Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಗಂಗೊಳ್ಳಿ: ಇತ್ತೀಚೆಗೆ ಗಂಗೊಳ್ಳಿಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಡುಪಿ ಮತ್ತು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ಬಾಲ್ ಬ್ಯಾಡ್ಮಿಂಟನ್ ಪ೦ದ್ಯಾಟದಲ್ಲಿ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡವು ಪ್ರಥಮ ಸ್ಥಾನ ಗಳಿಸಿತು.ಟ್ರೋಫಿಯೊಂದಿಗೆ ವಿಜೇತ ಬ್ಯಾಡ್ಮಿಂಟನ್ ಪಟುಗಳಾದ ಸಚಿನ್,ಸಮಿತ್,ನಿತೇಶ್,ಕಾರ್ತಿಕ್,ನಾಗೇಂದ್ರ,ಚೇತನ್,ಅಕ್ಷಯ್,ಸುಮನ್,ಹೃತಿಕ್ ಮತ್ತು ವಿನ್‌ಸ್ಟನ್.ಸರಸ್ವತಿ ವಿದ್ಯಾಲಯದ ಪ್ರಾಂಶುಪಾಲ ಆರ್ ಎನ್ ರೇವಣ್‌ಕರ್ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು. ವರದಿ: ನರೇಂದ್ರ ಎಸ್ ಗಂಗೊಳ್ಳಿ

Read More

ಗಂಗೊಳ್ಳಿ: ಕಳೆದ ಸೋಮವಾರ ಇಲ್ಲಿನ ಮ್ಯಾಂಗನೀಸ್ ರಸ್ತೆಯಲ್ಲಿನ ಭಗತ್ ಸಿಂಗ್ ಅಭಿಮಾನಿ ಬಳಗವು ಭಗತ್ ಸಿಂಗ್ ಜನ್ಮದಿನಾಚರಣೆಯನ್ನು ಆಚರಿಸಿತು.ಗಂಗೊಳ್ಳಿಯ ಉದ್ಯಮಿ ವಿಠಲ್ ಶೆಣೈ ಅವರು ದೀಪ ಬೆಳಗಿಸಿ ನುಡಿ ನಮನ ಸಲ್ಲಿಸಿದರು. ಆ ಬಳಿಕ ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿ ಮೌನ ಪ್ರಾರ್ಥನೆಯನ್ನು ಮಾಡಲಾಯಿತು, ಅಭಿಮಾನಿ ಬಳಗದ ಅಧ್ಯಕ್ಷ ವಿಶ್ವನಾಥ ಖಾರ್ವಿ ಮತ್ತು ಸರ್ವ ಸದಸ್ಯರು ಹಾಜರಿದ್ದರು. ವರದಿ : ನರೇಂದ್ರ ಎಸ್ ಗಂಗೊಳ್ಳಿ

Read More

 ಕುಂದಾಪುರದ ಶ್ರೀ ಬಗಳಾಂಬ ಚಂಡೆ ಬಳಗದ ವ್ಯವಸ್ಥಾಪಕ, ಖ್ಯಾತ ಚಂಡೆ ವಾದಕ ಮಿಥುನ್ ಸುವರ್ಣ ಅವರ ಪ್ರತಿಭೆ, ಕಲಾ ಸೇವೆಯನ್ನು ಗುರುತಿಸಿ ಕುಂದಾಪುರದ ಫ್ಯಾಶನ್ ಕೋರ್ಟ್ ವತಿಯಿಂದ ಸಂಮಾನಿಸಲಾಯಿತು. ಈ ಸಂದರ್ಭದಲ್ಲಿ ಉದ್ಯಮಿ ಕೆ. ಎಲ್. ಮಧ್ಯಸ್ಥ, ಬೆಂಗಳೂರಿನ ಉದ್ಯಮಿ ನಾಗರಾಜ ಮಧ್ಯಸ್ಥ, ಕುಂಭಾಸಿ ಅನಂತ ಪದ್ಮನಾಭ ಉಪಧ್ಯಾಯ, ಫ್ಯಾಶನ್ ಕೋರ್ಟ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಕೆ. ಕಾರ್ತಿಕೇಯ ಮಧ್ಯಸ್ಥ, ನಿರ್ದೇಶಕರಾದ ಪ್ರೇಮಲತಾ ಮಧ್ಯಸ್ಥ, ಶಿಲ್ಪಾ ಕೆ. ಮಧ್ಯಸ್ಥ, ನಿವೃತ್ತ ಶಿಕ್ಷಕ ಗುಂಡ್ಮಿ ರಾಮಚಂದ್ರ ಐತಾಳ್, ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷ ಚಂದ್ರಕಾಂತ್, ಆಶಾ ಉಪಧ್ಯಾಯ, ರಂಜಿತ್ ಐತಾಳ್, ಕುಂದಾಪುರದ ಶ್ರೀ ಬಗಳಾಂಬ ಚಂಡೆ ಬಳಗದ ಸದಸ್ಯರು ಉಪಸ್ಥಿತರಿದ್ದರು.

Read More

ಕುಂದಾಪುರ: ಮೂಡುಬಿದ್ರೆ ಆಳ್ವಾಸ್ ಶೈಕ್ಷಣಿಕ ಸಂಸ್ಥೆಯ ವಿದ್ಯಾರ್ಥಿನಿ ಕೊಕ್ಕರ್ಣೆಯ ಶುಭಾಲಕ್ಷ್ಮೀ ಅಂತರಾಷ್ಟ್ರೀಯ ತ್ರೋಬಾಲ್ ಆಟಗಾರ್ತಿ ವಿಭಾಗದಲ್ಲಿ ಪ್ರಶಸ್ತಿ ಪಡೆದಿರುವುದಕ್ಕಾಗಿ ಇತ್ತೀಚೆಗೆ ಮೊಗವೀರಪೇಟೆಯ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದ ಸಮಾರಂಭದಲ್ಲಿ ವಾಸ್ತುತಜ್ಞ ಬಸವರಾಜ್ ಶೆಟ್ಟಿಗಾರ್‌ರವರು ಸನ್ಮಾನಿಸಿ ಗೌರವಿಸಿದರು. ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಕೆ.ಬಾಬು ಗಾಂಧೀನಗರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೊಗವೀರ ಪೇಟೆ ದೇವಸ್ಥಾನದ ಆಡಳಿತ ಮುಕ್ತೇಶ್ವರರಾದ ಆನಂದ ಮರಕಾಲ ಬೆಂಗಳೂರಿನ ಉದ್ಯಮಿ ಗುಣಕರ್, ಉಪಾಧ್ಯಕ್ಷರಾದ ದೇವಕಿ ಎಸ್. ಕೋಟ್ಯಾನ್, ಸದಸ್ಯರಾದ ರಘುವೀರ ಕಿಣಿ, ರಾಘವೇಂದ್ರ ಕುಂದರ್, ಶ್ರೀಮತಿ ನಿರ್ಮಲ ಜಯಪ್ರಕಾಶ್ ಹೆಗ್ಡೆ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾಂತ ಶುಭ ಹಾರೈಸಿದರು. ಚಂದ್ರಹಾಸ ಸ್ವಾಗಿಸಿದರೆ, ಪ್ರೀತೇಶ್ ಕಾರ್ಯಕ್ರಮ ನಿರೂಪಿಸಿದರು. ಸುಧೀರ್ ಅಮೀನ್ ವಂದಿಸಿದರು.

Read More

ಗಂಗೊಳ್ಳಿ: ಇತ್ತೀಚೆಗೆ ಬಾರ್ಕೂರಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಡುಪಿ ಮತ್ತು ನ್ಯಾಷನಲ್ ಪದವಿಪೂರ್ವ ಕಾಲೇಜು ಬಾರ್ಕೂರು ಇವರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಟೆನ್ನಿಕಾಯ್ಟ್ ಪ೦ದ್ಯಾಟದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಬಾಲಕರು ಪ್ರಥಮ ಸ್ಥಾನ ಪಡೆದು ಚಿತ್ರದುರ್ಗದಲ್ಲಿ ನಡೆಯಲಿರುವ ರಾಜ್ಯಮಟ್ಟದ ಟೆನ್ನಿಕಾಯ್ಟ್ ಪಂದ್ಯಾಟಕ್ಕೆ ಆಯ್ಕೆಯಾದರು. ಟ್ರೋಫಿಯೊ೦ದಿಗೆ ವಿಜೇತ ಕ್ರೀಡಾಳುಗಳಾದ ಮನಿಷ,ದಿಶಾ ಭಟ್,ಭವಾನಿ ಮಾಧುರಿ ,ಪ್ರಥ್ವಿ ಮತ್ತು ನಾಗರತ್ನ, ಪ್ರಜ್ವಲ್,ನಾಗರಾಜ ನಾಯಕ್,ನವೀಶ್ ಗಾಂವ್ಕರ್,ನಾಗೇಂದ್ರ,ಪ್ರತೀಕ್ ಪ್ರಮೋದ್ ಸರಸ್ವತಿ ವಿದ್ಯಾಲಯ ಆಡಳಿತ ಮಂಡಳಿಯ ಹೆಚ್ ಗಣೇಶ್ ಕಾಮತ್,ಪ್ರಾಂಶುಪಾಲ ಆರ್ ಎನ್ ರೇವಣ್‌ಕರ್,ದೈಹಿಕ ಶಿಕ್ಷಣ ನಿರ್ದೇಶಕರಾದ ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು. ವರದಿ: ನರೇ೦ದ್ರ ಎಸ್ ಗ೦ಗೊಳ್ಳಿ.

Read More

ಗಂಗೊಳ್ಳಿ: ಇತ್ತೀಚೆಗೆ ಗಂಗೊಳ್ಳಿಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಡುಪಿ ಮತ್ತು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪ೦ದ್ಯಾಟದಲ್ಲಿ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡವು ದ್ವಿತೀಯ ಸ್ಥಾನ ಗಳಿಸಿತು.ಟ್ರೋಫಿಯೊಂದಿಗೆ ವಿಜೇತ ಕ್ರೀಡಾಳುಗಳಾದ ಮನಿಷ,ಸಹನಾ,ಅಕ್ಷತಾ,ದಿಶಾ ಭಟ್,ಪ್ರತಿಭಾ,ಅನುಷಾ ಮತ್ತು ರಕ್ಷಿತಾ.ಸರಸ್ವತಿ ವಿದ್ಯಾಲಯ ಆಡಳಿತ ಮಂಡಳಿಯ ಹೆಚ್ ಗಣೇಶ್ ಕಾಮತ್,ಪ್ರಾಂಶುಪಾಲ ಆರ್ ಎನ್ ರೇವಣ್‌ಕರ್,ವಾಮನದಾಸ ಭಟ್ ,ದೈಹಿಕ ಶಿಕ್ಷಣ ನಿರ್ದೇಶಕರಾದ ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು. ವರದಿ: ನರೇಂದ್ರ ಎಸ್ ಗಂಗೊಳ್ಳಿ.

Read More

ಗಂಗೊಳ್ಳಿ: ಕ್ರೀಡಾಳುಗಳಿಗೆ ಕ್ರೀಡಾ ಮನೋಭಾವ ಅತ್ಯಂತ ಮುಖ್ಯವಾದದ್ದು. ಸೋಲು ಗೆಲುವು ಸಹಜ. ಆದರೆ ನಮ್ಮ ಗುರಿ ಮತ್ತು ಪ್ರಯತ್ನ ಗೆಲುವಿನ ಕಡೆಗಿರಬೇಕು ಎಂದು ಗಂಗೊಳ್ಳಿಯ ಜಿ.ಎಸ್.ವಿ.ಎಸ್ ಅಸೋಶಿಯೇಶನ್ನಿನ ಕಾರ‍್ಯದರ್ಶಿ ಹೆಚ್ ಗಣೇಶ ಕಾಮತ್ ಅಭಿಪ್ರಾಯಪಟ್ಟರು.ಅವರು ಇತ್ತೀಚೆಗೆ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪ೦ದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಸರಸ್ವತಿ ವಿದ್ಯಾಲಯ ಕಾಲೇಜಿನ ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಅಧ್ಯಕ್ಷತೆ ವಹಿಸಿದ್ದರು.ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸ೦ಘದ ಅಧ್ಯಕ್ಷ ವಸಂತ ಶೆಟ್ಟಿ . ಸರಸ್ವತಿ ವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ,ವಿದ್ಯಾರ್ಥಿ ಪ್ರತಿನಿಧಿಗಳಾದ ಅನುಷಾ ಶೆಣೈ ಮತ್ತು ಸಚಿನ್ ಪೂಜಾರಿ ಉಪಸ್ಥಿತರಿದ್ದರು.ಉಪನ್ಯಾಸಕಿ ಕವಿತಾ ಎಮ್ ಸಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಸುಜಯೀಂದ್ರ ಹಂದೆ ಕಾರ‍್ಯಕ್ರಮ ನಿರೂಪಿಸಿದರು.

Read More

ದುಬೈ: ಕುಂದಾಪುರ ದೇವಾಡಿಗ ಮಿತ್ರ (ಕದಂ) ಇದರ 5ನೇ ವಾರ್ಷಿಕೋತ್ಸವ ಸಮಾರಂಭ ಅಕ್ಟೋಬರ್ 23 ರಂದು ದುಬೈ ಶೆರಾಟನ್ ದಯಿರದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಹಲವಾರು ಅತಿಥಿಗಳ ಸಮಕ್ಷಮದಲ್ಲಿ ಈ ಕಾರ್ಯಕ್ರಮ ಉದ್ಗಾಟನೆ ಗೊಳ್ಳಲಿದ್ದು ನಂತರ ಹಲವಾರು ಮನೋರಂಜನ ಕಾರ್ಯಕ್ರಮ ಗಳನ್ನೂ ನಡೆಸಿಕೊಡುವ ಮೂಲಕ ಹಾಗು ಅದ್ಬುತ ಖಾದ್ಯಗಳ ಬೋಜನಕೂಟ ಏರ್ಪಡಿಸುವ ಮೂಲಕ ದುಬೈನಲ್ಲಿರುವ ದೇವಾಡಿಗರ ಹೆಮ್ಮೆಯ ಸಂಘ ಕದಂ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಲು ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿದೆ. [quote bgcolor=”#ffffff”]ಕದಂ (ಕುಂದಾಪುರ ದೇವಾಡಿಗ ಮಿತ್ರ) ಹತ್ತು ಹಲವಾರು ಯೋಜನೆಗಳನ್ನು ರೂಪಿಸಿಕೊಂಡು ದೇವಾಡಿಗ ಸಮಾಜದ ಒಳಿತಿಗಾಗಿ ದೂರದ ಕೊಲ್ಲಿ ರಾಷ್ಟ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಂದು ಸಂಸ್ಥೆ. 5 ವರ್ಷದ ಹಿಂದೆ ಅಂದರೆ 2010 ರಲ್ಲಿ ಕೆಲವು ಸಮಾನ ಮನಸ್ಕ ಸಮಾಜಬಾಂದವರು ಹುಟ್ಟು ಹಾಕಿದ ಈ ಸಂಸ್ಥೆ ಈಗ ಐದನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಕದಂ ಈ ಶಬ್ದದ ಹಿಂದಿ ಭಾವಾರ್ಥ ಹೆಜ್ಜೆಯ ನಂತರ ಇನ್ನೊಂದು ಹೆಜ್ಜೆ. ವಿದ್ಯಾರ್ಥಿವೇತನ, ವೈದ್ಯಕೀಯ…

Read More

ಕುಂದಾಪುರ: ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಕುಂದಾಪುರ ತಾಲೂಕು ಘಟಕದ ವತಿಯಿಂದ ಆದಿವಾಸಿ ಬುಟಕಟ್ಟು ಸಮುದಾಯಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕುಂದಾಪುರ ತಾಲೂಕು ಪಂಚಾಯತ್ ಎದುರು ಸಾಂಕೇತಿಕ ಪ್ರತಿಭಟನೆ ನಡೆಯಿತು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ತಾಲೂಕು ಸಂಚಾಲಕ ಶ್ರೀಧರ ನಾಡಾ ಮಾತನಾಡಿ ಜಿಲ್ಲೆಯಲ್ಲಿ ವಾಸವಾಗಿರುವ ವಿವಿಧ ಬುಡಕಟ್ಟು ಸಮುದಾಯದ ಜನರು ಕಳೆದ ಹಲವಾರು ವರ್ಷಗಳಿಂದ ಭೂಮಿ, ಮನೆ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ನಡೆಸುತ್ತಲೇ ಬಂದಿದ್ದೇವೆ. ಆದರೆ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಈಗ ಬುಡಕಟ್ಟು ಸಮುದಾಯದ ಎಲ್ಲಾ ಪಂಗಡದ ಜನ ಸಂಘಟಿತರಾಗಿದ್ದಾರೆ. ನಮ್ಮ ಬೇಡಿಕೆ ಈಡೇರಿಕೆಗಾಗಿ ಹತ್ಕೊತ್ತಾಯವನ್ನು ಆರಂಭಿಸಿದ್ದೇವೆ ಎಂದರು. [quote bgcolor=”#ffffff”]ಉಡುಪಿ ಜಿಲ್ಲೆಯ ಹಲಸ ಸಮುದಾಯವನ್ನು ಹಲಸರು ಎಂದು ಪರಿಗಣಿಸಿ ಪ.ಪಂಗಡಕ್ಕೆ ಸೇರಿಸುವುದು, ಕುಡುಬಿ-ಕುಣಬಿ ಸಮುದಾಯವನ್ನು ಪ.ಪಂಗೆ ಸೇರಿಸುವುದು, ಕಂದಾಯ ಭೂಮಿಯಲ್ಲಿ ವಾಸವಾಗಿರುವ ಹಾಗೂ ಅರಣ್ಯವಾಸಿ ಹಕ್ಕುಪತ್ರ ವಂಚಿತ ಬುಡಕಟ್ಟು ಕುಟುಂಬಗಳಿಗೆ ಹಕ್ಕುಪತ್ರ ನೀಡುವುದು, ಮುದೂರು ಉದಯನಗರದಲ್ಲಿ ಸರಕಾರಿ ಶಾಲೆ…

Read More

ಕುಂದಾಪುರ: ಇಲ್ಲಿನ ಕುಂಭಾಶಿ ಕೊರಗ ಕಾಲನಿಯಲ್ಲಿ ಮಾಜಿ ಗ್ರಾಮ ಪಂಚಾಯತ್‌ ಸದಸ್ಯೆ ಜಯಮಾಲ(36) ಎಂಬುವವರ ಶವ ಅವರ ಮನೆಯ ಸಮೀಪದ ಕೊಟ್ಟಿಗೆಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದ್ದು, ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಕುಂಭಾಶಿ ಕಾಲೋನಿಯ ನಿವಾಸಿ ಜಯಮಾಲ, ಅದೇ ಕಾಲೋನಿಯ  ಪಾಪಣ್ಣ ಎನ್ನುವವನೊಂದಿಗೆ ಕಳೆದ ಮೂರು ವರ್ಷಗಳಿಂದ ವಾಸವಾಗಿದ್ದಳು. ನಿನ್ನೆ ಪಾಪಣ್ಣ ಕುಡಿದ ಮತ್ತಿನಲ್ಲಿ ತಡರಾತ್ರಿಯವರೆಗೂ ಜಲಮಾಲಳ ಜೊತೆ ಜಗಳವಾಡುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದು, ಘಟನೆಯ ಬಳಿಕ ಪಾಪಣ್ಣ ನಾಪತ್ತೆಯಾಗಿರುವುದರಿಂದ ಆತನ ಮೇಲೆ ಹಲವು ಅನುಮಾನಗಳು ಮೂಡಿದೆ. [quote bgcolor=”#ffffff” bcolor=”#ff3a3a”]ಕಳೆದ ಸಾಲಿನಲ್ಲಿ ಹಾಗೂ ಅದಕ್ಕೂ ಹಿಂದೆ ನಡೆದ ಮಧ್ಯಂತರ ಚುನಾವಣೆಯಲ್ಲಿ ಬಿಜಾಡಿ-ಗೋಪಾಡಿ ಗ್ರಾ.ಪಂ ಸದಸ್ಯೆಯಾಗಿದ್ದ ಜಯಮಾಲ, ರೋಶನಿಧಾಮದ ರಮೇಶ್ ಎಂಬುವರೊಂದಿಗೆ ವಿವಾಹವಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದರು. ಆದರೆ ಮೂರು ವರ್ಷಗಳ ಹಿಂದೆ ರಮೇಶ ಅವರಿಂದ ದೂರವಾಗಿದ್ದ ಜಯಮಾಲ ಪಾಪಣ್ಣನ ಜೊತೆ ವಾಸವಾಗಿದ್ದರು. ವಿಪರೀತ ಕುಡಿತದ…

Read More