Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಮ್ಮೊಳಗಿನ ಶಕ್ತಿಯನ್ನು ಅರಿಯುವ ತನಕ ಸಾಧನೆ ಸಾಧ್ಯವಾಗುವುದಿಲ್ಲ. ನಮ್ಮ ಶಕ್ತಿ ಅರಿತರೆ ನಮ್ಮ ಗುರಿಯನ್ನು ತಲುಪಬಹುದು ಎಂದು ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಸಚಿತ ನಂದಗೋಪಾಲ್ ಹೇಳಿದರು. ಅವರು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಐಚ್ಛಿಕ ಭಾಷೆ ಇಂಗ್ಲಿಷ್, ಪತ್ರಿಕೋದ್ಯಮ, ಮನಶಾಸ್ತ್ರ ವಿಭಾಗಗಳು ಸೇರಿ ಆಯೋಜಿಸಿದ್ದ ‘ಸ್ವಯಂ ಪ್ರತಿಫಲನ’ ಎಂಬ ಕಾರ್ಯಗಾರದಲ್ಲಿ ಮಾತನಾಡಿ ಜೀವನದಲ್ಲಿ ಅನೇಕ ಬಾರಿ ಸೋಲು ಗೆಲುವು ಎಲ್ಲವನ್ನು ಎದುರಿಸುತ್ತೇವೆ. ಆದರೆ ಹೇಗೆ ನಿಭಾಯಿಸಬೇಕು ಎಂದು ಮೊದಲು ಅರಿತಿರಬೇಕು ಇಲ್ಲವಾದಲ್ಲಿ ಬದುಕನ್ನು ಗೆಲುವಿನ ಹಂತಕ್ಕೆ ಸಾಗಿಸುವುದು ಕಷ್ಟವಾಗಲಿದೆ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಪಿ. ನಾರಾಯಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪ್ರೊ. ಮೀನಾಕ್ಷಿ ಎನ್.ಎಸ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಸುಮಲತಾ ನಾಯ್ಕ್ , ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ರಾಜೇಶ್ವರಿ ಶೆಟ್ಟಿ, ವಿದ್ಯಾರ್ಥಿ ಪ್ರತಿನಿಧಿ ಭಾವನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಯಜುಷಾ ಕಾರ್ಯಕ್ರಮ ನಿರ್ವಹಿಸಿ, ಫಾತಿಮಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕನಕ ಅಧ್ಯಯನ ಪೀಠ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಚೇತನ ಫೌಂಡೇಶನ್ ಕರ್ನಾಟಕ ಇವರ ಸಹಯೋಗದಲ್ಲಿ ನಡೆದ ಧಾರವಾಡ ನುಡಿಸಡಗರ ಕಾರ್ಯಕ್ರಮದಲ್ಲಿ ಕವಿ, ಲೇಖಕ ನಾಯ್ಕನಕಟ್ಟೆ ಕೆ. ಪುಂಡಲೀಕ ನಾಯಕ್ (ಎಡಕ್ಕೆ) ಇವರಿಗೆ ಕರ್ನಾಟಕ ವಿವಿಯ ಕುಲಪತಿ ಪ್ರೋ. ಕೆ. ಬಿ. ಗುಡಸಿ ಅವರು ಬೇಂದ್ರೆ ನುಡಿಸಿರಿ ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದ ವೇದಿಕೆಯಲ್ಲಿ ಪ್ರೋ. ನಿಜಲಿಂಗಪ್ಪ ಮಟ್ಟಿಹಾಳ, ಧಾರವಾಡದ ಕನ್ನಡ ಅಧ್ಯಯನ ಸಂಸ್ಥೆ ಕ.ವಿ.ವಿ ಮುಖ್ಯಸ್ಥ ಡಾ. ಅರ್. ಸಿ. ಹಿರೇಮಠ, ಗದಗ. ಡಾ.ವಿ.ಬಿ. ಪ್ರತಿಷ್ಠಾನದ ಅಧ್ಯಕ್ಷ ಡಾ. ವಿ. ವಿ ಹಿರೇಮಠ, ಹಿರಿಯ ಸಾಹಿತಿ ಸುರೇಶ ಕೋರಕೊಪ್ಪ ಬೆಳಗಾವಿ, ಧಾರವಾಡದ ಕನಕ ಅಧ್ಯಯನ ಪೀಠದ ಸಂಯೋಜಕರು ಡಾ. ಹನುಮ ಗೌಡ, ಚೇತನ ಫೌಂಡೇಶನ್ ಅಧ್ಯಕ್ಷ ಹಾಗೂ ಧಾರವಾಡ ನುಡಿಸಡಗರ ಸಂಯೋಜಕ ಚಂದ್ರಶೇಖರ ಮಾಡಲಗೇರಿ, ಧಾರವಾಡ ನುಡಿಸಡಗರ ಸಂಚಾಲಕ ಪೀರಸಾಬ ನದಾಫ್ ಇದ್ದರು .

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಜು.19: ಉಪ ನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಬೆಂಗಳೂರು ಇವರ ಸಹಯೋಗದಲ್ಲಿ ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಉಡುಪಿ ಜಿಲ್ಲಾ ಕಲಾಯಾತ್ರೆ 2022 ಉದ್ಘಾಟನಾ ಸಮಾರಂಭ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯಕ್ ಮಾತನಾಡಿ, ಕಲಾ ಮಾಧ್ಯಮ ವಿಷಯವನ್ನು ಸರಳವಾಗಿ ಅರ್ಥಪೂರ್ಣವಾಗಿ ತಿಳಿಸುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಶಿಕ್ಷಕರು ತೊಡಗಿಸಿಕೊಂಡು ವಿಷಯ ಜ್ಞಾನವನ್ನು ಹೆಚ್ಚಿಸಿಕೊಳ್ಳಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಕರುಣಾಕರ ಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೈಂದೂರು ವಲಯ್ಯಾಧ್ಯಕ್ಷ ಶೇಖರ ಪೂಜಾರಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸಂಜಯ ದೇವಾಡಿಗ, ಸಮೂಹ ಸಂಪನ್ಮೂಲ ವ್ಯಕ್ತಿ ಚಂದ್ರನಾರಾಯಣ ಬಿಲ್ಲವ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಮೌನೇಶ್ ಕಲ್ಲಡ್ಕ, ಸಂತೋಷ್ ಹಾಸನ, ಜಲಜಾಕ್ಷಿ ಸುಳ್ಯ ತರಬೇತಿ ನೀಡಿದರು. ಶಾಲಾ ಪದವೀಧರ ಮುಖ್ಯೋಪಾಧ್ಯಾಯರಾದ ಜನಾರ್ಧನ್ ದೇವಾಡಿಗ ಸರ್ವರನ್ನು ಸ್ವಾಗತಿಸಿದರು. ಇಂಡಿಯಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಜು.19: ಕಳೆದ ಎರಡು ತಿಂಗಳ ಅವಧಿಯಲ್ಲಿ ಕ್ಷಿಪ್ರಗತಿಯಲ್ಲಿ ಪ್ರಕರಣಗಳನ್ನು ಭೇದಿಸಿದ ವೃತ್ತ ನಿರೀಕ್ಷಕ ಸಂತೋಷ್ ಆನಂದ್ ಕಾಯ್ಕಿಣಿ ಮತ್ತು ಉಪನಿರೀಕ್ಷಕ ಪವನ್ ನಾಯಕ್ ಅವರನ್ನು ಬೈಂದೂರು ಬಂಟರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಬಂಟರ ಸಂಘದ ಅಧ್ಯಕ್ಷ ನಾಕಟ್ಟೆ ಜಗನ್ನಾಥ ಶೆಟ್ಟಿ ಸನ್ಮಾನಿಸಿ ಮಾತನಾಡಿ ಎರಡು ತಿಂಗಳಲ್ಲಿ ಈ ಭಾಗದಲ್ಲಿ ನಡೆದ ಸರಣಿ ಕಳ್ಳತನ ಹಾಗೂ ಇತ್ತೀಚಿನ ಹೇನಬೇರು ಕೊಲೆ ಪ್ರಕರಣದ ಆರೋಪಿಗಳನ್ನು ಕೇವಲ 24 ಗಂಟೆಗಳಲ್ಲಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಶಿರೂರು ನಿರ್ಗದ್ದೆ ಹತ್ತಿರ ಬಸ್ಸಿನಲ್ಲಿದ್ದ ಪ್ರಯಾಣಿಕರ ಚಿನ್ನವನ್ನು ಕಳ್ಳತನ ಮಾಡಿದ ಅಪರಾಧಿಗಳನ್ನು 15 ದಿನದೊಳಗೆ ಬಂಧಿಸುವಲ್ಲಿ ಸಫಲರಾಗಿದ್ದಾರೆ. ಇಂತಹ ಸಮಾಜ ಘಾತುಕ ಖದೀಮರ ನಿದ್ದೆಗೆಡಿಸಿದ ಬೈಂದೂರು ಪೋಲೀಸ್ ತಂಡದ ಕಾರ್ಯ ಶ್ಲಾಘನೀಯ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ವೃತ್ತ ನೀರಿಕ್ಷಕ ಸಂತೋಷ್ ಆನಂದ್ ಕಾಯ್ಕಿಣಿ, ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಮತ್ತು ಪ್ರೋತ್ಸಾಹವೇ ಈ ಮೂರು ಸವಾಲಿನ ಪ್ರಕರಣಗಳನ್ನು ಪತ್ತೆಹಚ್ಚಲು ಸಹಕಾರಿಯಾಯಿತು. ಠಾಣೆಯ ಎಲ್ಲಾ ಸಿಬ್ಬಂದಿಗಳು ಕೂಡ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ವಿದ್ಯಾರ್ಥಿ ದೆಸೆಯಿಂದಲೇ ಕಾನೂನಿನ ಅರಿವು, ಮಕ್ಕಳ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳುವುದು ಬಹುಮುಖ್ಯವಾಗಿದೆ. ಸಮಸ್ಯೆಗಳು ಎದುರಾದಾಗ ಚೈಲ್ಡ್ಲೈನ್ ಸಹಾಯವಾಣಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಕಾರ ಪಡೆಯುವ ಅವಕಾಶ ಮಕ್ಕಳಿಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಶರ್ಮಿಳಾ ಎಸ್. ಅವರು ಹೇಳಿದರು. ಅವರು ಸೋಮವಾರ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ ಜಿಲ್ಲಾ ವಕೀಲರ ಸಂಘ, ಇಂಡಿಯನ್ ಸೀನಿಯರ್ ಚೆಂಚರ್ಸ್ ಬೈಂದೂರು, ಬೈಂದೂರು ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಹಾಗೂ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದೊಂದಿಗೆ ಮಾದರಿ ಶಾಲೆಯಲ್ಲಿ ಆಯೋಜಿಸಲಾದ ಕಾನೂನು ಅರಿವು ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ ರಕ್ತ ಚಂದನ ಗಿಡ ನೆಟ್ಟು ಉದ್ಘಾಟಿಸಿದರು. ಮಕ್ಕಳಿಗೆ ಸಂವಿಧಾನಾತ್ಮಕವಾಗಿ ಹಲವು ಹಕ್ಕುಗಳನ್ನು ನೀಡಲಾಗಿದ್ದು ಅದರ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ವಿದ್ಯಾರ್ಥಿಗಳು ಪಠ್ಯದ ಓದಿನ ಜೊತೆಗೆ ಪಠ್ಯೇತರ ಚಟುವಟಿಗಳಲ್ಲಿ ತೊಡಗಿಕೊಳ್ಳುವುದು ಬೌದ್ಧಿಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಹೇನಬೇರು ರಸ್ತೆಯಲ್ಲಿ ಕಾರು ಸಹಿತ ಆನಂದ ದೇವಾಡಿಗ ಎಂಬುವವರನ್ನು ಸುಟ್ಟು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಕುಂದಾಪುರ ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಧನೇಶ್ ಮುಗಳಿ ಅವರು ಅಗಸ್ಟ್ 1ರ ತನಕ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದ್ದಾರೆ. ಪ್ರಾಸಿಕ್ಯೂಶನ್ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ವರ್ಷಾಶ್ರೀ ವಾದಿಸಿದ್ದರು. ಹೇನಬೇರು ರಸ್ತೆ ಬಳಿ ಜುಲೈ 12ರಂದು ನಡೆದ ಘಟನೆಗೆ ಜಾಡು ಹಿಡಿದು ಹೊರಟ ಪೊಲೀಸರು ಜುಲೈ 14ರ ಬೆಳಿಗ್ಗೆ ಪ್ರಕರಣದ ಪ್ರಮುಖ ಆರೋಪಿಗಳಾದ ಕಾರ್ಕಳದ ಮಾಳ ನಿವಾಸಿ ಸದಾನಂದ ಶೇರಿಗಾರ್ (52), ಹಿರ್ಗಾನ ಶಿವನಗರದ ಶಿಲ್ಪಾ ಪೂಜಾರಿ (30) ಹಾಗೂ ಇವರಿಗೆ ಪರಾರಿಯಾಗಲು ಸಹಕಾರ ನೀಡಿದ ಕಾರ್ಕಳ ಸೂಡ ನಿವಾಸಿಗಳಾದ ಸತೀಶ್ ದೇವಾಡಿಗ (49), ನಿತಿನ್ ದೇವಾಡಿಗ (40) ಅವರನ್ನು ಬಂಧಿಸಿತ್ತು. ಜೂ.14 ಹಾಗೂ 15ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಪ್ರಮುಖ ಆರೋಪಿಗಳಿಬ್ಬರ ಕಸ್ಟಡಿ ಅವಧಿ ಸೋಮವಾರಕ್ಕೆ ಮುಗಿದಿದ್ದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಯುಎಇ: ಯತಿಶ್ರೇಷ್ಠ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 351ನೇ ಆರಾಧನಾ ಮಹೋತ್ಸವವು ಅರಬ್ ರಾಷ್ಟ್ರದಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ. ಕೆಲವು ಮನೆಗಳಲ್ಲಿ ಸೀಮಿತವಾಗಿ ನಡೆಯುತ್ತಿದ್ದ ಆರಾಧನಾ ಮಹೋತ್ಸವವನ್ನು ಅಗಸ್ಟ್ 14ರ ಭಾನುವಾರ ಯುಎಇ ಅಜ್ಮಾನ್ ಇಂಡಿಯನ್ ಅಸೋಸಿಯೇಷನ್’ನಲ್ಲಿ ಆಯೋಜಿಸಲಾಗಿದೆ. ಧಾರ್ಮಿಕ ವಿಧಿಯಂತೆ ಆರಾಧನೆಯನ್ನು ಪೂರ್ತಿ ದಿವಸ ಅಚ್ಚುಕಟ್ಟಾಗಿ ನಡೆಸಿಕೊಡುವುದಕ್ಕೆ ಶ್ರೀಮಠದ ವತಿಯಿಂದ ದತ್ತಾತ್ರೆಯ ಜೋಶಿ ಗುರುಗಳು ಅವರ ಶಿಷ್ಯ ವೃಂದದ ಜೊತೆಗೆ ಆಗಮಿಸಲಿದ್ದಾರೆ. ರಾಘವೇಂದ್ರ ಗುರುಗಳ ಆರಾಧನಾ ಮಹೋತ್ಸವದ ವಿಶೇಷತೆಯನ್ನು ಹಾಗೂ ಸನಾತನ ಧರ್ಮದ ವಿಚಾರಗಳನ್ನು ಮನಮುಟ್ಟುವಂತೆ ತಿಳಿಸಿಕೊಡಲು ಶತಾವಧಾನಿ ಆರ್. ಗಣೇಶ್ ಅವರ ಪ್ರಿಯ ಶಿಷ್ಯರಾದ ಅರ್ಜುನ್ ಭಾರದ್ವಾಜ್ ಅವರು ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಯರ ಅಭಿಲಾಷೆಯಂತೆ ಆರಾಧನಾ ಮಹೋತ್ಸವವನ್ನು ಯುಎಇ ಯಲ್ಲಿ ಮೊದಲ ಬಾರಿಗೆ ನಡೆಸಿಕೊಡಲು ಪ್ರಮುಖ ಪಾತ್ರವಹಿಸುತ್ತಿರುವ ವಿಜಯ್, ಸದನ್ ದಾಸ್ ಹಾಗೂ ಮಧು ಇವರುಗಳ ಭಕ್ತಿಶ್ರದ್ಧೆಗೆ ಯುಎಇ ಗುರುರಾಯರ ಭಕ್ತ ವೃಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಕ್ತಿ ಶ್ರದ್ಧೆಯಿಂದ ನಡೆಯುತ್ತಿರುವ ಆರಾಧನಾ ಮಹೋತ್ಸವಕ್ಕೆ ರಾಯರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟದ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ಶುಕ್ರವಾರ ಉಪ್ಪುಂದ ಮಾತೃಶ್ರೀ ಸಭಾಭವನಧಲ್ಲಿ ಜರುಗಿತು. ಸಂಘದ ಅಧ್ಯಕ್ಷರಾದ ವೆಂಕಟರಮಣ ಖಾರ್ವಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ಮೀನುಗಾರಿಕಾ ಋತುವು ಸಂಪದ್ಭರಿತವಾಗಿರಲೆಂದು ಹಾರೈಸಿ ಸಂಘದ ಪ್ರತಿಯೊಬ್ಬ ಸದಸ್ಯರು ಸಂಘದ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸಿ, ಕಾಲಕಾಲಕ್ಕೆ ಸೂಕ್ತ ಸಲಹೆಗಳನ್ನು ನೀಡುವುದರ ಮುಖೇನ ಸಂಘದ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ತಿಳಿಸಿದರು. ಇದೇ ಸಂಧರ್ಭ ಅಕಾಲಿಕ ಮರಣ ಹೊಂದಿದ ಸಂಘದ ಸದಸ್ಯರಾದ ನಾಗರಾಜ ಮೊಗವೀರ, ಜಯರಾಮ ಖಾರ್ವಿ, ರಾಮ ಖಾರ್ವಿ, ಪುರುಷೋತ್ತಮ ಖಾರ್ವಿ ಇವರ ವಾರೀಸುದಾರರಿಗೆ ತಲಾ ರೂ.1,95,000/- ಮೀನುಗಾರಿಕೆ ಸಂಧರ್ಭ ಮೃತರಾದ ಸಂಘದ ಸದಸ್ಯರಾದ ರಾಮದಾಸ ಖಾರ್ವಿ, ಇವರ ವಾರೀಸುದಾರರಿಗೆ ರೂ.1,50,000/- ಮತ್ತು ಪಟ್ಟೆಬಲೆ ದೋಣಿ ಸದಸ್ಯರಾದ ಚರಣ್ ರಾಜ್ ಖಾರ್ವಿ ಮತ್ತು ಅಣ್ಣಪ್ಪ ಮೊಗವೀರ, ಇವರ ವಾರೀಸುದಾರರಿಗೆ ತಲಾ ರೂ.50,000/- ಮರಣೋತ್ತರ ನಿಧಿ ಚೆಕ್ ಹಾಗೂ ಅರೆಹಾಡಿ ಹಿಂದು ರುದ್ರಭೂಮಿ ನಿರ್ವಹಣಾ ಸಮಿತಿ ಅಭಿವೃದ್ದಿಗೆ ರೂ.50,000/-…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ನಾಗುರಿನ ಸಂದೀಪನ್ ಶಾಲೆಯ ಮುಖ್ಯೋಪಾಧ್ಯಾಯ ವಿಶ್ವೇಶ್ವರ ಅಡಿಗ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಪಾಲನಾಧಿಕಾರಿ ಡಾ. ಸರೋಜ ಎಂ. ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರೆಡ ಕ್ರಾಸ್ ಘಟಕದ ವತಿಯಿಂದ “ಯಶಸ್ಸಿನಲ್ಲಿ ಗುರುವಿನ ಪಾತ್ರ” ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮುಂಬೈಯ ಇಸ್ಕಾನ್ ಸಂಸ್ಥೆಯ ಲೋಕಭವನ ಮಾತಾಜಿ ಆಗಮಿಸಿ ವ್ಯಕ್ತಿಯ ಜೀವನದಲ್ಲಿ ಒಬ್ಬ ಗುರುವಿನ ಪಾತ್ರ ಯಾವ ರೀತಿಯಲ್ಲಿ ಬಹುಮುಖ್ಯ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಶುಭಕರಾಚಾರಿ ಉಪಸ್ಥಿತರಿದ್ದರು. ಕಾಲೇಜಿನ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಪ್ರೊ.ಸತ್ಯನಾರಾಯಣ ಸ್ವಾಗತಿಸಿದರು.ಕಾಲೇಜಿನ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಾಕಾರಿಣಿ ವಿದ್ಯಾರಾಣಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಈ ಸಂದರ್ಭದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು.

Read More