Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕರ್ನಾಟಕದ ಸುಂದರ ಕರಾವಳಿ ಪ್ರದೇಶವಾದ ಕಾರ್ಕಳವು ಸಾಂಸ್ಕೃತಿಕ ವೈಭವ, ಪ್ರಕೃತಿ ಸೌಂದರ್ಯ ಮತ್ತು ಶಾಂತ ವಾತಾವರಣಕ್ಕೆ ಪ್ರಸಿದ್ಧಿ. ಇದೇ ಊರಲ್ಲಿ ರಹಸ್ಯ ಸಂಚು ಮತ್ತು ಸತ್ಯದ ಹುಡುಕಾಟದಿಂದ ತುಂಬಿರುವ ಒಂದು ವಿಭಿನ್ನ ಕಥೆ ಮೂಡಿಬರುತ್ತದೆ ಅದೇ  ‘ಡಿಟೆಕ್ಟಿವ್ ದಿವಾಕರ್’. ಈ ತುಳು ಚಲನಚಿತ್ರದ ಟೀಸರ್ ಲಾಂಚ್ ಮತ್ತು ಎರಡನೇ ಪೋಸ್ಟರ್ ಬಿಡುಗಡೆ ಸಮಾರಂಭವು ಕ್ರಿಯೇಟಿವ್ ಕಾಲೇಜು ಕಾರ್ಕಳದಲ್ಲಿ ನೆರವೇರಿತು. ಕಾರ್ಯಕ್ರಮ ಅತಿಥಿಗಳಿಂದ ಜ್ಯೋತಿ ಬೆಳಗುವುದರ ಮುಖೇನ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅತಿಥಿಗಳಲ್ಲಿ ಓರ್ವರಾದ ಡಾಕ್ಟರ್ ರವೀಂದ್ರ ಶೆಟ್ಟಿ ಬಜಗೋಳಿಯವರು “ನಮ್ಮ ನೆಲದ ಕಥೆಯನ್ನು ಹೇಳುವ ಈ ಚಲನಚಿತ್ರವು ಮುಂದಿನ ತಲೆಮಾರಿಗೆ ಒಂದು ಉತ್ತಮ ಸಂದೇಶವನ್ನು ನೀಡಲಿದೆ “ಎಂದು ತಿಳಿಸುತ್ತಾ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಚಲನಚಿತ್ರದ ಸಹ ನಿರ್ಮಾಪಕರಾದ ವಿಭಾ ಪ್ರೊಡಕ್ಷನ್ ನ ಅಶ್ವತ್ ಎಸ್.ಎಲ್ .ರವರು “ಈ ಚಲನಚಿತ್ರವು ಒಂದು ಹೊಸ ಕಥಾಹಂದರವನಿಟ್ಟುಕೊಂಡು ನಿರ್ಮಾಣವಾಗಿದ್ದು ಕಾರ್ಕಳದ ಗತಿಸಿ ಹೋದ ಘಟನೆಗಳನ್ನು ಮತ್ತೆ ನೆನಪಿಸುವ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ)ವು 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿಗೆ ಕುಂದಾಪುರ ಉದಯವಾಣಿ ವರದಿಗಾರರಾದ ಪ್ರಶಾಂತ್ ಪಾದೆ ಆಯ್ಕೆಯಾಗಿದ್ದಾರೆ. ಗ್ರಾಮೀಣ ಜನ-ಜೀವನದ ವರದಿಯನ್ನು ಆಧರಿಸಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸುಳ್ಯ ತಾಲೂಕಿನ ಪಾದೆ ಗ್ರಾಮದವರಾದ ಪ್ರಶಾಂತ್‌ ಅವರು ಪತ್ರಿಕೋದ್ಯಮ ಪದವೀಧರಾಗಿ ವೃತ್ತಿ ಬದುಕಿನಲ್ಲಿ ತೊಡಗಿಕೊಂಡಿದ್ದಾರೆ. ಏಪ್ರಿಲ್ 11 ಮತ್ತು 12ರಂದು ಬೀದರ್‌ನಲ್ಲಿ ನಡೆಯಲಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಜಿಲ್ಲೆಯ ಗೃಹ ಬಳಕೆ ಗ್ರಾಹಕರಿಗೆ ಎಲ್ ಪಿ ಜಿ ಸಿಲಿಂಡರ್ ಗಳ ವಿತರಣೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಹಾಗೂ ಸಿಲಿಂಡರ್ ವಿತರಣಾ ಸಂಸ್ಥೆಯವರಿಗೆ ಉಡುಪಿ – ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗೃಹ ಬಳಕೆ ಸೇರಿದಂತೆ ಮತ್ತಿತರ ಅನಿಲ ವಿತರಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಗೃಹ ಬಳಕೆ ಸಿಲಿಂಡರ್ ಗಳ ವಿತರಣೆ, ಅದರಲ್ಲಿಯು ಏಕ ಸಿಲಿಂಡರ್ ಹೊಂದಿರುವವರಿಗೆ ವಿತರಣೆ ಯಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ ಎಂದು ದೂರುಗಳು ಕೇಳಿ ಬರುತ್ತಿವೆ. ಈ ಹಿಂದೆ ಬೇಡಿಕೆಗೆ ಅನುಗುಣವಾಗಿ ಅನಿಲ ಲಭ್ಯ ವಾಗುತ್ತಿತ್ತು. ಪಶ್ಚಿಮ ಎಷ್ಯಾ ದೇಶಗಳಲ್ಲಿನ ಯುದ್ಧ ದ ಬಿಕ್ಕಟಿನ್ನಿಂದಾಗಿ ಸಮರ್ಪಕವಾಗಿ ಅನಿಲಗಳು ಆಮದು ಆಗದೆ ಇರುವ ಹಿನ್ನೆಲೆ, ಸ್ವಲ್ಪ ತೊಂದರೆಗಳು ಉಂಟಾಗಿವೆ. ಆದರೆ ಗೃಹ ಬಳಕೆ ಅನಿಲಗಳ ವಿತರಣೆಯಲ್ಲಿ ಯಾವುದೇ ತೊಂದರೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಅಂದರ್ ಬಾಹರ್ ಜುಗಾರಿ ಆಟ ಆಡುತ್ತಿದ್ದ ನಾಲ್ವರನ್ನು ಬೈಂದೂರು ಪೊಲೀಸರು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಬಂಧಿಸಿದ ಘಟನೆ ಇಲ್ಲಿನ ಹೇರೂರು ಗ್ರಾಮದ ಯರುಕೋಣೆ ಎಂಬಲ್ಲಿ ನಡೆದಿದೆ. ಕಿರಿಮಂಜೇಶ್ವರ ಗ್ರಾಮದ ಲಕ್ಷ್ಮಣ ನಾಯ್ಕ (43), ನಾವುಂದ ಗ್ರಾಮದ ಉಮೇಶ ದೇವಾಡಿಗ (53), ಹೇರೂರು ಗ್ರಾಮದ ಶೀನ ಪೂಜಾರಿ (62), ಹೇರೂರು ಗ್ರಾಮದ ಉದಯ ಶೆಟ್ಟಿ (60) ಬಂಧಿತ ಆರೋಪಿಗಳು. ಆರೋಪಿಗಳಿಂದ ಅಂದರ್ – ಬಾಹರ್ ಜುಗಾರಿ ಆಟಕ್ಕೆ ಬಳಸಿದ ನಗದು ಹಣ 2,560/, ಇಸ್ಪೀಟ್‌ ಎಲೆಗಳು, ಒಂದು ಬೆಡ್‌ ಸೀಟ್‌, ಒಂದು ನೋಟ್‌ ಪುಸ್ತಕ, ಹಾಗೂ ಒಂದು ಬಾಲ್‌ ಪೆನ್‌ ಅನ್ನು ಸ್ವಾದೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ರಿ. ಮೂಡುಬಿದಿರೆ, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಎಪ್ರಿಲ್ 12 ರಿಂದ 19ರ ವರೆಗೆ ಮೂಡುಬಿದಿರೆಯ ಸ್ಕೌಟ್ ಗೈಡ್ಸ್ ಕನ್ನಡ ಭವನದಲ್ಲಿ ಅಭಿನಯ ಪ್ರಧಾನ ಚಿಣ್ಣರಮೇಳ 2026 ರಾಜ್ಯಮಟ್ಟದ ಮಕ್ಕಳಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದೆ. ಪ್ರತಿದಿನ ಪೂ.9.00 ರಿಂದ ಸಂಜೆ 4.30ರ ವರೆಗೆ ನಡೆಯಲಿರುವ ಈ ಶಿಬಿರವು ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಹತ್ತು ಹಲವು ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ರಂಗನಿರ್ದೇಶಕ ಡಾ| ಜೀವನ್ ರಾಂ ಸುಳ್ಯ ಇವರ ರಂಗ ಬದುಕಿನ 35ನೇ ವರ್ಷದ ಶಿಬಿರ ಇದಾಗಿದ್ದು, ಮಕ್ಕಳ ಮಾನಸಿಕ ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳಿಂದ ಕೂಡಿರುತ್ತದೆ. ಈ ಶಿಬಿರದಲ್ಲಿ ವಯೋಮಿತಿ 7 ರಿಂದ 15 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದಾಗಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರತಿಭಾನ್ವಿತ ನೀನಾಸಂ ಮತ್ತು ರಂಗಾಯಣದ ರಂಗ ಪದವೀಧರರು ಭಾಗವಹಿಸಲಿದ್ದಾರೆ. ಊಟ, ಉಪಹಾರ ಹಾಗೂ ಅಗತ್ಯ ಇರುವ ಮಕ್ಕಳಿಗೆ ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಆಸಕ್ತರು ಕೂಡಲೇ:9448989382 (ವಿದುಷಿ ಸುಮನಾ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಅಧ್ಯಯನ ಭೇಟಿಯ ಅಂಗವಾಗಿ ವಿದ್ಯಾರ್ಥಿಗಳಿಗೆ ಕೃಷಿ ಮತ್ತು ಕೃಷಿ ಆಧಾರಿತ ಉದ್ಯಮಗಳ ಕುರಿತು ಪ್ರಾಯೋಗಿಕ ಜ್ಞಾನ ನೀಡುವ ಉದ್ದೇಶದಿಂದ ಕೆದೂರು ತೆಕ್ಕಟ್ಟೆಯ ಕಾಮಾಕ್ಷಿ ಫಾರ್ಮ್ಗೆ ಅಧ್ಯಯನ ಭೇಟಿ ಆಯೋಜಿಸಲಾಯಿತು. ತೆಕ್ಕಟ್ಟೆ ಕಾಮಾಕ್ಷಿ ಫಾರ್ಮ್ನ ಪ್ರವರ್ತಕರಾದ ಮಹಿಳಾ ಉದ್ಯಮಿ ದಿವ್ಯ ನಾಯಕ್ ಅವರು ವಿದ್ಯಾರ್ಥಿಗಳಿಗೆ ವಿವಿಧ ಜಾತಿಯ ಹಲಸಿನ ಹಣ್ಣುಗಳ (Jackfruit varieties) ಬಗ್ಗೆ ವಿವರವಾದ ಮಾಹಿತಿ ನೀಡಿದರು. ಹಲಸಿನ ಹಣ್ಣಿನ ವಿವಿಧ ಖಾದ್ಯಗಳು, ಅವುಗಳ ವೈಶಿಷ್ಟ್ಯತೆ, ಬೆಳವಣಿಗೆ ವಿಧಾನಗಳು ಹಾಗೂ ಮಾರುಕಟ್ಟೆ ಸಾಧ್ಯತೆಗಳ ಕುರಿತು ಮಾಹಿತಿ ನೀಡಿದರು. ಕೃಷಿಯನ್ನು ಆಧರಿಸಿ ಉದ್ಯಮ ಆರಂಭಿಸುವ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾರ್ಗದರ್ಶನ ನೀಡಿದರು. ಈ ಸಂದರ್ಭ ಭಾಗವಹಿಸಿದ ವಿದ್ಯಾರ್ಥಿಗಳು ಕೃಷಿ ಕ್ಷೇತ್ರದ ಸಾಧಕ – ಬಾಧಕಗಳ ಬಗ್ಗೆ ಸಂವಾದ ನಡೆಸಿ, ಪ್ರಾಯೋಗಿಕ ಜ್ಞಾನವನ್ನು ಪಡೆದುಕೊಂಡರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ವೀಣಾ ವಾಸುದೇವ ಭಟ್,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಮೈಸೂರಿನ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ಪ್ಲಾಸ್ಟಿಕ್ಸ್ ಮೋಲ್ಡ್ ಟೆಕ್ನಾಲಜಿ ಡಿಪ್ಲೋಮಾ ಹಾಗೂ ಪ್ಲಾಸ್ಟಿಕ್ಸ್ ಟೆಕ್ನಾಲಜಿ ಡಿಪ್ಲೋಮಾ ಕೋರ್ಸುಗಳಿಗೆ ಲ್ಯಾಟರಲ್ ಎಂಟ್ರಿ (ನೇರ ದ್ವಿತೀಯ ವರ್ಷ) ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪಿ.ಯು.ಸಿ (ವಿಜ್ಞಾನ) ಅಥವಾ ಐ.ಟಿ.ಐ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಲ್ಲದೆ, ವೃತ್ತಿಪರ ಡಿಪ್ಲೋಮಾ ಕೋರ್ಸ್ಗಳಲ್ಲಿ ಪ್ರವೇಶ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಗೂ ಅಂತಿಮ ಸೆಮಿಸ್ಟರ್‌ನಲ್ಲಿ ಕ್ಯಾಂಪಸ್ ಆಯ್ಕೆ ಮೂಲಕ ಉದ್ಯೋಗಾವಕಾಶವನ್ನು ಖಚಿತಪಡಿಸಲಾಗುವುದು. ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದ ಮೇಲೆ ಪ್ರವೇಶ ನೀಡಲಾಗುವುದು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ www.cipet.gov.in ಅಥವಾ ಮೊ.ನಂ:  9480253024, 9791431827 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಪಾಂಡೇಶ್ವರ ವಲಯದ ಗುಂಡ್ಮಿ ಕಾರ್ಯಕ್ಷೇತ್ರದ ಆಚಾರ್ಯ ಕುಟುಂಬಸ್ಥರ ಜಟ್ಟಿಗ ಮತ್ತು ಹೈಗುಳ್ಳಿ ದೇವಸ್ಥಾನ ಮುಂಭಾಗ ಕಳೆದ ವರ್ಷ ಬಾರಿ ಗಾಳಿ ಮಳೆಗೆ ಬೃಹತ್ ಗಾತ್ರದ ಮರ ಬಿದ್ದಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆಯ ಶೌರ್ಯ ಟೀಮ್ ಸದಸ್ಯರು ಹಾಗೂ ಗ್ರಾಮಸ್ಥರು ಸೇರಿ ಬಿದ್ದಿರುವ ಬಾರಿ ಗಾತ್ರದ ಮರವನ್ನು ತೆರವುಗೊಳಿಸಿ ದೈವಸ್ಥಾನದ ದಾರಿ ಸುಗಮಗೊಳಿಸಿದ ಹಿನ್ನಲ್ಲೆಯಲ್ಲಿ ಸೋಮವಾರ ದೇವಸ್ಥಾನದ ಜೀರ್ಣೋದ್ಧಾರ ಪುನ: ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಶೌರ್ಯ ಟೀಮಿನ ಸದಸ್ಯರಿಗೆ  ಶಾಲನ್ನು ಹೊಂದಿಸಿ ಗೌರವಿಸಿ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಗುಂಡ್ಮಿ ಒಕ್ಕೂಟದ ಕಾರ್ಯದರ್ಶಿಯಾದ ಶೇಖರ್ ಪೂಜಾರಿ, ವಲಯದ ಮೇಲ್ವಿಚಾರಕಿ ಜಯಲಕ್ಷ್ಮಿ, ಶೌರ್ಯ ಟೀಮ್ ಅಧ್ಯಕ್ಷ ಲಕ್ಷ್ಮೀಶ ಆಚಾರ್ಯ, ಘಟಕದ ಸೇವಾ ಪ್ರತಿನಿಧಿ ಶೋಭಾ, ಸ್ಥಳೀಯ ಸೇವಾ ಪ್ರತಿನಿಧಿ ಶಶಿಕಲಾ, ಶೌರ್ಯ ಟೀಮ್‌ನ ಸದಸ್ಯರಾದ ಕಾಳಿಂಗ ಪೂಜಾರಿ, ರವಿ ಪೂಜಾರಿ, ಸತೀಶ, ರೇಣುಕಾ, ಯಶೋಧ, ವಿಜಯಶ್ರೀ, ಆಚಾರ್ಯ ಕುಟುಂಬಸ್ಥರು, ತಂಡದ ಸದಸ್ಯರು ಉಪಸ್ಥಿತರಿದ್ದರು. 

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಹಾಲಾಡಿ ಜೆಸಿಐ ಘಟಕದ ವತಿಯಿಂದ ಜೆಸಿಐ ಸದಸ್ಯರಿಗೆ ಹಮ್ಮಿಕೊಳ್ಳಲಾದ ವಿಶೇಷ ಮಾಹಿತಿ ಕಾರ್ಯಗಾರವು ಇಲ್ಲಿನ ಹಾಲಾಡಿ ಬ್ರೈಟ್ ಪರ್ಲ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಜರುಗಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜೆಎಫ್ಎಂ ರೇಖಾ ಪ್ರಭಾಕರ ಕುಲಾಲ್ ಜೆಸಿಐ ಧ್ಯೇಯೋದ್ದೇಶಗಳು ಮತ್ತು ಸಂಘಟನೆ ಹಾಗೂ ಸಭೆಯ ಮಹತ್ವ ಮತ್ತು ಆಯೋಜನೆಯ ಬಗ್ಗೆ ವಿಸ್ತೃತವಾಗಿ ವಿವರಿಸಿದರು. ಹಾಲಾಡಿ ಜೆಸಿಐ ಘಟಕದ ಅಧ್ಯಕ್ಷರಾದ ಜೆಸಿ ಪ್ರದೀಪ ಹಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಶಂಕರನಾರಾಯಣ ಜೆಸಿಐ ಪೂರ್ವಾಧ್ಯಕ್ಷರಾದ ಜೆಸಿ ಪ್ರವೀಣ ಬಾಳೆಕೊಡ್ಲು, ಶಂಕರನಾರಾಯಣ ಜೆಸಿಐ ಅಧ್ಯಕ್ಷರಾದ ಜೆಸಿ ಯೋಗೇಶ್ ಕಾಂಚನ್, ಜೆಸಿಐ ಕಾರ್ಯದರ್ಶಿ ಜೆಸಿ ಅಶೋಕ ಆಚಾರಿ, ಲೇಡಿ ಜೇಸಿ ಪ್ರೆಸಿಡೆಂಟ್ ಜೆಸಿ ಅವಶ್ಯ ಶೆಟ್ಟಿ, ಕಾರ್ಯಕ್ರಮ ನಿರ್ದೇಶಕರಾದ ಜೆಸಿ ಆಶಾ ರಾಜೀವ ಕುಲಾಲ್ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ವಲಯ ವೆಲ್ಡಿಂಗ್‌ ಮತ್ತು ಫ್ಯಾಬ್ರಿಕೇಟರ್ಸ್ ಅಸೋಸಿಯೇಶನ್ ರಿ., ಕುಂದಾಪುರ ಇದರ 2026-2028ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪಕ್ರಿಯೆ ನಡೆಯಿತು. ನೂತನ ಅಧ್ಯಕ್ಷರಾಗಿ ಗಣೇಶ್ ಆಚಾರ್ಯ ನಾಯ್ಕನಕಟ್ಟೆ, ಗೌರವಾಧ್ಯಕ್ಷ ಅರುಣ್ ಪಿ. ಆಚಾರ್ಯ ಕುಂದಾಪುರ, ಉಪಾಧ್ಯಕ್ಷರಾಗಿ ಭಾಸ್ಕರ ಆಚಾರ್ಯ ಕೋಟೇಶ್ವರ, ಪ್ರಧಾನ ಕಾರ್ಯದರ್ಶಿ ಸಂತೋಷ ಆಚಾರ್ಯ ಮಧುವನ, ಜೊತೆ ಕಾರ್ಯದರ್ಶಿ ವಿಜಯ ನಾಯಕ್ ಕೋಕ್ಕರ್ಣೆ, ದಿವಾಕರ ಆಚಾರ್ಯ ಕುಂದಾಪುರ, ಕೋಶಾಧಿಕಾರಿ ರಾಘವೇಂದ್ರ ಆಚಾರ್ಯ ವಕ್ವಾಡಿ, ಲಕ್ಷ್ಮೀನಾರಾಯಣ ಆಚಾರ್ಯ ಹಾಲಾಡಿ, ಸಂಘಟನಾ ಕಾರ್ಯದರ್ಶಿ ಗಣಪತಿ ಟಿ. ಶ್ರೀಯಾನ್ ತೆಕ್ಕಟ್ಟಿ, ಮಲ್ಲಿಕಾರ್ಜುನ ಆಚಾರ್ಯ ಕಾಗೇರಿ, ಕೃಷ್ಣಯ್ಯ ಆಚಾರ್ಯ ಮೊಳಹಳ್ಳಿ,, ನಾಗೇಂದ್ರ ಆಚಾರ್ಯ ಗೋಳಿಯಂಗಡಿ, ಮಹೇಶ ಆಚಾರ್ಯ ಹೊಸಕೋಟೆ, ರಾಜೇಶ ಆಚಾರ್ಯ  ಶಂಕರನಾರಾಯಣ, ರಮೇಶ ಆಚಾರ್ಯ ತಲ್ಲೂರು, ಪ್ರಸಾದ ಜೋಗಿ ತೆಕ್ಕಟ್ಟೆ ಆಯ್ಕೆಗೊಂಡಿದ್ದಾರೆ. ಆಡಳಿತ ಮಂಡಳಿ ಸದಸ್ಯರುಗಳಾಗಿ ಸಂತೋಷ ದೇವಾಡಿಗ ಬೀಜಾಡಿ, ರಾಘವೇಂದ್ರ ಕುಂದ‌ರ್ ನಾವುಂದ, ಲಕ್ಷ್ಮಣ ಆಚಾರ್ಯ ತ್ರಾಸಿ, ವಿವೇಕ ನಾಯಕ್ ಕಾಲ್ತೊಡು, ಗಣೇಶ ಆಚಾರ್ಯ ಬೆಳ್ಳೆ, ಅಣ್ಣಪ್ಪ…

Read More