ಕುಂದಾಪ್ರ ಡಾಟ್ ಕಂ ಸುದ್ದಿ.ಕೋಟ: ಈ ದೇಶದ ಪ್ರಮುಖ ಆಸ್ತಿ ಕೃಷಿ ಮತ್ತು ಋಷಿ ಪರಂಪರೆ ಅದನ್ನು ಎಂದು ಮರೆಯಬಾರದು ಎಂದು ಪಾಂಡೇಶ್ವರ ರಕ್ತೇಶ್ವರಿ ದೇವಸ್ಥಾನ ಧರ್ಮದರ್ಶಿ ಕೆ. ವಿ ರಮೇಶ್ ರಾವ್ ಹೇಳಿದ್ದಾರೆ. ಪಂಚವರ್ಣ ಯುವಕ ಮಂಡಲ ಕೋಟ ಇದರ ನೇತ್ರತ್ವದಲ್ಲಿ ರೈತಧ್ವನಿ ಸಂಘ ಕೋಟ, ಗಿಳಿಯಾರು ಯುವಕ ಮಂಡಲ, ಮಣೂರು ಫ್ರೆಂಡ್ಸ್, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಗೀತಾನಂದ ಫೌಂಡೇಶನ್ ಮಣೂರು ಇವರುಗಳ ಸಹಯೋಗದಲ್ಲಿ ಬುಧವಾರ 13 ನೇ ಆವೃತಿಯ ತಿಂಗಳ ಸರಣಿ ಕಾರ್ಯಕ್ರಮ ಸಾಧಕ ಕೃಷಿಕನ ಗೌರವಿಸುವ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೃಷಿಕ ಕಾರ್ಯನಿರ್ವಹಿಸಿದರೆ ಮಾತ್ರ ನಮ್ಮ ಜೀವನ ನಡೆಯಲು ಸಾಧ್ಯವಿದೆ ಇಲ್ಲವಾದಲ್ಲಿ ಆಧುನಿಕ ಜಗತ್ತು ಪ್ಲಾಸ್ಟಿಕ್ ಅನ್ನ ಬಳಕೆ ಮಾಡುವ ಸ್ಥಿತಿ ಸೃಷ್ಠಿಯಾಗಬಹುದು. ಆದರೆ ಅಂತಹ ರೈತನ ಗೋಳು ಇಂದಿನ ಸರಕಾರ ಕೇಳದ ಸ್ಥಿತಿ ನಿರ್ಮಾಗೊಳಿಸಿದೆ.ಹೀಗಾದರೆ ಕೃಷಿ ಉಳಿಯಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.ರೈತ ಸಮುದಾಯ ಯಾವುದೇ ಬೆಳೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ರೋಟರಿ ಕ್ಲಬ್ ಗಂಗೊಳ್ಳಿ ಪೊಲೀಸ್ ಠಾಣೆಗೆ ಕಂಪ್ಯೂಟರ್ ಕೊಡುಗೆಯಾಗಿ ನೀಡಲಾಯಿತು. ಗುರುವಾರ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಗಂಗೊಳ್ಳಿ ಪೊಲೀಸ್ ಠಾಣಾ ಉಪನಿರೀಕ್ಷಕ ನಂಜಾ ನಾಯ್ಕ್ ಅವರಿಗೆ ಕಂಪ್ಯೂಟರ್ ಹಸ್ತಾಂತರಿಸಿ ಮಾತನಾಡಿದ ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ ಎಂ.ಜಿ., ತ್ವರಿತ ಹಾಗೂ ಸ್ನೇಹ ಪರವಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಗಂಗೊಳ್ಳಿ ಠಾಣೆಯ ಅಗತ್ಯತೆಯನ್ನು ಮನಗಂಡು ರೋಟರಿ ಕ್ಲಬ್ ವತಿಯಿಂದ ಈ ಕೊಡುಗೆಯನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು. ರೋಟರಿ ಜಿಲ್ಲೆ ೩೧೮೨ರ ಝೋನಲ್ ಲೆಫ್ಟಿನೆಂಟ್ ಕೆ.ರಾಮನಾಥ ನಾಯಕ್, ರೋಟರಿ ಸದಸ್ಯರಾದ ಲಿಫ್ಟನ್ ಒಲಿವೇರಾ, ಪ್ರವೀಣ್, ಠಾಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 1970ರಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ ಲತಾ ಮಂಗೇಶ್ಕರ್ ಅವರಿಗೆ ಅಭಿಮಾನದಿಂದ ಪತ್ರ ಬರೆದಿದ್ದರು. ’ಲತಾ’ ಅವರು ಶೆಣೈಯವರ ಸಂಗೀತಾಭಿಮಾನಕ್ಕೆ ಸಂತೋಷಗೊಂಡು ಪತ್ರದೊಂದಿಗೆ ಸಹಿ ಹೊಂದಿದ್ದ ತಮ್ಮ ಫೋಟೋ ಸಹ ಕಳುಹಿಸಿದ್ದರು. ಕುಂದಾಪುರದ ಶ್ರೀ ಗಣೇಶ್ ನೋವೆಲ್ಟಿಸ್ನ ಮಾಲಕರಾದ ಕೆ. ಜನಾರ್ಧನ ಶೆಣೈ ಹಲವು ಪ್ರಖ್ಯಾತ ಸಂಗೀತಗಾರರ ಪತ್ರ ಮತ್ತು ಛಾಯಾಚಿತ್ರ ಹೊಂದಿದ್ದು, ಲತಾ ಮಂಗೇಶ್ಕರ್ ಅವರ ಪತ್ರ ಮತ್ತು ಸಹಿ ಹಾಕಿದ ಫೋಟೋ ಐವತ್ತೆರಡು ವರ್ಷಗಳಿಂದ ಕಾಪಾಡಿಕೊಂಡು ಇಟ್ಟಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಫೆ.10: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ವಿಕಲಚೇತನರಿಗೆ ಆಧಾರ ಸ್ವ-ಉದ್ಯೋಗ ಯೋಜನೆಯಡಿ ಲಾಭದಾಯಕ ಸ್ವ-ಉದ್ಯೋಗ ಕೈಗೊಳ್ಳಲು 1 ಲಕ್ಷ ರೂ. ವರೆಗೆ ಸಾಲ ಸೌಲಭ್ಯ ಒದಗಿಸಲು ಅರ್ಹ ಪರಿಶಿಷ್ಟ ಜಾತಿಯವರಿಗೆ ಶೇಕಡ 50 ರಷ್ಟು ಬ್ಯಾಂಕ್ ಸಾಲ ಮತ್ತು ಶೇಕಡ 50 ರಷ್ಟು ಸಬ್ಸಿಡಿ ಒದಗಿಸಲಾಗುವುದು. ಬಿ.ಪಿ.ಎಲ್ ಕಾರ್ಡ್ ಹೊಂದಿರುವ, 18 ರಿಂದ 55 ವರ್ಷದೊಳಗಿನ ವಿಕಲಚೇತನರು ಫೆಬ್ರವರಿ 16 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಿ ಬ್ಲಾಕ್, ಜಿಲ್ಲಾ ಪಂಚಾಯತ್ ವಿಭಾಗ, ರಜತಾದ್ರಿ, ಮಣಿಪಾಲ ಇಲಾಖೆಯ ದೂರವಾಣಿ ಸಂಖ್ಯೆ: 0820-2574810 / 811 ಅನ್ನು ಸಂಪರ್ಕಿಸುವAತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗುಜ್ಜಾಡಿ ಗ್ರಾಪಂ ವ್ಯಾಪ್ತಿಯ ಐದು ಕೊರಗ ಕುಟುಂಬಗಳಿಗೆ ಈ ಹಿಂದಿನ ಆರ್ಥಿಕ ವರ್ಷಗಳಲ್ಲಿ ಬೇಡಿಕೆಯಾಧಾರಿತವಾಗಿ ಅನುದಾನ ನೀಡುತ್ತಿದ್ದು ಮುಂದಿನ ಆರ್ಥಿಕ ವರ್ಷದಲ್ಲೂ ಕೊರಗ ಕುಟುಂಬಗಳ ಅಭಿವೃದ್ಧಿ ಕುರಿತು ಅನುದಾನವನ್ನು ಮೀಸಲಿಡಲಾಗುವುದು. ಕೊರಗ ಕುಟುಂಬದ ಎಲ್ಲಾ ಫಲಾನುಭವಿಗಳ ಸರ್ವತೋಮುಖ ಅಭಿವೃದ್ಧಿಗೆ ಗ್ರಾಮ ಪಂಚಾಯತ್ ಸಿದ್ಧವಿದ್ದು, ಯಾವುದೇ ಗೊಂದಲಗಳಿಗೆ ಆಸ್ಪದ ನೀಡುವುದಿಲ್ಲ ಎಂದು ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಮುನಾ ಪೂಜಾರಿ ಹೇಳಿದರು. ಗುಜ್ಜಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮಂಗಳವಾರ ನಡೆದ ಗುಜ್ಜಾಡಿ ಗ್ರಾಮ ಪಂಚಾಯತ್ನ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೊರಗ ಕುಟುಂಬಗಳಿಗೆ ಯಾವುದೇ ಅನುದಾನ ಸಿಗುತ್ತಿಲ್ಲ ಮತ್ತು ಅನುದಾನದ ಸಮರ್ಪಕ ಬಳಕೆಯಾಗುತ್ತಿಲ್ಲ. ಗ್ರಾಪಂ.ನ ಶೇ.೨೫ರ ಅನುದಾನದ ದುರ್ಬಳಕೆಯಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ಕೊರಗ ಕುಟುಂಬಗಳಿಗೆ ಮೀಸಲಿಟ್ಟ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡಲಾಗಿದೆ ಎಂದರು. ಗ್ರಾಪಂ ವತಿಯಿಂದ ೫ ಕೊರಗ ಕುಟುಂಬಗಳಿಗೆ ಸಿಗುವ ಸವಲತ್ತುಗಳು ಹಾಗೂ ಅನುದಾನದ ಮಾಹಿತಿ ನೀಡಿದ ಗ್ರಾಮ ಪಂಚಾಯತ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಫೆ.8: ತೋಟಗಾರಿಕಾ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ರೈತರ ಹಾಗೂ ಸಾರ್ವಜನಿಕರ ಬೇಡಿಕೆ ಆಧಾರದ ಮೇಲೆ ವಿವಿಧ ತೋಟಗಾರಿಕೆ ಸಸಿ ಗಿಡಗಳನ್ನು ಉತ್ಪಾದಿಸಿ, ಇಲಾಖಾ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಉಡುಪಿ ತಾಲೂಕಿನ ಶಿವಳ್ಳಿ, ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ, ಕುಂದಾಪುರ ತಾಲೂಕಿನ ಕುಂಭಾಶಿ ಹಾಗೂ ಕೆದೂರು ಮತ್ತು ಕಾರ್ಕಳ ತಾಲೂಕಿನ ರಾಮಸಮುದ್ರ ಹಾಗೂ ಕುಕ್ಕಂದೂರು ತೋಟಗಾರಿಕಾ ಕ್ಷೇತ್ರಗಳಲ್ಲಿ ಉತ್ತಮ ಗುಣಮಟ್ಟದ ಅಡಿಕೆ (20 ರೂ.), ಕಸಿ ಗೇರು (32 ರೂ.), ಕಾಳುಮೆಣಸು (11 ರೂ.), ತೆಂಗು (70 ರೂ.) ಹಾಗೂ ಮಲ್ಲಿಗೆ ಗಿಡಗಳನ್ನು ಉತ್ಪಾದಿಸಲಾಗುತ್ತಿದ್ದು, ಗಿಡಗಳನ್ನು ಖರೀದಿಸಲು ಸಂಬAಧಪಟ್ಟ ತೋಟಗಾರಿಕಾ ಕ್ಷೇತ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ಶಿವಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿ ಕಾಳುಮೆಣಸು, ನಿಂಬೆ, ಪುನರ್ಪುಳಿ, ಲವಂಗ, ಜಾಯಿಕಾಯಿ ಹಾಗೂ ಇತರೆ ಅಲಂಕಾರಿಕ ಗಿಡಗಳು ಮತ್ತು ಕಾರ್ಕಳದ ರಾಮಸಮುದ್ರ ತೋಟಗಾರಿಕಾ ಕ್ಷೇತ್ರದಲ್ಲಿ ಅಡಿಕೆ, ಕಸಿಗೇರು, ಗಿಡಗಳು ಲಭ್ಯವಿದ್ದು, ಸಹಾಯಕ ತೋಟಗಾರಿಕೆ ನಿರ್ದೇಶಕ ವರುಣ ಕೆ.ಜೆ ಮೊ.ನಂ: 7892326323, ಬ್ರಹ್ಮಾವರದ ವಾರಂಬಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ನಾಗೂರು ಉರ್ದು ಹಿ.ಪ್ರಾ.ಶಾಲೆಯ ಸಹಶಿಕ್ಷಕ ಭಾಸ್ಕರ ಬಾಡ ಅವರು ಕನಾ೯ಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಭಾಸ್ಕರ ಬಾಡ ಅವರು ಶಟಲ್ ಬ್ಯಾಡ್ಮಿಂಟನ್ ನ ಸಿಂಗಲ್ಸ್ ವಿಭಾಗದಲ್ಲಿ ಪ್ರಥಮ ಹಾಗೂ ಡಬಲ್ಸ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸಮಾಜಮುಖಿ ಚಿಂತನೆಯ ಜೊತೆಗೆ ಕಷ್ಟದಲ್ಲಿರುವ ಬಡವರ, ಅಸಾಯಕರ, ರೋಗಿಗಳ, ಅಂಗವಿಕಲರ ಮುಖದಲ್ಲಿ ನಗು ಕಾಣಬೇಕಾದರೆ ನಾವು ಅಂತವರನ್ನು ಗುರುತಿಸಿ ತಕ್ಷಣ ಸ್ಪಂದಿಸಬೇಕು. ಹೃದಯಪೂರ್ವಕವಾಗಿ ಮಾಡಿದ ಸೇವೆಗಿಂತ ದೊಡ್ಡ ಯಜ್ಞ ಮತ್ತೊಂದಿಲ್ಲ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಹೆರ್ಗ ವಿಶ್ವನಾಥ ಶೆಟ್ಟಿ ಹೇಳಿದರು. ನಾವುಂದ ಲಯನ್ಸ್ ಕ್ಲಬ್ಗೆ ಅಧಿಕೃತ ಭೇಟಿ ನೀಡಿ, ಸಂಜೆ ಮಾಲಸಾ ಆರ್ಕೆಡ್ನಲ್ಲಿ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಆರಂಭಗೊಂಡ ಕೇವಲ ಎರಡು ವರ್ಷಗಳಲ್ಲಿ ನಾವುಂದ ಕ್ಲಬ್ ಕಳೆದ ಡಿಸೆಂಬರ್ನಲ್ಲಿ ಟಾಪ್ ೧೦ ಕ್ಲಬ್ಗಳಲ್ಲಿ ೫ನೇ ಸ್ಥಾನ ಪಡೆದುಕೊಂಡ ಬಗ್ಗೆ ತುಂಬಾ ಹೆಮ್ಮೆಯಾಗುತ್ತದೆ. ಸೇವಾ ಮನೋಭಾವನೆಯಿರುವ ಯುವಕರನ್ನು ಕ್ಲಬ್ಗೆ ಸೇರಿಸಿಕೊಂಡು ಗ್ರಾಮೀಣಾಭಿವೃದ್ಧಿಯತ್ತ ಗಮನ ಹರಿಸಬೇಕು. ಸೇವೆಯೇ ನಮ್ಮೆಲ್ಲರ ಪ್ರಮುಖ ಅಜೆಂಡವಾಗಬೇಕು. ಸಹೋದರತೆಯ ಮನೋಭಾವನೆಯಿಂದ ಎಲ್ಲರೂ ಪರಸ್ಪರ ಸಂತೋಷ ಹಂಚಿಕೊಂಡು ಜೀವನ ಸಾಗಿಸುವಂತಾಗಬೇಕು ಎಂದರು. ಲಯನ್ಸ್ ಅಧ್ಯಕ್ಷ ನರಸಿಂಹ ದೇವಾಡಿಗ ಅಧ್ಯಕ್ಷತೆವಹಿಸಿದ್ದರು. ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ಐದು ನೂತನ ಸದಸ್ಯರಿಗೆ ಲಯನ್ಸ್ ದ್ವಿತೀಯ ಗವರ್ನರ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ನಾವುಂದ: ಕಿರಿಮಂಜೇಶ್ವರ ಶುಭದಾ ಆಂಗ್ಲಮಾಧ್ಯಮ ಶಾಲೆಯಲ್ಲಿ ಭಾರತರತ್ನ ಪುರಸ್ಕ್ರತ, ಗಾನ ಸಾಮ್ರಾಜ್ಞೆ ಲತಾ ಮಂಗೇಶ್ಕರ್ರವರ ಭಾವ ಚಿತ್ರಕ್ಕೆ ಪುಷ್ಪ ನಮನದೊಂದಿಗೆ ಶೃದ್ದಾಂಜಲಿ ಅರ್ಪಿಸಲಾಯಿತು. ಮುಖ್ಯ ಶಿಕ್ಷಕರಾದ ರವಿದಾಸ್ ಶೆಟ್ಟಿ ಮಾತನಾಡಿ ಏಳುವರೆ ದಶಕಗಳ ಕಾಲ ಭಾರತಿಯ ಸಿನಿಮಾ ಕ್ಷೇತ್ರದ ಅನಭಿಷಕ್ತ ರಾಣಿಯಾಗಿ, ಸ್ವರ ಸಾಮ್ರಾಜ್ಞೆಯಾಗಿ ಮೆರೆದ ಲತಾ ಮಂಗೇಶ್ಕರ್ರವರ ನಿಧನವು ದೇಶಕ್ಕೆ, ಸಂಗೀತ ಸಾಮ್ರಾಜ್ಯಕ್ಕೆ ತುಂಬಲಾರದ ನಷ್ಟ, ಭಾರತೀಯ ಸಂಗೀತ ಕ್ಷೇತ್ರದ ಧೀಮಂತ ಮಹಿಳೆಯಾಗಿರುವ ಲತಾಜೀ ಅವರನ್ನು ಮುಂದಿನ ಪೀಳಿಗೆಯವರು ನೆನಪಿಸಿಕೊಳ್ಳುವಂತಹ ವ್ಯಕ್ತಿತ್ವ ಹಾಗೂ ಅವರ ಮಧುರ ಧ್ವನಿ ಪ್ರಪಂಚದಾದ್ಯಂತ ಜನರನ್ನು ಮಂತ್ರ ಮುಗ್ಧಗೊಳಿಸುವ ಅಪ್ರತಿಮ ಸಾಮರ್ಥ್ಯ ಹೊಂದಿದ್ದು ಅವರ ನಿಧನದಿಂದ ದೇಶ ಅಮೂಲ್ಯ ಸಂಪತ್ತನ್ನು ಕಳೆದುಕೊಂಡಿದೆ ಎಂದು ಹೇಳಿದರು. ಸಂತಾಪ ಸೂಚಕ ಸಭೆಯಲ್ಲಿ ಶುಭದಾ ಸಂಸ್ಥೆಯ ಅಧ್ಯಕ್ಷರಾದ ಡಾ. ಎನ್.ಕೆ. ಬಿಲ್ಲವ, ಸಲಹಾ ಸಮಿತಿಯ ಸದಸ್ಯರಾದ ರಾಜೀವ ಶೆಟ್ಟಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ ಸಿ.ಎ/ಸಿ.ಎಸ್/ಸಿ.ಎಮ್.ಎ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಸಿ.ಎ ಅಂತಿಮ ಪರೀಕ್ಷೆ ಮತ್ತು ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುವುದರ ಮೂಲಕ ವಿಶೇಷ ಸಾಧನೆಗೈದಿದ್ದಾರೆ. ಡಿಸೆಂಬರ್ನಲ್ಲಿ ನಡೆದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಪುನೀತ್ ಶೆಟ್ಟಿ (449) ಅಂಕಗಳನ್ನು ಪಡೆಯುವುದರ ಮೂಲಕ ಸಿ.ಎ ಪರೀಕ್ಷೆ ಎಲ್ಲಾ ಹಂತಗಳನ್ನು ತೇರ್ಗಡೆ ಹೊಂದಿ ಲೆಕ್ಕ ಪರಿಶೋಧಕನಾಗಿ ಹೊರಹೊಮ್ಮಿದ್ದಾರೆ. ಮತ್ತು ಅಂತಿಮ ಪರೀಕ್ಷೆಯ ಗ್ರೂಪ್ 2 ವಿಭಾಗದಲ್ಲಿ ಪ್ರಕಾಶ್ ಶೆಟ್ಟಿ 400 ಅಂಕಗಳಲ್ಲಿ 212 ಅಂಕ ಪಡೆಯುವುದರ ಮೂಲಕ ಸಿ.ಎ ಅಂತಿಮ ಪರೀಕ್ಷೆಯ ಎರಡನೇ ಗ್ರೂಪ್ನ್ನು ಉತ್ತೀರ್ಣರಾಗಿರುತ್ತಾರೆ. ಡಿಸೆಂಬರ್ 2021 ರಲ್ಲಿ ನಡೆದ ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಹಲವು ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಅನಿಕೇತ್ ಕೆದ್ಲಾಯ(278), ಕಾರ್ತಿಕ್ ವಿ(260), ಶ್ರೀ ನಿಧಿ ಹೆಗ್ಡೆ(237), ಅನುಷ್.ಎ.ದೇವಾಡಿಗ(236), ಶ್ಯಾವ್ಯ ಶೆಟ್ಟಿ(227),…
