Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಕೊಲ್ಲೂರು: ತಾಲೂಕಿನ ವಂಡ್ಸೆ ಸಮೀಪದ ಇಡೂರು ಕುಜ್ಞಾಡಿ ಎಂಬಲ್ಲಿ ಹಾರ್ಡ್‌ವೇರ್ ಅಂಗಡಿಯೊಂದಕ್ಕೆ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ತಗಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಘಟನೆಯ ವಿವರ: ಇಡೂರು ಕುಜ್ಞಾಡಿಯ ಶಾಲೆಯ ಎದುರಿಗಿರುವ ಪಟೇಲ್ ಕಾಂಪ್ಲೆಕ್ಸ್‌ನಲ್ಲಿ ಸರ್ವೋತ್ತಮ ಶೆಟ್ಟಿ ಮತ್ತು ಸಹೋದರರಿಗೆ ಸೇರಿದ ಹಾರ್ಡ್‌ವೇರ್ ಅಂಗಡಿಯನ್ನು ಎಂದಿನಂತೆ ಸಂಜೆ 5:30ರ ವೇಳೆಗೆ ಮುಚ್ಚಿ ಮನೆಗೆ ತೆರಳಿದ್ದರು. ಆ ಬಳಿಕ ಅಂಗಡಿಗೆ ಒಳಗಿನಿಂದ ಬೆಂಕಿ ತಗಲಿತ್ತು. ಸುಮಾರು 6:30ರ ಹೊತ್ತಿಗೆ ಬೆಂಕಿಯ ಕೆನ್ನಾಲಿಗೆ ಹಾರ್ಡ್‌ವೇರ್ ಅಂಗಡಿಯನ್ನು ಬಹುಪಾಲು ಸುಟ್ಟು ಹೆಂಚಿನ ಮಾಡಿಗೂ ತಗಲಿ ಪಕ್ಕದ ಅಂಗಡಿಯನ್ನೂ ಆವರಿಸಿಕೊಳ್ಳುತ್ತಿರುವುದನ್ನು ಗಮನಿಸಿದ ಸ್ಥಳಿಯರು ಹರಸಾಹಸ ಪಟ್ಟು ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. (ಕುಂದಾಪ್ರ ಡಾಟ್ ಕಾಂ ವರದಿ) ಅಷ್ಟರಲ್ಲಾಗಲೇ ಹಾರ್ಡ್‌ವೇರ್ ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿದ್ದರೇ, ಪಕ್ಕದ ದಿನಸಿ ಅಂಗಡಿಯ ಮಾಡು ಹಾಗೂ ಅದೇ ಕಾಂಪ್ಲೆಕ್ಸ್‌ನ ಹಿಂಬದಿ ಇದ್ದ ಮನೆಯ ಮೇಲ್ಚಾವಣಿ ಭಾಗಶಃ ಬೆಂಕಿ…

Read More

ಬೈಂದೂರು: ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ ಯುವತಿಯೋರ್ವಳನ್ನು ಅತ್ಯಾಚಾರಗೈದು, ಬಳಿಕ ಜೀವ ಬೆದರಿಕೆಯೊಡ್ಡಿದ ಘಟನೆ ಕುಂದಾಪುರ ತಾಲೂಕಿನ ಬೈಂದೂರು ಸಮೀಪದ ಹೇರೂರು ಗ್ರಾ.ಪಂ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ಬಗ್ಗೆ ಯುವತಿ ಬೈಂದೂರು ರಾಣೆಯಲ್ಲಿ ನೀಡಿದ್ದು, ದೂರಿನನ್ವಯ ಸುರೇಶ್ ನಾಯ್ಕ್ (36) ಎಂಬುವವನನ್ನು ಬಂಧಿಸಲಾಗಿದೆ. ಘಟನೆಯ ವಿವರ: ಹೇರೂರು ಗ್ರಾಮದ ಮಡ್ಲಕೇರಿ ನಿವಾಸಿಯಾದ ವಿವಾಹಿತ ಸುರೇಶ್ ನಾಯ್ಕ್ ಎಂಬುವವನು ಅದೇ ಗ್ರಾಮದ ಯುವತಿಯೋರ್ವಳನ್ನು ಕಳೆದ ಮೂರು ತಿಂಗಳ ಹಿಂದೆ ಆಕೆಯ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಅತ್ಯಾಚಾರವೆಸವೆಸಗಿದ್ದ. ಮಾತ್ರವಿಲ್ಲದೇ ಈ ವಿಷಯವನ್ನು ಯಾರಿಗೂ ತಿಳಿಸದಂತೆ ಆಕೆಗೆ ಜೀವ ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ. (ಕುಂದಾಪ್ರ ಡಾಟ್ ಕಾಂ ವರದಿ) ಘಟನೆ ನಡೆದು ಕೆಲವು ದಿನಗಳ ಬಳಿಕ ಯುವತಿಗೆ ಮದುವೆ ನಿಶ್ಚಿತಾರ್ಥವಾಗಿರುವುದನ್ನು ತಿಳಿದ ಸುರೇಶ್ ನಾಯ್ಕ್ ಆ ಯುವತಿಯನ್ನು ಮದುವೆಯಾಗಲಿರುವ ಹುಡುಗನಿಗೆ ಕರೆಮಾಡಿ ಆಕೆಯೊಂದಿಗೆ ದೈಹಿಕ ಸಂಪರ್ಕ ಹೊಂದಿರುವುದಾಗಿ ತಿಳಿಸಿದ್ದಾರೆ. ಮದುವೆಯಾಗಬೇಕಿದ್ದ ಹುಡುಗನಿಗೆ ವಿಚಾರ ತಿಳಿದ ಬಳಿಕ ನಿಶ್ಚಿತಾರ್ಥ ಮುರಿದು ಬಿದ್ದಿತ್ತು.…

Read More

ಕುಂದಾಪುರ, ಅ8: ಸಾಲಭಾದೆಯನ್ನು ತಾಳಲಾರದೆ ತಾಲೂಕಿನ ಅಮಾಸೆಬೈಲು ಕೆಳಾಸುಂಕದ ಕೃಷಿಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ನಡೆದಿದೆ.  ಕಾವ್ರಾಡಿ ಪಡುವಾಲ್ತೂರು ನಿವಾಸಿ ರಾಮ ಕುಲಾಲ್(45) ಅತ್ಮಹತ್ಯೆಗೆ ಶರಣಾದ ಕೃಷಿಕ. ಪಡುವಾಲ್ತೂರಿನಲ್ಲಿ ತಮ್ಮ ಹೆಂಡತಿ ಮಕ್ಕಳೊಂದಿಗೆ ವಾಸವಿದ್ದ ರಾಮ ಕುಲಾಲ್ ಕೆಳಸುಂಕದರುವ ಕೃಷಿಭೂಮಿಯಲ್ಲಿ ತನ್ನ ಸಹೋದರನೊಂದಿಗೆ ಸೇರಿ ಭತ್ತ ಹಾಗೂ ಅಡಿಕೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಈ ನಡುವೆ ಕೃಷಿ ಕಾರ್ಯಗಳಿಗಾಗಿ ವಿವಿಧ ಬ್ಯಾಂಕುಗಳಿಂದ ಸುಮಾರು 4ಲಕ್ಷ ಮೊತ್ತದ ಸಾಲ ಮಾಡಿದ್ದರು. ಆದರೆ ಕಾಡು ಪ್ರಾಣಿಗಳ ಹಾವಳಿ ಮುಂತಾದ ಕಾರಣಗಳಿಂದಾಗಿ ಉತ್ತಮ ಇಳುವರಿ ಕಾಣದೇ ನಷ್ಟ ಅನುಭವಿಸಿದ್ದರೆನ್ನಲಾಗಿದೆ. ಬ್ಯಾಂಕ್ ಸಾಲ ತೀರಿಸಲು ಒಂದೆರಡು ಸಂಘಗಳಲ್ಲಿ ಹಾಗೂ ಕೆಲವರಿಂದ ಕೈ ಸಾಲ ಪಡೆದಿದ್ದರೆನ್ನಲಾಗಿದೆ. ಆದರೆ ಇದ್ಯಾವುದೂ ಸಾಲದಿದ್ದಾಗ ಮಡದಿಯ ಕರಿಮಣಿಯನ್ನೂ ಬ್ಯಾಂಕಿನಲ್ಲಿ ಅಡವಿಡ್ಡಿದ್ದರು. ಇಷ್ಟಾದರೂ ಸಾಲ ತೀರಸಲಾಗದ್ದರಿಂದ ನೊಂದಿದ್ದ ಅವರು ಮೂರು ದಿನದ ಹಿಂದೆ ಮನೆಯಲ್ಲಿಯೇ ವಿಷ ಸೇವಿದ್ದರು. ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು, ರೈತ ಮೋರ್ಚಾ…

Read More

ಹಸಿರು ಬಣ್ಣದ ಧಿರಿಸು ಧರಿಸಿ, ಹಸಿರು ಶಾಲಿನ ಜೊತೆಯಲ್ಲೊಂದು ಕನ್ನಡದ ಶಾಲು ಹೊದ್ದು, ಬಗಲಿಗೊಂದು ಬ್ಯಾಗು ಸಿಕ್ಕಿಸಿಕೊಂಡು ಅವರು ಹೊರಟರೆಂದರೇ ಎಲ್ಲಿಯೋ ಕನ್ನಡದ ಕಾರ್ಯಕ್ರಮವಿದೇ ಎಂದೇ ಅರ್ಥ. ಅಷ್ಟರ ಮಟ್ಟಿಗೆ ಈ ವ್ಯಕ್ತಿಗೂ ಕನ್ನಡ ಕಾರ್ಯಕ್ರಮಗಳಿಗೂ ಬಿಡಿಸಲಾರದ ನಂಟು ಬೆಳೆದಿದೆ. ಹೌದು ವೀರಣ್ಣ ನಾಗಪ್ಪ ಕುರವತ್ತಿಗೌಡರ ಎಂಬ ಈ ಕಾಯಕಯೋಗಿ, ಬರಿಯ ತನ್ನ ದುಡಿಮೆಗಷ್ಟೇ ಸೀಮಿತವಾಗಿ ಉಳಿಯದೇ ಕನ್ನಡ ರಚನಾತ್ಮಕ ಕಾಯಕದಲ್ಲಿ ದಶಕಗಳಿಂದ ತೊಡಗಿಸಿಕೊಂಡಿದ್ದಾರೆ. ಸಾಹಿತ್ಯ ಸಮ್ಮೇಳನಗಳೆಂದರೇ ಯಾರೂ ಬರುವುದಿಲ್ಲ. ಅದು ಒಂದಿಷ್ಟು ಸೀಮಿತ ವರ್ಗಕ್ಕಷ್ಟೇ ಸಂಬಂಧಿಸಿದ್ದು ಎಂಬ ಆರೋಪಗಳಿಗೆ ಅಪವಾದವೆಂಬಂತಿರುವ ವೀರಣ್ಣ ಈವರೆಗೆ 25 ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ, 45ಕ್ಕೂಹೆಚ್ಚು ವಿವಿಧ ಜಿಲ್ಲಾ ತಾಲೂಕು ಸಮ್ಮೇಳನಗಳಲ್ಲಿ, ನೂರಾರು ಕನ್ನಡಪರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತನ್ನ ಕನ್ನಡ ಪ್ರೀತಿಯನ್ನು ತೋರ್ಪಡಿಸಿದ್ದಾರೆ. ಸಮ್ಮೇಳನಗಳಿಗೆ ಯಾರು ಬರುತ್ತಾರೋ ಇಲ್ಲವೂ ಗೊತ್ತಿಲ್ಲ ವೀರಣ್ಣ ಮಾತ್ರ ಕನ್ನಡದ ಕಾರ್ಯಕ್ರಮಗಳಿಗೆ ಖಾಯಂ ಹಾಜರ್. (ಕುಂದಾಪ್ರ ಡಾಟ್ ಕಾಂ ವರದಿ) ಮೂಲತಃ ಹಾವೇರಿ ಜಿಲ್ಲೆಯ ಗುತ್ತಲ ಗ್ರಾಮದವರಾದ ನಲವತ್ತೈದು ವರ್ಷ ಪ್ರಾಯದ…

Read More

ಕನ್ನಡ ಕೃತಿಗಳಿಗೆ ನೋಬೆಲ್ ಪ್ರಶಸ್ತಿ ಪಡೆಯುವ ಅರ್ಹತೆ ಇದೆ: ಡಾ. ಯು.ಪಿ.ಉಪಾಧ್ಯಾಯ ಬೈಂದೂರು: ಒಳ್ಳೆಯ ಕೃತಿಗಳಿಗೆ ಒಳ್ಳೆಯ ಓದುಗರು ಇದ್ದೇ ಇರುತ್ತಾರೆ. ಕನ್ನಡದಲ್ಲಿ ಉತ್ತಮ ಕೃತಿಗಳು ಹೊರಬರಬೇಕು. ಆ ಕೃತಿಗಳು ಓದುಗರಿಗೆ ಸಿಗುವಂತಾಗಬೇಕು. ಆಯಾಯ ವಯೋಮಾನದವರನ್ನು ಲಕ್ಷ್ಯವಾಗಿಸಿಟ್ಟುಕೊಂಡು ಕೃತಿಗಳನ್ನು ರಚನೆ ಮಾಡುವ ಪ್ರವೃತ್ತಿ ಬೆಳೆದಾಗ ಕನ್ನಡ ಸಾಹಿತ್ಯ ವಿಫುಲವಾಗಿ ಬೆಳೆಯುತ್ತದೆ ಎಂದು ಹಿರಿಯ ಸಾಹಿತಿ, ಬಹುಭಾಷಾ ವಿದ್ವಾಂಸ ಡಾ. ಯು.ಪಿ.ಉಪಾಧ್ಯಾಯ ಅಭಿಪ್ರಾಯಪಟ್ಟರು. ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಖಂಬದಕೋಣೆ ಆರ್.ಕೆ.ಸಂಜೀವರಾವ್ ಜನ್ಮಶತಾಬ್ದಿ ಆಚರಣಾ ಸಮಿತಿಯ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನೂರರ ಸಂಭ್ರಮದ ಅಂಗವಾಗಿ ಆರ್.ಕೆ.ಸಂಜೀವ ರಾವ್ ವೇದಿಕೆಯಲ್ಲಿ ನಡೆದ ಕನ್ನಡ ವರ್ಷಾಚರಣೆ-ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಎಂಬ ಎರಡು ದಿನಗಳ ಸಾಹಿತ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಕೇವಲ ಕಥೆ ಕಾದಂಬರಿ ಬರೆದವರು ಮಾತ್ರ ಸಾಹಿತಿಗಳೆಂದು ಪರಿಗಣಿಸಲಾಗದು. ಇತರ ಪ್ರಕಾರಗಳ ಬರಹಗಳು ಸಾಹಿತ್ಯದ ಸಾಲಿಗೆ ಸೇರುತ್ತದೆ. ಕನ್ನಡ ಸಾಹಿತ್ಯಕ್ಕೆ ಭಾರತದಲ್ಲಿ ದೊಡ್ಡ ಸ್ಥಾನಮಾನವಿದೆ. ನೋಬೆಲ್ ಪ್ರಶಸ್ತಿ ಪಡೆಯುವ ಅರ್ಹತೆಯೂ ಇದೆ. ಆದರೆ ಭಾಷಾ ತೊಡಕಿನಿಂದ…

Read More

ಗಂಗೊಳ್ಳಿ: ಉಡುಪಿ ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತ ಮತ್ತು ವಿವಿಧ ಸಂಘ ಸಂಸ್ಥೆಯಗಳ ಸಹಕಾರದೊಂದಿಗೆ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಇಂದಿನಿಂದ ಅ.17ರವರೆಗೆ ಹಮ್ಮಿಕೊಂಡಿರುವ ಇಂದ್ರಧನುಷ್ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಲೈಟ್‌ಹೌಸ್ ಬಳಿಯ ಶ್ರೀರಾಮ ಅಂಗನವಾಡಿ ಕೇಂದ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ ಮಾತನಾಡಿದ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ವೇತಾ, ಮಿಷನ್ ಇಂದ್ರಧನುಷ್ ಕಾರ್ಯಕ್ರಮದಡಿಯಲ್ಲಿ ನಮ್ಮ ಜಿಲ್ಲೆಯಲ್ಲಿ ಸಾರ್ವತ್ರಿಕಾ ಲಸಿಕಾ ಕಾರ್ಯಕ್ರಮ ಪ್ರಗತಿ ಉತ್ತಮಪಡಿಸಲು ಇಂದಿನಿಂದ ಅ.17ರವರೆಗೆ ಗುರುವಾರ ಹೊರತುಪಡಿಸಿ೭ ಕರ್ತವ್ಯದ ದಿನಗಳಲ್ಲಿ ಲಸಿಕೆ ವಂಚಿತ, ಲಸಿಕೆ ಪ್ರಾರಂಭಿಸದ, ಲಸಿಕೆ ಪಡೆಯಲು ಅರ್ಹ 0-2 ವರ್ಷದೊಳಗಿನ ಮಕ್ಕಳು ಹಾಗೂ ಟಿ.ಟಿ. ಚುಚ್ಚುಮದ್ದು…

Read More

ಕೋಟ: ಕಾರಂತರೊಂದಿಗೆ ಅವರ ಸಿನೆಮಾದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡುವಾಗ ನಾನು ಗಮನಿಸಿ ಅಂಶ ಬಹಳಷ್ಟು. ಕಾರಂತರ ಸರಳತೆ ಸರ್ವರೂ ಆದರ್ಶ. ಅವರ ಸಮಯ ಪ್ರಜ್ಞೆಯ ಬಗ್ಗೆ ಎರಡು ಮಾತಿಲ್ಲ. ಅವರ ಅಗಾಧ ಜ್ಞಾನ ಸಂಪತ್ತಿನ ಮುಂದೆ ನಾವೇಲ್ಲರೂ ತೃಣಕ್ಕೆ ಸಮಾನ ಎಂದು ಸಾಂಸ್ಕೃತಿಕ ಚಿಂತಕ ಕಾರಂತರ ಒಡನಾಡಿ ಶೇಖರ ಆಚಾರ್ಯ ಹೇಳಿದರು. ಅವರು ಸಂಜೆ ಕಾರಂತ ಹುಟ್ಟೂರ ಪ್ರಶಸ್ತಿ ಅಂಗವಾಗಿ ಕೋಟ ಕಾರಂತ ಥೀಂ ಪಾರ್ಕನಲ್ಲಿ ಕೋಟ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ(ರಿ.) ಸಾಲಿಗ್ರಾಮ, ಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸೇವಾ ಸಂಘ(ರಿ.) ಕೋಟ ಅವರ ವತಿಯಿಂದ ಆಯೋಜಿಸಲಾದ ರಾಜ್ಯಮಟ್ಟದ ಚಲನಚಿತ್ರ ಉತ್ಸವ ಸ್ಮೃತಿ ನನಸುಗಳ ಮೆರವಣಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೋಟತಟ್ಟು ಪಂಚಾಯಿತಿ ಸದಸ್ಯ ಜಯಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೋಟ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಜನಾರ್ದನ ಆಚಾರ್ಯ, ಪ್ರತಿಷ್ಠಾನದ ಸದಸ್ಯ ಸುಬ್ರಾಯ ಆಚಾರ್ಯ, ಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ…

Read More

ಕೋಟ: ಸಾಮರ್ಥ್ಯಾಭಿವೃದ್ಧಿ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಜ್ಞಾನ ಪೀಠ ಪ್ರಶಸ್ತಿ ವಿಜೇತ ಕೋಟ ಶಿವರಾಮ ಕಾರಂತರಷ್ಟು ಉತ್ತಮ ಉದಾಹರಣೆ ಆದರ್ಶ ಇನ್ನೋರ್ವರಿಲ್ಲ. ಸರ್ವೇಂದ್ರೀಯವನ್ನು ನಿಗ್ರಹಿಕೊಂಡು ಅವರು ಮಾಡಿರುವ ಸಾಧನೆಯೇ ಅವರನ್ನು ವಿಶ್ವಮಾನ್ಯರನ್ನಾಗಿಸಿದೆ. ಇಂದಿನ ಮಕ್ಕಳಿಗೆ ಅವರೇ ಆದರ್ಶ ಎಂದು ಮಾಬುಕಳ ಚೇತನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗಣೇಶ್ ಜಿ. ಅಭಿಪ್ರಾಯಪಟ್ಟರು. ಅವರು ಕಾರಂತ ಥೀಂ ಪಾರ್ಕನಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಕಾರ್ಯಕ್ರಮದ 6ನೇ ದಿನದ ಅಂಗವಾಗಿ ಜೇಸಿಐ ಸಾಲಿಗ್ರಾಮ ಕೋಟ ಟೆಂಪಲ್ ಸಿಟಿ, ಗಾಣಿಗ ಯುವ ಸಂಘಟನೆ(ರಿ.) ಉಡುಪಿ ಜಿಲ್ಲೆ ಕೋಟ ಘಟಕ, ಚೇತನ ಪ್ರೌಢಶಾಲೆ ಹಂಗಾರಕಟ್ಟೆ, ಇಂಡಿಕಾ ಬಳಗ ಮಣೂರು ಪಡುಕರೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಮ್ಮಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೋಟತಟ್ಟು ಪಂಚಾಯಿತಿ ಸದಸ್ಯೆ ಪಾರ್ವತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಜೇಸಿಐ ಸಾಲಿಗ್ರಾಮ ಕೋಟ ಟೆಂಪಲ್ ಸಿಟಿ ಅಧ್ಯಕ್ಷ ಜೇಸಿ ಕೃಷ್ಣ ಪ್ರಸಾದ, ಗಾಣಿಗ ಸಂಘಟನೆಯ ರಾಜೇಶ್ ಗಾಣಿಗ ಅಚ್ಲಾಡಿ, ಚೇತನಾ ಪ್ರೌಢಶಾಲೆಯ ಶಿಕ್ಷಕ ಚಂದನ್…

Read More

ಕೋಟ: ಶೈಕ್ಷಣಿಕವಾಗಿ ವರ್ಷವು ಉತ್ತಮ ಫಲಿತಾಂಶವನ್ನು ನೀಡುತ್ತಿರುವ ಉಡುಪಿ ಜಿಲ್ಲೆಯನ್ನು ಹೊರ ಜಿಲ್ಲೆಯವರು ಬುದ್ಧಿವಂತ ಜಿಲ್ಲೆ ಎಂದು ಸಹಜವಾಗಿ ಕರೆಯುತ್ತಾರೆ. ಮುಂದುವರಿದ ಜಿಲ್ಲೆ ಬುದ್ಧಿವಂತರ ಜಿಲ್ಲೆ ಎಂದು ಕರೆಯಿಸಿ ಕೊಳ್ಳುತ್ತಾ, ವಿವಿಧ ಅಭಿವೃದ್ಧಿ ಪರ ಯೋಜನೆಯಿಂದ ವಂಚಿತರಾಗುತ್ತಾ ನಾವು ಹಿಂದೆ ಬರುತ್ತಿರುವ ಬಗ್ಗೆ ಗಮನ ಹರಿಸಿಲ್ಲ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಅವರು ಕೋಟ ಕಾರಂತ ಥೀಂ ಪಾರ್ಕನಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಪ್ರಧಾನ ಸಮಾರಂಭ ಅಂಗವಾಗಿ ಕರ್ನಾಟಕ ರಾಜ್ಯ ಪ್ರೌಢಶಾಲಾಸಹಶಿಕ್ಷಕರ ಸಂಘ ಉಡುಪಿ ಜಿಲ್ಲಾ ಘಟಕ, ಗೀತಾನಂದ ಫೌಂಡೇಶನ್ ಮಣೂರು ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಉಡುಪಿ ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಮಾವೇಶ ಪ್ರೇರಣ ಜ್ಞಾನದ ಪ್ರತಿಬಿಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತಾ, ಶಿಕ್ಷಣ ಕ್ಷೇತ್ರದ ಸಮಸ್ಯೆ ಅಗಾಧವಾದದ್ದು, ಅದರಲ್ಲಿ ಶಿಕ್ಷಕರ ಮತ್ತು ಶಿಕ್ಷಣದ ಸಮಸ್ಯೆ ಪ್ರತ್ಯೇಕವಾಗಿ ಗಮನಿಸಿದರೆ ಸಾಕಷ್ಟು ಸಮಸ್ಯೆಗಳನ್ನು ಕಾಣಬಹುದು. ರಾಜ್ಯದ ೪೮ ಸಾವಿರ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸುಮಾರು 10 ಸಾವಿರ…

Read More

ಕೋಟ: ಕೋಟ ಶಿವರಾಮ ಕಾರಂತರು ಓದಿರುವುದು ಕೇವಲ ಮೆಟ್ರಿಕ್ ವರೆಗೆ ಮಾತ್ರ, ಆದರೆ ಅವರು ವಿಶ್ವವಿದ್ಯಾಲಯ ಮಟ್ಟದಲ್ಲಿ ಪರಿಣಿತಿ ಪಡೆದವರಗಿಂತ ಸಾವಿರ ಪಟ್ಟು ಅಧಿಕಾ ಜೀವನ ಸಾಧನೆ ಮಾಡಿದ್ದಾರೆ. ಅಂದರೆ ಕೇವಲ ಪಠ್ಯ ವಿಷಯಗಳು ಮಾತ್ರ ನಮ್ಮ ಜೀವನಕ್ಕೆ ಸಾಕಾಗುವುದಿಲ್ಲ ಪಠ್ಯೇತರ ಚಟುವಟಿಕೆಗಳು ಕೂಡ ನಮ್ಮ ಜೀವನಕ್ಕೆ ಅಗತ್ಯವಿದೆ ಎಂದು ಕುಂದಾಪುರದ ಸಾಂಸ್ಕೃತಿಕ ಚಿಂತಕ ಡಾ. ವೆಂಕಟರಾಮ ಉಡುಪ ಹೇಳಿದರು. ಅವರು ಕೋಟ ಕಾರಂತ ಥೀಂ ಪಾರ್ಕನಲ್ಲಿ ಸಂಜೆ ಕಾರಂತ ಹುಟ್ಟೂರ ಪ್ರಶಸ್ತಿ ಪ್ರಧಾನ ಸಮಾರಂಭ ಅಂಗವಾಗಿ ಆಯೋಜಿಸಲಾದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೋಟತಟ್ಟು ಪಂಚಾಯಿತಿ ಅಧ್ಯಕ್ಷ ಸತೀಶ್ ಬಾರಿಕೆರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ತಾಲೂಕು ಮುದ್ರಣ ಮಾಲಕರ ಸಂಘದ ಅಧ್ಯಕ್ಷ ಚಂದ್ರ ನಾರಿ, ಕಾರ್ಯದರ್ಶಿ ಪ್ರಕಾಶ್ ಜಿ.ಕೊಡವೂರು, ಕೋಶಾಧಿಕಾರಿ ಯತೀಶ್ಚಂದ್ರ, ಯಡ್ತಾಡಿ ಯುವ ವಾಹಿನಿ ಅಧ್ಯಕ್ಷ ಅಣ್ಣಪ್ಪ ಪೂಜಾರಿ, ನಿಕಟ ಪೂರ್ವ ಅಧ್ಯಕ್ಷ ಸಂತೋಷ, ಶ್ರೀವಿನಾಯಕ ಯುವಕ ಮಂಡಲದ ಅಧ್ಯಕ್ಷ ಉಮೇಶ ದೇವಾಡಿಗ,…

Read More