಯಾವುದೋ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಕೋಪಗೊಂಡ ಚಂದ್ರ ಪೂಜಾರಿ ಏಕಾಏಕಿ ಅಲ್ಲಿಯೇ ಇದ್ದ ಚೂರಿಯಿಂದ ಪತ್ನಿಯ ಹೊಟ್ಟೆ ಹಾಗೂ ಕೈಗೆ ತಿವಿದಿದ್ದಾರೆ. ಪತ್ನಿ ರೇಷ್ಮಾ ಅಲ್ಲಿಯೇ ಕೂಗಿಕೊಳ್ಳುತ್ತಾ ನೆಲಕ್ಕುರುಳಿದಾಗ ಚಂದ್ರ ಪೂಜಾರಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಸ್ಥಳೀಯರ ನೆರವಿನಿಂದಾಗಿ ಪೊಲೀಸರು ಅತನನ್ನು ಬಂಧಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ ಗಾಯಾಳುವನ್ನು ಕೂಡಲೇ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಸುನಿಲ್ ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ ಬೈಂದೂರು: ಉಡುಪಿ ಜಿಲ್ಲೆಯ ನೈಸರ್ಗಿಕ ಸೊಬಗಿನ ತವರೂರಾದ ಬೈಂದೂರು ತನ್ನದೇ ಆದ ಕಾರಣಗಳಿಂದ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸ್ಥಾನ ಪಡೆದಿದೆ. ಶಿಕ್ಷಣ, ಕಲೆ, ಸಾಹಿತ್ಯ, ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡ ಹೆಗ್ಗಳಿಕೆ ಇಲ್ಲಿನದ್ದು. ಬಿಂದುಋಷಿ ಎಂಬ ಮುನಿಯು ತಪಸ್ಸನ್ನಾಚರಿಸಿದ ಕಾರಣದಿಂದಾಗಿ ಬಿಂದುಪುರ ಎಂಬ ಹೆಸರು ಬಂದಿತು. ಕ್ರಮೇಣ ಅದು ಬೈದೂರು ಆಗಿ ನಂತರ ಬೈಂದೂರು ಎಂದು ಕರೆಯಲ್ಪಟ್ಟಿತು ಎಂಬುದು ಐತಿಹ್ಯ. ಊರಿನ ಹಿಂದಿನ ಐತಿಹ್ಯ. ಪಶ್ಚಿಮದ ಅರಬ್ಬಿ ಸಮುದ್ರ, ಪೂರ್ವದ ಪಶ್ಚಿಮ ಘಟ್ಟಗಳ ಸಾಲು ಬೈಂದೂರಿನ ನೈಸರ್ಗಿಕ ಸೌಂದರ್ಯವನ್ನು ಇಮ್ಮುಡಿಗೊಳಿಸಿದ್ದರೇ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಬೈಂದೂರು ಶ್ರೀ ಸೇನೇಶ್ವರ ಸೇರಿದಂತೆ ಹತ್ತಾರು ದೇವಾಲಯಗಳು, ಜಾಮೀಯಾ ಮಸೀದಿ, ಹೋಲಿ ಕ್ರಾಸ್ ಚಚ್ ಇವೇ ಮುಂತಾದವುಗಳು ಬೈಂದೂರಿನ ಧಾರ್ಮಿಕ ಶಕ್ತಿಕೇಂದ್ರಗಳಾಗಿ ಭಕ್ತರನ್ನು ಕರುಣಿಸಿವೆ. ಬೈಂದೂರು ನಗರವನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳು; ಮೂಕಾಂಬಿಕಾ ರೋಡ್…

Read More