Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಮಣೂರು ಪಡುಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಿಂಡರ್ ಗಾರ್ಟನ್ ವಿಭಾಗದಲ್ಲಿ ವಾರ್ಷಿಕ ಪದವಿ ಪ್ರದಾನ ಸಮಾರಂಭ ಇತ್ತೀಚಿಗೆ  ನೆರವೇರಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಗೀತಾನಂದ ಫೌಂಡೇಶನ್‌ನ ಪ್ರವರ್ತಕರಾದ ಆನಂದ ಸಿ. ಕುಂದರ್ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಜೀವನದಲ್ಲಿ ಶಿಸ್ತಿನೊಂದಿಗೆ ಶಿಕ್ಷಣದ ಮಹತ್ವವನ್ನು ವಿವರಿಸಿದರು. ಮುಖ್ಯ ಭಾಷಣಕಾರರಾಗಿ ವಿವೇಕ ಇಂಗ್ಲಿಷ್ ಮೀಡಿಯಂ ಶಾಲೆಯ ಪ್ರಾಂಶುಪಾಲರಾದ ಪ್ರೀತಿ ರೇಖಾ ಅವರು ಭಾಗವಹಿಸಿ, ವಿದ್ಯಾರ್ಥಿಗಳಿಗೆ ಉತ್ಸಾಹಭರಿತ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕ ವಿವೇಕಾನಂದ ಗಾವಂಕಾರ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಜ್ಯೋತಿ, ವಾಹಿನಿ ಯುವಕ ಸಂಘದ ರಮೇಶ್ ಕುಂದರ್, ಎಸ್‌ಡಿಎಂಸಿ ಅಧ್ಯಕ್ಷ ವಿನಯ್, ಮಾಜಿ ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್, ಪಂಚಾಯತ್ ಮಾಜಿ ಸದಸ್ಯ ಜಯರಾಮ ಶೆಟ್ಟಿ ಹಾಗೂ ಗಿತಾನಂದ ಫೌಂಡೇಶನ್‌ನ ವೈಷ್ಣವಿ ರಕ್ಷಿತ್ ಕುಂದರ್ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಗೌರವಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು…

Read More

ಕುಂದಾಪ್ರ ಡಾಟ್ ಕಾಂ‌ ಸುದ್ದಿ.ಬೈಂದೂರು: ತಾಲೂಕಿನ ನಾವುಂದ ರಾ.ಹೆ-66ರಲ್ಲಿ ಕಾರು ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಅಪಘಾತ ಅಪಘಾತದಲ್ಲಿ ಬೆಂಗಳೂರಿನ ಮಮತಾ (36) ಹಾಗೂ ಧೃತಿಕ (14) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಾನ್ನವಿ (12) ಹಾಗೂ ರಾಘು ( 40) ಸಹಿತ ಮತ್ತಿಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವನ್ನಪ್ಪಿದವರು ಮತ್ತು ಗಾಯಾಳುಗಳ ಕುಟುಂಬ ಸದಸ್ಯರು ಬೆಂಗಳೂರಿನವರಾಗಿದ್ದು, ರಜೆ ನಿಮಿತ್ತ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿ ಅಲ್ಲಿಂದ ಮುರುಡೇಶ್ವರ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ತರಳಿದ ಗಂಗೊಳ್ಳಿ ಎಂ ಎಚ್ ಐ ತುರ್ತು ಸ್ಪಂದನ ತಂಡದ ಎರಡು ಅಂಬುಲೆನ್ಸ್ ಗಳಲ್ಲಿ ಗಾಯಾಳುಗಳನ್ನು ಹಾಗೂ ಶವಗಳನ್ನು ಕುಂದಾಪುರ ಹಾಗೂ ಮಣಿಪಾಲ ಆಸ್ಪತ್ರೆ ಕೊಂಡೊಯ್ಯಲಾಯಿತು. ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ, ಬೈಂದೂರು ವೃತ್ತ ನಿರೀಕ್ಷಕರು, ಠಾಣಾಧಿಕಾರಿಗಳು, ಭೇಟಿ ನೀಡಿದರು. ಘಟನಾ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರಲ್ಲಿ ಕೆಲವರು ಗಾಯಾಳುಗಳನ್ನು ಹಾಗೂ ಶವಸಾಗಾಟ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿ ಸಮ್ಮುಖದಲ್ಲಿ ಸಮಗ್ರ ಭಾರತದ ಸಾಂಸ್ಕೃತಿಕ ಚಿತ್ರಣವು ಜೀವ ಪಡೆದಂತೆ ಕಂಗೊಳಿಸಿದರೆ, ಅಷ್ಟೇ ವಿನೀತರಾದ ಶಿವರಾಜ್ ಕುಮಾರ್ ದಂಪತಿ ವಿನಮ್ರತೆ ತೋರಿದರು. ಇದು ವಿದ್ಯಾಗಿರಿಯ ಕೃಷಿ ಸಿರಿ ಆವರಣದ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಶನಿವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ‘ಆಳ್ವಾಸ್ ಸಂಪ್ರದಾಯ ದಿನ- 2026′ ರ ಝೋಷ್. ಇದರಿಂದ ಪುಳಕಿತರಾದ ಶಿವರಾಜ್ ಕುಮಾರ್, ತಾಳ ಹಿಡಿದು, ‘ಕೋಲು ಮಂಡೆ ಜಂಗಮ ದೇವರು…..’ ಹಾಡಿ, ಹೆಜ್ಜೆ ಹಾಕಿದರು. ತಮ್ಮ ಆರಂಭಿಕ ‘ಆನಂದ್” ಸಿನಿಮಾದ ‘ಟುವ್ವಿ ಟುವ್ವಿ ‘ ಹಾಡಿನಿಂದ ಹಿಡಿದು ಪುನೀತ್ ರಾಜ್ ಕುಮಾರ್ ಅವರ ‘ ಬೊಂಬೆ ಹೇಳುತೈತೆ… ನೀನೆ ರಾಜಕುಮಾರ… ವರೆಗಿನ ಹಾಡುಗಳನ್ನು ಹಾಡಿದರು. ಕಿಕ್ಕಿರಿದ ವಿದ್ಯಾರ್ಥಿ ಸಾಗರವು ಪುನೀತವಾಯಿತು. ಸಾಕ್ಷಾತ್ಕರಿಸಿದ ಡಾ. ಎಂ.ಮೋಹನ ಆಳ್ವ ಖುಷಿ ಪಟ್ಟು, ನಸುನಕ್ಕರು. ಇದಕ್ಕೂ ಮೊದಲು ದೀಪ ಬೆಳಗಿ, ಚೆಂಡೆ ಪರಿಕರ ಬಡಿದು ಕಾರ್ಯಕ್ರಮಕ್ಕೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ವಿಧಾನ ಸಭಾ ಕ್ಷೇತ್ರದ ಜಲ ಜೀವನ್ ಮಿಷನ್ ಕಾಮಗಾರಿಗಳಲ್ಲಿನ ಕಳಪೆ ಗುಣಮಟ್ಟದ ಪೈಪ್‌ಗಳ ಬಳಕೆ, ನೀರಿನ ಮೂಲ ಇಲ್ಲದೇ ಇರುವುದು, ಮನಬಂದಂತೆ ರಸ್ತೆಗಳ ಇಕ್ಕೆಲಗಳನ್ನು ಅಗೆದು ಹಾಕುತ್ತಿರುವುದು, ಗುತ್ತಿಗೆದಾರರು ಹಾಗೂ ಇಲಾಖಾ ಅಭಿಯಂತರರುಗಳು ಶಾಮೀಲಾಗಿರುವ ಕುರಿತು ಕುಂದಾಪುರ ಹಾಗೂ ಬೈಂದೂರು ಶಾಸಕರುಗಳು ಇಲ್ಲಿಯ ತನಕ ಮೌನ ಮುರಿಯದೆ ಇರಲು ಕಾರಣವೇನು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್‌ ಹೆಗ್ಡೆ ಹೇಳಿದರು. ನೀರಿನ ಮೂಲಗಳನ್ನೇ ಗುರುತಿಸದೆ ಮನೆಗಳ ಮುಂಬಾಗ ನಳ್ಳಿ ಅಳವಡಿಸಿರುವುದು ಜನರನ್ನು ದಾರಿ ತಪ್ಪಿಸುವ ಕೆಲಸವಾಗಿದೆ, ಇದರ ಬಗ್ಗೆ ಧ್ವನಿ ಎತ್ತ ಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರುಗಳು ಮೌನಕ್ಕೆ ಶರಣಾಗಿರುವುದು ಹಲವು ಅನುಮಾನ ಕಾರಣವಾಗಿದೆ. ಶಾಸಕರುಗಳು ಇನ್ನಾದರೂ ಮೌನ ಮುರಿದು ಹಗಲು ದರೋಡೆಯಾಗಿರುವ ಜೆಜೆಎಂ ಕಾಮಗಾರಿಗಳ ಕುರಿತು ಉನ್ನತ ಮಟ್ಟದ ತನಿಖೆಗೆ ಸರ್ಕಾರವನ್ನು ಒತ್ತಾಯಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಕೋಟತಟ್ಟುವಿನ ಕರಾವಳಿ ಫ್ರೆಂಡ್ಸ್ ಆಶ್ರಯದಲ್ಲಿ ಐದನೇ ಬಾರಿಗೆ ಲೀಗ್ ಮಾದರಿಯ 90ಗಜಗಳ ಕ್ರಿಕೆಟ್ ಪಂದ್ಯಾಕೂಟ ಕೆ.ಪಿ ಎಲ್ 2026 ಇದೇ ಬರುವ ಎಪ್ರಿಲ್ 19ರಂದು ಕರಾವಳಿ ಮೈದಾನ ಕೋಟತಟ್ಟು ಇಲ್ಲಿ ಆಯೋಜಿಸಿದೆ ಇದರ ಪೋಸ್ಟರನ್ನು ಕೋಟ ಅಮೃತೇಶ್ವರೀ ದೇಗುಲದ ಅಧ್ಯಕ್ಷ ಆನಂದ್ ಸಿ. ಕುಂದರ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ, ಕೋಟತಟ್ಟು ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಸತೀಶ್ ಕುಂದರ್, ಕೋಟ ಸಿ.ಎ. ಬ್ಯಾಂಕ್ ನಿರ್ದೇಶಕ ರಂಜೀತ್ ಕುಮಾರ್, ಕೋಟ ಅಮೃತೇಶ್ವರೀ ದೇಗುಲದ ಟ್ರಸ್ಟಿ ಸುಭಾಷ್ ಶೆಟ್ಟಿ, ಕರಾವಳಿ ಫ್ರೆಂಡ್ಸ್ ರೋಹಿತ್, ರಂಜೀತ್, ಸಂತೋಷ್, ರತ್ನಾಕರ್ ಬಾರಿಕೆರೆ, ವಿಜಯ್ ಪೂಜಾರಿ, ಅವಿನಾಶ್ ಮರಕಾಲ, ಪವನ್ ಕುಂದರ್, ಅಶೋಕ್ ಪಡುಕರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಮಂಗಳೂರಿನಲ್ಲಿ ಹೊಟೇಲ್‌ ಕೆಲಸ ಮಾಡಿಕೊಂಡಿದ್ದ ಹಕ್ಲಾಡಿಯ ನಿವಾಸಿ ರವೀಂದ್ರ (41) ಅವರು ಹಕ್ಲಾಡಿ ಸಮೀಪ ಚಕ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾ. 25ರ ಬೆಳಗ್ಗೆ ಮನೆಯಿಂದ ಅಂಗಡಿಗೆ ಹೋಗಿ ಬರುವುದಾಗಿ ಹೊರಟವರು ಬಳಿಕ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ತಂದೆ ಶ್ರೀಧರ ಚಂದನ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು, ಶುಕ್ರವಾರ ಸಂಜೆ ಅವರ ಶವ ಚಕ್ರಾ ನದಿಯಲ್ಲಿ ಪತ್ತೆಯಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವು ಶುಕ್ರವಾರದಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ವಾಸುದೇವ ಯಡಿಯಾಳ್ ಅವರು ಕಾಲೇಜಿನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ತಮ ತರಬೇತಿ ಶಿಬಿರವಾಗಿರುತ್ತದೆ. ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಭ್ರಮಿಸುವುದುರೊಂದಿಗೆ ಜೀವನದ ಪಾಠವನ್ನು ಕಲಿಯುತ್ತೇವೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ. ಶಾಂತರಾಮ ಪ್ರಭು ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು.ಎಸ್ ಶೆಣೈ ಮತ್ತು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ 1973ನೇ ಬ್ಯಾಚ್ ನ ವೆಂಕಟೇಶ್ ಶೆಣೈ ಆಗಮಿಸಿದ್ದರು. ಕಾಲೇಜಿನ ಆಂತರಿಕ ಗುಣಮಟ್ಟ ಮತ್ತು ಭರವಸೆ ಕೋಶದ ಸಂಯೋಜಕರಾದ ಸತ್ಯನಾರಾಯಣ ಸ್ವಾಗತಿಸಿದರು. ರಸಾಯನ ಶಾಸ್ತ್ರದ ಮುಖ್ಯಸ್ಥೆ ನಿಶಾ ಎಮ್. ವಂದಿಸಿದರು. ಉಪನ್ಯಾಸಕಿಯರಾದ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ಹರ್ಷಿತಾ ತೀರ್ಪುಗಾರರನ್ನು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ತಿಗಳ ಸಮುದಾಯದ ಆರಾಧ್ಯ ಧೈವ್ಯರಾದ ಶ್ರೀ ಅಗ್ನಿಬನ್ನಿರಾಯ ರಂತಹ ಮಹಾನ್ ದಾರ್ಶನಿಕರ ಜೀವನಾದರ್ಶಗಳು ಮನುಕುಲದ ಏಳಿಗೆಗೆ ದಾರಿದೀಪವಾಗಲಿದೆ ಎಂದು ಮಂಗಳೂರು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಪೂರ್ ಹೇಳಿದರು. ಅವರು ಶುಕ್ರವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಅಗ್ನಿ ಬನ್ನಿರಾಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಗ್ನಿ ಬನ್ನಿರಾಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಶ್ರಮ ಜೀವನಕ್ಕೆ ಹೆಸರಾದ ತಿಗಳ ಸಮುದಾಯದವರು ಅಗ್ನಿಬನ್ನಿರಾಯ ಅವರನ್ನು ಸಮಾಜ ಸುಧಾರಕರು ಎಂದು ಆರಾಧಿಸುತ್ತಿದ್ದಾರೆ. ಸುಮಾರು 10, 11 ಹಾಗೂ 12 ನೇ ಶತಮಾನದಲ್ಲಿ ಹಲವಾರು ವಚನಕಾರರು, ಸಮಾಜ ಸುಧಾರಕರು, ದಾರ್ಶನಿಕರು ಜನಿಸಿ, ಸಮಾಜದಲ್ಲಿನ ಲೋಪದೋಷಗಳನ್ನು ಸರಿಪಡಿಸುವುದರೊಂದಿಗೆ ಸಮಸಮಾಜ ನಿರ್ಮಾಣಕ್ಕೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ ಎಂದರು. ಜೀವನದಲ್ಲಿ ಸತ್ಯವನ್ನು ಪ್ರತಿಪಾಧಿಸುತ್ತಿದ್ದ ಅಗ್ನಿಬನ್ನಿರಾಯರ ಮಾರ್ಗವನ್ನು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಪಾಂಡೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಂಡೇಶ್ವರ ಶಾಲೆ ಹಿಂಭಾಗದ ತೋಟದ ಮನೆ ರಸ್ತೆ ಎಂಬಲ್ಲಿ  ಕುಟುಂಬಗಳ ಮಧ್ಯೆ ನಡೆಯುವ ದಾರಿಯ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕೋಟ ಕಂದಾಯ ಅಧಿಕಾರಿ ಮಂಜು ಬಿಲ್ಲವ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದರು. ಈ ಸಂಬಂಧ ಎರಡು ಕುಟುಂಬದ ಪ್ರಮುಖರು ಹಾಜರಿದ್ದು ಅಧಿಕಾರಿಗಳ ಮುಂದೆ ತಮ್ಮ ಅಹವಾಲುಗಳನ್ನು ಮಂಡಿಸಿದರು. ಈ ಬಗ್ಗೆ ಕೋಟ ಹೋಬಳಿ ಕಂದಾಯ ಅಧಿಕಾರಿ ಮಂಜು ಬಿಲ್ಲವ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿ ನಡೆಯುವ ದಾರಿಯನ್ನು ರಸ್ತೆಯಾಗಿಸಿಕೊಳ್ಳಿ ಕಲಹ ಒಳ್ಳೆದಯದಲ್ಲ ಬದಲಾಗಿ ನಿಮ್ಮೊಳಗೆ ಪರಿಹಾರ ಕಂಡುಕೊಳ್ಳಿ ಕಾನೂನಿನ ಮೂಲಕ ಹೊದರೆ ಸಮಸ್ಯೆ ಮತ್ತಷ್ಟು ಜಟಿಲಗೊಳ್ಳುತ್ತದೆ ಎಂದು ಕಿವಿ ಮಾತು ಹೇಳಿದರು. ಈ ಬಗ್ಗೆ ಎರಡು ಕುಟುಂಬಗಳ ಮಧ್ಯೆ ಮಾತುಕತೆ ಮುರಿದು ಬಿದ್ದ ಪರಿಣಾಮ ಸ್ಥಳದಿಂದ ಅಧಿಕಾರಿಗಳು ನಿರ್ಗಮಿಸಿದರು. ಪಾಂಡೇಶ್ವರ ಗ್ರಾಮ ಆಡಳಿತಾಧಿಕಾರಿ ಐರಿನ್ ಶಾಂತಿ ಫೇರೆರಾ, ಸಹಾಯಕ ಶ್ರೀಧರ ಗಾಣಿಗ, ಪಾಂಡೇಶ್ವರ ಪಂಚಾಯತ್ ಮಾಜಿ ಉಪಾಧ್ಯಕ್ಷ ವೈಬಿ ರಾಘವೇಂದ್ರ ಇದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ತಾಲೂಕಿನ 10ರೂ. ವೈದ್ಯರೆಂದೇ ಪ್ರಸಿದ್ದಿ ಪಡೆದ ಕೋಟೇಶ್ವರ ಶಿವಪುರ ಕ್ಲಿನಿಕ್‌ನ ವೈದೈ ಡಾ. ಎಸ್‌.ಪಿ. ಆಚಾರ್ಯ ( ಪದ್ಮನಾಭ ಆಚಾರ್ಯ) (88) ಅವರು ಶುಕ್ರವಾರ ನಿಧನರಾದರು. ನಿರಂತರ ಆರು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಅವರು ಆಯುರ್ವೇದ ವೈದ್ಯಕೀಯದ ಜೊತೆಯಲ್ಲಿ ಪ್ರಕೃತಿಯ ಬಗ್ಗೆ ವಿಶೇಷ ಒಲವು ಹೊಂದಿ ಪರಿಸರ ಜಾಗೃತಿಯನ್ನು ಮಾಡುತ್ತಿದ್ದರು. 1960ರಿಂದ ವೈದ್ಯ ವೃತ್ತಿಯ ಜೊತೆಯಲ್ಲಿ ಮಾನವೀಯ ಸೇವೆಯಲ್ಲಿ ಹೆಸರಾಗಿದ್ದರು. ಕೋಟೇಶ್ವರದಲ್ಲಿ ಶಿವಪುರ ಕ್ಲಿನಿಕ್ ಮೂಲಕ ವೈದ್ಯಕೀಯ ಸೇವೆ ನೀಡುತ್ತಿದ್ದ ಅವರು, ಹೋಮಿಯೋಪಥಿ, ಅಲೋಪಥಿಯಲ್ಲಿ ಅನುಭವ ಹೊಂದಿದ್ದರು. ಸೈಕಲ್‌ನಲ್ಲಿಯೇ ರೋಗಿಗಳ ಮನೆಗೆ ಹೋಗಿ ಚಿಕಿತ್ಸೆ ನೀಡುತ್ತಿದ್ದರು. ಅಂದಿನ ಕಾಲಘಟ್ಟದಲ್ಲಿ ಪ್ರಸೂತಿ ತಜ್ಞರಾಗಿಯೂ ಕಾರ್ಯನಿರ್ವಹಿಸಿದ್ದರು. 30 ವರ್ಷಗಳ ಕಾಲ ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿಯರ ಮನೆಗೆ ತೆರಳಿ ಸುರಕ್ಷಿತವಾಗಿ ಹೆರಿಗೆ ಮಾಡಿಸುತ್ತಿದ್ದರು. ಪರಿಸರದ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದ ಅವರು ದಿನಕ್ಕೊಂದು ಗಿಡ ನೆಟ್ಟು ಪೋಷಿಸುವ ಅಭಿಯಾನ ಮಾಡಿದ್ದರು. ಸರಳತೆಯ ಮೂಲಕವೇ ಜನಜನಿತರಾಗಿದ್ದರು. ಅವರ ಪತ್ನಿ…

Read More