Author: Editor Desk

ವಿದೇಶದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಗಳಿಕೆಯ ಜೊತೆಗೆ ಕಲಿಕೆ ಎಂಬ ಪರಿಕಲ್ಪನೆ ಬಹಳ ಹಿಂದೆಯೇ ಚಾಲ್ತಿಗೆ ಬಂದಿತ್ತು. ಆದರೆ ಭಾರತದಲ್ಲಿ ಅದು ಇನ್ನೂ ಮುನ್ನಡೆ ಪಡೆಯಲು ಯಶಸ್ವಿಯಾಗಿಲ್ಲ. ಇಲ್ಲಿ ಕಲಿಕೆಗೆ ಮೊದಲ ಆದ್ಯತೆ. ಡಿಗ್ರಿ ಪಡೆದ ಬಳಿಕವಷ್ಟೇ ಉದ್ಯೋಗ ಎಂಬ ಸ್ಥಿತಿಯಿದೆ. ಆದರೆ ಬದಲಾದ ಕಾಲಮಾನದಲ್ಲಿ ಕಾರ್ಪೋರೇಟ್ ಸಂಸ್ಥೆಗಳು ವೃತ್ತಿಪರ ಶಿಕ್ಷಣದ ಅರ್ಹತೆಯ ಜೊತೆಗೆ ಕೆಲಸದ ಅನುಭವವನ್ನೂ ಕೇಳುತ್ತಿವೆ. ಹೀಗಾಗಿ ಇಂಟರ್ನ್‌ಶಿಪ್‌ಗಳಿಗೆ ಕಾಲೇಜುಗಳು, ವಿವಿಗಳು ಮಹತ್ವ ನೀಡುತ್ತಿವೆ. ಈ ಮೂಲಕ ಥಿಯರಿಯ ಜೊತೆಗೆ ಉದ್ಯೋಗದಾತನಿಗೆ ಬೇಕಾದ ರೀತಿಯಲ್ಲಿ ವಿದ್ಯಾರ್ಥಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಮುಂದಿನ ಉದ್ಯೋಗ ಭವಿಷ್ಯಕ್ಕೆ ಅತ್ಯವಶ್ಯಕವಾದ ಸಮಯದ ನಿರ್ವಹಣೆ ಪಾಠ ಕಲಿಯುವುದರ ಜೊತೆಗೆ ಕೆಲಸದ ಅನುಭವವನ್ನೂ ಶಿಕ್ಷಣ ಪಡೆಯುತ್ತಿರುವ ಅವಧಿಯಲ್ಲೇ ಪಡೆಯಲು ನೆರವಾಗುತ್ತದೆ. ಹೀಗಾಗಿ ವೃತ್ತಿಪರ ಹಾಗೂ ವೈಯಕ್ತಿಕವಾಗಿಯೂ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ನೆರವಾಗುತ್ತದೆ. ಆದ್ದರಿಂದ ವಿವಿಯಿರಲಿ ಕಾಲೇಜು ಇರಲಿ ವಿದ್ಯಾರ್ಥಿಗಳು ಕ್ಲಾಸ್ ರೂಮ್‌ನಲ್ಲಿ ಕಲಿತ ಜ್ಞಾನವನ್ನು ದುಪ್ಪಟ್ಟು ಮಾಡಿಕೊಳ್ಳಲು ಇಂಟರ್ನ್‌ಶಿಪ್ ನೆರವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಸ ಕೌಶಲ್ಯವನ್ನು…

Read More

ಪಿಯುಸಿ ಮುಗಿಯಿತು. ಮುಂದೇನು ಮಾಡುವುದು ಎಂಬ ಯೊಚನೆ ಸಾಮಾನ್ಯ. ಅಂಥವರಿಗಾಗಿ ಹತ್ತು ಪ್ರಮುಖ ಆಯ್ಕೆಗಳು ಇಲ್ಲಿದೆ ಮಾಸ್ ಕಮ್ಯೂನಿಕೇಶನ್: ಜನರ ಜೊತೆ ಸಂಪರ್ಕ ಸಾಧಿಸುವ ವೃತ್ತಿಯನ್ನು ಬಯಸುವವರು ಇದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 12ನೇ ತರಗತಿ ಬಳಿಕ ಈ ಕೋರ್ಸ್ ಸೇರುವವರ ಸಂಖ್ಯೆ ಬಹು ದೊಡ್ಡದಿದೆ. ಸಾರ್ವಜನಿಕ ವ್ಯವಹಾರ, ಜಾಹೀರಾತು, ಪತ್ರಿಕೋದ್ಯಮ, ಸಮೂಹ ಮಾಧ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉದ್ಯೋಗಾವಕಾಶವಿದೆ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಜರ್ನಲಿಸಂ ಆಂಡ್ ನ್ಯೂ ಮೀಡಿಯಾ ಸೇರಿದಂತೆ ಹಲವಾರು ಸಂಸ್ಥೆಗಳು ಈ ಕೋರ್ಸನ್ನು ಆಫರ್ ಮಾಡುತ್ತಿವೆ. ಈವೆಂಟ್ ಮ್ಯಾನೇಜ್‌ಮೆಂಟ್ : ಕೇವಲ ಡಿಗ್ರಿ ಮಾಡದೆ ಉತ್ತಮ ವೃತ್ತಿ ಭವಿಷ್ಯದ ನಿರೀಕ್ಷೆಯಲ್ಲಿರುವವರಿಗೆ ಇದು ಅತ್ಯಂತ ಸೂಕ್ತ ಕೋರ್ಸ್. ಈ ಕ್ಷೇತ್ರದ ಸಂಪೂರ್ಣ ಒಳನೋಟವನ್ನು ಕೋರ್ಸ್ ನೀಡುತ್ತದೆ ಎಂಬುದಕ್ಕೆ ವರ್ಷದಿಂದ ವರ್ಷಕ್ಕೆ ಇದನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದೇ ಸಾಕ್ಷಿ. ಕೆಲವು ಶಿಕ್ಷಣ ಸಂಸ್ಥೆಗಳು ಯಶಸ್ವಿ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗವನ್ನೂ ಕೊಡಿಸುತ್ತವೆ. ಐಟಿಎಫ್‌ಟಿ, ಐಸಿಇಎಂ, ಎನ್‌ಐಇಎಂನಂತಹ ಸಂಸ್ಥೆಗಳಲ್ಲಿ…

Read More

ಈಗ ದಿನ ನಿತ್ಯದ ಜೀವನವನ್ನು ಐಟಿ ಮತ್ತು ಐಟಿ ಆಧಾರಿತ ಸೇವೆಗಳನ್ನು ಹೊರಗಿಟ್ಟು ನೋಡಲು ಸಾಧ್ಯವಿಲ್ಲ. ಇದರ ಬಳಕೆ ಹೆಚ್ಚಿದಂತೆ ಸೈಬರ್ ಭದ್ರತೆ ಕೂಡ ಬಹುದೊಡ್ಡ ತಲೆನೋವಾಗಿ ಮಾರ್ಪಡುತ್ತಿದೆ. ಖಾಸಗಿ ಡೇಟಾವನ್ನು ಅಪರಿಚತರಿಗೆ ಸಿಗದಂತೆ ಕಾಪಾಡುವುದು ಅತ್ಯಗತ್ಯ. ಇದಕ್ಕಾಗಿ ಕಲಾಸಾಲಿಂಗಂ ವಿಶ್ವವಿದ್ಯಾಲಯ ರಾಷ್ಟ್ರೀಯ ಸೈಬರ್ ರಕ್ಷಣಾ ಸಂಶೋಧನಾ ಕೇಂದ್ರ (ಎನ್‌ಸಿಡಿಆರ್‌ಸಿ)ಯನ್ನು ಸ್ಥಾಪಿಸಿದೆ. ಈ ಮೂಲಕ ಸೈಬರ್ ಅಪರಾಧ ತಡೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದೆ. ರಾಷ್ಟ್ರೀಯ ಸೈಬರ್ ಸುರಕ್ಷತೆ ಮತ್ತು ಭದ್ರತಾ ಗುಣಮಟ್ಟ ಇದರ ನಿರ್ವಹಣೆ ಮಾಡುತ್ತಿದೆ. ಇದರಲ್ಲಿರುವ ಸದಸ್ಯರು ಸೈಬರ್ ಫೋರೆನ್ಸಿಕ್‌ನ ಮೇಲೆ ಕೆಲಸ ಮಾಡುತ್ತಿದ್ದು, ಈ ಮೂಲಕ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸಿಸ್ಟಂ, ನೆಟ್‌ವರ್ಕ್ ಅಪರೇಶನ್, ಮಾಹಿತಿಯ ಸಂರಕ್ಷಣೆ ಮೊದಲಾದ ಕ್ಷೇತ್ರಗಳಲ್ಲಿ ಪ್ರಾಕ್ಟಿಕಲ್ ಅನುಭವ ಒದಗಿಸುತ್ತದೆ. ಬೋಧಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಕ್ರೈಪ್ಟೋಗ್ರಫಿ ಮತ್ತು ನೆಟ್‌ವರ್ಕ್ ಸೆಕ್ಯೂರಿಟಿ ರಿಸರ್ಚ್ ಅಭಿವೃದ್ಧಿ ಚಟುವಟಿಕೆಗಳಿಗೂ ಈ ಕೇಂದ್ರ ಅವಕಾಶ ನೀಡುತ್ತಿದೆ. ಅಂಡರ್ ಗ್ರಾಜುವೇಟ್ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯೂರಿಟಿ ಟೂಲ್ಸ್‌ಗಳಾದ ಹೆಕ್ಸ್, ಎನ್‌ಕೇಸ್,…

Read More

 ಕರ್ನಾಟಕ ಇಸ್ಲಾಮಿಕ್ ಸೆಂಟರ್ ಯುಎಇ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಇಫ್ತಾರ್ ಕೂಟ ಕಾರ್ಯಕ್ರಮವು ಜುಲೈ 3 ರಂದು ದುಬೈ ಯಲ್ಲಿ ನಡೆಯಲಿರುವುದು ಎಂದು ಕೆ ಐ ಸಿ ಕೇಂದ್ರ ಸಮಿತಿ ಅದ್ಯಕ್ಷರಾದ ಹಾಜಿ ಮೊಹಿಯುದ್ದೀನ್ ಕುಟ್ಟಿ ದಿಬ್ಬ ತಿಳಿಸಿದ್ದಾರೆ. ಕೆ ಐ ಸಿ ಯುಎಇ ಕೇಂದ್ರ ಸಮಿತಿಯ 2015-16ರ ನೇ ಸಾಲಿನ ಮೊದಲ ದ್ವಿಮಾಸಿಕ ಸಭೆಯಲ್ಲಿ ಕೆ ಐ ಸಿ ಮುಂದಿನ ಕಾರ್ಯಚಟುವಟಿಕೆ ಗಳನ್ನು ಅನುಷ್ಠಾನ ಹಾಗೂ ಕ್ರಿಯಾ ಯೋಜನೆಗಳನ್ನು ಉಲ್ಲೇಕಿಸಿ ಮಾತನಾಡಿದ ಅವರು ಹಲವಾರು ವರ್ಷಗಳಿಂದ ಸಮುದಾಯಕ್ಕೆ ಪ್ರಭುದ್ದ ಉಲಮಾ ಗಳನ್ನೂ ಸಮರ್ಪಿಸಿ ಸಮಾಜದಲ್ಲಿ ಗುರುತಿಸಿ ಕೊಳ್ಳುವಂತಹ ಯುವ ಸಮೂಹಗಳನ್ನು ಪರಿಚಯಿಸಿಕೊಂಡು ಮುನ್ನಡೆಯುತ್ತಿರುವ ನಮ್ಮ ಸಂಸ್ಥೆಯು ಇಂದು ಅರಬ್ ರಾಷ್ಟ್ರಗಲಾದ್ಯಂತ ಪರಿಚಯಿಸಿಕೊಂಡು ಹಲವಾರು ಹಿತೈಷಿಗಳನ್ನು ತನ್ನದಾಗಿಸಿಕೊಂಡಿದೆ. ಇಂತಹ ದೀನೀ ಸಂಘ ಸಂಸ್ಥೆಗಳನ್ನು ಪೋಷಿಸಿಕೊಂಡು ಯುವ ಸಮೂಹಗಳು ಮುಂದೆ ಬರುವಂತೆ ಕರೆ ನೀಡಿದ ಅವರು ಮುಂದಿನ ದಿನಗಳಲ್ಲಿ ಕೆ ಐ ಸಿ ವಿಧ್ಯಾಸಂಸ್ಥೆಯು ಪ್ರಗತಿಯ ಮುಂಚೂಣಿಯಲ್ಲಿ ಸಾಗಲಿ ಎಂದು ಶುಭ…

Read More

ಬಹ್ರೈನ್‌: ಮೊಗವೀರ್ಸ್‌ ಬಹ್ರೈನ್‌ ಸಂಸ್ಥೆಇತ್ತೀಚೆಗೆ ಗುದೈಬಿಯಾ ನಗರದ ಇಂಡಿಯನ್‌ ಕ್ಲಬ್‌ನ ಹೊರಾಂಗಣದಲ್ಲಿ ಅಟಿಲ್‌ ಎಂಬ ಭರ್ಜರಿ ತುಳುನಾಡ ಖಾದ್ಯ ಮೇಳವನ್ನು ಆಯೋಜಿಸಿತು. ಸಂಸ್ಥೆ ಹುಟ್ಟಿದ ವರ್ಷದಿಂದ ಅಟಿಲ್‌ ಶೀರ್ಷಿಕೆಯೊಂದಿಗೆ ಆರಂಭಗೊಂಡ ಈ ತುಳುನಾಡ ಮಹಾ ಆಹಾರೋತ್ಸವ ಮೊಗವೀರ್ಸ್‌ ಬಹ್ರೈನ್‌ನ ಅತೀ ಆದ್ಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ದ್ವೀಪ ರಾಷ್ಟ್ರದ ತುಳು-ಕನ್ನಡಿಗ ಸಮುದಾಯದ ಮಧ್ಯೆ ಅತ್ಯಂತ ಜನಮೆಚ್ಚುಗೆ ಪಡೆಯುತ್ತಾ ಬಂದ ಅರ್ಥಪೂರ್ಣ ಕಾರ್ಯಕ್ರಮ ಇದಾಗಿದೆ. ಸಂಸ್ಥೆಯ ಹಿಂದಿನ ಆಹಾರ ಮೇಳಗಳಂತೆ ಈ ಬಾರಿಯ ಅಟಿಲ್‌ ಮೇಳದಲ್ಲೂ ತುಳು- ಕನ್ನಡಿಗರಿಗಾಗಿ ತಾಯ್ನಾಡಿನ ಸಾಂಪ್ರದಾಯಿಕ ಶೈಲಿಯ ಮನೆಪಾಕದ ಖಾದ್ಯ ಶಾಕಾಹಾರಿ, ಮಾಂಸಾಹಾರಿ ಖಾದ್ಯಗಳಲ್ಲದೆ, ಹಬ್ಬದ ತಿಂಡಿ-ತಿನಿಸುಗಳನ್ನು ಪ್ರದರ್ಶಿಸಿದರು. ಸಂಸ್ಥೆಯ ಅಧ್ಯಕ್ಷ ಲೀಲಾಧರ್‌ ಬೈಕಂಪಾಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷೆ ಶರ್ಮಿಳಾ ಭಾಸ್ಕರ್‌ ಕಾಂಚನ್‌ ಆಹಾರೋತ್ಸವಕ್ಕೆ ಶುಭ ಹಾರೈಸಿದರು. ಹಿರಿಯರಾದ ವಿಟಲ ಸುವರ್ಣ ಅವರು ತೆಂಗಿನಕಾಯಿ ಒಡೆಯುವ ಮೂಲಕ ಆಹಾರ ಮೇಳವನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಉದ್ಘಾಟಿಸಿದರು. ಅನಂತರ ತುಳುನಾಡ ಸಂಸ್ಕೃತಿಯಂತೆ ಸಂಸ್ಥೆಯ ಮಹಿಳಾ ಸದಸ್ಯೆಯರು ಸುನಂದಾ ಸೀತಾರಾಮ್‌ ಪುತ್ರನ್‌…

Read More

ಹೊನ್ನಾವರ: ಜಿಲ್ಲೆ ಘಟ್ಟದ ಕಾಡಿನ ಮಧ್ಯೆ ವಾಸಿಸುತ್ತಿರುವ, ಹೊರಲೋಕಕ್ಕೆ ಅಪರಿಚಿತವಾದ ಮರಾಠಿ ಸಮಾಜದ ಕೇರಿಯಲ್ಲಿ ಏ. 16ರಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ತನ್ನ ಹೆಜ್ಜೆ ಗುರುತು ಮೂಡಿಸುತ್ತಿದೆ. ಛತ್ರಪತಿ ಶಿವಾಜಿ ಸೈನ್ಯದೊಟ್ಟಿಗೆ ಯುದ್ಧ ಸಾಮಗ್ರಿಗಳನ್ನು ಹೊತ್ತು ನಿರ್ಜನ ಕಾಡಿನ ಮಾರ್ಗದಲ್ಲಿ ಸಾಗಿ ಬಂದು, ಅನಿವಾರ್ಯ ಕಾರಣಗಳಿಂದ ಅಲ್ಲಿಯೇ ನೆಲೆನಿಂತ ಮರಾಠಿ ಸಮಾಜ ಕೊಂಕಣಿ ಮರಾಠಿ ಮಿಶ್ರಿತ ಭಾಷೆಯನ್ನು ಆಡತೊಡಗಿತ್ತು. ಬೆಟ್ಟ ಕಡಿದು ರಾಗಿ ಬೆಳೆದು ಅದಕ್ಕೆ ತಾಳೆಮರದ ತಿರುಳಿನ ಹಿಟ್ಟು ಬೆರೆಸಿ ಆಹಾರ ಕಂಡುಕೊಂಡು ರಾಗಿ ಕುಮ್ರಿ ಮರಾಠಿಗಳು, ಕಾಡು ಜೇನು ಸಂಗ್ರಹಿಸಿ ಜೇನು ಮರಾಠಿಗಳು ಎಂದು ಕರೆಸಿಕೊಂಡರು. ಬ್ರಿಟಿಷರು ಉತ್ತರ ಕನ್ನಡದ ಕಾಡಿನ ಸರ್ವೇ ಮಾಡುವಾಗ ಸಾಮಾನು, ಸರಂಜಾಮು ಸಾಗಿಸಲು ಈ ಸಮಾಜವನ್ನು ಬಳಸಿಕೊಂಡರು ಎನ್ನುತ್ತದೆ ಕೆನರಾ ಗೆಜೆಟಿಯರ್‌. ಶಿರಸಿ, ಸಿದ್ದಾಪುರ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕುಗಳ ಕಾಡಿನಲ್ಲಿ ಮಾತ್ರ ಕಾಣುವ ಈ ಸಮಾಜದ ಒಟ್ಟೂ ಜನಸಂಖ್ಯೆ 18,700 ಮಾತ್ರ. ಸದ್ಯ ಅ ವರ್ಗದಲ್ಲಿ ಗುರುತಿಸಲ್ಪಟ್ಟಿರುವ ಇವರಿಗೆ ಸರಕಾರಿ…

Read More

ಮೈಸೂರು: ಮೈಸೂರು ವಿಶ್ವ ವಿದ್ಯಾನಿಲಯದ 95ನೇ ಘಟಿಕೋತ್ಸವ ಸಮಾರಂಭ ಏ.17 ರಂದು ನಡೆಯಲಿದ್ದು, 28,580 ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ ಪದವಿ ಪ್ರದಾನ ಮಾಡಲಾಗುತ್ತಿದೆ. ಅಂದು ಬೆಳಗ್ಗೆ 11ಕ್ಕೆ ಕ್ರಾಫ‌ರ್ಡ್‌ ಭವನದಲ್ಲಿ ಘಟಿಕೋತ್ಸವ ಸಮಾರಂಭ ನಡೆಯಲಿದ್ದು, ಭಾರತೀಯ ವಿಜಾನ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಹಾಗೂ ರಾಷ್ಟ್ರೀಯ ಸಂಶೋಧನಾ ಪ್ರಾಧ್ಯಾಪಕ ಪೊ›.ಗೋವರ್ಧನ್‌ ಮೆಹ್ತಾ ಪದವಿ ಪ್ರದಾನ ಮಾಡಲಿದ್ದಾರೆ. ರಾಜ್ಯಪಾಲ ವಜುಬಾಯಿ ವಾಲಾ ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಮೈಸೂರು ವಿವಿ ಕುಲಪತಿ ಪೊ›.ಕೆ.ಎಸ್‌.ರಂಗಪ್ಪ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಬಾರಿ ಮೈಸೂರು ವಿವಿ ವ್ಯಾಪ್ತಿಯ 28,580 ವಿದ್ಯಾರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಇವರಲ್ಲಿ 16,259 ಮಹಿಳೆಯರು (ಶೇ.57) ಮತ್ತು 12,321 ಪುರುಷರು(ಶೇ.43) ಗಳಿಗೆ ಪದವಿ ನೀಡಲಾಗುತ್ತಿದ್ದು, ಕಳೆದ ವರ್ಷದಂತೆ ಈ ವರ್ಷವೂ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ. ಇನ್ನು ಪದವಿ ಸ್ವೀಕಾರ ಮಾಡುತ್ತಿರುವ ಪೈಕಿ 21,683 (ಮಹಿಳೆಯರು-12,665, ಪುರುಷರು-9018) ಪದವಿ, 6507 (ಮಹಿಳೆಯರು-3461, ಪುರುಷರು-3046) ಜನರಿಗೆ…

Read More

ಬೆಂಗಳೂರು: ವೇತನ ತಾರತಮ್ಯ, ಕಾಲ್ಪನಿಕ ವೇತನ ಮತ್ತು ಬಡ್ತಿ ವಿಚಾರಗಳಿಗೆ ಸಂಬಂಧಿಸಿದಂತೆ ಬಹುದಿನಗಳಿಂದ ಇರುವ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಬುಧವಾರ ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರು ಹಾಗೂ ಪ್ರೌಢಶಾಲಾ ಶಿಕ್ಷಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್‌ ನೇತೃತ್ವದಲ್ಲಿ ತೆರಳಿದ್ದ ಎರಡೂ ಸಂಘಗಳ ಪದಾಧಿಕಾರಿಗಳು, ಉಪನ್ಯಾಸಕರು ಮತ್ತು ಶಿಕ್ಷಕರು ಎದುರಿಸುತ್ತಿರುವ ವೇತನ ತಾರತಮ್ಯ ಸಮಸ್ಯೆ ನಿವಾರಣೆಗೆ ಕುಮಾರ ನಾಯಕ್‌ ವರದಿ ಜಾರಿಗೊಳಿಸಬೇಕು. ಉಪನ್ಯಾಸಕರ ಕಾಲ್ಪನಿಕ ವೇತನ ಬಿಡುಗಡೆಗೆ ಸುಮಾರು 50 ಕೋಟಿ ರೂ., ಪ್ರೌಢ ಶಾಲಾ ಶಿಕ್ಷಕರ ಕಾಲ್ಪನಿಕ ವೇತನ ಬಿಡುಗಡೆಗೆ ಸುಮಾರು 150 ಕೋಟಿ ರೂ. ಅಗತ್ಯವಿದೆ. ಹಣಕಾಸು ಇಲಾಖೆಯಿಂದ ಒಪ್ಪಿಗೆ ನೀಡಿ ಈ ಹಣ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು. ಅದೇ ರೀತಿ ಪ್ರೌಢ ಶಾಲಾ ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜು ಉಪನ್ಯಾಸಕ…

Read More

ಬೆಂಗಳೂರು: ವಿಧಾನಸೌಧ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಬೈಕ್‌ ಆ್ಯಂಬುಲೆನ್ಸ್’ ಗೆ ಹಸಿರು ನಿಶಾನೆ ತೋರಿಸುವ ಮೂಲಕ ಈ ಸೇವೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಬೈಕ್‌ ಆ್ಯಂಬುಲೆನ್ಸ್‌ ಸೇವೆ ಸರ್ಕಾರದ ವಿನೂತನ ಪ್ರಯೋಗ. ನಗರ ಪ್ರದೇಶಗಳಲ್ಲಿ ಜನಸಂಖ್ಯೆ, ಸಂಚಾರದಟ್ಟಣೆ ಏರುಗತಿಯಲ್ಲಿ ಸಾಗಿದೆ. ಹಾಗಾಗಿ, ನಿಗದಿತ ಅವಧಿಯಲ್ಲಿ ಅಪಘಾತಗಳು ನಡೆದ ಸ್ಥಳಕ್ಕೆ “ಆರೋಗ್ಯ ಕವಚ’ ಆ್ಯಂಬುಲೆನ್ಸ್‌ ತಲುಪಲು ವಿಳಂಬವಾಗಬಹುದು. ಈ ನಿಟ್ಟಿನಲ್ಲಿ ಸಕಾಲದಲ್ಲಿ ಚಿಕಿತ್ಸೆ ತಲುಪಿಸಲು ಹೊಸ ವ್ಯವಸ್ಥೆ ಜಾರಿಗೊಳಿಸಲಾಗಿದೆ’. ಅಪಘಾತಗಳು ನಡೆದಾಗ ಬದಕಲು ಸಾಧ್ಯವಿದ್ದವರೂ ಪ್ರಥಮ ಚಿಕಿತ್ಸೆಯಲ್ಲಿನ ವಿಳಂಬದಿಂದ ಪ್ರಾಣ ಕಳೆದುಕೊಳ್ಳುವ ಸಂಭವ ಇರುತ್ತದೆ. ಈ ದೃಷ್ಟಿಯಿಂದ ಬೈಕ್‌ ಆ್ಯಂಬುಲೆನ್ಸ್‌ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದರು. ವಿನೂತನ ಆರೋಗ್ಯ ಸೇವೆ ಕ್ಷಿಪ್ರಗತಿಯಲ್ಲಿ ಅಪಘಾತ ಸ್ಥಳಕ್ಕೆ ಧಾವಿಸಿ ಚಿಕಿತ್ಸೆ ನೀಡುವ “ಬೈಕ್‌ ಆ್ಯಂಬುಲೆನ್ಸ್‌’ಗಳು ಬುಧವಾರದಿಂದ ರಸ್ತೆಗಿಳಿದಿವೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಮಹಾನಗರಗಳಲ್ಲಿ ಯಾವುದೇ ರೀತಿಯ ಅಪಘಾತಗಳು ಸಂಭವಿಸಿದಲ್ಲಿ, ಘಟನೆ ನಡೆದ ಕೇವಲ 10 ನಿಮಿಷದಲ್ಲಿ ಈ ಬೈಕ್‌ ಆ್ಯಂಬುಲೆನ್ಸ್‌…

Read More

ಅಜೆಕಾರು: ಮನೆಯಲ್ಲಿ ತಂದೆ ತಾಯಿಗಳು ಮೊದಲು ಮಕ್ಕಳಿಗೆ ಕಡ್ಡಾಯ ಕನ್ನಡ ಕಲಿಸುವ ಕೆಲಸ ಮಾಡಿದಾಗ ಕನ್ನಡ ಉಳಿಯಲು ಸಾಧ್ಯ ಕನ್ನಡದಷ್ಟು ಅದ್ಬುತ ಭಾಷೆ ಬೇರೊಂದಿಲ್ಲ ಎಂದು ಅಖೀಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಸಾಹಿತಿ ಕುಂದಾಪುರದ ಎ.ಎಸ್‌.ಎನ್‌. ಹೆಬ್ಟಾರ್‌ ಹೇಳಿದರು. ಅವರು ಕಾರ್ಕಳ ತಾಲೂಕಿನ ಎಣ್ಣೆಹೊಳೆ ಹಂಚಿಕಟ್ಟೆ ಮಹಾಮ್ಮಾಯಿ ದೇವಸ್ಥಾನದ ವಠಾರದಲ್ಲಿ ಡಾ| ಯು.ಕೃಷ್ಣ ಮುನಿಯಾಲ್‌ ದ್ವಾರದ ಯಶವಂತ ಚಿತ್ತಾಲ ವೇದಿಕೆಯಲ್ಲಿ ಶ್ರೀ ವಿದ್ಯಾಲಯ ಅರ್ಪಿಸಿದ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಕ.ಸಾ.ಪ. ಉಡುಪಿ ಜಿಲ್ಲೆ ಮತ್ತು ಸರ್ವರ ಸಹಕಾರದಲ್ಲಿ ಶೇಖರ ಅಜೆಕಾರು ಪರಿಕಲ್ಪನೆಯಲ್ಲಿ ಎ. 4ರಂದು ರಾತ್ರಿ ನಡೆದ 6ನೇ ಅಖೀಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೌರವ ಸ್ವೀಕರಿಸಿ ಮಾತನಾಡಿದರು. ಗಣ್ಯರಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಿದರು. ವಾಯಲೆಟ್‌ ಪಿರೇರಾ, ಡಾ| ಲಕ್ಷ್ಮೀದೇವಿ,ಅಜೀಜ್‌ ಬೈಕಂಪಾಡಿ, ಶಾಲಿನಿ ಆತ್ಮಭೂಷಣ್‌, ದೇವದಾಸ ಈಶ್ವರ ಮಂಗಲ, ರತಿ ಆರ್‌. ಶೆಟ್ಟಿ ಅವರಿಗೆ ಸೇವಾ ರತ್ನ ಗೌರವ ಮತ್ತು ಡಾ| ಮಹಾಬಲೇಶ್ವರ…

Read More