Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರೋಗವನ್ನು ಪರಿಹಾರ ಮಾಡುವ ದೇವರು ಕೋಟಿಲಿಂಗೇಶ್ವರ. ಈ ಕಾರಣದಿಂದಲೇ 2 ವರ್ಷಗಳ ಹಿಂದೆ ನಡೆಯಬೇಕಾಗಿದ್ದ ಬ್ರಹ್ಮಕಲಶೋತ್ಸವ ಕಾರ‍್ಯಗಳನ್ನು ಆ ಭಗವಂತನೇ ಬದಿಗಿಟ್ಟು ಇದೀಗ ಕೋವಿಡ್ ರೋಗವನ್ನು ಜಗತ್ತಿನಿಂದ ತೊಲಗಿಸಿ ತನಗೆ ಬೇಕಾದ ಎಲ್ಲಾ ಕೆಲಸಗಳನ್ನು ಮಾಡಿಸಿಕೊಂಡು ಬ್ರಹ್ಮಕಲಶದ ಹೊಸ್ತಿಲಿನಲ್ಲಿದ್ದಾನೆ ಎಂದು ಪಲಿಮಾರು ಮಠಾಧೀಶ ವಿದ್ಯಾಧೀಶತೀರ್ಥ ಶ್ರೀಪಾದರು ನುಡಿದರು. ಕೋಟೇಶ್ವರದ ಮಹಾತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಾಲಯದಲ್ಲಿ 62 ವರ್ಷಗಳ ನಂತರ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಕಾರ‍್ಯಕ್ರಮದ ಧಾರ್ಮಿಕ ಸಭಾ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಹಿರಿಯ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ ಕುಂದರ್, ಉಡುಪಿ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ವಿದ್ವಾನ್ ಶ್ರೀಪತಿ ಉಪಾಧ್ಯಾಯ, ಜೀರ್ಣೋದ್ಧಾರ ಸಮಿತಿ ಗೌರವಧ್ಯಕ್ಷ ನೇರಂಬಳ್ಳಿ ಕೃಷ್ಣಮೂರ್ತಿ ರಾವ್, ಬ್ರಹ್ಮಕಲಶೋತ್ಸವ ಸಮಿತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಪ್ತ ಮೋಕ್ಷಪ್ರದ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದ ಮಹಾತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಾಲಯದಲ್ಲಿ ೬೭ ವರ್ಷಗಳ ನಂತರ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಕಾರ‍್ಯಕ್ರಮದ ಸಂದರ್ಭ ಸುಮಾರು ೭೩ ಅಡಿ ಎತ್ತರದ ನೂತನ ಧ್ವಜಸ್ಥಂಭ ಪ್ರತಿಷ್ಠಾಪನೆಯನ್ನು ದೇವಳದ ಪ್ರಧಾನ ತಂತ್ರಿ ಪ್ರಸನ್ನ ಕುಮಾರ್ ಐತಾಳ್ ಇವರ ನೇತೃತ್ವದಲ್ಲಿ ಗುರುವಾರ ಕುಂಭ ಲಗ್ನದಲ್ಲಿ ಪ್ರತಿಷ್ಠಾಪಿಸಲಾಯಿತು. ಪುಣ್ಯಾಹವಾಚನ, ಧ್ವಜಪ್ರತಿಷ್ಠಾ ಕಲಶ ಸ್ಥಾಪನೆ, ಪ್ರತಿಷ್ಠಾ ಹೋಮ, ಕಲಶಾಭಿಷೇಕ ಪೂಜಾ, ಗಣಪತಿ ಪ್ರಾರ್ಥನೆ, ಶ್ರೀ ದೇವರ ಪ್ರಾರ್ಥನೆ, ಧ್ವಜಾರೋಹಣ, ಶತರುದ್ರ ಕಲಶ ಸ್ಥಾಪನೆ, ಶತರುದ್ರ ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಬಲಿ ಉತ್ಸವ, ರಾತ್ರಿ ಗಣಪತಿ ಪ್ರಾರ್ಥನೆ, ಯಾಗಶಾಲೆಯಲ್ಲಿ ಪುಣ್ಯಾಹವಾಚನ, ಮಂಟಪ ಸಂಸ್ಕಾರ, ಅಗ್ನಿಜನನ ಹೋಮ, ದಿಶಾ ಹೋಮ, ರಜ್ಜು ಬಂಧನ, ಅಸ್ತ್ರ ಕಲಶ ಸ್ಥಾಪನೆ, ಬಿಂಬ ಶುದ್ದಿ ಕಲಶ ಸ್ಥಾಪನೆ, ಭೇರಿತಾಡನ, ಕೌತುಕ ಬಂಧನ, ದೊಡ್ಡ ರಂಗಪೂಜೆ, ಪುಷ್ಪ ರಥೋತ್ಸವ, ಪನ್ನಗ ವಾಹನೋತ್ಸವ ಇನ್ನಿತರ ಧಾರ್ಮಿಕ ಕಾರ‍್ಯಕ್ರಮಗಳು ಜರುಗಿದವು. ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಸಿ.ಎ ಅಂತಿಮ ಪರೀಕ್ಷೆ ಪರೀಕ್ಷೆಯಲ್ಲಿ ಕುಂದಾಪುರ ಕೋಡಿಯ ಶ್ರುತಿ ತೇರ್ಗಡೆಯಗಿದ್ದಾರೆ. ಕೋಡಿ ಹಳೆ ಅಳಿವೆಯ ಬಾಬು ಪೂಜಾರಿ ಹಾಗೂ ಜಯಂತಿ ದಂಪತಿಗಳ ಪುತ್ರಿಯಾದ ಶ್ರುತಿ ಯಾವುದೇ ಕೋಚಿಂಗ್ ಪಡೆಯದೇ, ಸ್ವ-ಅಧ್ಯಯನದ ಮಾಡಿದ್ದರು. ಸಿಎ -ಸಿಪಿಟಿ & ಸಿಎ ಇಂಟರ್ನ್ ಗ್ರೂಪ್-1 ಮೊದಲ ಪ್ರಯತ್ನದಲ್ಲಿ, ಸಿಎ ಇಂಟರ್ನ್ ಗ್ರೂಪ್-2 ಮೂರನೇ ಪ್ರಯತ್ನದಲ್ಲಿ ಹಾಗೂ ಸಿಎ ಫೈನಲ್ ಗ್ರೂಪ್-1, ಗ್ರೂಪ್-1 ಎರಡನೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದಾರೆ. ಅವರು ಸಿಎ ಶಾಂತಾರಾಮ ನಾಯಕ್ ಅವರ ಬಳಿ ಆರ್ಟಿಕಲ್‌ಶಿಪ್ ಪೂರೈಸಿದ್ದರು. ► ಸಿ.ಎ ಪರೀಕ್ಷೆಯಲ್ಲಿ ಕುಂದಾಪುರ ಶಿಕ್ಷ ಪ್ರಭಾ ಅಕಾಡೆಮಿ ವಿದ್ಯಾರ್ಥಿಗಳ ಸಾಧನೆ – https://kundapraa.com/?p=57339 .

Read More

ಕುಂದಾಪ್ರ ಡಾಟ್ ಕಂ ಸುದ್ದಿ.ಕೋಟ: ಈ ದೇಶದ ಪ್ರಮುಖ ಆಸ್ತಿ ಕೃಷಿ ಮತ್ತು ಋಷಿ ಪರಂಪರೆ ಅದನ್ನು ಎಂದು ಮರೆಯಬಾರದು ಎಂದು ಪಾಂಡೇಶ್ವರ ರಕ್ತೇಶ್ವರಿ ದೇವಸ್ಥಾನ ಧರ್ಮದರ್ಶಿ ಕೆ. ವಿ ರಮೇಶ್ ರಾವ್ ಹೇಳಿದ್ದಾರೆ. ಪಂಚವರ್ಣ ಯುವಕ ಮಂಡಲ ಕೋಟ ಇದರ ನೇತ್ರತ್ವದಲ್ಲಿ ರೈತಧ್ವನಿ ಸಂಘ ಕೋಟ, ಗಿಳಿಯಾರು ಯುವಕ ಮಂಡಲ, ಮಣೂರು ಫ್ರೆಂಡ್ಸ್, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಗೀತಾನಂದ ಫೌಂಡೇಶನ್ ಮಣೂರು ಇವರುಗಳ ಸಹಯೋಗದಲ್ಲಿ ಬುಧವಾರ 13 ನೇ ಆವೃತಿಯ ತಿಂಗಳ ಸರಣಿ ಕಾರ್ಯಕ್ರಮ ಸಾಧಕ ಕೃಷಿಕನ ಗೌರವಿಸುವ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೃಷಿಕ ಕಾರ್ಯನಿರ್ವಹಿಸಿದರೆ ಮಾತ್ರ ನಮ್ಮ ಜೀವನ ನಡೆಯಲು ಸಾಧ್ಯವಿದೆ ಇಲ್ಲವಾದಲ್ಲಿ ಆಧುನಿಕ ಜಗತ್ತು ಪ್ಲಾಸ್ಟಿಕ್ ಅನ್ನ ಬಳಕೆ ಮಾಡುವ ಸ್ಥಿತಿ ಸೃಷ್ಠಿಯಾಗಬಹುದು. ಆದರೆ ಅಂತಹ ರೈತನ ಗೋಳು ಇಂದಿನ ಸರಕಾರ ಕೇಳದ ಸ್ಥಿತಿ ನಿರ್ಮಾಗೊಳಿಸಿದೆ.ಹೀಗಾದರೆ ಕೃಷಿ ಉಳಿಯಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.ರೈತ ಸಮುದಾಯ ಯಾವುದೇ ಬೆಳೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ರೋಟರಿ ಕ್ಲಬ್ ಗಂಗೊಳ್ಳಿ ಪೊಲೀಸ್ ಠಾಣೆಗೆ ಕಂಪ್ಯೂಟರ್ ಕೊಡುಗೆಯಾಗಿ ನೀಡಲಾಯಿತು. ಗುರುವಾರ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಗಂಗೊಳ್ಳಿ ಪೊಲೀಸ್ ಠಾಣಾ ಉಪನಿರೀಕ್ಷಕ ನಂಜಾ ನಾಯ್ಕ್ ಅವರಿಗೆ ಕಂಪ್ಯೂಟರ್ ಹಸ್ತಾಂತರಿಸಿ ಮಾತನಾಡಿದ ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ ಎಂ.ಜಿ., ತ್ವರಿತ ಹಾಗೂ ಸ್ನೇಹ ಪರವಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಗಂಗೊಳ್ಳಿ ಠಾಣೆಯ ಅಗತ್ಯತೆಯನ್ನು ಮನಗಂಡು ರೋಟರಿ ಕ್ಲಬ್ ವತಿಯಿಂದ ಈ ಕೊಡುಗೆಯನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು. ರೋಟರಿ ಜಿಲ್ಲೆ ೩೧೮೨ರ ಝೋನಲ್ ಲೆಫ್ಟಿನೆಂಟ್ ಕೆ.ರಾಮನಾಥ ನಾಯಕ್, ರೋಟರಿ ಸದಸ್ಯರಾದ ಲಿಫ್ಟನ್ ಒಲಿವೇರಾ, ಪ್ರವೀಣ್, ಠಾಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 1970ರಲ್ಲಿ ಭಂಡಾರ್‌ಕಾರ‍್ಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ ಲತಾ ಮಂಗೇಶ್ಕರ್ ಅವರಿಗೆ ಅಭಿಮಾನದಿಂದ ಪತ್ರ ಬರೆದಿದ್ದರು. ’ಲತಾ’ ಅವರು ಶೆಣೈಯವರ ಸಂಗೀತಾಭಿಮಾನಕ್ಕೆ ಸಂತೋಷಗೊಂಡು ಪತ್ರದೊಂದಿಗೆ ಸಹಿ ಹೊಂದಿದ್ದ ತಮ್ಮ ಫೋಟೋ ಸಹ ಕಳುಹಿಸಿದ್ದರು. ಕುಂದಾಪುರದ ಶ್ರೀ ಗಣೇಶ್ ನೋವೆಲ್ಟಿಸ್‌ನ ಮಾಲಕರಾದ ಕೆ. ಜನಾರ್ಧನ ಶೆಣೈ ಹಲವು ಪ್ರಖ್ಯಾತ ಸಂಗೀತಗಾರರ ಪತ್ರ ಮತ್ತು ಛಾಯಾಚಿತ್ರ ಹೊಂದಿದ್ದು, ಲತಾ ಮಂಗೇಶ್ಕರ್ ಅವರ ಪತ್ರ ಮತ್ತು ಸಹಿ ಹಾಕಿದ ಫೋಟೋ ಐವತ್ತೆರಡು ವರ್ಷಗಳಿಂದ ಕಾಪಾಡಿಕೊಂಡು ಇಟ್ಟಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಫೆ.10: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ವಿಕಲಚೇತನರಿಗೆ ಆಧಾರ ಸ್ವ-ಉದ್ಯೋಗ ಯೋಜನೆಯಡಿ ಲಾಭದಾಯಕ ಸ್ವ-ಉದ್ಯೋಗ ಕೈಗೊಳ್ಳಲು 1 ಲಕ್ಷ ರೂ. ವರೆಗೆ ಸಾಲ ಸೌಲಭ್ಯ ಒದಗಿಸಲು ಅರ್ಹ ಪರಿಶಿಷ್ಟ ಜಾತಿಯವರಿಗೆ ಶೇಕಡ 50 ರಷ್ಟು ಬ್ಯಾಂಕ್ ಸಾಲ ಮತ್ತು ಶೇಕಡ 50 ರಷ್ಟು ಸಬ್ಸಿಡಿ ಒದಗಿಸಲಾಗುವುದು. ಬಿ.ಪಿ.ಎಲ್ ಕಾರ್ಡ್ ಹೊಂದಿರುವ, 18 ರಿಂದ 55 ವರ್ಷದೊಳಗಿನ ವಿಕಲಚೇತನರು ಫೆಬ್ರವರಿ 16 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಿ ಬ್ಲಾಕ್, ಜಿಲ್ಲಾ ಪಂಚಾಯತ್ ವಿಭಾಗ, ರಜತಾದ್ರಿ, ಮಣಿಪಾಲ ಇಲಾಖೆಯ ದೂರವಾಣಿ ಸಂಖ್ಯೆ: 0820-2574810 / 811 ಅನ್ನು ಸಂಪರ್ಕಿಸುವAತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗುಜ್ಜಾಡಿ ಗ್ರಾಪಂ ವ್ಯಾಪ್ತಿಯ ಐದು ಕೊರಗ ಕುಟುಂಬಗಳಿಗೆ ಈ ಹಿಂದಿನ ಆರ್ಥಿಕ ವರ್ಷಗಳಲ್ಲಿ ಬೇಡಿಕೆಯಾಧಾರಿತವಾಗಿ ಅನುದಾನ ನೀಡುತ್ತಿದ್ದು ಮುಂದಿನ ಆರ್ಥಿಕ ವರ್ಷದಲ್ಲೂ ಕೊರಗ ಕುಟುಂಬಗಳ ಅಭಿವೃದ್ಧಿ ಕುರಿತು ಅನುದಾನವನ್ನು ಮೀಸಲಿಡಲಾಗುವುದು. ಕೊರಗ ಕುಟುಂಬದ ಎಲ್ಲಾ ಫಲಾನುಭವಿಗಳ ಸರ್ವತೋಮುಖ ಅಭಿವೃದ್ಧಿಗೆ ಗ್ರಾಮ ಪಂಚಾಯತ್ ಸಿದ್ಧವಿದ್ದು, ಯಾವುದೇ ಗೊಂದಲಗಳಿಗೆ ಆಸ್ಪದ ನೀಡುವುದಿಲ್ಲ ಎಂದು ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಮುನಾ ಪೂಜಾರಿ ಹೇಳಿದರು. ಗುಜ್ಜಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮಂಗಳವಾರ ನಡೆದ ಗುಜ್ಜಾಡಿ ಗ್ರಾಮ ಪಂಚಾಯತ್‌ನ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೊರಗ ಕುಟುಂಬಗಳಿಗೆ ಯಾವುದೇ ಅನುದಾನ ಸಿಗುತ್ತಿಲ್ಲ ಮತ್ತು ಅನುದಾನದ ಸಮರ್ಪಕ ಬಳಕೆಯಾಗುತ್ತಿಲ್ಲ. ಗ್ರಾಪಂ.ನ ಶೇ.೨೫ರ ಅನುದಾನದ ದುರ್ಬಳಕೆಯಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ಕೊರಗ ಕುಟುಂಬಗಳಿಗೆ ಮೀಸಲಿಟ್ಟ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡಲಾಗಿದೆ ಎಂದರು. ಗ್ರಾಪಂ ವತಿಯಿಂದ ೫ ಕೊರಗ ಕುಟುಂಬಗಳಿಗೆ ಸಿಗುವ ಸವಲತ್ತುಗಳು ಹಾಗೂ ಅನುದಾನದ ಮಾಹಿತಿ ನೀಡಿದ ಗ್ರಾಮ ಪಂಚಾಯತ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಫೆ.8: ತೋಟಗಾರಿಕಾ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ರೈತರ ಹಾಗೂ ಸಾರ್ವಜನಿಕರ ಬೇಡಿಕೆ ಆಧಾರದ ಮೇಲೆ ವಿವಿಧ ತೋಟಗಾರಿಕೆ ಸಸಿ ಗಿಡಗಳನ್ನು ಉತ್ಪಾದಿಸಿ, ಇಲಾಖಾ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಉಡುಪಿ ತಾಲೂಕಿನ ಶಿವಳ್ಳಿ, ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ, ಕುಂದಾಪುರ ತಾಲೂಕಿನ ಕುಂಭಾಶಿ ಹಾಗೂ ಕೆದೂರು ಮತ್ತು ಕಾರ್ಕಳ ತಾಲೂಕಿನ ರಾಮಸಮುದ್ರ ಹಾಗೂ ಕುಕ್ಕಂದೂರು ತೋಟಗಾರಿಕಾ ಕ್ಷೇತ್ರಗಳಲ್ಲಿ ಉತ್ತಮ ಗುಣಮಟ್ಟದ ಅಡಿಕೆ (20 ರೂ.), ಕಸಿ ಗೇರು (32 ರೂ.), ಕಾಳುಮೆಣಸು (11 ರೂ.), ತೆಂಗು (70 ರೂ.) ಹಾಗೂ ಮಲ್ಲಿಗೆ ಗಿಡಗಳನ್ನು ಉತ್ಪಾದಿಸಲಾಗುತ್ತಿದ್ದು, ಗಿಡಗಳನ್ನು ಖರೀದಿಸಲು ಸಂಬAಧಪಟ್ಟ ತೋಟಗಾರಿಕಾ ಕ್ಷೇತ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ಶಿವಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿ ಕಾಳುಮೆಣಸು, ನಿಂಬೆ, ಪುನರ್ಪುಳಿ, ಲವಂಗ, ಜಾಯಿಕಾಯಿ ಹಾಗೂ ಇತರೆ ಅಲಂಕಾರಿಕ ಗಿಡಗಳು ಮತ್ತು ಕಾರ್ಕಳದ ರಾಮಸಮುದ್ರ ತೋಟಗಾರಿಕಾ ಕ್ಷೇತ್ರದಲ್ಲಿ ಅಡಿಕೆ, ಕಸಿಗೇರು, ಗಿಡಗಳು ಲಭ್ಯವಿದ್ದು, ಸಹಾಯಕ ತೋಟಗಾರಿಕೆ ನಿರ್ದೇಶಕ ವರುಣ ಕೆ.ಜೆ ಮೊ.ನಂ: 7892326323, ಬ್ರಹ್ಮಾವರದ ವಾರಂಬಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ನಾಗೂರು ಉರ್ದು ಹಿ.ಪ್ರಾ.ಶಾಲೆಯ ಸಹಶಿಕ್ಷಕ ಭಾಸ್ಕರ ಬಾಡ ಅವರು ಕನಾ೯ಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಭಾಸ್ಕರ ಬಾಡ ಅವರು ಶಟಲ್ ಬ್ಯಾಡ್ಮಿಂಟನ್ ನ ಸಿಂಗಲ್ಸ್ ವಿಭಾಗದಲ್ಲಿ ಪ್ರಥಮ ಹಾಗೂ ಡಬಲ್ಸ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

Read More