Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಟೇಶ್ವರ ಗ್ರಾಮದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ರಥೋತ್ಸವ ಕಾರ್ಯಕ್ರಮವು ನವೆಂಬರ್ 18ರಿಂದ 20ರ ವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ, ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಬಾರ್, ರೆಸ್ಟೋರೆಂಟ್ ಮತ್ತು ವೈನ್‌ಶಾಪ್‌ಗಳಲ್ಲಿ ಮದ್ಯ ಮಾರಾಟವನ್ನು ನವೆಂಬರ್ 18 ರ ಬೆಳಗ್ಗೆ 6 ರಿಂದ ನವೆಂಬರ್ 19ರ ರಾತ್ರಿ 12ರ ವರೆಗೆ ನಿಷೇಧಿಸಲಾಗಿದೆ. ಅಬಕಾರಿ ಕಾಯ್ದೆ 1965 ಕಲಂ 21 ರನ್ವಯ ಕುಂದಾಪುರ ಪೊಲೀಸ್ ಠಾಣಾ ಸರಹದ್ದಿನ ಕೋಟೇಶ್ವರ, ಹಂಗಳೂರು ಹಾಗೂ ಗೋಪಾಡಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ಎಲ್ಲಾ ರೀತಿಯ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಅಬಕಾರಿ ಸನ್ನದುಗಳನ್ನು ಮುಚ್ಚುವಂತೆ ಹಾಗೂ ಮೇಲ್ಕಂಡ ಗ್ರಾಮಗಳ ವ್ಯಾಪ್ತಿಯಲ್ಲಿ ಒಣದಿನ ಎಂದು ಘೋಷಿಸಿ, ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಕೂರ್ಮಾರಾವ್ ಎಂ. ಆದೇಶ ಹೊರಡಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ರಿ. ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ರಿ. ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್, ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ ವತಿಯಿಂದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಚಿಲುಮೆ-2021(ಭರವಸೆಯ ತಂಗಾಳಿ) ಕಾರ್ಯಕ್ರಮದ ಚಿತ್ರಸಂತೆ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯವಿದು. ಸುಮಾರು ೨೫೦ ಮಕ್ಕಳು ತಯಾರಿಸಿದ ಪೈಟಿಂಗ್ಸ್, ಕಲಾಕೃತಿಗಳ ಪ್ರದರ್ಶನ ನಡೆಯಿತು. ವಿಶೇಷ ಅಂಚೆ ಚೀಟಿ ಪ್ರದರ್ಶನ:ಕನ್ನಡ ನಾಡು ನುಡಿ ಪ್ರತಿಬಿಂಬಿಸುವ ಹಾಗೂ ಮಕ್ಕಳ ದಿನಾಚರಣೆಯ ವಿಶೇಷತೆ ಒಳಗೊಂಡ ಅಂಚೆ ಚೀಟಿ ಪ್ರದರ್ಶನವನ್ನು ಕಲ್ಯಾಣಪುರ ಶ್ರೀಲಕ್ಷ್ಮೀನಾರಾಯಣ ನಾಯಕ್ ಅವರು ಪ್ರದರ್ಶಿಸಿದರು. ಅಲ್ಲದೇ ವಿವಿಧ ದೇಶಗಳ ಅಂಚೆ ಚೀಟಿ, ಮತ್ತು ನಾಣ್ಯಗಳ ಪ್ರದರ್ಶನ ಹಾಗೂ ಭಾರತದಲ್ಲಿ ಬಿಡುಗಡೆಗೊಂಡಿರುವ ಹೊಸ ನಾಣ್ಯ ಆಕರ್ಷಿಸಿದವು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಟೇಶ್ವರದ ಐತಿಹಾಸಿಕ ಶ್ರೀ ದೇವರ ವಾರ್ಷಿಕ ಜಾತೆ ಕೊಡಿಹಬ್ಬ ನ.19ರಂದು ನಡೆಯಲಿದ್ದು, ಹಬ್ಬದ ಧಾರ್ಮಿಕ ವಿಧಿಗಳು, ದೇವರ ಪುರಮೆರವಣಿಗೆ ಈಗಾಗಲೇ ಆರಂಭಗೊಂಡಿವೆ. ಹವಾಮಾನ – ವೈಪರೀತ್ಯದಿಂದಾಗಿ ಸುರಿಯುತ್ತಿರುವ ದೇವಳದ ಭಕ್ತರಿಗೆ ವ್ಯಾಪಾರಿಗಳಲ್ಲಿ ಹಬ್ಬದ ಉತ್ಸಾಹವನ್ನೇ ಕುಂದಿಸಿ ದಂತಿದೆ. ನ.12ರಿಂದ ಮೊದಲ್ಗೊಂಡು ಹಬ್ಬದ ಕಾರ್ಯಕ್ರಮಗಳು ನ.20ರವರೆಗೂ ನಡೆಯುತ್ತವೆ. ದೇವಳ ವ್ಯವಸ್ಥಾಪನಾ ಸಮಿತಿಯು ಪೂರ್ವ ತಯಾರಿಗಳನ್ನೂ ನಡೆಸಿದ್ದು, ಸರಕಾರದ ಮಾರ್ಗಸೂಚಿಗಳನ್ವಯ ಕೋವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಸರಳ ರೀತಿಯಲ್ಲಿ ಹಬ್ಬ ಆಚರಿಸಲು ನಿರ್ಧರಿಸಿದೆ. ಸಾರ್ವಜನಿಕ ಭಕ್ತಾಭಿಮಾನಿಗಳೂ ಸರ್ಕಾರದ ಸೂಚನೆಯನ್ನು ಅನುಸರಿಸಿ ಸರಳ ಹಬ್ಬಾಚರಣೆಗೆ ಸಹರಿಸಬೇಕು ಎಂದು ವ್ಯವಸ್ಥಾಪನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಉತ್ಸವಗಳ ವಿವಿರ: ನ.17ರಂದು ರಂಗೋತ್ಸವ, ಅಶ್ವವಾಹ ಸೋತ್ಸವ, ನ.18ರಂದು ಸಿಂಹವಾಹ ನೋತ್ಸವ, ನ.19ರಂದು ಬೆಳಿಗ್ಗೆ 11.50ಕ್ಕೆ ಮಕರ ಲಗ್ನ ಸುಮುಹೂರ್ತದಲ್ಲಿ ಶ್ರೀ ಮನ್ಮಹಾರ ಥೋತ್ಸವ ಜರುಗಲಿದೆ. ನ.20ರಂದು ಚೂರ್ಣೋತ್ಸವ ಅವಶೃತ ಸ್ನಾನ, ರಾತ್ರಿ ಮರ್ಕೋಡು, ಮಲ್ಯಾಡಿ, ಮತ್ತು ತೆಕ್ಕಟ್ಟೆ ನಾಡವರಿಂದ ಓಕುಳಿ ಸೇವೆ ನಡೆಯಲಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉಡುಪಿ ಜಿಲ್ಲಾ ಬಿಜೆಪಿಯ ನೇತೃತ್ವದಲ್ಲಿ ನ.19ರಂದು ಉಡುಪಿ ಪುರಭವನದಲ್ಲಿ ನಡೆಯಲಿರುವ ‘ಜನ ಸ್ವರಾಜ್’ ಯಾತ್ರೆ ಹಾಗೂ ವಿಧಾನ ಪರಿಷತ್ ಚುನಾವಣೆಯ ಪೂರ್ವಭಾವಿ ಸಭೆ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ನೇತೃತ್ವದಲ್ಲಿ ಹೆಮ್ಮಾಡಿ ಜಯಶ್ರೀ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುಕುಮಾರ್ ಶೆಟ್ಟಿ, ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಉಪಾಧ್ಯಕ್ಷರಾದ ಕಿಶೋರ್ ಕುಮಾರ್, ರವಿ ಅಮೀನ್, ಉಪ್ಪುಂದ ಆನಂದ್ ಖಾರ್ವಿ ಉಪಸ್ಥರಿದ್ದರು. ಮಂಡಲ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು ಹಾಗೂ ಪ್ರಕಾಶ್ ಪೂಜಾರಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ನಮ್ಮ ಮನಸ್ಸುನ್ನು ಗುರಿಯೆಡೆಗೆ ಕೇಂದ್ರೀಕರಿಸಿ ಕಾರ‍್ಯಪ್ರವೃತ್ತರಾದರೆ ಈ ಜನತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ. ಯಶಸ್ಸು ನಾವು ಅದನ್ನು ಎಷ್ಟು ಶ್ರಮದಿಂದ ಸಾಧಿಸಲು ಬಯಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಕಾರ್ಗಿಲ್ ವೀರ ಯೋಧ ನವೀನ್ ನಾಗಪ್ಪ ತಿಳಿಸಿದರು. ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರವೇಶಾತಿ ಕಾರ‍್ಯಕ್ರಮ – ಆಳ್ವಾಸ್ ಆಗಮನ 2021-22ರ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಏನನ್ನು ಸಾಧಿಸಲು ಬಯುಸುತ್ತೀರಿ ಎಂಬುದನ್ನು ಈಗಲೇ ನಿರ್ಧರಿಸಿ. ಆ ಗುರಿಯನ್ನು ಸಾಧಿಸಲು ತನ್ನಿಂದ ಅಸಾಧ್ಯ ಎಂಬ ಭಾವನೆ ಎಂತಹ ಪರಿಸ್ಥಿತಿಯಲ್ಲೂ ಬರಕೂಡದು. ನಿಮ್ಮ ಅಧಮ್ಯ ಶಕ್ತಿಯ ಮೇಲೆ ನಿಮಗೆ ನಂಬಿಕೆ ಇರಲಿ ಎಂದರು. ತಾನು ಇಂಜಿನಿಯರಿಂಗ್ ಮುಗಿಸಿ ಭಾರತೀಯ ಸೈನ್ಯಕ್ಕೆ ಅಧಿಕಾರಿಯಾಗಿ ಸೇರ್ಪಡೆಗೊಂಡಾಗ, ಹಲವರು ತನ್ನ ಆಯ್ಕೆಯನ್ನು ಹೆದರಿಸಿ ಮೂದಲಿಸಿದವರಿಗೆ, ತಾನು ಸೈನ್ಯ ಸೇರಿ ಹಣ, ಐಶ್ವರ‍್ಯ, ಅಂತಸ್ತುನ್ನು ಸಂಪದಿಸುತ್ತೇನೋ ಗೊತ್ತಿಲ್ಲ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಅರ್ಹರಿರುವ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ನೀಡುವುದರೊಂದಿಗೆ ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಣಕ್ಕೆ ತರಲು ಮುಂದಾಗಬೇಕು ಎಂದು ಕರ್ನಾಟಕ ಲೋಕಾಯುಕ್ತ ನ್ಯಾ. ಪಿ. ವಿಶ್ವನಾಥ ಶೆಟ್ಟಿ ಹೇಳಿದರು. ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 9.99 ಲಕ್ಷ ಜನರಿಗೆ ಕೋವಿಡ್ ನಿರೋಧಕ ಲಸಿಕೆ ಹಾಕಲು ಗುರುತಿಸಲಾಗಿದ್ದು, ಈಗಾಗಲೇ 9.22 ಲಕ್ಷ ಜನರಿಗೆ ಪ್ರಥಮ ಡೋಸ್ ಲಸಿಕೆ ನೀಡುವುದರೊಂದಿಗೆ, 93.5 ರಷ್ಟು ಪ್ರಗತಿಯಾಗಿದೆ. ಇದುವರೆಗೆ 2 ನೇ ಡೋಸ್ ಗೆ ಅರ್ಹರಿರುವ 6.29 ಲಕ್ಷ ಮಂದಿಯಲ್ಲಿ 5.81 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಶೇ. 58.16 ರಷ್ಟು ಮಂದಿ 2 ಡೋಸ್ ಲಸಿಕೆಯನ್ನು ಪಡೆದಿರುತ್ತಾರೆ. ಇದುವರೆಗೆ ಲಸಿಕೆಯನ್ನು ಪಡೆಯದೇ ಇರುವವರು ಶೇ.8 ರಷ್ಟಿದ್ದು, ಇವರುಗಳು ಅನ್ಯ ಕಾರಣಗಳಿಂದ ಲಸಿಕೆ ಪಡೆಯಲು ಬಾರದೇ ಇರುವುದು ಕಂಡು ಬಂದಿರುತ್ತದೆ, ಇವರುಗಳನ್ನು ಸ್ಥಳೀಯ ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು ಹಾಗೂ ಸಮಾಜದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ರೋಟರಿ ಕ್ಲಬ್ ಬ್ರಹ್ಮಾವರದ ಆಶ್ರಯದಲ್ಲಿ ಅಲ್ಲಿನ ರೋಟರಾಕ್ಟ್ ಕ್ಲಬ್ ಸಹಯೋಗದೊಂದಿಗೆ ಬ್ರಹ್ಮಾವರದ ರೋಟರಿ ಹಾಲ್ ನಲ್ಲಿ ರೋಟರಾಕ್ಟ್ ಕ್ಲಬ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ಸಾಂಸ್ಕೃತಿಕ ಉತ್ಸವ ಕಲಾ ಸಂಗಮದಲ್ಲಿ ಅತ್ಯುತ್ತಮವಾದ ನಿರ್ವಹಣೆಯನ್ನು ನೀಡುವ ಮೂಲಕ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರೋಟರಾಕ್ಟ್ ಕ್ಲಬ್ ಚಾಂಪಿಯನ್‌ಶಿಪ್ ಪಡೆದುಕೊಂಡದೆ. ಎಂಟು ತಂಡಗಳು ಭಾಗವಹಿಸಿದ್ದ ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸರಸ್ವತಿ ವಿದ್ಯಾಲಯದ ರೋಟರಾಕ್ಟ್ ವಿದ್ಯಾರ್ಥಿಗಳು ನಿರೂಪಣೆಯಲ್ಲಿ ಪ್ರಥಮ ಸ್ಥಾನ, ಪ್ರಹಸನದಲ್ಲಿ ದ್ವಿತೀಯ ಸ್ಥಾನ ಹಾಗೂ ನೃತ್ಯ ಮತ್ತು ಹಾಡುಗಾರಿಕೆಯಲ್ಲಿ ತೃತೀಯ ಸ್ಥಾನವನ್ನು ಗಳಿಸುವ ಮುಖೇನ ಅತಿ ಹೆಚ್ಚು ಬಹುಮಾನ ಗಳಿಸಿದ ತಂಡವಾಗಿ ಚಾಂಪಿಯನ್‌ಶಿಪ್ ಪಡೆದರು. ಸರಸ್ವತಿ ವಿದ್ಯಾಲಯದ ರೋಟರಾಕ್ಟ್ ಕ್ಲಬ್ ಅಧ್ಯಕ್ಷೆ ಅಮೀಕ್ಷಾ, ವೈಷ್ಣವಿ, ಶ್ರೇಯ ಖಾರ್ವಿ, ಪ್ರಭಾಕರ್, ಅಭಿಷೇಕ, ಆದಿತ್ಯ,ರಾಹುಲ್,ಮಹಿಮಾ, ರಂಜಿತಾ, ರಕ್ಷಿತಾ, ಪೂಜಾ, ಸಾಯಿರಾಜ್, ಹರೀಶ್, ಕಿರಣ್, ವಿನಾಯಕ, ದೀಕ್ಷಾ, ತ್ರಿಶಾ, ಸುಹಾನಾ, ಶ್ರೇಯಾ ಮತ್ತು ಸುಮಂತ್ ಭಾಗವಹಿಸಿದ್ದರು. ಗಂಗೊಳ್ಳಿಯ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ದಾನದ 2021ನೇ ಸಾಲಿನ ವಾರ್ಷಿಕ ರಥೋತ್ಸವ ಕಾರ್ಯಕ್ರಮವು ನ. 18 ರಿಂದ 20ರ ತನಕ ನಡೆಯಲಿದ್ದು ಸಂಚಾರ ನಿಯಂತ್ರಣದ ದೃಷ್ಠಿಯಿಂದ ಪೊಲೀಸ್ ಇಲಾಖೆ ಭಕ್ತಾದಿಗಳ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ವಿವಿಧ ಸ್ಥಳಗಳನ್ನು ಗುರುತಿಸಲಾಗಿದೆ. ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಗುರುತಿಸಿದ ವಿವಿಧ ಸ್ಥಳಗಳ ವಿವರ: ಗೋಪಾಡಿ, ಬೀಜಾಡಿಯಿಂದ ಬರುವ ವಾಹನಗಳಿಗೆ ಪ್ರಾಥಮಿಕ ಶಾಲಾ ಕ್ರಾಸ್ ಕೋಟೇಶ್ವರ ಕಾಳಾವರ, ಹಾಲಾಡಿ ಕಡೆಯಿಂದ ಬರುವ ವಾಹನಗಳಿಗೆ – ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಕೋಟೇಶ್ವರ ( ದಿನೇಶ ಕಾಮತ್ ರವರ ಮನೆ ಬಳಿ) ಮತ್ತು ಶಂಕರ ಕಾಮತ್ ರವರ ಮನೆ ಬಳಿ ಕೋಟೇಶ್ವರ ಕುಂದಾಪುರ ಕಡೆಯಿಂದ ಬರುವ ವಾಹನಗಳಿಗೆ – ಗುರುಪ್ರಸಾದ ಹೋಟೇಲ್ ಬಳಿ ಕೋಟೇಶ್ವರ, ಆರ್ಯ ಹೋಟೇಲ್ ಬಳಿ ಕೋಟೇಶ್ವರ ಮತ್ತು ಸಹನಾ ಹೋಟೇಲ್ ಪಾರ್ಕಿಂಗ್ ಅಂಕದಕಟ್ಟೆ ಕೋಟೇಶ್ವರ. ಕುಂಭಾಶಿ, ತೆಕ್ಕಟೆ, ಉಡುಪಿಯಿಂದ ಬರುವ ವಾಹನಗಳಿಗೆ ಹೈಸ್ಕೂಲ್ ಬಳಿ ಕೋಟೇಶ್ವರ, ಕೋಸ್ಟಲ್ ಕ್ರೋನ್ ಕಾಂಪ್ಲೇಕ್ಸ್ ಬಳಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅವಿನಾಶ್ ಮೆಡಿಕಲ್ಸ್ ಮಾಲಿಕ, ರಂಗ ನಿರ್ದೇಶಕ, ಸಂಗೀತ ಭಾರತಿ ಟ್ರಸ್ಟಿನ ಸಂಚಾಲಕ, ಎ. ವೈಕುಂಠ ಹೆಬ್ಬಾರ್ (83) ನಿಧನರಾದರು. ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ ಕ್ಷೇತ್ರದಲ್ಲಿ ಬಹಳ ಆಸಕ್ತಿ ಹೊಂದಿದ್ದ ಅವರು ಕುಂದಾಪುರದಲ್ಲಿ ಹಿಂದುಸ್ತಾನಿ ಸಂಗೀತವನ್ನು ಜನಪ್ರೀಯಗೊಳಿಸಲು ಬಹಳ ಶ್ರಮಿಸಿದವರು. ಮೃತರು, ಪತ್ನಿ, ಖ್ಯಾತ ವೈದ್ಯೆ ಛಾಯಾ ಹೆಬ್ಬಾರ್, ಪುತ್ರ ಆದರ್ಶ ಆಸ್ಪತ್ರೆಯ ಮುಖ್ಯಸ್ಥ, ಆದರ್ಶ ಹೆಬ್ಬಾರ್ ಹಾಗೂ ಪುತ್ರಿ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕನ್ನಡದಲ್ಲಿ ಮಕ್ಕಳು ಹಾಡಿ ಮುದಗೊಳ್ಳಬಹುದಾದ ಕವನಗಳು ಬೇಕಷ್ಟಿಲ್ಲ. ಶಿಕ್ಷಕರಾಗಿ ಮಕ್ಕಳ ಮನೋಧರ್ಮ ಅರಿತಿರುವ ಕೆ. ಮಹಾಬಲ ಅವರ ಎರಡನೆ ಮಕ್ಕಳ ಕವನ ಸಂಕಲನ ‘ಗಾನ ವನಸಿರಿ’ ಆ ನಿಟ್ಟಿನಲ್ಲಿ ಒಂದು ಉತ್ತಮ ಕೊಡುಗೆ ಎಂದು ನಿವೃತ್ತ ಉಪನ್ಯಾಸಕ ಪಿ. ಶೇಷಪ್ಪಯ್ಯ ಹೇಳಿದರು. ಜಿಲ್ಲಾ ಕನ್ನಡ-ತುಳು ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭನುವಾರ ನಡೆದ ಸಮಾರಂಭದಲ್ಲಿ ಅವರು ಶಿಕ್ಷಕ ಮಹಾಬಲ ಕೆ. ಅವರ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು. ಕೃತಿ ಪರಿಚಯಿಸಿದ ಖಂಬದಕೋಣೆ ಸಂವೇದನಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸುಬ್ರಹ್ಮಣ್ಯ ಭಟ್ ಮಾತನಾಡಿ, ಸಂಕಲನದಲ್ಲಿರುವ 70 ಕವನಗಳು ಸರಳ ಹಾಗೂ ಪ್ರಾಸಬದ್ಧವಾಗಿವೆ. ಮಕ್ಕಳು ಆಡುತ್ತ, ಕುಣಿಯುತ್ತ ಹಾಡಿ ಅವುಗಳ ಆಶಯ ಮತ್ತು ನೀತಿಯನ್ನು ಅರಿತು ಅಳವಡಿಸಿಕೊಳ್ಳಬಹುದಾಗಿದೆ. ಕವನಗಳು ಪ್ರಮುಖವಾಗಿ ಪ್ರಕೃತಿ, ಪ್ರಾಣಿ, ದೇಶ, ರೈತ, ಆದರ್ಶಕ್ತಿಗಳ ಕುರಿತಾಗಿವೆ. ವಿಷಯಗಳು ಹೊಸ ದೃಷ್ಟಿಕೋನದಿಂದ ಅಭಿವ್ಯಕ್ತವಾಗಿವೆ. ಮಕ್ಕಳ ಬಾಲ್ಯವನ್ನು ಮರುರೂಪಿಸುವ ಬಾಲಲೀಲೆ,…

Read More