Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ‘ವಚನ ಕಲ್ಯಾಣ’ ಎಂಬ ಅತ್ರಿ (ಒಂಬತ್ತು ಗಂಟೆ) ನಾಟಕವನ್ನು ಸಿದ್ಧಪಡಿಸಿ, ನಾಡಿನಾದ್ಯಂತ ಪ್ರದರ್ಶನ ಮಾಡಲು ಉದ್ದೇಶಿಸಿದ್ದು, ಈ ಸಂಬಂಧ ನುರಿತ ಹಾಗೂ ಆಸಕ್ತ ಯುವಕ ಯುವತಿಯರು, ಅನುಭವಿ ರಂಗ ಕಲಾವಿದರು ಹಾಗೂ ಗಾಯಕರುಗಳಿಂದ ಇಲಾಖೆಯ ವೆಬ್‌ಸೈಟ್ kannadasiri.karnataka.gov.in ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. 18 ರಿಂದ 40 ವರ್ಷದೊಳಗಿನ ರಂಗಶಿಕ್ಷಣದಲ್ಲಿ ತರಬೇತಿ ಪಡೆದ ಹಾಗೂ ನಾಟಕಗಳಲ್ಲಿ ಅಭಿನಯಿಸಿದ ಕಲಾವಿದರಿಗೆ ಪ್ರಥಮ ಆದ್ಯತೆಯನ್ನು ನೀಡಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಮಾರ್ಚ್ 20ರ ಒಳಗಾಗಿ ಸದಸ್ಯ ಕಾರ್ಯದರ್ಶಿ, ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ ಇಲ್ಲಿಗೆ ಮುದ್ದಾಂ ಅಥವಾ ಅಂಚೆಯ ಮೂಲಕ ಅಥವಾ ಇ-ಮೇಲ್ kanakaresearchcentre@gmail.com ಮೂಲಕ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಮೂರು ತಿಂಗಳ ಕಾಲದ ಅವಧಿಯಲ್ಲಿ ಪೂರ್ಣಕಾಲಿಕವಾಗಿ ತರಬೇತಿ ಪ್ರದರ್ಶನಗಳಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿರುತ್ತದೆ. ಮಾಸಿಕ ಗೌರವಧನ ಮತ್ತು ಊಟ-ವಸತಿ ವ್ಯವಸ್ಥೆಯನ್ನು ನೀಡಲಾಗುವುದು. ಹೆಚ್ಚಿನ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕೊರಗ ಸಮುದಾಯದ ವ್ಯಕ್ತಿಯೊಬ್ಬರನ್ನು 30 ವರ್ಷಗಳಿಂದ ಮನೆಯಲ್ಲಿ ಜೀತಕ್ಕೆ ಇಟ್ಟು ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯೊಬ್ಬರನ್ನು ಪೊಲೀಸರು‌ ಬಂಧಿಸಿದ್ದಾರೆ. ಕುಂದಾಪುರದ ಹೆಮ್ಮಾಡಿಯ ಕಬ್ಬೈಲು ನಿವಾಸಿ ಸುಬ್ಬಣ್ಣ ಶೆಟ್ಟಿ ಎಂಬವರು ಸುಮಾರು 30 ವರ್ಷಗಳ ಹಿಂದೆ ಕನ್ಯಾನ ಗ್ರಾಮದ ಕೊರಗ ಸಮುದಾಯದ ನಾಗ (65) ಎಂಬವರನ್ನು ತನ್ನ ಮನೆಗೆ ಕರೆದುಕೊಂಡು ಬಂದು ಕೆಲಸಕ್ಕೆ ಇಟ್ಟುಕೊಂಡಿದ್ದರು. ಸುಬ್ಬಣ್ಣ ಶೆಟ್ಟಿ ಮೃತಪಟ್ಟ ನಂತರ ಅವರ ಮಗಳು ರಜನಿ ಶೆಟ್ಟಿ ಮತ್ತು ಅವರ ಅಳಿಯ ಕರುಣಾಕರ ಶೆಟ್ಟಿ ಎಂಬವರು ನಾಗ ಅವರನ್ನು ಮನೆಯಲ್ಲಿ ದನ ಕಾಯಲು, ತೋಟದ ಕೆಲಸ ಮಾಡಲು ಸೇರಿಸಿ ಕೊಂಡಿದ್ದರು. ಇವರು ನಾಗ ಅವರಿಂದ ದನ, ಎಮ್ಮೆ, ಸೆಗಣಿ ತೆಗೆದು ಗದ್ದೆ ಕೆಲಸ, ಮನೆಯ ಶೌಚಾಲಯ ಸ್ವಚ್ಛತೆ ಮಾಡಿಸುತ್ತಿದ್ದರು. ನಾಗ ಅವರನ್ನು 30 ವರ್ಷಗಳಿಂದ ಬಲವಂತದಿಂದ ಜೀತದಾಳಾಗಿ ಕೆಲಸ ಮಾಡಿಸಿಕೊಂಡಿದ್ದು, ಸರಿಯಾದ ಕೂಲಿ ಕೊಡದೆ ಉಳಿದುಕೊಳ್ಳಲು ಮೂಲಭೂತ ಸೌಕರ್ಯ ಕೊಡದೆ ದನದ ಕೊಟ್ಟಿಗೆಯಲ್ಲಿ ಮಲಗಿಸುತ್ತಿದ್ದರು ಎನ್ನಲಾಗಿದೆ. ದನದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕೊಮೆ ಸಮುದ್ರ ತೀರದಲ್ಲಿರುವ ರೆಸಾರ್ಟಗಳಿಗೆ ಆಗಮಿಸುವ ಪ್ರವಾಸಿಗರಿಂದ ಮಲಿನಗೊಳ್ಳುತ್ತಿರುವ ಹಿನ್ನಲ್ಲೆಯಲ್ಲಿ ತೆಕ್ಕಟ್ಟೆ ಗ್ರಾ.ಪಂ ವ್ಯಾಪ್ತಿಯ ಕೊಮೆ ಭಾಗದ ಗ್ರಾಮಸ್ಥರು ಕೋಟ ಆರಕ್ಷಕ ಠಾಣೆಗೆ ತೆರಳಿ ಆರಕ್ಷಕ ಠಾಣೆಯ ಪಿಎಸ್‌ಐ ಪ್ರವೀಣ್ ಕುಮಾರ್ ದೂರು ನೀಡಿದರು. ಈ ವೇಳೆ ಗ್ರಾಮಸ್ಥರು ಮಾಧ್ಯಮಕ್ಕೆ ಮಾಹಿತಿ ನೀಡಿ ಸಮುದ್ರ ತೀರದಲ್ಲಿ ಪಾರ್ಟಿಗಳನ್ನು ಮಾಡುವುದರ ಮೂಲಕ ಮದ್ಯದ ಬಾಟಲಿಗಳನ್ನು ಹಾಗೂ ಆಹಾರ ಪದಾರ್ಥಗಳನ್ನು ಸಮುದ್ರ ತೀರದಲ್ಲೆ ಎಸೆದು ಪರಿಸರವನ್ನು ಹಾಳುಗೆಡವುತ್ತಿದ್ದಾರೆ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಎಚ್ಚರಿಕೆಯನ್ನು ನೀಡಿದರು. ಈ ಸಂದರ್ಭದಲ್ಲಿ ಪರಿಸರದ ಗ್ರಾಮದ ಗ್ರಾಮಸ್ಥರು ಇದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಹಿರಿಯ ಪತ್ರಕರ್ತರಾದ ಹಾಗೂ ಪ್ರಜಾವಾಣಿ ವರದಿಗಾರರಾಗಿದ್ದ ಶೇಷಗಿರಿ ಭಟ್ ಅವರ ಅಗಲಿಕೆಯನ್ನು ಸ್ಮರಿಸಿ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ನುಡಿನಮನ ಹಾಗೂ ಶ್ರದ್ದಾಂಜಲಿ ಸಭೆಯು ಬುಧವಾರ ಸಾಸ್ತಾನದ ಕೋಸ್ಟಲ್ ಪ್ಯಾರಡೈಸ್ ಮಿನಿ ಸಭಾಂಗಣದಲ್ಲಿ ನಡೆಯಿತು. ಪತ್ರಕರ್ತ ಕೆ.ಸಿ. ರಾಜೇಶ್ ಸಂಸ್ಮರಣೆ ಮಾತನಾಡಿ, ಶೇಷಗಿರಿ ಭಟ್ ಅವರು ಮಿತಭಾಷಿ, ಸರಳ ಸಜ್ಜನಿಕೆಯಿಂದ ಬಾಳಿದವರು. ಪತ್ರಿಕಾ ರಂಗದಲ್ಲಿ ಅವರ ಸೇವೆ ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಸುಪ್ರಸಾದ್ ಶೆಟ್ಟಿ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ, ನಿರ್ದೇಶಕ ಕಮಲಾಕ್ಷ ಹೆಬ್ಬಾರ್, ಮಾಜಿ ತಾ.ಪಂ ಸದಸ್ಯ ಸುಧೀರ್ ಕುಮಾರ್ ಶೆಟ್ಟಿ, ಉಪನ್ಯಾಸಕಿ ಸವಿತಾ ಎರ್ಮಾಳ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಜಿ ಕುರ್ಯ, ರಾಜ್ಯ ಸಮಿತಿ ಸದಸ್ಯ ಆಸ್ಟ್ರೋಮೊಹನ್, ಜಿಲ್ಲಾ ಸಂಘದ ಉಪಾಧ್ಯಕ್ಷ ಪ್ರಭಾಕರ್ ಆಚಾರ್ಯ, ತಾಲೂಕು ಗ್ಯಾರಂಟಿ ಸಮಿತಿಯ ಡಾ.ಸುನಿತಾ ಶೆಟ್ಟಿ, ಉಪನ್ಯಾಸಕರಾದ ಪ್ರಶಾಂತ್ ನೀಲಾವರ, ಉಡುಪಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಬೀದರ್‌ನ ಎಚ್.ಕೆ.ಇ. ಸೊಸೈಟಿಯ ಬಸವೇಶ್ವರ ಶಿಕ್ಷಣ ಮಹಾ ವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿನಿ ಅನುಪಮಾ ಹೊಳ್ಳ ಅವರು ಇಂಗ್ಲೀಷ್, ವಿಜ್ಞಾನ ವಿಭಾಗದ ಬಿ.ಎಡ್‌ನಲ್ಲಿ 8.88 ಎಸ್‌ಜಿಪಿಎ ಶ್ರೇಣಿಗಳಿಸಿ ಕಾಲೇಜಿಗೆ ಪ್ರಥಮ ರ್ಯಾಂಕ್‌ಗಳಿಸಿದ್ದಾರೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ಜಿಲ್ಲೆಯ ಸಾಹಿತಿಗಳು, ಬೌದ್ಧಿಕ ವಲಯದವರು ಹಾಗೂ ಕಾಲೇಜಿನ ಆಡಳಿತ ವರ್ಗದವರು ಅನುಪಮಾ ಹೊಳ್ಳ ಅವರನ್ನು ಅಭಿನಂದಿಸಿದ್ದಾರೆ. ಅನುಪಮ ಹೊಳ್ಳ ಅವರು ರಾಜ್ಯಪ್ರಶಸ್ತಿ ಪುರಸ್ಕೃತ ಸಾಹಿತಿ ವಂಡ್ಸೆ ಗೋಪಾಲಕೃಷ್ಣ ಹೊಳ್ಳ ಹಾಗೂ ಮಾಲಿನಿ ಹೊಳ್ಳ ದಂಪತಿಗಳ ಪುತ್ರಿಯಾಗಿದ್ದು, ಮೂಲತಃ ಉಡುಪಿ ಜಿಲ್ಲೆಯ ಸಾಲಿಗ್ರಾಮದವರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ತೆಕ್ಕೆಟ್ಟೆಯ ಜನಪ್ರಿಯ ಕಾಂಪ್ಲೇಕ್ಸ್‌ನಲ್ಲಿ ಎಸ್‌ಪಿ ಕ್ರಿಯೇಷನ್ ಕ್ಲಬ್‌ನಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ವೀಟ್ ಜುಗಾರಿ ಆಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಪ್ರವೀಣ್‌ ಕುಮಾರ್‌ ಅವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಾದ ಸದಾಶಿವ ದೇವಾಡಿಗ, ಜಯರಾಮ, ರಾಘವೇಂದ್ರ, ಗಣೇಶ, ದಯಾನಂದ, ಪ್ರಭಾಕರ, ಸದಾಶಿವ, ಜಯರಾಜ್‌ ಶೆಟ್ಟಿ, ಆನಂದ, ಹರೀಶ ಎಂಬುರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಅಂದರ್ – ಬಾಹರ್ ಜುಗಾರಿ ಆಟಕ್ಕೆ ಬಳಸಿದ ನಗದು ಹಣ 65,664/ ರೂಪಾಯಿ, ಮೊಬೈಲ್ ಪೋನ್ -10, ಪ್ಲಾಸ್ಟೀಕ್‌ ಚೇರ್‌ಗಳು-31, ದೊಡ್ಡ ರೌಂಡ್ ಟೇಬಲ್ 1, ಸಣ್ಣ ರೌಂಡ್ ಟೇಬಲ್ -1, ಕ್ಲಬ್‌ನಲ್ಲಿದ್ದ ಸಿಸಿ ಕ್ಯಾಮೆರಾ ಡಿವಿಆರ್ -1, ಕ್ಲಬ್‌ನ ಲೆಜ್ಜರ್ -2 ಮತ್ತು ಟಿವಿಎಸ್ ಮೋಟಾರ್ ಸೈಕಲ್ -1ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕೋಟೇಶ್ವರ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎಂ.ಕಾಂ. ವಿದ್ಯಾರ್ಥಿನಿ ರಚನಾ ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2024-25ನೇ ಸಾಲಿನ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್‌ಗಳಿಸಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಅವರು ಜಪ್ತಿಯ ರಾಜೀವ ಶೆಟ್ಟಿ ಮತ್ತು ರತ್ನಾವತಿ ದಂಪತಿಯ ಸುಪುತ್ರಿಯಾಗಿದ್ದು, ಪ್ರಸ್ತುತ ಸರಕಾರಿ ಪ್ರಥಮ ದರ್ಜೆ ಕಾಲೇಜು ತೀರ್ಥಹಳ್ಳಿ ಅಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿನಿಯ ಶೈಕ್ಷಣಿಕ ಸಾಧನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ, ಎಲ್ಲ ಬೋಧಕ-ಬೋಧಕೇತರ ವರ್ಗ, ಸಮಸ್ತ ವಿದ್ಯಾರ್ಥಿಗಳು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಪೋಷಕ ಸಂಘದವರು, ಹಳೆ ವಿದ್ಯಾರ್ಥಿಗಳು ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಂತರಿಕ ದೂರು ಸಮಿತಿಯು ಎಂಬಿಎ  ವಿಭಾಗದ ಸಹಯೋಗದೊಂದಿಗೆ, “ ಲೀಡ್ ಹರ್ ಷಿಪ್: ಸೆಲೆಬ್ರೇಟಿಂಗ್ ವುಮೆನ್ ಲೀಡರ್ಸ್ ” ಎಂಬ ಶೀರ್ಷಿಕೆಯ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದ  ಗೌರವ ಅತಿಥಿಗಳಾಗಿ ಹಿರಿಯ ಭೂವಿಜ್ಞಾನಿ ವಿಂಧ್ಯಾ ಎನ್. ಎಂ., ಹಾಗೂ ಪೂರ್ಣಿಮಾ ಭೋಜರಾಜ, ಗ್ರೇಡೇಡ್ ಕಲಾವಿದರು  ಎ ಐ ಆರ್ ಮತ್ತು ದೂರದರ್ಶನ, ರಾಷ್ಟ್ರಮಟ್ಟದ  ಟೇಬಲ್ ಟೆನ್ನಿಸ್ ಆಟಗಾರ್ತಿ, ಯಶಸ್ವೀ ವಾಣಿಜ್ಯೋದ್ಯಮಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ವಿಂದ್ಯಾ ಅವರು ಮಾತನಾಡಿ, ಮಹಿಳೆಯರು ತಮ್ಮ ದೈನಂದಿನ ಜೀವನದಲ್ಲಿ ನೂರಾರು ಕೆಲಸಗಳ ಗಡಿಬಿಡಿಯಲ್ಲಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಕೂಡ ಸಮಯವಿಲ್ಲದೆ ನೂರಾರು ಕಾಯಿಲೆಗಳಿಗೆ ಒಳಪಡುತ್ತಿದ್ದಾರೆ. ಇದಕ್ಕೆಲ್ಲ ನೈಸರ್ಗಿಕ ಪರಿಹಾರವೆಂದರೆ ಮೊದಲು ಮಹಿಳೆಯರು ತಮ್ಮನ್ನು ತಾವು ಪ್ರೀತಿಸಬೇಕು, ತಮ್ಮ ಆರೋಗ್ಯ ಕಾಪಾಡಿಕೊಂಡು ಸಾಧನೆಗೈದರೆ ಡೊಪೋಮಿನ್ ಎನ್ನುವ ರಾಸಾಯನಿಕ ಬಿಡುಗಡೆಯಾಗಿ ದೈಹಿಕ ಮತ್ತು ಮಾನಸಿಕವಾಗಿ ಇನ್ನೂ ಸದೃಢವಾಗಲು ಇದು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಎಲ್ಲಾ ಉದ್ಯಮದಾರರ 2026-27 ನೇ ಸಾಲಿನ ಉದ್ಯಮ ಪರವಾನಿಗೆ ನವೀಕರಣ ಅವಧಿಯು ಏಪ್ರಿಲ್ 2026ರಿಂದ ಪ್ರಾರಂಭವಾಗಲಿದ್ದು, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ಯಮ ನಡೆಸುತ್ತಿರುವ ಉದ್ಯಮದಾರರು ಉದ್ದಿಮೆ ಪರವಾನಿಗೆ ನವೀಕರಣಕ್ಕೆ ಸಂಬಂಧಿಸಿದಂತೆ ನಿಗದಿತ ದಾಖಲೆ ಸಹಿತ ಆನ್‌ಲೈನ್ ಮೂಲಕ ಅಥವಾ ಪಟ್ಟಣ ಪಂಚಾಯತ್‌ಗೆ ಅರ್ಜಿ ನಮೂನೆ ಹಾಗೂ ದಾಖಲೆ ಸಹಿತ ಶುಲ್ಕ ಪಾವತಿಸಿ ಉದ್ಯಮ ಪರವಾನಿಗೆ ನವೀಕರಿಸಿಕೊಳ್ಳಬಹುದಾಗಿದೆ. ನಿಗದಿತ ಅವಧಿಯಲ್ಲಿ ಉದ್ಯಮ ಪರವಾನಿಗೆ ನವೀಕರಿಸದಿದ್ದಲ್ಲಿ ಅಧಿಸೂಚನೆಯಂತೆ ದಂಡ ಸಹಿತ ಬಾಕಿ ಶುಲ್ಕವನ್ನು ಪಾವತಿಸಬೇಕು. ಈಗಾಗಲೇ ಉದ್ಯಮ ಸ್ಥಗಿತಗೊಳಿಸಿದ್ದಲ್ಲಿ ಮಾರ್ಚ್ ಅಂತ್ಯದೊಳಗೆ ಪಟ್ಟಣ ಪಂಚಾಯತ್‌ಗೆ ಲಿಖಿತವಾಗಿ ಅರ್ಜಿ ಸಲ್ಲಿಸಿ, ದಂಡ ಸಹಿತ ಬಾಕಿ ಶುಲ್ಕ ಪಾವತಿಸಿ ಉದ್ಯಮ ಪರವಾನಿಗೆಯನ್ನು ರದ್ದುಪಡಿಸಿಕೊಳ್ಳಬೇಕು. ತಪ್ಪಿದ್ದಲ್ಲಿ ಸದ್ರಿ ಉದ್ಯಮದಾರರನ್ನು ಪ್ರತಿವರ್ಷ ಬಾಕಿದಾರರೆಂದು ಪರಿಗಣಿಸಿ ಕಾನೂನು ರೀತ್ಯಾ ದಂಡಸಹಿತ ಬಾಕಿ ಶುಲ್ಕ ವಸೂಲಿ ಮಾಡಲು ಕ್ರಮವಹಿಸಲಾಗುವುದು. ಉದ್ಯಮ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಉದ್ಯಮ ನಡೆಸುತ್ತಿದ್ದಲ್ಲಿ ತಕ್ಷಣವೇ ನಿಗದಿತ ದಾಖಲೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: 2026 ಜನವರಿಯಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯೆಟ್ ಪರೀಕ್ಷೆಯ ಗ್ರೂಪ್-01 ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶೇಕಡಾ 13.96 ಫಲಿತಾಂಶ ಬಂದಿದ್ದರೆ, ಆಳ್ವಾಸ್ ಪದವಿ ಕಾಲೇಜಿನ ಒಟ್ಟು 08 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 44.44 ಫಲಿತಾಂಶ ಬಂದಿದ್ದು, ಗ್ರೂಪ್-02 ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶೇಕಡಾ 15.54 ಫಲಿತಾಂಶ ಬಂದಿದ್ದರೆ, ಆಳ್ವಾಸ್ ಪದವಿ ಕಾಲೇಜಿನ ಒಟ್ಟು 06 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 60 ಫಲಿತಾಂಶ ಬಂದಿದ್ದು ಹಾಗೂ ಗ್ರೂಪ್-01 ಮತ್ತು ಗ್ರೂಪ್-02 ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶೇಕಡಾ 9.39 ಫಲಿತಾಂಶ ಬಂದಿದ್ದರೆ, ಆಳ್ವಾಸ್ ಪದವಿ ಕಾಲೇಜಿನ ಒಟ್ಟು 06 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 22 ಫಲಿತಾಂಶ ದಾಖಲಿಸಿದ್ದಾರೆ.2026 ಜನವರಿಯಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬಿ.ಕಾಂ. ವಿದ್ಯಾರ್ಥಿಗಳಾದ ತನ್ವಿ ಬಿ. ಪೂಜಾರಿ, ರೆಹೆನಾಜ್, ಮೇಘನಾ ಪಿ. ದೇವಾಡಿಗ ಹಾಗೂ ವೈಶ್ಣವಿ ಯು.ಕೆ. ಇವರು ಗ್ರೂಪ್-01 ಮತ್ತು ಗ್ರೂಪ್-02 ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತಮ ಫಲಿತಾಂಶದೊಂದಿಗೆ…

Read More