ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜು ಮತ್ತು ಜೆಸಿಐ ಕುಂದಾಪುರ ಇವರ ಸಹಭಾಗಿತ್ವದೊಂದಿಗೆ ಕಾಲೇಜಿನ ಎಸ್.ಪಿ.ತೋಳಾರ್ ಒಳಾಂಗಣ ಕ್ರೀಡಾಂಗಣದಲ್ಲಿ ಶಟ್ಲ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ 15 ದಿವಸಗಳ ಬೇಸಿಗೆ ತರಬೇತಿ ಶಿಬಿರ ಆರಂಭಗೊಂಡಿತು. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಜೆಸಿಐ ಕುಂದಾಪುರದ ಅಧ್ಯಕ್ಷ ಜೆಸಿ ವಿಷ್ಣು.ಕೆ.ಬಿ. ಅವರು ಶಿಬಿರದ ಪ್ರಯೋಜನವನ್ನು ಪಡೆದು ಉತ್ತಮ ಆಟಗಾರರಾಗುವಂತೆ ಶುಭ ಹಾರೈಸಿದರು. ಜ್ಯೂನೀಯರ್ ರಾಷ್ಟ್ರಮಟ್ಟದ ಆಟಗಾರ ಭಂಡಾರ್ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ ವಿಮಲೇಶ್ ಶೇಟ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಮಾತನಾಡಿ, ಟಿ.ವಿ., ಮೊಬೈಲ್ ಮತ್ತು ಅಂತರ್ಜಾಲಗಳಿಂದ ವಿಮುಖರಾಗಿ ರಜೆಯಲ್ಲಿ ಇಂತಹ ಶಿಬಿರಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಿದರೆ ರಜೆಯ ಸದುಪಯೋಗವಾಗುತ್ತದೆ ಎಂದು ಶುಭ ಹಾರೈಸಿದರು. ಜ್ಯೂನಿಯರ್ ಜೇಸಿಯ ಅಧ್ಯಕ್ಷೆ ದೀಕ್ಷಿತಾ ಗೋಡೆ ಉಪಸ್ಥಿತರಿದ್ದರು. ಕಾಲೇಜಿನ ದೈಹಿಕ ನಿರ್ದೇಶಕರಾದ ಶಂಕರನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಬಿರಾರ್ಥಿ ವಿಘ್ನೇಶ್ ಕೆ.ಎಸ್. ಅವರು ಕಾರ್ಯಕ್ರಮ ನಿರೂಪಿಸಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯುವಕರು ಕೆಟ್ಟ ಕೆಲಸಗಳಲ್ಲಿ ಸಮಯ ವ್ಯರ್ಥ ಮಾಡದೇ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು,ದೇವಸ್ಥಾನದ ಚಟುವಟಿಕೆಯಲ್ಲಿ ಭಾಗಿಗಳಾಗುವುದು ಒಳ್ಳೆಯ ವಿಚಾರ. ಇಂದಿನ ಕಾಲದಲ್ಲಿ ಬೌತಿಕತೆಯಿಂದ ಜೀವನ ಸಾರ್ಥಕವಾಗುತ್ತದೆ ಎನ್ನುವ ಭ್ರಮೆ ಇದೆ. ಈ ಕೆಟ್ಟ ಭಾವನೆಯಿಂದ ಹೊರಬಂದು ದೈವಿಕ ಶಕ್ತಿಯಲ್ಲಿ ತಮ್ಮನ್ನು ಸಮರ್ಪಿಸಿಕೊಳ್ಳಬೇಕು.ಇಂತಹ ವಿಚಾರಗಳಿಂದ ಶಾಂತಿಯನ್ನು ಪಡೆಯಬಹುದು.ಧಾರ್ಮಿಕ ವಿಚಾರಧಾರೆಗಳು ಸಾವಿನ ನಂತರವೂ ನಮ್ಮನ್ನು ಜೀವಂತವಾಗಿ ಉಳಿಸುತ್ತವೆ ಎಂದು ಉಡುಪಿ ಪುತ್ತಿಗೆ ಮಠಾಧೀಶ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು. ಅವರು ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ರಥಬೀದಿ ಫ್ರೆಂಡ್ಸ್ ಅವರ ದಶಮಾನೋತ್ಸವದ ಪ್ರಯುಕ್ತ ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವರ ಮನ್ಮಹಾ ರಥೋತ್ಸವದ ಅಂಗವಾಗಿ ನೂತನವಾಗಿ ನಿರ್ಮಿಸಿದ ಸ್ವಾಗತ ಗೋಪುರವನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚಿಸಿದರು. ಭಾರತೀಯ ಚಿಂತನೆಗಳು ಶಾಂತಿಯನ್ನು ಸಾರುತ್ತವೆ. ನಾವು ನಮ್ಮ ಸಂಸ್ಕೃತಿ, ಆಚರಣೆಯಲ್ಲಿ ಪಾಲಿಸುವ ಎಲ್ಲಾ ಶ್ಲೋಕಗಳ ಕೊನೆಯಲ್ಲಿ ಶಾಂಶಿ.. ಶಾಂತಿ.. ಶಾಂತಿ ಎಂದು ಹೇಳುತ್ತೇವೆ.ಆದರೆ ಈಗ ಶಾಂತಿಗಿಂತ ಸುಖವೇ ಮುಖ್ಯ ಎನ್ನುವ ಮನಸ್ಥಿತಿ ನಮ್ಮನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗುಜ್ಜಾಡಿ ಮನೆತನದವರು ಹಿಂದಿನಿಂದಲೂ ಆರಾಧಿಸಿಕೊಂಡು ಬಂದಿರುವ ಶ್ರೀ ಹೊನ್ನಮ್ಮ ದೇವಿಯ ಅನುಗ್ರಹ ಹಾಗೂ ಗುರುಗಳ ಆಶೀರ್ವಾದದಿಂದ ಕುಟುಂಬವು ಇನ್ನಷ್ಟು ಅಭಿವೃದ್ಧಿ ಹೊಂದುವಂತಾಗಲಿ. ಮುಂದೆ ನಿರಂತರವಾಗಿ ಶ್ರೀದೇವರ ಹಾಗೂ ಗುರುವರ್ಯರ ಸೇವೆ ಮಾಡುವ ಭಾಗ್ಯ ಭಗವಂತನು ಕರುಣಿಸಲಿ. ಶ್ರೀದೇವರು ಜೀವನದಲ್ಲಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಹೇಳಿದರು. ಅವರು ಗುಜ್ಜಾಡಿಯ ಶ್ರೀ ಲಕ್ಷ್ಮೀನಾರಾಯಣ ದೇವಳದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗುಡಿಯಲ್ಲಿ ಶ್ರೀ ಹೊನ್ನಮ್ಮ ದೇವಿಯ ಪ್ರತಿಷ್ಠೆ ನೆರವೇರಿಸಿ ದೇವಳದ ಹೊರ ಆವರಣದ ಪೂರ್ವ ಪ್ರವೇಶದ್ವಾರ ಮತ್ತು ಸಗ್ರಿ ಸುರೇಂದ್ರ ಸಾಂತಪ್ಪ ನಾಯಕ್ ಸ್ಮರಣ ಯಾತ್ರಿ ನಿವಾಸವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ದೇವಳಕ್ಕೆ ಆಗಮಿಸಿದ ಶ್ರೀಗಳನ್ನು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಗುಜ್ಜಾಡಿ ಸೇವಾ ಟ್ರಸ್ಟ್ನ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್ ಮತ್ತು ದೇವಳದ ವಿಶ್ವಸ್ಥ ಜಿ.ರೋಹಿದಾಸ ನಾಯಕ್ ಸ್ವಾಗತಿಸಿದರು. ವೇದಮೂರ್ತಿ ಸಚ್ಚಿದಾನಂದ ಶರ್ಮಾ ನೇತೃತ್ವದಲ್ಲಿ ಪ್ರತಿಷ್ಠೆಯ ಧಾರ್ಮಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಕ್ಕಳ ಪ್ರತಿಭೆ ಅರಳಿಸುವ ಕಾರ್ಯಕ್ರಮಗಳಿಗೆ ಸದಾ ಅವಕಾಶ ನೀಡುವ ತರಬೇತಿಗಳು ನಿರಂತರವಾಗಿ ನಡೆಯುತ್ತಿರಲಿ ಭಾಗವಹಿಸದೇ ಯಾವುದೇ ಕೌಶಲ್ಯ ಪಡೆಯಲು ಸಾಧ್ಯವಿಲ್ಲ ಎಂದು ಸರಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೈಂದೂರಿನ ಪದವೀಧರ ಮುಖ್ಯೋಪಾಧ್ಯಾಯರಾದ ಶ್ರೀ ಜನಾರ್ಧನ ಹೇಳಿದರು. ಯಸ್ಕೋರ್ಡ ಟ್ರಸ್ಟ್, ಭಾರತೀಯ ಯೂನೆಸ್ಕೋ ಕ್ಲಬ್,ಸುರಬಿ (ರಿ) ,ಹಾಗೂ ಸೌಜನ್ಯ ಬೈಂದೂರು ಇವರು ಇಂಡಿಯಾ ಫೌಂಡೇಶನ್ ಪಾರ್ ಆರ್ಟ್ಸ್ ಕಲಿಕಲಿಸು ಯೋಜನೆ ಸಹಕಾರದಲ್ಲಿ ಆಯೋಜಿಸಿದ ನೇಸರ ಕ್ಷಿತಿಜಧಾಮ ವತ್ತಿನೆಣೆಯಲ್ಲಿ ನಡೆದ ಚಿಣ್ಣರ ಚಿಲಿಪಿಲಿ ಬೇಸಿಗೆ ಶಿಬಿರ ಚಾಲನಾ ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನು ಶಿಬಿರಾರ್ಥಿಗಳಾದ ತಿಲಕ ಹೋಬಳಿದಾರ್ ಹಾಗೂ ಇಂಚರ ಚಿತ್ರಕ್ಕೆ ಬಣ್ಣ ತುಂಬುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಲಾವಿದ ಶಿಬಿರ ನಿರ್ದೇಶಕ ಗೀರಿಶ್ ಗಾಣಿಗ ಸಾರಥ್ಯದಲ್ಲಿ ವಿಶೇಷ ಚಿತ್ರಕಲಾ ಕಮ್ಮಟ ಗಾಳಿಪಟ ಹಾರಾಟ ಹಾಗೂ ಮರಳಿನೋಂದಿಗೆ ಆಟ ಕಾರ್ಯಕ್ರಮದಲ್ಲಿ ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು. ಕಾರ್ಯಾಗಾರದಲ್ಲಿ ಇಂಡಿಯಾ ಪೌಂಡೇಶನ್ ಪಾರ್ ಆರ್ಟ್ಸ ಕಲಿಕಲಿಸು ಯೋಜನೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಲ್ಲೂರಿನಲ್ಲಿ ಪ್ರಪ್ರಥಮ ಬಾರಿಗೆ ಈ ಅದ್ದೂರಿಯ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಿರುವ ಸಂಘಟಕರ ಸಾಹಸ ತುಂಬಾ ಶ್ಲಾಘನೀಯ . ಅಂತರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಸರಿಸಮಾನವಾಗುವಂತೆ ಈ ಹೊನಲು ಬೆಳಕಿನ ಪಂದ್ಯಾಟವನ್ನು ಏರ್ಪಡಿಸುವುದರಲ್ಲಿ ಅವರ ಶ್ರಮ ಸಾರ್ಥಕವಾಗಿದೆ ಎಂದು ನ್ಯಾಯವಾದಿ ಟಿ.ಬಿ. ಶೆಟ್ಟಿ ಹೇಳಿದರು. ಅವರು ತಲ್ಲೂರಿನ ಶ್ರೀ ಕುಂತಿಯಮ್ಮ ದೇವಸ್ಥಾನದ ವಠಾರದಲ್ಲಿ ಕೊಂಕಣಿ ಖಾರ್ವಿ ಸಮಾಜ ತಲ್ಲೂರು ಇವರ ವತಿಯಿಂದ ಏರ್ಪಡಿಸಲಾದ ಕೆಕೆವೈಎಸ್ ಟ್ರೋಫಿ 2016 ಹೊನಲು ಬೆಳಕಿನ ಕಬಡಿ ಪಂದ್ಯಾಟದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಸಮಾರಂಭದ ತಲ್ಲೂರು ಗ್ರಾ.ಪಂ. ಅಧ್ಯಕ್ಷ ಆನಂದ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ಮಾತನಾಡಿ ಶಾರೀರದ ವಿಕಸನಕ್ಕೆ ಸ್ನೇಹ ಸಂವರ್ಧನೆಗೆ ಇಂತಹ ಪಂದ್ಯಾಟಗಳು ಅತ್ಯಗತ್ಯ ಎಂದು ಅಭಿಪ್ರಾಯ ಪಟ್ಟರು. ವೇದಿಕೆಯಲ್ಲಿ ಜ್ಯೋತಿ ಎ. ಜಿ.ಪಂ. ಸದಸ್ಯರು, ವಸಂತ ಹೆಗ್ಡೆ ಮೊಕ್ತೇಸರರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ತಲ್ಲೂರು, ಜಯಾನಂದ ಖಾರ್ವಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂದು ಎಲ್ಲೆಡೆ ಮದುವೆ ಸಮಾರಂಭ. ಸಹಜವಾಗಿ ವಾಹನ ದಟ್ಟಣೆಯೂ ಹೆಚ್ಚಿತ್ತು. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಕೂಡ ನಡೆಯುತ್ತಿದೆ. ಇಕ್ಕಟ್ಟಾದ ಹೆದ್ದಾರಿಯಲ್ಲಿ ಸಂಚಾರವೇ ಕಷ್ಟಸಾಧ್ಯ ಆಗಿರುವಾಗ ಬಸ್ರೂರು ಮೂರುಕೈ ಬಳಿ ಟ್ಯಾಂಕರೊಂದು ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡದ್ದೇ ತಡ, ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ವಾಹನಗಳು ಜಾಮ್ ಆಗತೊಡಗಿದವು. ವಾಹನ ದಟ್ಟಣೆ ಹೆಚ್ಚಿದ್ದರಿಂದ ಬೆಳಿಗ್ಗೆ 11ಗಂಟೆಯ ಹೊತ್ತಿಗೆ ಜಾಮ್ ಆಗಿದ್ದು ಮಧ್ಯಾಹ್ನ 2:30ರ ತನಕ ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಪಟ್ಟರು. ಸುಮಾರು 2ಕಿ.ಮೀ ವರೆಗೆ ಕುಂದಾಪುರ ಹಾಗೂ ಹೊರವಲಯದಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಮದುವೆ ಮುಂತಾದ ಶುಭಾ ಸಮಾರಂಭಗಳಿಗೆ ತೆರಳುತ್ತಿದ್ದ ನೂರಾರು ಜನರು ಉರಿಬಿಸಿಲಿನಲ್ಲಿ ರಸ್ತೆ ಮಧ್ಯೆಯೇ ಸಿಕ್ಕಿಹಾಕಿಕೊಂಡು ಪರದಾಡುತ್ತಿದ್ದರು. 2:30ರ ತರುವಾಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು ಸಂಚಾಯ ಸುಗಮವಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಮಂದಗತಿಯಲ್ಲಿ ಸಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಬಸ್ರೂರು ಮೂರುಕೈಯಿಂದ ಕುಂದಾಪುರ ಶಾಸ್ತ್ರೀವೃತ್ತದ ವರೆಗೆ ಸಂಚರಿಸುವುದೇ ದುಸ್ತರವೆನಿಸಿದೆ. ಕುಂದಾಪುರ ಪೊಲೀಸರು ಸುಗಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸರಕಾರಿ ಪ್ರಾಥಮಿಕ ಶಾಲೆಗಳ ಹಿಂದಿನ ಸ್ಥಿತಿಗೆ ಪ್ರಸಕ್ತ ಸ್ಥಿತಿಯನ್ನು ಹೋಲಿಸಿದರೆ ದಿಗ್ಭ್ರಮೆ ಉಂಟಾಗುತ್ತದೆ. ಅಲ್ಲೀಗ ಪೋಷಕರ ಹೊಣೆ ಮಕ್ಕಳನ್ನು ಕಳುಹಿಸುವುದಕ್ಕಷ್ಟೆ ಸೀಮಿತವಾಗಿ. ಆ ಬಳಿಕದ ಅವರ ಮಕ್ಕಳ ಎಲ್ಲ ಅಗತ್ಯಗಳನ್ನು ಸರಕಾರ ಪೂರೈಸುತ್ತಿದೆ. ಅಲ್ಲಿ ಆಂಗ್ಲ ಮಾಧ್ಯಮ ತರಗತಿಗಳೂ ನಡೆಯುತ್ತಿವೆ. ಅಷ್ಟಾದರೂ ಪೋಷಕರು ಅದರಿಂದ ಪ್ರಭಾವಿತರಾಗುತ್ತಿಲ್ಲ. ಅದರ ನಡುವೆ ಕೆಲವು ಕನ್ನಡ ಮಾಧ್ಯಮದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೈಪೋಟಿ ನಡೆಯುತ್ತಿರುವ ವಿದ್ಯಮಾನವೂ ಇದೆ. ಅದಕ್ಕೆ ಆ ಶಾಲೆಗಳು ಪೋಷಕರಲ್ಲಿ ಮೂಡಿಸಿರುವ ಭರವಸೆ ಕಾರಣ. ಇದನ್ನು ಎಲ್ಲ ಶಾಲೆಗಳು ಗಮನಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಅಂಗವಾಗಿ ನಡೆದ ಪ್ರಾಕ್ತನ ವಿದ್ಯಾರ್ಥಿ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸ್ವಸ್ತಿ ಭಾಷಣ ಮಾಡಿದ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಶುಭಾ ಮರವಂತೆ ಮೊದಲ ಬಾರಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಸಾಮಾನ್ಯ ಜನರಿಗೆ ಕಾನೂನು ಅರಿವು ಮೂಡಿಸುವುದು ಮತ್ತು ಕಾನೂನು ಮಾಹಿತಿ ನೀಡುವ ಉದ್ದೇಶದಿಂದ ಕಾನೂನು ಸಾಕ್ಷರತೆ ಮತ್ತು ಲೋಕ ಅದಾಲತ್ ಕಾರ್ಯಕ್ರಮ ರೂಪಿಸಲಾಗಿದೆ. ದೇಶದ ಪ್ರತಿಯೊಬ್ಬರಿಗೂ ಸಮಾನವಾದ ಹಕ್ಕು ದೊರೆಯಬೇಕಿದೆ. ನಮಗೆ ದೊರೆಬೇಕಾಗಿರುವ ಹಕ್ಕುಗಳನ್ನು ಪಾಲಿಸಿಕೊಳ್ಳುವುದರ ಜೊತೆಗೆ ನಮ್ಮ ಕರ್ತವ್ಯವನ್ನು ನಿಭಾಯಿಸಬೇಕು. ಸಾಮಾನ್ಯ ಜನರಿಗೆ ಕಾನೂನಿನ ನೆರವು ಸಿಗಬೇಕೆಂಬ ದೃಷ್ಟಿಯಿಂದ ತಾಲೂಕು ಕಾನೂನು ಸೇವಾ ಸಮಿತಿಯನ್ನು ರಚಿಸಲಾಗಿದ್ದು, ಎಲ್ಲರೂ ಮುಕ್ತವಾಗಿ ತಮ್ಮ ಸಮಸ್ಯೆಗಳನ್ನು ಈ ವೇದಿಕೆ ಮೂಲಕ ಪರಿಹರಿಸಿಕೊಳ್ಳಬಹುದು ಎಂದು ಕುಂದಾಪುರದ ೨ನೇ ಹೆಚ್ಚುವರಿ ಸಿವಿಲ್ ಮತ್ತು ಪ್ರಥಮ ದರ್ಜೆ ನ್ಯಾಯಿಕಾ ದಂಡಾಧಿಕಾರಿ ಝೈಬುನ್ನಿಸಾ ಹೇಳಿದರು. ಅವರು ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ವಕೀಲರ ಸಂಘ ಕುಂದಾಪುರ, ಅಭಿಯೋಗ ಇಲಾಖೆ, ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ತಾಲೂಕು ಪಂಚಾಯತ್ ಕುಂದಾಪುರ ಇವರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ…
ಕುಂದಾಪುರ: ಕೋಣಿಯ ಮಾತಾ ಮಾಂಟೆಸ್ಸೋರಿ ಶಾಲೆಯಲ್ಲಿ ಚಿಣ್ಣರಿಗಾಗಿ ಬಯಲಿನಾಟ ಕಾರ್ಯಕ್ರಮ ಜರುಗಿತು. ಪ್ರಥ್ವಿ ಪೂಜಾರಿ ಹಾಗೂ ಶಕ್ತಿ ಶೆಟ್ಟಿ ದೀಪ ಬೆಳಗುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಮಕ್ಕಳಿಗೆ ಹಾಗೂ ಪೋಷಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಪ್ರಾಂಶುಪಾಲೆ ಭಾರತಿ ಪ್ರಕಾಶ್ ಶೆಟ್ಟಿ, ಶಿಕ್ಷಕಿಯರಾದ ಗೀತಾ ಶೆಟ್ಟಿ, ಸುಮಿತ್ರ ಹಾಗೂ ಪೋಷಕರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರಮುಖ ಕಾರ್ಮಿಕ ಕಾಯಿದೆಗಳಿಗೆ ತಿದ್ದುಪಡಿ ತರಲು ಹೊರಟಿರುವ ಕೇಂದ್ರ ಸರಕಾರ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲು ಮುಂದಾಗಿದೆ. ಗುತ್ತಿಗೆ ಕಾರ್ಮಿಕ ಕಾನೂನಿಗೆ ತಿದ್ದುಪಡಿ ಮಾಡಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ರಾಷ್ಟ್ರವ್ಯಾಪೀ ಕನಿಷ್ಠ ವೇತನ ನಿಗದಿ ಮಾಡಬೇಕು. ಅಸಂಘಟಿತ ಕಾರ್ಮಿಕರ ಸಮಾಜಿಕ ಭದ್ರತಾ ನಿಧಿ ಸ್ಥಾಪನೆಮಾಡಬೇಕು. ಕಲ್ಯಾಣ ಯೋಜನೆಗಳ ಜಾರಿಗಾಗಿ ಹಣ ಮೀಸಲಿಡಬೇಕು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಪ್ರತಾಪಸಿಂಹ ಹೇಳಿದರು. ಇಲ್ಲಿನ ಕಾರ್ಮಿಕ ಭವನದಲ್ಲಿ ಸಿಐಟಿಯು ಕಾರ್ಮಿಕ ಸಂಘದ ಕುಂದಾಪುರ ತಾಲೂಕು 3ನೇ ಸಮ್ಮೇಳನ ಸಮಾರಂಭ ಉದ್ಘಾಟಿಸಿ ಪ್ರತಾಪಸಿಂಹ ಮಾತನಾಡುತ್ತಿದ್ದರು. ಕೇಂದ್ರ ಸರಕಾರ ದೇಶದ ಅಭಿವೃದ್ಧಿ ಬಗ್ಗೆ ಅಬ್ಬರದ ಪ್ರಚಾರ ಮಾಡುತ್ತದೆ. ಅಭಿವೃದ್ಧಿ ಪ್ರಗತಿ ಹೇಗೆ ಅನುಷ್ಟಾನಗೊಳಿಸಲಾಗುತ್ತದೆ ಎಂಬುದರ ಅರಿವು ಮಾಡಿಕೊಳ್ಳಬೇಕು. ಅಭಿವೃದ್ಧಿ ವ್ಯಾಪ್ತಿಯಲ್ಲಿ ಕಾರ್ಮಿಕರು, ಕೂಲಿಕಾರರು ಬರುವುದಿಲ್ಲ. ದುಡಿಯಲು ಕೂಲಿ ಕಾರ್ಮಿಕರು ಆದರೆ ಅಭಿವೃದ್ಧಿಯ ಪಾಲಕ್ಕೆ ನಾವು ಅರ್ಹರಲ್ಲ ಎಂಬ ಭಾವನೆ ಮೂಡುತ್ತಿದೆ. ಅಭಿವೃದ್ಧಿ ಎಂದರೆ ವೈಭವದ ಜೀವನ ಅಲ್ಲ. ಕನಿಷ್ಠ…
