Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆಯ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾಗ ಕಳಪೆ ಕಾಮಗಾರಿ ವಿರುದ್ಧ, ಸಂಸ್ಕರಣಾ ಕೇಂದ್ರವನ್ನ ಜನನಿಬಿಡ ಪ್ರದೇಶದಿಂದ ದೂರದ ಸ್ಥಳಕ್ಕೆ ಸ್ಥಳಾಂತರಿಸಲು ಒತ್ತಾಯಿಸಿ, ರಸ್ತೆಗಳ ದುರಸ್ತಿ ಹಾಗೂ ಪುರಸಭೆಗೆ ಖಾಯಂ ಇಂಜಿನಿಯರ್ ನೇಮಕಕ್ಕೆ ಆಗ್ರಹಿಸಿ ಕುಂದಾಪುರ ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಮತ್ತು ಸಿಪಿಐ(ಎಂ) ಕುಂದಾಪುರ ವಲಯ ಸಮಿತಿಗಳ ಜಂಟಿ ಸಹಯೋಗದ ನೇತೃತ್ವದಲ್ಲಿ ಕುಂದಾಪುರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಬಳಿಕ ಕುಂದಾಪುರ ಪುರಸಭೆ ಕಛೇರಿ ಎದುರು ಸಾಮೂಹಿಕ ಧರಣಿ ಸತ್ಯಾಗ್ರಹ ಹೋರಾಟ ಜರಗಿತು. ಕುಂದಾಪುರ ಜನತೆ ಬಹುಕಾಲದಿಂದ ಸುವ್ಯವಸ್ಥಿತವಾದ ಒಳಚರಂಡಿ ಯೋಜನೆ ಆಗಬೇಕೆಂದು ಬಯಸುತ್ತಿದ್ದು, ಅದರಂತೆ ರೂಪಾಯಿ ೪೮ ಕೋಟಿ ಯೋಜನೆ ಜ್ಯಾರಿ ಮಾಡುವುದಾಗಿ ಸರಕಾರ ಪ್ರಕಟಿಸಿದಾಗ ಕುಂದಾಪುರ ಪುರಸಭಾ ವ್ಯಾಪ್ತಿಯ ಸಮಸ್ತ ನಾಗರಿಕರು ಸ್ವಾಗತಿಸಿದರು. ಈ ಯೋಜನೆಯಿಂದ ಫಲವತ್ತಾದ ಕೃಷಿ ಭೂಮಿ ಕಳೆದುಕೊಳ್ಳುವ ಕೃಷಿಕರಿಗೆ ಗರಿಷ್ಠ ಪ್ರಮಾಣದ ಪರಿಹಾರ ನೀಡಬೇಕು ಎಂದು ಸರಕಾರವನ್ನು ಆಗ್ರಹಿಸಲಾಗಿದ್ದರೂ ಈಗ ಬಿಡುಗಡೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೈತರ ಸಾಲಮನ್ನ ವಿಚಾರವಾಗಿ ರೈತರಿಗೆ ಅನುಕೂಲಕರವಾಗುವ ರೀತಿಯಲ್ಲಿ ಒಂದೆರಡು ಬದಲಾವಣೆಗಳನ್ನು ಮಾಡುವಂತೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಕರಾವಳಿಯ ಸಚಿವರು, ಸಂಸದರು ಹಾಗೂ ಶಾಸಕರ ನಿಯೋಗ ಭೇಟಿಮಾಡಿ ಮನವಿ ಸಲ್ಲಿಸಿತು. ಕಾಂಗ್ರೆಸ್ ಸರಕಾರ ರೈತರ ಸಾಲಮನ್ನಾ ಘೋಷಿಸಿರುವ ಬಗ್ಗೆ ಸರಕಾರವನ್ನು ಅಭಿನಂದಿಸಿದ ನಿಯೋಗ, ಈ ಪ್ರಯೋಜನ ಇನ್ನೂ ಹೆಚ್ಷಿನ ರೈತರಿಗೆ ಲಭಿಸಬೇಕು. 2015-16ನೇ ಸಾಲಿನಲ್ಲಿ ಸಾಲ ಪಡೆದು ಅವಧಿ ಮುಗಿದ ಸಾಲವನ್ನು ಕ್ಲಪ್ತ ಸಮಯಕ್ಕೆ ಪಾವತಿಸಿ ಪುನಃ ಸಾಲ ನವೀಕರಣಕ್ಕೆ ಅರ್ಜಿ ಸಲ್ಲಿಸಿರುವ ರೈತರ ಸಾಲವನ್ನೂ ಕೂಡ ಮುಖ್ಯಮಂತ್ರಿಗಳು ಪರಿಶೀಲಿಸಿ ಮನ್ನಾ ಮಾಡಬೇಕೆಂದು ಈ ಸಮಯದಲ್ಲಿ ಒತ್ತಾಯಿಸಲಯಿತು. ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಸಚಿವ ರಮನಾಥ ರೈ, ಸಚಿವ ಪ್ರಮೋದ್ ಮಧ್ವರಾಜ್, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಅವರು ನಿಯೋಗದಲ್ಲಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಅವರೊಂದಿಗೆ ಆಗಮಿಸಿದ್ದ ಕುಮಾರಸ್ವಾಮಿ ಅವರು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಬಳಿಕ ಕೊಲ್ಲೂರಿಗೆ ತೆರಳಿ ದೇವಿಯ ದರ್ಶನ ಪಡೆದು ನವಚಂಡಿಕಾ ಯಾಗ ನೆರವೇರಿಸಿದರು. ಮಧ್ಯಾಹ್ನದ ಭೋಜನವನ್ನು ಅವರು ದೇವಳದಲ್ಲಿಯೇ ಸವಿದರು. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಸೇರಿದಂತೆ ಪಕ್ಷದ ಪ್ರಮುಖರು ಜೊತೆಗಿದ್ದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳೆರಡು ಧರ್ಮ ಹಾಗೂ ಸೆಲ್ಯೂಲರ್ ಮುಖವಾಡ ಧರಿಸಿಕೊಂಡು ಯುವ ಜನರ ದಿಕ್ಕು ತಪ್ಪಿಸುತ್ತಿದೆ. ಗೋರಕ್ಷಣೆ ಮುಂತಾದ ವಿಚಾರಗಳಿಗೆ ಕರಾವಳಿಯ ಯುವಕರನ್ನು ಎತ್ತಿಕಟ್ಟಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕೆಲಸ ನಡೆಯುತ್ತಿದೆ. ಆದರೆ ಪ್ರಜ್ಞಾವಂತೆ ಜಿಲ್ಲೆಯ ಯುವಕರು ಈ ಬಗ್ಗೆ ಯೋಚಿಸಬೇಕಿದೆ ಎಂದ ಅವರು ಲೋಕಕಲ್ಯಾಣಾರ್ಥವಾಗಿ ನವಚಂಡಿಕಾ ಯಾಗ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಪೇಟೆಯ ಸಮೀಪ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಕಂಪೆನಿಯ ಅಸಮರ್ಪಕ ಕಾಮಗಾರಿಯಿಂದಾಗಿ ಇಲ್ಲಿನ ಇಲ್ಲಿನ ನಿವಾಸಿಯೋರ್ವರ ಮನೆಯ ಆವರಣ ಹಾಗೂ ತೋಟಕ್ಕೆ ಜೇಡಿ ಮಣ್ಣು ಮಿಶ್ರಿತ ನೀರು ನುಗ್ಗಿ ಹಾನಿ ಉಂಟು ಮಾಡಿದೆ. ಅರೆಬರೆ ಚರಂಡಿ ಕಾರ್ಯ ಕೈಗೊಂಡಿರುವ ಕಂಪೆನಿ ದಿನೇಶ್ ಗಾಣಿಗ ಅವರ ಮನೆಯ ಎದುರು ಈವರೆಗೂ ಚರಡಿ ನಿರ್ಮಿಸದಿರುವುದು ಹಾಗೂ ಅವರ ಮನೆಯ ಸಮೀಪದಲ್ಲಿರುವ ಬೈಂದೂರಿನಿಂದ ಹೊಸಾಡಿಗೆ ತೆರಳುವ ರಸ್ತೆಗೆ ಮೋರಿ ಮಾಡದೆ ಮಣ್ಣು ಮುಚ್ಚಿರುವುದು ಸಮಸ್ಯೆಗೆ ಕಾರಣವಾಗಿದೆ. ಮಳೆ ಬಂದಾಗಲೆಲ್ಲಾ ಹರಿದುಬರುವ ಚರಂಡಿ ನೀರು ಸೀದಾ ದಿನೇಶ್ ಅವರ ತೋಟಕ್ಕೆ ನುಗ್ಗಿ ಮನೆಯ ಎದುರು ನಿಂತು ಹೊಳೆಯಂತಾಗುತ್ತಿದೆ. ಈ ಬಗ್ಗೆ ಐಆರ್‌ಬಿ ಕಂಪೆನಿಯ ಇಂಜಿನಿಯರ್‌ಗಳನ್ನು ಸಂಪರ್ಕಿಸಿದರೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಮನೆಯವರು ಆರೋಪಿಸಿದ್ದಾರೆ. ಜಾಗಕ್ಕೆ ಸೂಕ್ತ ಪರಿಹಾರವೂ ಇಲ್ಲ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ದಿನೇಶ್ ಗಾಣಿಗ ಅವರು ಸುಮಾರು ೧೮ ಸೆಂಟ್ಸ್ ಜಾಗ ಕಳೆದುಕೊಂಡಿದ್ದರು. ಆದರೆ ಐಆರ್‌ಬಿ ಕಂಪೆನಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕೊಡಚಾದ್ರಿ ಬೆಟ್ಟಕ್ಕೆ ಚಾರಣಕ್ಕಾಗಿ ವಾಹನದಲ್ಲಿ ತೆರಳಿದ್ದ ದಂಪತಿಗಳು ಪ್ರಯಾಣಿಸುತ್ತಿದ್ದ ಜೀಪ್ ಕೊಡಚಾದ್ರಿಯಿಂದ ಹಿಂತಿರುಗುತ್ತಿದ್ದಾಗ ಆಕಸ್ಮಿಕವಾಗಿ ಸಂಭವಿಸಿದ ಅಪಘಾತದಲ್ಲಿ ಪತ್ನಿ ಮೃತಪಟ್ಟು ಪತಿ ಗಾಯಗೊಂಡ ದಾರುಣ ಘಟನೆ ಸೋಮವಾರ ನಡೆದಿದೆ. ಕೇರಳ ರಾಜ್ಯದ ತ್ರಿಶೂರ್ ಮೂಲದ ದಂಪತಿಗಳು ಕೊಲ್ಲೂರು ದೇವರ ದರ್ಶನಕ್ಕೆ ಬಂದಿದ್ದು, ಸೋಮವಾರ ಬೆಳಿಗ್ಗೆ ೭ರ ಸುಮಾರಿಗೆ ಜೀಪಿನಲ್ಲಿ ಕೊಲ್ಲೂರಿನಿಂದ ಕೊಡಚಾದ್ರಿಗೆ ಹೊರಟಿದ್ದರು. ಕೊಡಚಾದ್ರಿಯಲ್ಲಿ ಕೆಲಕಾಲ ತಿರುಗಾಡಿದ ದಂಪತಿಗಳು ಅದೇ ಜೀಪಿನಲ್ಲಿ ಹಿಂತುರುಗುತ್ತಿದ್ದ ವೇಳೆ ಅಕಸ್ಮಿಕವಾಗಿ ಜೀಪಿನ ಮೈನ್ ಆಕ್ಸಿಲ್ ತುಂಡಾಗಿದ್ದು, ಇದರಿಂದ ಹೆದರಿದ ಸವಿತಾ(32) ಕೆಳಕ್ಕೆ ಜಿಗಿದಿದ್ದಾರೆ. ಜಿಗಿಯುವ ರಭಸಕ್ಕೆ ಜೀಪಿನ ಹಿಂಬಾಗ ತಲೆಗೆ ಬಡಿದು ತೀವೃತರಹದ ಗಾಯಗಳಾಗಿದೆ. ತಕ್ಷಣ ಅಲ್ಲಿಂದ ಕುಂದಾಪುರ ಆಸ್ಪತ್ರೆಗೆ ಸಾಗಿಸುವಾಗ ವಂಡ್ಸೆಯ ಬಳಿ ಅಸುನೀಗಿದ್ದಾರೆ. ಪತಿ ಬಿಜುಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚೇತರಿಸಿಕೊಂಡಿದ್ದಾರೆ. ಈ ದಂಪತಿಗಳು ಕಾಸರಗೋಡಿನಲ್ಲಿ ಸರ್ಕಾರಿ ಉದ್ಯೋಗಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಇದೇ ಜೀಪಿನಲ್ಲಿದ್ದ ಸಹ ಪ್ರಯಾಣಿಕರಿಗೆ ಯಾವುದೇ ರೀತಿಯ ಅಪಾಯವಾಗಲಿಲ್ಲ. ಹೆಚ್ಚಿನ ವಿವರ ಲಭ್ಯವಿಲ್ಲ. ಕೊಲ್ಲೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಇಂಜಿನಿಯರಿಂಗ್ ಶಿಕ್ಷಣದಲ್ಲಿ ಆಧುನಿಕ ಅಗತ್ಯತೆ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ನಿರೀಕ್ಷೆಗೆ ತಕ್ಕಂತ ಗುಣಮಟ್ಟದಲ್ಲಿ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಮೂಡುಬಿದಿರೆಯ ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು-ಕುಮಮೊಟೊ ವಿಶ್ವವಿದ್ಯಾಲಯ ಮಹತ್ವದ ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿವೆ. ವಿದ್ಯಾರ್ಥಿಗಳಿಗೆ ಮತ್ತು ಪ್ರಾಧ್ಯಾಪಕರಿಗೆ ಉನ್ನತ ಅಧ್ಯಯನಕ್ಕೆ ಅವಕಾಶ ಕಲ್ಪಿಸುವುದು. ಹೊಸ ಆವಿಷ್ಕಾರಗಳ ಮೂಲಕ ಸಂಶೋಧನೆಗೆ ನೆರವಾಗುವುದು. ಸಂಶೋಧನೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕುಮಮೊಟೊ ವಿಶ್ವವಿದ್ಯಾಲಯದಿಂದ ಸ್ಕಾಲರ್‌ಶಿಪ್ ಸೌಲಭ್ಯ. ಎರಡೂ ಸಂಸ್ಥೆಗಳು ಜಂಟಿಯಾಗಿ ತಾಂತ್ರಿಕ ಸಮ್ಮೇಳನಗಳನ್ನು ನಡೆಸುವುದು. ವಿದ್ಯಾರ್ಥಿಗಳ ಕಲಿಕಾ ಮತ್ತು ಪ್ರಾಧ್ಯಾಪಕರ ಭೋದನಾ ಗುಣಮಟ್ಟವನ್ನು ಹೆಚ್ಚಿಸಲು ಕಾರ್ಯಗಾರಗಳನ್ನು ಏರ್ಪಡಿಸುವುದಕ್ಕೆ ಎರಡೂ ಸಂಸ್ಥೆಗಳ ಸಹಕಾರ, ಇಂಟರ್ನ್ ಶಿಪ್ ಮೂಲಕ ತಂತ್ರಜ್ಞಾನದ ಮೂಲ ಮಾದರಿಗಳನ್ನು ತಯಾರಿಸಲು ವಿದ್ಯಾರ್ಥಿಗಳಿಗೆ ನೆರವು ಮಾತ್ರವಲ್ಲದೆ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಪ್ರಾದ್ಯಾಪಕರು ತಂತ್ರಜ್ಞಾನದಲ್ಲಿ ಹೊಸ ಸಂಶೋಧನೆಗಳಿಗೆ ನೆರವಾಗುವುದು, ಸಹಿತ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಮಹತ್ವ ಅಂಶಗಳನ್ನು ಒಪ್ಪಂದ ಒಳಗೊಂಡಿದೆ. ಜಪಾನ್‌ನ ಕುಮಮೊಟೊ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ವಿದ್ಯಾರ್ಥಿಗಳು ನಿರಂತರ ಅಧ್ಯಯನ ಪ್ರವೃತ್ತರಾಗಿ ಏಕಾಗ್ರತೆ, ಶಿಸ್ತು, ಕರ್ತವ್ಯಬದ್ಧತೆ ಬೆಳೆಸಿಕೊಳ್ಳಬೇಕು. ಇತ್ತೀಚಿನ ಬಾಹ್ಯ ಆಕರ್ಷಣೆಗೆ ಒಳಗಾಗದೆ ಸ್ಥಿರಚಿತ್ತರಾಗಿ ಅಧ್ಯಯನ ಮಾಡಿ ಯಶಸ್ವಿಯಾಗಿ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸರಕಾರಿ ಕಿರಿಯ ಪ್ರಾಥಮಿಕ (ಹವೇ) ಶಾಲೆಯ ಮುಖ್ಯೋಪಾಧ್ಯಾಯ ರಮೇಶ ಮಹಾಲೆ ಹೇಳಿದರು. ಅವರು ಮೇಲ್‌ಗಂಗೊಳ್ಳಿ ಬಾವಿಕಟ್ಟೆಯ ಶ್ರೀ ಬಸವೇಶ್ವರ ದೇವಸ್ಥಾನದ ಆಶ್ರಯದಲ್ಲಿ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ಜರಗಿದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ಮುಜಾಹೀದ್ ನಾಕುದಾ ಶುಭ ಹಾರೈಸಿದರು. ಇದೇ ಸಂದರ್ಭ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಎಂಟನೇ ರ‍್ಯಾಂಕ್ ಗಳಿಸಿದ ದಿಶಾ ಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸರಕಾರಿ ಕಿರಿಯ ಪ್ರಾಥಮಿಕ (ಹವೇ) ಶಾಲೆಯ ಸಹಶಿಕ್ಷಕಿ ಲಲಿತಾ, ವಿನುತಾ ವಿ.ಭಟ್, ದೇವಸ್ಥಾನದ ಅಧ್ಯಕ್ಷ ಗಣೇಶ ಕೆಇಬಿ, ಉಪಾಧ್ಯಕ್ಷ ಜಗದೀಶ ಮೇಲ್‌ಗಂಗೊಳ್ಳಿ, ಮಾಜಿ ಅಧ್ಯಕ್ಷ ಮಣಿಕಂಠ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚ್ ವಠಾರದಲ್ಲಿ ನಿರ್ಮಾಣಗೊಳ್ಳಲಿರುವ ‘ಸಮುದಾಯ ಭವನ’ಕ್ಕೆ ಬೈಂದೂರು ಶಾಸಕ ಹಾಗೂ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಕೆ. ಗೋಪಾಲ ಪಊಜಾರಿ ಅವರು ಶಿಲನ್ಯಾಸಗೈದರು. ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯ ರಾಜು ಪೂಜಾರಿ, ಕ್ರೈಸ್ತ ಮುಖಂಡ ಮಾರ್ಟಿನ್ ಎವರೆಸ್ಟ್ ಡಯಾಸ್, ಪಂಚಾಯತ್ ಸದಸ್ಯ ಮಾಣಿಕ್ಯ ಹೋಬಳಿದಾರ್, ಗುತ್ತಿಗೆದಾರ ರವೀಂದ್ರ, ಫಾದರ್ ಮೈಕಲ್ ಡಯಾಸ್, ಕ್ಯಾಥೋಲಿಕ್ ಸಭಾ ಅಧ್ಯಕ್ಷ ಇನಾಸ್ ಲೋಬೋ, ಕಾರ್ಯದರ್ಶಿ ಅನಿತಾ ನಜ್ರತ್ ಉಪಸ್ಥಿತರಿದ್ದರು. ಧರ್ಮಗುರು ರೆ.ಫಾ. ರೋನಾಲ್ಡ್ ಮಿರಾಂದ್ ಅವರು ಸ್ವಾಗತಿಸಿ, ಮಾಜಿ ಉಪಾಧ್ಯಕ್ಷ ರಾಬರ್ಟ್ ರೆಬೆಲ್ಲೋ ವಂದಿಸಿರು. ಹೆನ್ರಿ ಲೋಬೋ ಕಾರ್ಯಕ್ರಮ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿ ಗ್ರಾಮದ ಮೇಲ್‌ಗಂಗೊಳ್ಳಿ ರಾಮ ಪೈ ಮಠ ಶ್ರೀ ವೆಂಕಟರಮಣ ದೇವಸ್ಥಾನ ಸಮೀಪದ ನಿವಾಸಿ ಗ್ರಾಮ ಪಂಚಾಯತ್ ಸಿಬ್ಬಂದಿ ನಾರಾಯಣ ಶ್ಯಾನುಭಾಗ್ ಅವರ ತೋಟದಲ್ಲಿ ಸುಮಾರು ೮ ಬ್ರಹ್ಮಕಮಲ ರಾತ್ರಿ ಅರಳಿ ಸುವಾಸನೆ ಬೀರುತ್ತಿದೆ. ಮಳೆಗಾಲದ ಸಮಯದಲ್ಲಿ ಅರಳುವ ಈ ಸುಂದರವಾರ ಬ್ರಹ್ಮಕಮಲ ಸುತ್ತಮುತ್ತಲಿನ ಜನರನ್ನು ಆಕರ್ಷಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಯಡ್ತರೆ ಕೊಲ್ಲೂರು ರಾಷ್ಟ್ರೀಯ ಹೆದ್ದಾರಿಯ ಮಯ್ಯಾಡಿ ಸೊಸೈಟಿ, ಶಾಲೆ ಸಮೀಪ, ಮೂರು ಕೈ ಹಾಗೂ ತಗ್ಗರ್ಸೆ ಮಯ್ಯಾಡಿ ಸೇತುವೆ ಸಮೀಪ ಸೇರಿದಂತೆ ಮುಂತಾದೆಡೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆ ಮೇಲೆಯೇ ನೀರು ನಿಂತು ಆಸುಪಾಸಿನ ಮನೆಯವರು ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಲಕ್ಕೂ ಮುಂಚೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ (ರಾಜ್ಯ ಹೆದ್ದಾರಿ ಇದ್ದದ್ದು ಈಗ ರಾಷ್ಟ್ರೀಯ ಹೆದ್ದಾರಿಯಾಗಿದೆ) ಚರಂಡಿ ದುರಸ್ತಿಗೊಳಿಸಬೇಕಿತ್ತು. ಆದರೆ ಗುತ್ತಿಗೆದಾರರು ಈವರೆಗೂ ಕಾಮಗಾರಿ ಕೈಗೊಳ್ಳದೇ ನಿರ್ಲಕ್ಷ್ಯ ತಳೆದಿರುವುದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ಮಯ್ಯಾಡಿ ಸೊಸೈಟಿ ಬಳಿ ಚರಂಡಿಯ ಮೂಲಕ ಸಹಜವಾಗಿ ನೀರು ಹರಿದು ಹೋಗುವ ಮಾರ್ಗದಲ್ಲಿ ಮಣ್ಣು ತುಂಬಿರುವುದರಿಂದ ರಸ್ತೆ ಮೇಲೆಯೇ ನೀರು ನಿಲ್ಲುವುದಲ್ಲದೇ ಮಳೆ ಹೆಚ್ಚಾದಂತೆ ಮನೆಯೊಳಕ್ಕೆ ನೀರು ನುಗ್ಗುವ ಸ್ಥಿತಿ ಬಂದೊದಗಿದೆ. ಬೈಂದೂರು ಗ್ರಾಮ ಪಂಚಾಯತ್ ಅಧಿಕಾರಿಗಳು ಕೂಡ ಈ ಬಗ್ಗೆ ಮೌನವಹಿಸಿದ್ದಾರೆ.

Read More