ಶ್ರೇಯಾಂಕ ಎಸ್ ರಾನಡೆವಾರ್ಷಿಕ ಆಯವ್ಯಯ ಸರ್ಕಾರದ ನಿಜವಾದ ಯಶಸ್ಸಿನ ಅಥವಾ ವೈಫಲ್ಯದ ಗುಟ್ಟು. ಹಾಗಾಗಿ ಪ್ರತೀ ವರ್ಷ ಮಂಡನೆಯಾಗುವ ಬಜೆಟ್ ತನ್ನದೇ ಮಹತ್ವ ಪಡೆದಿದೆ. 2023-24ನೇ ಸಾಲಿನ ಬಜೆಟ್ ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯ ಮುನ್ನ ಮಂಡನೆಯಾಗುತ್ತಿರುವ ಕೊನೆಯ ಪೂರ್ಣಕಾಲಿಕ ಬಜೆಟ್. ಹಾಗಾಗಿ ಎಲ್ಲರನ್ನೂ ಮೆಚ್ಚಿಸುವ ಜನಪ್ರಿಯ ಮತ್ತು ಆರ್ಥಿಕತೆ ದಾರಿ ತಪ್ಪದಂತೆ ನೋಡಿಕೊಳ್ಳುವುದು ಅನಿವಾರ್ಯ. ಸಹಜವಾಗಿ ಕುತೂಹಲವೂ ಬೆಟ್ಟದಷ್ಟಿದೆ. ಪ್ರಸ್ತುತ ವಿಶ್ವದ ಆರ್ಥಿಕತೆ 0.5%-1% ಬೆಳವಣಿಗೆ ದರದೊಂದಿಗೆ ಕತ್ತಲೆಯಲ್ಲಿದೆ ಎಂದು ವಿಶ್ಲೇಷಿಸಲಾಗಿದೆ. ಆದರೆ ಐಎಂಎಫ್ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಆರ್ಥಿಕ ಸಂಸ್ಥೆಗಳು ಉಲ್ಲೇಖಸಿರುವಂತೆ ಭಾರತ ವೇಗವಾಗಿ ಬೆಳೆಯುತ್ತಿರುವ bright spot. ಅಂದರೆ ಭರವಸೆಯ ಬೆಳಕಿನ ಕಿಡಿ ಎಂದು ಅರ್ಥ. 2022ನೇ ಸಾಲಿನಲ್ಲಿ ಭಾರತದ ನಿಜವಾದ(real) ಜಿಡಿಪಿ ಬೆಳವಣಿಗೆ ದರ 7% ಎಂದು ಆರ್ಥಿಕ ಸಮೀಕ್ಷೆ ದಾಖಲಿಸಿದೆ. 2023-24ನೇ ಸಾಲಿನಲ್ಲಿ ಜಿಡಿಪಿ ಬೆಳವಣಿಗೆ ದರ 6.5%-6.8% ಇರಲಿದೆ ಎಂದು ಅಂದಾಜಿಸಿದೆ. ಭಾರತದ ಮಹತ್ವಾಕಾಂಕ್ಷೆಗೆ ಈ ಬೆಳವಣಿಗೆ ದರ ಸಾಕಾಗುವುದಿಲ್ಲ. ಆದರೆ…
Author: Editor Desk
ಕುಂದಾಪ್ರ ಡಾಟ್ ಕಾಂ ಲೇಖನ. ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಪ್ರಭು ಶ್ರೀರಾಮಚಂದ್ರನು ಅಯೋಧ್ಯೆಗೆ ಹಿಂದಿರುಗಿದಾಗ ಪ್ರಜೆಗಳು ಬಂಗಾರದ ಕಲಶವನ್ನು ಮಣಿ-ರತ್ನಗಳಿಂದ ಅಲಂಕರಿಸಿ ಮನೆಯೆದುರು ಹೊಸ್ತಿಲಿನ ಮೇಲಿಟ್ಟರು, ಊರಿನ ಬೀದಿಗಳನ್ನು ಸುಗಂಧಿತದ್ರವ್ಯಗಳಿಂದ ಯುಕ್ತವನ್ನಾಗಿಸಿ ದೀಪೋತ್ಸವವನ್ನು ಆಚರಿಸಿದರು. ಅಂದಿನಿಂದ ದೀಪಾವಳಿ ಉತ್ಸವವನ್ನು ಆಚರಿಸಲಾಗುತ್ತದೆ. ದೀಪಾವಳಿ ಶಬ್ದದ ಅರ್ಥ ದೀಪಾವಳಿ ಎನ್ನುವ ಶಬ್ದವು ದೀಪ ಮತ್ತು ಆವಳಿ ಹೀಗೆ ರೂಪುಗೊಂಡಿದೆ. ಇದರ ಅರ್ಥ ದೀಪಗಳ ಸಾಲು ಎಂದಾಗಿದೆ. ದೀಪಾವಳಿಯಂದು ಎಲ್ಲೆಡೆಯೂ ದೀಪಗಳನ್ನು ಹಚ್ಚುತ್ತಾರೆ. ಆಶ್ವಯುಜ ಕೃಷ್ಣ ತ್ರಯೋದಶಿ (ಧನತ್ರಯೋದಶಿ), ಆಶ್ವಯುಜ ಕೃಷ್ಣ ಚತುರ್ದಶಿ (ನರಕಚತುರ್ದಶಿ), ಅಮಾವಾಸ್ಯೆ (ಲಕ್ಷಿ ಪೂಜೆ) ಮತ್ತು ಆಶ್ವಯುಜ ಶುಕ್ಲ ಪಾಡ್ಯ (ಬಲಿಪಾಡ್ಯ) ಈ ನಾಲ್ಕು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ. ಕೆಲವರು ತ್ರಯೋದಶಿಯನ್ನು ದೀಪಾವಳಿಯಲ್ಲಿ ಸೇರಿಸದೇ ಉಳಿದ 3 ದಿನಗಳನ್ನು ದೀಪಾವಳಿಯೆಂದು ಆಚರಿಸುತ್ತಾರೆ. ಗೋವತ್ಸದ್ವಾದಶಿ ಮತ್ತು ಸಹೋದರ ಬಿದಿಗೆಯು ದೀಪಾವಳಿಯ ಸಮಯದಲ್ಲಿಯೇ ಬರುತ್ತದೆ. ಆದುದರಿಂದ ಇದನ್ನು ದೀಪಾವಳಿಯೆಂದೇ ಪರಿಗಣಿಸಲಾಗುತ್ತದೆ. ಆದರೆ ವಾಸ್ತವದಲ್ಲಿ ಈ ಉತ್ಸವಗಳು ವಿಭಿನ್ನವಾಗಿವೆ. ಭಗವಾನ ಶ್ರೀಕೃಷ್ಣನು ಅಸುರಿವೃತ್ತಿಯ…
ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ಭಾರತೀಯ ಸಂಸ್ಕೃತಿಯಲ್ಲಿ ದೀಪಗಳಿಗೆ ವಿಶೇಷ ಪ್ರಾಧಾನ್ಯತೆ. ವೈವಿಧ್ಯಮಯ ದೀಪಗಳು ದೀಪಾವಳಿಯ ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ. ಅಂತಹ ಬಣ್ಣ ಬಣ್ಣದ ಹಣತೆಗಳನ್ನು ಪಂಚಗವ್ಯದಿಂದ ತಯಾರಿಸಿ ಗ್ರಾಹಕರಿಗೆ ತಲುಪಿಸುವ ಕೈಂಕರ್ಯಕ್ಕೆ ಬೀಜಾಡಿಯ ಕಪಿಲೆ ಗೋ ಸಮೃದ್ಧಿ ಟ್ರಸ್ಟ್ ಮುಂದಾಗಿದೆ. ಗೋಮಯ, ತುಪ್ಪ, ಮೊಸರು, ಹಾಲು, ಜೇಡಿಮಣ್ಣು ಮತ್ತು ಅರಿಶಿನವನ್ನು ಸೇರಿಸಿ ಗೋ-ದೀಪವನ್ನು ತಯಾರು ಮಾಡಲಾಗುತ್ತಿದೆ. ದೀಪವನ್ನು ಹಚ್ಚಿಗಾಗ ಹೋಮ ಹವನ ಮಾಡಿದ ರೀತಿಯಲ್ಲಿ ಅನುಭವದ ಜತೆಗೆ ಸುವಾಸನೆ ಬರುತ್ತದೆ. ಇದರಿಂದ ಮನಸ್ಸಿನಗೆ ನೆಮ್ಮದಿ ಮತ್ತು ಖುಷಿ ನೀಡುತ್ತದೆ. ಈ ದೀಪದ ಬಳಕೆಯ ನಂತರ ದೀಪದ ಬೂದಿಯು ಗೊಬ್ಬರವಾಗಿ ಉಪಯೋಗವಾಗಲಿದೆ. 12 ಹಣತೆಗಳಿರುವ ಒಂದು ಪ್ಯಾಕೇಟ್ಗೆ 70 ರೂ. ಬೆಲೆ ನಿಗದಿಪಡಿಸಲಾಗಿದೆ. ಈಗ ಮಾರುಕಟ್ಟೆಯಲ್ಲಿರುವ ಸಿರಾಮಿಕ್ ದೀಪಗಳಿಂದ ಪರಿಸರ ಮಾಲಿನ್ಯದ ಜೊತೆಗೆ ಮಾನವ ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ಇವೆಲ್ಲವನ್ನೂ ತಡೆಗಟ್ಟುವ ಸಲುವಾಗಿ ಗೋಶಾಲೆಯಲ್ಲಿ ವಿವಿಧ ರೀತಿಯ ಪ್ರಾಕೃತಿಕ ಬಣ್ಣಗಳಿಂದ ತಯಾರಿಸಿದ ಈ ಗೋ ದೀಪವು ಪರಿಸರ ಪೂರಕವಾಗಿದೆ. ಇದರಿಂದ…
ಚೈತ್ರ ರಾಜೇಶ್ ಕೋಟ. ವಿಭಿನ್ನ ರೂಪ, ಜ್ಞಾನಧಾರೆಯ ಸ್ವರೂಪ, ಬುದ್ದಿವಂತ ಗಣಪ. ವಿಘ್ನಗಳನ್ನು ನಿವಾರಿಸೋ ವಿನಾಯಕ, ನಮ್ಮೆಲ್ಲರ ಆರಾಧ್ಯ ದೇವ ಗಣನಾಯಕ. ಗಣಪತಿ ಎಂದ ತಕ್ಷಣ ನೆನಪಾಗುವುದೇ ಅವನ ರೂಪ. ಇವನ ಈ ರೂಪದಲ್ಲೂ, ಗುಣದಲ್ಲೂ ನಾವು ಕಲಿಯಬೇಕಾದ ಪಾಠಗಳು ಬಹಳ. ಆನೆಯ ತಲೆ ಧರಿಸಿರುವ ಗಜಾನನ, ಆನೆಗಳು ದಟ್ಟವಾದ ಕಾಡಿನಲ್ಲಿ ಮತ್ತು ಮರದ ಸಾಲಿರುವ ದಾರಿಯಲ್ಲಿ ನಡೆಯುವುದರಿಂದ ಇತರೆ ಪ್ರಾಣಿಗಳಿಗೂ ದಾರಿಯನ್ನು ಮಾಡಿಕೊಡುತ್ತದೆ. ಇದೇ ರೀತಿ ಗಜೇಂದ್ರನು ಭಕ್ತರು ನಡೆಯುವ ಮಾರ್ಗದಲ್ಲಿರುವ ಎಲ್ಲಾ ಅಡೆ-ತಡೆಗಳನ್ನು, ವಿಘ್ನಗಳನ್ನು ದೂರ ಮಾಡುವ. ಗಣೇಶನ ದೊಡ್ಡ ತಲೆಯು ಬುದ್ದಿವಂತಿಕೆ ಮತ್ತು ದೊಡ್ಡದಾದ ಆಲೋಚನಾ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ. ಹೀಗಾಗಿಯೇ ತಂದೆ ಈಶ್ವರನು ಮೂರು ಬಾರಿ ಪ್ರಪಂಚ ಪ್ರದಕ್ಷಿಣೆ ಮಾಡಿ ಮೊದಲಿಗರಾಗಿ ಬರಬೇಕೆಂದು ಗಣೇಶ ಮತ್ತು ಕಾರ್ತಿಕೇಯರಲ್ಲಿ ಹೇಳಿದಾಗಿ ತನ್ನ ಬುದ್ದಿವಂತಿಕೆಯಿಂದ ತನ್ನ ಮಾತಾ-ಪಿತರಲ್ಲಿ ಈಡೀ ಜಗತ್ತೆ ಮೈದುಂಬಿರುವಾಗ ಬೇರೆಲ್ಲೂ ಹೋಗಬೇಕಾದ ಅವಶ್ಯಕತೆ ಇಲ್ಲವೆಂದು ಇವರಿಗೆ ಮೂರು ಸುತ್ತು ಬಂದು, ಪ್ರಥಮ ಪೂಜೆಯ ಒಡೆಯನಾದ. ಶೂರ್ಪಕರ್ಣನ ಅಗಲವಾದ…
ಸದಾ ಹೊಸತನದ ತುಡಿತ, ಮುಖದಲ್ಲಿ ನಗು, ಸೌಮ್ಯ ಸ್ವಭಾವ, ಸಾಹಿತಿಯಾಗಿ, ಮಕ್ಕಳಿಗೆ ಗುರುವಾಗಿ, ಹಲವಾರು ಯುವ ಪ್ರತಿಭೆಗಳಿಗೆ ಮಾರ್ಗದರ್ಶಕರಾಗಿ, ಹಿರಿಯರಿಗೆ ಆಪ್ತರಲ್ಲಿ ಒಬ್ಬರಾಗಿ, ಪಾದರಸದಂತೆ ದಿನ ನಿತ್ಯ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಒಂದಿಷ್ಟು ಪ್ರೇರಣೆಯ ಮಾತುಗಳನ್ನಾಡಿ, ಸ್ಥಳೀಯ ಸಂಘ ಸಂಸ್ಥೆಗಳಿಗೆ ದಾರಿ ದೀಪವಾಗಿ ಸೃಜನಶೀಲ ವ್ಯಕ್ತಿತ್ವಕ್ಕೆ ಕೈಗನ್ನಡಿಯಂತಿರುವ ಸಾಹಿತಿ-ಶಿಕ್ಷಕ ನರೇಂದ್ರ ಕುಮಾರ್ ಕೋಟ ಅವರು 2020-21ನೇ ಸಾಲಿನ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇದು ಆರ್ಹತೆಗೆ ಸಂದ ಪ್ರಶಸ್ತಿಯೇ ಸರಿ. ಕೋಟ ಎಂದ ಕ್ಷಣ ಎಲ್ಲರ ನೆನಪಿನಲ್ಲಿ ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತ, ಕೋಟ ವೈಕುಂಠ, ಕೋಟ ಲಕ್ಷ್ಮೀ ನಾರಾಯಣ ಕಾರಂತ, ಕೋಟ ಶ್ರೀನಿವಾಸ ಪೂಜಾರಿ ಅವರ ಸಾಲಿನಲ್ಲಿ ಎಲ್ಲರಿಗೂ ಚಿರಪರಿಚಿತರಾಗಿ ಸಾಹಿತ್ಯಿಕ – ಸಾಂಸ್ಕೃತಿಕ – ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾಧನೆಯ ಶಿಖರವನ್ನು ಏರಿರುವ ಕೋಟ ನರೇಂದ್ರ ಕುಮಾರ್ ಅವರ ಹೆಸರು ಕೂಡಾ ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ ಎಂದರೆ ತಪ್ಪಾಗಲಾರದು.…
ಅಣ್ಣ ಎಂದರೆ ಅವಳಿಗೆ ಜೀವ. ಅವನಿಗೂ ಅಷ್ಟೇ ತಂಗಿ ಎಂದರೆ ತನ್ನದೇ ಒಂದು ಭಾಗವಿದ್ದಂತೆ. ಅ ಸಂಬಂಧವೇ ಹಾಗೆ. ಅಲ್ಲಿ ಮೊಗೆದಷ್ಟು ಪ್ರೀತಿ, ಅಲ್ಪ ಹೊಟ್ಟೆಕಿಚ್ಚು, ಒಮ್ಮೊಮ್ಮೆ ಹೊಡೆದಾಟ. ಆದ್ರೆ ಇದೆಲ್ಲವನ್ನು ಮೀರಿದ ಬಾಂಧವ್ಯವೊಂದಿದೆಯಲ್ಲ ಅದನ್ನು ಬಣ್ಣಿಸಲಾಗದು. ಪ್ರತಿ ಅಣ್ಣ- ತಂಗಿಯರಲ್ಲಿನ ಮಧುರ ಭಾವನೆ ಅದು. ಈ ನವಿರಾದ ಭಾವನೆಗಳನ್ನು ಗಟ್ಟಿಗೊಳಿಸುವ ದಿನವೇ ರಕ್ಷಾಬಂಧನ. ತನ್ನ ಅಣ್ಣ-ತಮ್ಮಂದಿರು ಯಾವಾಗಲೂ ನಗುತ್ತಿರಬೇಕೆಂದು ಸಹೋದರಿ ಆಶಿಸುತ್ತಾಳೆ. ಸಹೋದರಿಗೆ ನೆರಳಾಗಿ ನಿಲ್ಲಬೇಕು ಎಂದು ಆ ಸಹೋದರ ಬಯಸುತ್ತಾನೆ. ಅಣ್ಣ-ತಂಗಿಯರ ಭಾಂಧವ್ಯದ ಸಂಕೇತವಾದ ಈ ದಿನವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಈ ಆಚರಣೆಗೆ ಭಾರತೀಯ ಸಂಸ್ಕ್ರತಿಯಲ್ಲಿ ತನ್ನದೇ ಆದ ಮಹತ್ವ ಇದೆ. ಹಿಂದೂ ಸಂಪ್ರದಾಯದಂತೆ ಶ್ರಾವಣ ಮಾಸದ ಹುಣ್ಣಿಮೆಯಂದು ಯಜುರ್ವೇದ ಉಪಕರ್ಮವನ್ನು(ನೂಲು ಹುಣ್ಣಿಮೆ) ಚತುರ್ದಶಿಯಂದು ಋಗ್ವೇದ ಉಪಕರ್ಮವನ್ನು ಆಚರಿಸಲಾಗುತ್ತದೆ. ಯಜುರ್ವೇದ ಉಪಕರ್ಮದಂದು ರಕ್ಷಾಬಂಧನವನ್ನು ಆಚರಿಸಲಾಗುತ್ತದೆ. ರಕ್ಷಾ ಬಂಧನಕ್ಕೊಂದು ಪೌರಾಣಿವಾದ ಹಿನ್ನೆಲೆ ಇದೆ. ಅಂದು ಇಂದ್ರನು ಯುದ್ದದಲ್ಲಿ ರಾಕ್ಷಸರ ಜೊತೆ ಸೋಲುವ ಕ್ಷಣ ಬಂದಾಗ ಆತ ಬೃಹಸ್ಮತಿಯ ಸಲಹೆ ಮೇರೆಗೆ…
ರಾಷ್ಟ್ರೀಯತೆ ಇತ್ತೀಚೆಗೆ ಭಾರಿ ಚರ್ಚೆಯಲ್ಲಿರುವ ವಿಷಯ ರಾಜಕೀಯ ಪ್ರೇರಿತವಾಗಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ. ಆದರೆ ರಾಷ್ಟ್ರೀಯವಾದ ಎನ್ನುವ ಆ ಪದವೇ ಹೇಳುವಂತೆ ದೇಶದ ಪ್ರಜೆ ಎಂತದೇ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಷ್ಟ್ರದ ಪರ ನಿಲ್ಲುವಂತದ್ದು. ಅಂದರೆ ದೇಶದ ಒಂದು ಸರ್ಕಾರವನ್ನೊ, ರಾಜಕೀಯ ಪಕ್ಷಗಳನ್ನೊ ಟೀಕಿಸುವ ಭರದಲ್ಲಿ ರಾಷ್ಟ್ರದ ಗೌರವಕ್ಕೆ ಚ್ಯುತಿ ಬರುವಂತೆ ನಡೆದುಕೊಳ್ಳುವುದು ರಾಷ್ಟ್ರೀಯವಾದ ಎನ್ನಲಾಗದು. ರಾಷ್ಟ್ರೀಯವಾದ ಎನ್ನುವಂತದ್ದು ಪಕ್ಷ, ರಾಜಕಾರಣ ಎಡಪಂಥೀಯ, ಬಲಪಂಥೀಯ, ಕೋಮುವಾದ, ಜಾತಿವಾದ ಇವೆಲ್ಲದರ ಹೊರತಾದದು. ರಾಷ್ಟ್ರೀಯತೆ ಎನ್ನುವಂತದ್ದು ಯಾವುದೇ ಒಂದು ಪಕ್ಷ ಸಂಘಟನೆಗಳಿಗೆ ಸೀಮಿತವಾದದಲ್ಲ. ನನ್ನ ರಾಷ್ಟ್ರದ ಬಗೆಗೆ ಇರುವ ಅದಮ್ಯವಾದ ಪ್ರೀತಿ ರಾಷ್ಟ್ರೀಯವಾದವನ್ನು ಸೂಚಿಸುತ್ತದೆ. ದೇಶದ ಸಂಕಷ್ಟದ ಪರಿಸ್ಥಿತಿಯಲ್ಲಿ ಜಾತಿ ಧರ್ಮ ಪಕ್ಷ ಭೇದ ಮರೆತು ದೇಶದ ಪರ ನಿಲ್ಲಬೇಕಾದದ್ದು ದೇಶದ ಪ್ರಜೆಗಳ ಕರ್ತವ್ಯ. ದೇಶದ ಒಳಗೆ ಹೊರಗೆ ಇರುವ ದೇಶ ವಿರೋಧಿ ಶಕ್ತಿಗಳ ವಿರುದ್ಧ ನಿಲ್ಲುವುದು ರಾಷ್ಟ್ರೀಯವಾದ. ಆದರೆ ಇತ್ತೀಚೆಗೆ ರಾಷ್ಟ್ರೀಯವಾದ ಎಂದ ತಕ್ಷಣ ಬಿಜೆಪಿ ಪಕ್ಷದವ, ಕೋಮುವಾದಿ ಮನಸ್ಥಿತಿ ಮುಂತಾದ ಹಣೆಪಟ್ಟಿಗಳನ್ನು…
ಕುಂದಾಪ್ರ ಡಾಟ್ ಕಾಂ ಲೇಖನ.ಆಷಾಢ ಮಾಸದ ಕೊನೆಯ ದಿನ ಭೀಮನ ಅಮವಾಸ್ಯೆ ಕಳೆಯುತ್ತಿದ್ದ ಹಾಗೆ ಶ್ರಾವಣ ಮಾಸ ಪ್ರಾರಂಭ. ಈ ಹಿಂದೂ ಮಾಸದಲ್ಲಿ ಹಬ್ಬಗಳ ಸಾಲೇ ಸಾಲು ಎದಿರುಗೊಳ್ಳುತ್ತದೆ. ಈ ಮಾಸದಲ್ಲಿ ಬರುವ ಹಬ್ಬಗಳು ಮತ್ತು ವ್ರತಗಳು ಬೇರೆ ಯಾವ ಮಾಸದಲ್ಲಿಯೂ ಬರುವುದಿಲ್ಲ. ಆದ್ದರಿಂದಲೇ ಈ ಮಾಸ ಹಬ್ಬಗಳ ಮಾಸ ಎನ್ನುವರು. ವರಮಹಾಲಕ್ಷ್ಮಿ ವ್ರತ: ಶುಭ ಶ್ರಾವಣ ಮಾಸದ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ. ದಕ್ಷಿಣ ಭಾರತದ ಪ್ರಮುಖವಾದ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬವೂ ಒಂದು. ಸಕಲ ಐಶ್ವರ್ಯವನ್ನೂ ಕರುಣಿಸುವ ಮಹಾಲಕ್ಷ್ಮಿಗೆ ಮನೆಮನೆಯಲ್ಲಿ ಸಂಭ್ರಮದ ಪೂಜೆ ನಡೆಯುತ್ತದೆ. ಎಲ್ಲೆಲ್ಲೂ ಸುಖ, ಸಂಪತ್ತು, ಸಮೃದ್ಧಿಯನ್ನು ಕರುಣಿಸೋ ಭಾಗ್ಯದಾತೆಯ ಆರಾಧನೆ ನಡೆಯುತ್ತದೆ. ಶ್ರೀ ಮಹಾವಿಷ್ಣುವಿನ ಪತ್ನಿ ವರ ಮಹಾಲಕ್ಷ್ಮಿಯನ್ನು ಪೂಜಿಸಿದರೆ, ಸಕಲ ಸೌಭಾಗ್ಯವೂ ದೊರೆಯುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಪೂಜಾ ವಿಧಾನ : ಅಂದಿನ ದಿನ ಮುಂಜಾನೆ ಚುಮುಚುಮು ಬೆಳಕಿರುವಾಗಲೇ ಎದ್ದು, ಮನೆಯ ಮುಂದಿನ ಬಾಗಿಲಿಗೆ ಥಳಿ ರಂಗೋಲಿ ಹಾಕಿ, ಬಾಗಿಲಿಗೆ ಹಸಿರು ತೋರಣ ಕಟ್ಟಿದಾಗ ಮನೆಗೆ…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ,ಜು.19: ಬ್ರಹ್ಮಾವರ ಕುಮ್ರಗೋಡುವಿನ ವಿಲನ್ ರೆಸಿಡೆಸ್ಸಿಯಲ್ಲಿ ಕಳೆದ ಸೋಮವಾರ ನಡೆದ ವಿಶಾಲ ಗಾಣಿಗ (35) ಕೊಲೆ ಪ್ರಕರಣದ ತನಿಕೆಗೆ ತಾರ್ಕಿಕ ಅಂತ್ಯ ದೊರೆಯುವ ಲಕ್ಷಣ ಕಾಣಿಸುತ್ತಿದ್ದು, ಆಕೆಯ ಪತಿಯೇ ಪ್ರಕರಣದ ಸೂತ್ರಧಾರ ಎಂಬ ಮಾತುಗಳು ಮೂಲಗಳಿಂದ ಕೇಳಿ ಬರುತ್ತಿದೆ. ಪತ್ನಿಯ ಮೇಲಿನ ಸಂಶಯ ಕೊಲೆಗೆ ಕಾರಣವಾಯಿತೇ? ಗುಜ್ಜಾಡಿ ನಾಯಕವಾಡಿಯ ವಿಶಾಲ ಗಾಣಿಗ, ಬಿಜೂರು ಚಾರಕೊಡ್ಲು ರಾಮಕೃಷ್ಣ ಗಾಣಿಗ ಎಂಬವವರನ್ನು ವಿವಾಹವಾಗಿ ದುಬೈನಲ್ಲಿ ನೆಲೆಸಿದ್ದರು. ಇವರಿಗೆ ಓರ್ವ 6 ವರ್ಷದ ಮಗಳಿದ್ದಾಳೆ. ಇತ್ತಿಚಿಗೆ ಊರಿಗೆ ಬಂದಿದ್ದ ಸಂದರ್ಭ ವಿಶಾಲ ಗಾಣಿಗ ಕೊಲೆಯಾಗಿದ್ದರು. ಆಸ್ತಿ ವ್ಯವಹಾರಕ್ಕಾಗಿ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿತ್ತು. ಆದರೆ ಪತ್ನಿಯ ಮೇಲಿನ ಸಂಶಯವೂ ಅಥವಾ ರಾಮಕೃಷ್ಣ ಗಾಣಿಗನಿಗೆ ಸಲ್ಲಾಪಗಳಿಗೆ ಪತ್ನಿ ಅಡ್ಡವಾಗಿದ್ದಳು ಎಂಬ ಕಾರಣವೂ, ಒಟ್ಟಿನಲ್ಲಿ ಆಕೆಯ ಕೊಲೆಯೊಂದಿಗೆ ಪತಿ ಪತ್ನಿಯರ ವಿರಸ ಮುರಿದುಬಿದ್ದಿದೆ. ಕುಂದಾಪ್ರ ಡಾಟ್ ಕಾಂ ವರದಿ. ಸುಪಾರಿ ಕೊಟ್ಟು ಕೊಲೆ? ಪೊಲೀಸರ ಪ್ರಾಥಮಿಕ ತನಿಕೆಯಲ್ಲಿ ವಿಶಾಲ ಕೊಲೆಯಾದ ಪ್ಲ್ಯಾಟ್’ನಲ್ಲಿ ಎರಡು ಟೀ ಕುಡಿದ…
ಕುಂದಾಪ್ರ ಡಾಟ್ ಕಾಂ ವರದಿ. ರಾಜ್ಯಕ್ಕೆ ಬೆಳಕು ನೀಡುವುದಕ್ಕಾಗಿ ತ್ಯಾಗ ಮಾಡಿದ ಕರೂರು ಸೀಮೆ ಜನರಿಗೆ ಶರಾವತಿ ಹಿನ್ನೀರು ಕರಿನೀರಿನ ಶಿಕ್ಷೆ ಬರೆ! ಪೇಟೆ ಪಟ್ಟಣ ಬೇರೆ ಕಡೆಯ ಮನೆಯಲ್ಲಿ ವಿದ್ಯುತ್ ದೀಪ ಬೆಳಗಿದರೆ ಕರೂರು ಸೀಮೆಯಲ್ಲಿ ಇಂದಿಗೂ ಬುಡ್ಡಿದೀಪ! ಈ ಮುಳುಗಡೆ ಸೀಮೆಯಲ್ಲಿ ಕತ್ತಲು ಕಳೆದು ಬೆಳಕು ಮೂಡಿಲ್ಲ! ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು, ಕರೂರು ಸೀಮೆ ನಾಲ್ಕು ಗ್ರಾಮ ಸಾವಿರ ಮನೆ, 8 ಸಾವಿರ ನಿವಾಸಿಗಳ ಬದುಕು ಕತ್ತಲಲ್ಲೇ ಕಳೆದು ಹೋಗುತ್ತದೆ. ಕರೂರು ಸೀಮೆ ಉಸಿರಿರೋದು ಸಾಗರದಲ್ಲಿ. ಸಾಗರ ಸಂಪರ್ಕಿಸುವ ಎರಡು ರಸ್ತೆಯಲ್ಲಿ ಒಂದು ರಸ್ತೆಗೆ ಹೊಳೆ ಅಡ್ಡ ಬಂದರೆ, ಮತ್ತೊಂದು ರಸ್ತೆ ಕೊಂಕಣ ಸುತ್ತಿ ಮೈಲಾರ ಸೇರಿದಂತೆ! ಕರೂರು ಸೀಮೆಯಲ್ಲಿ ಹವ್ಯಕ, ಜೈನ, ದೀವರು, ಹಸಲ ಜನಾಂಗದ ಜೊತೆ ಇನ್ನಿತರ ಪಂಗಡದವರಿದ್ದಾರೆ. ತುಂಬ್ರಿಯಲ್ಲಿ ಪಿಯುಸಿ ತನಕ ವಿದ್ಯಾಭ್ಯಾಸ. ತಾಕಿತ್ತಿದ್ದವರು ಪೇಟೆಯಿಂದ ಕಾಲೇಜು ಸೇರಿದರೆ, ಓದುವ ಆಸೆಯಿದ್ದು ಆಗದೆ ಮನೆಯಲ್ಲಿ ಕೂತ ಯುವಕರೆಷ್ಟೋ. ಈ ಗ್ರಾಮದಲ್ಲಿ ಅಧಿಕ ಅಡಕೆ…
