ಬೈಂದೂರು: ಮನುಷ್ಯನ ಆರೋಗ್ಯಕ್ಕೆ ಯಾವುದೇ ತೊಂದರೆಯಾದಾಗ ಮನಕ್ಲೇಷ ಉಂಟಾಗುತ್ತದೆ. ಆಗ ಏನಿದ್ದರೂ ಸುಖ ಅನುಭವಿಸಲು ಅಸಾಧ್ಯ. ಸುಖಕ್ಕೆ ಆರೋಗ್ಯವೇ ಮೂಲ ಕಾರಣ. ಆದುದರಿಂದ ಆರೋಗ್ಯ ರಕ್ಷಣೆಗೆ ಪ್ರಾಶಸ್ತ್ಯ ನೀಡಬೇಕು ಎಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಧನ್ವಂತರಿ ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ರೂಪಾ ಆರ್. ಭಟ್ ಹೇಳಿದರು. ಹೊಸ ಆಡಳಿತದಡಿ ಪುನರಾರಂಭಗೊಂಡ ಬೈಂದೂರಿನ ಅಂಜಲಿ ಆಸ್ಪತ್ರೆಯಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಅನಾರೋಗ್ಯ ಕಾಡಿದಾಗ ಮಾತ್ರ ವೈದ್ಯರ ಬಳಿ ಹೋಗುವ ಪ್ರವೃತ್ತಿ ಸರಿಯಾದುದಲ್ಲ. ನಿಗದಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದರಿಂದ ಆರೋಗ್ಯ ಕಾಪಾಡಿಕೊಳ್ಳುವುದು ಸುಲಭವಾಗುತ್ತದೆ. ಜೀವನ ಮೌಲ್ಯಗಳನ್ನು ಕಡೆಗಣಿಸಿ, ಐಷಾರಾಮಿ ಬದುಕಿಗೆ ಹಾತೊರೆಯುವುದರಿಂದ ಮಾನಸಿಕ ಕಾಯಿಲೆಗಳು ಹೆಚ್ಚುತ್ತಿವೆ. ಈ ದಿಕ್ಕಿನಲ್ಲಿಯೂ ಜನರು ಚಿಂತಿಸಬೇಕು ಎಂದು ಅವರು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ. ಜಗನ್ನಾಥ ಶೆಟ್ಟಿ ಡಾ. ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಪುನರಾರಂಭವಾಗಿರುವ ಅಂಜಲಿ ಆಸ್ಪತ್ರೆ ಉತ್ತಮ ಸೇವೆ ನೀಡುವ…
Author: ನ್ಯೂಸ್ ಬ್ಯೂರೋ
ಬೈಂದೂರು: ಬಿಜೂರು ಗ್ರಾಮದ 2ನೇ ವಾರ್ಡಿನ ಸಾಲಿಮಕ್ಕಿ ಭಾಗದ ನಿವಾಸಿಗಳು ಈ ಬಾರಿಯ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿದ ಶಾಸಕ ಕೆ. ಗೋಪಾಲ ಪೂಜಾರಿ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಈ ಭಾಗದಲ್ಲಿ ಸಮರ್ಪಕ ರಸ್ತೆ ದುರಸ್ತಿ, ಚರಂಡಿ, ಕುಡಿಯುವ ನೀರು, ದಾರಿದೀಪ, ಸೇತುವೆ ನಿರ್ಮಾಣ ಮೊದಲಾದ ಮೂಲಸೌಕರ್ಯಕ್ಕಾಗಿ ನಾವು ಕಳೆದ ನಾಲ್ಕು ದಶಕದಿಂದ ಹೋರಾಟ ನಡೆಸುತ್ತಾ ಬಂದಿದ್ದೇವೆ, ಆದರೆ ಇದುವರೆಗೂ ನಮ್ಮ ಬೇಡಿಕೆ ಈಡೇರಿಲ್ಲ. ಚುನಾವಣಾ ಸಂದರ್ಭದಲ್ಲಿ ಈ ಭಾಗಕ್ಕೆ ಭೇಟಿ ನೀಡುವ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ನುಣುಚಿಕೊಳ್ಳುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಇಲ್ಲಿನ ಸಮಸ್ಯೆಗಳಿಗೆ ಮತ್ತು ಮತದಾನ ಬಹಿಷ್ಕಾರ ಹಾಕಿದ ಗ್ರಾಮಸ್ಥರನ್ನು ಸ್ಪಂದಿಸಿದ ’ವಿಜಯವಾಣಿ’ ಸಚಿತ್ರ ವರದಿ ಪ್ರಕಟಿಸಿತ್ತು. ಗ್ರಾಮಸ್ಥರ ಸಮಸ್ಯೆ ಆಲಿಸಿದ ಶಾಸಕರು ಈಗ ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಭರವಸೆ ನೀಡಲು ಸಾಧ್ಯವಿಲ್ಲ, ಚುನಾವಣೆಯ ಬಳಿಕ ಇಲ್ಲಿನ ರಸ್ತೆ ದುರಸ್ತಿ ಹಾಗೂ…
ಕುಂದಾಪುರ: ಹಿಂದೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚು ಪ್ರಧಾನತೆ ನೀಡುತ್ತಿದ್ದು, ಪ್ರಸಕ್ತ ಕಾಲಘಟ್ಟದಲ್ಲಿ ಶಿಕ್ಷದಲ್ಲಿ ಮೌಲ್ಯ ಕಡಿಮೆಯಾಗುತ್ತಿದೆ. ಸಂಘಟನೆ ಮೂಲಕ ವೇದ, ಸಂಸ್ಕಾರ, ಪುರಾಣದೊಟ್ಟಿಗೆ ನಮ್ಮತನದ ಅರಿವು ಮೂಡಿಸುವ ಶಿಕ್ಷಣ ಕೊಡಬೇಕಿದೆ ಎಂದು ಶ್ರೀ ಕ್ಷೇತ್ರ ಗೋಕರ್ಣ ವೇ.ಮೂ. ಸುಬ್ರಹ್ಮಣ್ಯ ಅಡಿ ಹೇಳಿದ್ದಾರೆ. ಕುಂದಾಪುರ ತಾಲೂಕ್ ದ್ರಾವಿಡ ಬ್ರಾಹ್ಮಣ ಪರಿಷತ್ ಮರವಂತೆ ವಲಯ, ವಿಪ್ರ ಯುವ ವೇದಿಕೆ, ವಿಪ್ರ ಮಹಿಳಾ ವೇದಿಕೆ ಆಶ್ರಯದಲ್ಲಿ ಹೊರ್ಣಿ ಗುಡ್ಡೇರ‍್ಮನೆಯಲ್ಲಿ ನಡೆದ ಏಕ್ ವಿಂಶತಿ ವಿಪ್ರ ಅಧಿವೇಶನ ಉದ್ಘಾಟಿಸಿ ಮಾತನಾಡುತ್ತಿದ್ದರು. ಬ್ರಾಹ್ಮಣ ಸಂಘನಾ ಶಕ್ತಿಯಿಂದ ಜಗತ್ತಿನ ಸ್ಥಿತಿ ಬದಾಲಾಯಿಸುವ ತಾಕತ್ತಿದ್ದು, ಇಂದಿನ ಪರೀಸ್ಥಿತಿಯಲ್ಲಿ ಸಂಘಟನೆ ಪ್ರಾಮುಖ್ಯವಾಗಿದೆ. ಸಂಘಟನೆ ಬಲಪಡಿಸಲು ಯುವಕರಲ್ಲಿ ಜಾಗೃತಿ ಮೂಡಿಸುವ ಹರ್ಕತ್ತಿದೆ ಎಂದು ಹೇಳಿದರು. ದ್ರಾವಿಡ ಬ್ರಾಹ್ಮಣ ಪರಿಷತ್ ಮರವಂತೆ ವಲಯ ಅಧ್ಯಕ್ಷ ಕೆ.ನಾಗಪ್ಪಯ್ಯ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಲೂಕ್ ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಗಣೇಶ್ ರಾವ್ ಕುಂಭಾಶಿ, ತಾಲೂಕ್ ದ್ರಾವಿಡ ಬ್ರಾಹ್ಮಣ ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ಶ್ರೀನಿವಾಸ ಹೆಬ್ಬಾರ್, ಯ.ಲಕ್ಷ್ಮೀನಾರಾಯಣ…
ಕುಂದಾಪುರ: ಇಲ್ಲಿನ ಗಾಂಧಿ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಕೊಟ್ಟಿದ್ದರಿಂದ ಹಾಸ್ಟೆಲ್‌ನಲ್ಲಿರುವ ಐನೂರಕ್ಕೂ ಮಿಕ್ಕ ವಿದ್ಯಾರ್ಥಿಗಳು ಓದು, ಬರಹಕ್ಕೆ ತೊಂದರೆ ಆಗುತ್ತದೆ. ಯಕ್ಷಗಾನ ಪ್ರದರ್ಶನದಿಂದ ವಿದ್ಯಾರ್ಥಿಗಳು ನಿದ್ದೆಯಿಲ್ಲದೆ ರಾತ್ರಿ ಕಳೆಯುವ ಸ್ಥಿತಿ. ಪರಿಸರವೂ ಗಬ್ಬೆದ್ದು ಹೋಗುತ್ತಿದ್ದು, ಯಕ್ಷಗಾನ ಪ್ರದರ್ಶನಕ್ಕೆ ಬೇರೆ ಕಡೆ ಅವಕಾಶ ಮಾಡಿಕೊಡಿ. ಕುಂದಾಪುರ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಕುಂದಾಪುರ ಪುರಸಭೆ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಯಕ್ಷಗಾನ ಪ್ರದರ್ಶನದ ವಿರುದ್ಧ ತಾಗಿಬಿದ್ದರು. ವಿಷಯ ಪ್ರಸ್ತಾಪಿಸಿದ ಚಂದ್ರಶೇಖರ ಖಾರ್ವಿ, ಗಾಂಧಿ ಮೈದಾನ ಸುತ್ತಾಮುತ್ತಾ ಶಾಲೆ, ಹಾಸ್ಟೆಲ್ ಇದ್ದು, ರಾತ್ರಿ ನಡೆಯುವ ಯಕ್ಷಗಾನ ಪ್ರದರ್ಶನದಿಂದ ವಿದ್ಯಾರ್ಥಿಗಳ ಏಕಾಗ್ರತೆಗೆ ಭಂಗ ಬರುತ್ತಿದೆ. ಮಕ್ಕಳ ವಿದ್ಯಾಭ್ಯಾಸ ಕುಂಟಿತವಾಗುವ ಸಂಭವವಿದ್ದು, ಯಕ್ಷಗಾನ ಪ್ರದರ್ಶನ ಕೋಡಿಗೆ ಶಿಪ್ಟ್ ಮಾಡುವಂತೆ ಆಗ್ರಹಿಸಿದರು. ಯಕ್ಷಗಾನ ಸಂಸ್ಕೃತಿ ಪ್ರತೀಕವಾಗಿದ್ದು, ಪರ್ಯಾಯ ವ್ಯವಸ್ಥೆಯಿಲ್ಲದೆ ಗಾಂಧಿ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನ ರದ್ದು ಮಾಡೋದ್ರಿಂದ ಕಲಾಪ್ರಕಾರಕ್ಕೆ ಹಿನ್ನೆಡೆಯಾಗಲಿದೆ. ಸೂಕ್ತ ಪರ್ಯಾಯ ವ್ಯವಸ್ಥೆ ಬಗ್ಗೆ ಸದಸ್ಯರು ಮಾಹಿತಿ ನೀಡಿದರೆ ಚಿಂತನೆ ಮಾಡಲಾಗುತ್ತದೆ ಎಂದು ಕುಂದಾಪುರ ಪುರಸಭೆ ಮುಖ್ಯಾಧಿಕಾರಿ…
ಬೈಂದೂರು: ವಲಯದ ರಾಗಿಹಕ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2015-16 ನೇ ಸಾಲಿನ ವಾರ್ಷಿಕ ಸಂಚಿಕೆ ’ನಿರುಪಮ2’ ಇತ್ತೀಚೆಗೆ ಶಾಲೆಯ ಸಭಾಂಗಣದಲ್ಲಿ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್ ಬಿಡುಗಡೆ ಮಾಡಿದರು. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಮಹಾದೇವ ಮಂಜ, ನಿಕಟಪೂರ್ವ ಮುಖ್ಯ ಶಿಕ್ಷಕ ಮಹಾಬಲ ಗೌಡ, ಶಾಲೆಯ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.
ಕುಂದಾಪುರ: ಸ್ಪರ್ಧಾತ್ಮಕ ಯುಗದಲ್ಲಿ ವಿಜ್ಞಾನ ಎತ್ತರದ ಸ್ಥರದಲ್ಲಿ ಹೊಸ ಹೊಸಾ ಅವಿಷ್ಕಾರಗಳು ನಡೆಯುತ್ತಿದೆ. ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ವಿಜ್ಞಾನ ಮಾದರಿ ಸ್ಪರ್ಧೆ ಬೌದ್ಧಿಕ ಮಟ್ಟದ ವೃದ್ಧಿಗೆ ಪೂರಕಾವಾಗಿದೆ ಎಂದು ಹಂಗಳೂರು ಚಿಕ್ಕ ಮಹಾಲಿಂಗೇಶ್ವರ ಫ್ರೆಂಡ್ಸ್ ಮಾರ್ಗದರ್ಶಕ ಕೆ.ಆರ್.ನಾಯ್ಕ್ ಹೇಳಿದ್ದಾರೆ. ಹಂಗಳೂರು ಚಿಕ್ಕ ಮಹಾಲಿಂಗೇಶ್ವರ ಫ್ರೆಂಡ್ಸ್, ಅಂಕದಕಟ್ಟೆ ಹಳೆ ವಿದ್ಯಾರ್ಥಿಗಳ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಅಂಕದಕಟ್ಟೆ ಸರಕಾರಿ ಮಾದರಿ ಶಾಲಾ ವೇದಿಕೆಯಲ್ಲಿ ನಡೆದ ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ಮಾದರಿ ಸ್ಪರ್ಧೆ ಮತ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಿದ್ದರು. ಬೇರೆ ಬೇರೆ ಕಡೆಯಿಂದ ಸ್ಪರ್ಧೆಗೆ ಬಂದ ವಿದ್ಯಾರ್ಥಿಗಳು ಒಂದೆಡೆ ಕಲೆತು ವಿಷಯ ವಿನಿಮಯದಿಂದ ಜ್ಞಾನ ವೃದ್ಧಿಗೆ ಸಹಕಾರಿಯಾಗಲಿದೆ. ಹಿಂದೆ ವಿದ್ಯಾರ್ಥಿಗಳಿಗೆ ಕಲಿಕೆ ಅವಕಾಶ ಕಮ್ಮಿಯಿದ್ದು, ಪ್ರಸಕ್ತ ಕಲಿಕೆಗೆ ವಿಫುಲ ಅವಕಾಶ ವಿದ್ಯಾರ್ಥಿಗಳಿಗೆ ಸಿಗುತ್ತಿದೆ ಎಂದು ಹೇಳಿದರು. ಅಂಕದಕಟ್ಟೆ ಸರಕಾರಿ ಮಾದರಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ವರ್ಣ ಅಧ್ಯಕ್ಷತೆ ವಹಿಸಿದ್ದರು. ಶಾಲಾ…
ಕುಂದಾಪುರ: ದೇಶದ ಭವಿಷ್ಯ ಯುವಶಕ್ತಿಯನ್ನು ಅವಲಂಬಿಸಿದೆ. ಇಂದಿನ ಯುವಶಕ್ತಿ ಆ ನಿಟ್ಟಿನಲ್ಲಿ ಒಂದಾಗಬೇಕಿದೆ. ಇಂಥಹ ಅಗತ್ಯತೆಯಲ್ಲಿ ಯುವಕರೆಲ್ಲರನ್ನು ಒಂದುಗೂಡಿಸಿದ ಪ್ರೇರಣಾ ಯುವ ವೇದಿಕೆ ಸಮಾಜಮುಖಿ ಕಾರ್ಯಕ್ರಮ ಮಾಡುತ್ತಿದೆ ಎಂದು ಭಾರತ ಸರ್ಕಾರ ಅಂಕಿ ಅಂಶ ಇಲಾಖೆಯ ಸಾಂಖ್ಯಕ ಅಧಿಕಾರಿ ತಾರಾನಾಥ ಹೊಳ್ಳ ಹೇಳಿದರು. ಪ್ರೇರಣಾ ಯುವ ವೇದಿಕೆಯ ತೃತೀಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊಲ್ಲೂರು ಮಾಜಿ ಧರ್ಮದರ್ಶಿ ಬಿ.ಎಮ್.ಸುಕುಮಾರ್ ಶೆಟ್ಟಿ ಮಾತನಾಡಿ ಆಡಂಬರರಹಿತ ,ದುಂದುವೆಚ್ಚಲ್ಲಿದೆ, ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸುವ ಪ್ರೇರಣಾ ವೇದಿಕೆಯ ಶ್ಲಾಘನೀಯ ಎಂದರು. ತದನಂತರ ಗ್ರಾಮೀಣ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ನೀಡಲಾಯಿತು, ಹಿರಿಯ ಕೃಷಿಕರಾದ ರಾಮಯ್ಯ ಶೆಟ್ಟಿ ನೈಕಂಬ್ಳಿ, ಹಿರಿಯ ಯಕ್ಷಗಾನ ಕಲಾವಿದರಾದ ನಾರಾಯಣ ದೇವಾಡಿಗ ಮಾರಣಕಟ್ಟೆ, ರಾಜ್ಯಮಟ್ಟದ ಸ್ಥಳೀಯ ಕ್ರೀಡಾಪಟು ಚೇತನಾ ಎಂ ಇವರಿಗೆ ಪ್ರೇರಣಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರೇರಣಾ ಯುವ ವೇದಿಕೆಯ ಅಧ್ಯಕ್ಷ ಚಂದ್ರ ಶೆಟ್ಟಿ ನೈಕಂಬ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಲೂಕು ಡಿ.ವೈ.ಎಸ್.ಪಿ ಮಂಜುನಾಥ ಶೆಟ್ಟಿ, ಉಡುಪಿಯ ಯುವ ಚಿಂತಕ ಶ್ರೀಕಾಂತ…
ಬೈಂದೂರು: ಇಲ್ಲಿನ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಫೆ.09ರಿಂದ ಫೆ.13ರ ವರೆಗೆ ನಡೆಯುವ ಸಾರ್ವಜನಿಕ ಲಕ್ಷಮೋದಕ ಗಣಪತಿ ಮಹಾಯಾಗ ಮತ್ತು ಚತುಃ ಪವಿತ್ರ ನಾಗಮಂಡಲೊತ್ಸವದ ಪೂರ್ವಭಾವಿಯಾಗಿ ಶುಕ್ರವಾರ ದೇವಳದ ಪ್ರಧಾನ ಅರ್ಚಕ ಬಿ. ಕೃಷ್ಣಮೂರ್ತಿ ನಾವಡರ ನೆತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನದಿಂದ ಉಗ್ರಾಣ ಮುಹೂರ್ತ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಹಾಗೂ ಸದಸ್ಯರು, ಮಾಚ ಪೂಜಾರಿ ಬೆಳ್ಗಲ್‌ಕಟ್ಟೆ, ನಾಗೇಂದ್ರ ಪೂಜಾರಿ ಕರಾವಳಿ ಶಿರೂರು, ತಿಮ್ಮಪ್ಪ ಪೂಜಾರಿ ಕಾಡಿಗುಂಡಿ ಬೈಂದೂರು, ರಾಮ ಮಡಿವಾಳ, ಸ್ತ್ರೀಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ಫೆ.09ರಿಂದ ಈ ಕ್ಷೇತ್ರಕ್ಕೆ ಹೊರೆ ಕಾಣಿಕೆ ಕೊಡುವವರು ಕೊಡಬಹುದು ಎಂದು ದೇವಳದ ಸಮಿತಿ ತಿಳಿಸಿದೆ.
ಗಂಗೊಳ್ಳಿ: ಗಡಿಯ ತುದಿಯಲ್ಲಿ ನಿಂತು ದೇಶವನ್ನು ಹೊರಗಿನ ಶತ್ರುಗಳಿಂದ ರಕ್ಷಿಸುವ ಸೈನಿಕರಂತೆಯೇ ದೇಶದ ಆಂತರಿಕ ಸಂಘರ್ಷಗಳಲ್ಲಿ ನಮ್ಮೊಂದಿಗೆ ನಿಲ್ಲುವ ಸೈನಿಕನೇ ’ಪೊಲೀಸ್;. ಅವರ ಕರ್ತವ್ಯಕ್ಕೆ ಸಮಯದ ಪರಿಧಿ ಇಲ್ಲ. ಅವರು ಹಕ್ಕೊತ್ತಾಯಕ್ಕೆ ಹೋರಾಟ ಮಾಡುವಂತಿಲ್ಲ. ಜಾತಿ ಮತಗಳ ಸಂಘರ್ಷವಾಗಲಿ, ರಾಜ್ಯಗಳ ನಡುವಿನ ಗಡಿ ಕದನವಾಗಲಿ ಅವರು ತಕ್ಷಣ ಹಾಜರು. ಉದ್ರಿಕ್ತರು ಬೀಸುವ ಕಲ್ಲುಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವುದರ ಜೊತೆಗೆ ತನ್ನನ್ನು ನಂಬಿದವರನ್ನು ಕಾಪಾಡುವುದು ಅವರ ಹೊಣೆ. ಇಂತಹ ಅನೇಕ ಕಠಿಣ ಸನ್ನಿವೇಶಗಳಲ್ಲಿ ಸದಾ ಜನರೊಂದಿಗೆ ಇದ್ದು ಜನರನ್ನು ರಕ್ಷಿಸುವ ಕಾನೂನನ್ನು ಕಾಪಾಡುವ ಮಹತ್ತರವಾದ ಜವಾಬ್ದಾರಿ ಪೊಲೀಸರ ಮೇಲಿದೆ. ನಮ್ಮೂರಿನ ಪೊಲೀಸ್ ನಮ್ಮ ಸೈನಿಕರಿದ್ದಂತೆ. ಪೊಲೀಸರ ಮೇಲಿನ ಗೌರವಕ್ಕೆ ತಲೆಬಾಗಿ ನಮ್ಮೂರಿನ ಸೈನಿಕರಿಗೆ ಗೌರವ ಸಲ್ಲಿಸುವ ದೃಷ್ಟಿಯಿಂದ ಹುತಾತ್ಮರ ದಿನಾಚರಣೆ ಅಂಗವಾಗಿ ಗಂಗೊಳ್ಳಿಯ ಕ್ರಾಂತಿವೀರರ ಅಭಿಮಾನಿ ಬಳಗದ ಸದಸ್ಯರು ಇತ್ತೀಚಿಗೆ ನಮ್ಮೊಳಗಿನ ಸೈನಿಕರು ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಗಂಗೊಳ್ಳಿ, ಬೈಂದೂರು ಹಾಗೂ ಕೊಲ್ಲೂರು ಪೊಲೀಸ್ ಠಾಣೆಗಳಿಗೆ ತೆರಳಿ ಆಯಾ ಠಾಣೆಯ ಎಲ್ಲಾ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಓವರ್ಟೆಕ್ ಮಾಡುತ್ತಿದ್ದ ಬೈಕ್ ಸವಾರ ಆಯತಪ್ಪಿ ರಸ್ತೆಗೆ ಬಿದ್ದ ವೇಳೆ ಹಿಂದಿನಿಂದ ಬಂದ ಲಾರಿ ಹರಿದು ಮೃತಪಟ್ಟ ಧಾರುಣ ಘಟನೆ ವರದಿಯಾಗಿದೆ. ಮೃತರನ್ನು ಕೋಡಿ ಸಮೀಪದ ಅರಳುಗುಡ್ಡೆ ನಿವಾಸಿ ಉತ್ಮೇಶ್ ಪೂಜಾರಿ (36) ಎಂದು ಗುರುತಿಸಲಾಗಿದೆ. ಘಟನೆಯ ವಿವರ: ಹಕ್ಲಾಡಿ ಸಮೀಪದ ಹೊಳ್ಮಗೆ ತೆರಳುತ್ತಿದ್ದ ಸಂದರ್ಭ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಮೀಪ ಬೈಕೊಂದನ್ನು ಓವರ್ಟೆಕ್ ಮಾಡುತ್ತಿದ್ದ ಸಂದರ್ಭ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಇದೇ ಸಂದರ್ಭ ಹಿಂದಿನಿಂದ ಬಂದ ಮೀನು ಲಾರಿಯೊಂದು ಉತ್ಮೇಶ್ ಅವರ ತಲೆಯ ಮೇಲೆ ಹರಿದಿದೆ. ಹೆಲ್ಮೆಟ್ ಧರಿಸಿದ್ದರೂ ಲಾರಿ ಹರಿದ ರಭಸಕ್ಕೆ ಹೆಲ್ಮೆಟ್ ಛದ್ರಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾರೆ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಉತ್ಮೇಶ್ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ.
