ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇನ್ನೊಬ್ಬರ ಸೇವೆಯಲ್ಲಿ ನಾವು ಸುಖವನ್ನು ಕಾಣಬೇಕು. ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ಬೆಳೆಸಿಕೊಂಡು ಮುಂದೆ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು. ಅದಕ್ಕಾಗಿ ಇಂಟರ್ಯಾಕ್ಟ್ ಕ್ಲಬ್ ಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ರೋಟರಿ ಕ್ಲಬ್ ಕುಂದಾಪುರ ಮಿಡ್ ಟೌನ್ ಅಧ್ಯಕ್ಷ ಸಚಿನ್ ಕುಮಾರ್ ಶೆಟ್ಟಿ ನುಡಿದರು. ಅವರು ಇಲ್ಲಿನ ಕೆದೂರು ಸರಕಾರಿ ಪ್ರೌಢಶಾಲೆಯಲ್ಲಿ ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ ನೆರವೇರಿಸಿ ಮಾತನಾಡಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಸಂಸ್ಥೆಯ ಸಹಕಾರವನ್ನು ಸ್ಮರಿಸಿದರು. ಕಳೆದ ಸಾಲಿನಲ್ಲಿ ಎಸ್ಎಸ್ಎಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಂಗೀತಾ ಮತ್ತು ಅನುದೀಪ ಇವರನ್ನು ನಗದು ಬಹಮಾನ ನೀಡಿ ಪುರಸ್ಕರಿಸಿದರು. ವಿಜಯ ಕರ್ನಾಟಕ ದಿನ ಪತ್ರಿಕೆಯವರು ಪ್ರಕಟಿಸುವ ಶೈಕ್ಷಣಿಕ ವಿದ್ಯಾರ್ಥಿ ಸಂಚಿಕೆಯನ್ನು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ಉಚಿತವಾಗಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕುಂದಾಪುರ ಮಿಡ್ ಟೌನ್ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಅಂಪಾರು, ಇಂಟರ್ಯಾಕ್ಟ್ ಚೇರ್ ಮನ್ ನಿರಂಜನ ಶೆಟ್ಟಿ, ನಿಕಟ ಪೂರ್ವ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಕನ್ನಡ ವಿಭಾಗ ಸಾಹಿತ್ಯ ಸಂಘ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ವಿಶ್ವ ಕುಂದಾಪುರ ದಿನಾಚರಣೆಯ ಪ್ರಯುಕ್ತ ಚೆನ್ನಿಮಣಿ- 2026 ಅಂತರ್ ತರಗತಿ ಕುಂದಗನ್ನಡ ಸಾಂಸ್ಕೃತಿಕ ಸ್ಪರ್ಧೆ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಸಂಚಾಲಕರಾದ ಅನುಪಮಾ ಎಸ್. ಶೆಟ್ಟಿ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಭಾಷೆ ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರತಿಬಿಂಬವಾಗಿದ್ದು, ಭಾಷೆಯು ಬೆಳೆಯಬೇಕಾದರೆ ಜನರಲ್ಲಿ ಒಗ್ಗಟ್ಟು ಮುಖ್ಯ ಮತ್ತು ಅದನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯಬೇಕಾದರೆ ನಾವೆಲ್ಲ ಆ ಭಾಷಯನ್ನು ಬಳಸಿದಾಗ ಮಾತ್ರ ಸಾಧ್ಯ ಹಾಗಾಗಿ ಕುಂದಾಪುರ ಭಾಷೆ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆ ವೆಶಿಷ್ಟ್ಯವನ್ನು ಹೊಂದಿದ್ದರಿಂದ ಇಂದು ನಾವು ವಿಶ್ವ ಕುಂದಾಪುರ ದಿನಾಚಣೆಯನ್ನು ಹೆಮ್ಮೆಯಿಂದ ಆಚರಿಸುತ್ತಿದ್ದೇವೆ. ಆದ್ದರಿಂದ ವಿದ್ಯಾರ್ಥಿಗಳು ಕುಂದಾಪುರ ಭಾಷೆಯನ್ನು ಉಳಿಸುವುದರೊಂದಿಗೆ ಮೂಂದಿನ ಪೀಳಿಗೆಗೆ ತಲುಪಿಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಥರ್ ತೆರೆಸಾ ಪದವಿ ಪೂರ್ವ ಕಾಲೇಜಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಮ್ಮ ಪುರಾತನ ಪರಂಪರೆ, ಸಂಸ್ಕೃತಿಯನ್ನು ನಾವುಗಳು ಸರಿಯಾಗಿ ಅರಿತುಕೊಂಡು ನಮ್ಮ ಬದುಕನ್ನು ರೂಪಿಸಿಕೊಳ್ಳುವ ಮಹತ್ತರ ಜವಾಬ್ದಾರಿ ನಮ್ಮದೆಂದು ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ ಟಿ. ಸೋನ್ಸ್ ಹೇಳಿದರು. ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ “ಸಾಂಪ್ರದಾಯಿಕ ದಿನಾಚರಣೆ” ಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾಗಿರುವ ಕೆ. ಶಾಂತಾರಾಮ್ ಪ್ರಭು ಕಾರ್ಯಕ್ರಮದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ಮುಖ್ಯ ಅತಿಥಿ ರೂಪ ಶೆಣೈ ಪ್ರಾಂಶುಪಾಲರು, ಗುರುಕುಲ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, “ಮಣ್ಣಿನ ಅಸ್ಮಿತೆಗೆ ನಮ್ಮ ಪರಂಪರೆ ಸಂಪ್ರದಾಯ ದರ್ಪಣವಿದ್ದಂತೆ ಪರಂಪರೆ, ಸಂಸ್ಕೃತಿ, ಸಂಪ್ರದಾಯ ಈ ಮಣ್ಣಿನ ಬೇರು ಮಾನವನ ಪರಿಪೂರ್ಣ ಬದುಕಿನಲ್ಲಿ ವಿದ್ಯೆ ಬುದ್ಧಿ ಜ್ಞಾನ ಸಂಪ್ರದಾಯ ಆಚರಣೆ ಪರಂಪರೆ ಸಂಸ್ಕೃತಿ ಬಹಳ ಮುಖ್ಯ” ಎಂದು ನುಡಿದರು. ಗೌರವ ಅತಿಥಿ ಶೋಭಾ ಶೆಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳು , ಕುಂದಾಪುರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗೋಕರ್ಣ: ನಮ್ಮ ದೇಹಕ್ಕೆ ನಾವು ಪ್ರಭುಗಳಾಗಿದ್ದು, ಗಟ್ಟಿಯಾದ ಸಂಕಲ್ಪವನ್ನು ಮಾಡಿದಾಗ ದೇಹ ನಮ್ಮ ಅವಶ್ಯಕತೆಗೆ ತಕ್ಕಂತೆ ಬದಲಾಗುತ್ತದೆ. ಆಗ ನಾವು ದುರ್ಲಭವನ್ನೂ ಕೂಡ ಸಾಧಿಸಿಕೊಳ್ಳಬಹುದು.ಆದರೆ ಸಂಕಲ್ಪ ಧೃಢವಾಗಿರಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಅವರು ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಅಗ್ನಿ ಹಾಗೂ ಪ್ರಾಣಾಯಾಮಗಳು ಆಹಾರಕ್ಕೆ ಪೂರಕ ವಿಚಾರಗಳಾಗಿದ್ದು, ಪೀಠಿಕೆಯಿಲ್ಲದೇ ಪಾಠವಿಲ್ಲ ಎಂಬಂತೆ ಅಗ್ನಿಯ ಅರಿವಿಲ್ಲದೇ ಆಹಾರವನ್ನು ತಿಳಿದುಕೊಳ್ಳಲಾಗದು. ಹಸಿವು ಗೊತ್ತಾಗದವನಿಗೆ ಊಟದ ಸ್ವಾಧ ಗೊತ್ತಾಗದು. ಹಾಗೆಯೇ ಅಗ್ನಿಯನ್ನು ಸಮರ್ಪಕವಾಗಿ ತಿಳಿದುಕೊಳ್ಳದೇ ಇದ್ದರೆ ಆಹಾರದ ವಿಚಾರವನ್ನು ಸಂಪೂರ್ಣವಾಗಿ ತಿಳಿದುಕೊಂಡಂತಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಆಹಾರದ ಪ್ರವಚನ ಸರಣಿಯಲ್ಲಿ ಅಗ್ನಿಯ ಕುರಿತಾದ ವಿಚಾರಗಳನ್ನು ಪ್ರಸ್ತಾಪಿಸಲಾಯಿತು ಎಂದು ಹೇಳಿದರು. ಬಾವಿಯನ್ನು ತೋಡುವಾಗ ಎಲ್ಲಾ ಕಡೆ 5 – 10 ಅಡಿಗಳ ಗುಂಡಿಯನ್ನು ತೋಡಿದರೆ ನೀರು ಸಿಗುವುದಿಲ್ಲ. ಸರಿಯಾದ ಒಂದೇ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಮೀನುಗಾರಿಕೆ ಮುಗಿಸಿ ವಾಪಾಸು ಬರುತ್ತಿದ್ದ ಸಂದರ್ಭ ಆಯತಪ್ಪಿ ದೋಣಿಯಿಂದ ಸಮುದ್ರಕ್ಕೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಮರವಂತೆಯಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ. ಮರವಂತೆ ಕುಪ್ಪನಮನೆ ನಿವಾಸಿ ಪರಮಜ್ಯೋತಿ (43) ಮೃತಪಟ್ಟ ಮೀನುಗಾರರು. ಮರವಂತೆಯ ಪ್ರದೀಪ್ ಖಾರ್ವಿ ಎಂಬುವರ ಧರ್ಮದೇವತೆ ದೋಣಿಯಲ್ಲಿ ಮೀನುಗಾರಿಕೆಗೆ ಹೋಗಿದ್ದ ಪರಮಜ್ಯೋತಿ ಅವರು ಮೀನುಗಾರಿಕೆ ಮುಗಿಸಿ ವಾಪಸ್ಸು ಮರವಂತೆ ಬಂದರಿಗೆ ಬರುವಾಗ ಅರಬಿ ಸಮುದ್ರದಲ್ಲಿ ಒಮ್ಮೆಲೇ ಜೋರಾಗಿ ಗಾಳಿ ಬೀಸಿದ ಕಾರಣ ದೋಣಿಯು ನೀರಿನಲ್ಲಿ ತೇಲಾಡಿದ ಪರಿಣಾಮ ಪರಮಜ್ಯೋತಿ ಆಯತಪ್ಪಿ ದೋಣಿಯಿಂದ ಸಮುದ್ರಕ್ಕೆ ಬಿದ್ದಿದ್ದಾರೆ. ಕೂಡಲೇ ಅವರನ್ನು ದೋಣಿಯಲ್ಲಿದ್ದ ಕೆಲಸಗಾರರು ನೀರಿನಿಂದ ಮೇಲಕ್ಕೆ ಎತ್ತಿ ಚಿಕಿತ್ಸೆಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ವೈದ್ಯರು ಪರೀಕ್ಷಿಸಿ ಅದಾಗಲೇ ಪರಮಜ್ಯೋತಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೈಕಿಗೆ ಹಿಂದಿನಿಂದ ಕಾರು ಢಿಕ್ಕಿಯಾಗಿ, ಬೈಕ್ ಸವಾರ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ಗುರುವಾರ ಮಧ್ಯಾಹ್ನ ರಾ.ಹೆ. 66ರ ತಾಲೂಕಿನ ಹೆಮ್ಮಾಡಿ ಸಮೀಪದ ಕನ್ನಡಕುದ್ರು ಕ್ರಾಸ್ ಬಳಿ ಸಂಭವಿಸಿದೆ. ಹೆಮ್ಮಾಡಿ ಸಂತೋಷನಗರ ನಿವಾಸಿ ನರಸಿಂಹ ಆಚಾರ್ (60) ಸಾವನ್ನಪ್ಪಿದವರು. ಅವರು ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ವೇಗವಾಗಿ ಹಾಗೂ ಅಜಾಗರೂಕತೆಯಿಂದ ದೀಪಕ್ ಕುಮಾರ್ ಕಾರು ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದಿರುವುದಾಗಿದೆ. ಪರಿಣಾಮ ಬೈಕ್ ಸಹಿತ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ನರಸಿಂಹ ಆಚಾರ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರೊಳಗೆ ಸಾವನ್ನಪ್ಪಿರುವುದಾಗಿದೆ. ಸಂಚಾರ ಠಾಣಾ ಪಿಎಸ್ ಐ ಅನೂಪ್ ನಾಯಕ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೀನು ಹಿಡಿಯಲೆಂದು ಹೋದ ಯುವಕ ಬಲೆ ಸಮೇತ ಕೆರೆಗೆ ಬಿದ್ದು, ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಆನಗಳ್ಳಿ ಗ್ರಾಮದ ಆಗರಕಟ್ಟು ಎಂಬಲ್ಲಿನ ಕೆರೆಯಲ್ಲಿ ಗುರುವಾರ ಸಂಭವಿಸಿದೆ. ಆನಗಳ್ಳಿ ಗ್ರಾಮದ ಗಾಣಿಗರಬೆಟ್ಟು ನಿವಾಸಿ ಉದಯ (30) ಮೃತರು. ಅವರು ಬೆಳಗ್ಗೆ ಮನೆಯಿಂದ ಬಲೆ ತೆಗೆದುಕೊಂಡು ಮೀನು ಹಿಡಿಯಲು ಹೋಗಿದ್ದು, ಆಗರಕಟ್ಟೆಯ ಕೆರೆಗೆ ಮೀನು ಹಿಡಿಯಲು ಬಲೆ ಹಾಕಿದ ಸಮಯ ಆಕಸ್ಮಿಕವಾಗಿ ಬಲೆ ಸಮೇತ ಕೆರೆಗೆ ಬಿದ್ದಿರುವುದಾಗಿ, ಅವರ ಸಹೋದರ ಮನೋಜ್ ನೀಡಿದ ದೂರಿನಂತೆ ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಜೂನ್ನಲ್ಲಿ ನಡೆದ ಕಂಪನಿ ಸೆಕ್ರೆಟರೀಸ್ (ಸಿ.ಎಸ್.) ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮೆರೆದಿದ್ದಾರೆ. ಕಂಪನಿ ಸೆಕ್ರೆಟರಿ ವೃತ್ತಿಪರ ಅರ್ಹತೆಯ ಅಂತಿಮ ಹಂತದ ಪರೀಕ್ಷೆಯಾದ ಸಿ.ಎಸ್. ಪ್ರೊಫೆಷನಲ್ನ ಗ್ರೂಪ್–1 ಮತ್ತು ಗ್ರೂಪ್–2 ಪರೀಕ್ಷೆಗಳಲ್ಲಿ ಆಳ್ವಾಸ್ ಬಿ.ಕಾಂ. ವಿದ್ಯಾರ್ಥಿಗಳಾದ ಅನನ್ಯ ಕೆ.ಎ. (382 ಅಂಕ), ಪ್ರತೀಕ್ಷಾ (373) ಹಾಗೂ ನಾಗನಾಥ್ (353 ಅಂಕ) ಉತ್ತೀರ್ಣರಾಗುವ ಮೂಲಕ ಗಮನಾರ್ಹ ಸಾಧನೆ ಮೆರೆದಿದ್ದಾರೆ. ಇವರಲ್ಲಿ ಅನನ್ಯ ಹಾಗೂ ನಾಗನಾಥ್ ಮೊದಲ ಪ್ರಯತ್ನದಲ್ಲೆ ಉತ್ತೀರ್ಣರಾಗಿದ್ದಾರೆ. ಇದರೊಂದಿಗೆ ಮೂವರು ಕಂಪನಿ ಸೆಕ್ರೆಟರಿ ವೃತ್ತಿಗೆ ಅಗತ್ಯವಾದ ವೃತ್ತಿಪರ ಅರ್ಹತೆಯನ್ನು ಗಳಿಸಿದ್ದಾರೆ. ಸಿ.ಎಸ್. ಪ್ರೊಫೆಷನಲ್ನ – ಗ್ರೂಪ್–1 ಪರೀಕ್ಷೆಯಲ್ಲಿ ಬಿ. ಸುಹಾಸ್ ರಾವ್ (248), ನಿಶಿತಾ ಸಿ. ಶೆಟ್ಟಿ (200) ಹಾಗೂ ತಸ್ಮಯ್ ಎಂ. ಬಪ್ಪಣವರ್ (200) ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಸಿ.ಎಸ್. ಎಕ್ಸಿಕ್ಯೂಟಿವ್ನಲ್ಲೂ ಸಾಧನೆ:ಕಂಪನಿ ಸೆಕ್ರೆಟರಿ ವೃತ್ತಿಪರ ಪಯಣದ ಎರಡನೇ ಹಂತವಾದ ಸಿ.ಎಸ್. ಎಕ್ಸಿಕ್ಯೂಟಿವ್ ಪರೀಕ್ಷೆಯಲ್ಲಿಯೂ ಆಳ್ವಾಸ್ ವಿದ್ಯಾರ್ಥಿಗಳು ಉತ್ತಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಅಧಿನಿಯಮದಡಿಯಲ್ಲಿ ದಾಖಲಾದ ಪ್ರಮುಖ ಪ್ರಕರಣಗಳಿಗೆ (ಕೊಲೆ, ಅತ್ಯಾಚಾರ, ಪೋಕ್ಸೋ, ಕೊಲೆ ಪ್ರಯತ್ನ, ತೀವ್ರ ಗಾಯ ಹಾಗೂ 7 ವರ್ಷಗಳಿಗೂ ಮೇಲ್ಪಟ್ಟು ಶಿಕ್ಷೆ ಇರುವ ಪ್ರಕರಣಗಳು) ಸಂಬಂಧಿಸಿದಂತೆ ಪ.ಜಾತಿ/ ಪ.ಪಂಗಡಗಳ (ದೌರ್ಜನ್ಯ ತಡೆ) ನಿಯಮಗಳು – 1995 ರಲ್ಲಿನ ನಿಯಮ-4ರ ಅನ್ವಯ ಘನ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಲು ನುರಿತ ಹಾಗೂ ಅನುಭವಿ ನ್ಯಾಯವಾದಿಗಳನ್ನು ವಿಶೇಷ ಸಾರ್ವಜನಿಕ ಅಭಿಯೋಜಕರನ್ನಾಗಿ ನಿಯಮಾನುಸಾರ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವ-ವಿವರವುಳ್ಳ ಅರ್ಜಿ ಹಾಗೂ ಇತರೆ ವಿವರಗಳನ್ನೊಳಗೊಂಡ ದಾಖಲಾತಿಗಳೊಂದಿಗೆ ಸೆಪ್ಟೆಂಬರ್ 7ರ ಒಳಗಾಗಿ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, 2ನೇ ಮಹಡಿ, ಬಿ ಬ್ಲಾಕ್, ರಜತಾದ್ರಿ, ಮಣಿಪಾಲ ಉಡುಪಿ ಇವರಿಗೆ ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬಹುದಾಗಿದೆ ಎಂದು ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಸೈಂಟ್ ಥಾಮಸ್ ಶಾಲೆಯ ಸ್ಕೌಟ್ಸ್ ಆಂಡ್ ಗೈಡ್ಸ್ ವಿದ್ಯಾರ್ಥಿಗಳು ತಾಲೂಕು ಮಟ್ಟದ ದೇಶಭಕ್ತಿಗೀತೆ ಸಮೂಹ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಮತ್ತು ತೃತೀಯ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಶಾಲೆಗೆ ಹೆಮ್ಮೆ ತಂದಿದ್ದಾರೆ. ಶಾಲೆಯ ಸ್ಕೌಟ್ಸ್ ತಂಡದ ಅಹಮದ್ ರುಹೈಲ್, ಆದಿಶೇಷ, ಶೋನ್ ರೋಡ್ರಿಗಸ್, ಆರ್ಯನ್ ಪೂಜಾರಿ, ಪ್ರಯಾಗ್ ಎಸ್., ಸಾದ್ವಿನ್ ಎಸ್., ಲಕ್ಷ್ಮೀಶ ಬಿ. ಹಾಗೂ ಉತ್ಕರ್ಷ್ ಅವರು ದೇಶಭಕ್ತಿಯ ಭಾವನೆಗಳನ್ನು ಮೂಡಿಸುವ ಗೀತೆಗಳನ್ನು ಅತ್ಯಂತ ಸುಂದರವಾಗಿ ಹಾಗೂ ಲಯಬದ್ಧವಾಗಿ ಪ್ರಸ್ತುತಪಡಿಸಿದರು. ಇವರ ಮನೋಜ್ಞ ಗಾಯನಕ್ಕೆ ತೀರ್ಪುಗಾರರು ಮೆಚ್ಚುಗೆ ವ್ಯಕ್ತಪಡಿಸಿ ಪ್ರಥಮ ಸ್ಥಾನವನ್ನು ಘೋಷಿಸಿದರು. ತಾಲೂಕು ಮಟ್ಟದಲ್ಲಿ ದೊರೆತ ಈ ಯಶಸ್ಸಿನೊಂದಿಗೆ ವಿದ್ಯಾರ್ಥಿಗಳು ಇದೀಗ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆ ಶಾಲೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ವಿದ್ಯಾರ್ಥಿಗಳ ಪ್ರತಿಭೆ, ಶಿಸ್ತು, ಪರಿಶ್ರಮ ಹಾಗೂ ತಂಡದ ಮನೋಭಾವವನ್ನು ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕರು…
