ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ಅಚ್ಲಾಡಿ ಸಮೀಪದ ಮೂಡುಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‌ಗಳನ್ನು ವಿತರಿಸುವ ಕಾರ್ಯಕ್ರಮ ಗುರುವಾರ ಮಧ್ಯಾಹ್ನ ಶಾಲಾ ಆವರಣದಲ್ಲಿ ನಡೆಯಿತು. ರೋಟರಿ ಕ್ಲಬ್‌ನ ಸದಸ್ಯ ಭಾಸ್ಕರ್ ಪೂಜಾರಿ ಅವರ ಪ್ರಾಯೋಜಕತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಹಾಯಕ ಗವರ್ನರ್ ಹಾಗೂ ಕ್ಲಬ್‌ನ ಜಿಎಸ್‌ಆರ್ ಚಂದ್ರಶೇಖರ್ ಮೆಂಡನ್, ಮಾತನಾಡಿ, “ಶಿಕ್ಷಣವೇ ಮಕ್ಕಳ ಭವಿಷ್ಯ ರೂಪಿಸುವ ಪ್ರಮುಖ ಸಾಧನವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಗತ್ಯ ಶೈಕ್ಷಣಿಕ ಸಾಮಗ್ರಿಗಳನ್ನು ಒದಗಿಸುವುದು ಸಮಾಜದ ಜವಾಬ್ದಾರಿಯಾಗಿದೆ. ರೋಟರಿ ಸಂಸ್ಥೆ ಶಿಕ್ಷಣ, ಆರೋಗ್ಯ ಹಾಗೂ ಸಮಾಜಮುಖಿ ಸೇವಾ ಕಾರ್ಯಗಳಿಗೆ ಸದಾ ಆದ್ಯತೆ ನೀಡುತ್ತಿದ್ದು, ಇಂತಹ ಸೇವಾ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಲು ನೆರವಾಗುತ್ತವೆ. ಸಮಾಜದ ಸಹಕಾರದಿಂದ ಇನ್ನಷ್ಟು ಸೇವಾ ಕಾರ್ಯಗಳನ್ನು ಮುಂದುವರಿಸಲಾಗುವುದು” ಎಂದು ಹೇಳಿದರು. ರೋಟರಿ ಕ್ಲಬ್ ಕೋಟ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಚಾತುರ್ಮಾಸ್ಯದ ಪೂರ್ವಭಾವಿ ಸಂಚಾರದ ಅಂಗವಾಗಿ ಎಡನೀರು ಮಠದ ಪೀಠಾಧೀಶರಾದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಆಗಮಿಸಿ ಶ್ರೀ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಅವರು ಶ್ರೀಪಾದಂಗಳವರನ್ನು ಪೂರ್ಣಕುಂಭ ಹಾಗೂ ವಾದ್ಯಗೋಷ್ಠಿಯೊಂದಿಗೆ ಭವ್ಯವಾಗಿ ಸ್ವಾಗತಿಸಿ ಫಲಕಾಣಿಕೆಯನ್ನು ಸಮರ್ಪಿಸಿದರು. ಪರ್ಯಾಯ ಅರ್ಚಕರಾದ ಕೆ. ಸೂರ್ಯನಾರಾಯಣ ಉಪಾಧ್ಯಾಯ ಶ್ರೀಪಾದಂಗಳವರಿಗೆ ದೇವರ ವಿಶೇಷ ಪ್ರಸಾದವನ್ನು ಅರ್ಪಿಸಿ, ಮುಂಬರುವ ಚಾತುರ್ಮಾಸ್ಯ ವ್ರತವು ಯಶಸ್ವಿಯಾಗಿ ನೆರವೇರಲೆಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಅರ್ಚಕ ವೃಂದ, ಪರ್ಯಾಯ ಅರ್ಚಕರು, ದೇವಸ್ಥಾನದ ಸಿಬ್ಬಂದಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದು, ಶ್ರೀಪಾದಂಗಳವರಿಂದ ಫಲಮಂತ್ರಾಕ್ಷತೆಯನ್ನು ಪಡೆದು ಆಶೀರ್ವಾದ ಪಡೆದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನವರು ನಡೆಸಿದ ನಾಟಾ ಪರೀಕ್ಷೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಕಟಿಸಿದ್ದು, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಆರ್ಕಿಟೆಕ್ಚರ್ ವಿಭಾಗದಲ್ಲಿ ಉನ್ನತ ರ‍್ಯಾಂಕ್ ಗಳನ್ನು ಗಳಿಸಿದ್ದಾರೆ. ಕ್ರಿಯೇಟಿವ್ ನ ವಿದ್ಯಾರ್ಥಿಗಳಾದ ಭೂಮಿಕಾ ವೈ ರಾಜ್ಯಕ್ಕೆ 38ನೇ ಸ್ಥಾನ ಗಳಿಸುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ಉಳಿದಂತೆ ಕ್ರಮವಾಗಿ ವಿದ್ಯಾರ್ಥಿಗಳಾದ, ಪ್ರಣವ್ ಕುಲಕರ್ಣಿ 79, ಸಮೃದ್ ಪಿ .ಶೆಟ್ಟಿ 91, ಪ್ರಾರ್ಥನಾ ಎಂ. 99, ಅದಿತಿ ನಂದೀಶ್ 107, ಕುಶಾಲ್ ಎಲ್ 115, ಹೆಚ್. ಎಸ್.ಆದ್ಯ 163, ಅಜಯ್ ಕೆ. ಎನ್.181, ಜ್ಯೋತಿ ಎಸ್.211 ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ಬಹುಬೇಡಿಕೆಯನ್ನು ಹೊಂದಿರುವ ರಾಷ್ಟ್ರದ ಅತ್ಯುನ್ನತ ಸಂಸ್ಥೆಯಾದ ಆರ್ಕಿಟೆಕ್ಚರ್ ಸಂಸ್ಥೆಗಳಿಗೆ ಸೇರಲು ನಡೆಯುವ ರಾಷ್ಟ್ರ ಮಟ್ಟದ NATA (ನ್ಯಾಶನಲ್ ಎಲಿಜಿಬಿಲಿಟಿ ಟೆಸ್ಟ್ ಫಾರ್ ಆರ್ಕಿಟೆಕ್ಚರ್) ಪ್ರವೇಶ ಪರೀಕ್ಷೆಗೆ ಕ್ರಿಯೇಟಿವ್ ವಿದ್ಯಾ ಸಂಸ್ಥೆಯು ಅತ್ಯುತ್ತಮ ತರಬೇತಿ ನೀಡುತ್ತಿದೆ. ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ- ಬೋಧಕೇತರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ರೋಕುಂದಾಪುರ: ರೋಟರಿ ಕ್ಲಬ್ ತೆಕ್ಕಟ್ಟೆ ಹಾಗೂ ರೋಟರಿ ಕ್ಲಬ್ ಕೋಟೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಪ್ರೌಢಶಾಲೆ ಹೆಸ್ಕುತ್ತೂರಿನಲ್ಲಿ ಆಷಾಢ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಶಾಲೆಯ ಮುಖ್ಯೋಪಾಧ್ಯಾಯರು ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕರಾದ ರಾಘವೇಂದ್ರ ದೇವಾಡಿಗ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿಗಳು ಕುಂದಾಪ್ರ ಕನ್ನಡದಲ್ಲಿ ಜಾನಪದ ಕಥೆಗಳು, ಗಾದೆಗಳು ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ, ಸ್ಥಳೀಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪರಿಚಯಿಸಿದರು. ವೇದಿಕೆಯಲ್ಲಿ ರೋಟರಿ (ವಲಯ 2 ) ಸಹಾಯಕ ಗವರ್ನರ್ ಟಿ. ಸುಧಾಕರ್ ಶೆಟ್ಟಿ, ವಲಯ ಸಲಹೆಗಾರ ಪಿಎಚ್‌ಎಫ್ ಗಜೇಂದ್ರ ಶೆಟ್ಟಿ, ವಲಯ ಲರ್ನಿಂಗ್ ಫೆಸಿಲಿಟೇಟರ್ ಸುರೇಶ್ ಬೇಳೂರು, ರೋಟರಿ ಕ್ಲಬ್ ತೆಕ್ಕಟ್ಟೆ ಅಧ್ಯಕ್ಷ ಟಿ. ರಾಜೀವ್ ಶೆಟ್ಟಿ, ರೋಟರಿ ಕ್ಲಬ್ ಕೋಟೇಶ್ವರ ಅಧ್ಯಕ್ಷೆ ಅಕ್ಷತಾ ಗಿರೀಶ್ ಐತಾಳ್, ಕಾರ್ಯದರ್ಶಿ ಅರುಣ್ ದೇವಾಡಿಗ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ರಾಘವೇಂದ್ರ ಶೆಟ್ಟಿ (ಬೆಳೂರು) ಹಾಗೂ ಎಸ್‌ಡಿಎಂಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಾದಕ ದ್ರವ್ಯಗಳ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಸಮುದಾಯದ ಪ್ರತಿಯೊಬ್ಬ ಪ್ರಜೆಯೂ ಕೈಜೋಡಿಸಬೇಕು ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ್ ನಾಯಕ್ ಕರೆ ನೀಡಿದರು. ಅವರು ಶುಕ್ರವಾರ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ “DRUGS ಬೇಡ BRO!” ಮತ್ತು ಮಾದಕ ವಸ್ತುಗಳಿಗೆ NO -ಜೀವನಕ್ಕೆ YES” ಎಂಬ ಯುವಜನರಲ್ಲಿ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚೆಗೆ ವಸ್ತುಸ್ಥಿತಿ ಆತಂಕಕಾರಿಯಾಗಿದೆ. ಹೆಚ್ಚಿನ ಯುವಕರು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಅವರು ತಮ್ಮ ಶೈಕ್ಷಣಿಕ ಹಿನ್ನೆಡೆ, ಮಾನಸಿಕ, ದೈಹಿಕ ಆರೋಗ್ಯವನ್ನು ಕಳೆದುಕೊಂಡು ತಮ್ಮತನ ಕಳೆದುಕೊಳ್ಳುತ್ತಿದ್ದಾರೆ. ಪರಿಣಾಮವಾಗಿ ಕುಟುಂಬ, ಸಮಾಜ ಊರು ಮತ್ತು ದೇಶಕ್ಕೆ ಹೊರೆಯಾಗುತ್ತಿದ್ದಾರೆ. ಮಾದಕದ್ರವ್ಯ ಸೇವನೆಯ ವ್ಯಸನಿಗಳ ಸಂಖ್ಯೆ ಸಹ ವಿಪರೀತಕ್ಕೆ ತಲುಪಿದೆ. ಇದು ಸಮಾಜದ ಮತ್ತು ದೇಶದ ಬೆಳವಣಿಗೆಗೆ ಮಾರಕವಾಗಿದೆ. ಹಾಗಾಗಿ ಮಾದಕ ದ್ರವ್ಯಗಳ ಸೇವನೆಯ ವಿರುದ್ದ ಯುವಕರಲ್ಲಿ ಜಾಗೃತಿ ಮೂಡಿಸಬೇಕು . ಉತ್ತಮ ಸಮಾಜ ನಿರ್ಮಾಣಕ್ಕೆ ಸರ್ಕಾರ, ಸಮಾಜ, ಸಂಘ ಸಂಸ್ಥೆಗಳು, ಇಲಾಖೆಗಳು,ವಿದ್ಯಾರ್ಥಿಗಳು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಶ್ರೀ ಅಘೋರೇಶ್ವರ ಮೆಲೋಡೀಸ್ ಗ್ರೂಪ್ ಸಂಗೀತ ತರಬೇತಿ ಕೇಂದ್ರ ಕೋಟ ಇವರ ಆಶ್ರಯದಲ್ಲಿ ಗಾನ ಕೋಗಿಲೆ ಎಸ್. ಜಾನಕಿ ಅವರಿಗೆ ಗೀತ ನಮನ ಹಾಗೂ ನುಡಿ ನಮನ ಕಾರ್ಯಕ್ರಮ ಕೋಟ ಸಂಗೀತ ಸಂಸ್ಥೆಯಲ್ಲಿ ಯಶಸ್ವಿಯಾಗಿ ಇತ್ತೀಚಿಗೆ ಜರಗಿತು. ನುಡಿ ನಮನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಉಪನ್ಯಾಸಕ ಗಾಯಕ ಕೃಷ್ಣ ಸಾಸ್ತಾನ ಮಾತನಾಡಿ, ಎಸ್. ಜಾನಕಿ ಅಮ್ಮನವರು ಸರಳ ವ್ಯಕ್ತಿತ್ವದ ನೈಜ ಸ್ವರೂಪದ ಒಬ್ಬ ಗಾಯಕಿ. ಹಲವಾರು ಭಾಷೆಗಳಲ್ಲಿ ತನ್ನ ಸಿರಿ ಕಂಠದ ಮೂಲಕ, ಹಾಡಿನ ಮೂಲಕ ಎಲ್ಲರ ಮನಸ್ಸನ್ನು ಗೆದ್ದ ಗಾಯನ ಲೋಕಕ್ಕೆ ತನ್ನದೆ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು. ಉದ್ಯಮಿ ಎಂ.ಸಿ ಚಂದ್ರಶೇಖರ್ ಪಾಂಡೇಶ್ವರ ಜಾನಕಿ ಅಮ್ಮ ಹಾಡಿರುವ ಹಾಡುಗಳನ್ನು, ಗಾಯಕರಾದ ನಾವೆಲ್ಲರೂ ಅನುಕರಣೆಮಾಡಿ ಹಾಡಿ ಅವರಂತೆ ದೊಡ್ಡ ಗಾಯಕರಾಗಿ ಬೆಳೆಯಬೇಕು ಅನ್ನುವ ಮಾತನ್ನು ವ್ಯಕ್ತ ಪಡಿಸಿದರು. ಕೋಟ ಸಿ ಎ ಬ್ಯಾಂಕನ ನಿರ್ದೇಶಕ ರಂಜಿತ್, ಶ್ರೀ ಶಾಸ್ತ ಮೊಬೈಲ್ ಸೆಂಟರ್ ಕೋಟ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಧ್ವನಿ ಬೆಳಕು ಸಂಯೋಜಕರ ಸಂಘಟನೆ ರಿ. ಉಡುಪಿ ಜಿಲ್ಲೆ ಬೈಂದೂರು ವಲಯ ಇದರ 15ನೇ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಮಹಾಸಭೆಯು ಇತ್ತೀಚಿಗೆ ಯಡ್ತರೆ ಜೆ.ಎನ್.ಆರ್ ಕಲಾಮಂದಿರದಲ್ಲಿ ಜರುಗಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇದರ ಸಹಾಯಕ ನಿರ್ದೇಶಕಿ ಪೂರ್ಣಿಮಾ ಧ್ವನಿ ಬೆಳಕು ಸಂಯೋಜಕರ ಸಂಘಟನೆಯ 15ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಶುಭಹಾರೈಸಿದರು. ಚಲನಚಿತ್ರ ನಟ ಹಾಗೂ ಜಾದೂಗಾರ ಓಂ. ಗಣೇಶ ಉಪ್ಪುಂದ ಕಾರ್ಯಕ್ರಮಕ್ಕೆ ಶುಭಶಂಸನೆ ಗೈದು ಮಾತನಾಡಿ, ಸದಸ್ಯರ ಸಂಖ್ಯೆ ಹೆಚ್ಚಾದಂತೆ ಸಂಘಟನೆಯ ತಾಕತ್ತು ಬಲಗೊಳ್ಳುತ್ತದೆ. ಈ ಸಂಘಟನೆಯಲ್ಲಿ ಉದ್ಯಮದ ಮಾಲೀಕನೇ ನೌಕರನಾಗಿ ದುಡಿಯುತ್ತಿರುತ್ತಾನೆ. ಧ್ವನಿ ಮತ್ತು ಬೆಳಕು ಇಲ್ಲವಾದರೆ ಯಾವುದೇ ಸಮಾರಂಭದ ಕಾರ್ಯಗಳು ಯಶಸ್ವಿ ಆಗದು. ಈ ನಿಟ್ಟಿನಲ್ಲಿ ಸಂಘದ ಸದಸ್ಯರೆಲ್ಲರೂ ಪರಸ್ಪರ ಪೈಪೋಟಿಗಳಿಯದೇ ಧನಾತ್ಮಕ ಚಿಂತನೆಗಳ ಮೂಲಕ ಸೌಹಾರ್ದಯುತವಾಗಿ ಸಮಾಜಕ್ಕೂ ನ್ಯಾಯ ಸಿಗುವ ರೀತಿಯಲ್ಲಿ ವ್ಯವಹಾರ ಮಾಡುವಂತಾಗಬೇಕು. ಜೀವನೋಪಾಯಕ್ಕಾಗಿ ಮಾಡುವ ನಮ್ಮ ಉದ್ಯೋಗವನ್ನು ಮೊದಲು ನಾವು ಗೌರವಿಸಬೇಕು ಆಗ ನಮ್ಮನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ‘ವಿದ್ಯಾರ್ಥಿ ಜೀವನದ ಸವಾಲುಗಳು-ಪರಿಹಾರಗಳು’ ಎಂಬ ವಿಷಯದಡಿ ಕಾರ್ಯಾಗಾರ ನಡೆಯಿತು.. ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಲಿಯುವುದು ಒಂದು ಸವಾಲಾದರೆ ಕಲಿಯಲೇಬೇಕು ಎಂಬುದು ಅದಕ್ಕೆ ಉತ್ತರ. 25 ವರ್ಷ ನೀವು ಕಷ್ಟಪಟ್ಟರೆ ಮುಂದಿನ 75 ವರ್ಷ ಸುಖವಾಗಿ ಬಾಳಬಹುದು. ಜೀವನದಲ್ಲಿ ಉತ್ತಮ ಗುರಿಯ ಜೊತೆಗೆ ಗುರಿ ತಲುಪುವಲ್ಲಿ ಆಯ್ಕೆ ಮಾಡಿಕೊಂಡ ಮಾರ್ಗ ಉತ್ತಮವಾಗಿರಬೇಕು. ಸಮಯ ಪಾಲನೆ, ವೈಯಕ್ತಿಕ ವೇಳಾಪಟ್ಟಿ, ಉತ್ತಮ ಸ್ನೇಹಿತರ ಆಯ್ಕೆ, ಸ್ವಚ್ಛತೆ, ವ್ಯಾಯಾಮ, ಶಕ್ತಿಯುತ ಆರೋಗ್ಯಕರ ಶರೀರ ಮುಂತಾದ ವಿಷಯಗಳ ಬಗ್ಗೆ ತಿಳಿಸಿ ವಿದ್ಯಾರ್ಥಿಗಳು ಅಜ್ಞಾನದ ಆಕರ್ಷಣೆಗೆ ಒಳಗಾಗದೆ, ಆಷಾಢಭೂತಿ ವ್ಯಕ್ತಿತ್ವ ಬಿಡಬೇಕು ಎಂದು ತಿಳಿಸಿದರು. ವಿದ್ಯಾರ್ಥಿ ಜೀವನದ ಅದ್ಭುತ ಕಾಲಘಟ್ಟ, ಪಠ್ಯ ವಿಷಯಗಳನ್ನು ತಿಳಿಯುವುದರ ಜೊತೆಗೆ ಅದು ಚಾರಿತ್ರ್ಯ ನಿರ್ಮಾಣ ಮಾಡಿಕೊಳ್ಳುವ ಕಾಲ, ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಜುಲೈ 18ರಿಂದ 23, 2026ರವರೆಗೆ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಪುರುಷ ಹಾಗೂ ಮಹಿಳೆಯರ ಕ್ಲಾಸಿಕ್ ಮತ್ತು ಇಕ್ವಿಪ್ಡ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕುಂದಾಪುರದ ನ್ಯೂ ಹರ್ಕ್ಯುಲಸ್ ಜಿಮ್‌ನ ವ್ಯವಸ್ಥಾಪಕರಾದ ಡಾ. ಸತೀಶ್ ಖಾರ್ವಿ ಅವರು ಅಪೂರ್ವ ಸಾಧನೆ ಮಾಡಿದ್ದಾರೆ. ಎಂ–2 ವಿಭಾಗದ ಕ್ಲಾಸಿಕ್ ಹಾಗೂ ಇಕ್ವಿಪ್ಡ್ ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧಿಸಿದ ಅವರು ಒಟ್ಟು 4 ಚಿನ್ನದ ಪದಕ, 3 ಬೆಳ್ಳಿ ಪದಕ ಹಾಗೂ 1 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಇದರೊಂದಿಗೆ, ಎರಡು ವಿಭಾಗಗಳಲ್ಲಿ ಒಟ್ಟು 6 ರಾಷ್ಟ್ರೀಯ ಡೆಡ್ಲಿಫ್ಟ್ ನೂತನ ದಾಖಲೆಗಳನ್ನು ನಿರ್ಮಿಸಿ ದೇಶದ ಮಟ್ಟದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ಡಾ. ಸತೀಶ್ ಖಾರ್ವಿ ಅವರ ಈ ಸಾಧನೆಯು ಕುಂದಾಪುರ, ಉಡುಪಿ ಜಿಲ್ಲೆ ಹಾಗೂ ಕರ್ನಾಟಕಕ್ಕೆ ಹೆಮ್ಮೆಯನ್ನು ತಂದಿದ್ದು, ಕ್ರೀಡಾಭಿಮಾನಿಗಳು, ಶಿಷ್ಯರು, ಸ್ನೇಹಿತರು ಹಾಗೂ ಸಾರ್ವಜನಿಕರು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ದೋಹಾ: ಬಂಟ್ಸ್ ಕತಾರ್ ವತಿಯಿಂದ ಆಯೋಜಿಸಲಾದ “ಆಟಿ ಡೊಂಜಿ ದಿನ 2026” ವೈಭವದ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಕತಾರ್‌ನಲ್ಲಿರುವ ಕರ್ನಾಟಕದ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಹಾಗೂ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ ಈ ಕಾರ್ಯಕ್ರಮವು ಕರಾವಳಿ ಕರ್ನಾಟಕದ ಶ್ರೀಮಂತ ಸಂಸ್ಕೃತಿ, ಪರಂಪರೆ ಮತ್ತು ಏಕತೆಯ ಪ್ರತೀಕವಾಗಿ ಮೂಡಿಬಂತು. ಆಟಿ ಡೊಂಜಿದಿನವು ಕರಾವಳಿ ಕರ್ನಾಟಕದಲ್ಲಿ ಮಳೆಗಾಲದ ಸಂದರ್ಭದಲ್ಲಿ ಜನರು ಪ್ರಕೃತಿಯಲ್ಲಿ ಲಭ್ಯವಿದ್ದ ಆಹಾರ ಪದಾರ್ಥಗಳನ್ನು ಅವಲಂಬಿಸಿ ಬದುಕುತ್ತಿದ್ದ ಜೀವನಶೈಲಿಯನ್ನು ನೆನಪಿಸುವ ವಿಶಿಷ್ಟ ಆಚರಣೆಯಾಗಿದೆ. ಈ ಕಾರ್ಯಕ್ರಮದ ಮೂಲಕ ಆ ಪಾರಂಪರಿಕ ಜೀವನ ಪದ್ಧತಿ, ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಅತ್ಯಂತ ಸುಂದರವಾಗಿ ಮರುಸೃಷ್ಟಿಸಿ, ಇಂದಿನ ಯುವ ಪೀಳಿಗೆಗೆ ತಮ್ಮ ಪೂರ್ವಜರ ಜೀವನ ವಿಧಾನವನ್ನು ಅರಿತುಕೊಳ್ಳುವ ಅಪೂರ್ವ ಅವಕಾಶ ಕಲ್ಪಿಸಲಾಯಿತು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಬಂಟ್ಸ್ ಕತಾರ್ ಸದಸ್ಯರು ಪ್ರಕೃತಿಯಲ್ಲಿ ಲಭ್ಯವಿರುವ ಋತುಸಹಜ ಪದಾರ್ಥಗಳನ್ನು ಬಳಸಿ ಪ್ರೀತಿಯಿಂದ ಸಿದ್ಧಪಡಿಸಿದ 52 ಬಗೆಯ ಸಾಂಪ್ರದಾಯಿಕ ಕರಾವಳಿ ಕರ್ನಾಟಕದ ಖಾದ್ಯಗಳ ಪ್ರದರ್ಶನ…
