ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ಯುಜಿ ಲ್ಯಾಟರಲ್ ಎಂಟ್ರಿ ಕೋಟಾದಡಿ ಅಂತಿಮ ಸುತ್ತಿನ ಪ್ರವೇಶಾತಿ ಪ್ರಕ್ರಿಯೆಯ ನಂತರವೂ ಭರ್ತಿಯಾಗದೇ ಉಳಿದಿರುವ ವಿವಿಧ ಸ್ನಾತಕ ಪದವಿ ಕಾರ್ಯಕ್ರಮಗಳ ಪ್ರವರ್ಗವಾರು ಸೀಟುಗಳನ್ನು ನವೆಂಬರ್ 24ರಂದು ಮುಕ್ತ ಕೌನ್ಸೆಲಿಂಗ್ ಆಯ್ಕೆ ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುತ್ತದೆ. ಈ ಮುಕ್ತ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಪ್ರವೇಶಾತಿ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ವಿಶ್ವವಿದ್ಯಾಲಯದ ಜಾಲತಾಣ www.uahs.edu.in ನಲ್ಲಿ ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿ ಸೂಕ್ತ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ, ಖುದ್ದಾಗಿ ಕುಲಸಚಿವರ ಕಾರ್ಯಾಲಯ, ಶರಾವತಿ ಆಡಳಿತ ಭವನ, 2ನೇ ಮಹಡಿ, ಇರುವಕ್ಕಿ-577412 ಶಿವಮೊಗ್ಗ ಜಿಲ್ಲೆ ಇಲ್ಲಿಗೆ ನವೆಂಬರ್ 24 ರ ಬೆಳಗ್ಗೆ 11 ಗಂಟೆಯೊಳಗಾಗಿ ಸಲ್ಲಿಸಬಹುದಾಗಿದೆ. ನಿಗದಿತ ಸಮಯ ಮೀರಿದ ಅಭ್ಯರ್ಥಿಯ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಲಭ್ಯವಿರುವ ಸೀಟುಗಳಿಗೆ ಮುಕ್ತ ಕೌನ್ಸೆಲಿಂಗ್ ಆಯ್ಕೆ ಪ್ರಕ್ರಿಯೆಗಳನ್ನು ಕೆಳದಿ ಶಿವಪ್ಪ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರೋಟರಿ ಕ್ಲಬ್ ತೀರ್ಥಹಳ್ಳಿ ಆತಿಥ್ಯದಲ್ಲಿ ನಡೆದ ರೋಟರಿ ಜಿಲ್ಲಾ ಮಟ್ಟದ ಸಾಂಸ್ಕ್ರತಿಕ ಸ್ಪರ್ಧೆಯಲ್ಲಿ ಅರುಣ್ ಕುಮಾರ್ ಶಿರೂರು ನೇತ್ರತ್ವದ ಬೈಂದೂರು ರೋಟರಿ ತಂಡ ಭಾಗವಹಿಸಿದ ಎಲ್ಲಾ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸುವ ಮೂಲಕ ವಲಯ 1ರ ಸತತ ನಾಲ್ಕನೇ ಬಾರಿ ಚಾಂಪಿಯನ್ ಪಟ್ಟಗಳಿಸುವ ಮೂಲಕ ದಾಖಲೆ ನಿರ್ಮಾಣವಾಗಿದೆ. ರೋಟರಿ ಜಿಲ್ಲಾ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನ ಕಂದಾಯ ಜಿಲ್ಲೆಗಳ 11 ವಲಯದ ಒಟ್ಟು 87 ರೋಟರಿ ಕ್ಲಬ್ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬೈಂದೂರು ರೋಟರಿ ಕುಂದಾಪುರದಲ್ಲಿ ನಡೆದ ವಲಯ ಸಾಂಸ್ಕ್ರತಿಕ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿ ಜಿಲ್ಲಾ ಮಟ್ಟದ ಅರ್ಹತೆ ಪಡೆದಿತ್ತು. ಮಹಿಳೆಯರ ಸಿನಿಮಾ ಹಾಡು ಸ್ಪರ್ಧೆಯಲ್ಲಿ ಪೂರ್ಣಿಮಾ ಪ್ರಥಮ, ಡ್ಯುಯೆಟ್ ಹಾಡು ಸ್ಪರ್ಧೆಯಲ್ಲಿ ಉದಯ ಆಚಾರ್, ಪೂರ್ಣಿಮಾ ಪ್ರಥಮ, ಏಕಾಭಿನಯ ಸ್ಪರ್ಧೆಯಲ್ಲಿ ಸುಬ್ರಹ್ಮಣ್ಯ ಜಿ. ಉಪ್ಪುಂದ ಪ್ರಥಮ ಸ್ಥಾನ ಗಳಿಸಿದ್ದಾರೆ. ರೈತ ಹೋರಾಟ ಕಥೆಯ ನಾಟಕಕ್ಕೆ ಪ್ರಶಸ್ತಿ:ಬೈಂದೂರಿನಲ್ಲಿ ನಿರಂತರ 432 ದಿನಗಳ ಕಾಲ ರೈತರು ಹೋರಾಟ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಸಹಕಾರಿ ಸಂಸ್ಥೆಗಳು ಕೇವಲ ಲಾಭ ಗಳಿಸುವ ಉದ್ದೇಶದಿಂದ ಕಾರ್ಯನಿರ್ವಹಿಸದೆ, ರೈತರು ಹಾಗೂ ಜನಸಾಮಾನ್ಯರ ಸೇವೆಗೆ ಆದ್ಯತೆ ನೀಡಬೇಕು. ಜನರ ವಿಶ್ವಾಸ, ಪಾರದರ್ಶಕ ಆಡಳಿತ ಮತ್ತು ಸೇವಾ ಮನೋಭಾವವೇ ಸಹಕಾರಿ ಕ್ಷೇತ್ರದ ನಿಜವಾದ ಶಕ್ತಿಯಾಗಿದೆ ಎಂದು ಉಪ್ಪುಂದ ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಅವರು 73ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಕೋಟ ಸಹಕಾರಿ ವ್ಯವಸಾಯಕ ಸಂಘ, ಕೋಟತಟ್ಟು ಪಡುಕರೆ ಹಾಲು ಉತ್ಪಾದಕರ ಸಹಕಾರಿ ಸಂಘ ಹಾಗೂ ಉಡುಪಿ ಜಿಲ್ಲಾ ಸಹಕಾರ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೋಟದ ಬಿ.ಸಿ. ಹೊಳ್ಳ ಸಹಕಾರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಉಡುಪಿ ಜಿಲ್ಲೆಯಲ್ಲಿ 735 ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮೂಲಕ ಸುಮಾರು 55 ಸಾವಿರ ರೈತರು ಹಾಲು ಪೂರೈಸುತ್ತಿದ್ದು, ವಾರ್ಷಿಕವಾಗಿ ಸುಮಾರು 750 ಕೋಟಿ ರೂ. ಹಣ ರೈತರಿಗೆ ಪಾವತಿಯಾಗುತ್ತಿದೆ. ಇದು ಗ್ರಾಮೀಣ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕ ಪರಂಪರೆ ಹಾಗೂ ವಿವಿಧ ರಾಜ್ಯಗಳ ಕಲಾಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸುವ ಮೂಲಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ದೀಪಾವಳಿ ಸಂಭ್ರಮ ಗಮನ ಸೆಳೆಯಿತು. ವೈವಿಧ್ಯತೆಯಲ್ಲಿ ಏಕತೆಯ ಆಶಯದೊಂದಿಗೆ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಸಾಮರಸ್ಯ ಮೂಡಿಸುವ ಉದ್ದೇಶದಿಂದ ಮೂಡುಬಿದಿರೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಪ್ರದಾಯ, ಧಾರ್ಮಿಕ ಆಚರಣೆ ಹಾಗೂ ಕಲಾಪ್ರದರ್ಶನಗಳ ಸಮ್ಮಿಲನ ಕಂಡುಬಂತು. ಕಾರ್ಯಕ್ರಮದ ಆರಂಭದಲ್ಲಿ ಮಂಗಳೂರಿನ ಶ್ರೀ ಮೂಕಾಂಬಿಕಾ ಚೆಂಡೆ ಬಳಗದ ಚೆಂಡೆ, ವಯೋಲಿನ್ ಹಾಗೂ ಕೀಬೋರ್ಡ್ಗಳ ಸಮ್ಮಿಲನದೊಂದಿಗೆ ಮೂಡಿಬಂದ ಸಿಂಗಾರಿ ಮೇಳ ವಿಶೇಷ ಮೆರುಗು ನೀಡಿತು. ದಕ್ಷಿಣ ಕನ್ನಡದ ಸಾಂಸ್ಕೃತಿಕ ಅಸ್ಮಿತೆಯನ್ನು ಬಿಂಬಿಸುವ ದಶಶಂಖಗಳು, ದಶಕೊಂಬುಗಳು, 30 ಶ್ವೇತಛತ್ರಗಳು, ವೇದಮಂತ್ರಗಳನ್ನು ಪಠಿಸುವ ವಿಪ್ರರ ತಂಡ ಹಾಗೂ ಪ್ರಣತಿ ಹಿಡಿದ 50 ದೇವಕನ್ನಿಕೆಯರ ಭವ್ಯ ಮೆರವಣಿಗೆ ನಡೆಯಿತು. ಸ್ಯಾಕ್ಸೋಫೋನ್ ಮತ್ತು ನಾಗಸ್ವರಗಳ ಮಂಗಳನಾದದ ನಡುವೆ ಭತ್ತದ ತೆನೆ, ಮಾವು, ಹಲಸು, ಕೆಸು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಗ್ರಾಮೀಣ ಜನರ ಆರೋಗ್ಯದ ಕಾಳಜಿಯಿಂದ ರೋಟರಿ ಕ್ಲಬ್ ತೆಕ್ಕಟ್ಟೆಯ ವತಿಯಿಂದ ಉಚಿತ ಚರ್ಮರೋಗ ತಪಾಸಣಾ ಶಿಬಿರವನ್ನು ಮಂಗಳವಾರ ಕುಂಭಾಶಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಂಭಾಶಿ ಮತ್ತು ಇತರ ಸ್ವಯಂಸೇವಾ ಸಂಘಟನೆಗಳ ಸಹಯೋಗದೊಂದಿಗೆ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಘವೇಂದ್ರ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ತಜ್ಞ ವೈದ್ಯಕೀಯ ಸೇವೆಗಳನ್ನು ಸ್ಥಳೀಯವಾಗಿಯೇ ಒದಗಿಸುವಲ್ಲಿ ಇಂತಹ ಶಿಬಿರಗಳ ಮಹತ್ವವನ್ನು ವಿವರಿಸಿದರು. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಚರ್ಮರೋಗ ತಜ್ಞರಾದ ಡಾ. ಸತೀಶ್ ಪೈ ಅವರು ದೀಪ ಬೆಳಗಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕುಷ್ಠರೋಗ ಸೇರಿದಂತೆ ವಿವಿಧ ಚರ್ಮರೋಗಗಳ ಲಕ್ಷಣಗಳು, ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಚಿಕಿತ್ಸಾ ವಿಧಾನಗಳ ಕುರಿತು ಮಾಹಿತಿ ನೀಡಿದರು. ಚರ್ಮರೋಗಗಳನ್ನು ಆರಂಭಿಕ ಹಂತದಲ್ಲಿಯೇ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಅಡಂಬರದ ಬದುಕನ್ನು ಇಷ್ಟ ಪಡದ ಕಾರಂತರು ನೇರ ನಡೆ ನುಡಿಯ ವ್ಯಕ್ತಿತ್ವವನ್ನು ಹೊಂದಿದವರು. ಯಕ್ಷಗಾನದ ಕುರಿತು ಆಸಕ್ತಿಯನ್ನು ಹೊಂದಿದ ಅವರು ಯಕ್ಷಗಾನದ ಉಳಿವಿಗಾಗಿ ಮಹತ್ವವಾದ ಕೊಡುಗೆಯನ್ನು ನೀಡಿದ್ದಾರೆ. ಕಾರಂತರಂತಹ ಸಾಹಿತಿಯನ್ನು ಪಡೆದಿರುವುದು ನಾಡಿಗೆ ಹೆಮ್ಮೆ ತರುವಂತಹ ವಿಚಾರವಾಗಿದೆ ಎಂದು ಜಾನಪದ ವಿದ್ವಾಂಸ ಮತ್ತು ನಿವೃತ್ತ ಪ್ರಾಂಶುಪಾಲ ಕನರಾಡಿ ವಾದಿರಾಜ ಭಟ್ ಹೇಳಿದರು. ಅವರು ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ರಂಗೋಲಿ ಕಲಾ ಪರಿಷತ್ ರಿ. ಸಹಯೋಗದಲ್ಲಿ ನಡೆದ ಮಕ್ಕಳಿಗಾಗಿ ಕಾರಂತರು-9 ಶಾಲಾ ವಿದ್ಯಾರ್ಥಿಗಳಿಗೆ ಕಾರಂತರ ಪರಿಚಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಮಕ್ಕಳ ಬಗೆಗೆ ಅಪಾರವಾದ ಪ್ರೀತಿಯನ್ನು ಹೊಂದಿದ್ದ ಕಾರಂತರು ಮಕ್ಕಳ ಭೌತಿಕ ಬೆಳವಣಿಗೆಗಾಗಿ ಮಕ್ಕಳ ಸಾಹಿತ್ಯವನ್ನು ರಚಿಸಿದ್ದಾರೆ. ಮಕ್ಕಳ ಕೌಶಲ್ಯಭಿವೃದ್ಧಿಗಾಗಿ ಇಂತಹ ಕಾರ್ಯಕ್ರಮಗಳು ಪೂರಕವಾಗಿದ್ದು, ಮಕ್ಕಳ ಸಂಪೂರ್ಣ ಪಾಲ್ಗೋಳ್ಳುವಿಕೆ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸುತ್ತದೆ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಥಮ ಸ್ಥಾನ ಪಡೆದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ, ಸ್ವಸ್ತಿ ಹೆಗ್ಡೆ 9th (ಹಿಂದಿ ಕಂಠಪಾಠ), ಮೊಹಮ್ಮದ್ ಮಾಯಿಜ್ 7th (ಆರೇಬಿಕ್ ಧಾರ್ಮಿಕ ಪಠಣ), ಚಾರಣ್ಯ ಪ್ರವೀಣ್ ಶೇರೆಗಾರ್ 5th (ಕ್ಲೇ ಮಾಡೆಲಿಂಗ್), ಭಾಗ್ಯಲಕ್ಷಿ ಶೆಣೈ 7th (ಭಕ್ತಿಗೀತೆ), ಶಬರೀಶ್ 7th (ಆಶುಭಾಷಣ), ತನೀಶ್ ಜೆ ಪೂಜಾರಿ 7th (ಮಿಮಿಕ್ರಿ). ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಪ್ಲವಂಗ ನಾಮ ಸಂವತ್ಸರದ ’ವಸಂತೋತ್ಸವ’2027 ಕುಂದಾಪುರದ ಇತಿಹಾಸ ಪ್ರಸಿದ್ಧ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿದೆ. ಈ ಸಂಬಂಧ 2027ರ ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ದೇವಾಲಯದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಪೂಜ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಲಿವೆ. ಶ್ರೀ ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ವಾರಾಣಾಸಿ ಶ್ರೀ ಕಾಶೀ ಮಠದಲ್ಲಿ ’ವಸಂತೋತ್ಸವ’ 2027 ಆಹ್ವಾನ ಪತ್ರವನ್ನು ಬಿಡುಗಡೆಗೊಳಿಸಿ ಆಶೀರ್ವದಿಸಿದ್ದಾರೆ. ಶ್ರೀ ಕಾಶೀ ಮಠಾಧೀಶರು ಎಪ್ರಿಲ್ 1ರಂದು ಕುಂದಾಪುರಕ್ಕೆ ಚಿತ್ತೈಸಲಿದ್ದಾರೆ. ಎಪ್ರಿಲ್ 7ರ ಯುಗಾದಿ ದಿನದಿಂದ ’ವಸಂತೋತ್ಸವ’ ಆಚರಣೆ ಆರಂಭವಾಗಲಿದೆ. ಶ್ರೀ ವೆಂಕಟರಮಣ ದೇವಸ್ಥಾನದ ರಥೋತ್ಸವ ಎಪ್ರಿಲ್ 15, ಶ್ರೀರಾಮ ನವಮಿಯಂದು ನಡೆಯಲಿದ್ದು, ಈ ಸಂಬಂಧ ಎಪ್ರಿಲ್ 11 ರಿಂದ 16ರ ತನಕ ನಡೆಯುವ ಉತ್ಸವಗಳು ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಸಂಭ್ರಮದಿಂದ ನಡೆಯಲಿವೆ. ಸಹಸ್ರ ಕಂಭಾಭಿಷೇಕ: ವಸಂತೋತ್ಸವ ಪರ್ವ ಕಾಲದಲ್ಲಿ ಶ್ರೀ ದೇವರ ಪ್ರಿತ್ಯರ್ಥವಾಗಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಶ್ರೀ ವಿಷ್ಣು ಮೂರ್ತಿ ದೇವಸ್ಥಾನ ಪಾರಂಪಳ್ಳಿ ಇಲ್ಲಿ ಕಾರ್ತಿಕ ಮಾಸದ ಭಜನಾ ಕಾರ್ಯಕ್ರಮದಲ್ಲಿ 96 ವರ್ಷಗಳ ಕಾಲ ಭಜನೆಯನ್ನು ನಡೆಸಿಕೊಂಡು ಬಂದ ಶ್ರೀರಾಮ ವಿಶ್ವಸ್ಥ ಮಂಡಳಿ ಬಾಳ್ಕುದ್ರು ಹಂಗಾರಕಟ್ಟೆ ಭಜನಾ ತಂಡವನ್ನು ಶ್ರೀ ಮಹಾವಿಷ್ಣು ಭಜನಾ ಸಂಘ ಪಾರಂಪಳ್ಳಿ ಇವರ ವತಿಯಿಂದ ಗೌರವ ಸಂಮ್ಮಾನ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಾ ವಿಷ್ಣು ಭಜನಾ ಸಂಘದ ಅಧ್ಯಕ್ಷ ಶ್ರೀರಾಮಚಂದ್ರ ಉಪಾಧ್ಯ ವಹಿಸಿದರು. ಅತಿಥಿಗಳಾಗಿ ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ಅಧ್ಯಕ್ಷ ಪಟ್ಟಾಭಿರಾಮ ಸೋಮಯಾಜಿ, ಭಜನಾ ಸಂಘದ ಕೋಶಾಧಿಕಾರಿ ನಾಗರಾಜ ಸೋಮಯಾಜಿ, ಮಹಿಳಾ ಭಜನಾ ಸಂಘದ ಅಧ್ಯಕ್ಷೆ ಮಾಲತಿ ಅಡಿಗ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀ ಮಹಾ ವಿಷ್ಣು ಭಜನಾ ಸಂಘದ ಕಾರ್ಯದರ್ಶಿಯಾದ ಪಿ.ವೈ ಕೃಷ್ಣ ಪ್ರಸಾದ್ ಹೇರ್ಳೆ ನಿರೂಪಿಸಿದರು. ಬ್ರಾಹ್ಮಣ ಮಹಾ ಸಭಾದ ಕಾರ್ಯದರ್ಶಿ ರಾಜಾರಾಮ್ ಐತಾಳ್ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯಕ್ಷಗಾನ ಸಂಘ ಹಾಗೂ ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ ‘ಬಣ್ಣದ ಮನೆ – ಯಕ್ಷಗಾನ ಕಲಾವಿದರ ಬದುಕಿಗೆ ನುಡಿ ತೋರಣ’ ಎನ್ನುವ ಸರಣಿ ಉಪನ್ಯಾಸ ಮಾಲಿಕೆಯ ಉದ್ಘಾಟನಾ ಕಾರ್ಯಕ್ರಮ ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ನಡೆಯಿತು. ಚಂಡೆ ವಾದನದ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕುಂದಾಪುರದ ನ್ಯಾಯವಾದಿ ಹಾಗೂ ಪ್ರಸಂಗಕರ್ತ ಶರತ್ ಕುಮಾರ್ ಶೆಟ್ಟಿ ಮಾತನಾಡಿ, ‘ಬಣ್ಣದ ಮನೆ’ ಎಂಬುದು ಯಕ್ಷಗಾನದ ಕಲಾವಿದರನ್ನು ರೂಪಿಸುವ, ಕಲೆಯ ಪರಂಪರೆ ಮತ್ತು ಅನುಭವಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ವಿಶಿಷ್ಟ ಪರಿಕಲ್ಪನೆಯಾಗಿದೆ. ಇದು ಯಕ್ಷಗಾನದ ವಿಶ್ವವಿದ್ಯಾನಿಲಯವಿದ್ದಂತೆ. ಇಲ್ಲಿ ಕಲೆಯ ಬಗ್ಗೆ ಆಳವಾದ ಆಸಕ್ತಿ, ಸೃಜನಶೀಲ ಚಿಂತನೆ ಹಾಗೂ ನಿರಂತರ ಕಲಿಕೆಯ ಮನೋಭಾವದೊಂದಿಗೆ ತೊಡಗಿಸಿಕೊಂಡಾಗ ಉತ್ತಮ ಕಲಾವಿದರಾಗಿ ರೂಪುಗೊಳ್ಳಲು ಸಾಧ್ಯ. ಹಿರಿಯ ಕಲಾವಿದರ ಒಡನಾಟ, ಅವರ ಅನುಭವಗಳ ಅರಿವು ಮತ್ತು ಕಲಾಸಾಧನೆಯ ಹಾದಿಯನ್ನು ತಿಳಿದುಕೊಳ್ಳುವುದು ಯುವ ಕಲಾವಿದರಿಗೆ ಅಮೂಲ್ಯ ಮಾರ್ಗದರ್ಶನವಾಗುತ್ತದೆ. ವಿದ್ಯಾರ್ಥಿಗಳು ಯಕ್ಷಗಾನ ಕಲಾವಿದರ…
