ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಹೆಮ್ಮಾಡಿ ಗ್ರಾಮದ ಜಾಲಾಡಿ ಅಂಗನವಾಡಿ ಕೇಂದ್ರಕ್ಕೆ ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ಶುದ್ಧ ಕುಡಿಯುವ ನೀರಿನ ಫಿಲ್ಟರ್ ಮತ್ತು ಮಾಸ್ಕ್‌ನ್ನು ಕೊಡುಗೆಯಾಗಿ ನೀಡಲಾಯಿತು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ ಎಂ.ಜಿ ಅವರು ವಾಟರ್ ಫಿಲ್ಟರ್ ಮತ್ತು ಮಾಸ್ಕ್‌ನ್ನು ಅಂಗನವಾಡಿ ಕೇಂದ್ರದ ಶಿಕ್ಷಕಿ ಶಶಿಕಲಾ ಅವರಿಗೆ ಹಸ್ತಾಂತರಿಸಿದರು. ರೋಟರಿ ಜೋನಲ್ ಲೆಫ್ಟಿನೆಂಟ್ ಕೆ.ರಾಮನಾಥ ನಾಯಕ್, ಕಾರ್ಯದರ್ಶಿ ನಾರಾಯಣ ಇ.ನಾಯ್ಕ್, ಮಹಾವಿಷ್ಣು ಯುವಕ ಮಂಡಲದ ಅಧ್ಯಕ್ಷ ಶ್ರೀಕಾಂತ ಆಚಾರ್, ಸ್ಥಾಪಕ ಅಧ್ಯಕ್ಷ ಚಂದ್ರ ನಾಯ್ಕ್, ನರಸಿಂಹ ಗಾಣಿಗ ಹರೆಗೋಡು, ಲಕ್ಷ್ಮಣ ದೇವಾಡಿಗ, ಮಕ್ಕಳ ಪೋಷಕರು ಮತ್ತಿತರರು ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಒಂದು ಸಮುದಾಯದ ಹಿತರಕ್ಷಣೆಗಾಗಿ ಸಂಬಂಧಪಟ್ಟ ಎಲ್ಲರೂ ಒಮ್ಮನಸ್ಸಿನಿಂದ ಕೆಲಸವನ್ನು ಮಾಡಬೇಕು. ಸಮಗ್ರ ಪರಿಶ್ರಮದಿಂದಲೇ ಸಮುದಾಯದ ಹಿತ ರಕ್ಷಣೆ ಸಾಧ್ಯ ಎಂದು ಬಿಲ್ಲವ ಸಮುದಾಯದ ಹಿರಿಯರಾದ ಮುತ್ತ ಕುಂದರ್ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಪಂಜುರ್ಲಿ ದೈವಸ್ಥಾನದ ವಠಾರದಲ್ಲಿ ನಡೆದ ಬಿಲ್ಲವರ ಹಿತರಕ್ಷಣಾ ವೇದಿಕೆಯ ಪ್ರಥಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀನಿವಾಸ ಜತ್ತನ್ ಮಾತನಾಡಿ, ಸಂಸ್ಥೆಗಳು ಸಮುದಾಯದ ಕೆಳವರ್ಗದ ಜನರನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡು ಅವರಲ್ಲಿ ಜಾಗೃತಿಯನ್ನು ಮೂಡಿಸಿ ಸಮುದಾಯದ ಒಟ್ಟಾರೆ ಅಭಿವೃದ್ಧಿಗಾಗಿ ದುಡಿಯಬೇಕು ಎಂದು ಹೇಳಿದರು. ಈ ಸಭೆಯಲ್ಲಿ 2021-22ನೇ ಸಾಲಿನ ಸಮಿತಿಯನ್ನು ರಚಿಸಲಾಯಿತು ಅಧ್ಯಕ್ಷರಾಗಿ ಜಿ. ಗೋಪಾಲ ಪೂಜಾರಿ ಆಯ್ಕೆಯಾದರು ಉಪಾಧ್ಯಕ್ಷರಾಗಿ ಜಿ. ಕೆ.ವೆಂಕಟೇಶ ಕೊಡೇರಿ ಮನೆ, ಕಾರ್ಯದರ್ಶಿಯಾಗಿ ಲಕ್ಷ್ಮಣ ಪೂಜಾರಿ ಜಿ ಎ. ಆರ್, ಜೊತೆ ಕಾರ್ಯದರ್ಶಿಯಾಗಿ ಅನಿಲ ಪೂಜಾರಿ ಖಜಾಂಜಿಯಾಗಿ ಮಂಜುರಾಜ್ ಗಂಗೊಳ್ಳಿ ಆಯ್ಕೆಯಾದರು. ಕಾರ್ಯಕಾರಿ ಮಂಡಳಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಈ ವರ್ಷದ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯು 2019ರಲ್ಲಿ ಮೊದಲ ಆವೃತ್ತಿಯಾಗಿ ಬಂದ ಅನುಪಮಾ ಪ್ರಸಾದ್ ಕಾಸರಗೊಡು ಅವರ ‘ಪಕ್ಕಿಹಳ್ಳದ ಹಾದಿಗುಂಟ’ ಕಾದಂಬರಿಗೆ ದೊರಕಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಈಗಾಗಲೇ ತಮ್ಮ ಕತೆಗಳ ಮೂಲಕ ಪ್ರಸಿದ್ಧರಾಗುರುವ ಅನುಪಮಾ ಪ್ರಸಾದ್ ಅವರ ಚೊಚ್ಚಲ ಕಾದಂಬರಿ ಇದಾಗಿದೆ. ಕನ್ನಡದ ಪ್ರಮುಖ ಲೇಖಕರಾದ ಓ. ಎಲ್. ನಾಗಭೂಷಣ ಸ್ವಾಮಿ, ದೇವು ಪತ್ತಾರ್, ಮತ್ತು ನರೇಂದ್ರ ರೈ ದೇರ್ಲರವರು ನಿರ್ನಾಯಕರಾಗಿ ಸಹಕರಿಸಿರುತ್ತಾರೆ. ಪ್ರಶಸ್ತಿಯು ಹದಿನೈದು ಸಾವಿರರೂಪಾಯಿ ನಗದಿನೊಂದಿಗೆ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾದ ಅನುಪಮಾ ಪ್ರಸಾದ್ ಬಾಲ್ಯದಲ್ಲಿಯೇ ದಕ್ಷಿಣ ಕನ್ನಡದ ಉಜಿರೆಗೆ ಬಂದು ಅಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮುಗಿಸಿ, ಗಡಿನಾಡು ಕಾಸರಗೋಡಿನಲ್ಲಿ ತಮ್ಮ ವೈದ್ಯ ವೃತ್ತಿಯ ಪತಿಯೊಂದಿಗೆ ನೆಲೆಸಿದ್ದಾರೆ. ತಮ್ಮ ಸಾಹಿತ್ಯ ಕೃಷಿಯನ್ನು ಕಥಾರಚನೆಯ ಮೂಲಕ ಆರಂಭಿಸಿದರು. ಕನ್ನಡದ ದಿನಪತ್ರಿಕೆಗಳಾದ ಪ್ರಜಾವಾಣಿ, ವಿಜಯವಾಣಿ ಇವರ ಕಥೆಗಳು ಪ್ರಕಟವಾಗಿವೆ. ಚೇತನಾ, ಕರವೀರದಗಿಡ, ದೂರತೀರ, ಜೋಗತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಕೆಗಾ೯ಲ್ ಗ್ರಾಮದ ಉದ್ಯೋಗ ಖಾತ್ರಿ ಕೂಲಿಕಾರರ ಸಭೆ ನಡೆಯಿತು ಕೃಷಿಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾಯ೯ದಶಿ೯ ವೆಂಕಟೇಶ್ ಕೋಣಿ ಉದ್ಘಾಟಿಸಿ ಮಾತನಾಡಿ, ನರೇಗಾ ಕೂಲಿಕಾರರಿಗೆ ಬೇಡಿಕೆ ಆಧಾರದಲ್ಲಿ ಈ ಕೂಡಲೇ ಕೆಲಸ ಕೊಡಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು .ಇಲ್ಲವಾದರೆ ಆಗಸ್ಟ್ 9ರಂದು ಕೂಲಿಕಾರರ ಸಂಘದ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಮುತ್ತಿಗೆ ಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ಸರಕಾರವನ್ನು ಎಚ್ಚರಿಸಿದರು. ಮುಖಂಡರಾದ ನಾಗರತ್ನ ನಾಡ, ವೀಣಾ ಭಂಡಾರಿ ,ಜಯಂತಿ, ಸಾಕು, ಶ್ರೀಮತಿ, ಸುಶೀಲ, ನೇತ್ರಾವತಿ, ನಾಗರತ್ನ ಮೊದಲಾದವರು ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಸಕಾಲ ಯೋಜನೆಯಡಿಯ ವಿಳಂಬ ರಹಿತ ಅರ್ಜಿ ವಿಲೇವಾರಿಯಲ್ಲಿ ಉಡುಪಿ ಜಿಲ್ಲೆಯು ಜುಲೈ ಮಾಹೆಯಲ್ಲಿಯೇ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಮುಂದಿನ ದಿನಗಳಲ್ಲಿಯೂ ಉತ್ತಮವಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ಪ್ರಥಮ ಸ್ಥಾನ ಹೊಂದಬೇಕು ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅಧಿಕಾರಿಗಳಿಗೆ ತಿಳಿಸಿದರು. ಅವರು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಸಕಾಲ ಯೋಜನೆಯ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಕಾಲ ಯೋಜನೆಯು ನಾಗರಿಕರಿಗೆ ಸರಕಾರದ ಸೇವೆಯನ್ನು ನಿಗದಿತ ಕಾಲಾವಧಿಯಲ್ಲಿ ಒದಗಿಸುವ ಪ್ರಮುಖ ಯೋಜನೆಯಲ್ಲಿ ಒಂದಾಗಿದ್ದು, ಸಾರ್ವಜನಿಕರು ಸರಕಾರದ 101 ವಿವಿಧ ಇಲಾಖೆಗಳಲ್ಲಿ 1,112 ಸೇವೆಗಳಿಗೆ ನಿಗದಿತ ಪ್ರಮಾಣದಲ್ಲಿ ಅರ್ಜಿ ಸಲ್ಲಿಸಿ, ಸೇವೆಯ ಪ್ರಯೋಜನೆವನ್ನು ಪಡೆದುಕೊಳ್ಳಬಹುದಾಗಿದೆ ಎಂದರು. ಸಾರ್ವಜನಿಕರು ಸಕಾಲದಡಿಯಲ್ಲಿ ನಿಗದಿತ ಅರ್ಜಿಯನ್ನು ಸಲ್ಲಿಸಿದಾಗ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿದಾಗ ಶೀಘ್ರದಲ್ಲಿಯೇ ಅರ್ಜಿಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ. ಎಂದ ಅವರು ಅಧಿಕಾರಿಗಳು ನಿಗದಿತ ಕಾಲಾವಧಿಯಲ್ಲಿ ಅವುಗಳನ್ನು ತಡವಿಲ್ಲದೇ ವಿಲೇವಾರಿ ಮಾಡಬೇಕು ಎಂದರು. ವಿವಿಧ ಸೇವೆಗಳನ್ನು ಪಡೆಯಲು ನಾಗರಿಕರು ಸಲ್ಲಿಸುವ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಯಡ್ತಾಡಿ ಯುವವಾಹಿನಿ ಘಟಕದಿಂದ ಆಸಾಡಿಯಂಗ್ ಒಂದ್ ದಿನ ಹಳಿ ಹಂಬ್ಲ್ ಕಾರ್ಯಕ್ರಮ ನಡೆಯಿತು. ನಾವೆಲ್ಲ ಎಷ್ಟೆಷ್ಟೋ ಹಳೆ ನೆನಪುಗಳನ್ನು ಮರೆಯುತ್ತಾ ಕೆಲಸದ ಜಂಜಾಟದಲ್ಲಿ ಸಿಲುಕಿದ್ದೇವೆ. ಹಿರಿಯರು ಕೂಡಿ ಸಂಭ್ರಮಿಸುತ್ತಿದ್ದ ರೀತಿ ರಿವಾಜುಗಳನ್ನು ಮೂಲೆ ಗುಂಪಾಗಿರಿಸಿದ್ದೇವೆ. ನಮ್ಮ ಸಂಸ್ಕೃತಿ ಆಚರಣೆಗಳು ನಮಗೆ ತಿಳಿಯದೆ ಮೌನವಾಗಿ ಜೀವನ ಸಾಗಿಸುತ್ತಿದ್ದೆವೆ. ಈ ಬದುಕು ಅಲ್ಪ ಅನಿಸಿದರೂ ಸಂಭ್ರಮಿಸುವ ಸಂಭ್ರಮ ನಮ್ಮಲಿಲ್ಲ. ಮುಂದಿನ ಯುವ ಮನಸ್ಸುಗಳಿಗೆ ಇದನ್ನು ತಲುಪಿಸಿ ಪೂರ್ವಜರ ಆಚಾರ ವಿಚಾರಗಳನ್ನು ಕೊಡುಗೆಗಳನ್ನು ತಿಳಿಸುವ ಜವಬ್ದಾರಿ ನಮ್ಮ ಮೇಲಿರುವುದು ಸುಳ್ಳಲ್ಲ ಈ ಉದ್ದೇಶವಿಟ್ಟುಕೊಂಡು ಯುವವಾಹಿನಿ ರಿ. ಯಡ್ತಾಡಿ ಘಟಕ ಹಳೆ ಹಂಬ್ಲ ಎನ್ನುವ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. 64ಖಾದ್ಯಗಳ ವಿಶೇಷ ತಿನಿಸು ಯುವ ವಾಹಿನಿ ಸದಸ್ಯರು ತಮ್ಮ ತಮ್ಮ ಮನೆಯಲ್ಲಿ ತಯಾರಿಸಿ ಒಟ್ಟು64 ತಿಂಡಿ-ತಿನಿಸು-ಪದಾರ್ಥಗಳು ಎಲ್ಲರ ಗಮನ ಸೆಳೆಯಿತು. ಹಳೆ ಕಾಲದಲ್ಲಿ ಮನೆಯಲ್ಲಿ ಮಾಡುತ್ತಿದ್ದ ದಾಸನ್ ಸಪ್ಪಿನ್ ಹಿಟ್, ಪತ್ರೋಡಿ,ಹೊರಳಿ ಬಜ್ಜಿ,ಕ್ಯಾನಿಗೆಂಡಿ ಹಿಟ್,ನುಗ್ಗಿ ಸೊಪಪ್ಪಿನ್ ಒಗ್ರಣಿ, ಬಾಳಿ ದಿಂಡಿನ್ ಪಲ್ಯ,ಶೂಂಠಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉತ್ತಮ ಶಿಕ್ಷಕರು ಸಮಾಜದ ಆಸ್ತಿ ಶಿಕ್ಷಕರು ತಮ್ಮ ಕೆಲಸದಿಂದ ಶಶಕ್ತ ಸಮಾಜ ನಿರ್ಮಾಣಕ್ಕೆ ಕಾರಣರಾಗುತ್ತಾರೆ ಅಂತಹ ಶಿಕ್ಷಕರ ಸೇವೆಯನ್ನು ಗುರುತಿಸುವುದು ನಮ್ಮೆಲ್ಲರ ಹೊಣೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ. ಎಂ. ಮುಂದಿನಮನಿ ತಿಳಿಸಿದರು. ಅವರು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ ) ಬೆಂಗಳೂರು- ಬೈಂದೂರು ತಾಲೂಕು ಘಟಕ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆ ಮಯ್ಯಾಡಿಯಲ್ಲಿ ನಡೆದ ಗುರು ಕುಟುಂಬ ಸನ್ಮಾನ – ಶಾಲಾ ಕೈತೋಟಕ್ಕೆ ಗಿಡ ಸಮರ್ಪಣೆ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು. ಮೇ, ಜೂನ್, ಜುಲೈ ತಿಂಗಳಲ್ಲಿ ನಿವೃತ್ತರಾದ ಜಯಂತಗೆ ಕೆ. ಎ. ಮುಖ್ಯೋಪಾಧ್ಯಾಯರು ಸ. ಹಿ. ಪ್ರಾ ಶಾಲೆ ಕೆರಾಡಿ. ವಾಸುದೇವ ಎಚ್ ಸ. ಹಿ. ಪ್ರಾ. ಶಾಲೆ ಕೋಟೆಬಾಗಿಲು. ವಿದ್ಯಾ ಲತಾ ಹೆಗ್ಗಡೆ ಸ. ಕಿ. ಪ್ರಾ. ಶಾಲೆ. ಶಿಕ್ಷಕಿ ಶೀಲಾವತಿ ಸ. ಕಿ. ಪ್ರಾ. ಶಾಲೆ ಕೊಡಪಾಡಿ, ವೆಂಕಟರಮಣ ಶಾಸ್ತ್ರಿ ಸ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಯುನೈಟೆಡ್ ಕಿಂಗ್‌ಡಂನ ಮಧ್ಯಪ್ರಾಂತದ ಡೆನ್ಬಿಯಲ್ಲಿ ಆಲ್ ಕೌಂಟಿ ಕನ್ನಡ ಅಸೋಸಿಯೇಶನ್ ಆಶ್ರಯದಲ್ಲಿ ಭಾನುವಾರ ನಡೆದ ಕನ್ನಡಿಗರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ನೈಋತ್ಯ ಇಂಗ್ಲೆಂಡ್ ತಂಡ ಜಯಶಾಲಿಯಾಯಿತು. ಸೀಮಿತ ಓವರುಗಳ ಈ ಸ್ಪರ್ಧೆಯಲ್ಲಿ ಸ್ಕಾಟ್ಲೆಂಡ್, ಐರ್ಲೆಂಡ್, ವೇಲ್ಸ್, ಆಗ್ನೇಯ ಇಂಗ್ಲೆಂಡ್, ನೈಋತ್ಯ ಇಂಗ್ಲೆಂಡ್, ಆಂಗ್ಲಿಕನ್ ಇಂಗ್ಲೆಂಡ್, ಮಿಡ್ಲ್ಯಾಂಡ್ಸ್‌ನ ಕನ್ನಡಿಗರ ತಂಡಗಳು ಸ್ಪರ್ಧಿಸಿದ್ದುವು. ವಿಜೇತ ತಂಡವು ಸೆಮಿ ಫೈನಲ್‌ನಲ್ಲಿ ಮಿಡ್ಲ್ಯಾಂಡ್ಸ್ ತಂಡವನ್ನು ಮತ್ತು ಫೈನಲ್‌ನಲ್ಲಿ ಆಂಗ್ಲಿಕನ್ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ವಿಜೇತ ತಂಡದಲ್ಲಿ ಕುಂದಾಪುರ ಮೂಲದ ಪರೀಕ್ಷಿತ್ ಶೆಟ್ಟಿ ಮತ್ತು ಯೋಗೀಂದ್ರ ಮರವಂತೆ ಇದ್ದರು. ಪರೀಕ್ಷಿತ್ ಶೆಟ್ಟಿ ನೈಋತ್ಯ ಇಂಗ್ಲೆಂಡ್‌ನ ಬ್ರಿಸ್ಟಲ್‌ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ ಮತ್ತು ಯೋಗೀಂದ್ರ ಮರವಂತೆ ಏರ್‌ಬಸ್ ವಿಮಾನ ತಯಾರಿ ಕಂಪನಿಯಲ್ಲಿ ತಂತ್ರಜ್ಞ ಆಗಿದ್ದಾರೆ. ಪರೀಕ್ಷಿತ್ ಶೆಟ್ಟಿ ಪರಿಣಿತ ಯುವ ಆಲ್‌ರೌಂಡರ್. ಎಲ್ಲ ಪಂದ್ಯಗಳ ಬ್ಯಾಟಿಂಗ್, ಬೌಲಿಂಗ್, ಪೀಲ್ಡಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಅವರು ಪಂದ್ಯ ಶ್ರೇಷ್ಠ ಆಟಗಾರ ಮತ್ತು ಅತ್ಯುತ್ತಮ ದಾಂಡಿಗ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಡೀ ದೇಶವನ್ನು ವ್ಯಾಪಿಸಿರುವ ಕೊರೋನಾ ಮಹಾಮಾರಿ ದುಡಿಯುವ ಜನರಿಗೆ ಆದಾಯವೇ ಇಲ್ಲದಂತೆ ಮಾಡಿದೆ. ಇಂತಹ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾನವೀಯತೆ ಇಲ್ಲದೇ ಪೋಷಕರನ್ನು ಪೀಡಿಸಿ ಶುಲ್ಕ ವಸೂಲಾತಿ ಮಾಡುತ್ತಿರುವುದು ಖಂಡನೀಯ ಎಂದು ಡಿವೈಎಫ್‌ಐ ಉಪಾಧ್ಯಕ್ಷ ಸುರೇಶ್ ಕಲ್ಲಾಗರ ಹೇಳಿದರು. ಅವರು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್‌ಎಫ್‌ಐ) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‌ಐ) ಕುಂದಾಪುರ ತಾಲೂಕು ಸಮಿತಿ ನೇತೃತ್ವದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ದುಪ್ಪಟ್ಟು ಶುಲ್ಕ ವಸೂಲಾತಿಯನ್ನು ಖಂಡಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕ ವಸೂಲಾತಿಯ ನೆಪದಲ್ಲಿ ಪೋಷಕರಿಗೆ ದೊಡ್ಡ ರೀತಿಯಲ್ಲಿ ಹಿಂಸೆ ಕೊಡುತ್ತಿದೆ. ಬಹುತೇಕ ಶಾಲಾ ಕಾಲೇಜುಗಳಲ್ಲಿ ಡೊನೇಶನ್ ಹಣ ಕೊಡದಿದ್ದರೆ ಆನ್‌ಲೈನ್ ತರಗತಿಯನ್ನು ಸ್ಥಗಿತ ಮಾಡುತ್ತೇವೆ ಎಂದು ಬೆದರಿಸುತ್ತಿದ್ದಾರೆ. ಸಂವಿಧಾನ ನಮಗೆ ಶಿಕ್ಷಣದ ಹಕ್ಕನ್ನು ನೀಡಿದೆ. ಆದರೆ ಸಂವಿಧಾನಕ್ಕೆ ವಿರುದ್ದವಾಗಿ ಸರ್ಕಾರದ ಆಶಯಗಳಿಗೆ, ಶಿಕ್ಷಣ ಇಲಾಖೆಯ ಸುತ್ತೋಲೆಗಳಿಗೆ ವಿರುದ್ದವಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಸಹಾಯಕ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ನಿತ್ಯಾನಂದ ಅವರನ್ನು ಸಿಬ್ಬಂದಿಗಳ ಪರವಾಗಿ ಬೀಳ್ಕೊಡಲಾಯಿತು. ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಠಾಣೆಯ ಇನ್ಸ್‌ಪೆಕ್ಟರ್ ನಂಜಪ್ಪ ಅವರು ಸಿಬ್ಬಂದಿಗಳ ಪರವಾಗಿ ನಿತ್ಯಾನಂದ ಅವರನ್ನು ಗೌರವಿಸಿ ಬೀಳ್ಕೊಟ್ಟರು. ಪೊಲೀಸ್ ಇಲಾಖೆಯಲ್ಲಿ ಒಟ್ಟು 30 ವರ್ಷ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಕಳೆದ ೪ ವರ್ಷಗಳಿಂದ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಸಹಾಯಕ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ನಿತ್ಯಾನಂದ ಅವರ ಸೇವೆಯನ್ನು ಸ್ಮರಿಸಿಕೊಂಡ ಉಪನಿರೀಕ್ಷಕ ವಿಜಯ ಅಮೀನ್, ಠಾಣೆಯ ಸಿಬ್ಬಂದಿಗಳಾದ ಸುರೇಂದ್ರ ಮತ್ತು ದಿನೇಶ, ಕೆಎನ್‌ಡಿ ಸಿಬ್ಬಂದಿ ಜಯರಾಜ್ ಅವರು ವಯೋನಿವೃತ್ತಿ ಹೊಂದಿದ ನಿತ್ಯಾನಂದ ಅವರನ್ನು ಅಭಿನಂದಿಸಿದರು. ಶಾರದಾ ನಿತ್ಯಾನಂದ, ಠಾಣೆಯ ಸಿಬ್ಬಂದಿಗಳು, ಕೆಎನ್‌ಡಿ ಸಿಬ್ಬಂದಿಗಳು, ನಿವೃತ್ತ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಠಾಣೆಯ ಸಿಬ್ಬಂದಿ ಸುರೇಂದ್ರ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
